1. ಲೋಕಸಭೆ ಚುನಾವಣೆಗೆ ಬ್ಲೂಪ್ರಿಂಟ್ ರೆಡಿ, 20 ಸ್ಥಾನ ಗೆಲ್ತೀವಿ ಎಂದು ವರಿಷ್ಠರಿಗೆ ಕಾಂಗ್ರೆಸ್ ಅಭಯ
2024ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 20 ಸ್ಥಾನಗಳನ್ನು ಗೆಲ್ಲುವ ಭರವಸೆಯನ್ನು ರಾಜ್ಯದ ಕಾಂಗ್ರೆಸ್ ನಾಯಕರು (State Congress leaders) ಹೈಕಮಾಂಡ್‌ಗೆ (Congress High command) ನೀಡಿದ್ದಾರೆ. ರಾಜ್ಯ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಆಂತರಿಕ ತಿಕ್ಕಾಟ ಹಾಗೂ ಲೋಕಸಭಾ ಚುನಾವಣೆಗೆ (Lok Sabha Election 2024) ರಣತಂತ್ರ ಹೆಣೆಯುವ ನಿಟ್ಟಿನಲ್ಲಿ ಬುಧವಾರ (ಆಗಸ್ಟ್ 2) ದಿಲ್ಲಿಯಲ್ಲಿ ನಡೆದ ಹೈಕಮಾಂಡ್ ಜತೆಗಿನ ಮಹತ್ವದ ಸಭೆಯಲ್ಲಿ (Congress Meeting) ಈ ಭರವಸೆ ನೀಡಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ : Karnataka Politics : ಡಿಕೆಶಿ ದಶಾಸ್ತ್ರಕ್ಕೆ ಸಿದ್ದರಾಮಯ್ಯ ಟೀಮ್ ಸಚಿವರು ಗಲಿಬಿಲಿ!
ಪೂರಕ ಸುದ್ದಿ: ಲೋಕಸಭೆಯಲ್ಲಿ ಕಾಂಗ್ರೆಸ್ ಮನೆಯವರಿಗೆ ಮಣೆ! ಕುಟುಂಬ ರಾಜಕಾರಣ?
2. ವರ್ಗಾವಣೆ ದಂಧೆ ಆರೋಪದ ನಡುವೆಯೇ, 211 ಇನ್‌ಸ್ಪೆಕ್ಟರ್‌ಗಳ ಟ್ರಾನ್ಸ್‌ಫರ್ ದಿಢೀರ್ ರದ್ದು
ರಾಜ್ಯದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಜೆಡಿಎಸ್ ಮತ್ತು ಬಿಜೆಪಿ ನಾಯಕರ ಆರೋಪದ ನಡುವೆಯೇ ಮಂಗಳವಾರ ರಾತ್ರಿ ರಾಜ್ಯ ಸರ್ಕಾರ 211 ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಹಾಗೂ 32 ಸಬ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಯನ್ನು ಮಾಡಿತ್ತು. ಆದರೆ, ಬುಧವಾರ ಬೆಳಗ್ಗೆ 11 ಅಧಿಕಾರಿಗಳ ವರ್ಗಾವಣೆಯನ್ನು (Police Transfer) ತಡೆ ಹಿಡಿದ ಸರ್ಕಾರ, ಮಧ್ಯಾಹ್ನದ ಹೊತ್ತಿಗೆ ವರ್ಗಾವಣೆಯ ಸಂಪೂರ್ಣ ಪಟ್ಟಿಯನ್ನೇ ಹಿಂಪಡೆಯಿತು. ಕಾರಣ ತಿಳಿಯಲು ಈ ವರದಿ ಓದಿಬಿ
3. ಸದ್ಯಕ್ಕಿಲ್ಲ ಬಿಜೆಪಿ ರಾಜ್ಯಾಧ್ಯಕ್ಷ? ಡೆಲ್ಲಿಯಿಂದ ತಾಂತ್ರಿಕ ಅಡಚಣೆ!
ರಾಜ್ಯ ಬಿಜೆಪಿಯಲ್ಲಿ ಯಾವುದೂ ಸರಿ ಆಗುತ್ತಿಲ್ಲ. ಇತ್ತ ವಿರೋಧ ಪಕ್ಷ ನಾಯಕನ ಆಯ್ಕೆಯಾಗಿಲ್ಲ. ಅತ್ತ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯೂ ಆಗಿಲ್ಲ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿ.ಟಿ. ರವಿ (CT Ravi) ಅವರನ್ನು ಆ ಸ್ಥಾನದಿಂದ ಕೆಳಕ್ಕಿಳಿಸದ ಮೇಲೆ ಅವರನ್ನು ರಾಜ್ಯಾಧ್ಯಕ್ಷರ ಸ್ಥಾನಕ್ಕೆ ನೇಮಿಸಲಾಗುತ್ತದೆ ಎಂದೇ ಹೇಳಲಾಗುತ್ತಿತ್ತು. ಆದರೆ, ಅಸಲಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಇನ್ನೂ ಹೈಕಮಾಂಡ್ ನಿರ್ಧಾರವನ್ನೇ ಮಾಡಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
4. ಮಲ್ಲಿಕಾರ್ಜುನ ಖರ್ಗೆ ಅವಹೇಳನ; ಕಪ್ಪು ಎಂದಿದ್ದು ತಪ್ಪು ಎಂದು ವಿಷಾದಿಸಿದ ಆರಗ ಜ್ಞಾನೇಂದ್ರ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮೈಬಣ್ಣದ ಬಗ್ಗೆ ವಿವಾದಾತ್ಮಕ ಮಾತು ಆಡಿದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇದೀಗ ಪ್ರತಿಭಟನೆಗಳು ಎದುರಾಗುತ್ತಲೇ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೂ ಕಾಂಗ್ರೆಸ್ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ: ಖರ್ಗೆ ಕಪ್ಪು ಎಂದ ಆರಗರನ್ನು ನಿಮ್ಹಾನ್ಸ್‌ಗೆ ಕಳಿಸುತ್ತೇವೆ: ಡಿಕೆಶಿ ಗುಡುಗು
5. ಅನಾಥ ಮಕ್ಕಳಿಗೂ ಮೀಸಲಾತಿ: ಹಿಂದುಳಿದ ವರ್ಗಗಳ ಆಯೋಗ ಶಿಫಾರಸು
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ (OBC Commission) ಸಿದ್ಧಪಡಿಸಿದ ವರದಿಯಲ್ಲಿ ಮಹತ್ವದ ಅಂಶವೊಂದು ಹೊರಬಿದ್ದಿದ್ದು, ಅನಾಥ ಮಕ್ಕಳಿಗೂ ಮೀಸಲಾತಿ (Reservation for orphaned children) ಕೊಡುವಂತೆ ಶಿಫಾರಸು ಮಾಡಲಾಗಿದೆ. ಈ ಸಂಬಂಧ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ (Jayaprakash Hegde) ಅವರು ರಾಜ್ಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಇತರ ಪ್ರಮುಖ ಸುದ್ದಿಗಳು
6.ಮುಸ್ಲಿಂ ಮಹಿಳೆಯರ ಜತೆ ರಕ್ಷಾ ಬಂಧನ ಆಚರಿಸಿ; ಬಿಜೆಪಿ ನಾಯಕರಿಗೆ ಮೋದಿ ಕೊಟ್ಟ ಟಾಸ್ಕ್ ಏನು?
7. ಜನರಲ್ ಸ್ಟೋರ್‌ಗಳಲ್ಲೂ ನಂದಿನಿ ಹಾಲಿಗೆ ಹೆಚ್ಚುವರಿ ಹಣ ಪಡೆಯುವಂತಿಲ್ಲ: KMF ಕಟ್ಟಾಜ್ಞೆ
8.ವಿಸ್ತಾರ Explainer: ಇನ್ನು ಜನನ ಮತ್ತು ಮರಣ ನೋಂದಣಿ ಕಡ್ಡಾಯ! ಏನಿದು ಹೊಸ ವಿಧೇಯಕ, ಯಾಕೆ?
9. ಅಯ್ಯೊ ದೇವ್ರೆ! ಮೊಬೈಲ್ ಚಾರ್ಜರ್‌ನಿಂದ ಶಾಕ್ ತಗುಲಿ 8 ತಿಂಗಳ ಮಗು ಸಾವು
10. ಕ್ಯಾಬ್ ನಲ್ಲಿ ಮೈಮರೆತು ಆಡಿದ ಒಂದು ಮಾತು; 22 ಲಕ್ಷ ಕೈಬಿಟ್ಟು ಹೋಯ್ತು!
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ