Site icon Vistara News

ವಿಸ್ತಾರ TOP 10 NEWS |‌ ಮತದಾರರ ದತ್ತಾಂಶ ಕಳ್ಳತನ ವಾಸನೆಯಿಂದ ಶ್ರೀಗಂಧದ ನೀತಿಗೆ ಸಮ್ಮತಿವರೆಗಿನ ಪ್ರಮುಖ ಸುದ್ದಿಗಳಿವು

vistara top 10 news congress allegation over voter data theft state govt new rules for sandal wood cultivation

ಬೆಂಗಳೂರು: ಚುನಾವಣೆ ಸಮೀಪವಾಗುತ್ತಿರುವಂತೆಯೇ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಗಂಭೀರ ಆರೋಪ ಮಾಡಿದ್ದು, ಮತದಾರರ ದತ್ತಾಂಶ ಕಳ್ಳತನ ಸಂಕಷ್ಟ ಎದುರಾಗಿದೆ. ಶ್ರೀಗಂಧ ಬೆಳೆಯುವ ನೀತಿಗೆ ಸರ್ಕಾರ ಸಮ್ಮತಿ ನೀಡಿದ್ದು, ಡಿಸೆಂಬರ್‌ನಲ್ಲಿ ಅಧಿವೇಶನ ನಡೆಸಲು ಸಂಪುಟದಲ್ಲಿ ತೀರ್ಮಾನಿಸಿದೆ. ಟಿಪ್ಪು ಪುಸ್ತಕದಿಂದ ಆರಂಭವಾದ ಗಲಾಟೆ ಇದೀಗ ರಾಮದಾಸ್‌ ವರ್ಸಸ್‌ ಪ್ರತಾಪ್‌ ಸಿಂಹ ಕದನವಾಗಿದೆ, ಮಂಗನಕಾಯಿಲೆ ಲಸಿಕೆಗೆ ಅನುಮತಿಯೇ ಇಲ್ಲ ಎಂಬ ಆಘಾತಕಾರಿ ವಿಚಾರ ಬಹಿರಂಗವಾಗಿದೆ, ಶಿಕ್ಷಕರ ವರ್ಗಾವಣೆ ಕರಡು ಅಧಿಸೂಚನೆಯನ್ನು ಸರ್ಕಾರ ಪ್ರಕಟಿಸಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Congress allegation | 18,000 ನಕಲಿ ಬಿಎಲ್‌ಒಗಳ ನೇಮಕ: ಪರಿಶಿಷ್ಟ, ಮುಸ್ಲಿಂ ಮತದಾರರ ಕಿತ್ತು ಹಾಕಲು ಹುನ್ನಾರ
ಬೆಂಗಳೂರು ನಗರದಲ್ಲಿ ೧೮,೦೦೦ ನಕಲಿ ಬೂತ್‌ ಮಟ್ಟದ ಅಧಿಕಾರಿಗಳನ್ನು (ಬಿಎಲ್‌ಒ) ನೇಮಕ ಮಾಡಿಕೊಂಡು ಅನಧಿಕೃತವಾಗಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿಸಲಾಗುತ್ತಿದೆ ಈ ಪರಿಷ್ಕರಣೆಯ ಮೂಲಕ ಎಸ್‌ಸಿ, ಎಸ್‌ಟಿ ಮತ್ತು ಮುಸ್ಲಿಂ ಮತದಾರರನ್ನು ವೋಟರ್‌ ಲಿಸ್ಟ್‌ನಿಂದ ಕಿತ್ತು ಹಾಕುವ ಹುನ್ನಾರ ನಡೆಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಕೆಪಿಸಿಸಿ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೆವಾಲ ಸುದ್ದಿಗೋಷ್ಠಿ ನಡೆಸಿರುವುದು ರಾಜ್ಯರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Voter Data | ಸಿದ್ದರಾಮಯ್ಯ ಸರ್ಕಾರ ಜಾತಿಗಣತಿ ವಿವರವನ್ನು ಚುನಾವಣೆಗೆ ಬಳಸಿತ್ತು: ಸಿಎಂ ಬೊಮ್ಮಾಯಿ ಆರೋಪ

2. Voter data | ಚಿಲುಮೆ ಸಂಸ್ಥೆ ಕಾರ್ಯಾಚರಣೆ ಹೊಸತಲ್ಲ, ಕಾಂಗ್ರೆಸ್‌, ಜೆಡಿಎಸ್‌ ಆಡಳಿತವಿದ್ದಾಗಲೂ ಸಮೀಕ್ಷೆ ನಡೆಸಿತ್ತು!
ಮತದಾರರ ಮಾಹಿತಿ ಕಳವು ಆರೋಪದ ಬೆನ್ನಲ್ಲೇ ಭಾರಿ ಸುದ್ದಿಯಲ್ಲಿರುವ ಚಿಲುಮೆ ಎಂಬ ಖಾಸಗಿ ಸಂಸ್ಥೆ ಈ ರೀತಿ ಮಾಹಿತಿ ಸಂಗ್ರಹಿಸುತ್ತಿರುವುದು ಇದು ಮೊದಲ ಬಾರಿಯೇನಲ್ಲ! 2017, 2018, 2019, 2022 ಸಾಲಿನಲ್ಲೂ ಚಿಲುಮೆ ಸಂಸ್ಥೆಗೆ ಬಿಬಿಎಂಪಿ ಅನುಮತಿ ನೀಡಿತ್ತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲೂ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಜಾಗೃತಿ ಅಭಿಯಾನ ಮಾಡಲು ಅನುಮತಿ ನೀಡಲಾಗಿದೆ ಎಂದು ತಿಳಿದುಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Karnataka Cabinet | ಖಾಸಗಿಯಾಗಿ ಬೆಳೆದ ಶ್ರೀಗಂಧ ಮಾರಾಟ ಇನ್ನು ಸುಲಭ, ರಾಮನಗರದಲ್ಲಿ ರಾಜೀವ್‌ ಗಾಂಧಿ ವಿವಿ
ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಶ್ರೀಗಂಧದ ಮರ ಬೆಳೆಯುವ ಕುರಿತ ನೀತಿಗೆ ರಾಜ್ಯ ಸಚಿವ ಸಂಪುಟ (Karnataka Cabinet) ಗುರುವಾರ ಅನುಮೋದನೆ ನೀಡಿದೆ. ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಶ್ರೀಗಂಧದ ಮರಗಳನ್ನು ಬೆಳೆಯಲು ಈಗಾಗಲೆ ಅನುಮೋದನೆ ಇದ್ದರೂ ಅದನ್ನು ಕಟಾವು ಮಾಡುವುದು, ಮಾರಾಟ ಮಾಡುವುದರ ಕುರಿತು ಅನೇಕ ಗೊಂದಲಗಳಿದ್ದವು. ಇದೀಗ ಹೊಸ ನೀತಿಯಿಂದಾಗಿ ಶ್ರೀಗಂಧದ ಮರಗಳನ್ನು ಬೆಳೆಯುವ ಪ್ರಕ್ರಿಯೆ ಸರಳವಾಗಲಿದೆ. ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಕಳವು ತಡೆಯಲು ನೀತಿಯಲ್ಲಿ ತಿಳಿಸಲಾಗಿದೆ ಎಂದು ಸಂಪುಟ ನಿರ್ಣಯದ ಕುರಿತು ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಮಾಹಿತಿ ನೀಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. ರಾಮದಾಸ್‌ vs ಪ್ರತಾಪ್‌ ಸಿಂಹ | ರಾಮದಾಸ್‌ ಬಳಿ ನನ್ನನ್ನು ಸುಟ್ಟು ಹಾಕುವಷ್ಟು ಹಣವಿದೆ ಎಂದ ಪ್ರತಾಪ್‌ ಸಿಂಹ: ಪಕ್ಷ ಬಿಡಿಸಲು ಕಿರುಕುಳ ನೀಡಲಾಗ್ತಿದೆ ಎಂದ ರಾಮದಾಸ್‌
ಬಹಳ ಹಿಂದಿನಿಂದಲೂ ಇರುವ ಸಂಸದ ಪ್ರತಾಪ್‌ ಸಿಂಹ ಮತ್ತು ಶಾಸಕ ರಾಮದಾಸ್‌ ನಡುವಿನ ವೈಯಕ್ತಿಕ ವೈಷಮ್ಯ ಈಗ ಬಸ್‌ ಶೆಲ್ಟರ್‌ ವಿವಾದದ ಬಳಿಕ ತಾರಕಕ್ಕೇರಿದೆ. ಪ್ರತಾಪ್‌ ಸಿಂಹ ಅವರು ತನ್ನನ್ನು ಪಕ್ಷದಿಂದ ಓಡಿಸಲು ಯತ್ನಿಸುತ್ತಿದ್ದಾರೆ ಎಂದು ರಾಮದಾಸ್‌ ಅವರು ಗುರುವಾರ ಪರೋಕ್ಷ ಆರೋಪ ಮಾಡಿದ ಬೆನ್ನಿಗೇ ಸಿಡಿದದ್ದ ಪ್ರತಾಪ್‌ ಸಿಂಹ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಶೆಲ್ಟರ್‌ನ ವಿನ್ಯಾಸವನ್ನೇ ತಿರುಚಲಾಗಿದೆ, ಶಾಸಕರ ಆಪ್ತ ಕಾರ್ಯದರ್ಶಿಯ ಕೈವಾಡ ಇದರಲ್ಲಿದೆ ಎಂದು ದೂರಿದ್ದಾರೆ. ಒಂದು ವೇಳೆ ತಪ್ಪಾಗಿದ್ದರೆ ಅದರ ವೆಚ್ಚವನ್ನು ಭರಿಸಲು ತಾನು ಸಿದ್ಧ ಎಂದು ರಾಮದಾಸ್‌ ಹೇಳಿಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಪ್ರತಾಪ್‌ ಸಿಂಹ ಅವರು ʻರಾಮದಾಸ್‌ ಅವರ ಬಳಿ ನನ್ನನ್ನು ಸುಟ್ಟುಹಾಕುವಷ್ಟು ದುಡ್ಡಿದೆʼ ಎಂದು ಕುಟುಕಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Shelter gumbaz | ಪಕ್ಷ ಬಿಡಿಸಲು ಕಿರುಕುಳ ನೀಡಲಾಗ್ತಿದೆ, ದಯವಿಟ್ಟು ನನ್ನ ಬಿಟ್ಟುಬಿಡಿ ಎಂದು ಕಣ್ಣೀರಿಟ್ಟ ರಾಮದಾಸ್‌

5. Teacher Transfer | ಶಿಕ್ಷಕರ ವರ್ಗಾವಣೆಗೆ ಹೊಸ ನೀತಿ; ಕರಡು ಅಧಿಸೂಚನೆ ಪ್ರಕಟ
ಶಿಕ್ಷಕರ ವರ್ಗಾವಣೆಗೆ (Teacher Transfer) ಇದ್ದ ಹಲವು ನಿರ್ಬಂಧಗಳನ್ನು ತೆಗೆದು ಹಾಕಿ “ಶಿಕ್ಷಕ ಸ್ನೇಹಿʼʼ ವರ್ಗಾವಣೆ ನೀತಿ ರೂಪಿಸಿರುವ ಸರ್ಕಾರ ಈ ಸಂಬಂಧ ಕರಡು ಅಧಿಸೂಚನೆ ಪ್ರಕಟಿಸಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು 15 ದಿನ ಕಾಲಾವಕಾಶ ನೀಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. KFD vaccine | ಮಂಗನ ಕಾಯಿಲೆ ತಡೆ ಲಸಿಕೆಗೆ ಅನುಮತಿಯೇ ಇಲ್ಲ; ಆದರೂ ಜನರಿಗೆ ನೀಡುತ್ತಿದೆ ಸರ್ಕಾರ!
ಕಳೆದ ಏಳು ದಶಕಗಳಿಂದ ಮಲೆನಾಡಿನ ಜನರನ್ನು ಕಾಡುತ್ತಿರುವ “ಮಂಗನ ಕಾಯಿಲೆʼʼ ಎಂದೇ ಪ್ರಸಿದ್ಧಿಯಾಗಿರುವ “ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌ʼʼ ಬಾರದಂತೆ ತಡೆಯಲು ನೀಡಲಾಗುತ್ತಿರುವ ಲಸಿಕೆಗೆ (KFD vaccine) ಔಷಧ ಗುಣಮಟ್ಟ ನಿಯಂತ್ರಕರ ಕೇಂದ್ರೀಯ ಸಂಘಟನೆ (Central Drugs Standard Control Organisation-CDSCO) ಅನುಮತಿಯನ್ನೇ ನೀಡಿಲ್ಲ ಎಂಬುದು ಬೆಳಕಿಗೆ ಬಂದಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. IT Raid | ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನೆಗೆ ಐಟಿ ರೈಡ್‌; ಕಾಂಗ್ರೆಸ್‌ ಪ್ರತಿಭಟನೆ, ಸಿ.ಟಿ. ರವಿ ಮೇಲೆ ಆಕ್ರೋಶ
ವಿಧಾನ ಪರಿಷತ್ ಮಾಜಿ ‌ಸದಸ್ಯೆ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗಾಯತ್ರಿ ಶಾಂತೇಗೌಡ ಅವರ ನಿವಾಸದ ಮೇಲೆ ಗುರುವಾರ (ನ. ೧೭) ಮುಂಜಾನೆಯೇ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದನ್ನು (IT Raid on Congress leader) ವಿರೋಧಿಸಿ ಅವರ ನಿವಾಸದ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Murugha Seer | ಪೋಷಕರಿಗೆ ಹಣ ಕೊಟ್ಟು ಪ್ರಕರಣ ಮುಚ್ಚಿ ಹಾಕಲು ಯತ್ನ; ಸ್ಟ್ಯಾನ್ಲಿ ನೀಡಿದ ದೂರಿನಲ್ಲೇನಿದೆ?
ತಮ್ಮ ಮೇಲೆ ಕೇಳಿಬಂದಿರುವ ವಿದ್ಯಾರ್ಥಿಗಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಮುಚ್ಚಿ ಹಾಕಲು ಮುರುಘಾ ಮಠದ ಮುರುಘಾ ಶರಣರು (Murugha Seer) ಯತ್ನಿಸಿದ್ದು, ಸಂತ್ರಸ್ತ ಬಾಲಕಿ ಹೇಳಿಕೆ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ತನಿಖೆಗೆ ಆದೇಶ ನೀಡಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಒಡನಾಡಿ ಸೇವಾ ಸಂಸ್ಥೆ ನಿರ್ದೇಶಕ ಸ್ಟ್ಯಾನ್ಲಿ ಪತ್ರ ಬರೆದು ಕೋರಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Negligence at Hospital | ಮಧ್ಯಾಹ್ನವಾದರೂ ಆಸ್ಪತ್ರೆಗೆ ಬಾರದ ವೈದ್ಯ, ಸಿಬ್ಬಂದಿ: ಗರ್ಭಿಣಿ ಪರದಾಟ
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಧ್ಯಾಹ್ನದವರೆಗೂ ಯಾವೊಬ್ಬ ಸಿಬ್ಬಂದಿಯೂ ಬಾರದಿರುವ ವಿದ್ಯಮಾನ ಬೆಳಕಿಗೆ ಬಂದಿದೆ. ಇದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಥೆಯಾದರೂ ರಾಜ್ಯದ ಹಲವು ಕಡೆಗಳಲ್ಲಿ ಪರಿಸ್ಥಿತಿ ಇದೇ ರೀತಿ ಇದೆ ಎಂಬ ಆರೋಪವಿದೆ. ಗರ್ಭಿಣಿಯೊಬ್ಬರನ್ನು ಆಸ್ಪತ್ರೆಗೆ ಕರೆ ತಂದ ಕುಟುಂಬ ವೈದ್ಯರಾಗಲೀ, ಸಿಬ್ಬಂದಿಗಳಾಗಲೀ ಇಲ್ಲದೆ ಪರದಾಡಿದೆ. ಕೊನೆಗೆ ಮಹಿಳೆಯನ್ನು ತಾಲೂಕು ಆಸ್ಪತ್ರೆಗೆ ಶಿಫ್ಟ್‌ ಮಾಡಬೇಕಾಯಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. ಮನ ಸಾಂತ್ವನ ಅಂಕಣ | ಅಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್: ನಿಮ್ಮ ಸಂತಸವನ್ನು ಕಸಿದುಕೊಳ್ಳುವ ಲೂಟಿಕೋರ!
ಏನಿದು ಅಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್? ಇದರ ಲಕ್ಷಣಗಳೇನು, ಸಮಸ್ಯೆಗಳೇನು ಮತ್ತು ಪರಿಹಾರಗಳೇನು ಎಂಬ ಬಗ್ಗೆ ಖ್ಯಾತ ಮನೋವೈದ್ಯರಾದ ಡಾ. ಪ್ರೀತಿ ಎಸ್. ಅವರು ಈ ಹೊಸ ಅಂಕಣದಲ್ಲಿ ವಿವರಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳು

ವಿಸ್ತಾರ Explainer | Narco test| ಏನಿದು ನಾರ್ಕೊ ಟೆಸ್ಟ್?‌ ವಿಕೃತ ಹಂತಕ ಅಫ್ತಾಬ್‌ ತನಿಖೆಯಲ್ಲಿ ನಿರ್ಣಾಯಕ?
Shraddha Murder Case | ವಿಕೃತ ಹಂತಕ ಅಫ್ತಾಬ್‌ ಮತ್ತೆ 5 ದಿನ ಪೊಲೀಸ್‌ ಕಸ್ಟಡಿಗೆ, ಗಲ್ಲಿಗೇರಿಸುವಂತೆ ವಕೀಲರ ಆಗ್ರಹ
Gyanvapi Mosque Case | ಹಿಂದೂಗಳ ಅರ್ಜಿ ಪ್ರಶ್ನಿಸಿ ಜ್ಞಾನವಾಪಿ ಮಸೀದಿ ಸಮಿತಿ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ವಾರಾಣಸಿ ಕೋರ್ಟ್‌
Veer Savarkar | ರಾಹುಲ್‌ ಗಾಂಧಿ ವಿರುದ್ಧ ವೀರ ಸಾವರ್ಕರ್‌ ಮೊಮ್ಮಗ ಕೇಸ್‌, ಉದ್ಧವ್‌ ಠಾಕ್ರೆ ಕೂಡ ಆಕ್ಷೇಪ
Head Phone Side Effect | ಹೆಡ್‌ಫೋನ್‌, ಇಯರ್‌ ಬಡ್‌ಗಳಿಂದ ಕಿವಿ ಢಮಾರ್!
Video | ಹನುಮ ಮಂದಿರ ಆಕಾರದ ಕೇಕ್​ ಕತ್ತರಿಸಿದ ಕಾಂಗ್ರೆಸ್ ನಾಯಕ ಕಮಲನಾಥ್​; ಹಿಂದು ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ

Exit mobile version