ಬೆಂಗಳೂರು: ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕ ಕಾಲೇಜ್ ಸ್ಥಾಪಿಸುವ ವಿಚಾರಕ್ಕೆ ಸ್ವಪಕ್ಷೀಯರು ಹಾಗೂ ತನ್ನ ಮತದಾರರಿಂದಲೇ ವಿರೋಧ ವ್ಯಕ್ತವಾಗಿರುವುದಕ್ಕೆ ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿ, ನಿರ್ಧಾರದಿಂದ ಹಿಂದೆ ಸರಿದಿದೆ. ಇಂಥ ನಿರ್ಧಾರವೇ ಆಗಿಲ್ಲ ಎಂದು ಸಿಎಂ, ಸಚಿವರು ಸ್ಪಷ್ಟಪಡಿಸಿದ್ದಾರೆ. ರಾಜಕೀಯ ಪಕ್ಷಕ್ಕೆ ರೌಡಿಗಳ ಸೇರ್ಪಡೆ ಚರ್ಚೆ ಬಿರುಸಾಗಿದೆ, ಬೀದಿನಾಯಿ ಹಾವಳಿಗೆ ಇಬ್ಬರು ಮಕ್ಕಳು ನಿಧನರಾಗಿದ್ದಾರೆ, ರಾಯಚೂರಿನಲ್ಲೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ, ಗುಜರಾತ್‌ನಲ್ಲಿ ಮೋದಿ ಸತತ ಮೂರು ಗಂಟೆ ರೋಡ್ ಶೋ ನಡೆಸಿ ದಾಖಲೆ ನಿರ್ಮಿಸಿದ್ದಾರೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. Muslim college | ವಕ್ಫ್ ಅಧ್ಯಕ್ಷರ ಹೇಳಿಕೆ ವೈಯಕ್ತಿಕ, ಮಹಿಳಾ ಕಾಲೇಜಿನ ಪ್ರಸ್ತಾಪವಿಲ್ಲ ಎಂದ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ
ಪ್ರತ್ಯೇಕ ಮುಸ್ಲಿಂ ಮಹಿಳಾ ಕಾಲೇಜು ಪ್ರಾರಂಭಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಜೊಲ್ಲೆ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ೧೦ ಮುಸ್ಲಿಂ ಮಹಿಳಾ ಕಾಲೇಜು ಸ್ಥಾಪನೆಗೆ ಉದ್ದೇಶಿಸಲಾಗಿದೆ ಎಂಬ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನಾ ಶಫಿ ಸಅದಿ ಅವರ ಹೇಳಿಕೆಯ ಬಳಿಕ ಹುಟ್ಟಿಕೊಂಡ ಚರ್ಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೆರೆ ಎಳೆಯಲು ಯತ್ನಿಸಿದ ಬಳಿಕ ಸಚಿವೆ ಶಶಿಕಲಾ ಜೊಲ್ಲೆ ಅವರು ಕೂಡಾ ಧ್ವನಿಗೂಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: ಅಲ್ಪಸಂಖ್ಯಾತರಿಗೆ 10 ಹೈಟೆಕ್ ವಸತಿ ಕಾಲೇಜು: ತಡವಾಗಿ ಬೆಳಕಿಗೆ ಬಂದ ಸರ್ಕಾರದ ನಿರ್ಧಾರ
2. ರೌಡಿ ನಾಗನನ್ನು ಸೋಮಣ್ಣ ಭೇಟಿ ಆಗಿದ್ದೇಕೆ ಎಂದ ಕಾಂಗ್ರೆಸ್: ನಾಗ, ತಿಮ್ಮ ಯಾರೂ ಗೊತ್ತಿಲ್ಲ ಎಂದ ಸಚಿವ
ಚುನಾವಣೆ ಸಮೀಪಿಸುತ್ತಿರುವಂತೆ ಬಿಜೆಪಿಗೆ ರೌಡಿ ಕಳಂಕ ಅಂಟಿಕೊಳ್ಳುತ್ತಿದ್ದು, ಇತ್ತೀಚೆಗೆ ಸೈಲೆಂಟ್ ಸುನಿಲ ಹಾಗೂ ಫೈಟರ್ ರವಿ ಪ್ರಕರಣದ ನಂತರ ವಿಲ್ಸನ್ ಗಾರ್ಡನ್ ನಾಗನ ವಿವಾದ ಹುಟ್ಟಿಕೊಂಡಿದೆ.
ವಿಲ್ಸನ್ ಗಾರ್ಡನ್ ನಾಗ ಹಾಗೂ ಸಚಿವ ಸೋಮಣ್ಣ ಭೇಟಿ ಮಾಡಿದ್ದಾರೆ ಎಂಬ ಕುರಿತು ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ಮುಂದುವರಿಸಿದೆ. ಈ ಕುರಿತು ಎರಡು ಟ್ವೀಟ್ ಮಾಡಿದೆ. ಈ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವ ವಿ. ಸೋಮಣ್ಣ, ರೌಡಿಶೀಟರ್ ನಾಗನಿಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಒಂದು ಗಂಟೆಯಲ್ಲ, ಒಂದು ಕ್ಷಣವೂ ಕೂಡ ಚರ್ಚೆ ನಡೆಸಿಲ್ಲ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. ಕಿಟಕಿಯಿಂದ ₹5 ಕೋಟಿ ಬಿಸಾಡಿದ್ದ ಅಧಿಕಾರಿಗೆ ಉನ್ನತ ಹುದ್ದೆ: ಸಚಿವರ ಶಿಫಾರಸು; ವಿವಾದ ಆಗುತ್ತಿದ್ದಂತೆಯೇ ವಾಪಸು
ಕೆಐಎಡಿಬಿ ಅಧಿಕಾರಿಯಾಗಿದ್ದಾಗ ಅಕ್ರಮ ಆಸ್ತಿ ಗಳಿಕೆ ಸಂಬಂಧ ಎಸಿಬಿ ದಾಳಿಗೆ ಒಳಗಾಗಿದ್ದ ಮಾಜಿ ಅಧಿಕಾರಿಗೆ ಉನ್ನತ ಹುದ್ದೆ ನೀಡಬೇಕೆಂದು ಕೈಗಾರಿಕಾ ಸಚಿವ ಮರುಗೇಶ್ ನಿರಾಣಿ ಶಿಫಾರಸು ಮಾಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಕೆಐಎಡಿಬಿ ಅಧಿಕಾರಿಯಾಗಿದ್ದ ಸಮಯದಲ್ಲಿ ಟಿ.ಆರ್. ಸ್ವಾಮಿ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿತ್ತು. ಈ ವೇಳೆ ತಮ್ಮ ಬಳಿ ಇದ್ದ ಐದು ಕೋಟಿ ರೂ. ಹಣವನ್ನು ಕಿಟಕಿಯಿಂದ ಬಿಸಾಡಿದ್ದರು. 2020 ಜೂನ್ ತಿಂಗಳಲ್ಲಿ ಇವರು ನಿವೃತ್ತರಾಗಿದ್ದು, ಪ್ರಕರಣ ಸದ್ಯ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ. ವಿವಾದ ಹೆಚ್ಚಾಗುತ್ತಲೇ ಸಚಿವರು ಪತ್ರವನ್ನು ಹಿಂಪಡೆದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. Dog Bite | ಹುಚ್ಚು ನಾಯಿ ಕಡಿತಕ್ಕೆ ಇಬ್ಬರು ಮಕ್ಕಳು ಬಲಿ
ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಹುಚ್ಚು ನಾಯಿ ಕಡಿತಕ್ಕೆ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಾದನಹಟ್ಟಿ ಗ್ರಾಮದ ಸುರಕ್ಷಿತ (3) ಮತ್ತು ಶಾಂತಕುಮಾರ್ (7) ಮೃತ ಮಕ್ಕಳಾಗಿದ್ದಾರೆ. ಇನ್ನೊಬ್ಬ ಬಾಲಕಿಗೆ ನಾಯಿ ಕಚ್ಚಿದ್ದು ಚಿಕಿತ್ಸೆ ಪಡೆದು ಗುಣಮುಖವಾಗಿದ್ದಾಳೆ. ಮಕ್ಕಳು ಆಟವಾಡುತ್ತಿದ್ದಾಗ ಏಕಾಏಕಿ ನಾಯಿಯೊಂದು ದಾಳಿ ಮಾಡಿತ್ತು. ಆಗ ಸುರಕ್ಷಿತಾಳ ಮುಖಕ್ಕೆ ನಾಯಿ ಕಚ್ಚಿತ್ತು. ಜತೆಗೆ ಶಾಂತಕುಮಾರ್ ಕೈಗೂ ಕಚ್ಚಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. ರಾಯಚೂರಲ್ಲಿ ಲವ್ ಜಿಹಾದ್; ನಿಶ್ಚಿತಾರ್ಥ ಆಗಿದ್ದ ಹುಡುಗಿಯನ್ನು ಮದುವೆಯಾದ ಮುಸ್ಲಿಂ ಯುವಕ, ಬುರ್ಖಾ ಧರಿಸಿ ಬಂದ ಯುವತಿ!
ರಾಯಚೂರಿನಲ್ಲಿ ಕೆಲವೇ ದಿನಗಳ ಹಿಂದೆ ಹಿಂದು ಶಿಕ್ಷಕಿಯೊಬ್ಬಳು ತಮ್ಮ 7 ವರ್ಷದ ಮಗುವನ್ನೂ ಬಿಟ್ಟು ಸಲೀಂ ಮುಸ್ಲಿಂ ವ್ಯಕ್ತಿಯೊಬ್ಬನೊಂದಿಗೆ ಪರಾರಿಯಾಗಿದ್ದಳು. ಇದು ಲವ್ ಜಿಹಾದ್ ಎಂಬ ಆರೋಪವನ್ನು ಆ ಶಿಕ್ಷಕಿಯ ಮನೆಯವರೇ ಮಾಡಿದ್ದರು. ಅದರ ಬೆನ್ನಲ್ಲೇ ರಾಯಚೂರಿನಿಂದ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದೆ. ಹಿಂದು ಯುವತಿ ಭಾರತಿ ಎಂಬಾಕೆಯನ್ನು ಮುಸ್ಲಿಂ ಯುವಕ ರೆಹಾನ್ ಎಂಬಾತ ಲವ್ ಜಿಹಾದ್ ಬಲೆಗೆ ಬೀಳಿಸಿದ್ದಾನೆ ಎಂಬ ಆರೋಪವನ್ನು ಭಾರತಿ ಪಾಲಕರು ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Kannada Flag | ಬೆಳಗಾವಿಯಲ್ಲಿ ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿಗೆ ಪೊಲೀಸರಿಂದಲೂ ಥಳಿತ
ಕನ್ನಡ ಬಾವುಟ ಹಾರಿಸಿದ್ದಕ್ಕೆ ಕಾಲೇಜಿನಲ್ಲಿ ವಿದ್ಯಾರ್ಥಿ ಮೇಲೆ ಸಹಪಾಠಿಗಳಿಂದ ಹಲ್ಲೆ ನಡೆದ ಹಾಗೂ ದೂರು ನೀಡಲು ಹೋದ ವೇಳೆ ಪೊಲೀಸರಿಂದಲೂ ಹಲ್ಲೆ ನಡೆದ ಪ್ರಕರಣ ಬೆಳಗಾವಿಯಲ್ಲಿ ನಡೆದಿದೆ. ಕನ್ನಡ ಬಾವುಟ ಹಿಡಿದು ನೃತ್ಯ ಮಾಡುತ್ತಿದ್ದಾಗ ಹಲ್ಲೆ ಮಾಡಿದ್ದು, ಹಲ್ಲೆ ಮಾಡಿದವರ ಪೈಕಿ ನನ್ನ ಕ್ಲಾಸ್‌ಮೇಟ್ ಕೂಡ ಇದ್ದ. ನಾನು ದೂರು ಕೊಡಲು ಮುಂದಾದಾಗ ಠಾಣೆಗೆ ಕರೆದುಕೊಂಡು ಹೋಗಿ ಹೆದರಿಸಿ ಎಸಿಪಿ, ಡಿಸಿಪಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಡಿಸಿಪಿ ನನ್ನ ವಿರುದ್ಧ ಅವಾಚ್ಯ ಶಬ್ದ ಬಳಸಿ ಬೈದು ಬೂಟಗಾಲಿಂದ ಒದ್ದರು. ಬಳಿಕ ನಾನು ಕನ್ನಡ ಸಂಘಟನೆಯ ಮುಖಂಡರನ್ನು ಸಂಪರ್ಕಿಸಿದೆ ಎಂದು ಬೆಳಗಾವಿಯಲ್ಲಿ ಹಲ್ಲೆಗೊಳಗಾದ ವಿದ್ಯಾರ್ಥಿ ಹೇಳಿಕೆ ನೀಡಿದ್ದಾನೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Kannada Flag | ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿಗೆ ಥಳಿತ ಪ್ರಕರಣ; ಹೆದ್ದಾರಿ ತಡೆದು ಕರವೇ ಪ್ರತಿಭಟನೆ
7. Gujarat Election | ಪ್ರಧಾನಿಗೆ ನಿಂದಿಸಲು ಸ್ಪರ್ಧೆಗೆ ಬಿದ್ದಿದ್ದಾರೆ ಕಾಂಗ್ರೆಸಿಗರು! ಖರ್ಗೆ ‘ರಾವಣ’ ಹೇಳಿಕೆಗೆ ಮೋದಿ ತಿರುಗೇಟು!
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ರಾವಣ ಹೇಳಿಕೆಗೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಈ ದೇಶದ ಪ್ರಧಾನಿಯನ್ನು ನಿಂದಿಸಲು ಕಾಂಗ್ರೆಸಿಗರು ಸ್ಪರ್ಧೆಗೆ ಬಿದ್ದಿದ್ದಾರೆ. ಸತತ ಸೋಲಿನಿಂದ ಅವರು ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ. ನನ್ನನ್ನು ರಾವಣನಿಗೆ ಹೋಲಿಸಲು ಖರ್ಗೆ ಅವರಿಗೆ ಹೇಳಿಕೊಡಲಾಗಿದೆ ಎಂದು ಟೀಕಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Modi Mega Roadshow | 3 ಗಂಟೆ, 50 ಕಿ.ಮೀ, 16 ಕ್ಷೇತ್ರಗಳಲ್ಲಿ ಮೋದಿ ರೋಡ್ ಶೋ, ಗುಜರಾತ್‌ನಲ್ಲಿ ಪ್ರಧಾನಿ ಇತಿಹಾಸ
8. Digi Yatra | ಬೆಂಗಳೂರು ಏರ್‌ಪೋರ್ಟ್‌ನಲ್ಲಿ ನಿಮ್ಮ ಮುಖವೇ ಬೋರ್ಡಿಂಗ್ ಪಾಸ್, ಇಲ್ಲಿದೆ ವಿವರ
ಬೆಂಗಳೂರು, ದಿಲ್ಲಿ ಮತ್ತು ವಾರಾಣಸಿ ಏರ್‌ಪೋರ್ಟ್‌ನಲ್ಲಿ ಇಂದಿನಿಂದ ಪೇಪರ್‌ಲೆಸ್ ಎಂಟ್ರಿ ಸಾಧ್ಯವಾಗಲಿದೆ. ಸಾಫ್ಟ್‌ವೇರ್ ತಂತ್ರಜ್ಞಾನದ ಮೂಲಕ ಏರ್‌ಪೋರ್ಟ್ ನಿಮ್ಮ ಮುಖವನ್ನೇ ಗುರುತಿಸಲಿದೆ. ಈ ಸೌಕರ್ಯವನ್ನು ಡಿಜಿ ಯಾತ್ರಾ (Digi Yatra ) ಎಂದು ಕರೆದಿದೆ. ದೇಶದ ಈ ಮೂರು ಏರ್‌ಪೋರ್ಟ್‌ನಲ್ಲಿ ಮೊದಲ ಹಂತದಲ್ಲಿ ಪ್ರಯಾಣಿಕರಿಗೆ ಈ ಸೌಲಭ್ಯ ಸಿಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. ವಿಸ್ತಾರ Explainer | ಪಾಕಿಸ್ತಾನದ ಡ್ರೋನ್ ಉರುಳಿಸಲಿದೆ ಭಾರತೀಯ ಸೇನೆಯ ಗಿಡುಗ, ಹೇಗಿದರ ಆಪರೇಷನ್?
ಜಾಗತಿಕವಾಗಿ ಯುದ್ಧದ ಶೈಲಿಗಳು, ಆಕ್ರಮಣದ ಮಾದರಿಗಳು ಬದಲಾಗಿವೆ. ಆಧುನಿಕ ತಂತ್ರಜ್ಞಾನ, ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಲಭ್ಯವಿರುವ ಹಾಗೂ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವ ಕಾರಣ ಯಾವುದೇ ದೇಶದ ಸೇನೆಯಲ್ಲಿ ಬದಲಾವಣೆ, ಶತ್ರುಗಳ ಮೇಲೆ ನಿಗಾ ಇಡುವ ಮಾದರಿ ಮಾರ್ಪಾಡಾಗುವುದು ಅನಿವಾರ್ಯವಾಗಿದೆ. ಹೀಗೆ, ಆಧುನಿಕ ತಂತ್ರಜ್ಞಾನ, ವಿಭಿನ್ನ ಕೌಶಲಗಳನ್ನು ಅಳವಡಿಸಿಕೊಳ್ಳುವಲ್ಲಿ ಭಾರತೀಯ ಸೇನೆಯೂ ಹಿಂದೆ ಬಿದ್ದಿಲ್ಲ. ಇದಕ್ಕೆ ನಿದರ್ಶನ ಎಂಬಂತೆ ಈಗ ವೈರಿಗಳ ಡ್ರೋನ್‌ಗಳನ್ನು ಹೊಡೆದುರುಳಿಸಲು, ಗಡಿಯಲ್ಲಿ ಹೆಚ್ಚಿನ ನಿಗಾ ಇಡಲು ಗಿಡುಗಗಳನ್ನು ಬಳಸಿಕೊಳ್ಳಲು ಮುಂದಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. KPSC Recruitment 2022 | ಕೆಪಿಎಸ್‌ಸಿಯಿಂದ ವಿವಿಧ 23 ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
ಕರ್ನಾಟಕ ಲೋಕ ಸೇವಾ ಆಯೋಗವು (ಕೆಪಿಎಸ್‌ಸಿ) ಈಗಾಗಲೇ ಪ್ರಕಟಿಸಿರುವ ವಿವಿಧ 23 ಅಧಿಸೂಚನೆಗಳಿಗೆ (KPSC Recruitment 2022) ಸಂಬಂಧಿಸಿದಂತೆ ಲಿಖಿತ ಪರೀಕ್ಷೆಗಳನ್ನು ನಡೆಸಲು ತಯಾರಿ ನಡೆಸಿದ್ದು, ತಾತ್ಕಾಲಿಕ ವೇಳಾಪಟ್ಟಿಯನ್ನು ಸಿದ್ಧಪಡಿಸಿದೆ.
ಈ ವಿಷಯವನ್ನು ಕೆಪಿಎಸ್‌ಸಿಯ ಕಾರ್ಯದರ್ಶಿ ವಿಕಾಸ್ ಕಿಶೋರ್ ಸುರಳ್ಕರ್ ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ. ಅಲ್ಲದೆ, ಆಯೋಗವು ಸಿದ್ಧಪಡಿಸಿರುವ ತಾತ್ಕಾಲಿಕ ವೇಳಾಪಟ್ಟಿಯನ್ನೂ ಒದಗಿಸಿದ್ದಾರೆ. ಇದೇ ಡಿಸೆಂಬರ್ ಅಂತ್ಯದಿಂದ ಹಿಡಿದು, 2023ರ ಸೆಪ್ಟೆಂಬರ್‌ವರೆಗೆ ಈ ಪರೀಕ್ಷೆಗಳು ನಡೆಯಲಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳು
- Delhi Liquor Policy Scam | ದಿಲ್ಲಿ ಮದ್ಯ ನೀತಿ ಹಗರಣ, ತೆಲಂಗಾಣ ಸಿಎಂ ಕೆಸಿಆರ್ ಪುತ್ರಿಗೆ ಉರುಳು!
- BBMP Election | ಬಿಬಿಎಂಪಿ ಚುನಾವಣೆಗೆ ಮತ್ತೆ ಮೂರು ತಿಂಗಳು ಕಾಲಾವಕಾಶ ಕೋರಿದ ಸರ್ಕಾರ: ಮನಸೇ ಇಲ್ಲ?
- ಮೊಗಸಾಲೆ ಅಂಕಣ | ಆಚಾರವಿಲ್ಲದ ನಾಲಗೆಗೆ ಎಲುಬೂ ಇಲ್ಲ
- Digital rupee | ಬೆಂಗಳೂರು ಸೇರಿದಂತೆ 4 ನಗರಗಳಲ್ಲಿ ಇಂದು ಆರ್‌ಬಿಐ ರಿಟೇಲ್ ಡಿಜಿಟಲ್ ರುಪಾಯಿ ಬಿಡುಗಡೆ
- ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ ವಿಚಾರಣಾರ್ಹತೆ ಇಂದು ನ್ಯಾಯಪೀಠದ ಮುಂದೆ