1. ಶಾಸಕರ ಜತೆ ಸಂಧಾನ ಅಂದ್ರೆ ಏನರ್ಥ? ಸಿಂಧೂರಿ ವಿರುದ್ಧ IPS ರೂಪಾ ಗರಂ, 19 ಆರೋಪಗಳ ಚಾರ್ಜ್‌ಶೀಟ್ ಖಡಾಖಡಿ ಹೋರಾಟಕ್ಕೆ ಹೆಸರಾದ ಇಬ್ಬರು ಮಹಿಳಾ ಅಧಿಕಾರಿಗಳು ಈಗ ಪರಸ್ಪರ ಎದುರಾಳಿಗಳಾಗಿ ನಿಂತಂತೆ ಕಾಣುತ್ತಿದೆ. ಮೈಸೂರಿನಲ್ಲಿ ಜಿಲ್ಲಾಧಿಕಾರಿಯಾಗಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್ ಅಧಿಕಾರಿಯಾಗಿರುವ ಐಜಿಪಿ ಡಿ. ರೂಪಾ (Sindhuri Vs Roopa) ಸಿಡಿದೆದ್ದಿದ್ದು, ಒಬ್ಬ ಶಾಸಕನ ಜತೆ ಸಂಧಾನ ಅಂದ್ರೆ ಏನು ಎಂದು ಪ್ರಶ್ನಿಸಿದ್ದಾರೆ. ಮೈಸೂರಿನಲ್ಲಿ ಕೆ.ಆರ್. ನಗರ ಶಾಸಕ ಸಾ.ರಾ. ಮಹೇಶ್ ಅವರ ಜತೆಗಿನ ಜಗಳವನ್ನು ರೋಹಿಣಿ ಸಿಂಧೂರಿ ಅವರು ಸಂಧಾನದ ಮೂಲಕ ಇತ್ಯರ್ಥ ಮಾಡಿಕೊಂಡಿದ್ದಾರೆ ಎಂಬ ಆರೋಪಗಳಿಗೆ ಸಂಬಂಧಿಸಿ ಡಿ. ರೂಪಾ ಈ ಪ್ರತಿಕ್ರಿಯೆ ನೀಡಿದ್ದಾರೆ. ಅದರ ಜತೆಗೆ ಡಿ. ರೂಪಾ ಅವರು ೧೯ ಆರೋಪಗಳನ್ನು ಮಾಡಿದ್ದು, ಪ್ರತಿಯೊಂದು ಕೂಡಾ ಗಂಭೀರವಾಗಿವೆ. ಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
2. ಸಿಂಧೂರಿ- ರೂಪಾ ಜಗಳದಲ್ಲಿ ಡಿ.ಕೆ. ರವಿ ಪತ್ನಿ ಕುಸುಮಾ ಎಂಟ್ರಿ: ಕರ್ಮ ಫಲ ಸಿಕ್ಕೇ ಸಿಗುತ್ತದೆ ಅಂತ ಹೇಳಿದ್ಯಾರಿಗೆ?
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ನಡುವಿನ ಬಹಿರಂಗ ಜಟಾಪಟಿಗೆ ಈಗ, ಆತ್ಮಹತ್ಯೆ ಮಾಡಿಕೊಂಡ ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ಪತ್ನಿ ಕುಸುಮಾ ಹನುಮಂತರಾಯಪ್ಪ ಎಂಟ್ರಿ ಕೊಟ್ಟಿದ್ದಾರೆ. ರೂಪಾ ಅವರು ಬೆಳಗ್ಗೆ ಸಿಂಧೂರಿ ಅವರ ವಿರುದ್ಧ ೧೯ ಗಂಭೀರ ಆರೋಪಗಳನ್ನು ಮಾಡಿದ್ದರು. ಅದರಲ್ಲಿ ಡಿ.ಕೆ. ರವಿ ಸಾವಿನ ವಿಚಾರವೂ ಸೇರಿತ್ತು. ಡಿ.ಕೆ. ರವಿ ಮತ್ತು ರೋಹಿಣಿ ಸಿಂಧೂರಿ ನಡುವೆ ಪ್ರೇಮ ಸಲ್ಲಾಪ ನಡೆಯುತ್ತಿತ್ತು ಎನ್ನುವುದೂ ಸೇರಿದಂತೆ ಹಲವು ವಿಚಾರಗಳನ್ನು ಆಕೆ ಹೇಳಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
3. ದೇಶದ 4.5 ಕೋಟಿ ಕೇಬಲ್ ಟಿ.ವಿ ಗ್ರಾಹಕರಿಗೆ ಜೀ, ಸ್ಟಾರ್, ಸೋನಿ ಪ್ರಸಾರ ಸ್ಥಗಿತ
ಜೀ ಎಂಟರ್‌ಟೈನ್‌ಮೆಂಟ್, ಸ್ಟಾರ್ ಮತ್ತು ಸೋನಿ ಪಿಕ್ಚರ್ಸ್ ವಾಹಿನಿಗಳು ಫೆಬ್ರವರಿ 1ರಿಂದ ಹಾಥ್‌ವೇ ಡಿಜಿಟಲ್, ಡಿಇಎನ್ ನೆಟ್ ವರ್ಕ್ಸ್, ಜಿಟಿಪಿಎಲ್, ಹಿಂದೂಜಾ ಗ್ಲೋಬಲ್ ಸಲ್ಯೂಷನ್ಸ್, ಫಾಸ್ಟ್‌ವೇ ಟ್ರಾನ್ಸ್‌ಮಿಶನ್, ಯುಸಿಎನ್ ಕೇಬಲ್ ಇತ್ಯಾದಿ ಕೆಲವು ಕೇಬಲ್ ಆಪರೇಟರ್‌ಗಳಿಗೆ (Cable TV Channel Price hike) ತಮ್ಮ ಚಾನೆಲ್‌ಗಳ ಸಿಗ್ನಲ್ ಪ್ರಸಾರವನ್ನು ಬಂದ್ ಮಾಡುತ್ತಿವೆ. (Cable TV) ಇದರ ಪರಿಣಾಮ ಸುಮಾರು 4.5 ಕೋಟಿ ಕೇಬಲ್ ಟಿ.ವಿ ಗ್ರಾಹಕರಿಗೆ ಈ ಚಾನೆಲ್‌ಗಳು ಅಲಭ್ಯವಾಗಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
4. ಮಂಡ್ಯ ಉಸ್ತುವಾರಿ ನನಗೆ ಬೇಡ; ಯಾರನ್ನು ಬೇಕಾದರೂ ಮಾಡಿ ಎಂದು ಸಿಎಂ ವಿರುದ್ಧ ನಾರಾಯಣಗೌಡ ಗರಂ
ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿರುವ ಹೊತ್ತಿನಲ್ಲಿ ಪ್ರಾರಂಭವಾಗಿರುವ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರ ಗೊಂದಲ ಇನ್ನೂ ಮುಂದುವರಿದಿರುವ ಬೆನ್ನಲ್ಲೇ ಸಚಿವ ನಾರಾಯಣಗೌಡ (Narayana Gowda) ಅಸಮಾಧಾನ ಹೊರಹಾಕಿದ್ದು, ನಾನು ಮಂಡ್ಯ ಉಸ್ತುವಾರಿಯನ್ನು ಪಡೆದುಕೊಳ್ಳುವುದಿಲ್ಲ. ಮೂರು ಮೂರು ತಿಂಗಳಿಗೆ ಬದಲಾವಣೆ ಮಾಡುತ್ತಿದ್ದರೆ ನಾನು ಉಸ್ತುವಾರಿ ಹೊಣೆ ಹೊತ್ತುಕೊಳ್ಳಲು ಆಗುತ್ತಾ ಎಂದು ಪ್ರಶ್ನೆ ಮಾಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ನಡೆಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
5. ಮಕ್ಕಳು ತಯಾರಿಸಿದ ಉಪಗ್ರಹ ಹೊತ್ತು ಬಾಹ್ಯಾಕಾಶಕ್ಕೆ ನೆಗೆದ ದೇಶದ ಮೊದಲ ಹೈಬ್ರಿಡ್ ರಾಕೆಟ್
ಮಾರ್ಟಿನ್ ಫೌಂಡೇಶನ್ ಡಾ. ಎಪಿಜೆ ಅಬ್ದುಲ್ ಕಲಾಂ ಇಂಟರ್ನ್ಯಾಷನಲ್ ಫೌಂಡೇಶನ್ ಮತ್ತು ಸ್ಪೇಸ್ ಝೋನ್ ಇಂಡಿಯಾ ಸಹಯೋಗದೊಂದಿಗೆ ಫೆಬ್ರವರಿ 19, ಭಾನುವಾರ ಎಪಿಜೆ ಅಬ್ದುಲ್ ಕಲಾಂ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮಿಷನ್-2023ಕ್ಕೆ (APJ Abdul Kalam Satellite Launch Vehicle Mission-2023) ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಪುದುಚೆರಿ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಕೂಡ ಉಪಸ್ಥಿತರಿದ್ದರು. ಶಾಲಾ ಮಕ್ಕಳು ರೂಪಿಸಿರುವ ಉಪಗ್ರಹಗಳನ್ನು ಹೊತ್ತ, ದೇಶದ ಮೊದಲ ಹೈಬ್ರಿಡ್ ರಾಕೆಟ್ ಅನ್ನು ತಮಿಳುನಾಡಿನ ಚೆಂಗಲ್ಪಟ್ಟು ಜಿಲ್ಲೆಯ ಪಟ್ಟಿಪೋಲಂ ಗ್ರಾಮದಿಂದ ಉಡಾವಣೆ ಮಾಡಲಾಯಿತು(Vehicle Mission 2023). ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
6. 6ನೇ ವೇತನ ಆಯೋಗ ಜಾರಿಗೆ ಒತ್ತಾಯ; ಮಾರ್ಚ್ 1ರಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಕರೆಕೊಟ್ಟ ಸಾರಿಗೆ ನೌಕರರು
ಮತ್ತೆ ಮುಷ್ಕರಕ್ಕೆ ಸಾರಿಗೆ ನೌಕರರು (Bus Strike In Karnataka) ಸಜ್ಜಾಗಿದ್ದಾರೆ. ಹಿಂದೊಮ್ಮೆ ಸಾಮೂಹಿಕವಾಗಿ ಕೆಲಸಕ್ಕೆ ಗೈರು ಹಾಜರಾಗಿ ಬರೋಬ್ಬರಿ 15 ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರಿಂದ ನಾಲ್ಕು ನಿಗಮಗಳಿಗೆ ಸುಮಾರು 287 ಕೋಟಿ ರೂ. ಆದಾಯ ನಷ್ಟ ಉಂಟಾಗಿತ್ತು. ಇದೀಗ ಮಾರ್ಚ್ 1ರಿಂದ ಕುಟುಂಬ ಸಮೇತ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಸಾರಿಗೆ ನೌಕರರು ಎಚ್ಚರಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
7. ನಾನು ಗೋಮಾಂಸ ತಿನ್ನುತ್ತೇನೆ; ಬಿಜೆಪಿಯಲ್ಲೇ ಇದ್ದೇನೆ: ಮೇಘಾಲಯ ಬಿಜೆಪಿ ಅಧ್ಯಕ್ಷ
ಮೇಘಾಲಯದಲ್ಲಿ 27ಕ್ಕೆ ವಿಧಾನಸಭೆ ಚುನಾವಣೆಯಲ್ಲಿ ನಡೆಯಲಿದ್ದು, ಪ್ರಚಾರ ಜೋರಾಗಿದೆ. ಹಾಗೆಯೇ ವಾಕ್ಸಾಮರಗಳು ನಡೆಯುತ್ತಿವೆ. ತಮ್ಮ ಮೈತ್ರಿಕೂಟದ ಮಾಜಿ ಪಾರ್ಟನರ್ ನ್ಯಾಷನಲ್ ಪೀಪಲ್ಸ್ ಪಾರ್ಟಿ (NPP) ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ವಿರುದ್ಧ ಬಿಜೆಪಿ ನಾಯಕರು ತಿರುಗಿ ಬಿದ್ದಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಅಸ್ಸಾಮ್ ಸಿಎಂ ಹಿಮಂತ್ ಬಿಸ್ವ ಶರ್ಮಾ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಎನ್‌ಪಿಪಿ ಆಡಳಿತದಲ್ಲಿ ಮೇಘಾಲಯವು ದೇಶದ ಅತಿ ಭ್ರಷ್ಟ ರಾಜ್ಯವಾಗಿ ಹೊರಹೊಮ್ಮಿದೆ ಎಂದು ಅಮಿತ್ ಶಾ ಟೀಕಿಸಿದ್ದಾರೆ. ಹಾಗೆಯೇ, ಮೇಘಾಲಯ ಬಿಜೆಪಿ ರಾಜ್ಯಾಧ್ಯಕ್ಷ ಅರ್ನೆಸ್ಟ್ ಮಾವ್ರಿ(Ernest Mawrie) ಅವರು, ಗೋ ಮಾಂಸ ಭಕ್ಷಣೆಗೆ ಬಿಜೆಪಿ ಯಾವುದೇ ನಿರ್ಬಂಧ ವಿಧಿಸಿಲ್ಲ. ನಾನು ಗೋ ಮಾಂಸ ತಿನ್ನುತ್ತೇನೆ ಮತ್ತು ಬಿಜೆಪಿಯಲ್ಲೇ ಇದ್ದೇನೆ ಎಂದು ಹೇಳಿಕೊಂಡಿದ್ದಾರೆ(Meghalaya Election 2023:). ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
8. ಫೆ.24ರಿಂದ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಮಹಾ ಅಧಿವೇಶನ, ಚುನಾವಣೆಗೆ ರಣತಂತ್ರ
ಪ್ರಸಕ್ತ ವರ್ಷದಲ್ಲಿ ನಡೆಯುವ ದೇಶದ ಒಂಬತ್ತು ರಾಜ್ಯಗಳ ವಿಧಾನಸಭೆ ಚುನಾವಣೆ ಹಾಗೂ ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಭರ್ಜರಿಯಾಗಿಯೇ ಸಿದ್ಧವಾಗುತ್ತಿದೆ. ಫೆಬ್ರವರಿ ೨೪ರಿಂದ ೨೬ರವರೆಗೆ ಛತ್ತೀಸ್‌ಗಢದ ನವ ರಾಯ್‌ಪುರದಲ್ಲಿ ಕಾಂಗ್ರೆಸ್ ಮಹಾ ಅಧಿವೇಶನ (Congress Plenary Session) ನಡೆಯಲಿದ್ದು, ಸಾಲು ಸಾಲು ಚುನಾವಣೆಗೆ ರಣತಂತ್ರ ರೂಪಿಸುವುದು ಅಧಿವೇಶನದ ಪ್ರಮುಖ ಉದ್ದೇಶ ಎಂದು ಹೇಳಲಾಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
9. ಆಸೀಸ್ ವಿರುದ್ಧ ಭಾರತಕ್ಕೆ 6 ವಿಕೆಟ್ ಗೆಲುವು; ಸರಣಿಯಲ್ಲಿ 2-0 ಮುನ್ನಡೆ
ಆಸ್ಟ್ರೇಲಿಯಾ ವಿರುದ್ಧದ(IND VS AUS) ಬಾರ್ಡರ್ ಗವಾಸ್ಕರ್ ಟ್ರೋಫಿಯ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ 6 ವಿಕೆಟ್ಗಳ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ರೋಹಿತ್ ಶರ್ಮಾ ಬಳಗ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಇದರ ಜತೆಗೆ ಬಾರ್ಡರ್-ಗವಾಸ್ಕರ್ ಟೆಸ್ಟ್ ಟ್ರೋಫಿಯನ್ನು ಭಾರತ ತನ್ನಲ್ಲೇ ಉಳಿಸಿಕೊಂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
10. ಮಧ್ಯಪ್ರದೇಶದಲ್ಲಿ ಮಹಾ ಶಿವರಾತ್ರಿಗೆ 21 ಲಕ್ಷ ದೀಪ ಬೆಳಗಿ ಗಿನ್ನಿಸ್ ವಿಶ್ವ ದಾಖಲೆ
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಶನಿವಾರ ಮಹಾ ಶಿವರಾತ್ರಿಯ ಸಂದರ್ಭ 21 ಲಕ್ಷ ಮಣ್ಣಿನ ಹಣತೆಗಳನ್ನು ಬೆಳಗಿಸುವ ಮೂಲಕ ಗಿನ್ನಿಸ್ ವಿಶ್ವ ದಾಖಲೆಯನ್ನು ಮಾಡಲಾಯಿತು. (Ujjain Shiv Jyoti Arpanam 2023) ಶಿವ ಜ್ಯೋತಿ ಅರ್ಪಣಮ್ -2023 ಎಂಬ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಳೆದ ವರ್ಷ 11 ಲಕ್ಷ ಹಣತೆಗಳನ್ನು ಬೆಳಗಿ ಮಹಾ ಶಿವನ ಆರಾಧನೆ ನಡೆಸಲಾಗಿತ್ತು. ಸುಮಾರು 22,000 ಸ್ವಯಂಸೇವಕರು ಈ ವಿಶ್ವದಾಖಲೆಯನ್ನು ಸೃಷ್ಟಿಸಿದರು. ಈ ಹಿಂದೆ ಅಯೋಧ್ಯೆ ದೀಪೋತ್ಸವ 2022 ವೇಳೆ 15.67 ಲಕ್ಷ ಹಣತೆಗಳನ್ನು ಬೆಳಗಲಾಗಿತ್ತು. ಅತ್ಯಾಕರ್ಷಕ ಲೇಸರ್ ಶೋ ಅನ್ನು ಕೂಡ ಆಯೋಜಿಸಲಾಗಿತ್ತು. ಸಿಡಿಮದ್ದುಗಳ ಪ್ರದರ್ಶನ ನಡೆಯಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಪ್ರಮುಖ ಸುದ್ದಿಗಳಿವು
1. ಟಿಸಿಎಸ್‌ನಲ್ಲೂ ಉದ್ಯೋಗಗಳು ಕಡಿತವಾಗುತ್ತಾ? ಕಂಪನಿ ಹೇಳುವುದೇನು?
2. ಮನೆಯಲ್ಲಿ ತಲವಾರ್ ಇಟ್ಟುಕೊಳ್ಳಿ; ಶಿವಾಜಿ ಇಲ್ಲದಿದ್ದರೆ ಕೇಸರಿ ಪೇಟ ಇರ್ತಿರಲಿಲ್ಲ, ಹಸಿರು ಇರ್ತಿತ್ತು: ಮುತಾಲಿಕ್
3. ಇಸ್ಲಾಂನಲ್ಲಿ ಮ್ಯೂಸಿಕ್ ನಿಷೇಧ, ಡಿಜೆ ಶಬ್ದ ಕೇಳುತ್ತಲೇ ಮದುವೆ ಮಾನ್ಯಗೊಳಿಸದ ಮೌಲ್ವಿ
4. ಹೆರಿಗೆಯಾದ 3 ಗಂಟೆಯಲ್ಲೇ ಪರೀಕ್ಷಾ ಕೇಂದ್ರಕ್ಕೆ ಬಂದು ಎಸ್ಸೆಸ್ಸೆಲ್ಸಿ ಸೈನ್ಸ್ ಪೇಪರ್ ಬರೆದ 22 ವರ್ಷದ ವಿದ್ಯಾರ್ಥಿನಿ!
5. ಪರೀಕ್ಷೆ ಬರೆಯುವ ಸಲುವಾಗಿ ಹೆದ್ದಾರಿಯಲ್ಲಿ 2 ಕಿಮೀ ದೂರ ಓಡಿದ 10ನೇ ತರಗತಿ ಹೆಣ್ಣುಮಕ್ಕಳು!