Site icon Vistara News

ವಿಸ್ತಾರ TOP 10 NEWS | 108 ಆಂಬ್ಯುಲೆನ್ಸ್ ಸೇವೆ ವ್ಯತ್ಯಯದಿಂದ ಚೀನಾದಲ್ಲಿ ಸೇನೆ ದಂಗೆವರೆಗಿನ ಪ್ರಮುಖ ಸುದ್ದಿಗಳಿವು

TOP 10 NEWS 25092022

ಬೆಂಗಳೂರು: ಅನಾರೋಗ್ಯ ಪೀಡಿತರು ಹಾಗೂ ಅಪಘಾತಕ್ಕೆ ಒಳಗಾದವರನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಆಸ್ಪತ್ರೆಗೆ ಸಾಗಿಸಬೇಕಾದ 108 ಆಂಬ್ಯುಲೆನ್ಸ್ ಸೇವೆಯಲ್ಲಿ ವ್ಯತ್ಯಯ ಆಗಿದ್ದರಿಂದ ರಾಜ್ಯದ ಜನರು ಭಾನುವಾರ ಸಂಕಷ್ಟ ಎದುರಿಸಬೇಕಾಯಿತು. ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗುವವರಿಗೆ ಕರಾಟೆ ತರಬೇತಿ ನೀಡುತ್ತಿದ್ದ ಆಘಾತಕಾರಿ ಮಾಹಿತಿ, ಚೀನಾದಲ್ಲಿ ಸೇನಾ ದಂಗೆ ಎದ್ದಿದೆ ಎಂಬ ವದಂತಿ, ಉತ್ತರಾ ಖಂಡದಲ್ಲಿ ಅಂಕಿತಾ ಭಂಡಾರಿ ಹತ್ಯೆ ನಂತರ ಸಾರ್ವಜನಿಕರ ಆಕ್ರೋಶ, ಮನ್‌ ಕಿ ಬಾತ್‌ ಸರಣಿಯಲ್ಲಿ ಬೆಂಗಳೂರಿನ ಎನ್‌ಜಿಒ ಕಾರ್ಯವನ್ನು ಶ್ಲಾಘಿಸಿದ ಪ್ರಧಾನಿ ಮೋದಿ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. 108 ಆಂಬ್ಯುಲೆನ್ಸ್ ತಾಂತ್ರಿಕ ಸಮಸ್ಯೆ | ರಾಜ್ಯದ ಜನರ ಕ್ಷಮೆ ಯಾಚಿಸಿದ ಆರೋಗ್ಯ ಸಚಿವ ಸುಧಾಕರ್‌
108 ಆಂಬ್ಯುಲೆನ್ಸ್ ಸೇವೆಗಳ ಸಹಾಯವಾಣಿಯಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದರಿಂದ ರಾಜ್ಯಾದ್ಯಂತ ರೋಗಿಗಳು ಪರದಾಡುವಂತಾಯಿತು. ಸಿಎಂ ಬಸವರಾಜ ಬೊಮ್ಮಾಯಿ. ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಸೇರಿ ಸರ್ಕಾರ ಈ ನಿಟ್ಟಿನಲ್ಲಿ ಇಡೀ ದಿನದ ಕಾರ್ಯಾಚರಣೆ ನಂತರ ಒಂದು ಹಂತಕ್ಕೆ ಸರಿಪಡಿಸಲಾಗಿದೆ. “ಕೆಲ ತಾಂತ್ರಿಕ ಸಮಸ್ಯೆಗಳು ಸೃಷ್ಟಿಯಾಗಿದ್ದು, ಅದಕ್ಕೆ ಪೂರಕವಾಗಿ ಕ್ರಮ ತೆಗೆದುಕೊಳ್ಳಲಾಗಿದೆ. ರಾಜ್ಯದ ಜನರು ಈ ಕುರಿತು ಯಾವುದೇ ಆತಂಕಕ್ಕೊಳಗಾಗುವುದು ಬೇಡʼ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.
ರಾಜ್ಯದಲ್ಲಿ ರಾತ್ರಿಯಿಂದ 108 ಆ್ಯಂಬುಲೆನ್ಸ್​ ಸೇವೆ ಸ್ಥಗಿತ; ರೋಗಿಗಳಿಗೆ ಸಂಕಷ್ಟ
ತುಮಕೂರಲ್ಲಿ ಕರೆ ಮಾಡಿ ತಾಸು ಕಳೆದರೂ ಬಾರದ ಆ್ಯಂಬುಲೆನ್ಸ್​; ಮನೆಯಲ್ಲೇ ಮೃತಪಟ್ಟ ಮಹಿಳೆ

2. NIA Raid | ದೇಶಾದ್ಯಂತ ಎನ್‌ಐಎ ದಾಳಿಗೆ ಕಾರಣವಾಗಿದ್ದು ಪಿಎಫ್‌ಐ ಸದಸ್ಯರ ಕರಾಟೆ ಕ್ಲಾಸ್!
ಕರಾಟೆ ಕ್ಲಾಸ್ ನೆಪದಲ್ಲಿ ಪಿಎಫ್ಐ ಸದಸ್ಯರಿಗೆ ಭಯೋತ್ಪಾದನೆಯ ಕೃತ್ಯಗಳಿಗೆ ತರಬೇತಿ ನೀಡುತ್ತಿದ್ದ ಆಘಾತಕಾರಿ ಅಂಶ ಬಯಲಾಗಿದೆ. ಇದರ ಸುಳಿವನ್ನು ಆಧರಿಸಿ ತನಿಖೆ ನಡೆಸಿದ ಎನ್‌ಐಎ, ದೇಶಾದ್ಯಂತ ನಾನಾ ಕಡೆಗಳಲ್ಲಿ ಪಿಎಫ್‌ಐ ಜಾಲದ ಮೇಲೆ ದಾಳಿ (NIA Raid) ನಡೆಸಿತ್ತು.
ತೆಲಂಗಾಣದ ಆಟೋನಗರ್‌ನಲ್ಲಿ ಅಬ್ದುಲ್ ಖಾದರ್ ಎಂಬಾತ ಕರಾಟೆ ಕ್ಲಾಸ್‌ಗಳನ್ನು ನಡೆಸುತ್ತಿದ್ದ. ಇಲ್ಲಿ ಪಿಎಫ್‌ಐ ಸದಸ್ಯರಿಗೆ ವಿಧ್ವಂಸಕ ಚಟುವಟಿಕೆಗಳನ್ನು ನಡೆಸಲು ತರಬೇತಿ ನೀಡಲಾಗುತ್ತಿತ್ತು. ಈ ಬಗ್ಗೆ ಹೈದರಾಬಾದ್ ಎನ್‌ಐಎನಲ್ಲಿ (National Investigation Agency) ಪ್ರಕರಣ ಹಾಗೂ, ಅಬ್ದುಲ್ ಖಾದರ್ ಸೇರಿ 27 ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಇವರಲ್ಲಿ ಹಲವರನ್ನು ಎನ್ ಐ ಎ ಅಧಿಕಾರಿಗಳು ಬಂಧಿಸಿದ್ದರು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

3. ದಸರಾ ಉದ್ಘಾಟನೆಗೆ ಕ್ಷಣಗಣನೆ: ರಾಷ್ಟ್ರಪತಿ ಮುರ್ಮು ಮುಖ್ಯ ಅತಿಥಿ
ನಾಡಹಬ್ಬ ದಸರಾ ಉದ್ಘಾಟನೆ ಸಮಾರಂಭ ಸೆ.26ರಂದು ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಕೊವಿಡ್​ 19 ಕಾರಣದಿಂದ ಕಳೆದ ಎರಡು ವರ್ಷಗಳಿಂದಲೂ ಸರಳವಾಗಿ ನಡೆದಿದ್ದ ದಸರಾ ಈ ಸಲ ಅದ್ದೂರಿಯಾಗಿಯೇ ನಡೆಯಲಿದೆ. ಇದೇ ಮೊದಲ ಬಾರಿಗೆ ದೇಶದ ರಾಷ್ಟ್ರಪತಿಯಿಂದ ದಸರಾ ಉದ್ಘಾಟನೆ ನೆರವೇರಲಿದ್ದು, ದ್ರೌಪದಿ ಮುರ್ಮು ಅವರು ರಾಜ್ಯಕ್ಕೆ ಮೊದಲ ಪ್ರವಾಸದಲ್ಲಿ ದಸರಾ ಉದ್ಘಾಟನೆ ನೆರವೇರಿಸಲಿದ್ದಾರೆ. ಈಗಾಗಲೆ ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಸರ್ಕಾರದ ಪ್ರಮುಖರು ಮೈಸೂರು ತಲುಪಿದ್ದಾರೆ. ನಂಯರ ಹುಬ್ಬಳ್ಳಿಗೆ ತೆರಳಲಿರುವ ರಾಷ್ಟ್ರಪತಿ, ಪೌರ ಸನ್ಮಾನ ಸ್ವೀಕರಿಸಲಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

4. China coup | ಚೀನಾದಲ್ಲಿ ಮಿಲಿಟರಿ ದಂಗೆ? ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಗೃಹ ಬಂಧನದ ವದಂತಿ
ಚೀನಾದಲ್ಲಿ ಮಿಲಿಟರಿ ದಂಗೆ ಉಂಟಾಗುವ ಸಾಧ್ಯತೆ ಇದ್ದು, ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಗೃಹಬಂಧನ ವಿಧಿಸಲಾಗಿದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದ್ದು, (China coup) ಊಹಾಪೋಹಗಳು ಉಂಟಾಗಿವೆ.
ಚೀನಾದಲ್ಲಿ ಇಬ್ಬರು ಮಾಜಿ ಸಚಿವರುಗಳಿಗೆ ಭ್ರಷ್ಟಾಚಾರ ಪ್ರಕರಣದಡಿಯಲ್ಲಿ ಮರಣದಂಡನೆಯ ಶಿಕ್ಷೆ ವಿಧಿಸಿದ ಬಳಿಕ ನಾನಾ ವದಂತಿಗಳು ಹರಡಿವೆ. ಇದು ದೇಶದ ಇತಿಹಾಸದಲ್ಲೇ ಅತ್ಯಂತ ವಿವಾದಾತ್ಮಕ ನಿರ್ಧಾರ ಎನ್ನಲಾಗಿದೆ. ಇತರ ನಾಲ್ವರು ಹಿರಿಯ ಅಧಿಕಾರಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

5. ʼಸರ್ಕಾರದ ಕೆಲಸ ದೇವರ ಕೆಲಸʼ ಫಲಕದ ಜತೆಗೆ ಇನ್ನೊಂದು ಬೋರ್ಡೂ ಹಾಕಬೇಕು!: ರಾಜ್ಯ ಸರ್ಕಾರದ ಮಹತ್ವದ ಹೆಜ್ಜೆ
ಸರ್ಕಾರದ ಕೆಲಸ ದೇವರ ಕೆಲಸ ಎಂದು ವಿಧಾನಸೌಧದ ಮುಂಭಾಗದಲ್ಲಿ ಕೆತ್ತಿಸಲಾಗಿದೆ ಹಾಗೂ ಅನೇಕ ಸರ್ಕಾರಿ ಕಚೇರಿಗಳಲ್ಲಿ ಫಲಕ ಅಳವಡಿಸಲಾಗಿರುತ್ತದೆ. ಆದರೆ ಇದೀಗ ರಾಜ್ಯ ಸರ್ಕಾರ ಹೊಸದೊಂದು ಚಿಂತನೆಯನ್ನು ನಡೆಸಿದ್ದು, ಇನ್ನೊಂದು ಫಲಕವನ್ನೂ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಬೇಕಿದೆ.
ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ವಿಪರೀತವಾಗಿದೆ. ಈ ಹಿನ್ನೆಲೆಯಲ್ಲಿ ಕಾನೂನು ಶಿಕ್ಷೆ ಒಂದೆಡೆಯಾದರೆ, ನೈತಿಕವಾಗಿ ಸರ್ಕಾರಿ ನೌಕರರು ಭ್ರಷ್ಟಾಚಾರದಿಂದ ದೂರ ಸರಿಯುವಂತೆ ಮಾಡುವ ಯೋಚನೆ ಬಂದಿದೆ. ಈ ಕುರಿತು ಎನ್‌ಜಿಒಒಂದರ ಪ್ರಸ್ತಾಔನೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಸಿಎಂ ಕಚೇರಿ ರವಾನಿಸಿದ್ದು, ಅದರಂತೆ ಎಲ್ಲ ಕಚೇರಿಗಳಲ್ಲಿ ʼನನಗೆ ಯಾರೂ ಲಂಚ ಕೊಡಬೇಕಿಲ್ಲ, ನಾನು ಭ್ರಷ್ಟ ಅಧಿಕಾರಿಯಾಗಲಾರೆʼ ಎಂದು ನಾಮಫಲಕ ಅಳವಡಿಸಬೇಕಾಗುತ್ತದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

6. ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಜನ್ಮದಿನ | ಏಕಾತ್ಮ ಮಾನವತಾವಾದ ಮಾತ್ರವೇ ಸಮಾಜವನ್ನು ಮುನ್ನಡೆಸಬಲ್ಲದು: ಪಿ. ರಾಜೀವ್‌ ವಿಶೇಷ ಲೇಖನ
ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅವರು ಈ ದೇಶ ಕಂಡ ಪ್ರಮುಖ ರಾಜಕೀಯ ಚಿಂತಕರು, ಅರ್ಥಶಾಸ್ತ್ರಜ್ಞರು, ಸಂಘಟಕರಲ್ಲೊಬ್ಬರು. ದೀನದಯಾಳ್‌ ಉಪಾಧ್ಯಾಯರ ಜನ್ಮದಿನದಂದು ಅವರ ಚಿಂತನೆ, ಜೀವನ, ಆಲೋಚನೆಗಳ ಕುರಿತು ಕುಡಚಿ ವಿಧಾನಸಭಾ ಕ್ಷೇತ್ರದ ಶಾಸಕ ಪಿ. ರಾಜೀವ್‌ ಅವರ ವಿಶೇಷ ಲೇಖನ ಇಲ್ಲಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.
ವಿದ್ಯಾರಣ್ಯಪುರ ಉದ್ಯಾನವನಕ್ಕೆ ದೀನದಯಾಳ್‌ ಉಪಾಧ್ಯಾಯ ಹೆಸರು: ಸಿಎಂ ಬೊಮ್ಮಾಯಿ ಭಾಗಿ

7. Receptionist Murder | ಅಂಕಿತಾ ಭಂಡಾರಿ ಅಂತ್ಯಕ್ರಿಯೆಗೆ ಸಿದ್ಧತೆ, ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಜನ
ಉತ್ತರಾಖಂಡದ ಬಿಜೆಪಿ ನಾಯಕನ ರೆಸಾರ್ಟ್‌ನಲ್ಲಿ ರಿಸಪ್ಶನಿಸ್ಟ್‌ ಆಗಿದ್ದ ಅಂಕಿತಾ ಭಂಡಾರಿ ಹತ್ಯೆಗೀಡಾಗಿ (Receptionist Murder) ಮೂರು ದಿನವಾದರೂ ಜನಾಕ್ರೋಶ ಕಡಿಮೆಯಾಗಿಲ್ಲ. ಕಾಶ್ಮೀರದ ಶ್ರೀನಗರದಲ್ಲಿರುವ ಶವಾಗಾರದಿಂದ ಅಂಕಿತಾ ಭಂಡಾರಿಯ ಶವವನ್ನು ಅಂತ್ಯಸಂಸ್ಕಾರಕ್ಕೆ ತೆಗೆದುಕೊಂಡು ಹೋಗಲು ಅವರ ತಂದೆ ಆಗಮಿಸಿದಾಗ ಶವಾಗಾರದ ಎದುರು ನೂರಾರು ಜನ ಜಮಾವಣೆಗೊಂಡು ಹತ್ಯೆಯನ್ನು ಖಂಡಿಸಿದ್ದಾರೆ. ಹಾಗೆಯೇ, ಶವಾಗಾರದ ಎದುರು ಪ್ರತಿಭಟನೆ ನಡೆಸಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

8. ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಸ್ಮರಣೆ | ಕೇರಂ ಬೋರ್ಡ್‌ ಅಂಕಣ | ಉಸಿರು ಹಿಡಿದು ಹಾಡುವೆ, ಕೇಳಡಿ ಕಣ್ಮಣಿ!
ದಂತಕತೆ ಗಾಯಕ ಎಸ್‌ಪಿಬಿ(SPB) ನಮ್ಮನ್ನು ಅಗಲಿ ಇಂದಿಗೆ(ಸೆ.25) ಎರಡು ವರ್ಷ. ಆದರೆ, ಅವರು ಹಾಡಿ ಬಿಟ್ಟು ಹೋದ ಹಾಡುಗಳಿಗೆ ಸಾವಿಲ್ಲ. ಯುಗ ಯುಗ ಕಳೆದರೂ ಅವರ ಹಾಡುಗಳು ನಮ್ಮನ್ನು ರಂಜಿಸುತ್ತಲೇ ಇರುತ್ತವೆ.
ಎಸ್‌ಪಿ ಬಾಲಸುಬ್ರಹ್ಮಣ್ಯಂ ಎಂದರೆ ಉಸಿರು ಬಿಗಿಹಿಡಿದು ಹಾಡಿದ ಒಬ್ಬ ಗಂಧರ್ವನ ಚಿತ್ರ ಕಣ್ಣ ಮುಂದೆ ಮೂಡುವುದು. ಕೇಳಡಿ ಕಣ್ಮಣಿಯಲ್ಲಿ ಅವರು ಹಾಡಿದ ಬ್ರೆತ್‌ಲೆಸ್‌ ಹಾಡು ಕೂಡ ಇದನ್ನೇ ನೆನಪಿಸುವುದು. ಅಂಕಣ ಓದಲು ಇಲ್ಲಿ ಕ್ಲಿಕ್‌ ಮಾಡಿ.
Legend Singer SPB | ತಮ್ಮ ಕಂಠಸಿರಿಯಿಂದಲೇ ಚಿತ್ರರಂಗದ ಸಿರಿ ಹೆಚ್ಚಿಸಿದ ಎಸ್‌ಪಿಬಿ
ಗಾನ ಗಂಧರ್ವ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರನ್ನು ಸ್ಮರಿಸೋಣ

9. UN Security Council | ವಿಶ್ವಸಂಸ್ಥೆ ಭದ್ರತಾ ಮಂಡಳಿ ಕಾಯಂ ಸದಸ್ಯತ್ವಕ್ಕೆ ಭಾರತವನ್ನು ಬೆಂಬಲಿಸಿದ ರಷ್ಯಾ
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವಕ್ಕೆ ಭಾರತವನ್ನು (UN Security Council) ರಷ್ಯಾ ಬೆಂಬಲಿಸಿದೆ.
ವಿಶ್ವಸಂಸ್ಥೆಯ ಜನರಲ್‌ ಅಸೆಂಬ್ಲಿಯ 77ನೇ ಅಧಿವೇಶನದಲ್ಲಿ ಮಾತನಾಡಿದ ರಷ್ಯಾ ಹಣಕಾಸು ಸಚಿವ ಸರ್ಗಿ ಲಾವ್ರೊ, ” ವಿಶ್ವಸಂಸ್ಥೆಯ ಭದ್ರತಾಮಂಡಳಿಯನ್ನು ಹೆಚ್ಚು ಪ್ರಜಾಸತ್ತಾತ್ಮಕ ರೀತಿಯಲ್ಲಿ ವಿಸ್ತರಿಸಬೇಕಾಗಿದೆ. ಆಫ್ರಿಕಾ, ಏಷ್ಯಾ, ಲ್ಯಾಟಿನ್‌ ಅಮೆರಿಕದ ದೇಶಗಳನ್ನು ಸೇರಿಸಬೇಕು. ಕಾಯಂ ಸದಸ್ಯತ್ವಕ್ಕೆ ಭಾರತ ಮತ್ತು ಬ್ರೆಜಿಲ್‌ ಅನ್ನು ಪರಿಗಣಿಸಬೇಕುʼʼ ಎಂದು ಹೇಳಿದರು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

10. Mann Ki Baat 2022 | ರಸ್ತೆ ಬದಿ ಗೋಡೆಗಳನ್ನು ಸ್ವಚ್ಛಗೊಳಿಸುವ ಬೆಂಗಳೂರಿನ ಯೂತ್‌ ಫಾರ್ ಪರಿವರ್ತನ್‌ಗೆ ಪ್ರಧಾನಿ ಪ್ರಶಂಸೆ
ಬೆಂಗಳೂರಿನಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿನ ಆವರಣ ಗೋಡೆಗಳನ್ನು ಸ್ವಚ್ಛಗೊಳಿಸಿ, ಕಲಾತ್ಮಕವಾಗಿ ಅಂದಗೊಳಿಸುವ ಯೂತ್‌ ಫಾರ್‌ ಪರಿವರ್ತನ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬಾನುಲಿ ಕಾರ್ಯಕ್ರಮ ಮನ್‌ಕಿ ಬಾತ್‌ನಲ್ಲಿ ಮೆಚ್ಚುಗೆ (Mann Ki Baat 2022) ವ್ಯಕ್ತಪಡಿಸಿದ್ದಾರೆ.
” ಬೆಂಗಳೂರಿನ ಯೂತ್‌ ಫಾರ್‌ ಪರಿವರ್ತನ್‌ ಸಂಘಟನೆಯು ನಗರದ 370ಕ್ಕೂ ಹೆಚ್ಚು ಸ್ಥಳಗಳಲ್ಲಿ ಗೋಡೆಗಳನ್ನು ಸ್ವಚ್ಛಗೊಳಿಸುವುದಲ್ಲದೆ, ವರ್ಣಮಯ ಚಿತ್ತಾರಗಳಿಂದ ಅಲಂಕರಿಸಿದೆ. ದೂರುವುದನ್ನು ನಿಲ್ಲಿಸಿ, ಕಾರ್ಯಪ್ರವೃತ್ತರಾಗಿ ಎನ್ನುವುದೇ ಸಂಘಟನೆಯ ಧ್ಯೇಯೋದ್ದೇಶ. 100ರಿಂದ 150 ನಾಗರಿಕರು ಇದರಲ್ಲಿ ತೊಡಗಿಸಿಕೊಂಡಿದ್ದಾರೆʼʼ ಎಂದರು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

Exit mobile version