Site icon Vistara News

ವಿಸ್ತಾರ TOP 10 NEWS: ರಾಜ್ಯದಲ್ಲಿ ಗೆದ್ದು ದಿಲ್ಲಿಯಲ್ಲಿ ಮಂಕಾದ ಕಾಂಗ್ರೆಸ್‌ನಿಂದ, ಬಿಜೆಪಿಗೆ ಮೇಜರ್‌ ಸರ್ಜರಿವರೆಗಿನ ಪ್ರಮುಖ ಸುದ್ದಿಗಳಿವು

vistara top 10 news congress cm selection process to bjp rejig and more news

#image_title

1. Karnataka Election 2023 : ಸಿಎಂ ಪಟ್ಟಕ್ಕಾಗಿ ಇಬ್ಬರ ಗುದ್ದಾಟ, ಮೂರನೇಯವರಿಗೆ ಲಾಭ! ಯಾರು ಆ ಮೂರನೇಯವರು?
ಭರ್ಜರಿ ಬಹುಮತದೊಂದಿಗೆ (Karnataka Election 2023) ಅಧಿಕಾರ ಹಿಡಿದಿರುವ ಕಾಂಗ್ರೆಸ್‌ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಅಪಾರ ಬೆಂಬಲಿಗರನ್ನು ಹೊಂದಿರುವ ಇವರಿಬ್ಬರಲ್ಲಿ ಯಾರೊಬ್ಬರನ್ನು ಆಯ್ಕೆ ಮಾಡಿದರೂ ಮತ್ತೊಬ್ಬರ ಬೆಂಬಲಿಗರನ್ನು, ಅವರ ಪರವಾಗಿ ನಿಂತಿರುವ ಶಾಸಕರನ್ನು ಸಮಾಧಾನಿಸುವುದು ಕಷ್ಟ. ಹೀಗಾಗಿ ʻಇಬ್ಬರ ಜಗಳ ಮೂರನೇಯವರಿಗೆ ಲಾಭʼ ತಂದು ಕೊಟ್ಟಿತೇ ಎಂಬ ಚರ್ಚೆ ಈಗ ಕಾಂಗ್ರೆಸ್‌ ಪಕ್ಷದಲ್ಲಿ ನಡೆಯುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Karnataka Election 2023 : ಕಾಂಗ್ರೆಸ್‌ ಮುಖ್ಯಮಂತ್ರಿ ಆಯ್ಕೆ ಬಿಕ್ಕಟ್ಟಿಗೆ ಏನು ಕಾರಣ? ಇಲ್ಲಿದೆ ಇನ್‌ಸೈಡ್‌ ಸ್ಟೋರಿ!

2. Karnataka CM: ದಿಢೀರನೆ ಕಾಣಿಸಿಕೊಂಡ ಹೊಟ್ಟೆ ಉರಿ, ದೆಹಲಿಗೆ ತೆರಳದ ಡಿಕೆಶಿ; ಸಿಎಂ ಘೋಷಣೆ ಮತ್ತೆ ವಿಳಂಬ?
ಕರ್ನಾಟಕ ರಾಜ್ಯದ ಮುಖ್ಯಮಂತ್ರಿ (Karnataka CM) ಘೋಷಣೆಗೆ ದೆಹಲಿಯಲ್ಲಿ ವೇದಿಕೆ ಸಿದ್ಧವಾಗಿರುವ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ತರಾತುರಿಯಲ್ಲಿ ದೆಹಲಿಗೆ ಹಾರಿರುವ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ದೆಹಲಿ ಪ್ರಯಾಣವನ್ನು ರದ್ದುಗೊಳಿಸಿದ್ದಾರೆ. ಶಿವಕುಮಾರ್‌ ಅವರಿಗೆ ಏಕಾಏಕಿ ಹೊಟ್ಟೆನೋವು ಕಾಣಿಸಿಕೊಂಡಿದ್ದು, ವೈದ್ಯರನ್ನು ಕರೆಸಿಕೊಂಡಿದ್ದಾರೆ. ಹಾಗಾಗಿ ಅವರು ದೆಹಲಿ ಪ್ರವಾಸ ರದ್ದಗೊಳಿಸಿದ್ದಾರೆ. ಹಾಗಾಗಿ, ರಾಜ್ಯದ ನೂತನ ಮುಖ್ಯಮಂತ್ರಿಯ ಆಯ್ಕೆ ಯಾವಾಗ ಎಂಬ ಪ್ರಶ್ನೆ ಮೂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Karnataka Election Results : ಕಳಂಕವಿರುವ ಸಿಎಂ ರಾಜ್ಯಕ್ಕೆ ಬೇಡ: ಕನಕ ಗುರುಪೀಠದ ಸ್ವಾಮೀಜಿ ಹೇಳಿಕೆ
ಕಳಂಕವಿರುವ ಮುಖ್ಯಮಂತ್ರಿ (CM) ಈ ರಾಜ್ಯಕ್ಕೆ ಬೇಡ, ಬಹುಮತ ಹೊಂದಿದ ಕಾಂಗ್ರೆಸ್ ಪಕ್ಷಕ್ಕೆ, (Congress party) ಈ ಸಂದರ್ಭದಲ್ಲಿ ರಾಜ್ಯದ ಘನತೆ ಮೇಲೆತ್ತುವ ಮುಖ್ಯಮಂತ್ರಿ ಬೇಕು ಎಂದು ಕಲ್ಬುರ್ಗಿ ವಿಭಾಗದ ಕನಕಗುರು‌ ಪೀಠದ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿ ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Karnataka Election Results: ಸಿದ್ದರಾಮಯ್ಯ ಪರ ಅಹಿಂದ ಸಂಘಟನೆಗಳ ಲಾಬಿ: ಮತ್ತೊಮ್ಮೆ ಸಿದ್ದರಾಮಯ್ಯ ಎಂದ ನಾಯಕರು

4. Karnataka Election 2023 : ನನ್ನ ಬಳಿ 135 ಶಾಸಕರಿದ್ದಾರೆ ಎಂದು ಡಿಕೆಶಿ ಕುಟುಕಿದ್ದು ಯಾರಿಗೆ?
ಬಹುತೇಕ ಶಾಸಕರು ನನ್ನ ಪರ ಒಲವು ವ್ಯಕ್ತಪಡಿಸಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌, ನನ್ನ ಬಳಿ 135 ಶಾಸಕರಿದ್ದಾರೆ ಎಂದಿದ್ದಾರೆ. ಅಲ್ಲದೆ, ದೆಹಲಿಗೆ ತೆರಳುವುದಿಲ್ಲ ಎಂಬ ತಮ್ಮ ಪಟ್ಟು ಸಡಿಲಿಸಿ, ಹೈಕಮಾಂಡ್‌ ಭೇಟಿಗೆ ಹೊರಟಿದ್ದಾರೆ. ಇದರಿಂದಾಗಿ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಯು (Karnataka Election 2023) ತೀವ್ರ ಕುತೂಹಲಕಾರಿ ತಿರುವು ಪಡೆದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Karnataka Election Results : ಸೋಲಿನ ಹೊಡೆತದಿಂದ ಕಂಗೆಟ್ಟ ಬಿಜೆಪಿಗೆ ಮೇಜರ್‌ ಸರ್ಜರಿ, ಆರ್‌ಎಸ್‌ಎಸ್‌ ಸೂಚನೆ
ಆಡಳಿತಾರೂಢ ಬಿಜೆಪಿ ಹೀನಾಯವಾಗಿ ಸೋಲುಂಡ ನಂತರ ಇದೀಗ ಪಕ್ಷ ಸಂಘಟನೆಗೆ ಮೇಜರ್‌ ಸರ್ಜರಿ ಮಾಡಲು ಆರ್‌ಎಸ್‌ಎಸ್‌ ಸಲಹೆ ನೀಡಿದೆ. ಪಕ್ಷದ ನೇತೃತ್ವ ವಹಿಸಿರುವವರ ವಿರುದ್ಧ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನವಿದ್ದು, ಶೀಘ್ರದಲ್ಲೆ ಬದಲಾವಣೆ ಮಾಡುವಂತೆ ಆರ್‌ಎಸ್‌ಎಸ್‌ ಸೂಚಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Mallikarjun Kharge: ನಿಷೇಧಿತ ಪಿಎಫ್ಐ ಜತೆ ಬಜರಂಗದಳ ಹೋಲಿಕೆ; ಖರ್ಗೆಗೆ ನೋಟಿಸ್ ನೀಡಿದ ಪಂಜಾಬ್‌ನ ಸ್ಥಳೀಯ ಕೋರ್ಟ್!
ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‌ನ ಸ್ಥಳೀಯ ನ್ಯಾಯಾಲಯವು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ್ ಖರ್ಗೆ (Mallikarjun Kharge) ಅವರಿಗೆ ನೋಟಿಸ್ ಜಾರಿ ಮಾಡಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಬಜರಂಗದಳ ಮತ್ತು ಪಿಎಫ್ಐಗಳಂಥ ಸಮಾಜವಿರೋಧಿ ಸಂಘಟನೆಗಳನ್ನು ನಿಷೇಧಿಸುವ ಭರವಸೆಯನ್ನು ನೀಡಿತ್ತು. ಆದರೆ, ನಿಷೇಧಿತ ದೇಶದ್ರೋಹಿ ಸಂಘಟನೆ ಪಿಎಫ್ಐ ಜತೆಗೆ ಬಜರಂಗಳ ದಳ ಹೋಲಿಕೆ ಮಾಡಲಾಗಿದೆ ಎಂದು ಆರೋಪಿಸಿ ಪಂಜಾಬ್ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮ್ಮೆಯನ್ನು ಹಿಂದೂ ಸಂಘಟನೆಯೊಂದು ದಾಖಲಿಸಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Chitradurga News: ಕಾಂಗ್ರೆಸ್‌ ಸರ್ಕಾರ ಬಂದಿದೆ, ನಾವು ಕರೆಂಟ್ ಬಿಲ್ ಕಟ್ಟಲ್ಲ ಎಂದ ಜನ; ವಿಡಿಯೊ ವೈರಲ್
ಅಧಿಕಾರಕ್ಕೆ ಬಂದರೆ 200 ಯುನಿಟ್‌ ವಿದ್ಯುತ್‌ ಉಚಿತ ಎಂದು ಕಾಂಗ್ರೆಸ್‌ ಗ್ಯಾರಂಟಿ ನೀಡಿತ್ತು. ಈಗ ಪಕ್ಷಕ್ಕೆ ಬಹುಮತ ಬಂದಿದೆ. ಪಕ್ಷ ನೀಡಿರುವ ಎಲ್ಲ ಗ್ಯಾರಂಟಿಗಳನ್ನು ಈಡೇರಿಸುತ್ತದೋ ಇಲ್ಲವೋ ಎಂಬ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಈ ನಡುವೆ (Chitradurga News) ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಜನರು ವಿದ್ಯುತ್ ಬಿಲ್ ಪಾವತಿಗೆ ನಿರಾಕರಿಸಿ, ಬೆಸ್ಕಾಂ ಮೀಟರ್ ರೀಡರ್‌ಗೆ ಆವಾಜ್‌ ಹಾಕಿರುವ ಘಟನೆ ನಡೆದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ಹೀಗಾಗಿ ನಾವು ಬಿಲ್ ಕಟ್ಟಲ್ಲ ಎಂದು ಗ್ರಾಮಸ್ಥರು ಹೇಳಿದ್ದು, ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. MTB‌ Nagaraj: ಹೊಸಕೋಟೆಯಲ್ಲಿ ಮುಂದುವರಿದ ರಾಜಕೀಯ ವೈಷಮ್ಯ; ವೃತ್ತದಲ್ಲಿ ಅಳವಡಿಸಿದ್ದ ಎಂಟಿಬಿ ಬೋರ್ಡ್‌ ಧ್ವಂಸ
ಜಿದ್ದಾಜಿದ್ದಿನ ಕಣವಾಗಿದ್ದ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ (Karnataka Election) ಮುಗಿದ್ದರೂ, ರಾಜಕೀಯ ವೈಷಮ್ಯ ಮುಂದುವರಿದಿದೆ. ಇಲ್ಲಿನ ಪಾರ್ವತಿಪುರ ಸರ್ಕಲ್‌ನಲ್ಲಿ ಅಳವಡಿಸಿದ್ದ ಎಂಟಿಬಿ ವೃತ್ತ (MTB‌ Circle) ಎಂಬ ನಾಮಫಲಕವನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ. ರಾಜಕೀಯ ವೈಷಮ್ಯದಿಂದ ಕೆಲವರು ಹೀಗೆ ಮಾಡುತ್ತಿದ್ದಾರೆ ಎಂದು ಎಂಟಿಬಿ ನಾಗರಾಜ್‌ (MTB‌ Nagaraj) ಅವರ ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Weather Report : ರಾಜ್ಯದಲ್ಲಿ ಇನ್ನೆರಡು ದಿನ ತಲೆ ಬಿಸಿ; ಏರಲಿದೆ ತಾಪಮಾನ, ಅಲ್ಲಲ್ಲಿ ಇರಲಿದೆ ಮಳೆ ಅಬ್ಬರ
ರಾಜ್ಯಾದ್ಯಂತ ಮಳೆ ಅಬ್ಬರ (Karnataka News) ತಗ್ಗಿದ್ದು, ಕರಾವಳಿ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣಹವೆ ಇದೆ. ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ (Rain News) ಮುನ್ಸೂಚನೆಯನ್ನು ಹವಾಮಾನ ಇಲಾಖೆ (Weather Report) ನೀಡಿದೆ. ಜತೆಗೆ ರಾಜ್ಯಾದ್ಯಂತ ತಾಪಮಾನ ಏರಿಕೆಯೂ (Temperature) ಆಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. IPL 2023 : ಶುಭ್​ಮನ್​ ಶತಕ, 188 ರನ್​ ಬಾರಿಸಿದ ಗುಜರಾತ್​ ಜೈಂಟ್ಸ್​
ಶುಭ್​ಮನ್​ ಗಿಲ್​ ಬಾರಿಸಿದ ಅಮೋಘ ಶತಕದ ನೆರವಿನಿಂದ ಮಿಂಚಿದ ಗುಜರಾತ್ ಜೈಂಟ್ಸ್​ ತಂಡ ಐಪಿಎಲ್​ 16ನೇ ಆವೃತ್ತಿಯ 62ನೇ ಪಂದ್ಯದಲ್ಲಿ 188 ರನ್​ ಪೇರಿಸಿದೆ. ಇದು ಐಪಿಎಲ್​ನಲ್ಲಿ ಶುಭ್​ಮನ್​ ಗಿಲ್​ ಬಾರಿಸಿದ ಮೊದಲ ಶತಕ. ಈ ಮೂಲಕ ಪ್ರವಾಸಿ ಸನ್​ರೈಸರ್ಸ್​ ತಂಡದ ಗೆಲುವಿಗೆ 189 ರನ್​​ಗಳ ಸ್ಪರ್ಧಾತ್ಮಕ ಮೊತ್ತ ಎದುರಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು:

  1. Narendra Modi: ಮೋದಿ ಸರ್ಕಾರಕ್ಕೆ 9 ವರ್ಷ; ಪ್ರಧಾನಿ ರ‍್ಯಾಲಿ ಸೇರಿ ದೇಶಾದ್ಯಂತ 1 ತಿಂಗಳು ನೂರಾರು ಕಾರ್ಯಕ್ರಮ
  2. Adani Group : ಅದಾನಿ ಕಂಪನಿಗಳ ಬಗ್ಗೆ ವರದಿ ಸಲ್ಲಿಕೆಗೆ ಸುಪ್ರೀಂಕೋರ್ಟ್‌ನಿಂದ 6 ತಿಂಗಳ ಕಾಲಾವಕಾಶ ಕೋರಿದ ಸೆಬಿ
  3. Google: ಎಐ ಜನರೇಟೆಡ್ ಫೋಟೋ ಪತ್ತೆ ಹಚ್ಚಲು ಗೂಗಲ್‌ನಿಂದ ಹೊಸ ಫೀಚರ್!
  4. Fact Check: ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆದ್ದಿದ್ದಕ್ಕೆ ಪಾಕ್‌ ಪ್ರಧಾನಿ ಅಭಿನಂದನೆ ಸಲ್ಲಿಸಿದ್ದು ನಿಜವೇ? ಇಲ್ಲಿದೆ ಮಾಹಿತಿ
  5. WhatsApp New Feature: ಶೀಘ್ರವೇ ಬರಲಿದೆ ಹೊಸ ವಾಟ್ಸ್‌ಆ್ಯಪ್‌ ಫೀಚರ್; ಕಳುಹಿಸಿದ ಮೆಸೇಜ್‌ ಎಡಿಟ್‌ ಮಾಡಬಹುದು
Exit mobile version