Site icon Vistara News

ವಿಸ್ತಾರ TOP 10 NEWS : ಕಾಂಗ್ರೆಸ್‌ನಿಂದ ಮೂರನೇ ʼಭಾಗ್ಯʼ ಘೋಷಣೆಯಿಂದ, ಭಯೋತ್ಪಾದಕ ಚಟುವಟಿಕೆಗೆ ಗೇಮಿಂಗ್‌ ಆ್ಯಪ್ ಬಳಕೆವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news-congress announces another scheme to gaming app used for terror activities and more news

1. Prajadhwani : ಸ್ತ್ರೀ ಶಕ್ತಿ ಸಂಘಗಳ ಸಾಲಮನ್ನಾ; ಅಲ್ಪಸಂಖ್ಯಾತರಿಗೆ ₹10 ಸಾವಿರ ಕೋಟಿ ಅನುದಾನ: ಸಿದ್ದರಾಮಯ್ಯ ಘೋಷಣೆ
ಮುಂದಿನ ಚುನಾವಣೆಯಲ್ಲಿ ಜಯಗಳಿಸಿದರೆ ಪ್ರತಿ ಮನೆಗೆ 200 ಯುನಿಟ್‌ ವಿದ್ಯುತ್‌ ಉಚಿತ ಹಾಗೂ ಮಹಿಳೆಯರಿಗೆ ಮಾಸಿಕ 2,000ರೂ. ನೀಡುವುದಾಗಿ ಘೋಷಿಸಿರುವ ಸರ್ಕಾರ ಇದೀಗ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಹೇಳಿದೆ. ಕೋಲಾರದಲ್ಲಿ ಆಯೋಜಿಸಿದ್ದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈ ಘೋಷಣೆ ಮಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Congress Protest : ರಸ್ತೆ ಗುಂಡಿಗಳ ರಾಜಧಾನಿ ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಡಿ.ಕೆ. ಶಿವಕುಮಾರ್‌ ವಾಗ್ದಾಳಿ

2. Budget 2023: ಬಜೆಟ್‌ನಲ್ಲಿ ಮಧ್ಯಮ ವರ್ಗದ ಜನತೆಗೆ ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಳದ ಕೊಡುಗೆ ಸಂಭವ
ಫೆಬ್ರವರಿ ೧ ರಂದು 2023-24 ಸಾಲಿನ ಕೇಂದ್ರ ಬಜೆಟ್‌ ಮಂಡನೆಯಾಗಲಿದ್ದು, (Budget 2023) ಮಧ್ಯಮ ವರ್ಗದ ಜನತೆ ಆದಾಯ ತೆರಿಗೆ ವಿನಾಯಿತಿಯ ಮಿತಿ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ನಡೆಯಲಿರುವ ಕೊನೆಯ ಪೂರ್ಣಪ್ರಮಾಣದ ಚುನಾವಣೆ ಇದಾಗಿರುವುದರಿಂದ, ಜನಪ್ರಿಯ ಬಜೆಟ್‌ ಅನ್ನು ಮಧ್ಯಮ ವರ್ಗದ ಜನತೆ ನಿರೀಕ್ಷಿಸುತ್ತಿದ್ದಾರೆ. ಹಾಗೂ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್‌ 80 ಸಿ, ಸೆಕ್ಷನ್‌ 80ಡಿ ಮತ್ತು ಸೆಕ್ಷನ್‌ 87ಎ ಇತ್ಯಾದಿಗಳ ಅಡಿಯಲ್ಲಿ ಕೆಲವು ತೆರಿಗೆ ವಿನಾಯಿತಿಗಳನ್ನು ನಿರೀಕ್ಷಿಸುತ್ತಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Hijab Row: ಹಿಜಾಬ್ ನಿಷೇಧ ಪ್ರಕರಣ ವಿಚಾರಣೆಗೆ ಶೀಘ್ರ ತ್ರಿಸದಸ್ಯ ಪೀಠ ರಚನೆಗೆ ಸಮ್ಮತಿಸಿದ ಸುಪ್ರೀಂ ಕೋರ್ಟ್
ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಕ್ಕೆ (Hijab Row) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (Supreme Court) ವಿಭಾಗೀಯ ಪೀಠವು ಭಿನ್ನ ತೀರ್ಪು ನೀಡಿದ್ದರಿಂದ ಕರ್ನಾಟಕದಲ್ಲಿ ಈಗಲೂ ನಿಷೇಧ ಮುಂದುವರಿದಿದೆ. ಇದರಿಂದ ವಿದ್ಯಾರ್ಥಿನಿಯರಿಗೆ ತೊಂದರೆಯಾಗುತ್ತಿದ್ದು, ಪ್ರಕರಣವನ್ನು ಶೀಘ್ರವೇ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕೆಂದು ಮುಸ್ಲಿಮ್ ವಿದ್ಯಾರ್ಥಿನಿಯರ ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದೆ. ಶೀಘ್ರವೇ ತ್ರಿಸದಸ್ಯ ಪೀಠ ರಚನೆಗೆ ಸಮ್ಮತಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. BBC Documentary On Modi: ಕೇಂದ್ರ ಬ್ಲಾಕ್‌ ಮಾಡಿದರೂ ಪ್ರತಿಪಕ್ಷಗಳಿಂದ ಬಿಬಿಸಿ ಸಾಕ್ಷ್ಯಚಿತ್ರ ಶೇರ್‌, ಬಿಜೆಪಿ ಆಕ್ರೋಶ
ಗೋದ್ರಾ ಹತ್ಯಾಕಾಂಡಕ್ಕೆ ಆಗ ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ (Narendra Modi) ಅವರೇ ಕಾರಣ ಎಂಬುದಾಗಿ ಚಿತ್ರಿಸಿರುವ ಬಿಬಿಸಿಯ ಇಂಡಿಯಾ: ದಿ ಮೋದಿ ಕ್ವಶ್ಚನ್‌ (India: The Modi Question) ಡಾಕ್ಯುಮೆಂಟರಿಯು (BBC Documentary On Modi) ದೇಶದಲ್ಲಿ ರಾಜಕೀಯ ಮೇಲಾಟಕ್ಕೆ ಕಾರಣವಾಗಿದೆ. ಡಾಕ್ಯುಮೆಂಟರಿ ಕುರಿತ ವಿಡಿಯೊ, ಪೋಸ್ಟ್‌ ಹಾಗೂ ಲಿಂಕ್‌ಗಳನ್ನು ಡಿಲೀಟ್‌ ಮಾಡಬೇಕು ಎಂದು ಟ್ವಿಟರ್‌ ಹಾಗೂ ಯುಟ್ಯೂಬ್‌ಗೆ ಕೇಂದ್ರ ಸರ್ಕಾರ ಸೂಚಿಸಿದರೂ ಪ್ರತಿಪಕ್ಷಗಳ ನಾಯಕರು ಲಿಂಕ್‌ಗಳನ್ನು ಶೇರ್‌ ಮಾಡಿದ್ದಾರೆ. ಇದಕ್ಕೆ ಬಿಜೆಪಿ ತಿರುಗೇಟು ನೀಡಿದ್ದು, ಬಿಜೆಪಿ ಹಾಗೂ ಪ್ರತಿಪಕ್ಷಗಳ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Bus Service: ಸರ್ಕಾರದ ವಿರುದ್ಧ ಸಿಡಿದೆದ್ದ ಸಾರಿಗೆ ನೌಕರರು; ಮಂಗಳವಾರ ಬಸ್‌ ಸಂಚಾರದಲ್ಲಿಲ್ಲ ವ್ಯತ್ಯಯ
ಸಾರಿಗೆ ನೌಕರರು ಧರಣಿ ಸತ್ಯಾಗ್ರಹಕ್ಕೆ ಮುಂದಾಗುತ್ತಿದ್ದಾರೆ. ಹೀಗಾಗಿ ಮಂಗಳವಾರ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯ (Bus Service) ಉಂಟಾಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಕೆಎಸ್‌ಆರ್‌ಟಿಸಿ ನಿಗಮವು ಬಸ್ಸುಗಳ ಕಾರ್ಯಾಚರಣೆಯಲ್ಲಿ ಯಾವುದೇ ವ್ಯತ್ಯಯ ಇಲ್ಲವೆಂದು ತಿಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Shivamogga terror: ಉಗ್ರ ಚಟುವಟಿಕೆಗೆ PFI ಮುಖಂಡರಿಂದ ಗೇಮಿಂಗ್ ಆ್ಯಪ್ ಬಳಕೆ; ಶಿವಮೊಗ್ಗ ಟ್ರಯಲ್‌ ಬ್ಲಾಸ್ಟ್‌, ಮಂಗ್ಳೂರು ಕುಕ್ಕರ್‌ ಬ್ಲಾಸ್ಟ್‌ಗೂ ಲಿಂಕ್‌!
ರಾಜ್ಯದಲ್ಲಿ ಉಗ್ರ ಚಟುವಟಿಕೆ ಸದ್ದಿಲ್ಲದೆ ನಡೆಯುತ್ತಿದೆ. ಶಿವಮೊಗ್ಗ ಟ್ರಯಲ್‌ ಬ್ಲಾಸ್ಟ್‌ (Shivamogga terror) ಹಾಗೂ ಮಂಗಳೂರು ಕುಕ್ಕರ್‌ ಬ್ಲಾಸ್ಟ್‌ ಬಳಿಕ ಒಂದೊಂದೇ ವಿಚಾರಗಳು ಹೊರಗೆ ಬರುತ್ತಲೇ ಇದೆ. ಈಗ ಉಗ್ರ ಚಟುವಟಿಕೆಗೆ ಗೇಮಿಂಗ್ ಆ್ಯಪ್ ಬಳಕೆ ಮಾಡಲಾಗುತ್ತಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Parakram Diwas 2023: ಅಂಡಮಾನ್​-ನಿಕೋಬಾರ್​​ನ 21 ದ್ವೀಪಗಳಿಗೆ ಪ್ರಧಾನಿಯಿಂದ ನಾಮಕರಣ; ಯಾರೆಲ್ಲರ ಹೆಸರಿಡಲಾಗಿದೆ?
 ನೇತಾಜಿ ಸುಭಾಷ್​ ಚಂದ್ರ ಬೋಸ್​ ಜನ್ಮದಿನದ ನಿಮಿತ್ತ, ಅವರಿಗೆ ಗೌರವಾರ್ಥವಾಗಿ ಅಂಡಮಾನ್​ ಮತ್ತು ನಿಕೋಬಾರ್​ ದ್ವೀಪಗಳಲ್ಲಿನ 21 ದೊಡ್ಡದೊಡ್ಡ ದ್ವೀಪಗಳಿಗೆ ಪ್ರಧಾನಿ ನರೇಂದ್ರ ಮೋದಿ ನಾಮಕರಣ ಮಾಡಿದರು. ಸುಭಾಷ್​ ಚಂದ್ರ ಬೋಸ್​ ಜನ್ಮದಿನವನ್ನು 2021ರಿಂದ ಪರಾಕ್ರಮ ದಿವಸ್​ ಎಂದು ಆಚರಿಸಿಕೊಂಡು ಬರಲಾಗುತ್ತಿದೆ. ಈ ಸಲದ ಪರಾಕ್ರಮ ದಿವಸ್​ (Parakram Diwas 2023)ನಿಮಿತ್ತ ಅಂಡಮಾನ್​-ನಿಕೋಬಾರ್​ನಲ್ಲಿನ 21 ದ್ವೀಪಗಳಿಗೆ ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ನಾಮಕರಣ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ವರ್ಚ್ಯುವಲ್​ ಆಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಅಲ್ಲಿನ ನೇತಾಜಿ ಸುಭಾಷ್ ಚಂದ್ರ ಬೋಸ್​ ದ್ವೀಪ (ಈ ಹಿಂದಿನ ರಾಸ್​ ದ್ವೀಪಗಳು)ದಲ್ಲಿ ನಿರ್ಮಿಸಲಾಗಿರುವ ಸುಭಾಷ್​ ಚಂದ್ರ ಬೋಸ್​ ಅವರ ರಾಷ್ಟ್ರೀಯ ಸ್ಮಾರಕದ ಮಾದರಿ ಪ್ರತಿಮೆಯನ್ನೂ ಅನಾವರಣಗೊಳಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Athiya Shetty KL Rahul wedding: ಸಪ್ತಪದಿ ತುಳಿದ ಕೆ.ಎಲ್​. ರಾಹುಲ್​-ಅಥಿಯಾ ಶೆಟ್ಟಿ
ಬಹು ಕಾಲದ ನಿರೀಕ್ಷೆ, ಕುತೂಹಲ, ಊಹಾಪೋಹಗಳಿಗೆ ಕೊನೆಗೂ ತೆರೆ ಎಂಬಂತೆ ಭಾರತೀಯ ಕ್ರಿಕೆಟ್‌ ತಂಡದ ಆಟಗಾರ ಕೆ.ಎಲ್​. ರಾಹುಲ್(Athiya Shetty KL Rahul wedding)​ ಮತ್ತು ಬಾಲಿವುಡ್‌ ತಾರೆ ಅಥಿಯಾ ಶೆಟ್ಟಿ(Athiya kl rahul marriage) ಇಂದು ಸೋಮವಾರ(ಜನವರಿ 23) ಖಾಸಗಿ ಸಮಾರಂಭದಲ್ಲಿ ಸಪ್ತಪದಿ ತುಳಿದಿದ್ದಾರೆ. ಈ ವಿಚಾರವನ್ನು ಅಥಿಯಾ ಶೆಟ್ಟಿ ಅವರ ತಂದೆ ಸುನೀಲ್​ ಶೆಟ್ಟಿ ಅವರು ಮಾಧ್ಯಮದವರಿಗೆ ಖಚಿತಪಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Border Dispute : ಒಂದು ದಿನದ ವಿಚಾರಣೆಗೆ ₹60 ಲಕ್ಷ !: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಲಕ್ಷ ಲಕ್ಷ ಹಣ ವೆಚ್ಚ
ಮಹಾಜನ್‌ ವರದಿ ಸೇರಿ ಎಲ್ಲ ಕಾನೂನಾತ್ಮಕ ರೀತಿಯಿಂದಲೂ ಕರ್ನಾಟಕದ ಪರವಾಗಿದ್ದರೂ ಮಹಾರಾಷ್ಟ್ರ ಸರ್ಕಾರ ರಾಜಕೀಯ ಕಾರಣಕ್ಕೆ ಸೃಷ್ಟಿಸಿರುವ ಗಡಿ ವಿವಾದ ವಿಚಾರಣೆಗೆ ಕರ್ನಾಟಕದ ಬೊಕ್ಕಸದ ಹಣ ನೀರಿನಂತೆ ಹರಿಯುತ್ತಿದೆ. ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕದ ಪರ ವಾದಿಸಲು ರಚಿಸಲಾಗಿರುವ ಹಿರಿಯ ವಕೀಲ ಮುಕುಲ್‌ ರೋಹಟಗಿ ನೇತೃತ್ವದ ವಕೀಲರ ತಂಡಕ್ಕೆ, ಒಂದು ದಿನ ವಿಚಾಣೆಗೆ ಹಾಜರಾಗಲು ಸುಮಾರು 60 ಲಕ್ಷ ರೂ. (59.90 ಲಕ್ಷ ರೂ.) ಪಾವತಿ ಮಾಡಬೇಕಿದೆ. ಈ ಕುರಿತು ರಾಜ್ಯ ಸರ್ಕಾರ ಆದೇಶಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. ತನ್ನ ಅಜ್ಜನಿಗಾದ ಸ್ಥಿತಿ ಯಾರಿಗೂ ಆಗಬಾರದು ಎಂದು ರಸ್ತೆ ಗುಂಡಿಗಳನ್ನೆಲ್ಲ ಏಕಾಂಗಿಯಾಗಿ ಮುಚ್ಚಿದ 13ವರ್ಷದ ಬಾಲಕ
ರಸ್ತೆ ಗುಂಡಿ ಎಂಬುದು ಜಾಗತಿಕ ಸಮಸ್ಯೆ. ಭಾರತದಲ್ಲಂತೂ ಪ್ರತಿ ರಾಜ್ಯ, ಪ್ರತಿ ಜಿಲ್ಲೆ, ಪ್ರತಿನಗರಗಳಲ್ಲೂ ಒಂದಲ್ಲ ಒಂದು ಕಡೆ ಗುಂಡಿ ಬಿದ್ದ ರಸ್ತೆ (Pothole)ಯನ್ನು ನೋಡಿಯೇ ನೋಡುತ್ತೇವೆ. ಹೀಗೆ ಪುದುಚೇರಿಯಲ್ಲೂ ಕೂಡ ರಸ್ತೆಯಲ್ಲಿ ಗುಂಡಿ ಬಿದ್ದು, ಆ ಗುಂಡಿಯ ಕಾರಣಕ್ಕೆ ಹಿರಿಯ ನಾಗರಿಕರೊಬ್ಬರು ಬೈಕ್​​ನಿಂದ ಬಿದ್ದು ಏಟು ಮಾಡಿಕೊಂಡಿದ್ದಾರೆ. ಇಷ್ಟೇ ಆದರೆ ಅದು ದೊಡ್ಡ ಸುದ್ದಿ ಎಂದು ಹಲವರಿಗೆ ಅನ್ನಿಸಲಿಕ್ಕಿಲ್ಲ, ಆದರೆ ಆ ವಯಸ್ಸಾದ ನಾಗರಿಕ ರಸ್ತೆ ಗುಂಡಿಯಲ್ಲಿ ಬೈಕ್​​ನಿಂದ ಬಿದ್ದ ನಂತರ ಅವರ ಮೊಮ್ಮಗ ಮಾಡಿದ ಕೆಲಸವೀಗ ಸಖತ್​ ಸುದ್ದಿಯಾಗಿದೆ ಮತ್ತು ಆ ಹುಡುಗ ಮಾದರಿ ಎನ್ನಿಸಿದ್ದಾನೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. Viral Video: ಲಂಡನ್​ ವಿಶ್ವವಿದ್ಯಾಲಯದಲ್ಲಿ ಕರ್ನಾಟಕದ ಬಾವುಟ ಪ್ರದರ್ಶಿಸಿದ ಬೀದರ್​ ಹುಡುಗ; ಕನ್ನಡಿಗರು ಫುಲ್​ ಖುಷ್​​
  2. JDS Pancharatna: ಸಮ್ಮಿಶ್ರ ಸರ್ಕಾರ ಉರುಳಿಸಿದ ಸಿದ್ದರಾಮಯ್ಯ ಎಲ್ಲೇ ನಿಂತರೂ ಸೋಲು ಖಚಿತ: ಎಚ್‌.ಡಿ. ಕುಮಾರಸ್ವಾಮಿ
  3. Demat account: 10 ನಿಮಿಷದಲ್ಲೇ ಡಿಮ್ಯಾಟ್‌ ಅಕೌಂಟ್‌ ಪಡೆಯುವುದು ಹೇಗೆ?
  4. Bageshwar Dham: ಯಾರು ಈ ಬಾಗೇಶ್ವರ್ ಬಾಬಾ? ಯಾಕೆ ಸುದ್ದಿಯಲ್ಲಿದ್ದಾರೆ ಈ ವ್ಯಕ್ತಿ?
  5. Viral Video: ದ್ರೌಪದಿ ಅಮ್ಮನ ಉತ್ಸವದಲ್ಲಿ ಭಕ್ತರ ಮೇಲೆ ಕ್ರೇನ್​ ಬಿದ್ದು ನಾಲ್ವರ ಸಾವು; ತಮಿಳುನಾಡು ದೇಗುಲದಲ್ಲಿ ದುರಂತ
  6. leopard attack: ತಿ.ನರಸೀಪುರ ತಾಲೂಕಿನಾದ್ಯಂತ 15 ದಿನದಲ್ಲಿ ಕಬ್ಬಿನ ಕಟಾವಿಗೆ ಡಿಸಿ ಸೂಚನೆ; ಚಿರತೆ ಸೆರೆ ಕಾರ್ಯಾಚರಣೆ ಚುರುಕು
  7. Actor Lakshman Death: ಕನ್ನಡ ಚಿತ್ರರಂಗದ ನಟ ಲಕ್ಷ್ಮಣ್ ಇನ್ನು ನೆನಪು ಮಾತ್ರ
  8. Pakistan woman: ಬೆಂಗಳೂರಿನಲ್ಲಿ ಅಕ್ರಮವಾಗಿ ವಾಸವಾಗಿದ್ದ ಪಾಕ್ ಯುವತಿ ಬಂಧನ
  9. Gold rate : ಬಂಗಾರದ ದಾಖಲೆಯ ಬೆಲೆ ಏರಿಕೆಗೆ ಕಾರಣವೇನು?
Exit mobile version