Site icon Vistara News

ವಿಸ್ತಾರ TOP 10 NEWS | ವೃದ್ಧ ಚಾಲಕನ ಎಳೆದೊಯ್ದು ಬೈಕ್‌ ಸವಾರನ ಕ್ರೌರ್ಯ, ಬಿಜೆಪಿ ಕಾರ್ಯಕರ್ತರಿಗೆ ಮೋದಿ ಕಿವಿಮಾತು ಇತ್ಯಾದಿ ಪ್ರಮುಖ ಸುದ್ದಿಗಳಿವು

vistara-top-10-news-cruelty of a two wheeler ride to JP nadda reappoint and more news

1. Brave hunt : ಅವನ ಕ್ರೌರ್ಯಕ್ಕಿಂತ ಇವರ ಶೌರ್ಯವೇ ಮೇಲಾಯ್ತು; ಸ್ಕೂಟರ್‌ನಲ್ಲಿ ಒಂದೂವರೆ ಕಿ.ಮೀ. ಎಳೆದೊಯ್ದರೂ ಪಟ್ಟು ಬಿಡದ 70ರ ಮುತ್ತಪ್ಪ
ಒಂದೂವರೆ ಕಿ.ಮೀ. ಎಳೆದೊಯ್ದರೂ ಪಟ್ಟು ಬಿಡದ 70ರ ಮುತ್ತಪ್ಪ ಅವರ ಶೌರ್ಯಕ್ಕೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಪಘಾತ ನಡೆಸಿ ತಪ್ಪಿಸಿಕೊಂಡು ಹೊರಟಿದ್ದವನನ್ನು ಸುಮೋ ಚಾಲಕ ಆ ಇಳಿವಯಸ್ಸಿನಲ್ಲೂ ಬೆನ್ನುಹತ್ತಿದ್ದೇ ರೋಚಕ. ಅವರು ಸ್ಕೂಟರ್‌ನ ಹಿಂಬದಿ ಹಿಡಿಕೆ ಹಿಡಿದು ಜೋತುಬಿದ್ದಿದ್ದರೂ ಒಂದೂವರೆ ಕಿ.ಮೀ. ವರೆಗೆ ಎಳೆದೊಯ್ದ ಪಾಪಿಯ ಕೃತ್ಯಕ್ಕೆ ಎಲ್ಲೆಡೆಯಿಂದ ಆಕ್ರೋಶ, ಛೀಮಾರಿಗಳು ಕೇಳಿಬಂದಿವೆ. ಇನ್ನು ಮುತ್ತಪ್ಪ ಅವರ ಸಾಹಸಕ್ಕೆ (Brave hunt) ಮೆಚ್ಚುಗೆ ವ್ಯಕ್ತವಾಗಿದ್ದು, ಸ್ಕೂಟರ್‌ ಸವಾರನ ಕ್ರೌರ್ಯಕ್ಕಿಂತ ಇವರ ಶೌರ್ಯವೇ ಮೇಲಾಯಿತು ಎಂದು ಪ್ರಶಂಸೆ ವ್ಯಕ್ತಪಡಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. BJP Executive Meeting | ಲೋಕಸಭೆ ಎಲೆಕ್ಷನ್‌ಗೆ 400 ದಿನಗಳಷ್ಟೇ ಉಳಿದಿರೋದು, ಮತದಾರರನ್ನು ತಲುಪಿ ಎಂದ ಪ್ರಧಾನಿ ಮೋದಿ
2024ರ ಲೋಕಸಭೆ ಚುನಾವಣೆಗೆ ಇನ್ನು ಕೇವಲ 400 ದಿನಗಳು ಉಳಿದಿದ್ದು, ಮತದಾರರನ್ನು ತಲುಪಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಹೇಳಿದ್ದಾರೆ. ಪ್ರತಿ ಚುನಾವಣೆಯಲ್ಲೂ ಮೋದಿಯನ್ನು ಅವಲಂಬಿಸಬೇಡಿ ಎಂದೂ ಅವರು ಹೇಳಿದ್ದಾರೆ. ಈ ವಿಷಯವನ್ನು ಮಹಾರಾಷ್ಟ್ರದ ಡಿಸಿಎಂ ದೇವೇಂದ್ರ ಫಡ್ನವಿಸ್ ಅವರು ದಿಲ್ಲಿಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು(BJP Executive Meeting). ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: J P Nadda | 2024 ಜೂನ್‌ವರೆಗೆ ಜೆ ಪಿ ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಮುಂದುವರಿಕೆ
BJP Executive Meeting | ಸುವರ್ಣಯುಗವನ್ನು ಬರಮಾಡಿಕೊಳ್ಳುತ್ತಿದೆ ಭಾರತ; ಪ್ರಧಾನಿ ಮೋದಿ ಹರುಷ
BJP Executive Meeting | ವಿದ್ಯಾವಂತ ಮುಸ್ಲಿಮರನ್ನು ತಲುಪಿ, ಮುಸ್ಲಿಮರ ವಿರುದ್ಧ ಆಕ್ಷೇಪಾರ್ಹ ಮಾತು ಬೇಡ: ಬಿಜೆಪಿ ಕಾರ್ಯಕರ್ತರಿಗೆ ಮೋದಿ ಸೂಚನೆ

3. Air Travel : ವಿಮಾನದ ತುರ್ತು ನಿರ್ಗಮನ ದ್ವಾರ ತೆರೆದ ಸಂಸದ ತೇಜಸ್ವಿ ಸೂರ್ಯ?: ಸುರಕ್ಷತಾ ಸೂಚನೆ ಉಲ್ಲಂಘನೆ ಆರೋಪ
ಇನ್ನೇನು ಹಾರಾಟ ನಡೆಸಬೇಕು ಎಂದಿದ್ದ ವಿಮಾನದ ತುರ್ತು ನಿರ್ಗಮನ ದ್ವಾರವನ್ನು ಸಂಸದ ತೇಜಸ್ವಿ ಸೂರ್ಯ ತೆರೆದಿದ್ದರಿಂದಾಗಿ ವಿಮಾನದ ಹಾರಾಟ ಎರಡು ಗಂಟೆಗೂ ಹೆಚ್ಚು ತಡೆವಾಗಿದ್ದರ ಜತೆಗೆ ಸುರಕ್ಷತಾ ಸೂಚನೆಗಳನ್ನೂ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Shehbaz Sharif | ಮೋದಿ ಜತೆಗೆ ಮುಕ್ತ ಮಾತುಕತೆಗೆ ಸಿದ್ಧ, ಯುದ್ಧ ಮಾತ್ರ ಬೇಡವೇ ಬೇಡ ಎಂದ ಪಾಕ್‌ ಪ್ರಧಾನಿ
ಭಾರತದ ಜೊತೆಗೆ ಮೂರು ಯುದ್ಧಗಳನ್ನು ನಮ್ಮ ದೇಶ ನಡೆಸಿದ್ದು, ಪಾಠ ಕಲಿತಿದ್ದೇವೆ. ಹೆಚ್ಚಿನ ಯಾತನೆ, ಬಡತನ ಮತ್ತು ನಿರುದ್ಯೋಗ ಮಾತ್ರವೇ ನಮಗೆ ಅದರಿಂದ ದೊರೆತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ನಿರ್ಣಾಯಕ, ಮುಕ್ತ ಮಾತುಕತೆ ನಡೆಸಲು ಇಚ್ಛಿಸುತ್ತೇನೆ ಎಂದು ಪಾಕಿಸ್ತಾನ ಪ್ರಧಾನ ಮಂತ್ರಿ ಶೆಹಬಾಜ್‌ ಶರೀಫ್‌ ಅವರು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Rahul Gandhi | ಆರೆಸ್ಸೆಸ್ ಕಚೇರಿಗೆ ಕಾಲಿಡುವುದಕ್ಕಿಂತ ಶಿರಚ್ಛೇದವೇ ಲೇಸು! ವರುಣ್ ಗಾಂಧಿ ಕಾಂಗ್ರೆಸ್ ಸೇರ್ಪಡೆ ಪರೋಕ್ಷವಾಗಿ ತಳ್ಳಿಹಾಕಿದ ರಾಹುಲ್
ಬಿಜೆಪಿಯ ಸಂಸದ ವರುಣ್ ಗಾಂಧಿ ಅವರು ಕಾಂಗ್ರೆಸ್ ಸೇರಲಿದ್ದಾರೆಂಬ ಊಹಾಪೋಹಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ(Rahul Gandhi), ”ವರುಣ್(ಗಾಂಧಿ) ಪ್ರತಿಪಾದಿಸುವ ಸಿದ್ಧಾಂತವು ನಮ್ಮ ಸಿದ್ಧಾಂತದೊಂದಿಗೆ ಹೊಂದಿಕೆಯಾಗುವುದಿಲ್ಲ,” ಎಂದು ಹೇಳಿದರು. ಆರ್‌ಎಸ್ಎಸ್ ಕಚೇರಿಗೆ ಕಾಲಿಡುವುದಕ್ಕಿಂತ ತಮ್ಮ ತಲೆಯನ್ನು ಕತ್ತರಿಸಿಕೊಳ್ಳುವುದೇ ಲೇಸು ಎಂದು ಕಟುವಾಗಿ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. ವಿಸ್ತಾರ ವಿಶ್ಲೇಷಣೆ | ʼಕಥನʼವೇ ಇಲ್ಲದೆ ಕತ್ತಲಲ್ಲಿ ಕತ್ತಿ ಬೀಸುತ್ತಿರುವ ಬಿಜೆಪಿ; ಫೆ. 17ಕ್ಕಾದರೂ ಸಿಗಲಿದೆಯೇ ಸೂತ್ರ?
ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗಳು ಹತ್ತಿರವಾದಂತೆಲ್ಲ ರಾಜಕೀಯ ಪಕ್ಷಗಳ ನಡೆಗಳು ಒಂದೊಂದಾಗಿ ಸ್ಪಷ್ಟವಾಗುತ್ತಿವೆ. ಆದರೆ ಆಡಳಿತಾರೂಢ ಬಿಜೆಪಿ ಮಾತ್ರ ಇನ್ನೂ ಸ್ಪಷ್ಟವಾದ ಮಾರ್ಗದ ಹುಡುಕಾಟದಲ್ಲೇ ಇದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Bengaluru Pothole : ಡಾಂಬರು ಹಾಕಿದ ಎರಡೇ ದಿನಕ್ಕೆ ಕುಸಿದ ರಸ್ತೆ; ಕಂದಕಕ್ಕೆ ಸಿಲುಕಿದ ಲಾರಿ ಚಕ್ರ
ರಸ್ತೆಗೆ ಡಾಂಬರು (Bengaluru Pothole) ಹಾಕಿದ ಎರಡೇ ದಿನದಲ್ಲಿ ರಸ್ತೆ ಕುಸಿದಿರುವ ಘಟನೆ ಮಹಾಲಕ್ಷ್ಮಿ ಲೇಔಟ್ ಮುಖ್ಯ ರಸ್ತೆ ಸಪ್ತಗಿರಿ ಕಲ್ಯಾಣ ಮಂಟಪದ ಬಳಿ ನಡೆದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Dawood Ibrahim | ದಾವೂದ್ ಇಬ್ರಾಹಿಂ ಪಾಕ್‌ನ ಕರಾಚಿಯಲ್ಲೇ ಇದ್ದಾನೆ, 2ನೇ ಮದ್ವೆಯಾಗಿದ್ದಾನೆ!
ಮುಂಬೈ ಸರಣಿ ಸ್ಫೋಟದ ಆರೋಪಿ ಹಾಗೂ ಭೂಗತ ದೊರೆ ದಾವೂದ್ ಇಬ್ರಾಹಿಂ (Dawood Ibrahim) ಈಗಲೂ ಪಾಕಿಸ್ತಾನದ ಕರಾಚಿಯಲ್ಲೇ ಇದ್ದು, ಪಾಕಿಸ್ತಾನದ ಮಹಿಳೆಯನ್ನು ಎರಡನೇ ವಿವಾಹವಾಗಿದ್ದಾನೆ! ರಾಷ್ಟ್ರೀಯ ತನಿಖಾ ದಳ(ಎನ್ಐಎ) ನಡೆಸಿದ ವಿಚಾರಣೆ ವೇಳೆ, ದಾವೂದ್ ಸಹೋದರಿ, ದಿವಂಗತ ಹಸೀನಾ ಪಾರ್ಕರ್ ಅವರ ಪುತ್ರ ಅಲಿಶಾ ಇಬ್ರಾಹಿಂ ಪಾರ್ಕರ್ ಈ ಮಾಹಿತಿ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Prajadhwani : ಆನಂದ್‌ ಸಿಂಗ್‌ ವಿರುದ್ಧ ʼವೇಶ್ಯೆʼ ಪದ ಬಳಸಿದ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್:‌ ಬಿ.ಸಿ. ಪಾಟೀಲ್‌ ತಿರುಗೇಟು
ಶಾಸಕ ಆನಂದ ಸಿಂಗ್‌ ವೇಶ್ಯೆಯ ರೀತಿಯಲ್ಲಿ ತಮ್ಮ ಶಾಸಕ ಸ್ಥಾನವನ್ನು ಮಾರಾಟ ಮಾಡಿಕೊಂಡು ಬಿಜೆಪಿ ಸರ್ಕಾರ ರಚನೆಗೆ ಸಹಕರಿಸಿದ್ದಾರೆ ಎಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಮಾತನಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Student Hospitalized : ಶಿವಮೊಗ್ಗದಲ್ಲಿ ಮತ್ತೆ ಮೂರು ಮೊರಾರ್ಜಿ ಶಾಲೆ ವಿದ್ಯಾರ್ಥಿಗಳು ಅಸ್ವಸ್ಥ; 60ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
ಶಿವಮೊಗ್ಗದ ಹನಸವಾಡಿ ಗೋಂಧಿಚಟ್ನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸೋಮವಾರ (ಜ.೧೬) ಮಧ್ಯಾಹ್ನ ಭೋಜನ ಸೇವಿಸಿ ೧೦೦ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದ ಪ್ರಕರಣದ ಬೆನ್ನಲ್ಲೇ ಮಂಗಳವಾರ (ಜ.೧೭) ಶಿವಮೊಗ್ಗ ತಾಲೂಕಿನ ಬೇರೆ ಮೂರು ಮೊರಾರ್ಜಿ ಶಾಲೆಗಳ ೬೦ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆ (Student Hospitalized) ಸೇರಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. Viral Video | ಬ್ರಿಟನ್​ ಪ್ರಧಾನಿ ಕಚೇರಿಯಲ್ಲಿ ಪೊಂಗಲ್​; ಬಾಳೆ ಎಲೆ ಊಟದ ಮಧ್ಯೆ ಅರ್ಧ ಬಾಳೆ ಹಣ್ಣು ಹಿಡಿದು ಚಿಯರ್ಸ್​ ಎಂದರು !
  2. MTB Nagaraj : ಹೊಸಕೋಟೆಯಲ್ಲಿ ಕವ್ವಾಲಿ ಆಯೋಜಿಸಿದ ಸಚಿವ ಎಂಟಿಬಿ; ಗಾಯಕರ ಮೇಲೆ ಹಣ ತೂರಿ ಖುಷಿಪಟ್ಟ ಮುಖಂಡರು
  3. ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರ ಹೆಸರನ್ನು ರಾಜಕೀಯಕ್ಕೆ ಬಳಸಿಕೊಂಡಿತಾ ಕಾಂಗ್ರೆಸ್‌? ಪಕ್ಷ ಸೇರಿದ ಕೃಷ್ಣ ಭಟ್‌ ಯಾರು?
  4. Shani Gochar 2023 | ಮಕರದಿಂದ ಕುಂಭಕ್ಕೆ ಶನಿ ಸಂಚಾರ; ದ್ವಾದಶ ರಾಶಿಗಳ ಮೇಲೆ ಪರಿಣಾಮವೇನು? ಪರಿಹಾರವೇನು?
  5. ನನ್ನ ದೇಶ ನನ್ನ ದನಿ | ಭಾರತೀಯ ಇತಿಹಾಸದ ಧ್ರುವನಕ್ಷತ್ರ ಅಹಲ್ಯಾಬಾಯಿ ಹೋಳ್ಕರ್
  6. ಲೈಫ್‌ ಸರ್ಕಲ್‌ ಅಂಕಣ | ಪುರುಷಾರ್ಥವೆಂಬ ಜೀವನದ ಗುರಿಗಳು
Exit mobile version