Site icon Vistara News

ವಿಸ್ತಾರ TOP 10 NEWS | ರಷ್ಯಾದಲ್ಲಿ ಉಗ್ರನ ಬಂಧನದಿಂದ ರಾಜಸ್ಥಾನದಲ್ಲಿ ರೇವ್‌ ಪಾರ್ಟಿವರೆಗಿನ ಪ್ರಮುಖ ಸುದ್ದಿಗಳಿವು

Bhadravati, delivery in ksr railway station, Government Hospital, Hydrogen fuel cell bus, ISIS terror, karnataka, kushwanth kolibailu, labour pain, latest, Manish Sisodia CBI, Non Veg, pranam bharat, rave party in jaipur, terrorist arrested, wheeling on busy road

ಬೆಂಗಳೂರು: ಭಾರತದಲ್ಲಿ ವಿವಿಧ ಧಾರ್ಮಿಕ ವಿಚಾರಗಳಲ್ಲಿ ಸಂಘರ್ಷ ನಡೆಯುತ್ತಿರುವ ಬೆನ್ನಲ್ಲೇ, ದೇಶದ ಪ್ರಮುಖ ನಾಯಕರೊಬ್ಬರನ್ನು ಹತ್ಯೆ ಮಾಡಬೇಕೆಂದು ಸಂಚು ರೂಪಿಸುತ್ತಿದ್ದ ಐಸಿಸ್‌ ಉಗ್ರನನ್ನು ರಷ್ಯಾ ಪೊಲೀಸರು ಬಂಧಿಸಿದ್ದಾರೆ. ರಾಜ್ಯದಲ್ಲಿ ಮಾಂಸಾಹಾರ-ಸಸ್ಯಾಹಾರ ಚರ್ಚೆ ಬಿಸಿಯೇರಿದೆ, ಅಬಕಾರಿ ಹಗರಣದಲ್ಲಿ ದೆಹಲಿ ಡಿಸಿಎಂ ಸಿಸೋಡಿಯಾ ಬಂಧನವಾಗುವ ಸಾಧ್ಯತೆಯಿದೆ, ರಾಜಸ್ಥಾನದಲ್ಲಿ ರೇವ್‌ ಪಾರ್ಟಿ ಮಾಡುತ್ತಿದ್ದ ಕೋಲಾರದ ಪೊಲೀಸ್‌ ಸೇರಿ ಕರ್ನಾಟಕದ ಏಳು ಜನರು ಅರೆಸ್ಟ್‌ ಆಗಿದ್ದಾರೆ ಎನ್ನುವುದೂ ಸೇರಿ ದಿನಪೂರ್ತಿ ನಡೆದ ಪ್ರಮುಖ ಘಟನಾವಳಿಗಳ ಗುಚ್ಛ ವಿಸ್ತಾರ TOP 10 NEWS.

೧. ISIS Terror | ರಷ್ಯಾದಲ್ಲಿ ಸಿಕ್ಕಿಬಿದ್ದ ಉಗ್ರ: ಪ್ರವಾದಿ ಅವಹೇಳನಕ್ಕೆ ಪ್ರತೀಕಾರ ತೀರಿಸಲು ಮುಂದಾಗಿದ್ದನೇ?
ರಷ್ಯಾದ ಫೆಡರಲ್‌ ಸೆಕ್ಯುರಿಟಿ ಸರ್ವಿಸ್‌ನಿಂದ ಬಂಧಿತನಾಗಿರುವ ಐಸಿಸ್‌ ಉಗ್ರ ಭಾರತದಲ್ಲಿ ಉಗ್ರ ಕೃತ್ಯ ನಡೆಸಲು ಎಲ್ಲ ರೀತಿಯಲ್ಲೂ ಸಜ್ಜಾಗಿದ್ದ ಎನ್ನುವ ಮಾಹಿತಿಯನ್ನು ಸ್ವತಃ ರಷ್ಯಾ ಪೊಲೀಸರೇ ನೀಡಿದ್ದಾರೆ. ಈ ಉಗ್ರ ಭಾರತದ ಆಡಳಿತಾರೂಢ ಪಕ್ಷವೊಂದರ ನಾಯಕನ ಹತ್ಯೆಗೆ ಸ್ಕೆಚ್‌ ಹಾಕಿ ಅದನ್ನು ಅನುಷ್ಠಾನಕ್ಕೆ ತರುವುದಕ್ಕೆ ಹೊರಟಿದ್ದ ಎನ್ನುವ ಸುಳಿವನ್ನೂ ಅವರೇ ನೀಡಿದ್ದಾರೆ. ಹಾಗಿದ್ದರೆ, ಈ ಆತ್ಮಾಹುತಿ ದಾಳಿಯ ಮೂಲ ಉದ್ದೇಶವೇನು? ಯಾಕಾಗಿ ಅವನನ್ನು ಐಸಿಸ್‌ ಭಾರತಕ್ಕೆ ಕಳುಹಿಸಿದೆ ಎಂಬ ಅಂಶಗಳ ಬಗ್ಗೆ ಕೆದಕಿದರೆ ಸಿಗುವ ಉತ್ತರ ಪ್ರವಾದಿ ಮಹಮ್ಮದ್‌ ಅವಹೇಳನ ಪ್ರಕರಣ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. ಸಿದ್ದರಾಮಯ್ಯ ಮಾಂಸಾಹಾರ ಸೇವನೆ ವಿವಾದದ ಜಟಾಪಟಿ ಮುಂದುವರಿಕೆ

ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ತೆರಳಬಾರದು ಎಂದು ಯಾರು ಹೇಳಿದ್ದಾರೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾತು ದಿನೇದಿನೆ ತೀವ್ರತೆ ಪಡೆದುಕೊಳ್ಳುತ್ತಿದೆ. ಈ ಕುರಿತು ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ, ದೇವಸ್ಥಾನಕ್ಕೆ ಮಾಂಸಾಹಾರ ಸೇವನೆ ಮಾಡಿಕೊಂಡು ಹೋಗುತ್ತಾರೆಯೇ ಎಂದು ತಮ್ಮ ಪತ್ನಿಯನ್ನು ಕೇಳಿಕೊಳ್ಳಲಿ ಎಂದು ಹೇಳಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಪುತ್ರ ಹಾಗೂ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ತಮ್ಮ ಮನೆಯಲ್ಲಿ ತಂದೆಯವರು ಮಾಂಸ ಸೇವಿಸಿದರೆ ನಾನು ಸಸ್ಯಾಹಾರ ಸೇವಿಸುತ್ತೇನೆ. ಆಹಾರ ಸೇವನೆ ಅವರವರ ಇಷ್ಟ ಎಂದಿದ್ದಾರೆ. ಈ ಕುರಿತು ಓದಲು ಇಲ್ಲಿ ಕ್ಲಿಕ್‌ ಮಾಡಿ.

3. ಅಬಕಾರಿ ಹಗರಣದಲ್ಲಿ ಸಿಸೋಡಿಯಾ ಅರೆಸ್ಟ್‌ ಖಾತ್ರಿ? ಬಿಜೆಪಿ ಮೇಲಿನ ಸರಣಿ ಆರೋಪದಿಂದ ಸುಳಿವು
ಭಾರತೀಯ ಜನತಾ ಪಕ್ಷದ ಮೇಲೆ ದಿಲ್ಲಿಯ ಉಪಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ನಡೆಸುತ್ತಿರುವ ಸರಣಿ ಆರೋಪಗಳನ್ನು ಗಮನಿಸುತ್ತಿದ್ದರೆ ಅಬಕಾರಿ ಹಗರಣದಲ್ಲಿ ಸಿಬಿಐ ಅವರನ್ನು ಬಂಧಿಸುವುದು ಬಹುತೇಕ ಖಾತ್ರಿಯಾಗಿದೆ ಎಂಬಂತೆ ಕಂಡುಬರುತ್ತಿದೆ. ಹೊಸ ಅಬಕಾರಿ ನೀತಿಯಡಿ ಲೈಸೆನ್ಸ್‌ ನೀಡುವಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿದೆ ಎನ್ನುವುದು ಮನೀಷ್‌ ಸಿಸೋಡಿಯಾ ಅವರ ಮೇಲಿನ ಆರೋಪ. ಸಿಬಿಐ ಈಗ ಒಂದು ಹಂತದ ವಿಚಾರಣೆಯನ್ನು ನಡೆಸಿದೆ. ಸುಮಾರು ೧೫ ಗಂಟೆಗಳ ಕಾಲ ಮನೀಷ್‌ ಸಿಸೋಡಿಯಾ ಅವರ ಮನೆಯಲ್ಲಿ ಮತ್ತು ಅವರಿಗೆ ಸೇರಿದ ಹಲವಾರು ಕಚೇರಿಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಸಾಕಷ್ಟು ದಾಖಲೆಗಳು ಸಿಕ್ಕಿವೆ ಎಂದು ಸಿಬಿಐ ಹೇಳಿದ್ದರೂ ಆಮ್‌ ಆದ್ಮಿ ಪಾರ್ಟಿ ಏನೂ ಸಿಕ್ಕಿಲ್ಲ ಎನ್ನುತ್ತಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Government Hospital | ಸರ್ಕಾರಿ ಆಸ್ಪತ್ರೆಯಲ್ಲಿ ಬೇಡ ಕ್ಯೂ, ಬರಲಿದೆ ಕ್ಯೂಆರ್‌ ಕೋಡ್‌: ಸಚಿವ ಡಾ. ಕೆ. ಸುಧಾಕರ್‌
ಜನದಟ್ಟಣೆ ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಬೆಂಗಳೂರಿನ ಜಯನಗರ ಸಾರ್ವಜನಿಕ ಆಸ್ಪತ್ರೆ‌ (Government Hospital) ಸೇರಿದಂತೆ ಹಲವು ಆಸ್ಪತ್ರೆಗಳು ಹಾಗೂ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಒಂದು ತಿಂಗಳೊಳಗೆ ಡಿಜಿಟಲ್‌ ಹೆಸರು ನೋಂದಣಿ, ಡಿಜಿಟಲ್‌ ಪಾವತಿ ವ್ಯವಸ್ಥೆಯನ್ನು ತರಲು ರಾಜ್ಯ ಸರಕಾರ ಮುಂದಾಗಿದೆ. ಮುಂದೆ ತಾಲೂಕು ಆಸ್ಪತ್ರೆಗಳಲ್ಲೂ ಇದೇ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್‌ ತಿಳಿಸಿದರು. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. ಪ್ರಣಾಮ್‌ ಭಾರತ್‌ ಅಂಕಣ | ಫ್ಯಾಮಿಲಿ ಮೆಕ್ಯಾನಿಕ್‌ ಕಥೆ
ಲೇಖಕ ಮೇಜರ್‌ ಡಾ.ಕುಶ್ವಂತ್‌ ಕೋಳಿಬೈಲು ಅವರು ಕೊಡಗಿನ ವೈದ್ಯ, ಯೋಧ ಮತ್ತು ಕತೆಗಾರ. ಸೇನೆಯಿಂದ ನಿವೃತ್ತರು, ವೈದ್ಯಕೀಯದಲ್ಲಿ ಪ್ರವೃತ್ತರು. ಕೊಡಗಿನ ವೈದ್ಯಕೀಯ ಕಾಲೇಜಿನಲ್ಲಿ ಮಕ್ಕಳ ತಜ್ಞ, ಕಾಫಿ ಕೃಷಿಕ. ʻಕಾವೇರಿ ತೀರದಿಂದʼ ಮತ್ತು ʻಕೂರ್ಗ್‌ ರೆಜಿಮೆಂಟ್ʼ ಇವರ ಕತಾಸಂಕಲನಗಳು. ʼಮುತ್ತಿನ ಹಾರʼ ಹನಿಕವಿತೆಗಳ ಸಂಕಲನ. ವೈದ್ಯಕೀಯ ಹಾಗೂ ಸೇನೆಗೆ ಸಂಬಂಧಿಸಿದ ಅಂಕಣಗಳನ್ನು ಬರೆದಿದ್ದಾರೆ. ಕೊಡಗಿನ ಹಾಗೂ ದೇಶದ ಆಗುಹೋಗುಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುವ ಕುಶ್ವಂತ್‌ ಸಮಾಜಸೇವೆಯಲ್ಲೂ ಸಕ್ರಿಯರು. ಕುಶ್ವಂತ್‌ ಕೋಳಿಬೈಲು ಅವರ “ಪ್ರಣಾಮ್‌ ಭಾರತ್‌” ಅಂಕಣ ವಿಸ್ತಾರ ನ್ಯೂಸ್‌ನಲ್ಲಿ ಪ್ರಕಟವಾಗುತ್ತಿದೆ. ಇಂದಿನ ಅಂಕಣ ಓದಲು ಇಲ್ಲಿ ಕ್ಲಿಕ್‌ ಮಾಡಿ.

6. ಹೆರಿಗೆ ನೋವಿನಿಂದ ಕುಸಿದು ಬಿದ್ದ ಮಹಿಳೆಗೆ ನಿಲ್ದಾಣದಲ್ಲೇ ಹೆರಿಗೆ ಮಾಡಿಸಿದ ರೈಲ್ವೆ ಸಿಬ್ಬಂದಿ
ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ರೈಲ್ವೆ ಸಿಬ್ಬಂದಿ ಪ್ರಥಮ ಚಿಕಿತ್ಸೆ ನೀಡಿ, ಹೆರಿಗೆ ಮಾಡಿಸಿ ಮಾನವೀಯತೆ ಮೆರೆದಿದ್ದಾರೆ. ಮೆಜೆಸ್ಟಿಕ್‌ನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಫ್ಲಾಟ್‌ಫಾರ್ಮ್‌ 1ರಲ್ಲಿ ಬೆಂಗಳೂರಿನಿಂದ ಚಂಡಿಗಢ್‌ಗೆ ಮಹಿಳೆ ಹೊರಟಿದ್ದಳು. ಅದೇ ಸಮಯದಲ್ಲಿ ಮಹಿಳೆ ಹೆರಿಗೆ ನೋವಿನಿಂದ ಕುಸಿದು ಬಿದ್ದಿದ್ದರು. ತಕ್ಷಣ ಸ್ಥಳದಲ್ಲಿದ್ದ ಆರ್‌ಪಿಎಫ್ ಸಿಬ್ಬಂದಿ ಮೀನಾ ಅವರು ಕಾರ್ಯಪ್ರವೃತ್ತರಾಗಿ, ಮಹಿಳೆಯನ್ನು ಶುಶ್ರೂಷೆ ಮಾಡಿದ್ದಾರೆ. ಉಳಿದ ಪ್ರಯಾಣಿಕರ ಸಹಾಯದೊಂದಿಗೆ ಪ್ರಥಮ ಚಿಕಿತ್ಸೆ ಮಾಡಿದ್ದು, ಅಲ್ಲೇ ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Rave Party | ರಾಜಸ್ಥಾನದಲ್ಲಿ ರೇವ್‌ ಪಾರ್ಟಿ ಮಾಡ್ತಿದ್ದ ಕೋಲಾರದ ಇನ್ಸ್‌ಪೆಕ್ಟರ್‌; ಕರ್ನಾಟಕದ 7 ಮಂದಿ ಸೆರೆ!
ರಾಜಸ್ಥಾನದ ಜೈಪುರ ಜಿಲ್ಲೆಯ ಸಾಹೀಪುರ ಫಾರ್ಮ್‌ ಹೌಸ್‌ನಲ್ಲಿ ನಡೆಯುತ್ತಿದ್ದ ರೇವ್‌ ಪಾರ್ಟಿ (Rave Party) ಮೇಲೆ ದಾಳಿ ನಡೆಸಿರುವ ಪೊಲೀಸರು 84 ಜನರನ್ನು ಬಂಧಿಸಿದ್ದಾರೆ. ಇವರಲ್ಲಿ ಕೋಲಾರದ ಇನ್ಸ್‌ಪೆಕ್ಟರ್‌ ಸೇರಿ 7 ಮಂದಿ ಬಂಧನಕ್ಕೊಳಗಾಗಿದ್ದಾರೆ. ಕೋಲಾರದ ಸೈಬರ್​ ಕ್ರೈಂ ಇನ್‌ಸ್ಪೆಕ್ಟರ್ ಆಂಜಿನಪ್ಪ, ಕೆಎಎಸ್​ ಅಧಿಕಾರಿ ಶ್ರೀನಾಥ್, ಶಿಕ್ಷಕ ರಮೇಶ್​, ಕೋಲಾರ ನಗರಸಭೆ ಸದಸ್ಯರಾದ ಸತೀಶ್​, ಶಬರೀಶ್, ವ್ಯಾಪಾರಿ ಸುಧಾಕರ್​ ಸೇರಿ 84 ಮಂದಿಯನ್ನು ಬಂಧಿಸಲಾಗಿದೆ. ಬಹುತೇಕ ಕರ್ನಾಟಕ, ಹರಿಯಾಣ, ಪಂಜಾಬ್‌, ಉತ್ತರ ಪ್ರದೇಶ, ದೆಹಲಿ ಹಾಗೂ ಮಹಾರಾಷ್ಟ್ರದವರೇ ರೇವ್‌ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಬಂಧಿತರಿಂದ 23 ಲಕ್ಷ ರೂಪಾಯಿ, 20 ವಿಲಾಸಿ ಕಾರುಗಳು, 1 ಟ್ರಕ್​ ಹಾಗೂ ಹುಕ್ಕಾ ಪಾಟ್‌, 100 ವಿದೇಶಿ ಲಿಕರ್ ಬಾಟೆಲ್‌ಗಳನ್ನು ಜಪ್ತಿ ಮಾಡಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Made In India | ಭಾರತದ ಮೊಟ್ಟ ಮೊದಲ ಹೈಡ್ರೋಜನ್‌ ಚಾಲಿತ ಬಸ್ ರಸ್ತೆಗೆ
ಹೈಡ್ರೋಜನ್‌ ಇಂಧನವನ್ನು ಬಳಸುವ ಭಾರತದ ಮೊಟ್ಟ ಮೊದಲ ಬಸ್‌ ಅನ್ನು ಪುಣೆಯಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಾಯಕ ಸಚಿವ ಜಿತೇಂದರ್‌ ಸಿಂಗ್‌ ಅವರು ಉದ್ಘಾಟಿಸಿದರು. ಈ ಬಸ್‌ (Hydrogen fuel cell bus) ಅನ್ನು ಸಿಎಸ್‌ಐಆರ್-ಕೌನ್ಸಿಲ್‌ ಆಫ್‌ ಸೈಂಟಿಫಿಕ್‌ & ಇಂಡಸ್ಟ್ರಿಯಲ್‌ ರಿಸರ್ಚ್‌ ಮತ್ತು ಕೆಪಿಐಟಿ ಲಿಮಿಟೆಡ್‌ ಅಭಿವೃದ್ಧಿ ಪಡಿಸಿದೆ. ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್‌ ಅವರು ಈ ಬಗ್ಗೆ ಟ್ವೀಟ್‌ ಮಾಡಿದ್ದು, ಬಸ್‌ನ ವಿಡಿಯೊ ಶೇರ್‌ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಮಹತ್ತ್ವಾಕಾಂಕ್ಷೆಯ ರಾಷ್ಟ್ರೀಯ ಹಸಿರು ಹೈಡ್ರೋಜನ್‌ ಅಭಿಯಾನದ ಅಡಿಯಲ್ಲಿ ಭಾರತದ ಮೊದಲ ಹೈಡ್ರೋಜನ್‌ ಫ್ಯುಯೆಲ್‌ ಸೆಲ್‌ ಬಸ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. ಎಲೆಕ್ಷನ್ ಹವಾ | ಭದ್ರಾವತಿ | ಬಿಜೆಪಿಯಿಂದ ಇನ್ನೂ ಭೇದಿಸಲಾಗದ ಕಾಂಗ್ರೆಸ್‌-ಜೆಡಿಎಸ್‌ ‘ಭದ್ರʼ ಕೋಟೆ
ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನ ಎಲ್ಲ ವಿಧಾನಸಭಾ ಕ್ಷೇತ್ರಗಳ ರಾಜಕೀಯ ಸ್ಥಿತಿಗತಿ ವಿವರ ನೀಡುವ ಎಲೆಕ್ಷನ್‌ ಹವಾ ಸರಣಿಯಲ್ಲಿ ಈಗಾಗಲೆ ಮಂಡ್ಯ ಜಿಲ್ಲೆ, ಹಾಸನ ಜಿಲ್ಲೆ, ಧಾರವಾಡ ಜಿಲ್ಲೆಯ ವಿಧಾನಸಭೆ ಕ್ಷೇತ್ರಗಳ ಪರಿಚಯ ನೀಡಲಾಗಿದೆ. ಇಂದಿನಿಂದ ಶಿವಮೊಗ್ಗ ಜಿಲ್ಲೆಯ ಪರಿಚಯ ಆರಂಭವಾಗಿದ್ದು, ಮೊದಲಿಗೆ ಭದ್ರಾವತಿ ವಿಧಾನಸಭಾ ಕ್ಷೇತ್ರದ ಪರಿಚಯ ನೀಡಲಾಗಿದೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. ಹುಡುಗಿಯನ್ನು ಕೂರಿಸಿಕೊಂಡು, ಡ್ಯಾಗರ್‌ ಝಳಪಿಸುತ್ತಾ ಬೈಕ್‌ ವ್ಹೀಲಿಂಗ್!‌ ಪೊಲೀಸರು ಏನ್‌ ಮಾಡ್ತಿದ್ದಾರೆ?
ನಗರದ ಮುಖ್ಯ ರಸ್ತೆಗಳಲ್ಲಿ ಬೈಕ್‌ ವ್ಹೀಲಿಂಗ್‌ಗೆ ತಡೆ ಹಾಕಲು ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ. ಪುಂಡರ ಅಟ್ಟಹಾಸ ಇನ್ನಷ್ಟು ಹೆಚ್ಚಿದೆ. ಹುಡುಗಿಯನ್ನು ಹಿಂದೆ ಕೂರಿಸಿಕೊಂಡು, ಡ್ಯಾಗರ್‌ ಝಳಪಿಸುತ್ತಾ ವ್ಹೀಲಿಂಗ್‌ ಮಾಡುತ್ತಿರುವುದು ಕೂಡ ಕಂಡುಬಂದಿದೆ.
ಈ ಕುರಿತ ವಿಡಿಯೋಗಳು ಲಭ್ಯವಾಗಿವೆ. ಈ ಬಾರಿ ಯುವಕರ ಹುಚ್ಚಾಟಕ್ಕೆ ಹುಡುಗಿಯೂ ಸಾಥ್ ನೀಡಿದ್ದಾಳೆ. ಹುಡುಗಿಯನ್ನು ಹಿಂದೆ ಕೂರಿಸಿಕೊಂಡು ವ್ಹೀಲಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸೈಯ್ಯದ್ ಎಂಬಾತ ಆಪ್‌ಲೋಡ್ ಮಾಡಿದ್ದಾನೆ. ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

Exit mobile version