ಬೆಂಗಳೂರು: ಅನೇಕ ವರ್ಷಗಳಿಂದ ತಣ್ಣಗಾಗಿದ್ದ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಮರುಜೀವ ದೊರೆತಿದ್ದು, ಬುಧವಾರದಿಂದ ಸುಪ್ರೀಂಕೋರ್ಟ್‌ನಲ್ಲಿ ನಡೆಯುವ ವಿಚಾರಣೆಯತ್ತ ಎಲ್ಲರ ದೃಷ್ಟಿ ನೆಟ್ಟಿದೆ. ಮಂಗಳೂರು ಸ್ಫೋಟದ ಕುರಿತು ತನಿಖೆ ತೀವ್ರಗೊಂಡಿದೆ, ಮತದಾರರ ದತ್ತಾಂಶ ಅಕ್ರಮ ಸಂಗ್ರಹ ಪ್ರಕರಣದಲ್ಲಿ ಮತ್ತೊಬ್ಬನ ಬಂಧನವಾಗಿದೆ, ಬಿಜೆಪಿ ಜನಸಂಕಲ್ಪ ಯಾತ್ರೆ ಮುಂದುವರಿದಿದೆ, ಕಾಂತಾರ ಸಿನಿಮಾ ಭರ್ಜರಿ ಗಳಿಕೆ ದಾಖಲಿಸಿದೆ, ಮಂಡ್ಯದಲ್ಲೊಂದು ಲವ್ ಜಿಹಾದ್ ಪ್ರಕರಣ ವರದಿಯಾಗಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. ಕರ್ನಾಟಕ -ಮಹಾರಾಷ್ಟ್ರ ಗಡಿ ವಿವಾದ; ಪ್ರಧಾನಿ ಮೋದಿ ಎದುರು ಪ್ರಸ್ತಾಪ ಮಾಡಲು ಹೊರಟ ಶಿಂಧೆ ಸರ್ಕಾರದ ಉನ್ನತ ನಿಯೋಗ
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಅರ್ಜಿಯನ್ನು ಸುಪ್ರೀಂಕೋರ್ಟ್ ನವೆಂಬರ್ 23ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಈ ಮಧ್ಯೆ ಮಹಾರಾಷ್ಟ್ರ ಸರ್ಕಾರದ ಉನ್ನತ ನಿಯೋಗವೊಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಬಳಿ ಈ ಗಡಿ ವಿವಾದವನ್ನು ತೆಗೆದುಕೊಂಡು ಹೋಗಲು ನಿರ್ಧಾರ ಮಾಡಿದೆ. ತಾವು ಗಡಿ ವಿವಾದದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸುತ್ತೇವೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೇ ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. ಮರಾಠಾ ಗಡಿ ಹೋರಾಟಗಾರರಿಗೆ ಸೌಲಭ್ಯದ ಆಮಿಷ, ಮಹಾರಾಷ್ಟ್ರ ಸಿಎಂ ಘೋಷಣೆಗೆ ಕನ್ನಡಿಗರ ಆಕ್ರೋಶ
ಕರ್ನಾಟಕ-ಮಹಾರಾಷ್ಟ್ರ ಗಡಿ ಹೋರಾಟಗಾರರನ್ನು ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ‘ಈ ಗಡಿ ವಿವಾದಕ್ಕೆ ಸಂಬಂಧಪಟ್ಟ ಹೋರಾಟದಲ್ಲಿ ಮೃತಪಟ್ಟವರ ಕುಟುಂಬ ಅಥವಾ ಹತ್ತಿರದ ಸಂಬಂಧಿಗೆ ಪಿಂಚಣಿ ನೀಡಲಾಗುವುದು. ಹಾಗೇ, ಸಿಎಂ ಪರಿಹಾರ ನಿಧಿಯ ಸೌಲಭ್ಯವನ್ನು ಗಡಿಭಾಗದ ಜನರಿಗೂ ವಿಸ್ತರಿಸಲು ನಿರ್ಧಾರ ಮಾಡಿದ್ದೇವೆ. ಅಷ್ಟೇ ಅಲ್ಲ, ಮಹಾತ್ಮಾ ಜ್ಯೋತಿಬಾ ಫುಲೆ ಜನ ಆರೋಗ್ಯ ವಿಮಾ ಯೋಜನೆಯ ಸೌಕರ್ಯಗಳನ್ನೂ ಅವರಿಗೆ ನೀಡುತ್ತೇವೆ’ ಎಂದು ಸೋಮವಾರ ಹೇಳಿದ್ದಾರೆ. ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಪಟ್ಟು ಮಹಾರಾಷ್ಟ್ರ ಸರ್ಕಾರ ಕರೆದಿದ್ದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರಗಳನ್ನು ಕೈಗೊಂಡಿದ್ದಾಗಿಯೂ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. Border Dispute | ಜತ್ ತಾಲೂಕಿನ ಜನ ಕರ್ನಾಟಕ ಸೇರುವ ನಿರ್ಣಯ ಮಾಡಿದ್ದರು: ಮಹಾರಾಷ್ಟ್ರಕ್ಕೆ CM ಬೊಮ್ಮಾಯಿ ಎಚ್ಚರಿಕೆ
ಕರ್ನಾಟಕದಲ್ಲಿರುವ ಮರಾಠಿಗರಿಗೆ ಪುಲೆ ಆರೋಗ್ಯ ವಿಮೆ ಘೋಷಣೆ, ಸ್ವಾತಂತ್ರ್ಯ ಯೋಧರಿಗೆ ಪಿಂಚಣಿ ಹೆಚ್ಚಳ ಮಾಡುವಂತಹ ನಿರ್ಧಾರದ ಮೂಲಕ ಗಡಿ ಭಾಗದಲ್ಲಿ ಗೊಂದಲ (Border Dispute) ಉಂಟುಮಾಡುತ್ತಿರುವ ಮಹಾರಾಷ್ಟ್ರ ಸರ್ಕಾರದ ನಡೆಗೆ ಸಿಎಂ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದ್ದಾರೆ. ಜತ್ ತಾಲೂಕು ತೀವ್ರ ಬರಗಾಲಕ್ಕೆ ತುತ್ತಾಗಿತ್ತು. ಆಗ ನೀರಿನ ಸಮಸ್ಯೆ ಎದುರಾಗಿತ್ತು. ನಾವು ಆ ತಾಲೂಕಿನ ಜನರಿಗೆ ನೀರು ಕೊಟ್ಟಿದ್ದೆವು, ಎಲ್ಲ ಸವಲತ್ತು ಮಾಡಿದ್ದೆವು. ಜೆತ್ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತ್‌ಗಳೂ, ಕರ್ನಾಟಕ ಸೇರುವ ನಿರ್ಣಯವನ್ನು ಮಾಡಿದ್ದರು. ನಾವು ಇದನ್ನು ಗಂಭೀರವಾಗಿ ಪರಿಗಣಿಸಿದ್ದೆವು ಎಂದು ಪರೋಕ್ಷ ಎಚ್ಚರಿಕೆಯನ್ನೂ ನೀಡಿದ್ದಾ
4. ಮಂಗಳೂರು ಸ್ಫೋಟ | ಉಗ್ರ ಶಾರಿಕ್‌ನ ಹಿಂದು ವೇಷ, ಮೈಸೂರಲ್ಲಿ ಆತನ ಸ್ನೇಹಿತ ಅರೆಸ್ಟ್
ಮೈಸೂರಿನಲ್ಲಿ ಸುಮಾರು ಒಂದುವರೆ ತಿಂಗಳ ಕಾಲ ವಾಸವಾಗಿದ್ದ ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದ ಆರೋಪಿ ಶಾರಿಕ್ ಅಲ್ಲಿ ಹಿಂದು ಎಂದೇ ಗುರುತಿಸಿಕೊಂಡಿದ್ದ. ಆದರೆ, ಅತ್ಯಂತ ಗುಪ್ತವಾಗಿ ಮುಸ್ಲಿಂ ಗೆಳೆಯರನ್ನು ಮಾಡಿಕೊಂಡಿದ್ದ ಎಂಬ ಅಂಶ ಈಗ ಬೆಳಕಿಗೆ ಬಂದಿದೆ. ಮೈಸೂರಿನಲ್ಲಿ ಹಿಂದು ಹೆಸರಿನಲ್ಲಿ ಗುರುತಿಸಿಕೊಂಡಿದ್ದ ಶಾರಿಕ್‌ನ ಜತೆಗಿದ್ದ ಸ್ನೇಹಿತ ರುವುಲ್ಲಾನನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. Voter Data | ಮತದಾರರ ಪಟ್ಟಿ ಅಕ್ರಮ: ರಾಜ್ಯ ಚುನಾವಣಾ ಮುಖ್ಯಾಧಿಕಾರಿಯನ್ನು ಭೇಟಿ ಮಾಡಿದ ಕೇಂದ್ರ ಚುನಾವಣಾ ಆಯೋಗ ತಂಡ
ಕಾಂಗ್ರೆಸ್ ನಾಯಕರಿಂದ ಚುನಾವಣಾ ಅಕ್ರಮದ ದೂರು ಹೋಗುತ್ತಿದ್ದಂತೆ, ಕೇಂದ್ರ ಚುನಾವಣಾ ಆಯೋಗದ ಉಪ ಆಯುಕ್ತ ಅಜೇಯ್ ಭದು ಮತ್ತು ಇತರ ಅಧಿಕಾರಿಗಳು ಆಗಮಿಸಿ, ರಾಜ್ಯ ಚುನಾವಣಾ ಮುಖ್ಯ ಅಧಿಕಾರಿ ಮನೋಜ್ ಕುಮಾರ್ ಮೀನಾರನ್ನು ಭೇಟಿಯಾಗಿದ್ದಾರೆ. ಕಾಂಗ್ರೆಸ್ ನಾಯಕರ ದೂರಿನಲ್ಲಿ ಇರುವ ಅಂಶಗಳನ್ನು ಪ್ರಸ್ತಾಪಿಸಿ, ಅಗತ್ಯ ಮಾಹಿತಿ ಪಡೆದು ತೆರಳಿದ್ದಾರೆ. ಅವರು ಬಳಿಕ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಯವರನ್ನೂ ಭೇಟಿಯಾದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Voter Data | ʼಚಿಲುಮೆʼ ಅಕ್ರಮದ ಆರೋಪಿ, ನಾಪತ್ತೆಯಾಗಿದ್ದ ಲೋಕೇಶ್ ಬಂಧನ
6. ಜನಸಂಕಲ್ಪ ಯಾತ್ರೆ | ಟಿಕೆಟ್ ಆಕಾಂಕ್ಷಿಗಳಿಗೆ ಭಾಷಣದ ಪ್ರಾರಂಭದಲ್ಲೇ ಎಚ್ಚರಿಕೆ ಕೊಟ್ಟ ಸಿಎಂ ಬೊಮ್ಮಾಯಿ
ಬಿಜೆಪಿ ಅಧಿಕಾರಕ್ಕೆ ಬರಬೇಕೆಂದರೆ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ ಎಂದು ಎಚ್ಚರಿಕೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಭಾಷಣವನ್ನು ಆರಂಭಿಸಿದರು. ಜನಸಂಕಲ್ಪ ಯಾತ್ರೆಯಲ್ಲಿ ಭಾಷಣ ಮಾಡಿದ ಬೊಮ್ಮಾಯಿ, ಚಳ್ಳಕೆರೆ ಜನರು ಈ ಬಾರಿ ಬಿಜೆಪಿಯನ್ನು ಗೆಲ್ಲಿಸುವ ಸಂಕಲ್ಪ ಮಾಡಿದ್ದಾರೆ. ಆದರೆ ಅದು ಸಾಧ್ಯವಾಗಬೇಕು ಎಂದರೆ ನಾವೆಲ್ಲರೂ ಒಂದಾಗಿರಬೇಕು. ಈ ಮಾತನ್ನು ಎಲ್ಲರೂ ಅರ್ಥ ಮಾಡಿಕೊಳ್ಳುತ್ಥಾರೆ ಎಂದು ನಂಬಿದ್ದೇನೆ ಎಂದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. BL Santosh | ಟಿಆರ್‌ಎಸ್ ಶಾಸಕರ ಖರೀದಿ: ಎಸ್‌ಐಟಿ ವಿಚಾರಣೆಗೆ ಹಾಜರಾಗದ ಬಿಜೆಪಿ ನಾಯಕ ಬಿ ಎಲ್ ಸಂತೋಷ್ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ
ಟಿಆರ್‌ಎಸ್ ಶಾಸಕರ ಖರೀದಿ ಯತ್ನ (MLA poaching case) ಪ್ರಕರಣದ ತನಿಖೆ ನಡೆಸುತ್ತಿರುವ ತೆಲಂಗಾಣದ ವಿಶೇಷ ತನಿಖಾ ತಂಡ(ಎಸ್ಐಟಿ)ವು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ (BL Santosh), ತುಷಾರ್ ವೆಲ್ಲಪಳ್ಳಿ ಮತ್ತು ಜಗ್ಗು ಸ್ವಾಮಿ ವಿರುದ್ದ ಲುಕ್‌ಔಟ್ ನೋಟಿಸ್ ಜಾರಿ ಮಾಡಿದೆ. ವಿಚಾರಣೆಗೆ ಹಾಜರಾಗುವಂತೆ ಈ ಮೂವರಿಗೆ ಎಸ್ಐಟಿ ಸಮನ್ಸ್ ನೀಡಿತ್ತು. ಆದರೆ, ಗೈರು ಹಾಜರಾದ್ದರಿಂದ ಈಗ ಲುಕ್ಔಟ್ ನೋಟಿಸ್ ಹೊರಡಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. Kantara Movie | 400 ಕೋಟಿ ರೂ. ಕ್ಲಬ್ ಸೇರಿದ ಕಾಂತಾರ, ಕಡಿಮೆ ಬಜೆಟ್‌ನಲ್ಲಿ ಗರಿಷ್ಠ ಗಳಿಕೆಯ ದಾಖಲೆ
ಸಿನಿಮಾ ಮಂದಿರಗಳೆಡೆಗೆ ಜನ ದೌಡಾಯಿಸುವಂತೆ ಮಾಡಿದ ಸ್ಯಾಂಡಲ್‌ವುಡ್ ಸಿನಿಮಾ ಕಾಂತಾರ (Kantara Movie) ೪೦೦ ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ದಾಖಲೆ ಬರೆದಿದೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣ ಮಾಡಿರುವ ಈ ಸಿನಿಮಾದ ಇದುವರೆಗಿನ ಸಾರ್ವಕಾಲಿಕ ದಾಖಲೆ ಎಂದೇ ಹೇಳಲಾಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. Love Jihad | ಬಾಲಕಿಯಿಂದಲೇ ಮನೆಯವರಿಗೆ ನಿದ್ದೆ ಮಾತ್ರೆ ಕೊಡಿಸಿದ; ಮನೆಗೆ ಬಂದು ಅತ್ಯಾಚಾರ ಮಾಡಿದ!
ಮುಸ್ಲಿಂ ಯುವಕನೊಬ್ಬ ಹಿಂದು ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆಯೊಂದು ನಾಗಮಂಗಲ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. 25 ವರ್ಷದ ಯೂನಸ್ ಪಾಷ ಎಂಬಾತ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಇಸ್ಲಾಂ ಧರ್ಮಕ್ಕೆ ಮತಾಂತರ (Love Jihad) ಆಗುವಂತೆ ಒತ್ತಾಯಿಸಿದ್ದಾನೆ. ಬೆಳ್ಳೂರು ಕ್ರಾಸ್‌ನಲ್ಲಿರುವ ಪಬ್ಲಿಕ್ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ವಿಕಲಚೇತನ ಬಾಲಕಿಯನ್ನು ಈ ಯೂನಸ್ ಪಾಷ ಹೇಗೋ ಪರಿಚಯ ಮಾಡಿಕೊಂಡಿದ್ದ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. Layoffs Season | ಟೆಕ್ ಕಂಪನಿಗಳು ಏಕೆ ಉದ್ಯೋಗ ಕಡಿತ ಮಾಡುತ್ತಿವೆ? ಇದಕ್ಕೇನು ಕಾರಣ?
ಟ್ವಿಟರ್, ಮೆಟಾ, ಅಮೆಜಾನ್ ಸೇರಿದಂತೆ ಟೆಕ್ ದೈತ್ಯ ಕಂಪನಿಗಳು ಉದ್ಯೋಗಗಳನ್ನು ಕಡಿತ ಮಾಡುತ್ತಿವೆ. ಮೆಟಾ ಆಲ್ಮೋಸ್ಟ್ 11 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾಗಿದ್ದರೆ, ಅಮೆಜಾನ್ ಕೂಡ 10 ಸಾವಿರ ಉದ್ಯೋಗ ಕಡಿತ (Layoffs Season) ಮಾಡುತ್ತಿದೆ. ಈ ಸಾಲಿಗೆ ಉಬರ್, ಏರ್‌ಬಿಎನ್‌ಬಿ, ಜಿಲ್ಲೋ, ಕ್ವಾಯಿನ್‌ಬೇಸ್, ಲಿಫ್ಟ್, ನೆಟ್‌ಫ್ಲಿಕ್ಸ್, ಸ್ಫೋಟಿಫೈ, ಪೆಲೋಟೋನ್, ಸ್ಟ್ರೈಪ್ ಮತ್ತು ರಾಬಿನ್‌ಹುಡ್ ಕಂಪನಿಗಳು ಸೇರ್ಪಡೆಯಾಗುತ್ತಿವೆ. ದೊಡ್ಡ ಪ್ರಮಾಣದಲ್ಲಿ ಉದ್ಯೋಗಗಳನ್ನು ಕಡಿತ (Layoffs Season) ಮಾಡುತ್ತಿವೆ? ಇದಕ್ಕೇನು ಕಾರಣಗಳೇನು? ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳು
- Rozgar Mela | 71 ಸಾವಿರ ಜನರಿಗೆ ಉದ್ಯೋಗ ನೇಮಕ ಪತ್ರ ವಿತರಿಸಿದ ಪ್ರಧಾನಿ ಮೋದಿ
- Madras High Court | ವಾರ್ಷಿಕ 8 ಲಕ್ಷ ಆದಾಯ ಇರುವವರು ಬಡವರಾದ್ರೆ, 2.5 ಲಕ್ಷ ರೂ. ಗಳಿಸುವವರಿಗೇಕೆ ತೆರಿಗೆ?
- KPSC Recruitment 2022 | ಕೆಪಿಎಸ್‌ಸಿಯಿಂದ ಈ ವರ್ಷ ನೇಮಕಾತಿಯ ಹೊಸ ಅಧಿಸೂಚನೆಗಳಿಲ್ಲ
- IND VS NZ | ಭಾರತ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ಅಂತಿಮ ಟಿ20 ಪಂದ್ಯ ಟೈನಲ್ಲಿ ಅಂತ್ಯ; ಸರಣಿ ಗೆದ್ದ ಭಾರತ
- ಲೈಫ್ ಸರ್ಕಲ್ ಅಂಕಣ | ಭಕ್ತಿಯಲ್ಲಿದೆ ಜೀವನದ ಭೋಗ, ಸಾಧನೆಯ ಯೋಗ, ಮುಕ್ತಿಯ ಮಾರ್ಗ
- ದಶಮುಖ ಅಂಕಣ | ಹೇಮಂತ ಎಂಬ ಧೀಮಂತ ಋತು