1.ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ದೊಡ್ಮನೆಯಿಂದಲೇ ಅರೆಸ್ಟ್; ಮುಳುವಾದ ಹುಲಿಯ ಉಗುರು
ಬಿಗ್ ಬಾಸ್ ಸೀಸನ್ 10ಗೆ (BBK Season 10) ಅತಿ ದೊಡ್ಡ ಶಾಕ್ ಎದುರಾಗಿದೆ. ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಯಾಗಿರುವ ಆಧುನಿಕ ಕೃಷಿಕ ವರ್ತೂರು ಸಂತೋಷ್ (Vartur Santhosh) ಅವರನ್ನು ದೊಡ್ಮನೆಯಿಂದಲೇ ಅರೆಸ್ಟ್ ಮಾಡಲಾಗಿದೆ. ವರ್ತೂರು ಸಂತೋಷ್ ಅವರು ಕುತ್ತಿಗೆಯಲ್ಲಿ ಹಾಕಿಕೊಂಡಿರುವ ಚೈನ್‌ನಲ್ಲಿದ್ದ ಹುಲಿಯುಗುರೇ (Nail of tiger) ಅವರಿಗೆ ಮುಳುವಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ1: Varthur Santhosh Arrest : ಕೃತಕ ಸೆರೆಮನೆಯಿಂದ ಒರಿಜಿನಲ್ ಜೈಲಿಗೆ ಹಳ್ಳಿಕಾರ್ ಒಡೆಯ!
ಪೂರಕ ವರದಿ 2: ವರ್ತೂರು ಸಂತೋಷ್‌ಗೆ 14 ದಿನ ನ್ಯಾಯಾಂಗ ಬಂಧನ, ಜಾಮೀನು ಸಿಗುತ್ತಾ?
ಪೂರಕ ವರದಿ 3: ಹುಲಿಯುಗುರು ಧರಿಸೋದು ಯಾಕೆ ಅಪರಾಧ? ಎಷ್ಟು ವರ್ಷ ಶಿಕ್ಷೆ?
2. ಶೋಭಾ ಕರಂದ್ಲಾಜೆಗೆ ಫಿಕ್ಸ್ ಆಯ್ತಾ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ? ಸಿಂಹ ಆಹ್ವಾನ ಕೊಟ್ರೆ, ಶಾ ವಿಶ್ ಮಾಡಿದ್ರು!
ಕೇಂದ್ರ ಸಚಿವೆಯಾಗಿರುವ ಶೋಭಾ ಕರಂದ್ಲಾಜೆ ಅವರು ರಾಜ್ಯ ರಾಜಕಾರಣದತ್ತ ಮರಳುವ ಮುನ್ಸೂಚನೆ ದೊರೆಯುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅವರನ್ನೇ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಅದಕ್ಕೆ ಪೂರಕವಾಗಿ ರಾಜಕೀಯದಲ್ಲಿ ಹಲವು ಬೆಳವಣಿಗೆಗಳು ನಡೆದಿವೆ.ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
3.Congress Politics : ಅ.25ರ ನಂತರ ನಿಗಮ ಮಂಡಳಿ, ನೂತನ ಕಾರ್ಯಾಧ್ಯಕ್ಷರ ನೇಮಕ
ಲೋಕಸಭೆ ಚುನಾವಣೆ ಗೆಲ್ಲುವ ಪ್ರಯತ್ನದಲ್ಲಿರುವ ಕಾಂಗ್ರೆಸ್ ಈಗ ನಿಗಮ ಮಂಡಳಿ ಹಾಗೂ ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರ ನೇಮಕಕ್ಕೂ ಚಾಲನೆ ನೀಡಲು ಮುಂದಾಗಿದೆ.ಅ. 25ರ ನಂತರ ಸಭೆ ನಡೆಸಿ ನಿಗಮ ಮಂಡಳಿ ಹಾಗೂ ನೂತನ ಕಾರ್ಯಾಧ್ಯಕ್ಷರ ನೇಮಕಾತಿ ಕುರಿತು ಸಭೆ ನಡೆಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
4. ಲೋಕಸಭಾ ಚುನಾವಣೆಗೆ ಮುನ್ನ ರಕ್ತರಾಜಕೀಯ : ಸಚಿವ ಪರಮೇಶ್ವರ್ ಆಪ್ತನ ಮರ್ಡರ್
ಕೋಲಾರ: ಗೃಹ ಸಚಿವ ಜಿ. ಪರಮೇಶ್ವರ್ ಮತ್ತು ಮಾಜಿ ಸ್ಟೀಕರ್ ರಮೇಶ್ ಕುಮಾರ್ ಬೆಂಬಲಿಗನನ್ನು ಹಾಡಹಗಲೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ (Murder Case) ಮಾಡಿದ್ದಾರೆ. ಶ್ರೀನಿವಾಸಪುರ ತಾಲೂಕಿನ ಕಾಂಗ್ರೆಸ್ ಮುಖಂಡ ಕೌನ್ಸಿಲರ್ ಸೀನಪ್ಪ ಅಲಿಯಾಸ್ ಶ್ರೀನಿವಾಸ್ ಮೃತರು. ಇದು ಲೋಕಸಭಾ ಚುನಾವಣೆಗೆ ಮುನ್ನ ಆರಂಭಗೊಂಡ ರಕ್ತ ರಾಜಕೀಯ ಎಂದು ವಿಶ್ಲೇಷಿಸಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. ಮೈಸೂರು ದಸರಾ: ಏರ್‌ಶೋ ವೈಭವ, ಆಯುಧ ಪೂಜೆ; ನಾಳೆ ಜಂಬೂಸವಾರಿ
ಮೈಸೂರು ದಸರಾ (Mysore Dasara) ಸಂಭ್ರಮ ಮುಗಿಲು ಮುಟ್ಟಿದೆ. ಸೋಮವಾರ ಮಧ್ಯಾಹ್ನ ಅರಮನೆಯಲ್ಲಿ ಆಯುಧ ಪೂಜೆ ನಡೆದರೆ ಸಂಜೆ ಏರ್ ಶೋ (Air Show) ನಡೆಯಿತು. ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಕುಟುಂಬ ಸಹಿತ ಈ ವೈಭವವನ್ನು ವೀಕ್ಷಿಸಿ ಸಂಭ್ರಮಿಸಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಪತಿ ಯದುವೀರ್ ಪೂಜಾ ಕಾರ್ಯವನ್ನು ಅರಮನೆ ಬಾಲ್ಕನಿಯಿಂದ ವಿಡಿಯೊ ಮಾಡಿದ ತ್ರಿಷಿಕಾ!
6. Street Dog Attack: ವಾಘ್ ಬಕ್ರಿ ಚಹಾ ಕಂಪನಿ ಮಾಲೀಕ ಬೀದಿ ನಾಯಿಗಳಿಗೆ ಬಲಿ
ಬೀದಿ ನಾಯಿಗಳ ದಾಳಿಗೆ (street dog attack) ಒಳಗಾಗಿ ಉದ್ಯಮಿ, ಖ್ಯಾತ ಚಹಾ ಕಂಪನಿ ವಾಘ್ ಬಕ್ರಿಯ (Wagh Bakri) ಮಾಲಿಕ ಪರಾಗ್ ದೇಸಾಯಿ (49) ಸಾವನ್ನಪ್ಪಿದ್ದಾರೆ. ಅವರು ತಮ್ಮ ನಿವಾಸದ ಹೊರಗೆ ಅಕ್ಟೋಬರ್ 15ರಂದು ಬೀದಿ ನಾಯಿಗಳಿಂದ ತೀವ್ರ ದಾಳಿಗೆ ಒಳಗಾಗಿದ್ದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ಉತ್ತರ ಕನ್ನಡದಲ್ಲಿ ಒಂದೇ ದಿನ ಇಬ್ಬರು ಡೆಂಗ್ಯೂಗೆ ಬಲಿ
ಉತ್ತರ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯೂಗೆ ಒಂದೇ ದಿನ ಇಬ್ಬರು ಬಲಿಯಾಗಿದ್ದಾರೆ. ಭಟ್ಕಳದ ಮೊಹಮ್ಮದ್ ಮೀರಾನ್ ಸಾದಾ (77) ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅದಕ್ಕಿಂತ ಮೊದಲು ಭಟ್ಕಳ ತಾಲೂಕಿನ ತಲಗೋಡು ನಿವಾಸಿಯಾದ ಪ್ರಜ್ವಲ್ ಗೋವಿಂದ ಖಾರ್ವಿ (24) ಬೆಳಗ್ಗೆ ಮೃತಪಟ್ಟಿದ್ದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. Bishan Singh Bedi : ಭಾರತ ತಂಡದ ಮಾಜಿ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ ನಿಧನ
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ದಿಗ್ಗಜ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ (77) ಸೋಮವಾರ ನಿಧನರಾದರು. 1967 ಮತ್ತು 1979 ರ ನಡುವೆ ಸ್ಪಿನ್ನರ್ ಬೌಲರ್ ಭಾರತ ತಂಡದ ಪರವಾಗಿ 67 ಟೆಸ್ಟ್ ಪಂದ್ಯಗಳನ್ನು ಆಡಿದ್ದು 266 ವಿಕೆಟ್ಗಳನ್ನು ಉರುಳಿಸಿದ್ದರು. ಇದಲ್ಲದೆ, ಅವರು ಹತ್ತು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಏಳು ವಿಕೆಟ್ಗಳನ್ನು ಪಡೆದಿದ್ದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9.ICC World Cup 2023: ಸೆಮಿಫೈನಲ್ ಪ್ರವೇಶಕ್ಕೆ ಭಾರತ ಇನ್ನೆಷ್ಟು ಪಂದ್ಯ ಗೆಲ್ಲಬೇಕು?
ಹಾಲಿ ಆವೃತ್ತಿಯ ವಿಶ್ವಕಪ್ ಟೂರ್ನಿಯಲ್ಲಿ(ICC World Cup 2023) ಆತಿಥೇಯ ಭಾರತ(team india) ಆಡಿದ 5 ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿ ಅಜೇಯ ಓಟ ಕಾಯ್ದುಕೊಂಡಿದೆ. ಸದ್ಯ 10 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿದೆ. ಆದರೂ ಭಾರತ ಸೆಮಿಫೈನಲ್ ಟಿಕೆಟ್ ಖಚಿತಗೊಂಡಿಲ್ಲ. ಸೆಮಿ ಟಿಕೆಟ್ ಪಡೆಯ ಬೇಕಾದರೆ ಇನ್ನೆಷ್ಟು ಪಂದ್ಯ ಗೆಲ್ಲಬೇಕು ಎಂಬ ಲೆಕ್ಕಾಚಾರ ಇಂತಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. Six Legged Calf: ಬಹಳ ದಿನ ಬದುಕಲ್ಲ ಎಂದಿದ್ದ ಆರು ಕಾಲಿನ ಕರು, ಈಗ ದಷ್ಟಪುಷ್ಟವಾಗಿದೆ!
ಕುತ್ತಿಗೆಯಲ್ಲಿ ಜೋಡಿ ಕಾಲುಗಳೊಂದಿಗೆ ಆರು ಕಾಲುಗಳ ಆಕಳು ಕರು (Six Legged Calf) ಈಗ ಎಲ್ಲರ ನಿರೀಕ್ಷೆಯನ್ನು ಹುಸಿ ಮಾಡಿದೆ. ವರ್ಷದ ಹಿಂದೆ ಜನಿಸಿದ್ದ ಈ ಕರು ಹೆಚ್ಚೆಂದರೆ ಒಂದು ವರ್ಷ ಕೂಡ ಬದುಕಲಾರದು ಎಂದು ಪಶುವೈದ್ಯರು ಹೇಳಿದ್ದರು(veterinary doctors). ಆದರೆ, ಈ ಕರು ದೊಡ್ಡದಾಗಿದ್ದು, ಆರೋಗ್ಯವಾಗಿದೆ! ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ