1. ಹಲೋ ಸಚಿವರೇ: 1978ಕ್ಕಿಂತ ಹಿಂದಿನ ಅರಣ್ಯ ಒತ್ತುವರಿದಾರರಿಗೆ ಈಶ್ವರ ಖಂಡ್ರೆ ಅಭಯ, ಕಸ್ತೂರಿ ರಂಗನ್ ವರದಿ ಆತಂಕ ಬೇಡ
ಅರಣ್ಯ ಭೂಮಿ ಹಾಗೂ ಕಂದಾಯ ಭೂಮಿ ವ್ಯಾಪ್ತಿಯ ಜಂಟಿ ಸಮೀಕ್ಷೆ, 1978ಕ್ಕಿಂತ ಮೊದಲು ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡವರಿಗೆ ಹಕ್ಕುಪತ್ರಕ್ಕೆ ಕ್ರಮ, ಕಸ್ತೂರಿ ರಂಗನ್ ವರದಿ ಬಗ್ಗೆ ವಿರೋಧ, ಡಿ ಗ್ರೂಪ್ ನೌಕರರಿಗೆ ನಿಗದಿತ ಸಮಯಕ್ಕೆ ವೇತನ ನೀಡುವುದು ಸೇರಿದಂತೆ ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರೋಪಾಯಗಳನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ. ವಿಸ್ತಾರ ನ್ಯೂಸ್ ಆಯೋಜಿಸಿದ್ದ “ಹಲೋ ಸಚಿವರೇ” ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ಜನರಿಗೆ ದನಿಯಾಗಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ. (Vistara Top 10 News)
2. Corruption: ಬಿಜೆಪಿ ಸರ್ಕಾರದ 4 ಹಗರಣಗಳ ತನಿಖೆ ನಿಶ್ಚಿತ: ಚಾಮರಾಜನಗರ ಆಕ್ಸಿಜನ್ ದುರಂತವೂ ಮರುತನಿಖೆ ಎಂದ ಸಿಎಂ ಸಿದ್ದರಾಮಯ್ಯ
ಹಿಂದಿನ ಸರ್ಕಾರಗಳ ಪ್ರಮುಖ ಹಗರಣಗಳಾದ 4 ವೈದ್ಯಕೀಯ ಕಾಲೇಜು ನಿರ್ಮಾಣದಲ್ಲಿ ಅವ್ಯವಹಾರ (Corruption), 40 % ಕಮಿಷನ್ , ಕರೋನಾ ಸಂದರ್ಭದಲ್ಲಿ ವೈದ್ಯಕೀಯ ಸಾಮಗ್ರಿಗಳ ಖರೀದಿ, ನೀರಾವರಿ ಕಾಮಗಾರಿಗಳಲ್ಲಿ ಅವ್ಯವಹಾರ, ಪೊಲೀಸ್ ಪಿಎಸ್ಐ ನೇಮಕಾತಿ ಹಗರಣದ ತನಿಖೆ ಹಾಗೂ ಬಿಟ್ ಕಾಯಿನ್ ಬಗ್ಗೆ ತನಿಖೆಯನ್ನು ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. Uniform Civil Code: ಏಕರೂಪ ನಾಗರಿಕ ಸಂಹಿತೆ ಜಾರಿ ಪರ ಮೋದಿ ಪ್ರತಿಪಾದನೆ
ಭಾರತೀಯ ಜನತಾ ಪಾರ್ಟಿ(BJP) ಮೊದಲಿನಿಂದಲೂ ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ(uniform civil code – UCC) ಜಾರಿಗೆ ಆಗ್ರಹಿಸುತ್ತಲೇ ಬಂದಿದೆ. ಹಾಗೆಯೇ, ಈ ವಿಷಯವನ್ನು ಪ್ರತಿ ಚುನಾವಣೆಯಲ್ಲಿ ತನ್ನ ಪ್ರಣಾಳಿಕೆಯಲ್ಲಿ ಸೇರಿಸುತ್ತದೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಈಗ ಏಕರೂಪ ನಾಗರಿಕ ಸಂಹಿತೆ ಜಾರಿಯ ಪರವಾಗಿ ಬ್ಯಾಟ್ ಬೀಸಿದ್ದಾರೆ. ಆದರೆ, ಈ ವಿಷಯದಲ್ಲಿ ಮುಸ್ಲಿಮರನ್ನು ದಾರಿ ತಪ್ಪಿಸುವ ಕೆಲಸವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: ಗ್ಯಾರಂಟಿ ಎಂದರೇ ಭ್ರಷ್ಟಾಚಾರ ಎಂಬುದನ್ನು ಜನರಿಗೆ ತಿಳಿಹೇಳಿ; ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಸೂಚನೆ
4. BJP Karnataka : ಪ್ರತಿಪಕ್ಷ ನಾಯಕ, ರಾಜ್ಯ ಅಧ್ಯಕ್ಷ ಸ್ಥಾನದ ಬಗ್ಗೆ ಮಾತಾಡಬೇಡಿ: ಬಿಜೆಪಿ ನಾಯಕರಿಗೆ ನಳಿನ್ ಕಟೀಲ್ ಸೂಚನೆ
ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಹೀನಾಯವಾಗಿ ಸೋತ ನಂತರದಲ್ಲಿ ರಾಜ್ಯ ಬಿಜೆಪಿಯಲ್ಲಿ (BJP Karnataka) ಭುಗಿಲೆದ್ದಿರುವ ಅಸಮಾಧಾನ, ನಾಯಕರ ನಡುವಿನ ಮಾತಿನ ಚಕಮಕಿಗೆ ತೆರೆ ಎಳೆಯುವ ಪ್ರಯತ್ನವನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾಡಿದ್ದಾರೆ. ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಕುರಿತು ಮಾಧ್ಯಮಗಳಲ್ಲಿ ಯಾರೂ ಮಾತನಾಡಬಾರದು ಎಂದು ಕಟೀಲ್ ಸೂಚನೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: BJP Politics: ಕೆಲಸಕ್ಕೆ ಬಾರದ ಪ್ರಣಾಳಿಕೆ ಸೇರಿ ಬಿಜೆಪಿ ಸೋಲಿಗೆ 8 ಕಾರಣ ನೀಡಿದ ರೇಣುಕಾಚಾರ್ಯ!
5. Kempegowda Jayanti: ಬೆಂಗಳೂರು ನಂದು; ಸ್ವಾಮೀಜಿ ಸಮ್ಮುಖದಲ್ಲೇ ಡಿಕೆಶಿ-ಅಶ್ವತ್ಥನಾರಾಯಣ ಫೈಟ್
ಇದುವರೆಗೆ ಬೇರೆ ಬೇರೆ ವೇದಿಕೆಗಳಲ್ಲಿ ನಿಂತು ಮಾತಿಗೆ ಮಾತು ಬೆಳೆಸುತ್ತಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಮತ್ತು ಮಾಜಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ (Dr. CN Ashwathanarayana) ಅವರು ಮಂಗಳವಾರ ಒಂದೇ ವೇದಿಕೆಯಲ್ಲಿ ಕುಳಿತು ಸ್ವಾಮೀಜಿಗಳ ಸಮ್ಮುಖದಲ್ಲೇ ನೀನಾ-ನಾನಾ ಎಂಬ ರೀತಿಯಲ್ಲಿ ವಾಗ್ಯುದ್ಧ ನಡೆಸಿದರು. ಕೊನೆಗೆ ಆದಿಚುಂಚನಗಿರಿ ಮಠ ಸಂಸ್ಥಾನದ ಶ್ರೀ ನಿರ್ಮನಾಲನಂದನಾಥ ಸ್ವಾಮೀಜಿಗಳೇ (Sri Nirmalanandanatha swameeji) ಮಧ್ಯ ಪ್ರವೇಶ ಮಾಡಿ ಒಕ್ಕಲಿಗ ಸಮುದಾಯದ ನಾಯಕರಾದ ನೀವು ಈ ರೀತಿ ಜಗಳ ಆಡಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Kempegowda Jayanti: ಡಿ.ಕೆ. ಶಿವಕುಮಾರ್ ಮೈಯಲ್ಲಿ ಕೆಂಪೇಗೌಡರ ರಕ್ತವಿದೆ; ಸಿಎಂ ಆಗಬೇಕು: ಸ್ವಾಮೀಜಿಗಳ ಆಗ್ರಹ
6. ಬೆಂಗಳೂರು-ಮೈಸೂರು ದಶಪಥದಲ್ಲಿ L ಬೋರ್ಡ್‌ಗಳ ಚಾಲನೆಗಿಲ್ಲ ಅವಕಾಶ? ಶುರುವಾಗಲಿದೆ ಕಂಡೀಷನ್!
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ (Bangalore Mysore Expressway) ಸಂಚಾರ ಪ್ರಾರಂಭವಾಗಿ ಕೆಲವೇ ತಿಂಗಳು ಗತಿಸಿವೆ. ಆದರೆ, ಈ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕಾರಣ ತಿಳಿಯಲು ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ತಂಡವು ಮಂಗಳವಾರ ಹೆದ್ದಾರಿಗೆ ಭೇಟಿ ನೀಡಿ ಅಧ್ಯಯನ ನಡೆಸಿದೆ. ಅಲ್ಲದೆ, ಕೆಲವು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದು, ಪಾಲಿಸದೇ ಇದ್ದರೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಲಾಗಿದೆ. ಸೂಚನೆ ಅನುಸಾರ ಇನ್ನು ಮುಂದೆ ಹೆದ್ದಾರಿಯಲ್ಲಿ ಎಲ್ ಬೋರ್ಡ್ ವಾಹನ ಸವಾರರಿಗೆ ಅವಕಾಶ ಇಲ್ಲವೇ ಎಂಬ ಪ್ರಶ್ನೆ ತಲೆದೋರಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. Vande Bharat Express: ಧಾರವಾಡ- ಬೆಂಗಳೂರು ವಂದೇ ಭಾರತ್ ರೈಲು; ಟೈಮಿಂಗ್ ಹೇಗೆ? ಪ್ರಯಾಣ ದರ ಎಷ್ಟು?
ಧಾರವಾಡ-ಬೆಂಗಳೂರು (Dharwad- Bengaluru) ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande Bharat Express) ರೈಲು ಸಂಚಾರ ಮಂಗಳವಾರ ಆರಂಭಗೊಂಡಿದೆ. ಚೆನ್ನೈ- ಮೈಸೂರು ಬಳಿಕ ರಾಜ್ಯಕ್ಕೆ ಒಲಿದಿರುವ ಎರಡನೇ ವಂದೇ ಭಾರತ್ ರೈಲು ಇದಾಗಿದ್ದು, ಇದರ ಮೂಲಕ ಧಾರವಾಡದಿಂದ ಬೆಂಗಳೂರಿಗೆ ಕೇವಲ 7 ಗಂಟೆಯಲ್ಲಿ ಪ್ರಯಾಣಿಸಬಹುದು. ಸಾಮಾನ್ಯ ರೈಲಿಗೆ 9 ಗಂಟೆ ಬೇಕು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. World Cup 2023 : ಏಕ ದಿನ ವಿಶ್ವ ಕಪ್ನಲ್ಲಿ ಭಾರತ ತಂಡದ ವೇಳಾಪಟ್ಟಿ ಇಂತಿದೆ
ಏಕ ದಿನ ವಿಶ್ವ ಕಪ್ನ (World Cup 2023) ಆತಿಥ್ಯಕ್ಕೆ ಭಾರತ ತಂಡ ಸಜ್ಜಾಗಿದೆ. ಐಸಿಸಿ ಜೂನ್ 27ರಂದು ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಭಾರತ ತಂಡಕ್ಕೆ ವಿಶ್ವ ಕಪ್ ಗೆಲ್ಲುವುದೊಂದೇ ಬಾಕಿ ಇದೆ. ವೇಳಾಪಟ್ಟಿ ಘೋಷಣೆಯಾಗುತ್ತಿದ್ದಂತೆ ಭಾರತ ತಂಡದ ಅಭಿಮಾನಿಗಳ ಉತ್ಸಾಹ ಹೆಚ್ಚಾಗಿದೆ. 2011ರಲ್ಲಿ ಭಾರತ ತಂಡ ಏಕ ದಿನ ವಿಶ್ವಕಪ್ಗೆ ಆತಿಥ್ಯ ವಹಿಸಿತ್ತು. ಆ ವರ್ಷ ಪ್ರಶಸ್ತಿ ಗೆದ್ದುಕೊಂಡಿತ್ತು. ಇದೀಗ ಮೆನ್ ಇನ್ ಬ್ಲೂ ತಂಡ 2023ರ ಐಸಿಸಿ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡವಾಗಿದೆ. ಭಾರತ ತಂಡ ವಿಶ್ವ ಕಪ್ನ (World Cup 2023) ಲೀಗ್ ಹಂತದಲ್ಲಿ ಒಟ್ಟು 9 ಪಂದ್ಯಗಳನ್ನು ಆಡಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. NIA Raid: ಪ್ರವೀಣ್ ನೆಟ್ಟಾರು ಹತ್ಯೆ ಕೇಸ್; ದಕ್ಷಿಣ ಕನ್ನಡ, ಕೊಡಗಿನ 6 ಕಡೆ ಎನ್‌ಐಎ ದಾಳಿ
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯಲ್ಲಿ ಏಕಕಾಲಕ್ಕೆ 6 ಕಡೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಿಷೇಧಿತ ಪಿಎಫ್‌ಐ ಸಂಘಟನೆ ಕಾರ್ಯಕರ್ತರ ಮನೆಗಳ ಮೇಲೆ ದಾಳಿ (NIA Raid) ನಡೆಸಲಾಗಿದ್ದು, ಎಲೆಕ್ಟ್ರಾನಿಕ್ ಡಿವೈಸ್ ಗಳು ಸೇರಿ ಮಹತ್ವದ ದಾಖಲೆಗಳನ್ನು ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. ಮಹಿಳಾ ಆಯುಕ್ತರ ನಾಯಿಗಾಗಿ ಮನೆಮನೆಗೆ ನುಗ್ಗುತ್ತಿರುವ ಪೊಲೀಸರು; 500 ಕಡೆಗಳಲ್ಲಿ ಶೋಧ!
ಉತ್ತರ ಪ್ರದೇಶದ ಮೀರತ್ನ ಪೊಲೀಸರು (Meerut Police) ಅಲ್ಲೀಗ ಮನೆಮನೆಗೆ ನುಗ್ಗಿ, ಅಲ್ಲೆಲ್ಲ ಹುಡುಕಾಟ ನಡೆಸುತ್ತಿದ್ದಾರೆ. ಮನೆ ಮಾಲೀಕರ ವಿಚಾರಣೆ ನಡೆಸುತ್ತಿದ್ದಾರೆ. ಇದು ಯಾವುದೇ ಕಳೆದು ಹೋದ ಚಿನ್ನ-ಬೆಳ್ಳಿಗಾಗಿ ಅಲ್ಲ. ದಾಖಲೆಗಳಿಗಾಗಿಯೂ ಅಲ್ಲ. ಒಂದು ನಾಯಿಗಾಗಿ ಅವರು ಇಷ್ಟೊಂದು ಹುಡುಕಾಟ ನಡೆಸುತ್ತಿದ್ದಾರೆ. ಕಳೆದ 36ಗಂಟೆಯಲ್ಲಿ ಏನಿಲ್ಲವೆಂದರೂ 500 ಮನೆಗಳಲ್ಲಿ ಅವರು ನಾಯಿಗಾಗಿ ಶೋಧ (Meerut Police Search For Dog) ನಡೆಸಿದ್ದಾರೆ-ವಿಚಾರಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.