Site icon Vistara News

ವಿಸ್ತಾರ Top 10 News : ಮೋದಿ ಎಲೆಕ್ಷನ್‌ ದಂಡಯಾತ್ರೆ ಮುಕ್ತಾಯ, ಸೋಮವಾರ ಎಸ್ಸೆಸ್ಸೆಲ್ಸಿ ರಿಸಲ್ಟ್;‌ ಪ್ರಮುಖ ಸುದ್ದಿ ಲಿಸ್ಟ್‌

Vistara TOP 10 News

Vistara TOP 10 News

1. 7 ದಿನ, 18 ಸಮಾವೇಶ, 5 ರೋಡ್‌ ಶೋ, 113 ಟಾರ್ಗೆಟ್: ಮೋದಿ ಎಲೆಕ್ಷನ್ ದಂಡಯಾತ್ರೆಗೆ ಅದ್ದೂರಿ ತೆರೆ
ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದೇ ತರುವ ಅತಿ ದೊಡ್ಡ ಉದ್ದೇಶದಿಂದ ಏಪ್ರಿಲ್‌ 29ರಂದು ರಾಜ್ಯಕ್ಕೆ ಕಾಲಿಟ್ಟ ಪ್ರಧಾನಿ ನರೇಂದ್ರ ಮೋದಿ ಅವರ ಅತಿ ದೊಡ್ಡ ಟಾಸ್ಕ್‌ ಮೇ 7ರ ಸಂಜೆ ಏಳು ಗಂಟೆಗೆ ಅಂತ್ಯಗೊಂಡಿದೆ. ಈ ನಡುವೆ ಅವರು 18 ಸಮಾವೇಶಗಳು, ಐದು ರೋಡ್‌ ಶೋಗಳಲ್ಲಿ ಭಾಗವಹಿಸಿ ವಿಧಾನಸಭಾ ಚುನಾವಣೆಯಲ್ಲಿ ಬಹುಮತದ ಸರಕಾರ (113 ಸ್ಥಾನ) ಸ್ಥಾಪನೆಗೆ ಜನರ ನೆರವು ಕೋರಿದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ವರದಿ : ಪುಷ್ಪಗಳ ಹಾಸಿನ ಮೇಲೆ ಮೋದಿ ರೋಡ್‌ ಶೋ ; ಅರಳೀತೆ ಕಮಲ?

2. ಶಿವಮೊಗ್ಗದಲ್ಲಿ ಅಡಿಕೆ ಬೆಳೆಗಾರರ ಓಲೈಕೆ, ನಂಜನಗೂಡು ಶ್ರೀಕಂಠೇಶ್ವರನ ಆಶೀರ್ವಾದ ಕೋರಿಕೆ
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬಿಜೆಪಿಯ ಗಟ್ಟಿನೆಲ ಶಿವಮೊಗ್ಗದಲ್ಲಿ ಬೃಹತ್‌ ಸಮಾವೇಶ ನಡೆಸಿ ಅಡಕೆ ಬೆಳೆಗಾರರನ್ನು ಓಲೈಸಲು ಯತ್ನಿಸಿದರು. ಬಳಿಕ ನಂಜನಗೂಡಿನಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದರು. ನಂಜನಗೂಡಿನ ಶ್ರೀಕಂಠೇಶ್ವರನ ದರ್ಶನ ಮಾಡಿ ಆಶೀರ್ವಾದ ಕೋರಿದರು.
1. ಅಡಕೆ ಬೆಳೆಗಾರರಿಗೆ ಮೋಡಿ ಮಾಡಿದ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ
2. ಕಾಂಗ್ರೆಸ್‌ ಸುಳ್ಳಿನ ಬಂಡಲ್‌; ನಂಜನಗೂಡಿನಲ್ಲಿ ಮೋದಿ ಕಿಂಡಲ್

3. ರಾಹುಲ್, ಪ್ರಿಯಾಂಕಾ ಜಂಟಿ ಪ್ರಚಾರದ ಅಬ್ಬರ: ರೋಡ್‌ ಶೋನೊಂದಿಗೆ ಮಿಂಚಿದ ಅಣ್ಣ-ತಂಗಿ
ಕರ್ನಾಟಕ ಚುನಾವಣೆ ಪ್ರಚಾರದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿರುವ ಕಾಂಗ್ರೆಸ್‌ನ ಸ್ಟಾರ್‌ ಪ್ರಚಾರಕರಾದ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಭಾನುವಾರ ಬೆಂಗಳೂರಿನಲ್ಲಿ ರೋಡ್‌ ಶೋ ಮೂಲಕ ಮಿಂಚಿದರು. ರಾಹುಲ್‌ ಗಾಂಧಿ ಆನೇಕಲ್‌ನಲ್ಲಿ, ಪ್ರಿಯಾಂಕಾ ಅವರು ಮಹದೇವಪುರದಲ್ಲಿ ರೋಡ್‌ ಶೋ ನಡೆಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.
ಪೂರಕ ಸುದ್ದಿ: ನೆಹರು ಮಂಗಳೂರು ವಿಮಾನ ನಿಲ್ದಾಣ, ಬಂದರು ನಿರ್ಮಿಸಿದ್ರು, ಮೋದಿ ಅದಾನಿಗೆ ಮಾರಿದ್ರು
ಇನ್ನೊಂದು ಸುದ್ದಿ: ಪರಸ್ಪರ ಆಪ್ತ ಸಂದರ್ಶನ ನಡೆಸಿ ಒಗ್ಗಟ್ಟು ಸಾರಿದ ಸಿದ್ದು, ಡಿಕೆಶಿ

4. ಸೋಮವಾರ ಬೆಳಗ್ಗೆ 10 ಗಂಟೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ, ವಿದ್ಯಾರ್ಥಿಗಳಲ್ಲಿ ಕಾತರ
ಎಸ್ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶವು ಮೇ 8ರ ಬೆಳಗ್ಗೆ 11 ಗಂಟೆಗೆ ಪ್ರಕಟಗೊಳ್ಳಲಿದೆ. ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮಾಹಿತಿ ನೀಡಿದೆ. ರಾಜ್ಯಾದ್ಯಂತ 3,305 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ರಿಸಲ್ಟ್‌ನ ಪೂರ್ಣ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

5. ಎಸ್‌.ಎಂ ಕೃಷ್ಣ ಸಹೋದರಿ ಮನೆ ಮೇಲೆ ಐಟಿ ದಾಳಿ, ಬ್ಯಾಡಗಿಯಲ್ಲಿ ಕೈ ಮುಖಂಡನಿಗೆ ಬಿಸಿ
ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಡೆಯುತ್ತಿದೆ ಎಂದು ಹೇಳಲಾದ ಆದಾಯ ತೆರಿಗೆ ಅಧಿಕಾರಿಗಳ ದಾಳಿಯ ಬಿಸಿ ಇದೀಗ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ಸಹೋದರಿಗೂ ತಟ್ಟಿದೆ. ಜತೆಗೆ ಬ್ಯಾಡಗಿಯ ಕಾಂಗ್ರೆಸ್‌ ನಾಯಕರ ಮನೆಗೂ ಐಟಿ ನುಗ್ಗಿದೆ. ಪೂರ್ಣ ಮಾಹಿತಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ಮತ್ತೆ ‘ಕಾಶ್ಮೀರ’ದಲ್ಲಿ ಮೂಗು ತೂರಿಸಿದ ಚೀನಾ; ಪಾಕ್ ನೆಲದಲ್ಲಿ ನಿಂತು ಭಾರತಕ್ಕೆ ಬಿಟ್ಟಿ ಸಲಹೆ!
ಭಾರತ ಮತ್ತು ಪಾಕಿಸ್ತಾನದ ನಡುವೆ ಇತಿಹಾಸದಿಂದ ಇರುವ ಕಾಶ್ಮೀರ ಸಂಘರ್ಷ ವನ್ನು ವಿಶ್ವಸಂಸ್ಥೆಯ ನಿರ್ಣಯದ ಅನುಸಾರವಾಗಿಯೇ ಪರಿಹರಿಸಿಕೊಳ್ಳಬೇಕು. ಕಾಶ್ಮೀರಕ್ಕೆ ಸಂಬಂಧಪಟ್ಟಂತೆ ಏಕಪಕ್ಷೀಯ ಕ್ರಮ ಸರಿಯಲ್ಲ ಎಂದು ಚೀನಾದ ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವ ಕ್ವಿನ್​ ಗಾಂಗ್​ ಹೇಳಿದ್ದಾರೆ. ಪಾಕ್‌ ನೆಲದಲ್ಲಿ ನಿಂತು ಡ್ರ್ಯಾಗನ್‌ ದೇಶ ಬಿಟ್ಟಿ ಸಲಹೆ ನೀಡುವ ಮೂಲಕ ಉದ್ಧಟತನ ಮೆರೆದಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. ಪಂಜಾಬ್​​ನ ಗೋಲ್ಡನ್​ ಟೆಂಪಲ್​​ ಸಮೀಪವೇ ಸ್ಫೋಟ; ಹಲವರಿಗೆ ಗಾಯ
ಪಂಜಾಬ್​​ನ ಅಮೃತ್​​ಸರ್​​ನಲ್ಲಿರುವ ಗೋಲ್ಡನ್​ ಟೆಂಪಲ್ ಸಮೀಪವೇ ಇರುವ ಹೆರಿಟೇಜ್​ ಸ್ಟ್ರೀಟ್​​ನಲ್ಲಿ ಶನಿವಾರ ರಾತ್ರಿ ಸ್ಫೋಟ ಉಂಟಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಸಾರಾಗಢಿ ನಿವಾಸದ ಪಾರ್ಕಿಂಗ್ ಪ್ರದೇಶದಲ್ಲಿ ಸ್ಫೋಟವಾಗಿದ್ದು, ಅಲ್ಲೇ ಇದ್ದ ರೆಸ್ಟೋರೆಂಟ್​ಗೆ ಕೂಡ ಹಾನಿಯಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

‌8. ಕೊಹಿನೂರು ವಜ್ರವಿರುವ ಕಿರೀಟ ಧರಿಸಲೊಪ್ಪದ ಬ್ರಿಟನ್‌ ರಾಣಿ ; ವಾಪಸ್‌ ಕೊಡಲು ಭಾರತೀಯರ ಒತ್ತಾಯ
ಬ್ರಿಟನ್​ನಲ್ಲಿ ನೂತನ ರಾಜ-ರಾಣಿಯರಾದ ಕಿಂಗ್​ ಚಾರ್ಲ್ಸ್​​ 111 ಮತ್ತು ಕ್ಯಾಮಿಲ್ಲಾರ ಪಟ್ಟಾಭಿಷೇಕ ಶನಿವಾರ ಅದ್ಧೂರಿಯಾಗಿ ನಡೆಯಿತು. ಅವರಿಬ್ಬರಿಗೂ ಕಿರೀಟ ಧಾರಣೆ ಮಾಡಿ, ಸಿಂಹಾಸನದಲ್ಲಿ ಕೂರಿಸಲಾಯಿತು. ರಾಜ-ರಾಣಿಯ ಪಟ್ಟಾಭಿಷೇಕ ಮುಕ್ತಾಯಗೊಳ್ಳುತ್ತಿದ್ದಂತೆ ಭಾರತೀಯರು ಕೊಹಿನೂರ್ ವಜ್ರವನ್ನು ವಾಪಸ್ ಕೊಡುವಂತೆ ಆಗ್ರಹ ಮಾಡುತ್ತಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. ಮುಂದಿನ ವರ್ಷ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಸಂಪೂರ್ಣ ಮಹಿಳಾ ಬಲ
ನಾ ಮತ್ತು ಇತರ ಎಲ್ಲ ವಲಯಗಳಲ್ಲೂ ಮಹಿಳೆಯರ ಸಕ್ರಿಯತೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ನಿರಂತರವಾಗಿ ಪ್ರಯತ್ನ ಮಾಡುತ್ತಿದೆ. ಆ ಪ್ರಯತ್ನದ ಇನ್ನೊಂದು ಭಾಗವಾಗಿ 2024ನೇ ವರ್ಷದ ಗಣರಾಜ್ಯೋತ್ಸವವನ್ನು ಸಂಪೂರ್ಣವಾಗಿ ಮಹಿಳೆಯರಿಗೆ ಮೀಸಲಿಡಲು ಚಿಂತನೆ ನಡೆದಿದೆ. ಪೂರ್ಣ ವರದಿಗೆ ಕ್ಲಿಕ್‌ ಮಾಡಿ

10. ಹಣೆಗೆ ಸಿಂಧೂರ ಇಡುವ ಬದಲು ಎಲ್ಲೆಲ್ಲೋ ಸಿಂಪಡಿಸಿದ ವರ; ಹಸೆಮಣೆಯಿಂದ ಎದ್ದು ನಡೆದ ಯುವತಿ
ನಾನಾ ಕಾರಣಕ್ಕೆ ಮದುವೆಯ ದಿನವೇ ಸಂಬಂಧ ಮುರಿಯುವುದನ್ನು ನೋಡಿದ್ದೇವೆ. ಈ ಸಲ ವಧು ‘ಸಿಂಧೂರ’ದ ಕಾರಣಕ್ಕೆ ಮಂಟಪದಿಂದ ಎದ್ದು ಹೊರನಡೆದಿದ್ದಾಳೆ. ಆಕೆಯ ಮನೆಯವರು, ಹುಡುಗನ ಮನೆಯವರು ಏನೆಲ್ಲ ಹೇಳಿ ಸಮಾಧಾನ ಹೇಳಿದರೂ ಆಕೆಯ ಸಿಟ್ಟು ಕರಗಲೇ ಇಲ್ಲ. ಏನಿದು ಸಿಂಧೂರ ಗಲಾಟೆ. ಈ ಲಿಂಕ್‌ ಓಪನ್‌ ಮಾಡಿ

Exit mobile version