Site icon Vistara News

ವಿಸ್ತಾರ TOP 10 NEWS | ʼಅಗ್ನಿಪಥʼದ ಅಗ್ನಿಕುಂಡ, ಎಸಿಬಿ ದಾಳಿ ಬಿಸಿ, ಶಾಲೆಗಳಿಗೆ ಕೊರೊನಾ ಕರಿನೆರಳು: ದಿನದ ಪ್ರಮುಖ ಸುದ್ದಿಗಳಿವು

TOP 10 News JUN 17

ಬೆಂಗಳೂರು: ಉತ್ತರ ಭಾರತದ ಬಹುತೇಕ ರಾಜ್ಯಗಳು ಶುಕ್ರವಾರ ಅಗ್ನಿಪಥ ಯೋಜನೆಯ ವಿರುದ್ಧದ ಪ್ರತಿಭಟನೆ ಹೆಸರಲ್ಲಿ ಅಗ್ನಿಕುಂಡಗಳಾದವು. ಇತ್ತ ರಾಜ್ಯದಲ್ಲಿ 21 ಅಧಿಕಾರಿಗಳಿಗೆ ಎಸಿಬಿ ದಾಳಿಯ ಬಿಸಿ ತಟ್ಟಿತು. ಅವರ ಮನೆಗಳಲ್ಲಿ ಪತ್ತೆಯಾದ ಹಣ ಮತ್ತು ಬಂಗಾರದ ರಾಶಿ ನೋಡಿ ಜನ ದಂಗಾದರು. ನಾಳೆ ಪಿಯುಸಿ ಫಲಿತಾಂಶ ಪ್ರಕಟವಾಗುವ ಕುತೂಹಲ ಒಂದೆಡೆಯಾದರೆ ಹತ್ತಕ್ಕಿಂತ ಹೆಚ್ಚು ಮಕ್ಕಳಿಗೆ ಕೊರೊನಾ ಸೋಂಕು ತಗುಲಿದರೆ ಶಾಲೆಗೇ ರಜೆ ನೀಡಬೇಕೆಂಬ ಸೂಚನೆ ಆತಂಕ ತಂದಿದೆ. ಮೇಲ್ಮನೆ ಚುನಾವಣೆ ಸೋಲಿನ ನಡುವೆಯೇ ಮತ್ತೆ ಎಲೆಕ್ಷನ್‌ ಮೋಡ್‌ಗೆ ಹೊರಳಿದ ರಾಜ್ಯ ಬಿಜೆಪಿ , ಸೋನಿಯಾ ಗಾಂಧಿಗೆ ಫಂಗಸ್‌ ಅಟ್ಯಾಕ್‌.. ಹೀಗೆ ರಾಜ್ಯ, ದೇಶ, ವಿದೇಶಗಳ ಟಾಪ್‌ ೧೦ ಸುದ್ದಿಗಳ ಗೊಂಚಲು.

೧. ಹಿಂಸಾಪಥದಲ್ಲಿ ʻಅಗ್ನಿಪಥ್‌ʼ ಪ್ರತಿಭಟನೆ: ಅಗ್ನಿಕುಂಡವಾದ ೮ ರಾಜ್ಯಗಳು, ಗೋಲಿಬಾರಿಗೆ ಒಬ್ಬ ಬಲಿ
ಕೇಂದ್ರ ಸರಕಾರದ ಅಗ್ನಿಪಥ್‌ ಯೋಜನೆಯ ವಿರುದ್ಧ ಭುಗಿಲೆದ್ದಿರುವ ಬೆಂಕಿ ಶುಕ್ರವಾರ ಉತ್ತರದ ಎಂಟು ರಾಜ್ಯಗಳಲ್ಲಿ ಧಗಧಗಿಸಿತು. ಬಿಹಾರದಲ್ಲಂತೂ ನೂರಾರು ರೈಲು ಬೋಗಿಗಳು, ಎರಡು ಬಿಜೆಪಿ ಕಚೇರಿಗಳು ಸುಟ್ಟು ಭಸ್ಮವಾದವು. ಬಿಹಾರದ ಡಿಸಿಎಂ ಮನೆಗೇ ದಾಳಿ ನಡೆಯಿತು. ಇತ್ತ ಸಿಕಂದರಾಬಾದ್‌ನಲ್ಲಿ ದೊಂಬಿನಿರತನೊಬ್ಬ ಗುಂಡಿಗೆ ಬಲಿಯಾಗಿದ್ದಾನೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

– ಜೂನ್‌ ೨೪ರಿಂದಲೇ ನೇಮಕಾತಿ ಪ್ರಕ್ರಿಯೆ ಶುರು: ದೇಶಾದ್ಯಂತ ಪ್ರತಿಭಟನೆಯ ನಡುವೆಯೇ ಜೂನ್‌ ೨೪ರಿಂದ ಸೇನಾ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಏರ್‌ಚೀಫ್‌ ಮಾರ್ಷಲ್‌ ಘೋಷಿಸಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)
ಸತ್ಯ ಮತ್ತು ಸುಳ್ಳುಗಳ ನಡುವೆ ಅಗ್ನಿಪಥ: ಅಗ್ನಿಪಥ್‌ ಯೋಜನೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿರುವ ಸಂಶಯಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸತ್ಯವೇನು? ಮಿಥ್ಯೆಯೇನು? ವಿಸ್ತಾರ Explainer ನೋಡಿ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ಮಾಡಿ)

೨. ೨೧ ಭ್ರಷ್ಟ ಅಧಿಕಾರಿಗಳ ನಿದ್ದೆಗೆಡಿಸಿದ ಎಸಿಬಿ: ಹೊರಬಂತು ಕಂತೆ ಕಂತೆ ಹಣ, ರಾಶಿ ರಾಶಿ ಬಂಗಾರ
ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಬ್ಲ್ಯಾಕ್‌ ಫ್ರೈಡೇ ಅನುಭವ! ಸಿಹಿನಿದ್ದೆಯಲ್ಲಿದ್ದ ೨೧ ಅಧಿಕಾರಿಗಳ ೮೦ ಮನೆ ಮತ್ತು ಕಚೇರಿಗಳಿಗೆ ಏಕಕಾಲದಲ್ಲಿ ಮೆಗಾರೇಡ್‌ ನಡೆಯಿತು. ಬಿಡಿಎನಲ್ಲಿ ಗಾರ್ಡನರ್‌ ಕೆಲಸ ಮಾಡುವವನ ಭವ್ಯ ಬಂಗಲೆಗಳು, ಎಲ್ಲರ ಮನೆಗಳಲ್ಲಿ ಕಂಡ ಹಣ, ಬಂಗಾರದ ರಾಶಿ ಕಂಡು ಅಧಿಕಾರಿಗಳೇ ದಂಗುಬಡಿದು ಹೋಗಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

೩. ನಾಳೆ ಪ್ರಕಟವಾಗಲಿದೆ ಪಿಯುಸಿ ಫಲಿತಾಂಶ: ೬.೮೪ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರ
ರಾಜ್ಯಾದ್ಯಂತ ಯಶಸ್ವಿಯಾಗಿ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ (2nd PU result) ನಾಳೆ (ಶನಿವಾರ) ಪ್ರಕಟವಾಗಲಿದೆ. ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಬೆಳಗ್ಗೆ 11 ಗಂಟೆಗೆ ಪಿಯು ಬೋರ್ಡ್‌ನಲ್ಲಿ ಫಲಿತಾಂಶ ಘೋಷಿಸಲಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

೪. ಜೂನ್‌ ೨೦ಕ್ಕೆ ರಾಜ್ಯಕ್ಕೆ ಬರ್ತಾರೆ ಪ್ರಧಾನಿ ಮೋದಿ, ಎಲ್ಲೆಡೆ ಎಚ್ಚರದ ಕಣ್ಣು
ಅಂತಾರಾಷ್ಟ್ರೀಯ ಯೋಗ ದಿನ ಮತ್ತು ಬೆಂಗಳೂರಿನಲ್ಲಿ ನಡೆಯುವ ಹಲವು ಕಾರ್ಯಕ್ರಮಗಳ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ಜೂನ್‌ 20ರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ. ಅವರಿಗೆ ಅಭೂತಪೂರ್ವ ಸ್ವಾಗತ ನೀಡಲು ಬಿಜೆಪಿ ನಿರ್ಧರಿಸಿದೆ. ಜತೆಗೆ ಎಲ್ಲ ಕಡೆಯಲ್ಲೂ ಕಣ್ಣು ಇಡಲಾಗುತ್ತದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

೫. ರಾಜ್ಯದಲ್ಲಿ ಈಗಿನಿಂದಲೇ ಎಲೆಕ್ಷನ್‌ ಟ್ರೆಂಡ್‌ ಸೃಷ್ಟಿಗೆ ಬಿಜೆಪಿ ಯತ್ನ, ಠಿಕಾಣಿ ಹೂಡಲಿದ್ದಾರೆ ನಡ್ಡಾ
2024ರ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಪಕ್ಷದ ರಾಷ್ಟ್ರೀಯ ನಾಯಕರಿಗೆ ಬಹಳ ಪ್ರಮುಖವಾಗಿದೆ. ಹೀಗಾಗಿ ಈಗಿನಿಂದಲೇ ಎಲೆಕ್ಷನ್ ಟ್ರೆಂಡ್‌ ಸೃಷ್ಟಿಗೆ ಬಿಜೆಪಿ ವರಿಷ್ಠರು ನಿರ್ಧಾರ ಮಾಡಿದ್ದಾರೆ. ಈ ನಿಟ್ಟಿನಲ್ಲಿ ನಾಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ರಾಜ್ಯಕ್ಕೆ ಆಗಮಿಸಲಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

೬. ಅಕ್ರಮ ಮೀನುಗಾರಿಕೆಯ ನಿರ್ಬಂಧಕ್ಕೆ WTO ಸಭೆಯಲ್ಲಿ ಪಟ್ಟು ಹಿಡಿದು ಗೆದ್ದ ಭಾರತ
ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಮೀನುಗಾರಿಕೆಗೆ ಕಡಿವಾಣ ಹಾಕಬೇಕೆಂಬ ಭಾರತದ ವಾದ ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಗೆಲುವು ಸಾಧಿಸಿದೆ. ಹೀಗಾಗಿ ಅಕ್ರಮ ಮೀನುಗಾರಿಕೆ ನಿಯಂತ್ರಣಕ್ಕೆ ಡಬ್ಲ್ಯುಟಿಒ ನಿಯಮಗಳು ಜಾರಿಗೆ ಬರಲಿವೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

೭. ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರಿಗೆ ಶ್ವಾಸನಾಳದಲ್ಲಿ ಫಂಗಸ್‌ ಸೋಂಕು
ಕೊರೊನಾ ಸೋಂಕಿಗೆ ಒಳಗಾಗಿ ದಿಲ್ಲಿಯ ಗಂಗಾರಾಮ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ. ಆದರೆ ಶ್ವಾಸನಾಳದಲ್ಲಿ ಸೋಂಕು ಕಾಣಿಸಿಕೊಂಡಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

೮. ಹತ್ತಕ್ಕಿಂತ ಹೆಚ್ಚು ಮಕ್ಕಳಿಗೆ ಕೊರೊನಾ ಸೋಂಕು ತಗುಲಿದರೆ ಶಾಲೆಗೇ ರಜೆ: ಹೊಸ ಗೈಡ್‌ಲೈನ್ಸ್‌
ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲೂ ಕೆಲವು ಶಾಲೆಗಳಲ್ಲಿ ಪಸರಿಸುತ್ತಿದೆ. ಈ ಬಗ್ಗೆ ನಿಗಾ ವಹಿಸಿರುವ ರಾಜ್ಯ ಸರಕಾರ ಹತ್ತಕ್ಕಿಂತ ಹೆಚ್ಚು ಮಕ್ಕಳಿಗೆ ಸೋಂಕು ತಗುಲಿದರೆ ಆ ಶಾಲೆಯನ್ನು ಮೂರು ದಿನ ಮುಚ್ಚುವಂತೆ ಸೂಚಿಸಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

೯. ನೀವು ಸರಿಯಾಗಿ ಆಸ್ತಿ ತೆರಿಗೆ ಕಟ್ಟುತ್ತಿದ್ದೀರಾ? ನಿಮ್ಮ ಮೇಲೆ ಕಣ್ಣಿಡಲು ಬರುತ್ತಿದೆ ಡ್ರೋನ್‌!
ಬಿಬಿಎಂಪಿಗೆ ಜನರಿಗೆ ಆಸ್ತಿ ತೆರಿಗೆ ಕಟ್ಟಿಸುವುದೇ ಒಂದು ದೊಡ್ಡ ಸವಾಲು. ಅದರ ಜತೆಗೆ ತಪ್ಪು ಮಾಹಿತಿ ನೀಡುವವರು ಬೇರೆ! ಇದೆಲ್ಲವನ್ನು ಪರಿಹರಿಸುವ ನಿಟ್ಟಿನಲ್ಲಿ ಬಿಬಿಎಂಪಿ ಡ್ರೋನ್‌ ತಂತ್ರಜ್ಞಾನಕ್ಕೆ ಮೊರೆ ಹೋಗಿದೆ. ಹಾಗಿದ್ದರೆ ಡ್ರೋನ್‌ ಬಳಸಿಕೊಂಡು ಏನು ಮಾಡಲಾಗುತ್ತದೆ? (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

೧೦. ಪಾಕಿಸ್ತಾನಿ ಉಗ್ರನ ಬೆಂಬಲಕ್ಕೆ ನಿಂತ ಚೀನಾ: ಅಮೆರಿಕ-ಭಾರತ ಜಂಟಿ ಯತ್ನಕ್ಕೆ ಸೋಲು
ಪಾಕಿಸ್ತಾನ ಮೂಲದ ಉಗ್ರ ಅಬ್ದುಲ್‌ ರೆಹಮಾನ್‌ ಮಖ್ಖಿಯನ್ನು ಜಾಗತಿಕ ಉಗ್ರನೆಂದು ಘೋಷಿಸುವ ಭಾರತ ಮತ್ತು ಅಮೆರಿಕದ ಜಂಟಿ ಪ್ರಯತ್ನಕ್ಕೆ ಚೀನಾ ಕೊನೇ ಕ್ಷಣದಲ್ಲಿ ಅಡ್ಡಗಾಲು ಹಾಕಿದೆ. ಈ ಮೂಲಕ ಉಗ್ರ ಪೋಷಣೆಯ ಅದರ ಮುಖವಾಡ ಬಯಲಾಗಿದೆ. (ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ)

Exit mobile version