Site icon Vistara News

ವಿಸ್ತಾರ TOP 10 NEWS | ಗಣೇಶೋತ್ಸವಕ್ಕೆ ‘ಹೈ’ ಗ್ರೀನ್‌ ಸಿಗ್ನಲ್‌ನಿಂದ ಗುಲಾಂ ಗುಡ್‌ ಬೈವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news-chamarajpet-ground-ghulam-nabi-azad-yeddiyurappa-cji-nv-ramana-and-other-news

ಬೆಂಗಳೂರು: ಗಣೇಶ ಚತುರ್ಥಿಗೆ ಕೆಲವೇ ದಿನಗಳಿರುವಂತೆ, ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡುವ ಹೊಣೆಯನ್ನು ರಾಜ್ಯ ಸರ್ಕಾರದ ಅಂಗಳಕ್ಕೆ ಹೈಕೋರ್ಟ್‌ ವರ್ಗಾಯಿಸಿದೆ. ಒಂದರ ನಂತರ ಒಂದರಂತೆ ಆಘಾತ ಎದುರಿಸುತ್ತಿರುವ ಕಾಂಗ್ರೆಸ್‌ ಪಕ್ಷಕ್ಕೆ, ಹಿರಿಯ ನಾಯಕ ಗುಲಾಂ ನಭಿ ಆಜಾದ್‌ ರಾಜೀನಾಮೆ ಮತ್ತೊಂದು ಏಟು ನೀಡಿದೆ. ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ನವದೆಹಲಿ ಪ್ರವಾಸದಲ್ಲಿದ್ದು, ರಾಜ್ಯ ರಾಜಕಾರಣದ ದೃಷ್ಟಿಯಿಂದ ಮಹತ್ವದ ಬೆಳವಣಿಗೆಗಳಾಗುವ ಸಾಧ್ಯತೆಯಿದೆ ಎನ್ನುವುದು ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಹಬ್ಬಕ್ಕೆ ಗ್ರೀನ್‌ ಸಿಗ್ನಲ್‌: ಸರ್ಕಾರದ ವಿವೇಚನೆಗೆ ಬಿಟ್ಟದ್ದು ಎಂದ ಹೈಕೋರ್ಟ್‌
ಅತ್ಯಂತ ಮಹತ್ವದ ತೀರ್ಪೊಂದರಲ್ಲಿ ವಿವಾದಿತ ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಅವಕಾಶ ನೀಡಬಹುದು ಎಂದು ರಾಜ್ಯ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌ ನೀಡಿದೆ. ಈ ಮೈದಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದು ಸರ್ಕಾರದ ವಿವೇಚನೆಗೆ ಬಿಟ್ಟದ್ದು ಎಂದು ಅದು ಹೇಳಿದೆ. ಚಾಮರಾಜಪೇಟೆ ಮೈದಾನದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು, ವರ್ಷದಲ್ಲಿ ಎರಡು ಬಾರಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಮತ್ತು ಉಳಿದಂತೆ ಆಟಕ್ಕೆ ಮಾತ್ರ ಬಳಸಬಹುದು ಎಂಬ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಸಿಜೆ ಅಲೋಕ್‌ ಅರಾಧೆ ನೇತೃತ್ವದ ಪೀಠ, ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದು ಸರ್ಕಾರದ ವಿವೇಚನೆಗೆ ಬಿಟ್ಟದ್ದು ಎಂದು ಹೇಳಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

2. Ghulam Nabi Azad | ಕಾಂಗ್ರೆಸ್​​ ತೊರೆದ ಗುಲಾಂ ನಬಿ ಆಜಾದ್; ರಾಹುಲ್​ ಗಾಂಧಿ ಅಪ್ರಬುದ್ಧ ಎಂದ ಹಿರಿಯ ನಾಯಕ
ಕಾಂಗ್ರೆಸ್​ನ ಹಿರಿಯ ನಾಯಕ, ಮಾಜಿ ರಾಜ್ಯಸಭಾ ಸದಸ್ಯ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್​ನ್ನು ಸಂಪೂರ್ಣವಾಗಿ ತೊರೆದಿದ್ದಾರೆ. ಇತ್ತೀಚೆಗೆ ಜಮ್ಮು-ಕಾಶ್ಮೀರ ಪ್ರಚಾರ ಸಮಿತಿ ಅಧ್ಯಕ್ಷನ ಸ್ಥಾನವನ್ನು ಅವರಿಗೆ ವಹಿಸಲಾಗಿತ್ತು. ಆದರೆ ಹುದ್ದೆಗೆ ಏರಿದ ಕೆಲವೇ ಹೊತ್ತಲ್ಲಿ ರಾಜೀನಾಮೆ ಕೊಟ್ಟಿದ್ದರು. ಅದರ ಬೆನ್ನಲ್ಲೇ ಕಾಂಗ್ರೆಸ್​ನ ಪ್ರಾಥಮಿಕ ಸದಸ್ಯತ್ವವನ್ನೇ ತೊರೆದಿದ್ದಾರೆ.
ಕಾಂಗ್ರೆಸ್​ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಗುಲಾಂ ನಬಿ ಆಜಾದ್​, ‘ಕಾಂಗ್ರೆಸ್​​ನಲ್ಲಿ ಹಿರಿಯ ನಾಯಕರನ್ನು ಕಡೆಗಣಿಸಲಾಗುತ್ತಿದೆ. ಹೊಗಳುಭಟರು, ಅನನುಭವಿಗಳು ಹೆಚ್ಚಾಗುತ್ತಿದ್ದಾರೆ. ಈ ವಾತಾವರಣ ಹಿಂಸೆ ತರುತ್ತಿದೆ’ ಎಂದು ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲ, ರಾಹುಲ್​ ಗಾಂಧಿಯವರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಕಾಂಗ್ರೆಸ್​​ನ ರಾಜಕೀಯ ಪ್ರಭಾವ ತಗ್ಗುತ್ತಿರುವುದಕ್ಕೆ, ಚುನಾವಣೆಗಳಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವುದಕ್ಕೆ ರಾಹುಲ್​ ಗಾಂಧಿ ಅಪ್ರಬುದ್ಧತೆಯೇ ಕಾರಣ ಎಂದಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಮಾಹಿತಿಗಾಗಿ: ಕಾಂಗ್ರೆಸ್​​ಗೆ ಮತ್ತಷ್ಟು ಹಿನ್ನಡೆ; ಗುಲಾಂ ನಬಿ ಆಜಾದ್​ ಬೆನ್ನಲ್ಲೇ ಮತ್ತೂ ಐವರು ಪ್ರಮುಖರ ರಾಜೀನಾಮೆ

3. ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆಯ ಸುಳಿವು ನೀಡಿದ ಬಿ.ಎಸ್‌. ಯಡಿಯೂರಪ್ಪ
ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರನ್ನು ಬದಲಾವಣೆ ಮಾಡಲಾಗುತ್ತದೆಯೇ ಇಲ್ಲವೇ ಎಂಬ ಚರ್ಚೆಗಳ ನಡುವೆಯೇ ಮಾಜಿ ಸಿಎಂ ಹಾಗೂ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ನವದೆಹಲಿಗೆ ತೆರಳಿದ್ದು, ಈ ಕುರಿತು ಚರ್ಚೆಯನ್ನು ಮುಕ್ತವಾಗಿರಿಸಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ಕುರಿತು ಪ್ರತಿಕ್ರಿಯಿಸಿ, ನಾನಂತೂ ಈ ವಿಚಾರವನ್ನು ಮುಂದಿಟ್ಟುಕೊಂಡು ಬಂದಿಲ್ಲ. ಆದರೆ ಚರ್ಚೆಯಾಗಬಹುದೇ ಇಲ್ಲವೇ ಗೊತ್ತಿಲ್ಲ ಎಂದರು. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

4. ಶಿಕ್ಷಣ ಇಲಾಖೆಯಲ್ಲೂ ಪರ್ಸೆಂಟೇಜ್‌?: ಲಂಚ ಕೇಳಿದ ಆಡಿಯೊ ರಿಲೀಸ್‌ ಮಾಡಿದ ರುಪ್ಸಾ, ಪ್ರಧಾನಿಗೆ ಪತ್ರ
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಂಚ ವ್ಯವಹಾರ ನಡೆಯುತ್ತಿದೆ ಎಂಬ ಆರೋಪದ ಬೆನ್ನಿಗೇ ಶಿಕ್ಷಣ ಇಲಾಖೆಯಲ್ಲಿಯೂ ಖಾಸಗಿ ಶಾಲೆಗಳಿಂದ ಲಂಚ ಸ್ವೀಕರಿಸಲಾಗುತ್ತಿದೆ ಎಂದು ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘಟನೆ(ರುಪ್ಸಾ) ಆರೋಪಿಸಿದೆ.
ಈ ಕುರಿತು ಶಾಸಕರ ಭವನದಲ್ಲಿ ರುಪ್ಸಾ ಸಂಘಟನೆ ರಾಜ್ಯ ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಸುದ್ದಿಗೋಷ್ಠಿ ನಡೆಸಿದರು. ಹಣ ನೀಡದೆ ಇಲ್ಲದೆ ಮಾನ್ಯತೆ ನವೀಕರಣ ಮಾಡುತ್ತಿಲ್ಲ ಎಂದ ತಾಳಿಕಟ್ಟೆ, ಬಿಜಯಪುರ ಜಿಲ್ಲೆ ವಿಜಯಪುರ ತಾಲೂಕಿನ ಶಾಲೆಯೊಂದರ ಚೇರ್ಮನ್‌ ಕೊಪ್ಪದ್ ಎನ್ನುವವರಿಂದ ಬಿಇಒ ಒಬ್ಬರು ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ ಎನ್ನಲಾದ ಆಡಿಯೋವನ್ನು ಬಿಡುಗಡೆ ಮಾಡಿದರು. ಸಂಪೂರ್ಣ ಸುದ್ದಿ ಹಾಗೂ ಆಡಿಯೊಗಾಗಿ ಇಲ್ಲಿ ಕ್ಲಿಕ್‌ ಮಾಡಿ.

5. ಡಿ.ಕೆ. ಶಿವಕುಮಾರ್‌ ನನ್ನ ವೈರಿ ಅಲ್ಲ, ಅವರ ಬಗ್ಗೆ ಸಿಂಪಥಿಯೂ ಇಲ್ಲ ಎಂದ ಕುಮಾರಸ್ವಾಮಿ
ಡಿ.ಕೆ.ಶಿವಕುಮಾರ್ ನನ್ನ ವೈರಿ ಅಲ್ಲ. ಹಾಗಂತ ನಂಗೆ ಅವರ ಮೇಲೆ ಸಿಂಪಥಿಯೂ ಇಲ್ಲ- ಇದು ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರ ಮಾತು.
ಹುಣಸೂರಿನಲ್ಲಿ ಆಯೋಜನೆಗೊಂಡಿರುವ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಇಬ್ಬರೂ ಜತೆಯಾಗಿ ವೇದಿಕೆ ಹಂಚಿಕೊಳ್ಳುತ್ತಿರುವ ಬಗ್ಗೆ ಮೈಸೂರಿನಲ್ಲಿ ಪತ್ರಕರ್ತರು ಪ್ರಶ್ನಿಸಿದಾಗ ಕುಮಾರಸ್ವಾಮಿ ಈ ಮಾತು ಹೇಳಿದರು. ಇತ್ತೀಚೆಗಷ್ಟೇ ಅವರಿಬ್ಬರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

6. CJI N V Ramana | ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನಿರ್ಗಮನ
16 ತಿಂಗಳ ಕಾಲ ಭಾರತದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎನ್ ವಿ ರಮಣ ಅವರು ಆಗಸ್ಟ್ 26ರಂದು ನಿವೃತ್ತರಾಗಿದ್ದಾರೆ. ನ್ಯಾಯ ಪರಿಪಾಲನೆಯಲ್ಲಿ ನೈಪುಣ್ಯತೆಯನ್ನು ಸಾಧಿಸಿರುವ, ಅಪಾರ ಕಾನೂನು ಪಾಂಡಿತ್ಯವನ್ನು ಹೊಂದಿರುವ ನ್ಯಾ. ಎನ್‌ ವಿ ರಮಣ (CJI N V Ramana) ಅವರ ಸೇವೆಯಿಂದ ದೇಶಕ್ಕೆ ಸಾಕಷ್ಟು ಲಾಭವಾಗಿದೆ. 48 ನೇ ಮುಖ್ಯ ನ್ಯಾಯಮೂರ್ತಿಯಾಗಿ ಅವರು 2021 ಆಗಸ್ಟ್ 24ರಂದು ನೇಮಕವಾಗಿದ್ದು. ಕಾನೂನು ವಲಯದಲ್ಲಿ ಅವರು ನ್ಯಾಯ ಮತ್ತು ನಿಷ್ಠುರತನಕ್ಕೆ ಹೆಸರುವಾಸಿ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

7. Iron Ore Mining | ಕರ್ನಾಟಕದಲ್ಲಿ ಅದಿರು ಉತ್ಪಾದನೆ ಹೆಚ್ಚಳಕ್ಕೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ
ಕರ್ನಾಟಕದಲ್ಲಿ ಅದಿರು ಉತ್ಪಾದನೆಗೆ ಇದ್ದ ವಾರ್ಷಿಕ ಮಿತಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಹೆಚ್ಚಿಸಿದೆ. ಇದರಿಂದ ಸಹಜವಾಗಿಯೇ ರಾಜ್ಯದಲ್ಲಿ ಕಬ್ಬಿಣದ ಅದಿರು ಉತ್ಪಾದನೆ ಚಟುವಟಿಕೆಗಳು ಇನ್ನಷ್ಟು ಬಿರುಸುಗೊಳ್ಳಲಿವೆ. ಸುಪ್ರೀಂ ಕೋರ್ಟ್‌ನ ಈ ಆದೇಶವು ಷೇರುಪೇಟೆಯಲ್ಲಿ ಲೋಹ ವಲಯದ ಷೇರುಗಳ ಮೌಲ್ಯ ಹೆಚ್ಚಳಕ್ಕೂ ಕಾರಣವಾಗಿದೆ. ಈ ಹಿಂದೆ, ಅಕ್ರಮ ಗಣಿಗಾರಿಕೆ ಮತ್ತು ಪರಿಸರ ಸಂರಕ್ಷಣೆಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಅದಿರು ಉತ್ಪಾದನೆ ಮೇಲೆ ಮಿತಿ ಹೇರಿತ್ತು. ನ್ಯಾಯಾಲಯದ ಈ ಆದೇಶವು ಕಬ್ಬಿಣ ಅದಿರು ಗಣಿಗಾರಿಕೆ (Iron Ore Mining)ಗೆ ಮತ್ತಷ್ಟು ಇಂಬು ನೀಡಲಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

8. Brand story | NDTV: ದೇಶದ ಮೊದಲ 24×7 ನ್ಯೂಸ್‌ ಚಾನೆಲ್ ಈಗ ಸುದ್ದಿಯಲ್ಲಿ!
ಎನ್‌ಡಿಟಿವಿ! ದೇಶದ ಮೊಟ್ಟ ಮೊದಲ 24X7 ನ್ಯೂಸ್‌ ಚಾನೆಲ್‌ ಇದೀಗ ತಾನೇ ಸುದ್ದಿಯ ಕೇಂದ್ರ ಬಿಂದುವಾಗಿದೆ. ಗೌತಮ್‌ ಅದಾನಿ ನೇತೃತ್ವದ ಅದಾನಿ ಗ್ರೂಪ್, ಎನ್‌ಡಿಟಿವಿಯ ಬಹುಪಾಲು ಷೇರುಗಳನ್ನು ಖರೀದಿಸಿ ಅದರ ನಿಯಂತ್ರಣವನ್ನು ತನ್ನ ಕೈಗೆ ತೆಗೆದುಕೊಳ್ಳಲು ನಿರ್ಧರಿಸಿದೆ. (Brand story) ಈಗಾಗಲೇ ವಿಶ್ವಪ್ರಧಾನ್‌ ಕಮರ್ಶಿಯಲ್‌ (ವಿಸಿಪಿಎಲ್)‌ ಕಂಪನಿಯನ್ನು ಖರೀದಿಸುವ ಮೂಲಕ ಪರೋಕ್ಷವಾಗಿ ಎನ್‌ಡಿಟಿವಿಯಲ್ಲಿನ ೨೯% ಷೇರುಗಳನ್ನು ತನ್ನದಾಗಿಸಿದೆ. ಜತೆಗೆ ಹೆಚ್ಚುವರಿಯಾಗಿ ಮುಕ್ತ ಮಾರುಕಟ್ಟೆಯಲ್ಲಿ ೨೬% ಷೇರುಗಳನ್ನು ಖರೀದಿಸುವ ಪ್ರಸ್ತಾಪವನ್ನು ಎನ್‌ಡಿಟಿವಿಯ ಷೇರುದಾರರ ಮುಂದಿಟ್ಟಿದೆ. ಇದೆಲ್ಲ ಅದಾನಿ ಗ್ರೂಪ್‌ಗೆ ಹೇಗೆ ಸಾಧ್ಯವಾಯಿತು? ಎಂಬುದನ್ನು ತಿಳಿಯುವುದಕ್ಕೆ ಎನ್‌ಡಿಟಿವಿಯ ಇತಿಹಾಸವನ್ನು ಅವಲೋಕಿಸಬೇಕಿದೆ.

9. China Drought | ಬತ್ತಿದ ನದಿಗಳು, ಜನರಿಗೆ ಉರುಳು; ಬರಗಾಲದಲ್ಲಿ ಅರ್ಧ ಚೀನಾ!
ಜಗತ್ತಿನ ಎರಡನೇ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿರುವ ರಾಷ್ಟ್ರ ಚೀನಾ ಈಗ ಅಕ್ಷರಶಃ ಬಿಲಿಸಿನ ಬೇಗೆಯಿಂದ ಬಳಲುತ್ತಿದೆ. ಕೊರೊನಾ-19 ಮತ್ತು ಅದರ ನಿಯಂತ್ರಣಕ್ಕೆ ಲಾಕ್‌ಡೌನ್ ಹೇರಿದ್ದರ ಪರಿಣಾಮ ಆರ್ಥಿಕವಾಗಿ ತೀವ್ರ ಹಿನ್ನಡೆ ಅನುಭವಿಸಿದ್ದ ಚೀನಾಗೆ ಈ ಹೆಚ್ಚುತ್ತಿರುವ ತಾಪಮಾನವು ಗಾಯದ ಮೇಲೆ ಬರೆ ಎಳೆದಂತಾಗಿದೆ. ವಿಶೇಷವಾಗಿ ದಕ್ಷಿಣ ಚೀನಾ ಸಂಪೂರ್ಣವಾಗಿ ಈ ಕ್ಷಾಮಕ್ಕೆ ತುತ್ತಾಗಿದೆ. ನದಿಗಳು ಬತ್ತಲಾರಂಭಿಸಿವೆ. ಬಹಳಷ್ಟು ನಗರಗಳು ಗರಿಷ್ಠ ತಾಪಮಾನವನ್ನು ದಾಖಲಿಸಿವೆ. ಪರಿಸ್ಥಿತಿಯು ಹೀಗೆಯೇ ಮುಂದುವರಿದರೆ ಮುಂದಿನ ದಿನಗಳು ಇನ್ನಷ್ಟು ಬರ್ಬರವಾಗಿರಲಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಚೀನಾ ಕ್ಷಾಮ (China Drought)ವನ್ನು ಎದುರಿಸುತ್ತಿದೆ. ಈ ಕುರಿತು ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

10. Global Leader | ಜಾಗತಿಕ ಜನಪ್ರಿಯ ನಾಯಕರ ಪಟ್ಟಿ ಪ್ರಕಟ, ಮೋದಿ ಅವರ ಸ್ಥಾನವೆಷ್ಟು? ಇಲ್ಲಿದೆ ಪಟ್ಟಿ
ಕೊರೊನಾ ಬಿಕ್ಕಟ್ಟಿನ ಸಂದರ್ಭವೇ ಇರಲಿ, ಬೆಲೆಯೇರಿಕೆ ವಿರುದ್ಧ ಆಕ್ರೋಶವೇ ವ್ಯಕ್ತವಾಗಲಿ. ಇಲ್ಲವೇ ಪೆಗಾಸಸ್‌ ಪ್ರಕರಣ, ರೈತರ ಪ್ರತಿಭಟನೆ ಸೇರಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಲಿ, ಪ್ರಧಾನಿ ನರೇಂದ್ರ ಮೋದಿ ಅವರ ಖ್ಯಾತಿಗೆ ಮಾತ್ರ ಸ್ವಲ್ಪವೂ ಕುಂದಾಗುವುದಿಲ್ಲ. ಈ ಮಾತಿಗೆ ಪುಷ್ಟಿ ನೀಡುವಂತೆ, ನರೇಂದ್ರ ಮೋದಿ ಅವರು ಮತ್ತೆ ಜಗತ್ತಿನಲ್ಲೇ (Global Leader) ಹೆಚ್ಚು ಖ್ಯಾತಿ ಹೊಂದಿರುವ ನಾಯಕ ಎನಿಸಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ದಿನದ ಇನ್ನಷ್ಟು ಪ್ರಮುಖ ಸುದ್ದಿಗಳು
1. Asia Cup- 2022 | ಏಷ್ಯಾ ಕಪ್‌ನಲ್ಲಿ ಭಾರತ ತಂಡವೇ ಬೌಲಿಂಗ್‌ನಲ್ಲಿ ಬಲಿಷ್ಠ, ಹೀಗಿದೆ ನೋಡಿ ಪವರ್‌
2. Top tech hub | ಏಷ್ಯಾ-ಪೆಸಿಫಿಕ್‌ನಲ್ಲಿ ಬೀಜಿಂಗ್‌ ಬಳಿಕ ಎರಡನೇ ಟೆಕ್‌ ಹಬ್‌ ಬೆಂಗಳೂರು
3. ಎಲೆಕ್ಷನ್‌ ಹವಾ | ಶಿಕಾರಿಪುರ | ಯಡಿಯೂರಪ್ಪ ‘ತ್ಯಾಗ’ ಮಾಡಿದ ಕ್ಷೇತ್ರ ಪುತ್ರನಿಗೇ ಸಿಗುತ್ತದೆಯೇ?

Exit mobile version