ಬೆಂಗಳೂರು: ರಾಜ್ಯದ ಕೆಲವು ದೇವಾಲಯಗಳಲ್ಲಿ ಟಿಪ್ಪು ಆಡಳಿತ ಕಾಲದಲ್ಲಿ ಆರಂಭಗೊಂಡಿದ್ದ ದೀವಟಿಗೆ ಆರತಿಗೆ ಬ್ರೇಕ್ ಹಾಕಲು ನಿರ್ಧರಿಸಲಾಗಿದೆ. ಯಾವಾಗದಿಂದ ಬ್ರೇಕ್ ಮತ್ತು ಮುಂದಿನ ಆರತಿ ಹೇಗಿರಬೇಕು ಎನ್ನುವ ಚರ್ಚೆಯಷ್ಟೇ ಉಳಿದಿದೆ. ಕಾಂಗ್ರೆಸ್‌ನ ಸುಖವಿಂದರ್ ಸಿಂಗ್ ಹಿಮಾಚಲ ಪ್ರದೇಶದ ಸಿಎಂ ಗಾದಿಗೇರಲು ರೆಡಿಯಾಗಿದ್ದರೆ, ಗುಜರಾತ್‌ನ ಸಿಎಂ ಆಗಿ ಭೂಪೇಂದ್ರ ಪಟೇಲ್ ಫಿಕ್ಸ್ ಆಗಿದ್ದಾರೆ. ರಾಜ್ಯದಲ್ಲಿ ಅಬ್ಬರ ಸೃಷ್ಟಿಸಲು ಬಿಜೆಪಿ ಸಿದ್ಧವಾಗುತ್ತಿದ್ದರೆ, ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹವಾ ಎಬ್ಬಿಸಿದ್ದಾರೆ. ಕಾಂತಾರ-೨ ನಿರ್ಮಾಣಕ್ಕೆ ರಿಷಬ್ ಶೆಟ್ಟರಿಗೆ ದೈವ ಅನುಮತಿ ನೀಡಿದ್ದು, ಇಶಾನ್ ಕಿಶನ್ ದಾಖಲೆ ದ್ವಿಶತಕ ಬಾರಿಸಿ ಟೀಮ್ ಇಂಡಿಯಾವನ್ನು ಕೊನೆಗೂ ಗೆಲ್ಲಿಸಿದ್ದು ಸೇರಿ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. ದೇವಾಲಯಗಳಲ್ಲಿ ಟಿಪ್ಪು ಆರಂಭಿಸಿದ್ದ ದೀವಟಿಗೆ ಸಲಾಮ್‌ಗೆ ಬ್ರೇಕ್, ಮುಜರಾಯಿ ಇಲಾಖೆ ಹೆಸರೂ ಬದಲು
ರಾಜ್ಯದ ಕೆಲವು ಪ್ರಸಿದ್ಧ ದೇವಾಲಯಗಳಲ್ಲಿ ನಡೆಯುತ್ತಿರುವ ದೀವಟಿಗೆ ಸಲಾಂ ಪೂಜೆಗೆ ರಾಜ್ಯ ಧಾರ್ಮಿಕ ಪರಿಷತ್ ಬ್ರೇಕ್ ಹಾಕಿದೆ. ಇದು ಟಿಪ್ಪುವಿನ ಆಡಳಿತ ಕಾಲದಲ್ಲಿ ಆರಂಭಿಸಿದ್ದ ಪೂಜೆ ಮತ್ತು ಇದರ ಹೆಸರು ಹಿಂದು ಸತ್ವವನ್ನು ಹೊಂದಿಲ್ಲ ಎಂಬ ಕಾರಣಕ್ಕೆ ಹೆಸರು ಬದಲಿಸಲಾಗುತ್ತಿದೆ ಎಂದು ಹೇಳಲಾಗಿದೆ. ಜತೆಗೆ ಮುಜರಾಯಿ ಇಲಾಖೆಯ ಹೆಸರನ್ನೂ ಬದಲಿಸಲಾಗುತ್ತಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಇನ್ನೊಂದು ವರದಿ | ದೇವರಿಗೆ ಮಾಡುವ ಆರತಿ ರದ್ದಾಗಲ್ಲ, ಹೆಸರು ಬದಲಾಗುತ್ತದೆ ಎಂದ ಸಚಿವೆ ಶಶಿಕಲಾ ಜೊಲ್ಲೆ
೨. ಕಲ್ಯಾಣ ಕ್ರಾಂತಿ ಸಮಾವೇಶ: ಕಲ್ಯಾಣದ ಅಭಿವೃದ್ಧಿಗಾಗಿ ೧೦ ಅಂಶ ಪ್ಲ್ಯಾನ್ ಪ್ರಕಟಿಸಿದ ಮಲ್ಲಿಕಾರ್ಜುನ ಖರ್ಗೆ
ಕಲಬುರಗಿಯಲ್ಲಿ ಶನಿವಾರ ಕಲ್ಯಾಣ ಕ್ರಾಂತಿ ಸಮಾವೇಶ ಅದ್ಧೂರಿಯಾಗಿ ನೆರವೇರಿತು. ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ನಡೆದ ಈ ಅತಿ ದೊಡ್ಡ ಸಮಾವೇಶದಲ್ಲಿ ಅವರು ಕಲ್ಯಾಣ ಕರ್ನಾಟಕಕ್ಕಾಗಿ ೧೦ ಅಂಶದ ಕಾರ್ಯಕ್ರಮವನ್ನು ಪ್ರಕಟಿಸಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
೩. ಅಮಿತ್ ಶಾಗೆ ವಿವರ ನೀಡಿದ ಬೊಮ್ಮಾಯಿ, ಸೋಮವಾರ ರಾಜ್ಯದ ಸಂಸದರಿಂದ ಶಾ ಭೇಟಿ
ಶುಕ್ರವಾರ ರಾತ್ರಿ ಮಹಾರಾಷ್ಟ್ರದ ನಿಯೋಗವೊಂದು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದದ ಬಗ್ಗೆ ವಿವರ ನೀಡಿ ಮಧ್ಯಪ್ರವೇಶ ಕೋರಿದ ಬೆನ್ನಲ್ಲೇ ಕರ್ನಾಟಕವೂ ಸಿಡಿದೆದ್ದಿದೆ. ಒಂದು ಕಡೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರ ಜತೆ ಮಾತನಾಡಿದ್ದರೆ, ಇನ್ನೊಂದೆಡೆ ಸೋಮವಾರ ರಾಜ್ಯದ ಸಂಸದರು ಅಮಿತ್ ಶಾ ಅವರನ್ನು ಭೇಟಿ ಮಾಡಿ ರಾಜ್ಯದ ನಿಲುವನ್ನು ವಿವರಿಸಲಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
4. ನಾಲ್ವರನ್ನು ಬಲಿಪಡೆದ ಮಾಂಡೌಸ್ ಚಂಡಮಾರುತ; ರಾಜ್ಯದಲ್ಲೂ ಚಳಿ, ಮಳೆಯ ಅಬ್ಬರ
ಮಾಂಡೌಸ್ ಚಂಡಮಾರುತದ ಅಬ್ಬರಕ್ಕೆ ತಮಿಳುನಾಡು ನಲುಗಿದೆ. ಚಂಡಮಾರುತ ಪ್ರಭಾವದಿಂದ ಭಾರಿ ಮಳೆಯಾಗುತ್ತಿದೆ. ಮಾಂಡೌಸ್ ಸಂಬಂಧಿತ ಅವಘಡದಿಂದ ಇದುವರೆಗೆ 4 ಮಂದಿ ಮೃತಪಟ್ಟಿದ್ದಾಗಿ ವರದಿಯಾಗಿದೆ. ಕರ್ನಾಟಕದಲ್ಲೂ ಚಂಡ ಮಾರುತದ ಎಫೆಕ್ಟ್ ಜೋರಾಗಿದ್ದು, ಮಳೆ ಮತ್ತು ಚಳಿಯಿಂದ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳು ನಲುಗಿವೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ರಾಜ್ಯದ ಮಳೆ ಪರಿಸ್ಥಿತಿ | ರಾಜ್ಯದಲ್ಲಿ ಎಲ್ಲೆಲ್ಲಿ ಭಾರಿ ಮಳೆ, ಎಲ್ಲಿ ಸಾಧಾರಣ?
೫. ಸವಿಸ್ತಾರ ಅಂಕಣ | ಅಲ್ಲಮ ಪ್ರಭುಗಳು ಹೇಳಿದ ಮಾತು ಕಾಂಗ್ರೆಸ್ ಕುರಿತೇ ಆಗಿರಬೇಕು ಎನ್ನಿಸುವಂತಿದೆ!
೨೦೨೪ರ ಲೋಕಸಭಾ ಚುನಾವಣೆಯ ಸೆಮಿಫೈನಲ್ ಎಂದೇ ಪರಿಗಣಿತವಾಗಿದ್ದ ಗುಜರಾತ್ ವಿಧಾನಸಭಾ ಚುನಾವಣೆ ನಡೆಯುತ್ತಿರುವಾಗ ತಮ್ಮ ಪಾಡಿಗೆ ತಾವು ರನ್ನಿಂಗ್ ರೇಸ್ ಮಾಡುತ್ತ ಭಾರತ್ ಜೋಡೊ ಎಂಬ ವಾಕಿಂಗ್ ಮಾಡುತ್ತಿರುವ ರಾಹುಲ್ ಗಾಂಧಿ ಅವರೂ ಕಾಂಗ್ರೆಸ್‌ನ ಈ ಹೀನಾಯ ಸೋಲಿಗೆ ಜವಾಬ್ದಾರರಲ್ಲವೇ? ಎಂದು ಪ್ರಶ್ನಿಸಿದ್ದಾರೆ ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಅವರು ತಮ್ಮ ಸವಿಸ್ತಾರ ಅಂಕಣದಲ್ಲಿ. ಅಲ್ಲಮ ಪ್ರಭುಗಳ ಒಂದು ಮಾತನ್ನು ಅವರು ಕಾಂಗ್ರೆಸ್ ನಾಯಕರಿಗೆ ಚೆನ್ನಾಗಿ ಕನೆಕ್ಟ್ ಮಾಡಿದ್ದಾರೆ. ಪೂರ್ಣ ಲೇಖನ ಓದಲು ಈ ಲಿಂಕ್ ಕ್ಲಿಕ್ ಮಾಡಿ
೬. ಸುಖವಿಂದರ್ ಸಿಂಗ್‌ಗೆ ಹಿಮಾಚಲ ಸಿಎಂ ಪಟ್ಟ, ಅಷ್ಟಕ್ಕೂ ಯಾರಿವರು ಸುಖವಿಂದರ್?
ಹಿಮಾಚಲ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಸುಖವಿಂದರ್ ಸಿಂಗ್ ಸುಖು (೫೮) ಅವರು ಆಯ್ಕೆಯಾಗಿದ್ದಾರೆ. ಮಾಜಿ ಸಿಎಂ ವೀರಭದ್ರ ಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್ ಅವರನ್ನೇ ಸಿಎಂ ಆಗಿ ಮಾಡಬೇಕು ಎಂದು ಅವರ ಬೆಂಬಲಿಗರು ಒತ್ತಾಯಿಸಿದ ಬೆನ್ನಲ್ಲೇ, ಕಾಂಗ್ರೆಸ್ ಹೈಕಮಾಂಡ್ ಸುಖವಿಂದರ್ ಸಿಂಗ್ ಅವರಿಗೆ ಮಣೆ ಹಾಕಿದೆ. ಡಿಸಿಎಂ ಆಗಿ ಮುಕೇಶ್ ಅಗ್ನಿಹೋತ್ರಿ ಆಯ್ಕೆಯಾಗಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
೭. ವಾರದ ವ್ಯಕ್ತಿಚಿತ್ರ| ರೇಂದ್ರನ ದಾಖಲೆ ಮುರಿದ ಭೂಪೇಂದ್ರ, ಆಡಳಿತ ವಿರೋಧಿ ಅಲೆ ಹತ್ತಿಕ್ಕಿದ ಟ್ರಬಲ್ ಶೂಟರ್!
ಗುಜರಾತ್ ರಾಜಕೀಯದ ಚರಿತ್ರೆಯಲ್ಲಿ, ಇದುವರೆಗೆ ಅತಿ ಹೆಚ್ಚು ಸೀಟುಗಳನ್ನು ಗೆದ್ದು ಅಧಿಕಾರಕ್ಕೆ ಮರಳಿದ ದಾಖಲೆಯ ಮುಖ್ಯಮಂತ್ರಿ ಎಂಬ ಕೀರ್ತಿ ಭೂಪೇಂದ್ರ ಪಟೇಲರಿಗೆ ಸಲ್ಲುತ್ತದೆ. ಮೃದು ಮಾತಿನ, ಆದರೆ ದೃಢ ವ್ಯಕ್ತಿತ್ವದ ಪಟೇಲರು ಇದೇ ಡಿಸೆಂಬರ್ 12ರಂದು ಗುಜರಾತಿನ ಮುಖ್ಯಮಂತ್ರಿಯಾಗಿ ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೂಲತಃ ಒಬ್ಬ ಬಿಲ್ಡರ್ ಆಗಿರುವ ಭೂಪೇಂದ್ರ ಪಟೇಲ್ ಅವರ ಬದುಕಿನ ಕಥೆ ಇಲ್ಲಿದೆ. ಪೂರ್ಣ ಲೇಖನಕ್ಕೆ ಕ್ಲಿಕ್ ಮಾಡಿ
೮. ಒಂದೇ ತಿಂಗಳ ಅವಧಿಯಲ್ಲಿ ರಾಜ್ಯಕ್ಕೆ ನಡ್ಡಾ, ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್
ರಾಜ್ಯದಲ್ಲಿ ೨೦೨೩ರ ವಿಧಾನಸಭಾ ಚುನಾವಣೆಗೆ (Karnataka Elections) ತೀವ್ರಗತಿಯ ಸಿದ್ಧತೆಗಳು ನಡೆಯುತ್ತಿವೆ. ಬಿಜೆಪಿ ಸಂಕಲ್ಪ ಯಾತ್ರೆ, ಜೆಡಿಎಸ್ ಪಂಚರತ್ನ ಯಾತ್ರೆ, ಕಾಂಗ್ರೆಸ್ ಬಸ್ ಯಾತ್ರೆಯ ಪ್ಲ್ಯಾನ್‌ನಲ್ಲಿ ಬ್ಯುಸಿಯಾಗಿದೆ. ಇದರ ನಡುವೆಯೇ ಬಿಜೆಪಿ ತನಗಿರುವ ರಾಷ್ಟ್ರೀಯ ಚರಿಷ್ಮಾವನ್ನು ಚೆನ್ನಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ರಾಷ್ಟ್ರೀಯ ನಾಯಕರ ದಂಡನ್ನೇ ರಾಜ್ಯಕ್ಕೆ ಕರೆಸಿಕೊಳ್ಳುತ್ತಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಇನ್ನೊಂದು ವರದಿ | ಮತ್ತೊಂದು ಮೆಗಾ ಸಮಾವೇಶ: ಡಿ. 18ರಂದು ಬಿಜೆಪಿಯ ನಾನಾ ಪ್ರಕೋಷ್ಠಗಳ ಶಕ್ತಿ ಸಂಗಮ
೯.ಅಭಿಮಾನಿಗಳಿಗೆ ಗುಡ್ ನ್ಯೂಸ್: ಬರಲಿದೆ ಕಾಂತಾರ ಭಾಗ-2, ರಿಷಬ್ ಶೆಟ್ರಿಗೆ ಸಿಕ್ಕಿತು ದೈವದ ಅನುಮತಿ
ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ’ ಸಿನಿಮಾ ವಿಶ್ವಾದ್ಯಂತ ಭರ್ಜರಿ ಹಿಟ್ ಆಗಿದೆ. ಇದರ ಬೆನ್ನಲ್ಲೇ ಕಾಂತಾರ-2 ಸಿನಿಮಾ ಯಾವಾಗ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಇತ್ತು. ಇದೀಗ ರಿಷಬ್ ಶೆಟ್ಟಿ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಅದೇನೆಂದರೆ ಬರಲಿದೆ, ಕಾಂತಾರ-೨! ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
೧೦. ಇಶಾನ್ ಕಿಶನ್ ದ್ವಿಶತಕ, ಕೊಹ್ಲಿ ಶತಕ; ಬಾಂಗ್ಲಾದೇಶ ವಿರುದ್ಧ ಟೀಮ್ ಇಂಡಿಯಾಕ್ಕೆ 227 ರನ್ ಭರ್ಜರಿ ಜಯ
ಇಶಾನ್ ಕಿಶನ್ (೨೧೦) ಅವರ ವಿಶ್ವ ದಾಖಲೆಯ ದ್ವಿಶತಕ ಹಾಗೂ ವಿರಾಟ್ ಕೊಹ್ಲಿಯ (೧೧೩) ಅವರ ಅಮೋಘ ಶತಕದ ಮತ್ತು ಬೌಲರ್‌ಗಳ ಕರಾರುವಾಕ್ ದಾಳಿಯಿಂದ ಮಿಂಚಿದ ಭಾರತ ತಂಡ, ಆತಿಥೇಯ ಬಾಂಗ್ಲಾದೇಶ ವಿರುದ್ಧದ ಏಕ ದಿನ ಸರಣಿಯ ಕೊನೇ ಪಂದ್ಯದಲ್ಲಿ 227 ರನ್‌ಗಳ ಭಾರಿ ಅಂತರದ ಜಯ ದಾಖಲಿಸಿದೆ.
ಇನ್ನೊಂದು ವರದಿ | ಅಂತಾರಾಷ್ಟ್ರೀಯ ಏಕ ದಿನ ಮಾದರಿಯಲ್ಲಿ ದ್ವಿಶತಕ ಬಾರಿಸಿದ ಆಟಗಾರರು
ಇತರ ಪ್ರಮುಖ, ಆಕರ್ಷಕ ವರದಿ, ಲೇಖನಗಳು
೧. ಪಂಜಾಬ್ ಪೊಲೀಸ್ ಠಾಣೆ ಮೇಲೆ ರಾಕೆಟ್ ಚಾಲಿತ ಗ್ರೆನೇಡ್ ದಾಳಿ; ಬಾಗಿಲಿನ ಗಾಜು ಪುಡಿಪುಡಿ, ಪಾಕ್ ಕೈವಾಡ ಶಂಕೆ
೨. ಪುರುಷರನ್ನು ರಾತ್ರಿ 8ಗಂಟೆಗೇ ಮನೆಯೊಳಗೆ ಲಾಕ್ ಮಾಡಿ, ಮಹಿಳೆಯರು ಓಡಾಡಲಿ ಎಂದ ಹೈಕೋರ್ಟ್
೩. ವರುಣ ಕ್ಷೇತ್ರವೇ ಗಟ್ಟಿ ಮಾಡಿಕೊಂಡರಾ ಸಿದ್ದರಾಮಯ್ಯ?; ಕುತೂಹಲ ಮೂಡಿಸಿದ ಮಾಜಿ ಸಿಎಂ ನಡೆ
೪. ಸಕಲೇಶಪುರ ಬಳಿ ನೋವಿನಿಂದ ನರಳುತ್ತಾ ರಸ್ತೆಯಲ್ಲೇ ಸಾಗಿದ ಗಾಯಾಳು ಗಜರಾಜ
೫. ಮುತ್ತು ಕೊಟ್ಟು ನೀವೂ ಆರೋಗ್ಯವಾಗಿರಿ! ನಿಮ್ಮವರನ್ನೂ ಆರೋಗ್ಯವಾಗಿರಿಸಿ!