Agnipath protestಗೆ ಸಾವಿನ ತಿರುವು, ಒಬ್ಬ ದೊಂಬಿಕೋರ ಪೊಲೀಸ್‌ ಗುಂಡಿಗೆ ಬಲಿ - Vistara News

ದೇಶ

Agnipath protestಗೆ ಸಾವಿನ ತಿರುವು, ಒಬ್ಬ ದೊಂಬಿಕೋರ ಪೊಲೀಸ್‌ ಗುಂಡಿಗೆ ಬಲಿ

Agnipath protest: ಅಗ್ನಿಪಥ ಪ್ರತಿಭಟನೆ ಮೊದಲ ಜೀವ ಬಲಿ ಪಡೆದಿದೆ. ಸಿಕಂದರಾಬಾದ್‌ ರೈಲ್ವೆ ನಿಲ್ದಾಣದಲ್ಲಿ ದೊಂಬಿಗಿಳಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಗೋಲಿಬಾರ್‌ಗೆ ಒಬ್ಬರು ಬಲಿಯಾಗಿದ್ದಾರೆ.

VISTARANEWS.COM


on

secunderabad railway station
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸಿಕಂದರಾಬಾದ್‌: ದೇಶದ ಏಳು ರಾಜ್ಯಗಳಲ್ಲಿ ಭುಗಿಲೆದ್ದಿರುವ ಅಗ್ನಿಪಥ್‌ ಪ್ರತಿಭಟನೆಗೆ (Agnipath Protest) ಮೊದಲ ಜೀವ ಬಲಿಯಾಗಿದೆ. ಸಿಕಂದರಾಬಾದ್‌ ರೈಲ್ವೇ ನಿಲ್ದಾಣದಲ್ಲಿ ದೊಂಬಿ ನಡೆಸಿದ ಯುವಕರ ತಂಡದ ಮೇಲೆ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಒಬ್ಬ ಮೃತಪಟ್ಟಿದ್ದಾನೆ. ಮೃತನನ್ನು ವಾರಂಗಲ್‌ ಜಿಲ್ಲೆಯ ದಾಮೋದರ್‌ ಎಂದು ಗುರುತಿಸಲಾಗಿದೆ.
ಸಿಕಂದರಾಬಾದ್‌ ರೈಲು ನಿಲ್ದಾಣದಲ್ಲಿ ಮುಂಜಾನೆಯಿಂದಲೇ ರಣರಂಗದ ಸ್ಥಿತಿ ನಿರ್ಮಾಣವಾಗಿತ್ತು. ದೊಡ್ಡ ಸಂಖ್ಯೆಯ ಪ್ರತಿಭಟನಾಕಾರರು ಸೇರಿ ರೈಲುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಬಳಿಕ ರೈಲುಗಳಿಗೆ ಬೆಂಕಿ ಹಚ್ಚಲು ಮುಂದಾದಾಗ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸಿದ್ದರು. ಈ ನಡುವೆ ಪೊಲೀಸ್‌ ಫೈರಿಂಗ್‌ಗೆ ಆದೇಶ ನೀಡಲಾಗಿತ್ತು. ಅದರಲ್ಲಿ ಒಬ್ಬರು ಮೃತಪಟ್ಟು, ಮೂವರು ಗಾಯಗೊಂಡಿದ್ದಾರೆ.

ಪೂರ್ವಯೋಜಿತ ಕೃತ್ಯ
ಸಿಕಂದರಾಬಾದ್‌ನಲ್ಲಿ ದೊಡ್ಡ ಮಟ್ಟದ ದೊಂಬಿ ನಡೆಸಿದ ಪ್ರತಿಭಟನಾಕಾರರು ಮೊದಲೇ ಸಜ್ಜಿತರಾಗಿ ಬಂದಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಸುಮಾರು ೫೦೦೦ಕ್ಕೂ ಅಧಿಕ ಮಂದಿ ರೈಲು ನಿಲ್ದಾಣಕ್ಕೆ ಧಾವಿಸಿದ್ದರು. ಸಾಕಷ್ಟು ಜನರು ರೈಲಿನಲ್ಲಿ ಇದ್ದಾಗಲೇ ಪ್ರತಿಭಟನಾಕಾರರು ದಾಳಿ ನಡೆಸಿದರು. ದಾಳಿಗೆ ಬೆಚ್ಚಿದ ಪ್ರಯಾಣಿಕರು ಕಂಡಕಂಡಲ್ಲಿ ಓಡಿ ತಪ್ಪಿಸಿಕೊಂಡರು.

ಪೆಟ್ರೋಲ್‌ ಬಾಂಬ್‌ ಸಿಕ್ಕಿದೆ
ಈ ನಡುವೆ ರೈಲಿನ ಒಳಗಡೆ ಸೀಟೊಂದರ ಮೇಲೆ ಪೆಟ್ರೋಲ್‌ ಬಾಂಬ್‌ ಒಂದು ಪತ್ತೆಯಾಗಿದ್ದು, ದುಷ್ಕರ್ಮಿಗಳು ಇದನ್ನು ಹೊರಗಿನಿಂದ ಎಸೆದಿದ್ದಾರೆ ಎನ್ನಲಾಗಿದೆ. ಒಂದೊಮ್ಮೆ ಇದು ಸ್ಫೋಟಗೊಳ್ಳುತ್ತಿದ್ದರೆ ಪ್ರಯಾಣಿಕರ ಸಹಿತವಾಗಿ ಬೋಗಿ ಬೆಂಕಿಗೆ ಆಹುತಿಯಾಗುವ ಅಪಾಯವಿತ್ತು.

ಹಿಂಸೆಗೆ ತತ್ತರ

ಸಿಕಂದರಾಬಾದ್‌ ರೈಲು ನಿಲ್ದಾಣದ ಒಂದು ಮತ್ತು ಎರಡನೇ ಪ್ಲಾಟ್‌ಫಾರಂನಲ್ಲಿ ದೊಡ್ಡ ಮಟ್ಟದ ದೊಂಬಿ ನಡೆದಿದೆ. ಕಲ್ಲು ಮತ್ತು ದೊಣ್ಣೆಗಳನ್ನು ಹಿಡಿದು ಬಂದ ದುಷ್ಕರ್ಮಿಗಳು ಅಲ್ಲಿನ ಅಂಗಡಿಗಳನ್ನು ಮೊದಲು ಪುಡಿಗಟ್ಟಿದರು. ರೈಲುಗಳಿಗೆ ಕಲ್ಲುತೂರಾಟ ನಡೆಸಿದರು. ಕೋಲ್ಕೊತಾಗೆ ಹೊರಟಿದ್ದ ಈಸ್ಟ್‌ ಕೋಸ್ಟ್‌ ಎಕ್ಸ್‌ಪ್ರೆಸ್‌ ಮತ್ತು ಅಜಂತಾ ಎಕ್ಸ್‌ಪ್ರೆಸ್‌ನ ಕೆಲವೊಂದು ಬೋಗಿಗಳಿಗೆ ಹಾನಿ ಮಾಡಲಾಗಿದೆ.

ಪ್ರತಿಭಟನಾಕಾರರು ರೈಲ್ವೆ ಕಾರ್ಗೊಗಳನ್ನು ಹೊರಗೆಳೆದು ಟ್ರ್ಯಾಕ್‌ಗೆ ಹಾಕಿ ಬೆಂಕಿ ಹಚ್ಚಿದರು. ಕೆಲವು ಪ್ರಯಾಣಿಕರ ವಸ್ತುಗಳಿಗೂ ಬೆಂಕಿ ಹಚ್ಚಲಾಗಿದೆ. ಇವರು ಹಚ್ಚಿದ ಬೆಂಕಿಯನ್ನು ನಂದಿಸಲು ಸುಮಾರು ಎರಡು ಗಂಟೆಗಳೇ ಬೇಕಾಯಿತು. ಇಷ್ಟೇ ಅಲ್ಲ, ರೈಲು ನಿಲ್ದಾಣದ ಹೊರಗೂ ಪ್ರತಿಭಟನಾಕಾರರು ಭಾರಿ ಹಾನಿ ಮಾಡಿದ್ದು, ಬಸ್‌ಗಳಿಗೆ ಕಲ್ಲು ತೂರಾಟ ನಡೆಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Covaxin Safety: ಕೊವ್ಯಾಕ್ಸಿನ್‌ನಿಂದ ಅಡ್ಡ ಪರಿಣಾಮ ಎಂದು ಬನಾರಸ್‌ ವಿವಿ ವರದಿ; ವೈದ್ಯ ಸಂಶೋಧನಾ ಸಂಸ್ಥೆ ಆಕ್ಷೇಪ

Covaxin Safety: ಬಿಎಚ್‌ಯು ಸಂಶೋಧನೆ ಮಾಡುವ ಮುನ್ನ ಸರಿಯಾದ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿಲ್ಲ. ಸಂಶೋಧನೆಗೆ ಬಳಸಿರುವ ಜನಸಂಖ್ಯೆ ಪ್ರಮಾಣಕ್ಕೂ, ಸ್ಟಡಿ ವರದಿಗೂ ತುಂಬ ವ್ಯತ್ಯಾಸವಿದೆ. ಅಡ್ಡ ಪರಿಣಾಮ ಉಂಟಾಗಿದೆ ಎಂಬುದಾಗಿ ಹೇಳಿದವರನ್ನು ವರದಿ ತಯಾರಿಸಲು ಟೆಲಿಫೋನ್‌ ಮೂಲಕ ಸಂಪರ್ಕಿಸಲಾಗಿದೆಯೇ ಹೊರತು, ಅವರ ಅಭಿಪ್ರಾಯವನ್ನು ನೇರವಾಗಿ ಪಡೆದುಕೊಂಡಿಲ್ಲ ಎಂದು ಐಸಿಎಂಆರ್‌ ಅಸಮಾಧಾನ ವ್ಯಕ್ತಪಡಿಸಿದೆ.

VISTARANEWS.COM


on

Covaxin Safety
Koo

ನವದೆಹಲಿ: ಬ್ರಿಟನ್‌ನಲ್ಲಿ ಅಸ್ಟ್ರಾಜೆನಿನಾ ಕೊರೊನಾ ನಿರೋಧಕ ಕೋವಿಶೀಲ್ಡ್‌ ಲಸಿಕೆ ಪಡೆದವರಿಗೆ ಅಡ್ಡ ಪರಿಣಾಮ ಉಂಟಾಗಿದೆ ಎಂಬುದಾಗಿ ಸ್ವತಃ ಕಂಪನಿಯೇ ಒಪ್ಪಿಕೊಂಡ ಬಳಿಕ ಭಾರತದಲ್ಲೂ ಕೊರೊನಾ ನಿರೋಧಕ ಲಸಿಕೆಯ ಸುರಕ್ಷತೆಗೆ ಬಗ್ಗೆ ಚರ್ಚೆಯಾಗುತ್ತಿದೆ. ಅದರಲ್ಲೂ, ದೇಶೀಯವಾಗಿ ಭಾರತ್‌ ಬಯೋಟೆಕ್‌ (Bharat Biotech) ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್‌ ಅಡ್ಡಪರಿಣಾಮಗಳ ಕುರಿತು ಬನಾರಸ್‌ ಹಿಂದು ವಿವಿ (BHU) ವರದಿ ಬಿಡುಗಡೆ ಮಾಡಿದೆ. ಕೊವ್ಯಾಕ್ಸಿನ್‌ ಪಡೆದ ಮೂವರಲ್ಲಿ ಒಬ್ಬರಿಗೆ ಅಡ್ಡ ಪರಿಣಾಮ ಉಂಟಾಗಿದೆ ಎಂಬುದಾಗಿ ಬಿಎಚ್‌ಯು ಪ್ರಕಟಿಸಿದ ವರದಿಗೆ ಈಗ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ICMR) ಆಕ್ರೋಶ ವ್ಯಕ್ತಪಡಿಸಿದೆ.

ಐಸಿಎಂಆರ್‌ ಮಹಾ ನಿರ್ದೇಶಕ ರಾಜೀವ್‌ ಬಾಹ್ಲ್‌ ಅವರು ಬಿಎಚ್‌ಯು ಅಧ್ಯಯನ ವರದಿಯನ್ನು ನಿರಾಕರಿಸಿದ್ದಾರೆ. “ಬಿಎಚ್‌ಯು ಸಂಶೋಧನೆ ಮಾಡುವ ಮುನ್ನ ಸರಿಯಾದ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿಲ್ಲ. ಸಂಶೋಧನೆಗೆ ಬಳಸಿರುವ ಜನಸಂಖ್ಯೆ ಪ್ರಮಾಣಕ್ಕೂ, ಸ್ಟಡಿ ವರದಿಗೂ ತುಂಬ ವ್ಯತ್ಯಾಸವಿದೆ. ಅಡ್ಡ ಪರಿಣಾಮ ಉಂಟಾಗಿದೆ ಎಂಬುದಾಗಿ ಹೇಳಿದವರನ್ನು ವರದಿ ತಯಾರಿಸಲು ಟೆಲಿಫೋನ್‌ ಮೂಲಕ ಸಂಪರ್ಕಿಸಲಾಗಿದೆಯೇ ಹೊರತು, ಅವರ ಅಭಿಪ್ರಾಯವನ್ನು ನೇರವಾಗಿ ಪಡೆದುಕೊಂಡಿಲ್ಲ. ಸಂಶೋಧನೆಗೆ ಬಳಸಿರುವ ಅಂಕಿ-ಅಂಶಗಳನ್ನು ಸರಿಯಾಗಿ ಅವಲೋಕನ ಮಾಡಿಲ್ಲ” ಎಂಬುದಾಗಿ ರಾಜೀವ್‌ ಬಾಹ್ಲ್‌ ಹೇಳಿದ್ದಾರೆ.

“ಲಸಿಕೆಯ ಅಡ್ಡ ಪರಿಣಾಮ, ಲಸಿಕೆಯ ಸುರಕ್ಷತೆ ಬಗ್ಗೆ ಅಧ್ಯಯನ ಮಾಡಲು ತುಂಬ ಮಾನದಂಡಗಳನ್ನು ಅನುಸರಿಸಬೇಕಾಗುತ್ತದೆ. ಬಿಎಚ್‌ಯು ಇಂತಹ ಮಾನದಂಡಗಳನ್ನು ಅನುಸರಿಸುವುದು ಬಿಡಿ, ಅಧ್ಯಯನ ಮಾಡುವ ತಜ್ಞರಿಗೆ ತಾಂತ್ರಿಕ ಹಾಗೂ ಹಣಕಾಸು ನೆರವು ಕೂಡ ಒದಗಿಸಿಲ್ಲ. ಹಾಗಾಗಿ, ಲಸಿಕೆಯ ಸುರಕ್ಷತೆಯ ಬಗ್ಗೆ ಬನಾರಸ್‌ ಹಿಂದು ವಿವಿ ಮಾಡಿದ ಸಂಶೋಧನಾ ವರದಿಯು ವೈಜ್ಞಾನಿಕತೆಯ ಆಧಾರದ ಮೇಲಿಲ್ಲ” ಎಂದು ಹೇಳಿದ್ದಾರೆ.

ಕೊವ್ಯಾಕ್ಸಿನ್‌ ಲಸಿಕೆ ಪಡೆದ ಸುಮಾರು 926 ಜನರನ್ನು ಸಂಪರ್ಕಿಸಿ ಲಸಿಕೆಯ ಸುರಕ್ಷತೆ, ಅಡ್ಡ ಪರಿಣಾಮಗಳ ಕುರಿತು ಅಧ್ಯಯನ ವರದಿ ತಯಾರಿಸಿದೆ. ಲಸಿಕೆ ಪಡೆದ ಮೂವರಲ್ಲಿ ಒಬ್ಬರಿಗೆ ಅಡ್ಡ ಪರಿಣಾಮ ಉಂಟಾಗಿದೆ. ಲಸಿಕೆ ಪಡೆದವರಿಗೆ ಪಾರ್ಶ್ವವಾಯು, ನರಗಳಿಗೆ ಸಂಬಂಧಿಸಿದ ಕಾಯಿಲೆ, ಕೆಮ್ಮು, ಮೂಗು ಸೋರುವಿಕೆ, ಗಂಟಲು ಕೆರೆತ, ಉಸಿರಾಟ ಸಮಸ್ಯೆ ಸೇರಿ ಹಲವು ಅಡ್ಡ ಪರಿಣಾಮಗಳು ಕಾಣಿಸಿಕೊಂಡಿವೆ” ಎಂಬುದಾಗಿ ವರದಿ ತಿಳಿಸಿತ್ತು.

ಭಾರತ್‌ ಬಯೋಟೆಕ್‌ ಹೇಳುವುದೇನು?

“ಸುರಕ್ಷತೆ ಹಾಗೂ ದಕ್ಷತೆಯೇ ಮೊದಲು ಎಂಬ ದೃಷ್ಟಿಕೋನದಿಂದ ಹಲವು ಮಾನದಂಡಗಳನ್ನು ಇಟ್ಟುಕೊಂಡು ಲಸಿಕೆಯನ್ನು ಉತ್ಪಾದಿಸಲಾಗಿದೆ. ಭಾರತದಲ್ಲಿ ಕೇಂದ್ರ ಸರ್ಕಾರದ ಲಸಿಕಾಕರಣ ಯೋಜನೆಯ ವೇಳೆ ಅತಿ ಹೆಚ್ಚು ಪ್ರಯೋಗಕ್ಕೀಡಾದ ಲಸಿಕೆ ಎಂದರೆ ಅದು ಕೊವ್ಯಾಕ್ಸಿನ್‌ ಮಾತ್ರ. ಪರವಾನಗಿ ಪ್ರಕ್ರಿಯೆಯ ವೇಳೆ ಸುಮಾರು 27 ಸಾವಿರ ಅಂಶಗಳ ಕುರಿತು ಅಧ್ಯಯನ, ಪರಿಶೀಲನೆ ನಡೆಸಲಾಗಿದೆ. ವೈದ್ಯಕೀಯ ಪ್ರಯೋಗಕ್ಕೂ ಲಸಿಕೆಯನ್ನು ಒಳಪಡಿಸಲಾಗಿದೆ. ಹಾಗಾಗಿ, ಲಸಿಕೆಯು ಸಂಪೂರ್ಣವಾಗಿ ಸುರಕ್ಷಿತವಾಗಿದೆ” ಎಂಬುದಾಗಿ ಭಾರತ್‌ ಬಯೋಟೆಕ್‌ ಕಂಪನಿ ತಿಳಿಸಿದೆ.

ಇದನ್ನೂ ಓದಿ: Covaxin: ಕೊವ್ಯಾಕ್ಸಿನ್‌ ಸುರಕ್ಷಿತ ಲಸಿಕೆ ಎಂದ ಭಾರತ್‌ ಬಯೋಟೆಕ್;‌ ಸೈಡ್‌ ಎಫೆಕ್ಟ್‌ ಆರೋಪದ ಬೆನ್ನಲ್ಲೇ ಸ್ಪಷ್ಟನೆ!

Continue Reading

ಪ್ರವಾಸ

Trichy Tour: ದಾಂಪತ್ಯದ ಲವಲವಿಕೆಯನ್ನು ಮತ್ತೆ ಜೀವಂತಗೊಳಿಸಲು ತಿರುಚಿರಾಪಳ್ಳಿಗೆ ಹೋಗಿ ಬನ್ನಿ!

ನಿತ್ಯದ ಬದುಕಿನ ಒತ್ತಡದಲ್ಲಿ ದಂಪತಿಗೆ ಪರಸ್ಪರ ಸಮಯ ಕೊಡಲು ಅವಕಾಶವೇ ಸಿಗುವುದಿಲ್ಲ. ಇಂತವರು ಬಿಡುವು ಮಾಡಿಕೊಂಡು ಒಮ್ಮೆ ತಿರುಚಿರಾಪಳ್ಳಿಗೆ (Trichy Tour) ಬಂದರೆ ಬದುಕಿನಲ್ಲಿ ಮತ್ತೆ ಪ್ರೀತಿ ಹುಟ್ಟದೇ ಇರಲು ಸಾಧ್ಯವೇ ಇಲ್ಲ. ಅಂತಹ ರೊಮ್ಯಾಂಟಿಕ್ ಸ್ಥಳಗಳು ಇಲ್ಲಿವೆ.

VISTARANEWS.COM


on

By

Trichy Tour
Koo

ಒಟ್ಟಿಗೆ ಇದ್ದರೂ ಕೆಲಸದ ಒತ್ತಡವನ್ನೆಲ್ಲ ಬದಿಗೊತ್ತಿ ವರ್ಷದಲ್ಲೊಮ್ಮೆಯಾದರೂ ಪತಿ – ಪತ್ನಿ (Couple) ಏಕಾಂತವಾಗಿ ಸಮಯ ಕಳೆಯಬೇಕು ಎಂದು ಬಯಸುವುದು ಸಹಜ. ಇಂಥವರಿಗೆ ಸೂಕ್ತವೆನಿಸುವ ಹಲವಾರು ತಾಣಗಳು ಭಾರತದಲ್ಲಿ (india) ಇದೆ. ಅದರಲ್ಲಿ ತಿರುಚಿರಾಪಳ್ಳಿ (Trichy Tour) ಕೂಡ ಒಂದು.

ತಿರುಚಿರಾಪಳ್ಳಿ ಅಥವಾ ತಿರುಚಿ ಗಡಿಬಿಡಿಯ ಜೀವನದಿಂದ ದೂರವಿರಲು ಬಯಸುವ ದಂಪತಿ ಖಂಡಿತವಾಗಿಯೂ ಭೇಟಿ ನೀಡಬೇಕಾದ ಸ್ಥಳ. ಇಲ್ಲಿನ ಪುರಾತನ ದೇವಾಲಯಗಳು, ಶಾಂತವಾದ ನದಿ, ರುಚಿಕರವಾದ ಆಹಾರ, ಆಳವಾದ ಸಂಸ್ಕೃತಿ ಮತ್ತು ಸಂಪ್ರದಾಯಗಳ ಜೊತೆಗೆ ಸುಂದರವಾದ ನೈಸರ್ಗಿಕ ದೃಶ್ಯಾವಳಿಗಳನ್ನು ಕಣ್ತುಂಬಿಕೊಳ್ಳಬಹುದು. ರೋಮ್ಯಾಂಟಿಕ್ ಮತ್ತು ಸಾಹಸಮಯ ಪ್ರವಾಸಗಳಿಗೆ ಸೂಕ್ತವಾಗಿರುವ ತಿರುಚಿಯಲ್ಲಿ ಯಾವುದಾದರೂ ಹಳೆಯ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಕೈ ಹಿಡಿದುಕೊಂಡು ಹೋಗುತ್ತಿರುವಾಗ ಅಥವಾ ನದಿಯ ದಡದಲ್ಲಿ ಒಟ್ಟಿಗೆ ವಿವಿಧ ಭಕ್ಷ್ಯಗಳನ್ನು ಸವಿಯುತ್ತಿರುವಾಗ ನಿಮ್ಮ ಪ್ರೇಮ ಕಥೆಯ ಪ್ರಾರಂಭದ ದಿನಗಳ ನೆನಪು ಚಿಗುರೊಡೆಯದೆ ಇರಲಾರದು.

ತಿರುಚಿ ಎಂದೂ ಕರೆಯಲ್ಪಡುವ ತಿರುಚಿರಾಪಳ್ಳಿಯು ಇತಿಹಾಸ, ಸಂಸ್ಕೃತಿ ಮತ್ತು ಸೌಂದರ್ಯದ ನಗರವಾಗಿದೆ. ಇದು ಭಾರತದ ಅತ್ಯುತ್ತಮ ಪ್ರಣಯ ವಿಹಾರ ತಾಣಗಳಲ್ಲಿ ಒಂದಾಗಿದೆ. ತಮಿಳುನಾಡಿನ ದಕ್ಷಿಣ ರಾಜ್ಯದಲ್ಲಿರುವ ಪ್ರಾಚೀನ ವಾಸ್ತುಶೈಲಿಯು ಶಾಂತವಾದ ನೈಸರ್ಗಿಕ ಭೂದೃಶ್ಯಗಳು ಮತ್ತು ರುಚಿಕರವಾದ ಆಹಾರದೊಂದಿಗೆ ಬೆರೆತಿರುವ ಕೆಲವು ಕ್ಷಣಗಳನ್ನು ಜೀವಂತಗೊಳಿಸುತ್ತದೆ.

ಪ್ರಾಚೀನ ದೇವಾಲಯಗಳು

ಸ್ಥಳದ ಸುತ್ತಲೂ ಹರಡಿರುವ ಹಲವಾರು ದೇವಾಲಯಗಳಿಗಿಂತ ಹೆಚ್ಚು ಆಕರ್ಷಕವಾದದ್ದು ಯಾವುದು? ತಿರುಚ್ಚಿಯು ಅನೇಕ ಪವಿತ್ರ ದೇವಾಲಯಗಳೊಂದಿಗೆ ಅಗಾಧವಾದ ಧಾರ್ಮಿಕ ಹಿನ್ನೆಲೆಯನ್ನು ಹೊಂದಿದೆ. ಅವುಗಳಲ್ಲಿ ದೈವಿಕ ವೈಭವ ಮತ್ತು ವಾಸ್ತುಶಿಲ್ಪದ ಅದ್ಭುತಗಳ ಸಾರಾಂಶವಾಗಿರುವ ಶ್ರೀ ರಂಗನಾಥಸ್ವಾಮಿ ದೇವಾಲಯವೂ ಒಂದು. ಭಗವಾನ್ ವಿಷ್ಣುವಿನ ರಂಗನಾಥ ಅವತಾರದಲ್ಲಿ ನಿರ್ಮಿಸಲಾದ ಈ ದೇವಾಲಯದ ಸಂಕೀರ್ಣವು ತನ್ನ ಸಂಕೀರ್ಣವಾದ ಕೆತ್ತನೆಗಳು, ಎತ್ತರದ ಗೋಪುರಗಳು ಮತ್ತು ಪವಿತ್ರ ತೊಟ್ಟಿಗಳಿಂದ ಭಕ್ತರನ್ನು ಮೋಡಿಮಾಡುತ್ತದೆ. ಇಲ್ಲಿನ ವಿಸ್ಮಯಕಾರಿ ರಚನೆಗಳ ಮಧ್ಯೆ ದಂಪತಿ ಆಧ್ಯಾತ್ಮಿಕ ವಾತಾವರಣದಲ್ಲಿ ತಮ್ಮನ್ನು ತಾವು ನೆನೆಯಬಹುದು.


ರಾಕ್‌ಫೋರ್ಟ್ ಟೆಂಪಲ್

ತಪ್ಪಿಸಿಕೊಳ್ಳಬಾರದ ಮತ್ತೊಂದು ದೇವಾಲಯ ರಾಕ್‌ಫೋರ್ಟ್ ಟೆಂಪಲ್. ನಗರದ ಮೇಲೆ ಪಕ್ಷಿನೋಟವನ್ನು ನೀಡುವ ಬೃಹತ್ ಬಂಡೆಯ ಮೇಲೆ ಕುಳಿತಿರುವ ಈ ದೇಗುಲ 437 ಕಲ್ಲು ಮೆಟ್ಟಿಲುಗಳನ್ನು ಒಟ್ಟಿಗೆ ಹತ್ತುವುದು ಪ್ರೀತಿಯ ಸಂಬಂಧವನ್ನು ಪರೀಕ್ಷಿಸುತ್ತದೆ; ಅಕ್ಕಪಕ್ಕದಲ್ಲಿ ಸವಾಲುಗಳನ್ನು ಎದುರಿಸುವ ಮೂಲಕ ದಂಪತಿ ತಮ್ಮ ಸಂಬಂಧವನ್ನು ಬಲಪಡಿಸಲು ಇದು ಒಂದು ಉತ್ತಮ ಮಾರ್ಗವಾಗಿದೆ. ಅವರ ಉತ್ತುಂಗದಲ್ಲಿ ಗಣಪತಿ ಮತ್ತು ನಟರಾಜನಿಗೆ ಸಮರ್ಪಿತವಾದ ಪ್ರಾಚೀನ ಪಲ್ಲವ-ಯುಗದ ದೇವಾಲಯಗಳಿವೆ. ಅಲ್ಲಿ ಪ್ರೇಮಿಗಳು ತಮ್ಮ ಪ್ರೀತಿಯ ಜೀವನದಲ್ಲಿ ಶಾಂತಿಗಾಗಿ ಪ್ರಾರ್ಥಿಸಬಹುದು.

ಕಾವೇರಿ ನದಿ ತೀರ

ಕಾವೇರಿ ನದಿಯ ದಡವು ರಮಣೀಯ ಸೌಂದರ್ಯದೊಂದಿಗೆ ಶಾಂತಿಯನ್ನು ನೀಡುತ್ತದೆ. ಗದ್ದಲದ ಸ್ಥಳಗಳಿಂದ ಸ್ವಲ್ಪ ದೂರವಾಗಿ ಶಾಂತತೆವಾಗಿ ಪ್ರಕೃತಿಯ ಮಧ್ಯೆ ಸುತ್ತಲು ಬಯಸಿದರೆ ಈ ತೀರದಲ್ಲಿ ನಿಧಾನವಾಗಿ ನಡೆಯಿರಿ. ದಂಪತಿ ಮೌನವಾಗಿ ದೋಣಿ ವಿಹಾರಕ್ಕೆ ಹೋಗಬಹುದು ಅಥವಾ ನದಿಯ ಪಕ್ಕದಲ್ಲಿ ಹಾಕಲಾದ ಬೆಂಚುಗಳ ಮೇಲೆ ಕುಳಿತುಕೊಳ್ಳಬಹುದು. ದೂರದ ಪರ್ವತಗಳ ಹಿಂದೆ ಸೂರ್ಯ ಮುಳುಗಿದ ಅನಂತರ ಕಿತ್ತಳೆ ಬಣ್ಣದ ಆಕಾಶವನ್ನು ವೀಕ್ಷಿಸಬಹುದು.


ಪಾಕಶಾಲೆ

ರೊಮ್ಯಾಂಟಿಕ್ ಗೆಟ್‌ವೇಗಳ ವಿಷಯಕ್ಕೆ ಬಂದಾಗ ಸ್ಥಳೀಯ ಆಹಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳದಿರುವುದು ಹೇಗೆ? ತಿರುಚಿ ನಿಮಗೆ ಅದಕ್ಕಿಂತ ಹೆಚ್ಚಿನದನ್ನು ನೀಡುತ್ತದೆ. ಸಾಂಪ್ರದಾಯಿಕ ತಮಿಳುನಾಡಿನ ತಿನಿಸುಗಳಿಂದ ಹಿಡಿದು ಅಂತಾರಾಷ್ಟ್ರೀಯ ಪಾಕಪದ್ಧತಿಗಳವರೆಗೆ ರೆಸ್ಟೋರೆಂಟ್‌ಗಳು ಇಲ್ಲಿ ವಿಭಿನ್ನ ರುಚಿ ಮೊಗ್ಗುಗಳನ್ನು ಪೂರೈಸುತ್ತವೆ. ದಂಪತಿಗಳು ಸ್ಥಳೀಯ ತಿನಿಸುಗಳಲ್ಲಿ ದೋಸೆ, ಇಡ್ಲಿ ಮತ್ತು ಬಿರಿಯಾನಿಯನ್ನು ಪ್ರಯತ್ನಿಸಬೇಕು ಅಥವಾ ನದಿಯ ನೋಟವನ್ನು ಆನಂದಿಸುತ್ತಿರುವಾಗ ಉನ್ನತ ಮಟ್ಟದ ರೆಸ್ಟೋರೆಂಟ್‌ನಲ್ಲಿ ಕ್ಯಾಂಡಲ್‌ಲೈಟ್ ಡಿನ್ನರ್ ಮಾಡಬಹುದು.

ಸಾಂಸ್ಕೃತಿಕ ಪ್ರದರ್ಶನ

ಸಂಸ್ಕೃತಿಗೆ ಹತ್ತಿರವಾಗುವುದು ನಿಮ್ಮ ಪ್ರೀತಿಪಾತ್ರರೊಂದಿಗಿನ ಯಾವುದೇ ಪ್ರವಾಸದ ಪ್ರಮುಖ ಭಾಗವಾಗಿದೆ ಮತ್ತು ಈ ನಿಟ್ಟಿನಲ್ಲಿ ತಿರುಚಿಯು ಸಾಕಷ್ಟು ಕೊಡುಗೆಗಳನ್ನು ಹೊಂದಿದೆ. ಪ್ರದೇಶದ ಶ್ರೀಮಂತ ಕಲಾತ್ಮಕ ಸಂಪ್ರದಾಯಗಳನ್ನು ಪ್ರದರ್ಶಿಸುವ ಶಾಸ್ತ್ರೀಯ ಸಂಗೀತ ಕಛೇರಿಗಳು ಮತ್ತು ನೃತ್ಯ ಕಾರ್ಯಕ್ರಮಗಳಿಗೆ ಹಾಜರಾಗಿ ಅಥವಾ ಪ್ರದೇಶದ ವಿಶಿಷ್ಟವಾದ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ರೋಮಾಂಚಕ ಮಾರುಕಟ್ಟೆಗಳಿಗೆ ಭೇಟಿ ನೀಡಿ. ಯಾಕೆಂದರೆ ಮನೆಗೆ ಮರಳಿದ ಸ್ಮಾರಕಗಳು ಶಾಶ್ವತವಾಗಿ ಹತ್ತಿರದಲ್ಲಿ ಉಳಿಯುತ್ತವೆ. ಮಸಾಲೆಯುಕ್ತ ಗಾಳಿಯ ನಡುವೆ ಕೈ- ಕೈ ಹಿಡಿದು ಬಿಡುವಿಲ್ಲದ ಬೀದಿಗಳಲ್ಲಿ ನಡೆಯುವುದು ದಂಪತಿ ಹೃದಯದಲ್ಲಿ ದೀರ್ಘಕಾಲ ಬದುಕುವ ನೆನಪುಗಳನ್ನು ಸೃಷ್ಟಿಸುತ್ತದೆ.

ಇದನ್ನೂ ಓದಿ: Dwarka Tour: ದ್ವಾರಕೆಗೆ ಹೋದಾಗ ಏನೇನು ನೋಡಬಹುದು?

ಪ್ರಕೃತಿಯ ನಡುವೆ ಒಂದಷ್ಟು ಹೊತ್ತು

ನಮ್ಮ ರಜಾದಿನಗಳಲ್ಲಿ ಬೇಕಾಗಿರುವುದು ಶಾಂತಿ. ನಗರಗಳು ಕೆಲವೊಮ್ಮೆ ನಮ್ಮನ್ನು ಬ್ಯುಸಿಯಾಗಿರುವಂತೆ ಮಾಡುತ್ತದೆ. ಆದ್ದರಿಂದ ತಿರುಚ್ಚಿಗೆ ಬಂದರೆ ಹೊರವಲಯವನ್ನು ನೋಡಬೇಡಿ. ಸುತ್ತಮುತ್ತಲಿನ ಹಚ್ಚ ಹಸಿರಿನಿಂದಾಗಿ ಪ್ರಶಾಂತ ವಾತಾವರಣವನ್ನು ನೋಡಿ. ಜಲಪಾತಗಳ ಶಬ್ದಗಳನ್ನು ಕಿವಿಕೊಟ್ಟು ಆಲಿಸಿ. ದಂಪತಿಗಳು ಪರಸ್ಪರ ಜೊತೆಯಾಗಿ ಪ್ರಕೃತಿಯೊಂದಿಗೆ ಇರಲು ಇದಕ್ಕಿಂತ ಹೆಚ್ಚು ನೆಮ್ಮದಿಯ ತಾಣ ಬೇರೆ ಇರಲಾರದು ಎಂದೆನಿಸಿದರೆ ತಪ್ಪಿಲ್ಲ.

Continue Reading

ವೈರಲ್ ನ್ಯೂಸ್

Yamuna Bridge: ಯಮುನಾ ಸೇತುವೆಯ ಅದ್ಭುತ ಚಿತ್ರ ಹಂಚಿಕೊಂಡ ಭಾರತೀಯ ರೈಲ್ವೆ: ವಾವ್‌ ತಾಜ್‌ ಎಂದ ನೆಟ್ಟಿಗರು; ನೀವೂ ನೋಡಿ

Yamuna Bridge: ರೈಲ್ವೆ ಸಚಿವಾಲಯ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಆಗ್ರಾದಲ್ಲಿನ ಯಮುನಾ ರೈಲ್ವೆ ಸೇತುವೆಯ ಅದ್ಭುತ ಚಿತ್ರವನ್ನು ಹಂಚಿಕೊಂಡಿದೆ. ರೈಲ್ವೆ ಹಂಚಿಕೊಂಡಿರುವ, ಡ್ರೋನ್‌ ಸೆರೆಹಿಡಿರುವ ಈ ಚಿತ್ರದಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಐತಿಹಾಸಿಕ ಸೇತುವೆಯ ಹಿನ್ನೆಲೆಯಲ್ಲಿ ತಾಜ್‌ಮಹಲ್‌ ಕಾಣಿಸುತ್ತಿದ್ದು, ನೆಟ್ಟಿಗರು ಮನ ಸೋತಿದ್ದಾರೆ. ಫೋಟೊ ಹಂಚಿಕೊಂಡ ಕೆಲವೇ ಹೊತ್ತಿನಲ್ಲಿ ಇದು ವೈರಲ್‌ ಆಗಿದೆ. ಈಗಾಗಲೇ 28 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 490ಕ್ಕೂ ಹೆಚ್ಚು ಮಂದಿ ಲೈಕ್‌ ಬಟನ್‌ ಒತ್ತಿದ್ದಾರೆ. 200ಕ್ಕೂ ಹೆಚ್ಚು ಶೇರ್‌ ಆಗಿದೆ. ಯಮುನೆಯ ಸೌಂದರ್ಯಕ್ಕೆ ನೆಟ್ಟಿಗರು ಮನ ಸೋತಿದ್ದಾರೆ.

VISTARANEWS.COM


on

Yamuna Bridge
Koo

ಹೊಸದಿಲ್ಲಿ: ಭಾರತೀಯ ರೈಲ್ವೆ ಇಲಾಖೆ (Railways Ministry) ಆಗಾಗ ತನ್ನ ಕಾಮಗಾರಿಗಳ ವಿವರಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತದೆ. ಸ್ವೇಷನ್‌, ಸೇತುವೆ ನಿರ್ಮಾಣ ಕಾಮಗಾರಿ, ಹೊಸ ಯೋಜನೆಗಳ ಮಾಹಿತಿಯನ್ನು ನೀಡುತ್ತಿರುತ್ತದೆ. ಇದೀಗ ರೈಲ್ವೆ ಸಚಿವಾಲಯ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಆಗ್ರಾದಲ್ಲಿನ ಯಮುನಾ ರೈಲ್ವೆ ಸೇತುವೆಯ ಅದ್ಭುತ ಚಿತ್ರವನ್ನು ಹಂಚಿಕೊಂಡಿದೆ. ರೈಲ್ವೆ ಹಂಚಿಕೊಂಡಿರುವ, ಡ್ರೋನ್‌ ಸೆರೆಹಿಡಿರುವ ಈ ಚಿತ್ರದಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಐತಿಹಾಸಿಕ ಸೇತುವೆಯ ಹಿನ್ನೆಲೆಯಲ್ಲಿ ತಾಜ್‌ಮಹಲ್‌ ಕಾಣಿಸುತ್ತಿದ್ದು, ನೆಟ್ಟಿಗರು ಮನ ಸೋತಿದ್ದಾರೆ (Viral News).

“ಆಗ್ರಾದಲ್ಲಿನ ಯಮುನಾ ಸೇತುವೆಯ ಪಕ್ಷಿ ನೋಟ. ಸೇತುವೆಯ ಹಿನ್ನೆಲೆಯಲ್ಲಿ ಭವ್ಯವಾದ ತಾಜ್ ಮಹಲ್ ಅನ್ನೂ ಕಾಣಬಹುದುʼʼ ಎಂದು ಫೋಟೊಕ್ಕೆ ಕ್ಯಾಪ್ಶನ್‌ ನೀಡಲಾಗಿದೆ. ಫೋಟೊ ಹಂಚಿಕೊಂಡ ಕೆಲವೇ ಹೊತ್ತಿನಲ್ಲಿ ಇದು ವೈರಲ್‌ ಆಗಿದೆ. ಈಗಾಗಲೇ 28 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 490ಕ್ಕೂ ಹೆಚ್ಚು ಮಂದಿ ಲೈಕ್‌ ಬಟನ್‌ ಒತ್ತಿದ್ದಾರೆ. 200ಕ್ಕೂ ಹೆಚ್ಚು ಶೇರ್‌ ಆಗಿದೆ. ಯಮುನೆಯ ಸೌಂದರ್ಯಕ್ಕೆ ನೆಟ್ಟಿಗರು ಮನ ಸೋತಿದ್ದಾರೆ.

ನೆಟ್ಟಿಗರು ಏನಂದ್ರು?

ʼʼವಾವ್‌ ತಾಜ್‌ʼʼ ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ʼʼಹಿನ್ನೆಲೆಯಲ್ಲಿ ತಾಜ್‌ಮಹಲ್‌ ಕಾಣಿಸುತ್ತಿದೆʼʼ ಎಂದು ಇನ್ನೊಬ್ಬರು ಹೇಳಿದ್ದಾರೆ. ʼʼಜೈ ಭಾರತ್‌, ಜೈ ಭಾರತಿʼʼ ಎಂದು ಮತ್ತೊಬ್ಬರು ಹೇಳಿದ್ದಾರೆ. ʼʼವಿಹಂಗಮ ದೃಶ್ಯʼʼ ಎಂದು ಮಗದೊಬ್ಬರು ಉದ್ಘರಿಸಿದ್ದಾರೆ. ʼʼನಿಜವಾಗಿಯೂ ಈ ಫೋಟೊ ಮನಮೋಹಕವಾಗಿದೆʼʼ ಎಂದು ನೆಟ್ಟಿಗರೊಬ್ಬರು ಮೆಚ್ಚುಗೆ ಸೂಚಿಸಿದ್ದಾರೆ. ಒಟ್ಟಿನಲ್ಲಿ ಯಮುನೆಯ ಒನಪು, ಸೇತುವೆಯ ಗಾಂಭೀರ್ಯ, ತಾಜ್‌ ಮಹಲ್‌ನ ಸೌಂದರ್ಯ ಹಲವರ ಗಮನ ಸೆಳೆದಿದ್ದು ಸುಳ್ಳಲ್ಲ.

ಶತಮಾನಗಳ ಇತಿಹಾಸ

ವಿಶೇಷವೆಂದರೆ ಭಾರತೀಯ ರೈಲ್ವೆಯ ಪ್ರಮುಖ ಜೀವನಾಡಿಯಾದ ಈ ಸೇತುವೆ 1875ರಲ್ಲಿ ಸಂಚಾರಕ್ಕೆ ಮುಕ್ತವಾಗಿತ್ತು. ಆಗ್ರಾ ಈಸ್ಟ್ ಬ್ಯಾಂಕ್ ನಿಲ್ದಾಣ ಮತ್ತು ಆಗ್ರಾ ಕೋಟೆ ನಿಲ್ದಾಣವನ್ನು ಇದು ಸಂಪರ್ಕಿಸುತ್ತದೆ. ಶತಮಾನಗಳ ಇತಿಹಾಸ ಹೊಂದಿರುವ ಯಮುನಾ ಸೇತುವೆಯ ಸಮೀಪದ ಆಗ್ರಾ ರೈಲ್ವೆ ನಿಲ್ದಾಣವು ಅತ್ಯಂತ ಜನನಿಬಿಡ ರೈಲ್ವೆ ನಿಲ್ದಾಣಗಳಲ್ಲಿ ಒಂದಾಗಿದೆ. ಇದು ಪ್ರಯಾಣಿಕರು ಮತ್ತು ಸರಕುಗಳೆರಡಕ್ಕೂ ಪ್ರಮುಖ ಸಾರಿಗೆ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಜತೆಗೆ ಆಗ್ರಾವನ್ನು ಭಾರತದ ಇತರ ಭಾಗಗಳೊಂದಿಗೆ ಸಂಪರ್ಕಿಸುತ್ತದೆ.

ಜನರೊಂದಿಗೆ ನಿರಂತರ ಸಂಪರ್ಕ

ರೈಲ್ವೆ ಸಚಿವಾಲಯವು ರೈಲುಗಳು ಮತ್ತು ಅವುಗಳ ಸೇವೆಗಳ ಬಗ್ಗೆ ಆಗಾಗ ಆಸಕ್ತಿದಾಯಕ ಸಂಗತಿಗಳು ಮತ್ತು ಮಾಹಿತಿಯನ್ನು ಹಂಚಿಕೊಂಡು ಜನರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತದೆ. ಕೆಲವು ವಾರಗಳ ಹಿಂದೆ ಸಚಿವಾಲಯವು ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಗಾಗಿ ನಿರ್ಮಿಸಲಾದ ಗುಜರಾತ್‌ನ ಔರಂಗ ಸೇತುವೆಯ ಅದ್ಭುತ ಚಿತ್ರವನ್ನು ಹಂಚಿಕೊಂಡಿತ್ತು. ವಲ್ಸಾದ್ ಜಿಲ್ಲೆಯ ಔರಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆಯ ಕಾಮಗಾರಿ 2023ರ ಆಗಸ್ಟ್‌ನಲ್ಲಿ ಪೂರ್ಣಗೊಂಡಿತ್ತು. ಜತೆಗೆ ಪಶ್ಚಿಮ ಘಟ್ಟದ ಹಸಿರಿನ ನಡುವೆ, ಗುಡ್ಡಗಳ ಮಧ್ಯೆ ಚಲಿಸುವ ರೈಲಿನ ವಿಡಿಯೊವನ್ನು ಇತ್ತೀಚೆಗೆ ಹಂಚಿಕೊಂಡಿತ್ತು. ʼʼಸ್ವರ್ಗ ಸದೃಶ ಪಶ್ಚಿಮ ಘಟ್ಟದ ಸೌಂದರ್ಯವನ್ನು ಭಾರತೀಯ ರೈಲ್ವೆಯೊಂದಿಗೆ ಆನಂದಿಸಿʼʼ ಎನ್ನುವ ಶೀರ್ಷಿಕೆಯಡಿ ಹಂಚಿಕೊಂಡ ಈ ಪೋಸ್ಟ್‌ಗೂ ನೂರಾರು ಲೈಕ್‌ಗಳು ಸಂದಿವೆ.

ಇದನ್ನೂ ಓದಿ: India’s T20 World Cup Jersey: ಟಿ20 ವಿಶ್ವಕಪ್​ಗೆ ಹೊಸ ಜೆರ್ಸಿಯಲ್ಲಿ ಆಡಲಿದೆ ಭಾರತ; ಜೆರ್ಸಿ ಫೋಟೊ ವೈರಲ್​

Continue Reading

ಪ್ರಮುಖ ಸುದ್ದಿ

Road Accident: ಪಿಕ್‌ಅಪ್‌ ವಾಹನ ಕಂದಕಕ್ಕೆ ಬಿದ್ದು 18 ಕಾರ್ಮಿಕರ ದುರ್ಮರಣ; ಕೆಲಸಕ್ಕೆ ಹೊರಟವರು ಮಸಣಕ್ಕೆ!

Road Accident: ಅಪಘಾತ ಸಂಭವಿಸಿ 18 ಜನ ಮೃತಪಟ್ಟ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ವಿಜಯ್‌ ಶರ್ಮಾ ಸಂತಾಪ ಸೂಚಿಸಿದ್ದಾರೆ. ಕವಾರ್ಧ ಜಿಲ್ಲೆಯಲ್ಲಿ ಪಿಕ್‌ಅಪ್‌ ವಾಹನ ಕಂದಕಕ್ಕೆ ಉರುಳಿ 15 ಜನ ಮೃತಪಟ್ಟಿರುವ ಸುದ್ದಿ ತಿಳಿದು ಅತೀವ ನೋವಾಯಿತು. ಕುಟುಂಬಸ್ಥರ ನೋವಿನಲ್ಲಿ ನಾನು ಕೂಡ ಭಾಗಿಯಾಗಿದ್ದೇನೆ ಎಂದು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಅವರು ಪೋಸ್ಟ್‌ ಮಾಡಿದ್ದಾರೆ.

VISTARANEWS.COM


on

Road Accident
Koo

ರಾಯ್‌ಪುರ: ಛತ್ತೀಸ್‌ಗಢದ ಕವಾರ್ಧ ಜಿಲ್ಲೆಯಲ್ಲಿ ಭೀಕರ ಅಪಘಾತ (Road Accident) ಸಂಭವಿಸಿದ್ದು, 18 ಕಾರ್ಮಿಕರು ಮೃತಪಟ್ಟಿದ್ದಾರೆ. ಛತ್ತೀಸ್‌ಗಢದ (Chhattisgarh) ಕವಾರ್ಧ (Kawardha) ಪ್ರದೇಶದಲ್ಲಿ ಸುಮಾರು 25-30 ಕಾರ್ಮಿಕರಿದ್ದ ಪಿಕ್‌ಅಪ್‌ ವಾಹನವು ತೆರಳುತ್ತಿತ್ತು. ಇದೇ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬಾಹ್‌ಪನಿ ಪ್ರದೇಶದ ಕಂದಕಕ್ಕೆ ಉರುಳಿದೆ. 8 ಜನರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಸೋಮವಾರ (ಮೇ 20) ಬೆಳಗಿನ ಜಾವವೇ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಬೈಗಾ ಬುಡಕಟ್ಟು ಸಮುದಾಯದವರು ಕೆಲಸಕ್ಕೆಂದು ಪಿಕ್‌ಅಪ್‌ ವಾಹನದಲ್ಲಿ ತೆರಳುತ್ತಿದ್ದರು. ಸುಮಾರು 20 ಅಡಿ ಆಳದ ಕಂದಕಕ್ಕೆ ಬಸ್‌ ಉರುಳಿದ ಕಾರಣ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತ ಸಂಭವಿಸುತ್ತಲೇ ಆಂಬುಲೆನ್ಸ್‌ ವ್ಯವಸ್ಥೆ ಮಾಡಲಾಯಿತಾದರೂ ವಾಹನ ಬಿದ್ದ ತೀವ್ರತೆಗೆ ಗಂಭೀರವಾಗಿ ಗಾಯಗೊಂಡಿದ್ದ ಕಾರ್ಮಿಕರು ಮೃತಪಟ್ಟಿದ್ದಾರೆ. ಮೃತರಲ್ಲಿ ಮಹಿಳೆಯರು ಕೂಡ ಇದ್ದಾರೆ ಎಂದು ಪೊಲೀಸ್‌ ಮೂಲಗಳು ಮಾಹಿತಿ ನೀಡಿವೆ. ಇವರು ಕುಯಿ ಗ್ರಾಮದವರು ಎಂಬ ಮಾಹಿತಿಯೂ ಲಭ್ಯವಾಗಿದೆ.

ಸಂತಾಪ ಸೂಚಿಸಿದ ಡಿಸಿಎಂ

ಅಪಘಾತ ಸಂಭವಿಸಿ 18 ಜನ ಮೃತಪಟ್ಟ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ವಿಜಯ್‌ ಶರ್ಮಾ ಸಂತಾಪ ಸೂಚಿಸಿದ್ದಾರೆ. “ಕವಾರ್ಧ ಜಿಲ್ಲೆಯಲ್ಲಿ ಪಿಕ್‌ಅಪ್‌ ವಾಹನ ಕಂದಕಕ್ಕೆ ಉರುಳಿ 15 ಜನ ಮೃತಪಟ್ಟಿರುವ ಸುದ್ದಿ ತಿಳಿದು ಅತೀವ ನೋವಾಯಿತು. ಕುಟುಂಬಸ್ಥರ ನೋವಿನಲ್ಲಿ ನಾನು ಕೂಡ ಭಾಗಿಯಾಗಿದ್ದೇನೆ. ಗಾಯಾಳುಗಳು ಶೀಘ್ರದಲ್ಲೇ ಗುಣಮುಖರಾಗಲಿ ಎಂಬುದಾಗಿ ಪ್ರಾರ್ಥಿಸುತ್ತೇನೆ. ಸಂತ್ರಸ್ತರು ಹಾಗೂ ಅವರ ಕುಟುಂಬಸ್ಥರಿಗೆ ಅಗತ್ಯ ನೆರವು ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದು ಡಿಸಿಎಂ ತಿಳಿಸಿದ್ದಾರೆ.

ಒಂದು ತಿಂಗಳ ಹಿಂದಷ್ಟೇ ಛತ್ತೀಸ್‌ಗಢದ ದುರ್ಗ್ ಜಿಲ್ಲೆಯ ಕುಮ್ಹಾರಿ ಪ್ರದೇಶದಲ್ಲಿ ಬಸ್ಸೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಖಾಸಗಿ ಸಂಸ್ಥೆಯೊಂದರ 12 ಕಾರ್ಮಿಕರು ಮೃತಪಟ್ಟು, 14 ಮಂದಿ ಗಾಯಗೊಂಡಿದ್ದರು. ದುರ್ಗದ ಗಣಿಯಲ್ಲಿ ಕಾರ್ಮಿಕರಿಂದ ತುಂಬಿದ್ದ ಬಸ್ ಪಲ್ಟಿಯಾಗಿತ್ತು. ಗಾಯಗೊಂಡವರಲ್ಲಿ ಹನ್ನೆರಡು ಜನರನ್ನು ಎಐಐಎಂಎಸ್ (ರಾಯಪುರ) ಗೆ ಸ್ಥಳಾಂತರಿಸಲಾಗಿತ್ತು, ಉಳಿದ ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಘಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದರು.

ಇದನ್ನೂ ಓದಿ: Road Accident: ಬೆಂಗಳೂರು, ಗದಗದಲ್ಲಿ ಸರಣಿ ಅಪಘಾತ; ಗ್ಯಾಸ್ ಟ್ಯಾಂಕರ್ ಸ್ಫೋಟಕ್ಕೆ ಮನೆಗಳೇ ಭಸ್ಮ

Continue Reading
Advertisement
Phone Tapping
ಕರ್ನಾಟಕ7 mins ago

Phone Tapping: ಎಚ್‌ಡಿಕೆ ಫೋನ್‌ ಟ್ಯಾಪ್‌ ಮಾಡೋಕೆ, ಅವರೇನು ಟೆರರಿಸ್ಟಾ? ಎಂದ ಡಿಕೆಶಿ

Star Fashion
ಫ್ಯಾಷನ್9 mins ago

Star Fashion: ಮಾಲಾಶ್ರೀ ಮಗಳ ಬಿಗ್‌ ಬ್ಲ್ಯಾಕ್‌ ಜುಮ್ಕಾ ಲವ್‌!

Benjamin Netanyhu
ವಿದೇಶ10 mins ago

ಇಸ್ರೇಲ್‌ ಪಿಎಂ ಬೆಂಜಮಿನ್‌ ನೆತನ್ಯಾಹು, ಹಮಾಸ್‌ ಉಗ್ರರಿಗೆ ಜಾಗತಿಕ ಕೋರ್ಟ್‌ ಅರೆಸ್ಟ್‌ ವಾರೆಂಟ್! ಶೀಘ್ರ ಬಂಧನ?

Legislative Council Election dates fixedVoting on June 13
ರಾಜಕೀಯ14 mins ago

Legislative Council Election: ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ದಿನಾಂಕ ಫಿಕ್ಸ್;‌ ಜೂನ್‌ 13ಕ್ಕೆ ಮತದಾನ

Covaxin Safety
ದೇಶ53 mins ago

Covaxin Safety: ಕೊವ್ಯಾಕ್ಸಿನ್‌ನಿಂದ ಅಡ್ಡ ಪರಿಣಾಮ ಎಂದು ಬನಾರಸ್‌ ವಿವಿ ವರದಿ; ವೈದ್ಯ ಸಂಶೋಧನಾ ಸಂಸ್ಥೆ ಆಕ್ಷೇಪ

Food department deletes name from ration card list even though it is alive
ವಿಜಯನಗರ56 mins ago

Food Department : ಜೀವಂತ ಇದ್ದವಳನ್ನು ಸತ್ತಿದ್ದಾಗಿ ಘೋಷಿಸಿದ ಆಹಾರ ಇಲಾಖೆ; ರೇಷನ್‌ ಕಾರ್ಡ್‌ನಿಂದಲೇ ಹೆಸರು ಡಿಲೀಟ್‌

History Of Ice Cream
ಆಹಾರ/ಅಡುಗೆ58 mins ago

History Of Ice Cream: ಎಲ್ಲರ ನೆಚ್ಚಿನ ಐಸ್‌ಕ್ರೀಮ್‌ ಹುಟ್ಟಿದ್ದು ಹೇಗೆ?

IPL 2024
ಕ್ರೀಡೆ59 mins ago

IPL 2024: ಮೋದಿ ಸ್ಟೇಡಿಯಂನಲ್ಲಿ ನಡೆಯುವ ಐಪಿಎಲ್​ ಪ್ಲೇ ಆಫ್​ ಪಂದ್ಯಕ್ಕೆ ಐಸಿಸ್‌ ಉಗ್ರರ ಕಾಟ; ಪಂದ್ಯಕ್ಕೂ ಮುನ್ನ ನಾಲ್ವರ ಬಂಧನ

Silver Jewel Trend
ಫ್ಯಾಷನ್1 hour ago

Silver Jewel Trend: ಬಂಗಾರದ ಆಭರಣಗಳಿಗೆ ಸೆಡ್ಡು ಹೊಡೆದ ಸಿಲ್ವರ್‌ ಜ್ಯುವೆಲರಿಗಳು!

Prajwal Revanna Case
ಪ್ರಮುಖ ಸುದ್ದಿ1 hour ago

Prajwal Revanna Case: ನಾನು ಸೇರಿ ಸುಮಾರು 30 ಜನರ ಫೋನ್ ಟ್ಯಾಪ್: ಸರ್ಕಾರದ ವಿರುದ್ಧ ಎಚ್‌ಡಿಕೆ ಬಾಂಬ್‌!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ4 hours ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 day ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ1 day ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ1 day ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ3 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ3 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ4 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು4 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌