Site icon Vistara News

ವಿಸ್ತಾರ TOP 10 NEWS: ಬಸ್‌ನಲ್ಲಿ ಲಕ್ಷಾಂತರ ನೀರೆಯರ ʼಶಕ್ತಿʼ ಪ್ರದರ್ಶನದಿಂದ, ಜಿಲ್ಲೆಗಳಲ್ಲಿ ನೀರಿನ ಬವಣೆವರೆಗಿನ ಪ್ರಮುಖ ಸುದ್ದಿಗಳಿವು

vistara top 10 news free bus service in karnataka to farmers protes and more news

#image_title

1. Free Bus: ಫಸ್ಟ್‌ ಡೇ ಬಸ್‌ ಫುಲ್‌! 5.71 ಲಕ್ಷ ಮಹಿಳೆಯರ ಪ್ರಯಾಣ, ಇದರ ವೆಚ್ಚ 1.4 ಕೋಟಿ; ಇದು ಮೊದಲ ದಿನದ ನಾರಿ ‘ಶಕ್ತಿ’
ಸರ್ಕಾರಿ ಬಸ್‌ಗಳಲ್ಲಿ ನಾರಿ ಶಕ್ತಿ ಜೋರಾಗಿದ್ದು, ಮೊದಲ ದಿನವೇ 5 ಲಕ್ಷಕ್ಕೂ ಅಧಿಕ ಮಹಿಳೆಯರು ಗ್ಯಾರಂಟಿಯ ಉಚಿತ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ರಾಜ್ಯದ ಎಲ್ಲ ಮಹಿಳೆಯರಿಗೂ (women passengers) ಕಾಂಗ್ರೆಸ್‌ ಗ್ಯಾರಂಟಿ (Congress Guarantee) ಯೋಜನೆಯಂತೆ, ಉಚಿತ ಬಸ್‌ (Free Bus Service) ಪ್ರಯಾಣವುಳ್ಳ ಶಕ್ತಿ ಯೋಜನೆಗೆ (Shakti Scheme) ಜೂನ್‌ 11ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅಧಿಕೃತವಾಗಿ ಚಾಲನೆ ನೀಡಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Free Electricity: ಹೊಸ ಮನೆ ಕಟ್ಟಿದವರಿಗೆ, ಹೊಸ ಬಾಡಿಗೆದಾರರಿಗೂ ಫ್ರೀ ಕರೆಂಟ್‌: ಏನಿದು ಸರ್ಕಾರದ 53 ಯುನಿಟ್‌ ಸೂತ್ರ?
 ಉಚಿತ ವಿದ್ಯುತ್‌ ಯೋಜನೆಗೆ ಸರ್ಕಾರ ಈಗಾಗಲೆ ಅನುಮೋದನೆ ನೀಡಿದ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಲಿದೆ. ಜುಲೈಯಲ್ಲಿ ಬಳಸುವ ವಿದ್ಯುತ್‌ಗೆ ಆಗಸ್ಟ್‌ನಲ್ಲಿ ಬರುವ ಬಿಲ್‌ನಿಂದ ಯೋಜನೆ ಅನ್ವಯ ಆಗುತ್ತದೆ. ಆದರೆ ಈ ನಡುವೆ, ಹೊಸದಾಗಿ ಕಟ್ಟಿದ ಮನೆಗಳಿಗೆ ಹಾಗೂ ಯಾವುದೇ ಮನೆಗೆ ಹೊಸದಾಗಿ ಬಾಡಿಗೆ ಬರುವವರಿಗೆ ಹೇಗೆ ಅನ್ವಯ ಎಂಬ ಗೊಂದಲ ಇತ್ತು. ಇದೀಗ ಸರ್ಕಾರ ಇದಕ್ಕೊಂದು ಸೂತ್ರವನ್ನು ಕಂಡುಕೊಂಡಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂಧನ ಸಚಿವ ಕೆ.ಜೆ. ಜಾರ್ಜ್‌, ಹೊಸ ಮನೆಗೆ ಬಂದವರಿಗೆ ಹಳೆಯ ಬಳಕೆ ದಾಖಲೆ ಇರುವುದಿಲ್ಲ. ಹಾಗಾಗಿ ರಾಜ್ಯದ ಒಟ್ಟಾರೆ ಗೃಹಬಳಕೆ ವಿದ್ಯುತ್‌ ಬಳಕೆಯ ಸರಾಸರಿ 53 ಯುನಿಟ್‌ ನಿಗದಿಪಡಿಸಲಾಗಿದೆ ಎಂದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Water Scarcity: 8 ಜಿಲ್ಲೆಗಳಲ್ಲಿ ಜಲ ಸಂಕಟ: ನೀರಿನ ಸಮಸ್ಯೆ ಬಗೆಹರಿಸಲು 24 ಗಂಟೆ ಡೆಡ್‌ಲೈನ್‌
ಮುಂಗಾರು ವಿಳಂಬವಾಗಿದ್ದರಿಂದ ಪ್ರಮುಖವಾಗಿ ರಾಜ್ಯದ 8 ಜಿಲ್ಲೆಗಳಲ್ಲಿ ನೀರಿಗೆ ತತ್ವಾರವಾಗಿದ್ದು, ಈ ಬಗ್ಗೆ ಅಧಿಕಾರಿಗಳ ಸಭೆಯನ್ನು ಸಿಎಂ ಸಿದ್ದರಾಮಯ್ಯ ನಡೆಸಿದರು. ರಾಜ್ಯದ 8 ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಜಲಜೀವನ್‌ ಮಿಷನ್ ಯೋಜನೆಯ ಪ್ರಗತಿಯ ಕುರಿತಂತೆ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅನೇಕ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. ಅತಿವೇಗದಲ್ಲಿ ಅಪ್ಪಳಿಸಲಿದೆ ಬಿಪರ್​ಜಾಯ್​; ಕಚ್​​ನಲ್ಲಿ ಸೆಕ್ಷನ್​ 144, ಪ್ರಧಾನಿ ಮೋದಿಯಿಂದ ಪರಿಶೀಲನಾ ಸಭೆ
ಬಿಪರ್​ಜಾಯ್​ ಚಂಡಮಾರುತ (Cyclone Biparjoy) ಜೂನ್​ 15ರಂದು ಕಚ್​ ಕರಾವಳಿ ತೀರದಲ್ಲಿರುವ ಜಕೌ ಬಂದರನ್ನು, ಗಂಟೆಗೆ 150 ಕಿಮೀ ವೇಗದಲ್ಲಿ ಪ್ರವೇಶಿಸಲಿರುವ ಹಿನ್ನೆಲೆಯಲ್ಲಿ, ಸೌರಾಷ್ಟ್ರ ಮತ್ತು ಕಚ್​ನಲ್ಲಿ ಇಂದಿನಿಂದಲೇ ಹವಾಮಾನ ಇಲಾಖೆ ಆರೆಂಜ್ ಅಲರ್ಟ್​ ಘೋಷಣೆ ಮಾಡಿದೆ. ಕಚ್​​ನಲ್ಲಿ ಸೆಕ್ಷನ್​ 144 ಜಾರಿಗೊಳಿಸಲಾಗಿದ್ದು, ಶಾಲೆಗಳನ್ನು ಮುಚ್ಚಲು ಆದೇಶಿಸಲಾಗಿದೆ. ಜೂ.16ರವರೆಗೂ ಇಲ್ಲಿ ಸೆಕ್ಷನ್​ 144 ಇರಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Veershaiva Lingayath: ಪಂಚಾಚಾರ್ಯರ ಸಭೆಗೆ ವಿರಕ್ತರು ಹೋಗಬಾರದು: ವೀರಶೈವ ಆಚರಣೆಗಳನ್ನು ತೆಗೆಯುತ್ತೇವೆ ಎಂದ ಜಾಮದಾರ್‌
ವೀರಶೈವ ಲಿಂಗಾಯತ ಸಮುದಾಯದ ಪಂಚಪೀಠಗಳು ಹುಬ್ಬಳ್ಳಿಯಲ್ಲಿ ಕರೆದ ಸಭೆಗೆ ಯಾವ ವಿರಕ್ತ ಮಠಾಧೀಶರು ಹೋಗುತ್ತಾರೆಯೋ ಅವರು ಲಿಂಗಾಯತರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿ ಡಾ‌‌. ಶಿವಾನಂದ ಜಾಮದಾರ ಎಚ್ಚರಿಕೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. H.D. Kumaraswamy: ಅವನ್ಯಾವಾನೊ ಗುತ್ತಿಗೆದಾರರ ಸಂಘದ ಪದಾಧಿಕಾರಿ ಸಾಕ್ಷಿ ಕೊಟ್ಟಿದ್ನ?: ಡಿಕೆಶಿ ವಿರುದ್ಧ ಎಚ್‌ಡಿಕೆ ಯದ್ವಾತದ್ವಾ ವಾಗ್ದಾಳಿ!
ಕಾಂಗ್ರೆಸ್ ಸರ್ಕಾರದ ವಿರುದ್ಧ ಪರ್ಸೆಂಟೇಜ್ ಆರೋಪ ಮಾಡಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿ ಅವರು ತಮ್ಮ ಆರೋಪಗಳ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿರುವುದಕ್ಕೆ ತಿರುಗೇಟು ನೀಡಿದ ಕುಮಾರಸ್ವಾಮಿ, ಹಿಂದೆ ಇದೇ ಜನ ಬಿಜೆಪಿ ಸರ್ಕಾರದ ವಿರುದ್ಧ 40% ಆರೋಪ ಮಾಡಿದ್ದರು. ಆ ಆರೋಪವನ್ನು ಅವರು ಸಾಬೀತು ಮಾಡಿದ್ದರಾ? ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರಾ? ಈಗ ನೋಡಿದರೆ ನನಗೆ ಪುಕ್ಕಟೆ ಸಲಹೆ ನೀಡುತ್ತಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Lok Sabha Election 2024: ಲೋಕಸಭೆಯಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ; ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟನೆ

7. Indira Canteen: ಇನ್ನುಮುಂದೆ ಇಂದಿರಾ ಕ್ಯಾಂಟೀನ್‌ನಲ್ಲಿ ಹೊಟ್ಟೆತುಂಬ ಊಟ: ಬದಲಾಗಲಿದೆ ಮೆನು, ಟೇಸ್ಟ್‌, ಪ್ರಮಾಣ
ಈ ಹಿಂದೆ ಕಾಂಗ್ರೆಸ್‌ ಅವಧಿಯಲ್ಲಿ ಆರಂಭವಾಗಿದ್ದ ಇಂದಿರಾ ಕ್ಯಾಂಟೀನ್‌ಗಳನ್ನು (Indira Canteen) ಪುನಾರಂಭ ಮಾಡುವುದರ ಜತೆಗೆ ಆಹಾರ ಪಟ್ಟಿಯಲ್ಲೂ ಬದಲಾವಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಇಂದಿರಾ ಕ್ಯಾಂಟೀಂನ್‌ ಕುರಿತು ಅಧಿಕಾರಿಗಳ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Farmers Protest: ಲೋಕಸಭೆ ಚುನಾವಣೆ ಹೊತ್ತಲ್ಲೇ ದೆಹಲಿ ಸಮೀಪ ಮತ್ತೆ ಶುರು ರೈತರ ಪ್ರತಿಭಟನೆ, ಸರ್ಕಾರಕ್ಕೆ ತಲೆಬೇನೆ
ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಇವೆ. ಈಗಾಗಲೇ ದೆಹಲಿಯಲ್ಲಿ ಕುಸ್ತಿಪಟುಗಳು ಪ್ರತಿಭಟನೆ ಮೂಲಕ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಹರಿಯಾಣದಲ್ಲಿ ರೈತರು ಬೃಹತ್‌ ಪ್ರತಿಭಟನೆ (Farmers Protest) ನಡೆಸಿದ್ದು, ಚಂಡೀಗಢ-ದೆಹಲಿ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ ಹರಿಯಾಣ ಸರ್ಕಾರಕ್ಕೆ ಮಾತ್ರವಲ್ಲ, ಕೇಂದ್ರ ಸರ್ಕಾರಕ್ಕೂ ಬಿಸಿ ಮುಟ್ಟಲಿದೆ ಎಂದೇ ಹೇಳಲಾಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. KL Rahul: ಅನಾಥ ವಿದ್ಯಾರ್ಥಿಗೆ ಕೆ.ಎಲ್‌. ರಾಹುಲ್‌ ನೆರವು; ಸಿಎ ಆಗುವ ಕನಸಿಗೆ ನೀರೆರೆದ ಕ್ರಿಕೆಟಿಗ
ಇತ್ತೀಚೆಗೆ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕನ ಚಿಕಿತ್ಸೆಗೆ 31 ಲಕ್ಷ ರೂಪಾಯಿ ನೀಡಿ ಮಾನವೀಯತೆ ಮೆರೆದಿದ್ದ ಖ್ಯಾತ ಕ್ರಿಕೆಟಿಗ ಕೆ.ಎಲ್‌.ರಾಹುಲ್‌ ಅವರು (KL Rahul), ಇದೀಗ ರಾಜ್ಯದ ಪ್ರತಿಭಾವಂತ ಬಡ ವಿದ್ಯಾರ್ಥಿ ಶಿಕ್ಷಣಕ್ಕೆ ಸಹಾಯಹಸ್ತ ಚಾಚುವ ಮೂಲಕ ಹೃದಯ ವೈಶಾಲ್ಯತೆ ಮೆರೆದಿದ್ದಾರೆ. ಸಿಎ ಕೋಚಿಂಗ್ ಪಡೆಯಲು ಬಾಗಲಕೋಟೆ ಹುಡುಗನಿಗೆ 75 ಸಾವಿರ ರೂಪಾಯಿ ನೆರವು ನೀಡುವ ಮೂಲಕ ವಿದ್ಯಾರ್ಥಿಯ ಓದುವ ಕನಸಿಗೆ ನೀರೆರೆದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Viral Video: ‘ಸ್ನೇಕ್​ ಟೈಮ್​​‘; ಹಾವನ್ನು ಕಚ್ಚಿಕಚ್ಚಿ ತಿಂದ ಜಿಂಕೆ, ಅಯ್ಯೋ ಈ ಪ್ರಾಣಿ ಮಾಂಸಾಹಾರಿಯಾ?
ಜಿಂಕೆಗಳು ಎಂದಾದರೂ ಮಾಂಸ ತಿನ್ನುತ್ತವಾ? ಇವು ಪ್ರಕೃತಿಯಲ್ಲಿ ಸಸ್ಯಾಹಾರಿ ಜೀವಿಗಳ ಸಾಲಿಗೆ ಸೇರಿವೆ. ಹುಲಿ, ಚಿರತೆ, ಸಿಂಹದಂಥ ಮೃಗಗಳಿಗೆ ಇವೇ ಮಾಂಸದೂಟ ಆಗುತ್ತವೆ ಬಿಟ್ಟರೆ, ಜಿಂಕೆಗಳೆಂದೂ ಬೇಟೆಯಾಡುವುದಿಲ್ಲ. ಹುಲ್ಲು, ಮರದ ಎಲೆಗಳೇ ಇವುಗಳಿಗೆ ಆಹಾರ. ಆದರೂ ಇದು ಪ್ರಕೃತಿ ನೋಡಿ, ಒಮ್ಮೊಮ್ಮೆ ವೈಚಿತ್ರ್ಯಗಳು ನಡೆದುಬಿಡುತ್ತವೆ. ಕಪ್ಪೆ ಹಾವನ್ನು ನುಂಗಿದ ಬಗ್ಗೆ ಈ ಹಿಂದೆ ಸುದ್ದಿಯಾಗಿತ್ತಲ್ಲ, ಈಗ ಅಂಥ ಇನ್ನೊಂದು ಸುದ್ದಿ ವರದಿಯಾಗಿದೆ. ಜಿಂಕೆಯೊಂದು ಹಾವನ್ನು ಕಚ್ಚಿಕಚ್ಚಿ ತಿಂದಿದೆ (Deer Eating Snake). ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ. ಮತ್ತಷ್ಟು ವೈರಲ್‌ ಸುದ್ದಿಗಳಿಗೆಗಿ ಇಲ್ಲಿ ಕ್ಲಿಕ್‌ ಮಾಡಿ.

Exit mobile version