ಬೆಂಗಳೂರು: ಬೆಂಗಳೂರಿನಲ್ಲಿ ಮೂರು ದಿನ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಿಂದ ರಾಜ್ಯದಲ್ಲಿ ಹತ್ತು ಲಕ್ಷ ಕೋಟಿ ರೂ. ಹೂಡಿಕೆ ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದು, ಈ ಪ್ರಸ್ತಾಪಗಳನ್ನು ನಿಜವಾಗಿ ಹೂಡಿಕೆಯಾಗಿ ಪರಿವರ್ತಿಸಲು ಸರ್ಕಾರ ಬದ್ಧವಾಗಿದೆ ಎಂದು ಸರ್ಕಾರ ಹೇಳಿದೆ. ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ತನ್ನ ಸಿಎಂ ಅಭ್ಯರ್ಥಿಯನ್ನು ಘೋಷಿಸಿದೆ, ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರನ ಅಂತ್ಯಕ್ರಿಯೆ ನೆರವೇರಿದೆ, ಟ್ವಿಟರ್‌ನಲ್ಲಿ ಉದ್ಯೋಗದಿಂದ ಬೃಹತ್ ಪ್ರಮಾಣದಲ್ಲಿ ತೆಗೆಯುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. Invest Karnataka 2022 | ಜಾಗತಿಕ ಹೂಡಿಕೆದಾರರ ಸಮಾವೇಶ ಸಮಾರೋಪ, 10 ಲಕ್ಷ ಕೋಟಿ ರೂ. ಹೂಡಿಕೆ ಪ್ರಸ್ತಾಪ
ಮೂರು ದಿನಗಳ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಸಮಾರೋಪ ಸಮಾರಂಭ (Invest Karnataka 2022 ) ಶುಕ್ರವಾರ ನಡೆಯಿತು. ಈ ಸಲ ಒಟ್ಟು 10 ಲಕ್ಷ ಕೋಟಿ ರೂ. ಹೂಡಿಕೆ ಹರಿದು ಬಂದಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ಐದು ಲಕ್ಷ ಕೋಟಿ ರೂ. ಹೂಡಿಕೆಯ ಪ್ರಸ್ತಾಪಗಳು ಬರಬಹುದು ಎಂದು ಗುರಿ ಹಾಕಿಕೊಳ್ಳಲಾಗಿತ್ತು. ಆದರೆ ನಿರೀಕ್ಷೆ ಮೀರಿ 10 ಲಕ್ಷ ಕೋಟಿ ರೂ. ಹೂಡಿಕೆಯ ಪ್ರಸ್ತಾಪಗಳು ಬಂದಿವೆ. ಯಾವ ಜಿಲ್ಲೆಗೆ ಎಷ್ಟು ಬಂಡವಾಳ, ಯಾವ ವಲಯದಲ್ಲಿ ಬಂಡವಾಳ ಎಂಬ ವಿವರಗಳನ್ನು ನಾಳೆ ನೀಡುತ್ತೇವೆ. ಬೆಂಗಳೂರಿನಲ್ಲಿ ಶೇ.70 ರಷ್ಟು ಬಂಡವಾಳ ಹೂಡಿಕೆಯಾಗಿದೆ ಎಂದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Invest Karnataka 2022 | ಹೂಡಿಕೆ ಪ್ರಸ್ತಾಪಗಳ ಅನುಷ್ಠಾನದಲ್ಲಿ ಈ ಬಾರಿ ಪ್ರಗತಿ: ಸಿಎಂ ಬೊಮ್ಮಾಯಿ
2. Gujarat Election | ಪತ್ರಕರ್ತ ಇಸುದಾನ್ ಗಢವಿ ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿ
ಗುಜರಾತ್ ವಿಧಾನಸಭೆ ಚುನಾವಣೆ (Gujarat Election) ಗೆಲ್ಲಲು ಫುಲ್ ತಾಲೀಮು ನಡೆಸಿರುವ ಆಮ್ ಆದ್ಮಿ ಪಾರ್ಟಿ (ಆಪ್), ತಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿದೆ. ಪತ್ರಕರ್ತ ಇಸುದಾನ್ ಗಢವಿ (Isudan Gadhvi) ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಅರವಿಂದ್ ಕೇಜ್ರಿವಾಲ್ ಅವರು ಹೆಸರಿಸಿದ್ದಾರೆ. ಈ ಹಿಂದೆ ಪಂಜಾಬ್ ಚುನಾವಣೆ ವೇಳೆಯಲ್ಲೂ ಅವರು ಎಲೆಕ್ಷನ್‌ಗೆ ಮುಂಚೆಯೇ ಸಿಎಂ ಅಭ್ಯರ್ಥಿ ಹೆಸರನ್ನು ಸೂಚಿಸುವಂತೆ ಜನರಿಗೆ ಕರೆ ನೀಡಿದ್ದರು. ಗುಜರಾತ್‌ನಲ್ಲೂ ಅದೇ ತಂತ್ರವನ್ನು ಮುಂದುವರಿಸಿದ್ದು, ಆಪ್‌ನಿಂದ ಮುಖ್ಯಮಂತ್ರಿ ಅಭ್ಯರ್ಥಿಯು ಯಾರಾಗಬೇಕೆಂದು ಸೂಚಿಸುವಂತೆ ಕೇಳಿಕೊಂಡಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. MCD Election 2022 | ದೆಹಲಿ ಮಹಾನಗರ ಪಾಲಿಕೆಗೆ ಡಿಸೆಂಬರ್ 4ರಂದು ಚುನಾವಣೆ, ಬಿಜೆಪಿ, ಆಪ್ ಮಧ್ಯೆ ಪೈಪೋಟಿ
ಚುನಾವಣೆ ಆಯೋಗವು ದೆಹಲಿ ಮಹಾನಗರ ಪಾಲಿಕೆ (MCD Election 2022) ಚುನಾವಣೆ ದಿನಾಂಕವನ್ನು ಘೋಷಿಸಿದೆ. “ಡಿಸೆಂಬರ್ 4ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 7ರಂದು ಫಲಿತಾಂಶ ಪ್ರಕಟವಾಗಲಿದೆ” ಎಂದು ದೆಹಲಿ ಚುನಾವಣೆ ಆಯೋಗದ ಆಯುಕ್ತ ವಿಜಯ್ ದೇವ್ ಮಾಹಿತಿ ನೀಡಿದರು. “ಚುನಾವಣೆಗೆ ಸಂಬಂಧಿಸಿದಂತೆ ನವೆಂಬರ್ 7ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ಶುಕ್ರವಾರ (ನವೆಂಬರ್ 4)ದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಡಿ.4ರಂದು ಬೆಳಗ್ಗೆ 8.30ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. Negligence | ತುರ್ತು ಸ್ಥಿತಿಯಲ್ಲಿ ರೋಗಿಗಳು ದಾಖಲೆ ಕೊಡಬೇಕಿಲ್ಲ; ದಾಖಲೆ ಮುಖ್ಯವಲ್ಲ, ಜೀವ ಮುಖ್ಯ ಎಂದ ಡಾ. ಸುಧಾಕರ್
ಆಸ್ಪತ್ರೆಗಳಲ್ಲಿ ವೈದ್ಯರು, ವೈದ್ಯಾಧಿಕಾರಿಗಳು ಅಮಾನವೀಯವಾಗಿ (Negligence) ನಡೆದುಕೊಂಡರೆ ಕೇವಲ ಅಮಾನತಲ್ಲ, ಕೆಲಸದಿಂದಲೇ ವಜಾ ಮಾಡಲಾಗುವುದು. ವಜಾ ಮಾಡಲು ಕಾನೂನಿನಲ್ಲಿ ಬದಲಾವಣೆ ತರಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಲಾಗುವುದು. ಮುಂದಿನ ಅಧಿವೇಶನದಲ್ಲೇ ಕಾನೂನು ತಿದ್ದುಪಡಿಗೆ ಪ್ರಯತ್ನಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ತಾಯಿ ಹಾಗೂ ನವಜಾತ ಶಿಶುಗಳ ಮರಣದ ದುರ್ಘಟನೆ ಕುರಿತು ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು. ತುರ್ತು ಪರಿಸ್ಥಿತಿಯಲ್ಲಿ ರೋಗಿಗಳು ದಾಖಲೆ ಕೊಡಬೇಕಾಗಿಲ್ಲ. ಇಲ್ಲಿ ದಾಖಲೆ ಮುಖ್ಯವಲ್ಲ, ಜೀವ ಮುಖ್ಯ ಎಂದು ಅವರು ತಿಳಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. Missing Case | ಚಂದ್ರಶೇಖರ್ ಸಾವಿನ ತನಿಖೆಗೆ ಡಯಾಟಮ್ ಟೆಸ್ಟ್ ಮೊರೆ ಹೋದ ಎಫ್‌ಎಸ್‌ಎಲ್ ಟೀಂ!
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್ (Missing Case death mystery) ಸಾವು ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲು ಸೂಚಿಸಿದೆ. ಇದರ ಬೆನ್ನಲ್ಲೇ, ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ವೈದ್ಯರ ತಂಡವು ಡಯಾಟಮ್ ಪರೀಕ್ಷೆಗೆ ಮುಂದಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗೆ: Chandru Death | ಮಣ್ಣಲ್ಲಿ ಮಣ್ಣಾದ ಚಂದ್ರಶೇಖರ್; ಜಂಗಮ ಸಂಪ್ರದಾಯದಂತೆ ನೆರವೇರಿದ ಅಂತ್ಯಕ್ರಿಯೆ
6. Sudhir Suri Shot Dead | ಪಂಜಾಬ್‌ನಲ್ಲಿ ಶಿವಸೇನೆ ನಾಯಕ ಸುಧೀರ್ ಸೂರಿಗೆ ಗುಂಡಿಕ್ಕಿ ಹತ್ಯೆ
ಪಂಜಾಬ್‌ನ ಅಮೃತಸರದಲ್ಲಿ ಶಿವಸೇನೆ ನಾಯಕ ಸುಧೀರ್ ಸೂರಿ (Sudhir Suri Shot Dead) ಅವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಅಮೃತಸರದ ದೇವಾಲಯವೊಂದರ ಎದುರು ಪ್ರತಿಭಟನೆ ನಡೆಸುವಾಗ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಅಮೃತಸರದಲ್ಲಿರುವ ದೇವಾಲಯವೊಂದರ ಆವರಣದಲ್ಲಿ ದೇವರ ಮೂರ್ತಿಗಳು ಧ್ವಂಸಗೊಂಡ ರೂಪದಲ್ಲಿ ಸಿಕ್ಕಿದ್ದು, ದೇವಾಲಯದ ಆಡಳಿತ ಮಂಡಳಿ ವಿರುದ್ಧ ಶಿವಸೇನೆ ಕಾರ್ಯಕರ್ತರೊಡನೆ ಸುಧೀರ್ ಸೂರಿ ಅವರು ಪ್ರತಿಭಟನೆ ನಡೆಸುತ್ತಿದ್ದರು. ಇದೇ ವೇಳೆ ಗುಂಡಿನ ದಾಳಿ ನಡೆಸಲಾಗಿದೆ. ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. EPFO | ಪಿಂಚಣಿಗೆ 15,000 ರೂ. ವೇತನ ಮಿತಿಯನ್ನು ರದ್ದುಪಡಿಸಿದ ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್ ಶುಕ್ರವಾರ ನೀಡಿದ ಆದೇಶವೊಂದರಲ್ಲಿ ಉದ್ಯೋಗಿಗಳ ಪಿಂಚಣಿ (ತಿದ್ದುಪಡಿ) ಯೋಜನೆ-2014ರ ಸಿಂಧುತ್ವವನ್ನು ಎತ್ತಿ ಹಿಡಿದಿದೆ. (EPFO) ಆದರೆ ಪಿಂಚಣಿ ನಿಧಿಗೆ ಸೇರ್ಪಡೆಯಾಗಲು ಮಾಸಿಕ 15,000 ರೂ.ಗಳ ವೇತನ ಮಿತಿಯನ್ನು ರದ್ದುಪಡಿಸಿದೆ. 2014ರ ತಿದ್ದುಪಡಿಯ ಪ್ರಕಾರ ಪಿಂಚಣಿಗೆ ಅರ್ಹ ವೇತನದ ಗರಿಷ್ಠ ಮಿತಿ ಮಾಸಿಕ 15,000 ರೂ.ಗಳಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. Chinese Rocket | ನಿಯಂತ್ರಣ ತಪ್ಪಿ ಭೂಮಿಗೆ ಅಪ್ಪಳಿಸಲಿದೆ ಚೀನಾದ 22 ಸಾವಿರ ಕೆಜಿ ರಾಕೆಟ್, ಜಗತ್ತಿನೆಲ್ಲೆಡೆ ತಲ್ಲಣ
ಚೀನಾದ ಮತ್ತೊಂದು ರಾಕೆಟ್ (Chinese Rocket) ಬಾಹ್ಯಾಕಾಶದಲ್ಲಿ ನಿಯಂತ್ರಣ ತಪ್ಪಿದ್ದು, ಭೂಮಿಗೆ ಅಪ್ಪಳಿಸಲಿರುವ ಕಾರಣ ಜಗತ್ತಿನ ಹಲವೆಡೆ ಆತಂಕ ಸೃಷ್ಟಿಯಾಗಿದೆ. ಕಳೆದ ಅಕ್ಟೋಬರ್ 31ರಂದು ಚೀನಾ ಉಡಾವಣೆ ಮಾಡಿದ ಲಾಂಗ್ ಮಾರ್ಚ್ 5ಬಿ ರಾಕೆಟ್ ಭೂಮಿಗೆ ಅಪ್ಪಳಿಸಲಿದೆ. ಕಳೆದ ಎರಡು ವರ್ಷಗಳಲ್ಲಿ ಬಾಹ್ಯಾಕಾಶದಲ್ಲಿ ನಿಯಂತ್ರಣ ತಪ್ಪಿ ಭೂಮಿಗೆ ಅಪ್ಪಳಿಸುತ್ತಿರುವ ನಾಲ್ಕನೇ ರಾಕೆಟ್ ಇದಾಗಿದೆ. ಹಾಗಾಗಿ, ವಿಶ್ವದ ಮಟ್ಟದಲ್ಲಿ ಕಮ್ಯುನಿಸ್ಟ್ ರಾಷ್ಟ್ರಕ್ಕೆ ಮುಖಭಂಗವಾದಂತಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. Fetuses Inside A Baby | 21 ದಿನದ ಹೆಣ್ಣು ಮಗುವಿನ ಹೊಟ್ಟೆಯಲ್ಲಿ 8 ಭ್ರೂಣ ಪತ್ತೆ, ಜಗತ್ತಲ್ಲೇ ಮೊದಲು?
ಅಪರೂಪದಲ್ಲಿ ಅಪರೂಪ ಎಂಬಂತೆ ಜಾರ್ಖಂಡ್‌ನ ರಾಂಚಿಯಲ್ಲಿ 21 ದಿನದ ಹೆಣ್ಣು ಮಗುವಿನ ಹೊಟ್ಟೆಯಲ್ಲಿ ಎಂಟು ಭ್ರೂಣಗಳು (Fetuses Inside A Baby) ಪತ್ತೆಯಾಗಿವೆ. “ಇಂತಹ ಪ್ರಕರಣಗಳನ್ನು ವೈದ್ಯಕೀಯ ಪರಿಭಾಷೆಯಲ್ಲಿ Fetus-In-Fetu (FIF) ಎಂದು ಕರೆಯುತ್ತಾರೆ. ಆದರೆ, ಒಂದೇ ಮಗುವಿನ ಹೊಟ್ಟೆಯಲ್ಲಿ 8 ಭ್ರೂಣಗಳು ಪತ್ತೆಯಾಗಿರುವುದು ಜಗತ್ತಿನಲ್ಲಿಯೇ ಮೊದಲು ಇರಬೇಕು” ಎಂದು ಮಗುವಿನ ಸರ್ಜರಿ ಮಾಡಿದ ಖಾಸಗಿ ಆಸ್ಪತ್ರೆ ವೈದ್ಯ ಮೊಹಮ್ಮದ್ ಇಮ್ರಾನ್ ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Twitter | ನೀವು ಕಚೇರಿಯ ದಾರಿಯಲ್ಲಿದ್ದರೆ, ದಯವಿಟ್ಟು ಮನೆಗೆ ಹೋಗಿ, ಸಿಬ್ಬಂದಿಗೆ ಟ್ವಿಟರ್ ಸೂಚನೆ!
ಸಾಮಾಜಿಕ ಜಾಲತಾಣ ದಿಗ್ಗಜ ಟ್ವಿಟರ್ ಶುಕ್ರವಾರದಿಂದ ತನ್ನ ಉದ್ಯೋಗಿಗಳನ್ನು ವಜಾಗೊಳಿಸಲು ಆರಂಭಿಸಿದೆ. ಉದ್ಯಮಿ ಎಲಾನ್ ಮಸ್ಕ್ ಅವರು ಟ್ವಿಟರ್ ಅನ್ನು (Twitter) ಖರೀದಿಸಿದ ಒಂದು ವಾರದಲ್ಲೇ, ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆ ಶುರುವಾಗಿದೆ.
ನೀವು ಕಚೇರಿಯಲ್ಲಿ ಇದ್ದರೂ, ಕಚೇರಿಗೆ ಬರುವ ದಾರಿಯಲ್ಲಿದ್ದರೂ, ದಯವಿಟ್ಟು ಮನೆಗೆ ಹಿಂತಿರುಗಿ ಎಂದು ಟ್ವಿಟರ್, ತನ್ನ ಸಿಬ್ಬಂದಿಗೆ ಇ-ಮೇಲ್ ಮೂಲಕ ಸೂಚಿಸಿದೆ. ಕಂಪನಿಯ ಕಚೇರಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ವಜಾಗೊಂಡಿರುವ ಉದ್ಯೋಗಿಗಳು ಹಾಗೂ ಕಂಪನಿಯಲ್ಲಿ ಮುಂದುವರಿಯಲಿರುವವರಿಗೆ ಪ್ರತ್ಯೇಕವಾಗಿ ಇ-ಮೇಲ್ ಮೂಲಕ ತಿಳಿಸಲಾಗುವುದು ಎಂದು ಟ್ವಿಟರ್ ತಿಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳು
🔴 Kantara movie | ಪಂಜುರ್ಲಿ ದೈವದ ರೀಲ್ಸ್ ವಿವಾದ: ಧರ್ಮಸ್ಥಳಕ್ಕೆ ಬಂದು ತಪ್ಪು ಕಾಣಿಕೆ ಹಾಕಿದ ಯುವತಿ
🔴 ವಿಸ್ತಾರ Money Guide | ಶೀಘ್ರದಲ್ಲಿ ಎಲ್ಲರಿಗೂ ಏಕರೂಪದ ಐಟಿಆರ್ ಫಾರ್ಮ್ ?
🔴 152ನೆ ಜನ್ಮದಿನ | ವಾಸುದೇವ ಬಲವಂತ ಫಡ್ಕೆ | ಕ್ರಾಂತಿವೀರನ ನೆನಪು