Site icon Vistara News

ವಿಸ್ತಾರ TOP 10 NEWS | ಇನ್ವೆಸ್ಟ್‌ ಕರ್ನಾಟಕ ಭರ್ಜರಿ ಆರಂಭದಿಂದ ಬಾಂಗ್ಲಾ ವಿರುದ್ಧ ಕ್ರಿಕೆಟ್‌ ಜಯದವರೆಗಿನ ಪ್ರಮುಖ ಸುದ್ದಿಗಳಿವು

TOP 10 NEWS 02112022

ಬೆಂಗಳೂರು: ರಾಜ್ಯಕ್ಕೆ ಉದ್ಯಮಿಗಳನ್ನು ಆಕರ್ಷಿಸುವ ಸಲುವಾಗಿ ಏರ್ಪಡಿಸಿರುವ ʼಇನ್ವೆಸ್ಟ್‌ ಕರ್ನಾಟಕʼ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಮೊದಲ ದಿನವೇ ಸಾವಿರಾರು ಕೋಟಿ ರೂ. ಹೂಡಿಕೆ ಒಪ್ಪಂದಗಳಾಗಿವೆ. ನ್ಯಾಷನಲ್‌ ಹೆರಾಲ್ಟ್‌ ಪ್ರಕರಣದಲ್ಲಿ ತಮ್ಮನ್ನು ಟಾರ್ಗೆಟ್‌ ಮಾಡಲಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್‌ ಆರೋಪಿಸಿದ್ದಾರೆ, ವಿಧಾನ ಪರಿಷತ್‌ ಸದಸ್ಯ ಬಾಬುರಾವ್‌ ಚಿಂಚನಸೂರು ಹೇಳಿಕೆ ಸರ್ಕಾರಕ್ಕೆ ಮುಜುಗರ ತಂದಿಟ್ಟಿದೆ, ವಿಜಯಪುರದಲ್ಲಿ ಒಂದೇ ಕುಟುಂಬದ ನಾಲ್ವರು ಮಕ್ಕಳು ಮುಳುಗಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ, ಬಾಂಗ್ಲಾ ವಿರುದ್ಧ ಭಾರತದ ಪುರುಷರ ಕ್ರಿಕೆಟ್‌ ತಂಡ ಜಯಗಳಿಸಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Invest Karnataka-2022 | ಹೂಡಿಕೆಗೆ ನಮ್ಮಲ್ಲೀಗ ಕೆಂಪು ಹಾಸು ಮಾತ್ರ, ಕೆಂಪು ಪಟ್ಟಿ ಇಲ್ಲ ಎಂದ ಪ್ರಧಾನಿ ಮೋದಿ
ದೇಶದಲ್ಲಿ ಈಗ ಔದ್ಯಮಿಕ ಕ್ಷೇತ್ರದ ಹೂಡಿಕೆಗೆ ಸಂಬಂಧಿಸಿ ಕೆಂಪು ಪಟ್ಟಿ ಎಂಬ ಮಾತೇ ಇಲ್ಲ. ನಾವು ಕೆಂಪು ಹಾಸನ್ನು ಹಾಸಿದ್ದೇವೆ. ದೇಶವನ್ನು ನಾನಾ ಆಯಾಮಗಳಲ್ಲಿ ಹೂಡಿಕೆಗೆ ಸಜ್ಜುಗೊಳಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಬೆಂಗಳೂರು ಅರಮನೆ ಮೈದಾನದಲ್ಲಿ ಬುಧವಾರ ಆರಂಭಗೊಂಡ ಮೂರು ದಿನಗಳ ಇನ್ವೆಸ್ಟ್‌ ಕರ್ನಾಟಕ- invest karnataka-2022 ಹೂಡಿಕೆದಾರರ ಸಮಾವೇಶದಲ್ಲಿ ಅವರು ಮಾತನಾಡಿದರು. ವಿಡಿಯೊ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಅವರು ಭಾಗಿಯಾದರು. ಬಿಲ್ಡ್ ಫಾರ್ ದಿ ವರ್ಲ್ಡ್ ಎಂಬ ಪರಿಕಲ್ಪನೆಯಡಿ ನಡೆಯುತ್ತಿರುವ ಸಮಾವೇಶ ಇದಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Industry4.0 ಗೆ ಭಾರತ ಫುಲ್‌ ರೆಡಿ, ಯುವಜನತೆಗೆ ಭರ್ಜರಿ ಅವಕಾಶ ಎಂದ ಮೋದಿ

2. Invest Karnataka 2022 | ಬ್ರ್ಯಾಂಡ್‌ ಬೆಂಗಳೂರು ಈಗ ಜಾಗತಿಕ ಬ್ರ್ಯಾಂಡ್‌ ಎಂದು ಹಾಡಿ ಹೊಗಳಿದ ಮೋದಿ
ಬ್ರ್ಯಾಂಡ್‌ ಬೆಂಗಳೂರು ಎನ್ನುವುದು ಈಗ ಕೇವಲ ಭಾರತೀಯ ಪರಿಕಲ್ಪನೆಯಲ್ಲ. ಇಡೀ ಜಗತ್ತಿನಲ್ಲಿ ಜನಪ್ರಿಯವಾಗಿದೆ. ಪ್ರಪಂಚದಾದ್ಯಂತದ ಔದ್ಯಮಿಕ ಕಂಪನಿಗಳು ಈಗ ಹೂಡಿಕೆಗಾಗಿ ಬೆಂಗಳೂರಿನತ್ತ ನೋಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಡಿ ಹೊಗಳಿದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಬುಧವಾರ ಆರಂಭಗೊಂಡ ಮೂರು ದಿನಗಳ ಇನ್ವೆಸ್ಟ್‌ ಕರ್ನಾಟಕ- invest karnataka 2022 ಸಮಾವೇಶದಲ್ಲಿ ವರ್ಚುವಲ್‌ ಆಗಿ ಭಾಗವಹಿಸಿ ಅವರು ಮಾತನಾಡಿದರು. ಪ್ರತಿಭೆ ಮತ್ತು ತಂತ್ರಜ್ಞಾನ (Talent and technology) ವಿಷಯ ಬಂದಾಗ ನನಗೆ ಮೊದಲು ನೆನಪಾಗುವ ಹೆಸರೇ ಬ್ರ್ಯಾಂಡ್‌ ಬೆಂಗಳೂರು ಎಂದರು ಪ್ರಧಾನಿ ಮೋದಿ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Invest Karnataka 2022 | ದೇಶದ ಮೊಟ್ಟ ಮೊದಲ ಗ್ರೀನ್‌ ಹೈಡ್ರೋಜನ್‌ ಘಟಕ ಮಂಗಳೂರಿನಲ್ಲಿ ಅಸ್ತಿತ್ವಕ್ಕೆ
ಮಂಗಳೂರಿನಲ್ಲಿ ದೇಶದ ಮೊಟ್ಟ ಮೊದಲ ಗ್ರೀನ್‌ ಹೈಡ್ರೋಜನ್‌ ಕ್ಲಸ್ಟರ್‌ (Green Hydrogen cluster) ಅಸ್ತಿತ್ವಕ್ಕೆ ಬರಲಿದೆ. 7 ಕಂಪನಿಗಳು ಒಟ್ಟು 2.91 ಲಕ್ಷ ಕೋಟಿ ರೂ.ಗಳ ಬೃಹತ್‌ ಹೂಡಿಕೆಯನ್ನು ರಾಜ್ಯದಲ್ಲಿ ಈ ಕ್ಷೇತ್ರದಲ್ಲಿ ಮಾಡಲಿವೆ (Invest Karnataka 2022) ಎಂದು ಘೋಷಿಸಲಾಗಿದೆ. ಜೆಎಸ್‌ಡಬ್ಲ್ಯು ಗ್ರೀನ್‌ ಎನರ್ಜಿ ಕಂಪನಿಯು ಗ್ರೀನ್‌ ಅಮೋನಿಯಾ ಘಟಕವನ್ನು 40,148 ಕೋಟಿ ರೂ. ಹೂಡಿಕೆಯಲ್ಲಿ ನಿರ್ಮಿಸಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. ED vs DKS | ನ್ಯಾಷನಲ್‌ ಹೆರಾಲ್ಡ್ ತನಿಖೆ ರದ್ದು ಕೋರಿ ಅರ್ಜಿ: ಚುನಾವಣೆಗೆ ಮುನ್ನ ಬಂಧನಕ್ಕೆ ಸಂಚು ಎಂದ ಡಿಕೆಶಿ
ಹಣ ಲೇವಾದೇವಿ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ನಡೆಸುತ್ತಿರುವ ತನಿಖೆಯನ್ನು ರದ್ದು ಮಾಡಬೇಕು ಎಂದು ಕೋರಿ ಕಾಂಗ್ರೆಸ್‌ ನಾಯಕ ಡಿ.ಕೆ. ಶಿವಕುಮಾರ್‌ ಅವರು ಸಲ್ಲಿಸಿರುವ ಅರ್ಜಿಯ ವಿಚಾರದಲ್ಲಿ ದಿಲ್ಲಿ ಹೈಕೋರ್ಟ್‌ ಇ.ಡಿಗೆ ನೋಟಿಸ್‌ ಜಾರಿಗೊಳಿಸಿದೆ. ಎಲ್ಲ ವಿಚಾರಣೆಗಳು ಮುಗಿದಿದ್ದರೂ ಅನಗತ್ಯವಾಗಿ ಮತ್ತೊಮ್ಮೆ ವಿಚಾರಣೆಯ ನೆಪ ಹೂಡಿ ಈಗ ಚುನಾವಣೆಯ ಸಂದರ್ಭದಲ್ಲಿ ಬಂಧನಕ್ಕೆ ಸಂಚು ಹೂಡಲಾಗಿದೆ. ಇಂಥ ತಂತ್ರಗಳಿಗೆ ಅವಕಾಶ ನೀಡಬಾರದು ಎಂದು ಡಿ.ಕೆ.ಶಿವಕುಮಾರ್‌ ಅವರು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. BJP vs Congress | ನಾನು ಪ್ರತಿಭಟನೆ ಮಾಡಿಲ್ಲ, ನಿಮ್ಮ ಶಾಸಕರ ಕೆಲಸ ಮಾಡಿದ್ದೇನೆ; ಕಾಂಗ್ರೆಸ್‌ಗೆ ಶ್ರೀರಾಮುಲು ತಿರುಗೇಟು
ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬೈರದೇವನಹಳ್ಳಿಯ ಎಲ್ಎಲ್‌ಸಿ ಕಾಲುವೆ ದುರಸ್ತಿ ಸಂಬಂಧ ಸರ್ಕಾರಿ ಆಡಳಿತ ಯಂತ್ರದ ನಿಧಾನಗತಿ ಕೆಲಸವನ್ನು ವಿರೋಧಿಸಿ ಮಂಗಳವಾರ (ನ.೧) ರಾತ್ರಿ ಸ್ಥಳದಲ್ಲೇ ವಾಸ್ತವ್ಯ ಹೂಡಿದ್ದ ಸಚಿವ ಶ್ರೀರಾಮುಲು ಈಗ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ. “ನಿಮ್ಮೀ ಪ್ರತಿಭಟನೆ ಸಿಎಂ, ಪಿಎಂ ವಿರುದ್ಧವಾ” ಎಂದು ಪ್ರಶ್ನೆ ಮಾಡಿದ್ದ ರಾಜ್ಯ ಕಾಂಗ್ರೆಸ್‌ಗೆ ತಿರುಗೇಟು ನೀಡಿರುವ ಶ್ರೀರಾಮುಲು, “ನನ್ನದು ಯಾರ ವಿರುದ್ಧದ ಪ್ರತಿಭಟನೆಯಲ್ಲ, ನಿಮ್ಮ ಪಕ್ಷದ ಶಾಸಕರು ಮಾಡುವ ಕೆಲಸವನ್ನು ನಾನು ಶ್ರದ್ಧೆಯಿಂದ ಮಾಡಿದ್ದೇನೆ” ಎಂದು ಟ್ವೀಟ್‌ (BJP vs Congress) ಮೂಲಕವೇ ಪ್ರತ್ಯುತ್ತರ ಕೊಟ್ಟಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Corruption | ಖಾಲಿ ಪೇಪರ್‌ ಇದ್ರೂ ಡಿವೈಎಸ್ಪಿ ಪೋಸ್ಟ್‌; ಎಂಟಿಬಿ ಬಳಿಕ ಈಗ ಚಿಂಚನಸೂರು ಹೇಳಿಕೆ, ಸರ್ಕಾರಕ್ಕೆ ಮುಜುಗರ!
೭೦-೮೦ ಲಕ್ಷ ರೂ. ಕೊಟ್ಟು ಟ್ರಾನ್ಸ್‌ಫರ್‌ ಮಾಡಿಸಿಕೊಂಡು ಬಂದ್ರೆ ಇನ್ನೇನಾಗ್ತದೆ ಎಂಬ ಸಚಿವ ಎಂ.ಟಿ.ಬಿ. ನಾಗರಾಜ್‌ ಹೇಳಿಕೆಯಿಂದ ಆದ ಮುಜುಗರದಿಂದ ಹೊರಬರಲು ಸರ್ಕಾರ ಹರಸಾಹಸಪಡುತ್ತಿರುವಂತೆಯೇ ಇನ್ನೊಬ್ಬ ಹಿರಿಯ ಬಿಜೆಪಿ ನಾಯಕ ಯಡವಟ್ಟು ಹೇಳಿಕೆ ನೀಡಿದ್ದಾರೆ.
ಮಾಜಿ ಸಚಿವರೂ, ಹಿರಿಯ ಬಿಜೆಪಿ ನಾಯಕರೂ, ಹಾಲಿ ಮೇಲ್ಮನೆ ಸದಸ್ಯರೂ ಆಗಿರುವ ಬಾಬು ರಾವ್‌ ಚಿಂಚನಸೂರು ಅವರೇ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವ ರೀತಿಯಲ್ಲಿ ಹೇಳಿಕೆ ನೀಡಿದವರು. ಅವರು ಹೇಳಿದ್ದೇನೆಂದರೆ: ನಾಳೆ ಖಾಲಿ ಪೇಪರ್‌ನಲ್ಲೂ ಡಿವೈಎಸ್ಪಿ ಆಗಬಹುದು! ಅದೂ ಅಲ್ಲದೆ ಅವರು ದೀಪಾವಳಿ ಗಿಫ್ಟ್‌ ಬಗ್ಗೆಯೂ ಮಾತನಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Missing case | ಅಧ್ಯಾತ್ಮದ ಕಡೆ ಹೆಚ್ಚು ಒಲವು ಹೊಂದಿದ್ದ ಚಂದ್ರಶೇಖರ್; ಮೈಸೂರು ಭಾಗದಲ್ಲಿರುವ ಶಂಕೆ
ಶಾಸಕ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಸಹೋದರನ ಮಗ ನಾಪತ್ತೆ (Missing case) ಹಿನ್ನೆಲೆಯಲ್ಲಿ ಜಿಲ್ಲೆಯ ಹೊನ್ನಾಳಿ ನಿವಾಸದಲ್ಲಿ ನೀರವ ಮೌನ ಆವರಿಸಿದೆ. ಸಹೋದರನ ಮಗನಿಗಾಗಿ ರೇಣುಕಾಚಾರ್ಯ ಹಾಗೂ ಅವರ ಆಪ್ತರು ನಿರಂತರ ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ನಾಪತ್ತೆ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ಅಧ್ಯಾತ್ಮದ ಕಡೆ ಹೆಚ್ಚು ಒಲವು ಹೊಂದಿದ್ದ ಚಂದ್ರಶೇಖರ್, ಮೈಸೂರು ಅಥವಾ ಚಾಮರಾಜನಗರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿರುವ ಶಂಕೆ ವ್ಯಕ್ತವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಮತ್ತಷ್ಟು ಮಾಹಿತಿ: Missing Case | ರೇಣುಕಾಚಾರ್ಯ ತಮ್ಮನ ಪುತ್ರ ಚಂದ್ರಶೇಖರ್‌ ಕೊಠಡಿ ಶೋಧ; ಸಾಂತ್ವನ ಹೇಳಿದ ಬಿಎಸ್‌ವೈ

8. ‌Kantara | ಓ ಮೈ ಗಾಡ್‌, ಕಾಂತಾರ ಯಶಸ್ಸು ಅದ್ಭುತ ಎಂದು ಹಾಡಿ ಹೊಗಳಿದ ಸಚಿವ ಪಿಯೂಷ್‌ ಗೋಯೆಲ್
ದೇಶ, ದೇಶಾಂತರಗಳಲ್ಲಿ ಸದ್ದು ಮಾಡುತ್ತಿರುವ ರಿಷಬ್‌ ಶೆಟ್ಟಿ ನಿರ್ದೇಶನದ ʻಕಾಂತಾರʼ ಸಿನಿಮಾದ ಯಶಸ್ಸನ್ನು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್‌ ಗೋಯೆಲ್‌ ಹಾಡಿ ಹೊಗಳಿದ್ದಾರೆ. ʻಭಾರತದ ಜನಪದ ಸಂಸ್ಕೃತಿಯನ್ನು ಬಿಂಬಿಸಿರುವ ಕಾಂತಾರ ಸಿನಿಮಾ ಕೇವಲ 8-10 ಕೋಟಿ ರೂ. ಬಂಡವಾಳ ಹೂಡಿ ತೆಗೆದ ಸಿನಿಮಾವಾದರೂ, 200 ಕೋಟಿ ರೂ.ಗೂ ಹೆಚ್ಚು ಗಳಿಸಿದೆ. ಇದು ಸೃಜನಶೀಲತೆಯ ಆವಿಷ್ಕಾರವಾಗಿದೆ. ಇಲ್ಲಿನವರು ಎಷ್ಟು ಪ್ರತಿಭಾವಂತರು ಎಂಬುದನ್ನು ಜಗತ್ತಿಗೆ ತೋರಿಸಿದೆʼʼ ಎಂದು ಪ್ರಶಂಸಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಮತ್ತೊಂದು ಸುದ್ದಿ: Kantara Movie | ಬೆಂಗಳೂರಿನಲ್ಲಿ ಕಾಂತಾರ ಸಿನಿಮಾ ವೀಕ್ಷಿಸಿದ ಕೇಂದ್ರ ಸಚಿವೆ ನಿರ್ಮಲಾ‌ ಸೀತಾರಾಮನ್‌

9. Drowned | ಕೆರೆಯಲ್ಲಿ ಮುಳುಗಿದ್ದ ತಮ್ಮನ ಸಹಿತ ರಕ್ಷಣೆ ಮಾಡಲು ಹೋದ ಮೂವರು ಅಕ್ಕಂದಿರೂ ನೀರು ಪಾಲು!
ಹರಪನಹಳ್ಳಿ ತಾಲೂಕಿನ ಚನ್ನಹಳ್ಳಿ ತಾಂಡಾದಲ್ಲಿರುವ ಕೆರೆಯಲ್ಲಿ ತಮ್ಮ ಈಜಲು ಹೋಗಿದ್ದಾನೆ. ಆಗ ನೀರಿನಲ್ಲಿ ಆತ ನೀರಿನಲ್ಲಿ ಮುಳುಗುವುದನ್ನು (Drowned) ಕಂಡ ಮೂವರು ಅಕ್ಕಂದಿರು ರಕ್ಷಿಸಲು ಹೋಗಿ ಅವರೂ ನೀರುಪಾಲಾಗಿದ್ದಾರೆ. ಹೀಗಾಗಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. IND VS BANGLA | ಮಳೆ ಪೀಡಿತ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಭಾರತಕ್ಕೆ 5 ರನ್​ ಗೆಲುವು; ಸೆಮಿಫೈನಲ್​ ಹಾದಿ ಮತ್ತಷ್ಟು ಸುಗಮ
ಮಳೆ ಪೀಡಿತ ಪಂದ್ಯದಲ್ಲಿ ಭಾರತ(IND VS BANGLA) ತಂಡದ ವಿರುದ್ಧ ಬಾಂಗ್ಲಾದೇಶ 5 ರನ್​ ಅಂತರದ ಸೋಲನುಭವಿಸಿದೆ. ಭಾರತ ಈ ಗೆಲುವಿನೊಂದಿಗೆ ಬಿ ಗ್ರೂಪ್​ನ ಅಂಕಪಟ್ಟಿಯಲ್ಲಿ 6 ಅಂಕದೊಂದಿಗೆ ಅಗ್ರಸ್ಥಾನಕ್ಕೇರಿತು. ಜತೆಗೆ ಭಾರತದ ಸೆಮಿಫೈನಲ್​ ಹಾದಿಯೂ ಮತ್ತಷ್ಟು ಸುಗಮಗೊಂಡಿದೆ. ಆದರೆ ಬಾಂಗ್ಲಾ ಈ ಸೋಲಿನಿಂದ ಕೂಟದಿಂದ ಬಹುತೇಕ ಹೊರಬಿದ್ದಂತಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳು

🔴 Russia no.1 oil supplier | ಭಾರತಕ್ಕೆ ಅಕ್ಟೋಬರ್‌ನಲ್ಲಿ ನಂ.1 ತೈಲ ಪೂರೈಕೆದಾರ ಸೌದಿ ಅರೇಬಿಯಾ ಅಲ್ಲ, ರಷ್ಯಾ!
🔴 Economy | ಭಾರತ 2030ಕ್ಕೆ ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗಲಿದೆ: ಮೋರ್ಗಾನ್‌ ಸ್ಟಾನ್ಲಿ
🔴 Honey Trap | ಕರೆ ಮಾಡಿ ಖಾಸಗಿ ಅಂಗ ತೋರಿಸಿದಳು, ತಕ್ಷಣವೇ ಕರೆ ಕಟ್‌ ಮಾಡಿದೆ: ಶಾಸಕ ತಿಪ್ಪಾರೆಡ್ಡಿ
🔴 ವೈದ್ಯ ದರ್ಪಣ ಅಂಕಣ | ರೊಬೊಟ್ ಇಲಿಗಳು, ಕೃತಕ ಕಣ್ಣು, ಸಿಂಗ್ಯುಲಾರಿಟಿ ಇತ್ಯಾದಿ…
🔴 Weather Report | ಬೆಂಗಳೂರಿಗರೇ ಎಚ್ಚರ.. 5 ದಿನ ಭಾರಿ ಮಳೆ; ಮೈಸೂರು, ಕೊಡುಗಿಗೂ ಯೆಲ್ಲೋ ಅಲರ್ಟ್‌!

Exit mobile version