ಬೆಂಗಳೂರು: ಅಫ್ಘಾನಿಸ್ತಾನದಲ್ಲಿ ಭೀಕರ ಭೂಕಂಪ ಸಂಭವಿಸಿ ನೂರಾರು ಜನರು ಮೃತಪಟ್ಟಿದ್ದರೆ ಇತ್ತ ಮಹಾರಾಷ್ಟ್ರದಲ್ಲಿ ಉಂಟಾಗುತ್ತಿರುವ ರಾಜಕೀಯ ಕಂಪನದಿಂದ ಮಹಾ ವಿಕಾಸ್ ಅಘಾಡಿ ಸರ್ಕಾರ ಇನ್ನೇನು ಪತನದ ಅಂಚಿಗೆ ಬಂದಿದೆ. ಕರ್ನಾಟಕ ಸರ್ಕಾರಕ್ಕೆ ಒದಗಬಹುದಾಗಿದ್ದ ಪಂಚಮಸಾಲಿ ಮೀಸಲಾತಿ ಕಂಪನದಿಂದ ಸಿಎಂ ಬೊಮ್ಮಾಯಿ ತಪ್ಪಿಸಿಕೊಂಡಿದ್ದು, ಮಹತ್ವದ ಬೆಳವಣಿಗೆಯಲ್ಲಿ ಗುರುವಾರ ನವದೆಹಲಿಗೆ ಪ್ರಯಾಣಿಸಲಿದ್ದಾರೆ. ಇಂತಹ ಇನ್ನೂ ಅನೇಕ ಪ್ರಮುಖ ಸುದ್ದಿಗಳ ಗುಚ್ಚ ವಿಸ್ತಾರ TOP 10 NEWS.
೧. ಕುರ್ಚಿಗಾಗಿ ಹೋರಾಡಲ್ಲ, ಯಾವುದೇ ಕ್ಷಣ ರಾಜೀನಾಮೆಗೆ ಸಿದ್ಧ: ಉದ್ಧವ್ ಠಾಕ್ರೆ ಘೋಷಣೆ
ಮಹಾರಾಷ್ಟ್ರ ರಾಜಕೀಯದ ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಾನು ರಾಜೀನಾಮೆ ನೀಡಲು ಸಿದ್ಧ ಎಂದು ಘೋಷಿಸಿದ್ದಾರೆ. ಬುಧವಾರ ಸಂಜೆ ಫೇಸ್ ಬುಕ್ ಲೈವ್‌ನಲ್ಲಿ ಮಾತನಾಡಿದ ಅವರು, ನನ್ನ ಬದಲು ಯಾವುದೇ ಶಿವಸೈನಿಕ ಮುಖ್ಯಮಂತ್ರಿ ಆಗಬಹುದು ಎಂಬ ಆಫರ್ ನೀಡಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
೨. ದೆಹಲಿಗೆ ಹೊರಟ ಸಿಎಂ ಬಸವರಾಜ ಬೊಮ್ಮಾಯಿ: ರಾಜ್ಯ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ
ಒಂದು ವಾರದ ಅವಧಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಎರಡನೇ ಬಾರಿಗೆ ನವದೆಹಲಿಗೆ ಹೊರಟು ನಿಂತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಪ್ರವಾಸ ಮುಕ್ತಾಯಗೊಳಿಸಿ ತೆರಳಿದ ಬೆನ್ನಲ್ಲೆ ಬೊಮ್ಮಾಯಿ ಗುರುವಾರ ಮದ್ಯಾಹ್ನ ನವದೆಹಲಿಗೆ ಹೊರಟಿರುವುದು ರಾಜ್ಯ ರಾಜಕೀಯದಲ್ಲಿ ಸದ್ಯದಲ್ಲೆ ಮಹತ್ವದ ಬದಲಾವಣೆ ಆಗುತ್ತದೆ ಎನ್ನುವುದನ್ನು ಸೂಚಿಸಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
೩. ʼಇ ಡಿ ವಿಷಯ ಬಿಡಿ, ಅಗ್ನಿಪಥ್ ಹೋರಾಟಕ್ಕೆ ಸಜ್ಜಾಗಿʼ; ಕಾಂಗ್ರೆಸ್ಸಿಗರಿಗೆ ರಾಹುಲ್ ಗಾಂಧಿ ಕರೆ
ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಕೇಂದ್ರ ಸರ್ಕಾರ ಇ.ಡಿ. ಮೂಲಕ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಮತ್ತು ಸೇನಾ ನೇಮಕಾತಿ ಯೋಜನೆ ಅಗ್ನಿಪಥ್‌ನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಇಂದು ಎಐಸಿಸಿ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್ ಪ್ರಮುಖರೆಲ್ಲ ಸೇರಿ ಪ್ರತಿಭಟನಾ ಸಭೆ ನಡೆಸಿದ್ದಾರೆ. ಇದರಲ್ಲಿ ರಾಹುಲ್ ಗಾಂಧಿಯೂ ಪಾಲ್ಗೊಂಡಿದ್ದರು. ರಾಜ್ಯ ಕಾಂಗ್ರೆಸ್ ನಾಯಕರಾದ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ ಇತರರು ಇದ್ದರು. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
೪. ಪಂಚಮಸಾಲಿ ಮೀಸಲಾತಿ: ಎರಡು ತಿಂಗಳು ಬೀಸೊ ದೊಣ್ಣೆಯಿಂದ ಬೊಮ್ಮಾಯಿ ಪಾರು
ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ಕುರಿತಂತೆ ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬುಧವಾರ ಮಹತ್ವದ ಸಭೆ ನಡೆಯಿತು. ಪಂಚಮಸಾಲಿ ಮೀಸಲಾತಿ ನೀಡುವುದಾಗಿ ಈ ಹಿಂದೆ ತಿಳಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರ ಮನೆ ಎದುರು ಹೋರಾಟ ನಡೆಸುವ ತೀರ್ಮಾನವನ್ನು ಎರಡು ತಿಂಗಳವರೆಗೆ ಮುಂದೂಡಿರುವುದಾಗಿ ಸ್ವಾಮೀಜಿ ತಿಳಿಸಿರುವುದು ಬೊಮ್ಮಾಯಿ ಅವರಿಗೆ ಸ್ವಲ್ಪ ನಿರಾಳತೆ ನೀಡಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
೫. ಕಾಮೆಡ್-ಕೆ ರದ್ದು; ಮುಂದಿನ ವರ್ಷದಿಂದ ಒಂದೇ ಸಿಇಟಿ?
ಇಂಜಿನಿಯರಿಂಗ್ ಪ್ರವೇಶಕ್ಕೆ ಈಗ ಪ್ರತ್ಯೇಕವಾಗಿ ನಡೆಸುತ್ತಿರುವ ಕಾಮೆಡ್-ಕೆ ಪ್ರವೇಶ ಪರೀಕ್ಷೆ ರದ್ದಾಗಲಿದೆ. ಕಾಮೆಡ್-ಕೆ ರದ್ದುಪಡಿಸಿ, ಸರ್ಕಾರದ ಸಿಇಟಿ ವ್ಯವಸ್ಥೆಯಡಿಗೆ ವಾಪಸ್ ಬರಲು ಅನುದಾನರಹಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಒಕ್ಕೂಟ (ಕ್ಯುಪೇಕಾ) ಆಸಕ್ತಿ ತೋರಿದೆ. ಈ ಸಂಬಂಧ ಸಾಧಕ ಬಾಧಕ ಪರಿಶೀಲಿಸಿ ಒಪ್ಪಂದ ಆದ ಮೇಲೆ ಮುಂದಿನ ವರ್ಷದಿಂದ ಒಂದೇ ಸಿಇಟಿ ಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
೬. ಅಫ್ಘಾನಿಸ್ತಾನದಲ್ಲಿ ಭೀಕರ ಭೂಕಂಪ; 900ಕ್ಕೂ ಹೆಚ್ಚು ಮಂದಿ ದಾರುಣ ಸಾವು, 600 ಜನರಿಗೆ ಗಾಯ
ಅಫ್ಘಾನಿಸ್ತಾನದ ಖೋಸ್ಟ್ ಮತ್ತು ಪಕ್ಟಿಕಾ ಪ್ರಾಂತ್ಯಗಳಲ್ಲಿ ಇಂದು ಭೀಕರ ಭೂಕಂಪನ ಉಂಟಾಗಿದ್ದು ಸುಮಾರು 920 ಮಂದಿ ಮೃತಪಟ್ಟಿದ್ದಾರೆ. 600ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಎರಡು ಪ್ರಾಂತ್ಯಗಳು ಗುಡ್ಡಗಾಡು ಪ್ರದೇಶಗಳಾಗಿದ್ದು, ಭೂಕಂಪ ತೀವ್ರತೆಗೆ ಮನೆಗಳೆಲ್ಲ ಕುಸಿದು ಬಿದ್ದಿವೆ. ಗುಡ್ಡಗಳು ಕುಸಿದಿವೆ. ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗಬಹುದು ಎಂದು ಹೇಳಲಾಗಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
7. Actor Diganth | ಶಸ್ತ್ರ ಚಿಕಿತ್ಸೆ ನಂತರ ಆಸ್ಪತ್ರೆಯಿಂದ ಬಿಡುಗಡೆಯಾದ ದಿಗಂತ್
ಗೋವಾ ಬೀಚ್‌ನಲ್ಲಿ ಸೊಮರ್‌ಸಾಲ್ಟ್(Somersault) ಕಸರತ್ತು ನಡೆಸುವಾಗ ಗಾಯಗೊಂಡಿದ್ದ ಚಿತ್ರನಟ ದಿಗಂತ್ (Actor Diganth) ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದೀಗ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ದಿಗಂತ್ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ದಿಗಂತ್ ಕುತ್ತಿಗೆ ಭಾಗಕ್ಕೆ ಮಾತ್ರ ಏಟಾಗಿದ್ದು, ಬೆನ್ನುಮೂಳೆಗೆ ಯಾವುದೇ ಅಪಾಯ ಆಗಿಲ್ಲ. ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ. ದಿಗಂತ್ ಹಂತಹಂತವಾಗಿ ಚೇತರಿಗೆ ಕಾಣಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
೮. Weather Report | ಮುಂದಿನ ಎರಡು ದಿನಗಳು ಭಾರಿ ಮಳೆ: ಮೀನುಗಾರರಿಗೆ ಎಚ್ಚರಿಕೆ
ಕರಾವಳಿ ಭಾಗದಲ್ಲಿ ಮುಂದಿನ 48 ಘಂಟೆಗಳು ಭಾರಿ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ (Weather Report). ಈ ವೇಳೆಯಲ್ಲಿ ಮೀನುಗಾರರು ಸಮುದ್ರಕ್ಕೆ ತೆರಳದಿರುವುದು ಸೂಕ್ತ ಎಂದು ಇಲಾಖೆ ತಿಳಿಸಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
೯. ವಿಸ್ತಾರ Explainer: ಮತ್ತೆ ಮತ್ತೆ ಆಪರೇಷನ್ ಪಾಲಿಟಿಕ್ಸ್, ರಾಜಕೀಯ ಕೋಲಾಹಲ
ದೇಶದ ರಾಜಕೀಯದಲ್ಲಿ ಆಪರೇಶನ್ ಆಗಾಗ ಸದ್ದು ಮೊಳಗಿಸುತ್ತದೆ. ಎರಡೆರಡು ಬಾರಿ ಕರ್ನಾಕಟದಲ್ಲಿ ಇದನ್ನು ಮಾಡಿದ ಬಿಜೆಪಿಯದೇ ಮೇಲ್ಪಂಕ್ತಿ. ಮಹಾರಾಷ್ಟ್ರದಲ್ಲಿ ಇದರ ಹೊಸ ಸುತ್ತು. ಆಪರೇಷನ್ ಪಾಲಿಟಿಕ್ಸ್ ಕುರಿತು ಸಂಪೂರ್ಣ ವಿಶ್ಲೇಷಣೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)
೧೦. ಹಾರ್ದಿಕ್ ಪಾಂಡ್ಯ ಯಾಕೆ Team India ನಾಯಕರಾಗಬೇಕು? ಅವರ ಸಾಮರ್ಥ್ಯಗಳೇನು?
ಭಾರತ ತಂಡದ ಭವಿಷ್ಯದ ನಾಯಕರಿಗಾಗಿ ಹುಡುಕಾಟ ಜೋರಾಗಿ ನಡೆದಿದೆ. ವಿರಾಟ್ ಕೊಹ್ಲಿ ಹೊಣೆಗಾರಿಕೆ ತೊರೆದ ಬಳಿಕ ಮತ್ತೊಬ್ಬ ಹಿರಿಯ ಆಟಗಾರ ರೋಹಿತ್ ಶರ್ಮ ನಾಯಕತ್ವ ವಹಿಸಿಕೊಂಡಿದ್ದರೂ ಅವರ ಬಳಿಕ ಯಾರು ಎಂಬ ಚರ್ಚೆ ಆರಂಭಗೊಂಡಿದೆ. ಏತನ್ಮಧ್ಯೆ, ಬರೋಡಾ ಮೂಲದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ Team India ನಾಯಕರಾಗಲಿ ಎಂಬ ಅಭಿಪ್ರಾಯಗಳು ಹೆಚ್ಚುತ್ತಿವೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ)