Site icon Vistara News

ವಿಸ್ತಾರ TOP 10 NEWS | ಗುಜರಾತ್‌ ಚುನಾವಣೆ ಘೋಷಣೆಯಿಂದ ತುಮಕೂರಿನ ಘನಘೋರ ಘಟನೆವರೆಗಿನ ಪ್ರಮುಖ ಸುದ್ದಿಗಳಿವು

TOP 10 NEWS 03112022

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್‌ ವಿಧಾನಸಭಾ ಚುನಾವಣೆಗಳು ಘೋಷಣೆಯಾಗಿವೆ, ಪ್ರತಿಷ್ಠೆಯ ಕಾಳಗಕ್ಕೆ ವೇದಿಕೆ ಸಜ್ಜಾಗಿದೆ. ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸಹೋದರನ ಪುತ್ರ ಶವವಾಗಿ ಪತ್ತೆಯಾಗಿದ್ದಾರೆ, ಗರ್ಭಿಣಿಗೆ ಚಿಕಿತ್ಸೆ ನೀಡದೆ ಕಳಿಸಿದ ಆಸ್ಪತ್ರೆಯ ಅಮಾನವೀಯ ವರ್ತನೆಯಿಂದಾಗಿ ಅವಳಿ ಮಕ್ಕಳೊಂದಿಗೆ ತಾಯಿ ಪ್ರಾಣ ಬಿಟ್ಟಿದ್ದಾಳೆ, ವಿಸ್ತಾರ ನ್ಯೂಸ್‌ ಚಾನೆಲ್‌ ಲೋಕಾರ್ಪಣೆಗೆ ಕ್ಷಣಗಣನೆ ಆರಂಭವಾಗಿದೆ, ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಹತ್ಯೆಯಿಂದ ಕೂದಲೆಳೆ ಅಂತರದಲ್ಲಿ ಬಚಾವಾಗಿದ್ದಾರೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Gujarat Election | ಗುಜರಾತ್ ವಿಧಾನಸಭೆಗೆ 2 ಹಂತದಲ್ಲಿ ಎಲೆಕ್ಷನ್! ಡಿ.1, 5ಕ್ಕೆ ವೋಟಿಂಗ್, 8ಕ್ಕೆ ಫಲಿತಾಂಶ
ಗುಜರಾತ್ ವಿಧಾನಸಭೆ ಚುನಾವಣೆ(Gujarat Election) ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗವು ಪ್ರಕಟಿಸಿದೆ. ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಮೊದಲನೆ ಹಂತದ ಮತದಾನ ಡಿಸೆಂಬರ್ 1 ಹಾಗೂ ಎರಡನೇ ಹಂತದ ಮತದಾನ ಡಿ.5 ರಂದು ನಡೆಯಲಿದ್ದರೆ, ಡಿಸೆಂಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗವು ತಿಳಿಸಿದೆ. ನವೆಂಬರ್ 5 ಮತ್ತು 10ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುತ್ತದೆ.
ಈ ಹಿಂದಿನ ನಾಲ್ಕೈದು ಚುನಾವಣೆಗಳನ್ನು ಗಮನಿಸಿದರೆ, ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭೆ ಚುನಾವಣೆ ದಿನಾಂಕವನ್ನು ಏಕಕಾಲಕ್ಕೆ ಚುನಾವಣಾ ಆಯೋಗವು ಪ್ರಕಟಿಸುತ್ತಿತ್ತು. ಆದರೆ, ಈ ಬಾರಿ ಚುನಾವಣಾ ಆಯೋಗವು, ಅಕ್ಟೋಬರ್ 14ರಂದು ಹಿಮಾಚಲಪ್ರದೇಶದ ಚುನಾವಣಾ ವೇಳಾಪಟ್ಟಿಯನ್ನು ಮಾತ್ರವೇ ಪ್ರಕಟಿಸಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Missing Case | ರೇಣುಕಾಚಾರ್ಯ ತಮ್ಮನ ಮಗ ಶವವಾಗಿ ಪತ್ತೆ, ಕಾರಿನ ಸಹಿತ ತುಂಗಾ ಮೇಲ್ದಂಡೆ ನಾಲೆಗೆ ಬಿದ್ದು ಸಾವು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಸಹೋದರ ಎಂ.ಪಿ. ರಮೇಶ್ ಪುತ್ರ‌ ಚಂದ್ರಶೇಖರ್‌ (Missing Case) ಕಾರು ಸಮೇತ ಹೊನ್ನಾಳಿ ಹೊರ ವಲಯದ ಕಡದಕಟ್ಟೆ ಗ್ರಾಮ ಸಮೀಪ ಇರುವ ತುಂಗಾ ಮೇಲ್ದಂಡೆ ನಾಲೆಗೆ ಬಿದ್ದು ಮೃತಪಟ್ಟಿದ್ದಾರೆ.
ಭಾನುವಾರ (ಅ. ೩೦) ರಾತ್ರಿ ನಾಪತ್ತೆಯಾಗಿದ್ದ ಚಂದ್ರಶೇಖರ್‌ ಬಗ್ಗೆ ತೀವ್ರ ಹುಡುಕಾಟ ನಡೆದಿತ್ತು. ಆದರೆ, ಗುರುವಾರ (ನ. ೩) ತುಂಗಾ ಮೇಲ್ದಂಡೆ ನಾಲೆಯಲ್ಲಿ ಕಾರು ಬಿದ್ದಿರುವ ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ತೀವ್ರ ಹುಡುಕಾಟ ನಡೆಸಿ ಕಾರನ್ನು ಮೇಲೆ ಎತ್ತಲಾಗಿದ್ದು, ಕಾರಿನೊಳಗೆ ಶವ ಪತ್ತೆಯಾಗಿದೆ. ಸ್ಥಳದಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸಹಿತ ಕುಟುಂಬಸ್ಥರ ರೋದನ ಮುಗಿಲುಮುಟ್ಟಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. ಸಂಪುಟ ಸಭೆ | ರಾಜ್ಯದಲ್ಲಿ ಎರಡು ಹೊಸ Cricket ಕ್ರೀಡಾಂಗಣ, ಬಳ್ಳಾರಿಯಲ್ಲಿ ವಿಮಾನ ನಿಲ್ದಾಣ
ರಾಜ್ಯದ ಎರಡು ಕಡೆ ಹೊಸ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣಕ್ಕೆ ಭೂಮಿ ನೀಡುವುದು, ಬಳ್ಳಾರಿಯಲ್ಲಿ ಸರ್ಕಾರದ ಹಣದಿಂದಲೇ ವಿಮಾನ ನಿಲ್ದಾಣ ನಿರ್ಮಿಸುವುದು ಸೇರಿ ಅನೇಕ ಪ್ರಮುಖ ನಿರ್ಧಾರಗಳನ್ನು ರಾಜ್ಯ ಸಂಪುಟ ಸಭೆ ಕೈಗೊಂಡಿದೆ. ಬಳ್ಳಾರಿಯಲ್ಲಿ ಕ್ರೀಡಾಂಗಣ ಮಾಡಲು 19.26ಎಕರೆ ಜಮೀನು KSCA ನವರಿಗೆ ನೀಡಲು ತಿರ್ಮಾನ ಮಾಡಲಾಗಿದೆ. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಗ್ರಾಮದಲ್ಲಿ ಕ್ರೀಡಾಂಗಣ ಮಾಡಲು 23.25 ಎಕರೆ ಜಮೀನು ‌KSCAಗೆ ನೀಡಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಲಾಗಿದೆ. ಇನ್ನೂ ಅನೇಕ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Vistara News | ವಿಸ್ತಾರ ನ್ಯೂಸ್‌ ಚಾನೆಲ್‌ ನ. 6ರಂದು ಲೋಕಾರ್ಪಣೆ, ದಿನವಿಡೀ ʼವಿಸ್ತಾರ ಕನ್ನಡ ಸಂಭ್ರಮʼ
ಕನ್ನಡ ಮಾಧ್ಯಮ ಲೋಕದಲ್ಲಿ ಸದಭಿರುಚಿಯ ಟಿವಿ ಚಾನೆಲ್‌ ಲೋಕಾರ್ಪಣೆಯ ದಿನ ಸನ್ನಿಹಿತವಾಗಿದೆ. ಹಿರಿಯ ಪತ್ರಕರ್ತ ಮತ್ತು ಹರಿತ ವಿಶ್ಲೇಷಣೆಗಳಿಗೆ ಹೆಸರಾದ ಹರಿಪ್ರಕಾಶ್‌ ಕೋಣೆಮನೆ ಅವರ ನೇತೃತ್ವದಲ್ಲಿ ರೂಪುಗೊಂಡಿರುವ ವಿಸ್ತಾರ ನ್ಯೂಸ್‌ ಚಾನೆಲ್‌ ಅನಾವರಣ ನವೆಂಬರ್‌ ೬ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ವಿಸ್ತಾರ ಮೀಡಿಯಾ ಪ್ರೈವೆಟ್‌ ಲಿಮಿಟೆಡ್‌ನ ಈ ಹೆಮ್ಮೆಯ ಕಾಣಿಕೆ ನಾಡಿನ ಹಲವಾರು ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ವೈಭವೋಪೇತವಾಗಿ ತೆರೆದುಕೊಳ್ಳಲಿದೆ. ವಿಸ್ತಾರ ನ್ಯೂಸ್‌ ಚಾನೆಲ್‌ ಅನಾವರಣದ ಈ ಸಂಭ್ರಮದ ಕ್ಷಣವನ್ನು ʻವಿಸ್ತಾರ ಕನ್ನಡ ಸಂಭ್ರಮʼವಾಗಿ ಆಚರಿಸಲಾಗುತ್ತಿದೆ. ಅಂದು ಬೆಳಗ್ಗಿನಿಂದ ರಾತ್ರಿಯವರೆಗೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Negligence | ಅವಳಿ ಮಕ್ಕಳ ಸಹಿತ ತಾಯಿ ಸಾವು; ತಾಯಿ ಕಾರ್ಡ್ ಇಲ್ಲವೆಂದು ವಾಪಸ್‌ ಕಳಿಸಿದ ಸರ್ಕಾರಿ ಆಸ್ಪತ್ರೆ
ಇದೊಂದು ಘೋರ ಪ್ರಮಾದ. ಜೀವಗಳನ್ನು ಉಳಿಸಬೇಕಾದ ವೈದ್ಯರ ಅಮಾನವೀಯ ಪ್ರಕರಣ. ತಾಯಿ ಕಾರ್ಡ್‌ ಇಲ್ಲವೆಂಬ ಒಂದೇ ಒಂದು ಕಾರಣಕ್ಕೆ ತುಂಬಿ ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿಕೊಳ್ಳಲು ನಿರಾಕರಿಸಿದ ಆ ಒಂದು ತಪ್ಪು ಮೂವರ ಪ್ರಾಣವನ್ನೇ ಕಿತ್ತುಕೊಂಡಿದೆ. ಆಸ್ಪತ್ರೆಗೆ ಬಂದು ಮನೆಗೆ ವಾಪಸಾಗಿದ್ದ ತುಂಬು ಗರ್ಭಿಣಿಯು ಮನೆಯಲ್ಲಿಯೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ತೀವ್ರ ರಕ್ತಸ್ರಾವದಿಂದ ಅಲ್ಲೇ ಜೀವ ಬಿಟ್ಟಿದ್ದಾರೆ. ಅಲ್ಲದೆ, ಆಗಷ್ಟೇ ಹುಟ್ಟಿದ ಅವಳಿ ಹಸುಳೆಗಳೂ ಉಸಿರು ಚೆಲ್ಲಿವೆ. ಭಾರತಿನಗರದ ಅಭಯ ಆಂಜನೇಯನ ಸ್ವಾಮಿ ದೇವಸ್ಥಾನದ ಬಳಿ ಮನೆಯೊಂದರಲ್ಲಿ ಅವಳಿ ಮಕ್ಕಳ ಸಹಿತ ತಾಯಿಯೊಬ್ಬಳು ಮೃತಪಟ್ಟಿರುವ (Negligence) ಘಟನೆ ನಡೆದಿದೆ. 30 ವರ್ಷದ ಕಸ್ತೂರಿ ಎಂಬಾಕೆ ಮೃತ ದುರ್ದೈವಿ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. ಮುರುಘಾಶ್ರೀ ಪ್ರಕರಣ | 2ನೇ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಮುರುಘಾಶರಣರು ಮೂರು ದಿನ ಪೊಲೀಸ್‌ ಕಸ್ಟಡಿಗೆ
ಚಿತ್ರದುರ್ಗದ ಮುರುಘಾಶ್ರೀ ವಿರುದ್ಧದ 2ನೇ ಫೋಕ್ಸೋ ಪ್ರಕರಣದಲ್ಲಿ ಶ್ರೀಗಳಿಗೆ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಚಿತ್ರದುರ್ಗ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆದೇಶ ನೀಡಿದೆ. ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಅ.13ರಂದು ಪ್ರಕರಣ ದಾಖಲಾಗಿತ್ತು. ಅ.14ಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ಪ್ರಕರಣವನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ, ಮೊದಲನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮುರುಘಾ ಶರಣರು ಜೈಲಿನಲ್ಲಿದ್ದ ಹಿನ್ನೆಲೆಯಲ್ಲಿ ದಾಖಲಾಗಿದ್ದ ೨ನೇ ಪ್ರಕರಣದ ವಿಚಾರಣೆ ನಡೆಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ೮ ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Imran Khan ‌March | ಪಿಟಿಐ ರ‍್ಯಾಲಿ ವೇಳೆ ಗುಂಡಿನ ದಾಳಿ, ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ ಗಾಯ
ಪಾಕಿಸ್ತಾನದ ವಜೀರಾಬಾದ್‌ನಲ್ಲಿ ನಡೆದ ಪಿಟಿಐ ಪಕ್ಷದ ರ‍್ಯಾಲಿ ವೇಳೆ ಗುಂಡಿನ ದಾಳಿ ನಡೆಸಲಾಗಿದ್ದು, ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ (Imran Khan ‌March) ಬಲಗಾಲಿಗೆ ಗಾಯಗಳಾಗಿವೆ. ರ‍್ಯಾಲಿ ನಡೆಸುತ್ತಿರುವ ವೇಳೆ ಅಪರಿಚಿತನೊಬ್ಬ ಗುಂಡಿನ ದಾಳಿ ನಡೆಸಿದ್ದು, ಇಮ್ರಾನ್‌ ಖಾನ್‌, ಸಿಂಧ್‌ ಪ್ರಾಂತ್ಯದ ಮಾಜಿ ಗವರ್ನರ್‌ ಸೇರಿ ಒಂಬತ್ತು ಜನರಿಗೆ ಗಾಯಗಳಾಗಿವೆ. ಅಲ್ಲದೆ, ಒಬ್ಬ ಮೃತಪಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Party Join | ಬಿಜೆಪಿ ಸೇರಿದ ಮಾಜಿ ಸಂಸದರಾದ ಮುದ್ದಹನುಮೆಗೌಡ, ಶಶಿಕುಮಾರ್‌; ಯಾವ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳು?
ಮಲ್ಲೇಶ್ವರದಲ್ಲಿರುವ ಬಿಜೆಪಿಯ ಜಗನ್ನಾಥ ಭವನದಲ್ಲಿ ಗುರುವಾರ (ನ.೩) ಏರ್ಪಡಿಸಿದ್ದ ಪಕ್ಷ ಸೇರ್ಪಡೆ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್,‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಸಮ್ಮುಖದಲ್ಲಿ ಮಾಜಿ ಸಂಸದರಾದ ಮುದ್ದಹನುಮೆಗೌಡ ಹಾಗೂ ಶಶಿಕುಮಾರ್, ನಿವೃತ್ತ ಐಎಎಸ್ ಅಧಿಕಾರಿ ಬಿ.ಎಚ್. ಅನಿಲ್ ಕುಮಾರ್, ರಾಜಕೀಯ ನಾಯಕರಾದ ವೆಂಕಟಾಚಲಯ್ಯ, ಸಂಜೀವ್ ರೆಡ್ಡಿ, ವೆಂಕಟೇಶ್ ಮೂರ್ತಿ ಪಕ್ಷ (Party Join)‌ ಸೇರ್ಪಡೆಯಾದರು. ಇವರಲ್ಲಿ ಮೂವರು ನಾಯಕರು ವಿವಿಧ ಕ್ಷೇತ್ರಗಳ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. WhatsApp New Feature | ವಾಟ್ಸ್ಆ್ಯಪ್‌ನಲ್ಲಿ ಕಮ್ಯುನಿಟಿ ರಚಿಸಬಹುದು, ಸಮೀಕ್ಷೆ ಕೂಡ ಮಾಡಬಹುದು!
ಈ ಹಿಂದೆ ಘೋಷಣೆ ಮಾಡಿದಂತೆ ವಾಟ್ಸ್ಆ್ಯಪ್ ಹೊಸ ಫೀಚರ್‌ಗಳನ್ನು ಗುರುವಾರ ಲಾಂಚ್ ಮಾಡಿದೆ. ಕಮ್ಯುನಿಟಿ (Community), ಇನ್-ಚಾಟ್ ಪೋಲ್ಸ್ (in-Chat polls), 32 ಜನರ ಗ್ರೂಪ್ ವಿಡಿಯೋ ಕಾಲಿಂಗ್, ಗ್ರೂಪ್ ಸದಸ್ಯರ ಸಂಖ್ಯೆ ಹೆಚ್ಚಳ ಸೇರಿ ಕೆಲವು ಹೊಸ ಫೀಚರ್‌ಗಳನ್ನು (WhatsApp New Feature) ವಾಟ್ಸ್ಆ್ಯಪ್ ಪರಿಚಯಿಸಿದೆ. ಈ ವರ್ಷದ ಆರಂಭದಲ್ಲಿ ವಾಟ್ಸ್ಆ್ಯಪ್ ಒಡೆತನ ಹೊಂದಿರುವ ಮೆಟಾ ಕಂಪನಿಯ ಸಿಇಒ ಮಾರ್ಕ್ ಜುಕರ್‌ಬರ್ಗ್ (Mark Zuckerberg) ಅವರು, ಈ ಎಲ್ಲ ಫೀಚರ್‌ಗಳನ್ನು ಶೀಘ್ರವೇ ಪರಿಚಯಿಸಲಾಗುವುದು ಎಂದು ಘೋಷಿಸಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Kantara Movie | ವರಾಹ ರೂಪಂ ಮ್ಯೂಸಿಕ್‌ ಕದ್ದಿಲ್ಲ, ಸಾಬೀತು ಪಡಿಸುತ್ತೇವೆ: ರಿಷಬ್‌ ಶೆಟ್ಟಿ!
ಕಾಂತಾರ ಸಿನಿಮಾದ (Kantara Movie) ʻವರಾಹ ರೂಪಂʼ ಹಾಡು ಸಾಕಷ್ಟು ಚರ್ಚೆಯಲ್ಲಿತ್ತು. ಕಾಂತಾರ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ನಿರ್ದೇಶಕ, ನಟ ರಿಷಬ್ ಶೆಟ್ಟಿ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದಾರೆ. ʻʻಸಿನಿಮಾದ ಕ್ಲೈಮ್ಯಾಕ್ಸ್‌ ಹಾಡು ವರಾಹ ರೂಪಂ ಮ್ಯೂಸಿಕ್‌ ಕದ್ದಿಲ್ಲ. ಜನರನ್ನು ಹಾದಿ ತಪ್ಪಿಸುವ ಕೆಲಸ ಆಗುತ್ತಿದೆʼʼ ಎಂದು ರಿಷಬ್‌ ಶೆಟ್ಟಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳು

🔴 Koo Downloads | 5 ಕೋಟಿ ಡೌನ್‌ಲೋಡ್ಸ್‌ ಕಂಡ ಕನ್ನಡಿಗರೇ ಅಭಿವೃದ್ಧಿಪಡಿಸಿದ ಕೂ, 2 ವರ್ಷದಲ್ಲೇ ಜನಪ್ರಿಯ
🔴 Tech Mahindra | ಟೆಕ್‌ ಮಹೀಂದ್ರಾದಿಂದ ಮುಂದಿನ 5 ವರ್ಷಗಳಲ್ಲಿ 20,000 ನೇಮಕ
🔴 ಮೊಗಸಾಲೆ ಅಂಕಣ | ಬಿಜೆಪಿ ಚುನಾವಣಾ ಜಯಕ್ಕೆ ʻತಾರಾಬಲʼ
🔴 Inhuman police | ಪುಟ್ಟ ಮಗುವಿನ ಜತೆ ಆಸ್ಪತ್ರೆಗೆ ಹೊರಟಿದ್ದ ದಂಪತಿಯ ಬೈಕ್‌ ತಡೆದು ಪೊಲೀಸ್‌ ಕಿರುಕುಳ

Exit mobile version