Site icon Vistara News

ವಿಸ್ತಾರ TOP 10 NEWS: ಕಾಂಗ್ರೆಸ್‌ ಟಿಕೆಟ್‌ ಫೈನಲ್‌ಗೆ ಕ್ಷಣಗಣನೆಯಿಂದ, ರಾಜ್ಯದ ಅಲ್ಲಲ್ಲಿ ಭರ್ಜರಿ ಮಳೆವರೆಗಿನ ಪ್ರಮುಖ ಸುದ್ದಿಗಳಿವು

vistara top 10 news congress election committee meeting to rain in karnataka and more news

#image_title

1. ‌Karnataka Congress: ಶುಕ್ರವಾರ ಕಾಂಗ್ರೆಸ್‌ ಅಭ್ಯರ್ಥಿಗಳು ಫೈನಲ್‌: ಆಕಾಂಕ್ಷಿಗಳಲ್ಲಿ ನಡುಕ, ಹೈಕಮಾಂಡ್‌ ಮಟ್ಟದಲ್ಲಿ ಲಾಬಿ
ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌(Karnataka Congress) ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕೇಂದ್ರ ಚುನಾವಣಾ ಸಮಿತಿ ಸಭೆಯು ಶುಕ್ರವಾರ ನಡೆಯಲಿದ್ದು, ಸುಮಾರು 150 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಫೈನಲ್‌ ಮಾಡುವ ಸಾಧ್ಯತೆಯಿದೆ. ಇಷ್ಟು ದಿನದಿಂದ ಟಿಕೆಟ್‌ಗೆ ಪ್ರಯತ್ನಿಸುತ್ತಿರುವ ಅಭ್ಯರ್ಥಿಗಳು ದೆಹಲಿ ಮಟ್ಟದಲ್ಲಿ ಲಾಬಿ ಮಾಡುತ್ತಿದ್ದು, ಅನೇಕರಲ್ಲಿ ಆತಂಕ ಮನೆಮಾಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Border Dispute: ಅಮಿತ್‌ ಶಾ ಸಂಧಾನ ಸಭೆ ನಿರ್ಣಯದ ಉಲ್ಲಂಘನೆಯಾಗಿದೆ: ಮಹಾರಾಷ್ಟ್ರ ಸರ್ಕಾರದ ವಿರುದ್ಧ ಸಿಎಂ ಬೊಮ್ಮಾಯಿ ಆಕ್ರೋಶ
ಗಡಿ ಕನ್ನಡಿಗರಿಗೆ ಆರೋಗ್ಯ ವಿಮೆ ಯೋಜನೆಯ ಮಹಾರಾಷ್ಟ್ರ ಸಚಿವ ಸಂಪುಟದ ನಿರ್ಣಯವನ್ನು ತೀವ್ರವಾಗಿ ಖಂಡಿಸುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೊಂದಿಗೆ ಮಾತನಾಡಿದಾಗ ಸುಪ್ರೀಂಕೋರ್ಟ್ ಆದೇಶ ಬರುವವರೆಗೆ ಕಾಯಬೇಕು ಎಂದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Rahul Gandhi: ನನಗೆ ಸಂಸತ್ತಲ್ಲಿ ಮಾತನಾಡಲು ಬಿಟ್ಟಿಲ್ಲ; ರಾಹುಲ್‌ ಗಾಂಧಿ ಆರೋಪ, ಬಿಜೆಪಿ ತಿರುಗೇಟು
ವಿದೇಶಿ ನೆಲದಲ್ಲಿ ನಿಂತು ಭಾರತವನ್ನು ರಾಹುಲ್‌ ಗಾಂಧಿ (Rahul Gandhi) ಅವಮಾನಿಸಿದ್ದಾರೆ. ಹಾಗಾಗಿ, ಅವರು ಕ್ಷಮೆಯಾಚಿಸಬೇಕು” ಎಂದು ಸಂಸತ್‌ನಲ್ಲಿ ಬಿಜೆಪಿ ಸದಸ್ಯರು ಆಗ್ರಹಿಸುತ್ತಿರುವ ಬೆನ್ನಲ್ಲೇ ರಾಹುಲ್‌ ಗಾಂಧಿ ಅವರು, “ನನಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡಿಲ್ಲ” ಎಂದು ಆರೋಪಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. PM Narendra Modi: ಮೋದಿಗೆ ನೊಬೆಲ್‌ ಶಾಂತಿ ಪುರಸ್ಕಾರ? ಪ್ರಶಸ್ತಿ ಸಮಿತಿ ಉಪಾಧ್ಯಕ್ಷರಿಂದಲೇ ಬಂತು ಹೇಳಿಕೆ
ಈ ವರ್ಷದ ನೊಬೆಲ್‌ ಶಾಂತಿ ಪ್ರಶಸ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೊರೆಯಲಿದೆಯೇ ಎಂಬ ಕುತೂಹಲ ಮೂಡಿದೆ. ಇದಕ್ಕೆ ಕಾರಣ ನೊಬೆಲ್‌ ಶಾಂತಿ ಪುರಸ್ಕಾರ ಸಮಿತಿಯಲ್ಲಿರುವ ಆಸ್ಲೆ ತೊಜೆ (Asle Toje) ಅವರು ನೀಡಿರುವ ಹೇಳಿಕೆ. ʼʼನೊಬೆಲ್‌ ಶಾಂತಿ ಪುರಸ್ಕಾರಕ್ಕೆ ನರೇಂದ್ರ ಮೋದಿ ಅವರು ದೊಡ್ಡ ಸ್ಪರ್ಧಿ. ಇಂದಿನ ಜಗತ್ತಿನಲ್ಲಿ ಅವರು ಶಾಂತಿಸ್ಥಾಪನೆಯ ಅತ್ಯಂತ ವಿಶ್ವಾಸಾರ್ಹ ಮುಖ. ನಾನು ಅವರ ದೊಡ್ಡ ಅಭಿಮಾನಿʼʼ ಎಂದು ತೊಜೆ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. CT Ravi: ಸಿ.ಟಿ. ರವಿ ವಿರುದ್ಧ ಸಿಡಿದ ವೀರಶೈವ-ಲಿಂಗಾಯತ ಸಮುದಾಯ; ಕ್ಷಮೆ ಕೇಳದಿದ್ದರೆ ವಾರದಲ್ಲಿ ಮುತ್ತಿಗೆ ಎಚ್ಚರಿಕೆ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯಾಧ್ಯಕ್ಷ ಸಿ.ಟಿ. ರವಿ (CT Ravi) ವಿರುದ್ಧ ವೀರಶೈವ ಲಿಂಗಾಯತ ಸಮುದಾಯ (Veerashaiva Lingayat community) ಸಿಡಿದೆದ್ದಿದೆ. ವೀರಶೈವ ಲಿಂಗಾಯತರಿಗೆ ಪ್ರಾಮುಖ್ಯ ಕೊಡಬೇಕಿಲ್ಲ ಎಂಬ ಅವರ ಹೇಳಿಕೆ ವಿರುದ್ಧ ತೀವ್ರ ಖಂಡನೆ ವ್ಯಕ್ತಪಡಿಸಿದ್ದಲ್ಲದೆ, ಬಿಜೆಪಿ ಅಧಿಕಾರಕ್ಕೆ ಬಂದಿದ್ದೇ ವೀರಶೈವ ಲಿಂಗಾಯತರಿಂದ ಎಂಬುದು ನೆನಪಿರಲಿ ಎಂದು ಹೇಳಿದೆ. ಅಲ್ಲದೆ, ಸಿ.ಟಿ. ರವಿಗೆ ಮುತ್ತಿಗೆ ಹಾಕುವ ಎಚ್ಚರಿಕೆಯನ್ನೂ ನೀಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: C.T. Ravi: ಲಿಂಗಾಯತ ಸಮುದಾಯವನ್ನು ಒಡೆಯುವುದು ಕಾಂಗ್ರೆಸ್‌ ಚಾಳಿ: ಪತ್ರಿಕಾ ವರದಿ ಸುಳ್ಳು ಎಂದ ಸಿ.ಟಿ. ರವಿ

6. MP Kumaraswamy: ಎಂ.ಪಿ. ಕುಮಾರಸ್ವಾಮಿ ಪರ-ವಿರೋಧ ರಾದ್ಧಾಂತ; ರಥಯಾತ್ರೆಯನ್ನೇ ಮೊಟಕು ಮಾಡಿದ ಬಿ.ಎಸ್.‌ ಯಡಿಯೂರಪ್ಪ
ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ (MP Kumaraswamy) ವಿರುದ್ಧ ಸ್ಥಳೀಯ ಬಿಜೆಪಿ ಕಾರ್ಯಕರ್ತರ ಒಂದು ಗುಂಪು ತಿರುಗಿಬಿದ್ದಿದ್ದು, ಗುರುವಾರ ಬೆಳಗ್ಗೆಯಿಂದ ಪ್ರತಿಭಟನೆ ನಡೆಸುತ್ತಲೇ ಬಂದಿದೆ. ಈ ಸಂದರ್ಭದಲ್ಲಿ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆಗಾಗಿ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ (BS Yediyurappa) ಸಮ್ಮುಖದಲ್ಲಿ ಹೈಡ್ರಾಮಾವನ್ನೇ ನಡೆಸಿದ್ದು, ಬೇಸತ್ತ ಬಿಎಸ್‌ವೈ ಯಾತ್ರೆಯನ್ನು ಮೊಟಕುಗೊಳಿಸಿ ಹೊರನಡೆದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: MP Kumaraswamy: ನಾನು ದಲಿತನೆಂಬ ಕಾರಣಕ್ಕೆ ನನ್ನ ವಿರುದ್ಧ ಪಿತೂರಿ: ಎಂ.ಪಿ. ಕುಮಾರಸ್ವಾಮಿ ಕಣ್ಣೀರು

7. Karnataka Rain: ಕೋಲಾರ, ಬೀದರ್‌, ರಾಯಚೂರು, ಬಾಗಲಕೋಟೆಯಲ್ಲಿ ಭರ್ಜರಿ ಮಳೆ; ರಾಜ್ಯದಲ್ಲಿ ಇನ್ನೂ 2 ದಿನ ಇದೆ ವರ್ಷಧಾರೆ
ಸಮುದ್ರಗಳಲ್ಲಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿರುವ ಕಾರಣ ರಾಜ್ಯದ ಅಲ್ಲಲ್ಲಿ (Karnataka Rain) ಗುರವಾರವೂ ಮಳೆ ಮುಂದುವರಿದಿದೆ. ಕೋಲಾರ, ರಾಯಚೂರು, ಬಾಗಲಕೋಟೆ ಸೇರಿದಂತೆ ಹಲವು ಕಡೆ ವರುಣನ ಸಿಂಚನವಾಗಿದೆ. ಕೋಲಾರದಲ್ಲಿ ಬಿರುಗಾಳಿ ಸಹಿ ಆಲಿಕಲ್ಲು ಮಳೆಯಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Rishab Shetty: ವಿಶ್ವಸಂಸ್ಥೆಯಲ್ಲಿ ಕನ್ನಡ ಕಹಳೆ ಮೊಳಗಿಸಿದ ಕಾಂತಾರ ನಟ ರಿಷಬ್ ಶೆಟ್ಟಿ! ಇಲ್ಲಿದೆ ವಿಡಿಯೊ
ವಿಶ್ವಸಂಸ್ಥೆಯ ವಾರ್ಷಿಕ ಸಭೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದು, ವಿಶ್ವಸಂಸ್ಥೆಯ ಮಾನವ ಮಾನವ ಹಕ್ಕುಗಳ ಮಂಡಳಿ(UNHRC) ವಾರ್ಷಿಕ ಸಭೆಯಲ್ಲಿ ನಟ, ನಿರ್ಮಾಪಕ ರಿಷಬ್ ಶೆಟ್ಟಿ (Rishab Shetty) ಪಾಲ್ಗೊಂಡಿದ್ದಾರೆ. ಅಷ್ಟೇ ಅಲ್ಲದೇ ಸಭೆಯಲ್ಲಿ ಕನ್ನಡದಲ್ಲಿಯೇ ಮಾತನಾಡಿದ್ದಾರೆ ರಿಷಬ್‌. ಸಭೆಯಲ್ಲಿ ಕನ್ನಡದಲ್ಲಿಯೇ ರಿಷಬ್‌ ಅವರು ಪರಿಸರ ಸಂರಕ್ಷಣೆ ಕುರಿತು ವಿಚಾರ ಮಂಡಿಸಿರುವ ಸಣ್ಣ ವಿಡಿಯೊ ತುಣುಕು ವೈರಲ್‌ ಆಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. ಪಾಕಿಸ್ತಾನದಲ್ಲಿ ಭಯೋತ್ಪಾದನಾ ಕೃತ್ಯಗಳಿಗೆ ಒಂದೇ ವರ್ಷದಲ್ಲಿ 643 ಜನರು ಬಲಿ
2022ರಲ್ಲಿ ವಿಶ್ವಾದ್ಯಂತ ಭಯೋತ್ಪಾದನೆ ಸಂಬಂಧಿತ ಸಾವುಗಳಲ್ಲಿ ಪಾಕಿಸ್ತಾನವು (Pakistan Terrorism) ಎರಡನೇ ಅತಿದೊಡ್ಡ ಹೆಚ್ಚಳವನ್ನು ದಾಖಲಿಸಿದೆ. 2021ರಲ್ಲಿ 292 ಇದ್ದ ಸಾವಿನ ಸಂಖ್ಯೆ ಕಳೆದ ವರ್ಷದ ಶೇ.120 ಏರಿಕೆ ದಾಖಲಿಸಿದ್ದು, ಒಟ್ಟು 643 ಸಾವು ವರದಿಯಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Viral News : ರೋಗಿಯ ಶವದ ಜತೆಯೇ ಏಳು ವರ್ಷ ಬದುಕಿದ ವೈದ್ಯ! ಇದು ನಿಜವಾದ ಹಾರರ್‌ ಸ್ಟೋರಿ
ಯಾರನ್ನಾದರೂ ಕೊಲೆ ಮಾಡಿ, ಅವರ ಶವದ ಜತೆಯೇ ಕೆಲ ದಿನಗಳ ಕಾಲ ಬದುಕುವ ವಿಚಿತ್ರ ಅಪರಾಧಿಗಳನ್ನು ನಾವು ಇತ್ತೀಚಿನ ದಿನಗಳಲ್ಲಿ ಕಂಡಿದ್ದೇವೆ. ಆದರೆ ಬಹಳ ಹಿಂದೆ ಅಂದರೆ 1880ರ ದಶಕದಲ್ಲಿಯೇ ವೈದ್ಯನೊಬ್ಬ ತಾನು ಚಿಕಿತ್ಸೆ ನೀಡಿದ್ದ ಯುವತಿಯ ಶವದೊಂದಿಗೇ ಬರೋಬ್ಬರಿ ಏಳು ವರ್ಷಗಳ ಕಾಲ ಬದುಕಿದ್ದ. ಅಂತದ್ದೊಂದು ವಿಚಿತ್ರ ಕಥೆ (Viral News) ಇಲ್ಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. Cheetah Helicopter: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್​ ಪತನ; ಲೆಫ್ಟಿನೆಂಟ್​ ಕರ್ನಲ್​ ಸೇರಿ ನಾಲ್ವರಿಗಾಗಿ ಹುಡುಕಾಟ
  2. ನೇಕಾರ ಸಮುದಾಯಕ್ಕೆ 10 ಕ್ಷೇತ್ರದಲ್ಲಿ ಟಿಕೆಟ್‌ ಕೊಡಿ, ಇಲ್ಲದಿದ್ದರೆ ಪರಿಣಾಮ ಎದುರಿಸಿ; ಮೂರೂ ಪಕ್ಷಗಳಿಗೆ ಸ್ವಾಮೀಜಿಗಳ ಖಡಕ್‌ ಎಚ್ಚರಿಕೆ
  3. WPL 2023 : ಆರ್​ಸಿಬಿ ಮಹಿಳಾ ತಂಡದ ಕ್ಯಾಂಪ್​ಗೆ ಭೇಟಿ ನೀಡಿ ಸಲಹೆ ಕೊಟ್ಟ ವಿರಾಟ್​ ಕೊಹ್ಲಿ
  4. Nagaland’s Oldest Person : ನಾಗಾಲ್ಯಾಂಡ್‌ನ ಅತ್ಯಂತ ಹಿರಿಯ ನಿವಾಸಿ, 121 ವರ್ಷದ ಪುಪಿರೆಯ್‌ ಪ್ಫುಖಾ ನಿಧನ
Exit mobile version