Site icon Vistara News

ವಿಸ್ತಾರ TOP 10 NEWS: ಜಾಮೀನು ಸಿಕ್ಕ ಮಾಡಾಳ್‌ಗೆ ಭರ್ಜರಿ ಸ್ವಾಗತದಿಂದ, ಶಾಲೆಗೆ ಮೈದಾನ ಕಡ್ಡಾಯವೆಂದ ಸುಪ್ರೀಂಕೋರ್ಟ್‌ವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news-grand welcome to madal virupakshappa to supreme court on school and more news

#image_title

1. Lokayukta Raid : ಮಾಡಾಳ್‌ಗೆ ಮಧ್ಯಂತರ ಜಾಮೀನು ಸಿಕ್ಕರೂ 48 ಗಂಟೆಯೊಳಗೆ ಲೋಕಾಯುಕ್ತ ಮುಂದೆ ಹಾಜರಿ ಕಡ್ಡಾಯ
ಕೆಎಸ್‌ಡಿಎಲ್‌ ಲಂಚ ಪ್ರಕರಣದಲ್ಲಿ (Lokayukta Raid) ಸಿಕ್ಕಿ ಹಾಕಿಕೊಂಡಿರುವ ಚನ್ನಗಿರಿಯ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರಿಗೆ ಹೈಕೋರ್ಟ್‌ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದೆ. ಆದರೆ, ಇನ್ನು 48 ಗಂಟೆಯೊಳಗೆ ಲೋಕಾಯುಕ್ತ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು ಎಂದು ಸೂಚನೆ ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Lokayukta Raid : ಮಧ್ಯಂತರ ಜಾಮೀನು ಸಿಕ್ಕಿದ ಬೆನ್ನಲ್ಲೇ ಭರ್ಜರಿ ಮೆರವಣಿಗೆ ಮೂಲಕ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಪ್ರತ್ಯಕ್ಷ!
ಕೆಎಸ್‌ಡಿಎಲ್‌ ಹಗರಣಕ್ಕೆ ಸಂಬಂಧಿಸಿ ಪ್ರಧಾನ ಆರೋಪಿಯಾಗಿ ಗುರುತಿಸಲ್ಪಟ್ಟ ಬಳಿಕ ತಲೆಮರೆಸಿಕೊಂಡಿದ್ದ ಚನ್ನಗಿರಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರು ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ದೊರೆಯುತ್ತಿದ್ದಂತೆಯೇ ಸಾರ್ವಜನಿಕವಾಗಿ ಪ್ರತ್ಯಕ್ಷವಾಗಿದ್ದಾರೆ! ಪ್ರತ್ಯಕ್ಷವಾಗಿದ್ದು ಮಾತ್ರವಲ್ಲ ಭಾರಿ ಮೆರವಣಿಗೆಯೊಂದಿಗೆ ಸಂಭ್ರಮಾಚರಣೆ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. BJP Politics: ಬಿಜೆಪಿಯ ಅನೇಕ ಹಾಲಿ ಶಾಸಕರಿಗೆ ಟಿಕೆಟ್‌ ಮಿಸ್‌: ಬಿ.ಎಸ್‌. ಯಡಿಯೂರಪ್ಪ ಮಾತಿನಿಂದ ತಲ್ಲಣ
ರಾಜ್ಯದಲ್ಲಿ ಹಾಲಿ ಎಲ್ಲ ಬಿಜೆಪಿ ಶಾಸಕರಿಗೂ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಸಿಗುವುದಿಲ್ಲ ಎನ್ನುವುದನ್ನು (BJP Politics) ಮಾಜಿ ಮುಖ್ಯಮಂತ್ರಿ ಮತ್ತು ಪಕ್ಷದ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Supreme Court: ಆಟದ ಮೈದಾನ ಇಲ್ಲದೇ ಶಾಲೆ ಇರುವಂತಿಲ್ಲ ಎಂದ ಸುಪ್ರೀಂ ಕೋರ್ಟ್
ಆಟದ ಮೈದಾನ ಇಲ್ಲದೇ ಶಾಲೆ ಇರುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌(Supreme Court) ಹೇಳಿದೆ. ಹರ್ಯಾಣದ ಶಾಲಾ ಮೈದಾನ ಒತ್ತುವರಿ ತೆರುವಿಗೆ ಆದೇಶ ನೀಡಿ, ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Women’s Day 2023 : ಮಹಿಳಾ ಉದ್ಯೋಗಿಗಳು 2023ರಲ್ಲಿ ತೆರಿಗೆಯಲ್ಲಿ ಹೇಗೆ ಹೆಚ್ಚು ಉಳಿತಾಯ ಮಾಡಬಹುದು?
ತೆರಿಗೆ ತಜ್ಞರ ಪ್ರಕಾರ ಆದಾಯ ತೆರಿಗೆ ನಿಯಮಗಳು ಸಾಮಾನ್ಯವಾಗಿ ಲಿಂಗ ತಾರತಮ್ಯವನ್ನು ಮಾಡುವುದಿಲ್ಲ. 2012-13ಕ್ಕೆ ಮೊದಲು ಪುರುಷರು ಮತ್ತು ಮಹಿಳೆಯರಿಗೆ ಭಿನ್ನ ತೆರಿಗೆ ಶ್ರೇಣಿಗಳು ಇದ್ದವು. ಆದರೆ ಈಗ ಎಲ್ಲರಿಗೂ ಸಾಮಾನ್ಯ ತೆರಿಗೆ ಶ್ರೇಣಿಗಳಿವೆ. ಮಹಿಳೆಯರು ಯಾವಾಗಲೂ ಹಣ ಉಳಿತಾಯದ ಕೌಶಲದಲ್ಲಿ ಸಿದ್ಧಹಸ್ತರು. ಕೆಳಕಂಡ ತೆರಿಗೆ ಲಾಭಗಳನ್ನು ಅವರು ಪಡೆಯಬಹುದು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Rahul Gandhi In UK:‌ ಆರ್‌ಎಸ್‌ಎಸ್‌ ಮೂಲಭೂತವಾದಿ, ಸರ್ವಾಧಿಕಾರಿ: ಲಂಡನ್‌ನಲ್ಲಿ ಕಿಡಿ ಕಾರಿದ ರಾಹುಲ್‌ ಗಾಂಧಿ
ರಾಷ್ಟ್ರೀಯ ಸ್ವಯಂಸೇವಕ ಸಂಘಟನೆ (ಆರ್‌ಎಸ್‌ಎಸ್‌) ಒಂದು ಮೂಲಭೂತವಾದಿ ಹಾಗೂ ಸರ್ವಾಧಿಕಾರಿ ಸಂಘಟನೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಲಂಡನ್‌ನಲ್ಲಿ ಕಿಡಿ ಕಾರಿದ್ದಾರೆ. ತಮ್ಮ ಒಂದು ವಾರದ ಬ್ರಿಟನ್‌ ಭೇಟಿಯ ಕೊನೆಯಲ್ಲಿ ಸೋಮವಾರ ಲಂಡನ್‌ನ ಚಾತಂ ಹೌಸ್‌ನಲ್ಲಿ ನಡೆದ ಸಂವಾದದಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Elephant death: ವಿದ್ಯುತ್ ತಂತಿ ತಗುಲಿ ಮೂರು ಕಾಡಾನೆಗಳ ದಾರುಣ ಸಾವು; ಕಣ್ಣಂಚಲ್ಲಿ ನೀರು ತರಿಸಿದ ತಬ್ಬಲಿ ಮರಿಗಳ ಗೋಳಾಟ
ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿದ್ದ ಮೂರು ಕಾಡಾನೆಗಳು ವಿದ್ಯುತ್ ತಂತಿ ತಗುಲಿ ದಾರುಣವಾಗಿ (Elephant death) ಮೃತಪಟ್ಟ ಘಟನೆ ಧರ್ಮಪುರಿಯ ಮಾರಂಡಳ್ಳಿ ಸಮೀಪ ನಡೆದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. H3N2 Influenza: ಕೊವಿಡ್ 19ಗೂ-ಎಚ್​3ಎನ್​2ಗೂ ಏನು ಸಂಬಂಧ?-ಐಸಿಯು ದಾಖಲಾತಿ ಕೇಸ್​​ ಹೆಚ್ಚಾಗುತ್ತಿರುವ ಆತಂಕ
ಕಳೆದ ಕೆಲವು ತಿಂಗಳುಗಳಿಂದ ದೇಶಾದ್ಯಂತ ಅನೇಕರಿಗೆ ಎಚ್​3ಎನ್​2 (H3N2 Virus) ಸೋಂಕಿನ ಜ್ವರ ಕಾಣಿಸಿಕೊಳ್ಳುತ್ತಿದೆ. ಇದು ಸಾಮಾನ್ಯ ಶೀತಜ್ವರಕ್ಕೆ ಕಾರಣವಾಗುವ ವೈರಸ್​​ನ ರೂಪಾಂತರಿಯಾಗಿದ್ದು, ಜ್ವರ, ಗಂಟಲುನೋವು, ಶೀತ, ವಾಕರಿಕೆ, ಕೆಮ್ಮು ಇದರ ಲಕ್ಷಣಗಳು. ಮೂರರಿಂದ ಐದುದಿನಗಳವರೆಗೆ ಜ್ವರ ಕಾಡುತ್ತದೆ, ಕೆಮ್ಮು ಮೂರು ವಾರಗಳವರೆಗೆ ಇರುತ್ತದೆ. ದಿನೇದಿನೇ ಹೆಚ್ಚುತ್ತಿರುವ ಎಚ್​3ಎನ್​2 ಸೋಂಕಿನ ಬಗ್ಗೆ ಆರೋಗ್ಯ ಕ್ಷೇತ್ರದ ಅಧಿಕಾರಿಗಳು, ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Nephiu Rio: ನಾಗಾಲ್ಯಾಂಡ್​ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನೆಫಿಯೊ ರಿಯೊ; ಸತತ 5ನೇ ಬಾರಿ ಹುದ್ದೆಗೆ ಏರಿದ ಧುರೀಣ
ನಾಗಾಲ್ಯಾಂಡ್​ನ ಮುಖ್ಯಮಂತ್ರಿಯಾಗಿ ನೆಫಿಯೊ ರಿಯೊ (Nephiu Rio) ಅವರು ಇಂದು ಪ್ರಮಾಣವಚನ ಸ್ವೀಕಾರ ಮಾಡಿದರು. ನಾಗಾಲ್ಯಾಂಡ್​ನ ರಾಜಕೀಯ ಧುರೀಣ, ನ್ಯಾಶನಲ್​ ಡೆಮಾಕ್ರಟಿಕ್​ ಪ್ರೊಗ್ರೆಸ್ಸಿವ್​ ಪಾರ್ಟಿಯ ನಾಯಕ ನೆಫಿಯೊ ರಿಯೊ ಅವರು ಸತತ ಐದನೇ ಬಾರಿಗೆ ನಾಗಾಲ್ಯಾಂಡ್​ನ ಚುಕ್ಕಾಣಿ ಹಿಡಿದರು. ಕೊಹಿಮಾ ಸಿಟಿಯಲ್ಲಿ ನಡೆದ ರಿಯೊ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ನಾಗಾಲ್ಯಾಂಡ್ ರಾಜ್ಯಪಾಲ ಲಾ. ಗಣೇಶನ್​, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವಾ ಶರ್ಮಾ ಪಾಲ್ಗೊಂಡಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Chief Minister Conrad Sangma: ಮೇಘಾಲಯದ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಕಾನ್ರಾಡ್ ಸಂಗ್ಮಾ, ಇಬ್ಬರು ಡಿಸಿಎಂ

10. Viral News: ಸ್ಸಾರಿ ಹುಡ್ಗೀರೇ… ನನ್ನ ಹೆಂಡ್ತಿ ಬಹಳಾ ಸ್ಟ್ರಿಕ್ಟು! ವೈರಲ್ ಆಯ್ತು ಆಟೋ ರಿಕ್ಷಾ ಹಿಂಬದಿ ಸಾಲು!
: ಆಟೋ ರಿಕ್ಷಾಗಳ (auto rickshaw) ಹಿಂಬದಿ ಬರಹಗಳು ಸಾದಾ ಆಗಿದ್ದರೂ ಅವುಗಳಲ್ಲಿರುವ ಅರ್ಥ ಸಾಕಷ್ಟು ವಿವೇಚನೆಗೀಡು ಮಾಡುತ್ತವೆ, ನಗೆಯುಕ್ಕಿಸುತ್ತವೆ. ಈ ರೀತಿಯ ಆಟೋ ಬರಹಗಳು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತವೆ. ಅದೇ ರೀತಿ, ಆಟೋ ಹಿಂಬದಿಯ ಬರಹವೊಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ. ವಂಶಿಕಾ ಗಾರ್ಗ್ ಎಂಬುವರು ಟ್ವಿಟರ್‌ನಲ್ಲಿ ಆಟೋ ಹಿಂಬದಿಯ ಬರಹದ ಫೋಟೋವನ್ನು ಷೇರ್ ಮಾಡಿಕೊಂಡಿದ್ದಾರೆ. ಅದರಲ್ಲಿರುವ, ”ಸಾರಿ ಹುಡುಗಿಯರೇ, ನನ್ನ ಹೆಂಡತಿ ಬಹಳಾ ಸ್ಟ್ರಿಕ್ಟು”(Sorry girls, my wife is very strict) ಎಂಬ ಬರಹ ಸಖತ್ ವೈರಲ್ ಆಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version