1. ನನಗೆ ಟಿಕೆಟ್ ತಪ್ಪಿಸಿದ್ದು ಬಿ.ಎಲ್ ಸಂತೋಷ್, ಇವರಿಂದ್ಲೇ ಬಿಜೆಪಿ ಮುಳುಗೋದು; ಶೆಟ್ಟರ್ ಚಾರ್ಜ್‌ಶೀಟ್
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ವಂಚಿತರಾಗಿ ಕಾಂಗ್ರೆಸ್ ಸೇರಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಕ್‌ಪ್ರಹಾರ ನಡೆಸಿದ್ದಾರೆ. ತನಗೆ ಟಿಕೆಟ್ ತಪ್ಪಲು ಬಿ.ಎಲ್. ಸಂತೋಷ್ ಅವರೇ ಕಾರಣ, ಅವರಿಂದಾಗಿಯೇ ಬಿಜೆಪಿ ಮುಳುಗುತ್ತದೆ ಎಂದು ಜಗದೀಶ್ ಶೆಟ್ಟರ್ ಅವರು ಹೇಳಿದರು. ಹುಬ್ಬಳ್ಳಿ ನಿವಾಸದಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿ ಬಿಜೆಪಿ ನಾಯಕರ ವಿರುದ್ಧ ಜಾರ್ಜ್‌ಶೀಟ್ ಸಲ್ಲಿಸಿದರು! ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ : 1. ಬಿ.ಎಲ್. ಸಂತೋಷ್ ವಿರುದ್ಧ ಮಾತನಾಡಿದ್ದು ಶೆಟ್ಟರ್‌ಗೆ ಶೋಭೆಯಲ್ಲ: ಬಿ.ಎಸ್. ಯಡಿಯೂರಪ್ಪ
2. ಅನಂತಕುಮಾರ್ ನೆಟ್ಟ ಗಿಡ ಒಣಗುತ್ತಿದೆ ಎಂದ ತೇಜಸ್ವಿನಿ: ವಿಷಯವನ್ನು ರಾಜಕೀಯಕ್ಕೆ ತಿರುಗಿಸಿದ ನೆಟ್ಟಿಗರು
3. ಚರೈವೇತಿ ಚರೈವೇತಿ, ಯಹೀ ತೋ ಮಂತ್ರ್ ಹೈ ಅಪ್ನಾ; ಶೆಟ್ಟರ್ ಆರೋಪಗಳಿಗೆ ಪ್ರತಿಯಾಗಿ ಬಿ.ಎಲ್ ಸಂತೋಷ್ ಹೇಳಿದ್ದೇನು?
2. ತಾಕತ್ತಿದ್ದರೆ ಕಾಂಗ್ರೆಸ್ ಲಿಂಗಾಯತ ಸಿಎಂ ಅಭ್ಯರ್ಥಿ ಘೋಷಣೆ ಮಾಡಲಿ; ನಳಿನ್ ಸವಾಲು
ʻʻಜಗದೀಶ್ ಶೆಟ್ಟರ್ ಅವರು ಹಿರಿಯರ ಮನವೊಲಿಕೆ ನಂತರವೂ ಬಿಜೆಪಿ ಬಿಟ್ಟಿದ್ದಾರೆ. ಇವತ್ತು ಪಾರ್ಟಿಯಿಂದ ಹೊರಗೆ ಹೋಗಿ ಮಾತನಾಡೋದು ಶೋಭೆ ತರುವುದಿಲ್ಲʼʼ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಇದೇ ವೇಳೆ ತಾಕತ್ತಿದ್ದರೆ ಕಾಂಗ್ರೆಸ್ ಲಿಂಗಾಯತ ಸಿಎಂ ಅಭ್ಯರ್ಥಿ ಘೋಷಣೆ ಮಾಡಲಿ ಎಂದು ಸವಾಲು ಹಾಕಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ : 1. ಶೆಟ್ಟರ್ ಕೈ ಸೇರ್ಪಡೆ ಪ್ರತಿಯಾಗಿ ಬಿಜೆಪಿ ರಿವರ್ಸ್ ಆಪರೇಷನ್; ಎಸ್.ಆರ್ ಪಾಟೀಲ್‌ಗೆ ಗಾಳ
3. ಮಂಡ್ಯದಲ್ಲಿ ಎಚ್‌ಡಿಕೆ ಸ್ಪರ್ಧಿಸಿದರೆ ಬಿಜೆಪಿಯಿಂದ ಸುಮಲತಾ ಕಣಕ್ಕೆ: ಏನೇನು ಲೆಕ್ಕಾಚಾರಗಳು?
ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿರುಸಿನ ಫೈಟ್‌ಗೆ ಇಡೀ ರಾಜ್ಯದ ಗಮನ ಸೆಳೆದಿದ್ದ ಮಂಡ್ಯ ಈಗ ಮತ್ತೆ ಬಿಸಿಯೇರುತ್ತಿದೆ. ಈ ಬಾರಿ ಮಂಡ್ಯ ವಿಧಾನಸಭೆ ಕ್ಷೇತ್ರದಿಂದ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಸೆಣೆಸುವ ಸಾಧ್ಯತೆಯಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿಗಳು : 1. ಎಚ್‌ಡಿಕೆ, ಸುಮಲತಾ ಸ್ಪರ್ಧೆ ಫಿಕ್ಸ್?; ಬ್ಯಾಂಕ್ ಖಾತೆ ತೆರೆದ ಮಾಜಿ ಸಿಎಂ, ಸಂಸದೆ!
2. Karnataka Election 2023 : ದೇವೇಗೌಡರ ಸಮ್ಮುಖದಲ್ಲಿ ವೈಎಸ್‌ವಿ ದತ್ತಾ ನಾಮಪತ್ರ ಸಲ್ಲಿಕೆ
4. ರಾಜ್ಯದಾದ್ಯಂತ ನಾಮಪತ್ರ ಭರಾಟೆ: ರಾಜಕಾರಣಿಗಳ ಬಳಿ ಝಣಝಣ ಕಾಂಚಾಣ
ರಾಜ್ಯದಲ್ಲಿ ನಾಮಪತ್ರ ಸಲ್ಲಿಕೆಯ ಭರಾಟೆ ಜೋರಾಗಿದೆ. ಇದೇ ವೇಳೆ ಅವರು ನಾಮಪತ್ರದ ಜತೆ ಸಲ್ಲಿಸುವ ಅಫಿಡವಿಟ್‌ಗಳಲ್ಲಿ ಕಾಣಬರುವ ಝಣಝಣ ಕಾಂಚಾಣದ ಕಥೆಯೂ ತೆರೆದುಕೊಂಡಿದೆ.
1. 1414 ಕೋಟಿ ರೂ. ತಲುಪಿದ ಡಿಕೆಶಿ ಆಸ್ತಿ ಮೌಲ್ಯ, 2018ಕ್ಕಿಂತ 68% ಹೆಚ್ಚು! ಇರುವುದು ಒಂದೇ ಕಾರು!
2. ನಿಖಿಲ್ ಕುಮಾರಸ್ವಾಮಿಯ ಎರಡು ಕಾರಿನ ಮೌಲ್ಯವೇ 5 ಕೋಟಿ ರೂ., ಹಾಗಿದ್ದರೆ ಅವರ ಒಟ್ಟು ಆಸ್ತಿ ಎಷ್ಟಿರಬಹುದು?
5.ಎನ್‌ಸಿಪಿ ತೊರೆಯಲಿದ್ದಾರೆಯೇ ಅಜಿತ್ ಪವಾರ್? ನಿಜವಾಗಿಯೂ ನಡೆದಿದ್ದೇನು?
ಮಹಾರಾಷ್ಟ್ರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಈ ಹಿಂದೆ ಬಿಜೆಪಿಯೊಂದಿಗೆ ಕೈ ಜೋಡಿಸಿದ್ದ ಎನ್‌ಸಿಪಿ (NCP) ನಾಯಕ ಅಜಿತ್ ಪವಾರ್ ಮತ್ತೆ ಬಿಜೆಪಿ ಜತೆ ಹೆಜ್ಜೆ ಹಾಕಲಿದ್ದಾರೆಂಬ ಸುದ್ದಿಗಳು ಜೋರಾಗಿವೆ. ಆದರೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವು ಈ ಸುದ್ದಿಗಳನ್ನು ಅಲ್ಲಗಳೆದಿದ್ದು, ಪವಾರ್ ಪಕ್ಷದ ಜತೆಗೇ ಇರಲಿದ್ದಾರೆಂದು ಹೇಳಿದೆ. ಏತನ್ಮಧ್ಯೆ, ಸ್ವತಃ ಅಜಿತ್ ಪವಾರ್ ಅವರೇ ಈ ಎಲ್ಲ ಸುದ್ದಿಗಳನ್ನು ತಳ್ಳಿ ಹಾಕಿದ್ದು, ಮಾಧ್ಯಮಗಳು ಯಾವುದೇ ಕಾರಣವಿಲ್ಲದೇ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ ಎಂದಿದ್ದಾರೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
6. ಕಾಂಗ್ರೆಸ್ ನಾಲ್ಕನೇ ಪಟ್ಟಿ ಪ್ರಕಟ; ಸಿಎಂ ಬೊಮ್ಮಾಯಿ ವಿರುದ್ಧ ಮಹ್ಮದ್ ಯೂಸುಫ್ ಕಣಕ್ಕೆ
ರಾಜ್ಯ ವಿಧಾನಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಬಾಕಿ ಇರುವ 15 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಶಿಗ್ಗಾವಿ ಕ್ಷೇತ್ರದಲ್ಲಿ ಅಚ್ವರಿ ಎಂಬಂತೆ ಮಹ್ಮದ್ ಯೂಸುಫ್ ಸವಣೂರು ಅವರನ್ನು ಕಣಕ್ಕಿಳಿಸಲಾಗಿದೆ. ಇವರು ಹುಬ್ಬಳ್ಳಿ ಅಂಜುಮನ್ ದರ್ಗಾದ ಅಧ್ಯಕ್ಷರಾಗಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಪಕ್ಷ ಚಿಂತನೆ ನಡೆಸಿತ್ತು. ಪೂರ್ಣ ವರದಿಗೆ ಕ್ಲಿಕ್ ಮಾಡಿ
7. ಮುಸ್ಲಿಮ್ ಮೀಸಲು ರದ್ದು; ಪ್ರತಿಕ್ರಿಯೆಗೆ ಕಾಲಾವಕಾಶ ಕೇಳಿದ ರಾಜ್ಯ ಸರ್ಕಾರ, ಏ.25ಕ್ಕೆ ವಿಚಾರಣೆ
ಮುಸ್ಲಿಮ್ ಸಮುದಾಯಕ್ಕೆ ನೀಡಲಾಗಿದ್ದ ಶೇ.4 ಮೀಸಲು ರದ್ದು ಆದೇಶದ ಕುರಿತು ಪ್ರತಿಕ್ರಿಯಿಸಲು ಕರ್ನಾಟಕ ಸರ್ಕಾರವು ಕಾಲಾವಕಾಶ ಕೇಳಿದೆ. ಹಾಗಾಗಿ, ಈ ಸಂಬಂಧ ದಾಖಲಾಗಿದ್ದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಏಪ್ರಿಲ್ 25ಕ್ಕೆ ಮುಂದೂಡಿದೆ. ಕರ್ನಾಟಕದಲ್ಲಿ ಒಬಿಸಿ ಕೋಟಾದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಶೇ.4 ಮೀಸಲಾತಿ ಜಾರಿಯಲ್ಲಿತ್ತು. ಕೆಲವು ವಾರಗಳ ಹಿಂದೆ ಕರ್ನಾಟಕ ಸರ್ಕಾರವು ಮೀಸಲು ರದ್ದುಪಡಿಸಿ, ಲಿಂಗಾಯತ ಮತ್ತು ಒಕ್ಕಲಿಗರಿಗೆ ತಲಾ ಶೇ.2 ಮೀಸಲು ಹೆಚ್ಚಿಸಿತ್ತು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. ಲೈಂಗಿಕ ದಂಧೆ ಜಾಲ ಭೇದಿಸಿದ ಮುಂಬೈ ಪೊಲೀಸ್, ನಟಿ ಆರತಿ ಮಿತ್ತಲ್ ಬಂಧನ
ಮುಂಬೈ ಕ್ರೈಮ್ ಬ್ರ್ಯಾಂಚ್ ಪೊಲೀಸರು ಬಾಲಿವುಡ್ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿದ್ದ ಸೆಕ್ಸ್ ರಾಕೆಟ್ ಭೇದಿಸಿದ್ದಾರೆ. ಅಪ್ನಾಪ್ನ ಧಾರಾವಾಹಿಯಲ್ಲಿ ಕೆಲಸ ಮಾಡಿದ್ದ ನಟಿ ಆರತಿ ಮಿತ್ತಲ್ ಅವರು ಈ ಲೈಂಗಿಕ ದಂಧೆಯ ಜಾಲವನ್ನು ಹೊಂದಿದ್ದು, ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. ಕರಾವಳಿ, ಒಳನಾಡಲ್ಲಿ ತಾಪಮಾನ ಏರಿಕೆ ಎಚ್ಚರಿಕೆ; ಚಿಕ್ಕಮಗಳೂರು, ತುಮಕೂರಲ್ಲಿ ಮಳೆ ಸಾಧ್ಯತೆ
ರಾಜ್ಯದಲ್ಲಿ ಮಂಗಳವಾರ ಮಳೆ ಪ್ರಮಾಣ ತಗ್ಗಿದ್ದು, ಮುಂದಿನ 48 ಗಂಟೆಯಲ್ಲಿ ತಾಪಮಾನ ಏರಿಕೆ ಆಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಗರಿಷ್ಠ ಉಷ್ಣಾಂಶವು ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದ ಕೆಲವು ಭಾಗಗಳಲ್ಲಿ ಹಾಗೂ ಒಳನಾಡಿನ ಒಂದೆರಡು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ಪಂದ್ಯದ ವೇಳೆ ತಾಳ್ಮೆ ಕಳೆದುಕೊಂಡ ಮಹೇಂದ್ರ ಸಿಂಗ್ ಧೋನಿ; ವಿಡಿಯೊ ವೈರಲ್
ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಮೈದಾನದಲ್ಲಿ ಶಾಂತಿಯಿಂದ ವರ್ತಿಸುತ್ತಾರೆ. ಬ್ಯಾಟಿಂಗ್, ವಿಕೆಟ್ ಕೀಪಿಂಗ್ ಅಥವಾ ನಾಯಕನಾಗೇ ಇರಲಿ ಶಾಂತಚಿತ್ತ ಅವರ ಮುಖ್ಯ ಗುಣ. ಎಂತಹ ಸನ್ನಿವೇಶವಿದ್ದರೂ ಧೋನಿ ತಾಳ್ಮೆ ಕಳೆದುಕೊಳ್ಳುವುದು ವಿರಳ. ಇದಕ್ಕಾಗಿ ಅವರಿಗೆ “ಕ್ಯಾಪ್ಟನ್ ಕೂಲ್’ ಎಂಬ ಹೆಸರು ಕೂಡ ಇದೆ. ಆದರೆ ಸೋಮವಾರದ ಪಂದ್ಯದಲ್ಲಿ “ಕ್ಯಾಪ್ಟನ್ ಕೂಲ್’ “ಕೊಂಚ ಆ್ಯಂಗ್ರಿಮ್ಯಾನ್’ ಆಗಿ ಬದಲಾಗಿದ್ದರು. IPL 2023: ಪಂದ್ಯದ ವೇಳೆ ತಾಳ್ಮೆ ಕಳೆದುಕೊಂಡ ಮಹೇಂದ್ರ ಸಿಂಗ್ ಧೋನಿ; ವಿಡಿಯೊ ವೈರಲ್
ಇತರ ಪ್ರಮುಖ ಸುದ್ದಿಗಳು
1.Vinaya Kulkarni: ವಿನಯ ಕುಲಕರ್ಣಿಗೆ ಶಾಕ್; ಧಾರವಾಡ ಜಿಲ್ಲೆ ಪ್ರವೇಶಕ್ಕೆ ಅನುಮತಿ ನಿರಾಕರಿಸಿದ ಕೋರ್ಟ್
2. ಪಕ್ಷೇತರನಾಗಿ ನಿಂತರೂ 12000 ಲೀಡಲ್ಲಿ ಗೆಲ್ತೇನೆ, ಆದರೆ ಹಾಗೆ ಮಾಡಲ್ಲ; ತಣ್ಣಗಾದ ರಾಮದಾಸ್
3. ಮಂಗಳೂರು ಕ್ಷೇತ್ರದ SDPI ಅಭ್ಯರ್ಥಿ ಮೇಲಿದೆ ದೇಶದ್ರೋಹದ ಕೇಸು, NIA ಕಣ್ಗಾವಲಿನಲ್ಲಿರುವ ಆರೋಪಿ!
4. ಶೆಟ್ಟರ್ ಬಿಜೆಪಿ ತೊರೆದ ಬೆನ್ನಲ್ಲೇ ಹುಬ್ಬಳ್ಳಿಗೆ ಆಗಮಿಸಿದ ಜೆ.ಪಿ. ನಡ್ಡಾ; ಡ್ಯಾಮೇಜ್ ಕಂಟ್ರೋಲ್‌ಗೆ ರಾಜ್ಯ ಪ್ರವಾಸ
5. ಸರ್ವೋದಯ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯಗೆ ಚಿನಕುರುಳಿ ಗ್ರಾಮಸ್ಥರಿಂದ 3.25 ಲಕ್ಷ ರೂ. ದೇಣಿಗೆ