1. ಅತಂತ್ರ ವಿಧಾನಸಭೆ ಭವಿಷ್ಯ ನುಡಿದ ಮತಗಟ್ಟೆ ಸಮೀಕ್ಷೆ: ಕಾಂಗ್ರೆಸ್‌ಗೆ ಅಲ್ಪ ಮುನ್ನಡೆ
ಭಾರೀ ತುರುಸಿನಿಂದ ಕೂಡಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಮೇ 10ರಂದು ನಡೆದಿದ್ದು, ಮತಗಟ್ಟೆ ಸಮೀಕ್ಷೆಯೂ ಹೊರಬಿದ್ದಿದೆ. ತ್ರಿಶಂಕು ವಿಧಾನಸಭೆಯ ಸಾಧ್ಯತೆ ಪ್ರಕಟಿಸಿರುವ ಸಮೀಕ್ಷೆಗಳಲ್ಲಿ ಹೆಚ್ಚಿನವು ಕಾಂಗ್ರೆಸ್‌ಗೆ ಮುನ್ನಡೆ ನೀಡಿವೆ. ಹೀಗಾಗಿ ಈ ಬಾರಿಯೂ ಜೆಡಿಎಸ್ ಈ ಬಾರಿಯೂ ಕಿಂಗ್ ಮೇಕರ್ ಆಗುವ ಸಾಧ್ಯತೆ ಕಾಣುತ್ತಿದೆ. ಇಲ್ಲಿದೆ ಮತಗಟ್ಟೆ ಸಮೀಕ್ಷೆಗಳ ಒಟ್ಟು ಸಾರ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ: VISTARA-AKHADA EXIT POLL: ಬಿಜೆಪಿ 85-93, ಕಾಂಗ್ರೆಸ್ 86-96, ಜೆಡಿಎಸ್ 28-36, ಪಕ್ಷೇತರ 06-09 ಸ್ಥಾನ
2.ಮತಗಟ್ಟೆ ಸಮೀಕ್ಷೆ ಸರಿಯಲ್ಲ ಎಂದ ಬಿಜೆಪಿ; ಸರ್ಕಾರ ನಮ್ದೇ ಎಂದ ಕಾಂಗ್ರೆಸ್
ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ, ಕಾಂಗ್ರೆಸ್‌ಗೆ ಮುನ್ನಡೆ ಇದೆ ಎಂಬ ಮತಗಟ್ಟೆ ಸಮೀಕ್ಷೆಗಳ ಬಗ್ಗೆ ಬಿಜೆಪಿ, ಕಾಂಗ್ರೆಸ್ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿವೆ. ಬಿಜೆಪಿ ಈ ಸಮೀಕ್ಷೆಗಳು ಪೂರ್ತಿ ಸರಿಯಲ್ಲ ಎಂದರೆ ಕಾಂಗ್ರೆಸ್ ಅಧಿಕಾರ ನಮ್ಮದೇ ಎಂದು ಬೀಗಿದೆ.
1. ಎಕ್ಸಿಟ್ ಪೋಲ್ ನಿಜವಲ್ಲ, ಬಿಜೆಪಿಗೆ 115-117 ಸೀಟು ಖಚಿತ ಎಂದ ಬಿಎಸ್‌ವೈ
2. ಎಕ್ಸಿಟ್ ಪೋಲ್ ಬಗ್ಗೆ ನೋ ವರಿ ಎಂದ ಬೊಮ್ಮಾಯಿ, ನಮ್ದೇ ಸರ್ಕಾರ ಎಂದ ಡಿಕೆಶಿ
3. ರಾಜ್ಯದಲ್ಲಿ ಶೇ. 68.10 ಮತದಾನ; ವೋಟಿಂಗ್ ಪ್ರಮಾಣದಿಂದ ಯಾರಿಗೆ ಲಾಭ?
ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ನಿರೀಕ್ಷೆಯಂತೆ ಹೆಚ್ಚು ಕಡಿಮೆ ಕಳೆದ ಬಾರಿಯಷ್ಟೇ ಮತದಾನವಾಗಿದೆ. ಚುನಾವಣಾ ಆಯೋಗದ ಪ್ರಾಥಮಿಕ ಮಾಹಿತಿ ಪ್ರಕಾರ ರಾಜ್ಯದಲ್ಲಿ ಶೇ. 68.10 ರಷ್ಟು ಮತದಾನವಾಗಿದೆ. ಇದರಿಂದ ಯಾರಿಗೆ ಲಾಭ ಎನ್ನುವ ವಿಶ್ಲೇಷಣೆಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿಗಳು: 1. ಖರ್ಗೆ, ಶಿವಕುಮಾರ್, ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರ ಮತ ಸಂಭ್ರಮದ ಗ್ಯಾಲರಿ
2. ಪ್ರಲ್ಹಾದ್ ಜೋಶಿ, ತೇಜಸ್ವಿ ಸೂರ್ಯ ಸೇರಿ ಬಿಜೆಪಿ ನಾಯಕರ ಮತಸಂಭ್ರಮ; ಇಲ್ಲಿವೆ ಫೋಟೊಗಳು
3. ಮತಗಟ್ಟೆಯಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ; ಗರ್ಭಿಣಿಯರಿಂದಲೂ ಮತದಾನ
4. ಸಿನಿಮಾ, ರಾಜಕೀಯದ ಹೊರತಾಗಿ ಯಾವ ಸಾಧಕರು ಮತ ಹಾಕಿದರು? ಇಲ್ಲಿವೆ ಫೋಟೊ
5. ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದ ಚಂದನವನದ ತಾರೆಯರು!
4. ಮುಂದಿನ 48 ಗಂಟೆಯಲ್ಲಿ ಬಿರುಗಾಳಿ ಮಳೆ; ಉತ್ತರ, ದಕ್ಷಿಣ ಒಳನಾಡಲ್ಲಿ ವರುಣಾರ್ಭಟ
ರಾಜ್ಯಾದ್ಯಂತ ಮುಂದಿನ 48 ಗಂಟೆಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ: ಕೊಪ್ಪಳದಲ್ಲಿ ಸಿಡಿಲು ಬಡಿದು ಕುರಿಗಾಹಿ ಸಾವು; ರಾಜ್ಯದ ಅಲ್ಲಲ್ಲಿ ಮಳೆಯಬ್ಬರ
5. ಪಾಕಿಸ್ತಾನ ರಣರಂಗ: ವಿಷದ ಇಂಜೆಕ್ಷನ್ ಕೊಡಬಹುದೆಂಬ ಭಯದಲ್ಲಿ ಇಮ್ರಾನ್ ಖಾನ್
ಪಾಕಿಸ್ತಾನದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ ದೊಡ್ಡಮಟ್ಟದ ಗೊಂದಲ -ಗಲಾಟೆ ಸೃಷ್ಟಿ ಮಾಡಿದೆ. ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಮುಖ್ಯಸ್ಥರಾಗಿರುವ ಇಮ್ರಾನ್ ಖಾನ್ ಬಂಧನಕ್ಕೆ ಆ ಪಕ್ಷದ ಕಾರ್ಯಕರ್ತರು ರೊಚ್ಚಿಗೆದ್ದಿದ್ದಾರೆ. ಈ ನಡುವೆ ಇಮ್ರಾನ್ ಖಾನ್ ಅವರಿಗೆ ಜೈಲಿನಲ್ಲಿ ವಿಷ ಉಣಿಸಬಹುದು ಎಂಬ ಆತಂಕ ಸೃಷ್ಟಿಯಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6.ಸಲಿಂಗಿಗಳ ವಿವಾಹಕ್ಕೆ ರಾಜಸ್ಥಾನ ವಿರೋಧ, 6 ರಾಜ್ಯಗಳಿಂದ ಪರಿಶೀಲನೆಗೆ ಅವಕಾಶ ಕೋರಿಕೆ
ಕಾಂಗ್ರೆಸ್ ನೇತೃತ್ವದ ರಾಜಸ್ಥಾನ ಸರ್ಕಾರ ಸಲಿಂಗಿ ವಿವಾಹಕ್ಕೆ ಮಾನ್ಯತೆ ನೀಡುವ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದೆ. ಮಹಾರಾಷ್ಟ್ರ, ಉತ್ತರಪ್ರದೇಶ, ಆಂಧ್ರಪ್ರದೇಶ, ಮಣಿಪುರ, ಅಸ್ಸಾಂ ಮತ್ತು ಸಿಕ್ಕಿಂ ಈ ವಿವಾದವನ್ನು ಪರಿಶೀಲಿಸಲು ಕಾಲಾವಕಾಶ ಕೋರಿವೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ವಿಶ್ವಕಪ್‌ನಲ್ಲಿ ಭಾರತ-ಪಾಕ್ ಪಂದ್ಯಕ್ಕೆ ಡೇಟ್ ಫಿಕ್ಸ್: ಕಿವೀಸ್ ಇಂಗ್ಲೆಂಡ್‌ಗೆ ಮೊದಲ ಪಂದ್ಯ
ಮುಂಬಯಿ: ಭಾರತದ ಆತಿಥ್ಯದಲ್ಲಿ ನಡೆಯಲಿರುವ ಬಹುನಿರೀಕ್ಷಿತ ಏಕದಿನ ವಿಶ್ವ ಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಮುಖಾಮುಖಿಯಾಗಲಿವೆ. ಇದರ ಜತೆಗೆ ಭಾರತ ಮತ್ತು ಪಾಕ್ ವಿರುದ್ಧದ ಪಂದ್ಯದ ದಿನಾಂಕವು ನಿಗದಿಯಾಗಿದೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
8. ಐಪಿಎಲ್: ಕೊಹ್ಲಿ ಔಟಾಗುತ್ತಿದ್ದಂತೆ ಮಾವಿನ ಹಣ್ಣು ತಿಂದು ಸಂಭ್ರಮಿಸಿದ ನವೀನ್ ಉಲ್ ಹಕ್
ಮಂಬಯಿ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ತಂಡ 6 ವಿಕೆಟ್ ಹೀನಾಯ ಸೋಲಿಗೆ ಒಳಗಾಗಿದೆ. ಅದರಲ್ಲೂ ಆರಂಭಿಕ ಬ್ಯಾಟರ್ ವಿರಾಟ್ ಕೊಹ್ಲಿ ನಾಲ್ಕು ಎಸೆತಗಳಲ್ಲಿ ಕೇವಲ 1 ರನ್ ಬಾರಿಸಿ ಔಟಾಗಿದ್ದಾರೆ. ಏತನ್ಮಧ್ಯೆ, ವಿರಾಟ್ ಕೊಹ್ಲಿ ಕೇವಲ ಒಂದು ರನ್ಗ ಔಟಾದಾಗ ಮಂಬಯಿ ಬೌಲರ್ಗಳಿಂತ ಹೆಚ್ಚು ಸಂಭ್ರಮಿಸಿದ್ದ, ಲಕ್ನೊ ಸೂಪರ್ ಜಯಂಟ್ಸ್ ತಂಡ ವೇಗದ ಬೌಲರ್ ನವಿನ್ ಉಲ್ ಹಕ್.ಅವರು ಮಾವಿನ ಹಣ್ಣು ತಿಂದು ಸಂಭ್ರಮಿಸಿದ್ದಾರೆ. ಕಾರಣ ಏನು? ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ
9. ಏಷ್ಯಾದ ಅತಿ ದೊಡ್ಡ ಪಬ್ ಬೆಂಗಳೂರಿನಲ್ಲಿ ಓಪನ್
ಸಿಲಿಕಾನ್ ಸಿಟಿಯ ಯುವಜನರ ರಾತ್ರಿಗಳಿಗೆ ಇನ್ನಷ್ಟು ರಂಗು ತುಂಬಲೋ ಎನ್ನುವಂತೆ, ಏಷ್ಯಾದ ಅತಿ ದೊಡ್ಡ ಪಬ್ ಬೆಂಗಳೂರಿನಲ್ಲಿ ತೆರೆದಿದೆ. ಅದರಲ್ಲಿ ಏನಿದೆ ವಿಶೇಷ? ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ರೇಪ್ ಮಾಡಲು ಬಂದವನ ಜನನಾಂಗ ಕತ್ತರಿಸಿದ ಮಹಿಳೆ; ಕಾಮದಾಹ ತಂದಿಟ್ಟ ಸಂಕಷ್ಟ
ಅತ್ಯಾಚಾರ ಎಂಬ ಪೆಡಂಭೂತಕ್ಕೆಂದೂ ಮುಕ್ತಿಯಿಲ್ಲ. ಕಾಮುಕರ ಕಾಮದಾಹಕ್ಕೆ ಯುವತಿಯರು/ಮಹಿಳೆಯರು/ಪುಟ್ಟಪುಟ್ಟ ಬಾಲಕಿಯರು/ವೃದ್ಧೆಯರು ತುತ್ತಾಗುತ್ತಿದ್ದಾರೆ. ಅಂಥ ಕಾಮುಕನೊಬ್ಬನಿಗೆ ಅಸ್ಸಾಂನ ಮಹಿಳೆಯೊಬ್ಬರು ತಕ್ಕ ಪಾಠ ಕಲಿಸಿದ್ದಾರೆ. ಅವನ ಜನನಾಂಗವನ್ನೇ ಕತ್ತರಿಸಿ ಬಿಸಾಕಿದ್ದಾಳೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ