Site icon Vistara News

Vistara Top 10 News : ಕೋವಿಡ್‌ ಪರೀಕ್ಷೆ ಹೆಚ್ಚಳಕ್ಕೆ ನಿರ್ಧಾರ, IPL ಹರಾಜಿನಲ್ಲಿ ಸ್ಟಾರ್ಕ್‌ ಸ್ಪಾರ್ಕ್‌!

Vistara Top 10 1912

1.ಸಂಸತ್‌‌‌ನಲ್ಲಿ ಗದ್ದಲ ಎಬ್ಬಿಸಿದ ಇನ್ನೂ 49 ಸಂಸದರು ಸಸ್ಪೆಂಡ್‌ : ಸಭಾಪತಿಯನ್ನೇ ಮಿಮಿಕ್ರಿ ಮಾಡಿ ವಿಕೃತಿ
ಚಳಿಗಾಲದ ಅಧಿವೇಶನ (Winter Session) ನಡೆಯುತ್ತಿರುವ ಲೋಕಸಭೆಯಲ್ಲಿ (Parliament Session) ಅಮಾನತು ಪರ್ವ ಮುಂದುವರಿದಿದ್ದು, ಮತ್ತೆ 49 ಸಂಸದರನ್ನು ಅಮಾನತುಗೊಳಿಸಲಾಗಿದೆ. ಸೋಮವಾರ ಉಭಯ ಸದನಗಳಿಂದ 78 ಪ್ರತಿಪಕ್ಷ ಸಂಸದರನ್ನು (ಲೋಕಸಭೆಯಿಂದ 33 ಮತ್ತು ರಾಜ್ಯಸಭೆಯಿಂದ 45) ಅಮಾನತುಗೊಳಿಸಲಾಗಿತ್ತು. INDIA ಮಿತ್ರಕೂಟದ ಕೆಲವರು ಸಭಾಪತಿಯನ್ನೇ ಮಿಮಿಕ್ರಿ ಮಾಡಿ ಅಪಹಾಸ್ಯ ಮಾಡಿದ್ದು ಭಾರಿ ಟೀಕೆಗೆ ಒಳಗಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

2. COVID Subvariant JN.1 : ರಾಜ್ಯದಲ್ಲಿ JN.1 ಪತ್ತೆಯಾಗಿಲ್ಲ; ಆದರೂ ಕಟ್ಟೆಚ್ಚರ; ಟೆಸ್ಟಿಂಗ್‌ ಹೆಚ್ಚಳ
ಕೇರಳದಲ್ಲಿ ಕೋವಿಡ್ ಉಪ ತಳಿ ಜೆಎನ್‌ 1 (COVID Subvariant JN.1) ಪತ್ತೆಯಾದ ಬೆನ್ನಲ್ಲೇ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ರಾಜ್ಯದಲ್ಲಿ ಸೋಮವಾರ ಮತ್ತು ಮಂಗಳವಾರ ಒಟ್ಟು ನಾಲ್ಕು ಕೋವಿಡ್‌‌ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಮೂರು ಪ್ರಕರಣ ಪತ್ತೆಯಾಗಿದ್ದು, ಅದರಲ್ಲಿ ಒಬ್ಬರು ಗುಣಮುಖರಾಗಿದ್ದಾರೆ. ಚಾಮರಾಜನಗರ ಮತ್ತು ರಾಮನಗರದಲ್ಲಿ ಒಂದೊಂದು ಕೇಸು ಕಂಡುಬಂದಿದೆ. ಆದರೆ, ಇದು ಸಾಮಾನ್ಯ ಕೊರೊನಾ ಪ್ರಕರಣಗಳು, ಕೋವಿಡ್‌ ಉಪತಳಿ ಜೆಎನ್‌ 1 ಅಲ್ಲ ಎಂದು ರಾಜ್ಯದ ಆರೋಗ್ಯ ಸಚಿವ ದಿನೇಶ್‌ ಗುಂಡೂ ರಾವ್‌ (Health Minister Dinesh Gundu Rao) ಹೇಳಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ವರದಿ : 1. ಆಕ್ಸಿಜನ್ ಸಿಲಿಂಡರ್, ಪ್ಲಾಂಟ್ ಎಷ್ಟಿದೆ? ವಾರದಲ್ಲಿ ವರದಿ ಕೊಡಲು ಸೂಚನೆ
ಪೂರಕ ವರದಿ : 2. ಕೋವಿಡ್‌ ರಕ್ಷಣೆಗೆ 2 ಮಾರ್ಗಸೂಚಿ; ಹಿರಿಯರು, ಗರ್ಭಿಣಿ, ತಾಯಂದಿರಿಗೆ ಮಾಸ್ಕ್‌ ಕಡ್ಡಾಯ

3. ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ಸಿದ್ದರಾಮಯ್ಯ; 18,177 ಕೋಟಿ ರೂ. ಬಿಡುಗಡೆಗೆ ಮನವಿ
ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮಂಗಳವಾರ (ಡಿ. 19) ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯದ ಬರ ಪರಿಸ್ಥಿತಿಯ ಕುರಿತು ವಿವರಿಸಿದರು. ಶೀಘ್ರವೇ 18,177.44 ಕೋಟಿ ರೂ. ಪರಿಹಾರ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಇನ್ನೊಂದು ಸುದ್ದಿ: ಮೇಕೆದಾಟು ಯೋಜನೆಗೆ ಅನುಮತಿ ಕೊಡಲು ಪ್ರಧಾನಿಗೆ ಸಿದ್ದರಾಮಯ್ಯ ಮೊರೆ

4. ಸಿದ್ದರಾಮಯ್ಯ, ಡಿಕೆಶಿ ಮಧ್ಯೆ ಡಿಶುಂ ಡಿಶುಂ; ನಿಗಮ-ಮಂಡಳಿ ನೇಮಕಕ್ಕೆ ಮೂಡದ ಒಮ್ಮತ!
ರಾಜ್ಯದ ಜನತೆ ಕಾಂಗ್ರೆಸ್‌ಗೆ 136 ಸೀಟು ಕೊಟ್ಟು ಗೆಲ್ಲಿಸಿದ್ದರೂ ಪಕ್ಷದಲ್ಲಿ (Congress Karnataka) ಈವರೆಗೆ ಡಿಶುಂ ಡಿಶುಂ ಮಾತ್ರ ನಿಂತಿಲ್ಲ. ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್‌ (DCM DK Shivakumar) ತಾಳಮೇಳದಲ್ಲಿ ಆಗಾಗ ಅಪಸ್ವರ ಕೇಳಿ ಬರುತ್ತಲೇ ಇದೆ. ಇದು ನಿಗಮ – ಮಂಡಳಿ ನೇಮಕದಲ್ಲೂ ಹಾಗೇ ಆಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ಸಂಸದ ಪ್ರಜ್ವಲ್‌‌, ಭವಾನಿ ರೇವಣ್ಣ ವಿರುದ್ಧ ಆಸ್ತಿ ಕಬಳಿಕೆ, ಕಿಡ್ನ್ಯಾಪ್‌ ಆರೋಪ ಹೊರಿಸಿದ ಮಾಜಿ ಚಾಲಕ
ದೇವೇಗೌಡರ ಫ್ಯಾಮಿಲಿ ಅಂದರೆ ನ್ಯಾಯ ಮತ್ತು ನಿಯತ್ತಿಗೆ ದೊಡ್ಡ ಹೆಸರು. ಆದರೆ, ಇದೀಗ ಅದೇ ಕುಟುಂಬದ ಎಚ್‌.ಡಿ. ರೇವಣ್ಣ‌ (HD Revanna), ಅವರ ಪತ್ನಿ ಭವಾನಿ ರೇವಣ್ಣ (Bhavani Revanna) ಹಾಗೂ ಸಂಸದ ಪ್ರಜ್ವಲ್‌ ರೇವಣ್ಣ (MP Prajwal Revanna) ಅವರ ಮೇಲೆ ಗಂಭೀರ ಆರೋಪವೊಂದು ಕೇಳಿಬಂದಿದೆ. ಅದೇನೆಂದರೆ, 14 ವರ್ಷಗಳ ಕಾಲ ಪ್ರಜ್ವಲ್‌ ರೇವಣ್ಣ ಅವರ ಜತೆಗೆ ಕಾರು ಚಾಲಕರಾಗಿದ್ದ ಕಾರ್ತಿಕ್‌ (Car Driver Karthik) ಎಂಬವರಿಗೆ ಸೇರಿದ 13 ಎಕರೆ ಜಾಗವನ್ನು ಈ ಕುಟುಂಬ ನುಂಗಿ ಹಾಕಿದೆ. ಪೊಲೀಸರಿಗೆ ದೂರು ನೀಡಿದರೂ ಸ್ಪಂದಿಸ‌ದಂತೆ ಕುಟುಂಬ ಒತ್ತಡ ಹಾಕುತ್ತಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ಭಾರತವನ್ನು ಹಿಂದೂ ರಾಷ್ಟ್ರವೆಂದರೆ ತಪ್ಪೇನು?- ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪೇಜಾವರ ಶ್ರೀ ಕೌಂಟರ್‌‌
ನಾವು ಹಿಂದೂಗಳು, ಹಿಂದೂಗಳಾದ ನಾವು ನಮ್ಮ ರಾಷ್ಟ್ರವನ್ನು ಹಿಂದೂ ರಾಷ್ಟ್ರ (Hindu Rashtra) ಎನ್ನುತ್ತೇವೆ, ಇದರಲ್ಲಿ ತಪ್ಪೇನಿದೆ ಎಂದು ಹೇಳುವ ಮೂಲಕ ರಾಮಜನ್ಮಭೂಮಿ ಟ್ರಸ್ಟ್ (Rama Janmabhumi trust) ಸದಸ್ಯರಾಗಿರುವ ಪೇಜಾವರ ಮಠದ (Pejavara Matt) ಶ್ರೀ ವಿಶ್ವ ಪ್ರಸನ್ನ ಶ್ರೀಗಳು (Vishwaprasanna Swameeji) ಹೊಸ ಚರ್ಚೆಯನ್ನು ಹುಟ್ಟು ಹಾಕಿದ್ದಾರೆ. ರಾಮ ಮಂದಿರ (Rama Mandira) ಲೋಕಾರ್ಪಣೆ ಹತ್ತಿರವಾಗುತ್ತಿದ್ದಂತೆಯೇ ಈ ಸಂಗತಿ ಚರ್ಚೆಗೆ ಕಾರಣವಾಗಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಇನ್ನೊಂದು ವರದಿ: ವಿದ್ಯಾರ್ಥಿನಿಯರನ್ನು ಸಾವರ್ಕರ್‌‌ ಕಾರ್ಯಕ್ರಮಕ್ಕೆ ಕಳುಹಿಸಿದ್ದಕ್ಕೆ ಪ್ರಾಂಶುಪಾಲರೇ ಎತ್ತಂಗಡಿ

7. ಜ್ಞಾನವಾಪಿ ಪ್ರಕರಣದಲ್ಲಿ ಮುಸ್ಲಿಮರ ಐದೂ ಅರ್ಜಿ ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್‌
ವಾರಾಣಸಿಯ ಜ್ಞಾನವಾಪಿ ಮಸೀದಿ (Gyanvapi Mosque) ಇರುವ ಸ್ಥಳದಲ್ಲಿ ದೇವಾಲಯವನ್ನು ಪ್ರತಿಷ್ಠಾಪಿಸುವ ಕುರಿತು ವಾರಾಣಸಿ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಸಿವಿಲ್ ಮೊಕದ್ದಮೆಯ ನಿರ್ವಹಣೆಯನ್ನು ಪ್ರಶ್ನಿಸಿದ್ದ ಎಲ್ಲಾ ಐದು ಅರ್ಜಿಗಳನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. Lok Sabha Election: ಲೋಕಸಭೆ ಎಲೆಕ್ಷನ್ ಮೋದಿ v/s ಖರ್ಗೆ! ಕುತೂಹಲ ಕೆರಳಿಸಿದ ‘ಇಂಡಿಯಾ’ ನಡೆ
ನವದೆಹಲಿ: 2024ರ ಲೋಕಸಭೆ ಚುನಾವಣೆಯು (Lok Sabha Election) ನರೇಂದ್ರ ಮೋದಿ (Narendra Modi) ವರ್ಸಸ್ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಆಗುವ ಸಾಧ್ಯತೆಗಳು ದಟ್ಟವಾಗಿವೆ. ಇಂಡಿಯಾ ಕೂಟದ ನಾಯಕತ್ವ ವಹಿಸಿಕೊಂಡು, ಪ್ರಧಾನಿ ಮಂತ್ರಿ ಅಭ್ಯರ್ಥಿಯಾಗಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೇಳಿಕೊಳ್ಳಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. IPL ಹರಾಜಿನಲ್ಲಿ ಮಿಚೆಲ್‌ ಸ್ಟಾರ್ಕ್‌ ದುಬಾರಿ ಆಟಗಾರ- 24.5 ಕೋಟಿಗೆ ಆರ್‌‌ಸಿಬಿ ಪಾಲಾದ ಆಸೀಸ್‌ ವೇಗಿ
2024ನೇ ಆವೃತ್ತಿಯ ಐಪಿಎಲ್​ನ ಹರಾಜಿನಲ್ಲಿ (IPL 2024 Auction) ಸಾರ್ವಕಾಲಿಕ ದಾಖಲೆಯೊಂದು ಸೃಷ್ಟಿಯಾಗಿದೆ. ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್​ ಐಪಿಎಲ್​ ಹರಾಜಿನ ಇತಿಹಾಸದಲ್ಲಿಯೇ ಅತ್ಯಧಿಕ ಮೊತ್ತಕ್ಕೆ ಸೇಲ್ ಆಗಿದ್ದಾರೆ. ಅವರು 24.75 ಕೋಟಿ ರೂಪಾಯಿಗೆ ಕೋಲ್ಕೊತಾ ನೈಟ್​ ರೈಡರ್ಸ್​ ತಂಡ ಸೇರಿಕೊಂಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ವರದಿ: IPL 2024 Auction : ಹರಾಜಿನಲ್ಲಿ 7.5 ಕೋಟಿ ಪಡೆದ 19 ವರ್ಷದ ಕುಶಾಗ್ರ ಯಾರು?

10. Dunki Vs Salaar: ರಿಲೀಸ್‌ಗೆ ಮುನ್ನವೇ ʼಸಲಾರ್‌ʼ, ʼಡಂಕಿʼ ಚಿತ್ರಗಳ ಮಧ್ಯೆ ಬಿಗ್‌ ಫೈಟ್‌
ಇನ್ನು ಕೆಲವೇ ದಿನಗಳಲ್ಲಿ ಬಹು ದೊಡ್ಡ ಕ್ಲ್ಯಾಶ್‌ಗೆ ಬಾಕ್ಸ್‌ ಆಫೀಸ್‌ ಸಾಕ್ಷಿಯಾಗಲಿದೆ (Box office clash). ಬಹು ನಿರೀಕ್ಷಿತ ಎರಡು ಚಿತ್ರಗಳು ಗಲ್ಲಾ ಪಟ್ಟಿಗೆಯಲ್ಲಿ ಸೆಣಸಾಡಲಿವೆ. ‘ಸಲಾರ್‌’ (Salaar) ಡಿಸೆಂಬರ್‌ 22ರಂದು ತೆರೆಗೆ ಬಂದರೆ ‘ಡಂಕಿ’ (Dunki) ಡಿಸೆಂಬರ್‌ 21ರಂದು ಬಿಡುಗಡೆಯಾಗುತ್ತಿದೆ. ಇದೀಗ ಮುಂಗಡ ಟಿಕೆಟ್‌ ಬುಕಿಂಗ್‌ ವಿಚಾರದಲ್ಲೂ ಈ ಎರಡೂ ಚಿತ್ರಗಳೂ ಜಿದ್ದಾಜಿದ್ದಿಗೆ ಬಿದ್ದಿವೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ


Exit mobile version