ಬೆಂಗಳೂರು: ಈಗಾಗಲೆ ರಾಜ್ಯಾದ್ಯಂತ ಆವರಿಸಿಕೊಂಡಿರುವ ಮಾಂಡೌಸ್ ಚಂಡಮಾರುತ ಇನ್ನೂ ಎರಡು ದಿನ ಮಳೆ ಸುರಿಸುವ ಮುನ್ಸೂಚನೆಯಿದೆ. ಹಿಮಾಚಲ ಪ್ರದೇಶ ಸಿಎಂ ಪ್ರಮಾಣವಚನ ಸ್ವೀಕರಿಸಲಿದ್ದಾರೆ, ಕಾಂಗ್ರೆಸ್ ನಾಯಕರು ಚುನಾವಣಾ ರಣತಂತ್ರ ರೂಪಿಸಲು ದೆಹಲಿಗೆ ದೌಡಾಯಿಸಿದ್ದಾರೆ, ಬೆಂಗಳೂರಿನಲ್ಲಿ ದಾರಿ ಹೋಕರನ್ನು ಸುಲಿಗೆ ಮಾಡಿದ ಆರೋಪದಲ್ಲಿ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. Weather Report | ರಾಜ್ಯದಲ್ಲಿ ಇನ್ನೂ 2 ದಿನ ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ; ಮಲೆನಾಡು, ಕರಾವಳಿಯಲ್ಲಿ ಇರಲಿದೆ ಅಬ್ಬರ
ರಾಜ್ಯದಲ್ಲಿ ಮಾಂಡೌಸ್ ಚಂಡಮಾರುತದ ಪರಿಣಾಮವಾಗಿ ಮಳೆ ಅಬ್ಬರ ಮುಂದುವರಿಯಲಿದೆ. ಮುಂದಿನ 24 ಗಂಟೆಯಲ್ಲಿ 4 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆಯನ್ನು (Weather Report) ಹವಾಮಾನ ಇಲಾಖೆ ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Cyclone Mandous | ಕೋಲಾರದಲ್ಲಿ ಮಳೆಗೆ ಮನೆಗಳ ಚಾವಣಿ, ಗೋಡೆ ಕುಸಿತ; ರಾಯಚೂರಿನಲ್ಲಿ ಲಕ್ಷಾಂತರ ಮೌಲ್ಯದ ಭತ್ತ ನೀರುಪಾಲು
2. Karnataka Elections | ಚುನಾವಣಾ ತಂತ್ರಗಾರಿಕೆ ಶುರು: ಡಿ. 12ರಂದು ದಿಲ್ಲಿಗೆ ಬರುವಂತೆ ಕೈ ನಾಯಕರಿಗೆ ಹೈ ಬುಲಾವ್
ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಯ ಬಳಿಕ ಕಾಂಗ್ರೆಸ್‌ನ ವರಿಷ್ಠರ ಗಮನ ಕರ್ನಾಟಕದ ಕಡೆಗೆ ಹರಿದಿದೆ. ಡಿಸೆಂಬರ್ ೧2ರಂದು (ಸೋಮವಾರ) ಕಾಂಗ್ರೆಸ್ ಹೈಕಮಾಂಡ್ ಚುನಾವಣಾ ತಂತ್ರಗಾರಿಕೆಗೆ ಸಂಬಂಧಿಸಿದ ಸಭೆಯೊಂದನ್ನು ಆಯೋಜಿಸಿದ್ದು, ಇದರಲ್ಲಿ ಭಾಗವಹಿಸುವಂತೆ ರಾಜ್ಯದ ಕಾಂಗ್ರೆಸ್ ನಾಯಕರಿಗೆ ದಿಢೀರ್ ಆಹ್ವಾನ ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. Karnataka Elections | ಹತ್ತಕ್ಕೂ ಅಧಿಕ ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿ? ಅಶೋಕ್ ಹೇಳಿದ್ದೇನು?
ಬಿಜೆಪಿಯಲ್ಲಿರುವ ಕೆಲವು ನಾಯಕರು ತಮ್ಮ ಪಕ್ಷಕ್ಕೆ ಟಿಕೆಟ್ ಅರ್ಜಿ ಹಾಕಿದ್ದಾರೆ (Karnataka Elections) ಎಂದು ಕಾಂಗ್ರೆಸ್ ನಾಯಕರು ಹೇಳಿಕೊಳ್ಳುತ್ತಿರುವ ನಡುವೆಯೇ ಕಂದಾಯ ಸಚಿವ ಆರ್. ಅಶೋಕ್ ಅವರೂ ಒಂದು ಬಾಂಬ್ ಸಿಡಿಸಿದ್ದಾರೆ. ʻʻಬಿಜೆಪಿಯಿಂದ ಯಾವುದೇ ಶಾಸಕರಾಗಲೀ ಸಚಿವರಾಗಲೀ ಕಾಂಗ್ರೆಸ್ ಕದ ತಟ್ಟುತ್ತಿಲ್ಲ. ಕಾಂಗ್ರೆಸ್‌ನದೇ ಹತ್ತಕ್ಕೂ ಅಧಿಕ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆʼʼ ಎಂದು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. Criminal politics | RTI ಕಾರ್ಯಕರ್ತನ ಕೊಲೆ ಕೇಸಲ್ಲಿ ಜೈಲು ಪಾಲಾಗಿದ್ದ ವ್ಯಕ್ತಿ ಜೆಡಿಎಸ್‌ಗೆ ಸೇರ್ಪಡೆ! ಜಮೀರ್ ವಿರುದ್ಧ ಕಣಕ್ಕೆ?
ಕ್ರಿಮಿನಲ್ ರಾಜಕಾರಣವೆಂಬ (Criminal politics) ವಿವಾದಿತ ಅಖಾಡಕ್ಕೆ ಜೆಡಿಎಸ್ ಅಧಿಕೃತ ಎಂಟ್ರಿ ಪಡೆದುಕೊಂಡಿದೆ! ಕೊಲೆ ಕೇಸಲ್ಲಿ ಜೈಲು ಪಾಲಾಗಿದ್ದ ವ್ಯಕ್ತಿ ಮತ್ತು ಅವರ ಪತ್ನಿ ಅಧಿಕೃತವಾಗಿ ಜಾತ್ಯತೀತ ಜನತಾದಳಕ್ಕೆ ಸೇರ್ಪಡೆಯಾಗಿದ್ದಾರೆ. ಹೀಗಾಗಿ ಇದುವರೆಗೆ ಬಿಜೆಪಿ-ಕಾಂಗ್ರೆಸ್ ನಡುವೆ ನಡೆಯುತ್ತಿದ್ದ ʻಗ್ಯಾಂಗ್ ವಾರ್ʼ ಇನ್ನು ತ್ರಿಕೋನ ಸ್ಪರ್ಧೆಯ ಕಣವಾಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. Hoysala Police Corruption | ಮಧ್ಯರಾತ್ರಿ ಪಾರ್ಟಿ ಮುಗಿಸಿ ಬರುತ್ತಿದ್ದ ದಂಪತಿಯನ್ನು ತಡೆದು ಹಣ ಸುಲಿಗೆ, ಇಬ್ಬರು ಹೊಯ್ಸಳ ಪೊಲೀಸರು ಮನೆಗೆ!
ಪಕ್ಕದ ಮನೆಯ ಸ್ನೇಹಿತರ ಬರ್ತ್‌ಡೇ ಪಾರ್ಟಿಗೆ ಹೋಗಿದ್ದ ದಂಪತಿ, ಪಾರ್ಟಿ ಮುಗಿಸಿ ಮನೆಗೆ ಹೋಗುವಾಗ ಮಧ್ಯರಾತ್ರಿ 12.30 ಆಗಿತ್ತು. ಜಿಟಿ ಜಿಟಿ ಮಳೆಯೊಂದಿಗೆ ವೇಗವಾಗಿ ಹೆಜ್ಜೆ ಹಾಕಿ ಮನೆಗೆ ಸೇರಲು ಮುಂದಾದವರನ್ನು ಅಡ್ಡಗಟ್ಟಿದ ಹೊಯ್ಸಳದ ಬೀಟ್ ಪೊಲೀಸರು (Hoysala Police) ಹಣಕ್ಕಾಗಿ ಪೀಡಿಸಿದ ಘಟನೆ ಬೆಳಕಿಗೆ ಬಂದಿದೆ. ಹೊಯ್ಸಳ ಸಿಬ್ಬಂದಿ ಹೆಡ್ ಕಾನ್‌ಸ್ಟೇಬಲ್ ರಾಜೇಶ್, ಪೊಲೀಸ್ ಕಾನ್‌ಸ್ಟೇಬಲ್ ನಾಗೇಶ್ ಎಂಬುವರನ್ನು ಅಮಾನತು ಮಾಡಿರುವುದಾಗಿ ಡಿಸಿಪಿ ಅನೂಪ್ ಆ ಬಳಿಕ ಮಾಹಿತಿ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. ರಾಜಸ್ಥಾನ ಮುಖ್ಯಮಂತ್ರಿಯನ್ನು ಮತ್ತೆ ಹೊಗಳಿದ ಪ್ರಧಾನಿ ಮೋದಿ; ಪೈಲಟ್ ಹೇಳಿದ್ದೇ ಸತ್ಯವಾ? ಮತ್ತೊಬ್ಬ ‘ಗುಲಾಂ’ ಆಗ್ತಾರಾ ಗೆಹ್ಲೋಟ್ ?
ರಾಜಸ್ಥಾನ ಕಾಂಗ್ರೆಸ್ನಲ್ಲಿ ಈಗಾಗಲೇ ಬೆಂಕಿ ಉರಿಯುತ್ತಲೇ ಇದೆ. ಅದು ತುಸುಮಟ್ಟಿಗೆ ಸಣ್ಣಗಾಗಿರುವ ಹೊತ್ತಲ್ಲೇ ಪ್ರಧಾನಿ ನರೇಂದ್ರ ಮೋದಿ ಈಗ ಮತ್ತೊಮ್ಮೆ ಅಶೋಕ್ ಗೆಹ್ಲೋಟ್ರನ್ನು ಹೊಗಳಿ, ಇನ್ನೊಂದು ಕಿಡಿ ಹೊತ್ತಿಸಿದ್ದಾರೆ. ನವೆಂಬರ್ 2ರಂದು ಪ್ರಧಾನಿ ನರೇಂದ್ರ ಮೋದಿ ರಾಜಸ್ಥಾನದ ಮಂಗರ್ ಧಾಮ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿಯೂ ಗೆಹ್ಲೋಟ್ ಅವರನ್ನು ಹೊಗಳಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. Gujarat Election | ಗುಜರಾತ್ನಲ್ಲಿ ಆಪ್ಗೆ ಸಂಕಷ್ಟ? ಗೆದ್ದ ಶಾಸಕರೆಲ್ಲ ಬಿಜೆಪಿ ಸಂಪರ್ಕದಲ್ಲಿ?
ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 156 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ದಾಖಲೆಯ ಜಯ ಸಾಧಿಸಿದ್ದರೆ, ಆಮ್ ಆದ್ಮಿ ಪಕ್ಷ ಖಾತೆ ತೆರೆಯುವ ಜತೆ 5 ಸ್ಥಾನಗಳನ್ನು ಗೆದ್ದುಕೊಂಡಿದೆ. ಇಲ್ಲೀಗ ಆಪ್ ಪಕ್ಷದ ಶಾಸಕರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಗುಜರಾತ್ನ ಜುನಾಗಢ್ ಜಿಲ್ಲೆಯ ವಿಸಾವಧರ್ ವಿಧಾನಸಭಾ ಕ್ಷೇತ್ರದಿಂದ ಗೆದ್ದಿರುವ ಆಮ್ ಆದ್ಮಿ ಪಕ್ಷದ ಶಾಸಕ ಭೂಪತ್ ಭಯಾನಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. ದೆಹಲಿ ಲಿಕ್ಕರ್ ಹಗರಣ: ತೆಲಂಗಾಣ ಸಿಎಂ ಕೆಸಿಆರ್ ಪುತ್ರಿ ಕವಿತಾರನ್ನು ವಿಚಾರಣೆಗೆ ಒಳಪಡಿಸಿದ ಸಿಬಿಐ
ದೆಹಲಿ ಅಬಕಾರಿ ನೀತಿ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪದಡಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಪುತ್ರಿ, ವಿಧಾನ ಪರಿಷತ್ ಸದಸ್ಯೆ ಕೆ.ಕವಿತಾ ಕಲ್ವಕುಂಟ್ಲ ಅವರನ್ನು ಇಂದು ಸಿಬಿಐ ವಿಚಾರಣೆಗೆ ಒಳಪಡಿಸಿದೆ. ತೆಲಂಗಾಣದ ಬಂಜಾರಾ ಹಿಲ್ಸ್ನಲ್ಲಿರುವ ಕವಿತಾ ಮನೆಯಲ್ಲೇ ಅವರನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. BSNL to Launch 5G | ಆರೇಳು ತಿಂಗಳಲ್ಲಿ ಬಿಎಸ್‌ಎನ್‌ಎಲ್ 5ಜಿ ಆರಂಭ, ದೇಶದ ಎಲ್ಲೆಲ್ಲಿ ಸೇವೆ ಲಭ್ಯ?
ದೇಶದಲ್ಲಿ ಈಗ ೫ಜಿ ಯುಗ ಆರಂಭವಾಗಿದೆ. ನಿಧಾನವಾಗಿ ಒಂದೊಂದೇ ನಗರಗಳು ೫ಜಿ ಸೇವೆಗೆ ತೆರೆದುಕೊಳ್ಳುತ್ತಿವೆ. ಜಿಯೋ, ಏರ್‌ಟೆಲ್ ಸೇರಿ ಹಲವು ಟೆಲಿಕಾಮ್ ಕಂಪನಿಗಳು ಜನರಿಗೆ ೫ಜಿ ನೆಟ್‌ವರ್ಕ್ ಒದಗಿಸುತ್ತಿವೆ. ಇದರ ಬೆನ್ನಲ್ಲೇ ಭಾರತ್ ಸಂಚಾರ ನಿಗಮ ಲಿಮಿಟೆಡ್ (BSNL to Launch 5G) ಕೂಡ ಶೀಘ್ರದಲ್ಲೇ ೫ಜಿ ಸೇವೆ ಒದಗಿಸಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Sukhvinder Singh Sukhu | ಹಿಮಾಚಲ ಸಿಎಂ ಆಗಿ ಸುಖು ಅಧಿಕಾರ ಸ್ವೀಕಾರ, ರಾಹುಲ್, ಪ್ರಿಯಾಂಕಾ ಹಾಜರ್
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಸಮ್ಮುಖದಲ್ಲಿ ಸುಖ್ವಿಂದರ್ ಸಿಂಗ್ ಸುಖು (Sukhvinder Singh Sukhu) ಅವರು ಹಿಮಾಚಲ ಪ್ರದೇಶದ 15ನೇ ಮುಖ್ಯಮಂತ್ರಿಯಾಗಿ ಭಾನುವಾರ ಪ್ರಮಾಣ ವಚನವನ್ನು ಸ್ವೀಕರಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳು
- Hire And Fire Policy | ಕೆಲಸದಿಂದ ವಜಾಗೊಳಿಸುವ ನೀತಿ ಮಾನವ ಹಕ್ಕುಗಳ ವಿರೋಧಿ: ಎನ್‌ಎಚ್‌ಆರ್‌ಸಿ ಅಧ್ಯಕ್ಷ
- Modi Buys Metro Ticket | ಸಾಮಾನ್ಯರಂತೆ ನಿಂತು ಮೆಟ್ರೋ ಟಿಕೆಟ್ ಖರೀದಿಸಿದ ಪ್ರಧಾನಿ ಮೋದಿ
- Suicide case | ತನ್ನ ಕಾರನ್ನು ತಾನೇ ಸುಟ್ಟು ಸತ್ತು ಹೋದಂತೆ ನಾಟಕವಾಡಿದ್ದ ವ್ಯಕ್ತಿ ಈಗ ಜೈಲಿನಲ್ಲಿ ಆತ್ಮಹತ್ಯೆ!
- Abhishek Ambareesh | ಇಲ್ಲಿವೆ ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಬಿದ್ದಪ್ಪ ನಿಶ್ಚಿತಾರ್ಥ ಫೋಟೊಗಳು
- ಶಬ್ದಸ್ವಪ್ನ ಅಂಕಣ | ಗೋಕರ್ಣವೆಂಬ ಸ್ಮೃತಿ ಸಮುದ್ರ
- Sunday read | ಹೊಸ ಪುಸ್ತಕ | ತಟ್ಟನೆ ಮನಮಂ ಪಸಾಯದಾನ ಕೊಟ್ಟಳು
- Forced conversion | ಕ್ರೈಸ್ತ ಧರ್ಮ ಬಿಟ್ಟು ಹೋದರೆ ನಿಮ್ಮನ್ನು ಸಾಯಿಸಿ, ಮಕ್ಕಳನ್ನು ರೇಪ್ ಮಾಡ್ತೇವೆ ಎಂದು ಬೆದರಿಕೆ ಹಾಕಿದ್ರು!