Sukhwinder Singh Sukhu | ಸುಖವಿಂದರ್‌ ಸಿಂಗ್‌ಗೆ ಹಿಮಾಚಲ ಸಿಎಂ ಪಟ್ಟ, ಅಷ್ಟಕ್ಕೂ ಯಾರಿವರು ಸುಖವಿಂದರ್? - Vistara News

ದೇಶ

Sukhwinder Singh Sukhu | ಸುಖವಿಂದರ್‌ ಸಿಂಗ್‌ಗೆ ಹಿಮಾಚಲ ಸಿಎಂ ಪಟ್ಟ, ಅಷ್ಟಕ್ಕೂ ಯಾರಿವರು ಸುಖವಿಂದರ್?

ಹಿಮಾಚಲ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಸುಖವಿಂದರ್‌ ಸಿಂಗ್‌ ಸುಖು (Sukhwinder Singh Sukhu) ಅವರು ಆಯ್ಕೆಯಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

VISTARANEWS.COM


on

Sukhwinder Singh Sukhu CM
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶಿಮ್ಲಾ: ಹಿಮಾಚಲ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಸುಖವಿಂದರ್‌ ಸಿಂಗ್‌ ಸುಖು (೫೮) (Sukhwinder Singh Sukhu) ಅವರು ಆಯ್ಕೆಯಾಗಿದ್ದಾರೆ. ಮಾಜಿ ಸಿಎಂ ವೀರಭದ್ರ ಸಿಂಗ್‌ ಅವರ ಪತ್ನಿ ಪ್ರತಿಭಾ ಸಿಂಗ್‌ ಅವರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಅವರ ಬೆಂಬಲಿಗರು ಒತ್ತಾಯಿಸಿದ ಬೆನ್ನಲ್ಲೇ, ಕಾಂಗ್ರೆಸ್‌ ಹೈಕಮಾಂಡ್‌ ಸುಖವಿಂದರ್‌ ಸಿಂಗ್‌ ಅವರಿಗೆ ಮಣೆ ಹಾಕಿದೆ. ಭಾನುವಾರವೇ (ಡಿಸೆಂಬರ್‌ ೧೧) ಸುಖವಿಂದರ್‌ ಸಿಂಗ್‌ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಹಾಗೆಯೇ, ಉಪ ಮುಖ್ಯಮಂತ್ರಿಯಾಗಿ ಮುಕೇಶ್‌ ಅಗ್ನಿಹೋತ್ರಿ ಆಯ್ಕೆಯಾಗಿದ್ದಾರೆ.

ಯಾರಿವರು ಸುಖವಿಂದರ್‌ ಸಿಂಗ್‌?

ನದೌನ್‌ ವಿಧಾನಸಭೆ ಕ್ಷೇತ್ರದ ಮೂರು ಬಾರಿಯ ಶಾಸಕ ಸುಖವಿಂದರ್‌ ಸಿಂಗ್‌ ಸುಖು ಅವರು ಹೋರಾಟದ ಹಾದಿ ಹಿಡಿದು ರಾಜಕೀಯ ಪ್ರವೇಶಿಸಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿದ್ದ ಸುಖವಿಂದರ್‌ ಸಿಂಗ್‌, ಕಾಂಗ್ರೆಸ್‌ನ ನ್ಯಾಷನಲ್‌ ಸ್ಟುಡೆಂಟ್‌ ಯೂನಿಯನ್‌ ಆಫ್‌ ಇಂಡಿಯಾ (NSUI) ಸೇರ್ಪಡೆಯಾಗಿ, ಪಕ್ಷ ವಹಿಸಿದ ಕಾರ್ಯಗಳನ್ನು ನಿರ್ವಹಿಸಿ, ಹಿಮಾಚಲ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿ ಪದೋನ್ನತಿ ಹೊಂದಿದ್ದರು. ರಾಜ್ಯದಲ್ಲಿ ವೀರಭದ್ರ ಸಿಂಗ್‌ ಅವರ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದರು. ಆದರೂ, ಇವರಿಗೆ ಸಿಎಂ ಗಾದಿ ಒಲಿದಿದೆ.

ರಾಹುಲ್‌ ಗಾಂಧಿ ಆಪ್ತ

ಸುಖವಿಂದರ್‌ ಸಿಂಗ್‌ ಅವರು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಆಪ್ತರಾಗಿದ್ದಾರೆ ಎಂದು ತಿಳಿದುಬಂದಿದೆ. ಇದೇ ಕಾರಣಕ್ಕಾಗಿ ಇವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಸುಖವಿಂದರ್‌ ಸಿಂಗ್‌ ಅವರನ್ನು ಆಯ್ಕೆ ಮಾಡುವ ಮೊದಲು ಹೈಡ್ರಾಮಾ ನಡೆಯಿತು. ಪ್ರತಿಭಾ ಸಿಂಗ್‌ ಅವರನ್ನೇ ಮುಖ್ಯಮಂತ್ರಿ ಎಂಬುದಾಗಿ ಘೋಷಿಸಬೇಕು ಎಂದು ಅವರ ಬೆಂಬಲಿಗರು ಘೋಷಣೆ ಕೂಗಿ ಒತ್ತಡ ಹೇರಿದ್ದರು. ಹೀಗಿದ್ದರೂ, ಹೈಕಮಾಂಡ್‌, ಸುಖವಿಂದರ್‌ ಸಿಂಗ್‌ ಅವರನ್ನೇ ಸಿಎಂ ಎಂದು ಘೋಷಿಸಲಾಗಿದೆ.

ಇದನ್ನೂ ಓದಿ | ಗುಜರಾತ್​-ಹಿಮಾಚಲದಲ್ಲಿ ಕೆಲಸ ಮಾಡಲಿಲ್ಲ ಆಪ್​ ‘ಉಚಿತ’ ಭರವಸೆಗಳು; ಎರಡೂ ರಾಜ್ಯಗಳ ಜನರಿಂದಲೂ ತಿರಸ್ಕಾರ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Sindhuri Vs Roopa: ಆರೋಪ-ಪ್ರತ್ಯಾರೋಪ ಬಿಟ್ಟು ಸಂಧಾನದತ್ತ ಗಮನ ಹರಿಸಿ; ರೂಪ-ರೋಹಿಣಿಗೆ ಸುಪ್ರೀಂ ಕೋರ್ಟ್‌ ಸಲಹೆ

Sindhuri Vs Roopa:ಐಪಿಎಸ್‌ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಮತ್ತು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ವಿವಾದ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಒಬ್ಬರು ಮತ್ತೊಬ್ಬರ ವಿರುದ್ಧ ಆರೋಪಗಳ ಮಾಡುವುದನ್ನು ಮುಂದುವರಿಸುವುದರ ಬದಲಾಗಿ ಸಂಧಾನ ಸಾಧ್ಯತೆಯತ್ತ ಗಮನಹರಿಸುವಂತೆ ಸಲಹೆ ನೀಡಿದೆ. ಇಬ್ಬರು ಒಮ್ಮತದ ನಿರ್ಧಾರಕ್ಕೆ ಬಂದು ಆರೋಪಗಳನ್ನು ಹಿಂಪಡೆಯಲು ಒಪ್ಪಿದರೆ ಬಾಕಿ ಇರುವ ಪ್ರಕರಣಗಳು ಸೇರಿ ಇಬ್ಬರ ನಡುವೆ ಬಾಕಿ ಇರುವ ಎಲ್ಲಾ ದಾವೆಗಳು ರದ್ದಾಗಲಿವೆ ಎಂದು ನ್ಯಾಯಾಲಯ ಹೇಳಿದೆ.

VISTARANEWS.COM


on

Sindhuri Vs Roopa
Koo

ನವದೆಹಲಿ: ಐಪಿಎಸ್‌ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಮತ್ತು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ (Sindhuri Vs Roopa) ನಡುವಿನ ವಿವಾದ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌(Supreme Court), ಒಬ್ಬರು ಮತ್ತೊಬ್ಬರ ವಿರುದ್ಧ ಆರೋಪಗಳ ಮಾಡುವುದನ್ನು ಮುಂದುವರಿಸುವುದರ ಬದಲಾಗಿ ಸಂಧಾನ ಸಾಧ್ಯತೆಯತ್ತ ಗಮನಹರಿಸುವಂತೆ ಸಲಹೆ ನೀಡಿದೆ. ಸಿಂಧೂರಿ ದೂರಿನ ಹಿನ್ನೆಲೆಯಲ್ಲಿ ದಾಖಲಾಗಿರುವ ಕ್ರಿಮಿನಲ್‌ ಮಾನಹಾನಿ ಪ್ರಕರಣ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌(Karnataka High court) ನಿರಾಕರಿಸಿರುವುದನ್ನು ಪ್ರಶ್ನಿಸಿ ರೂಪಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿಗಳಾದ ಅಭಯ್‌ ಶ್ರೀನಿವಾಸ್‌ ಓಕ್‌ ಮತ್ತು ಪಂಕಜ್‌ ಮಿತ್ತಲ್‌ ಅವರ ನೇತೃತ್ವದ ವಿಭಾಗೀಯ ಪೀಠ, ಇಬ್ಬರೂ ಅಧಿಕಾರಿಗಳು ಸಾರ್ವಜನಿಕ ಸೇವೆಯಲ್ಲಿದ್ದು, ಈ ನಡತೆ ಮುಂದುವರಿಯಬಾರದು. ಇಬ್ಬರೂ ಯುವ ಅಧಿಕಾರಿಗಳಾಗಿದ್ದು, ಈ ಹಣಾಹಣಿ ಮುಂದುವರಿದರೆ ಅವರ ವೃತ್ತಿಗೆ ಹಾನಿಯಾಗುತ್ತದೆ” ಎಂದು ಹೇಳಿದೆ.

ಇಬ್ಬರು ಒಮ್ಮತದ ನಿರ್ಧಾರಕ್ಕೆ ಬಂದು ಆರೋಪಗಳನ್ನು ಹಿಂಪಡೆಯಲು ಒಪ್ಪಿದರೆ ಬಾಕಿ ಇರುವ ಪ್ರಕರಣಗಳು ಸೇರಿ ಇಬ್ಬರ ನಡುವೆ ಬಾಕಿ ಇರುವ ಎಲ್ಲಾ ದಾವೆಗಳು ರದ್ದಾಗಲಿವೆ ಎಂದು ನ್ಯಾಯಾಲಯ ಹೇಳಿದೆ. ಕಳೆದ ಡಿಸೆಂಬರ್‌ 15ರಂದು ಪ್ರಕರಣಕ್ಕೆ ತಡೆ ನೀಡಿದ್ದ ಸುಪ್ರೀಂಕೋರ್ಟ್‌ ಮಾಧ್ಯಮಗಳಲ್ಲಿ ಮಾತನಾಡದಂತೆ ಇಬ್ಬರು ಅಧಿಕಾರಿಗಳಿಗೆ ಆದೇಶಿಸಿತ್ತು. ಅಲ್ಲದೇ, ವಿವಾದ ಬಗೆಹರಿಸಿಕೊಳ್ಳಲು ಸಂಧಾನಕ್ಕೆ ಮುಂದಾಗುವಂತೆಯೂ ಸಲಹೆ ನೀಡಿತ್ತು.

ರೂಪಾ ಮೌದ್ಗಿಲ್ ವಿರುದ್ಧ ರೋಹಿಣಿ ಸಿಂಧೂರಿ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸುಪ್ರೀಂ ಕೋರ್ಟ್ ತಡೆ
ಅಧಿಕಾರಿಗಳಿಬ್ಬರ ಕಚ್ಚಾಟಕ್ಕೆ ಸಂಬಂಧಿಸಿದಂತೆ ಸರ್ಕಾರವು ಇಲಾಖಾ ತನಿಖೆ ನಡೆಸುತ್ತಿದ್ದರೆ, ಈ ವಿಚಾರದಲ್ಲಿ ಮುಂದುವರಿಯದಂತೆ ಸರ್ಕಾರಕ್ಕೂ ಸೂಚಿಸಲಾಗುವುದು ಎಂದು ಹೇಳಿತು. ಸಿಂಧೂರಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ್‌ ಲೂಥ್ರಾ ಅವರು ಸಿಂಧೂರಿ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು ಬಯಸಿಲ್ಲ. ಪರಿಹಾರ ಸಾಧ್ಯತೆಯ ಬಗ್ಗೆ ಸಿಂಧೂರಿ ಜೊತೆ ಚರ್ಚಿಸಲು ಹೆಚ್ಚಿನ ಕಾಲಾವಕಾಶ ಬೇಕು ಎಂದರು. ಇದನ್ನು ಆಲಿಸಿದ ಪೀಠವು ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದೆ. ಡಿ ರೂಪಾ ಪರವಾಗಿ ಹಿರಿಯ ವಕೀಲ ಆದಿತ್ಯ ಸೋಂಧಿ ವಾದಿಸಿದರು.

ಏನಿದು ಪ್ರಕರಣ?

ಐಪಿಎಸ್‌ ಅಧಿಕಾರಿಯಾಗಿರುವ ರೂಪಾ ಅವರು 2023ರ ಫೆಬ್ರವರಿ 18 ಮತ್ತು 19ರಂದು ತಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲಿ ರೋಹಿಣಿ ಸಿಂಧೂರಿ ಅವರ ಬಗ್ಗೆ ಸಾಲು ಸಾಲು ಆರೋಪಗಳನ್ನು ಮಾಡಿದ್ದರು. ರೋಹಿಣಿ ಸಿಂಧೂರಿ ಅವರು ಮನೆ ಹಾಳು ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ. ರವಿ ಅವರ ಸಾವನ್ನೂ ತಳುಕು ಹಾಕಿದ ರೂಪಾ ಅವರು ಇತರ ಐಎಎಸ್‌ ಅಧಿಕಾರಿಗಳಿಗೆ ಅಸಭ್ಯ ಚಿತ್ರಗಳನ್ನು ರಾತ್ತಿ ಹೊತ್ತು ಕಳುಹಿಸುತ್ತಿದ್ದಾರೆ. ಬೇರೆ ಐಎಎಸ್‌ ಅಧಿಕಾರಿಗಳ ಮನೆ ಒಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ:Human trafficking: ಕೆಲಸ ಕೊಡಿಸೋದಾಗಿ ನಂಬಿಸಿ ರಷ್ಯಾ-ಉಕ್ರೇನ್‌ ಯುದ್ಧ ಪೀಡಿತ ಪ್ರದೇಶಕ್ಕೆ ರವಾನೆ-ಇಬ್ಬರು ಅರೆಸ್ಟ್‌

ಇದು ಭಾರಿ ಸಂಚಲನವನ್ನು ಸೃಷ್ಟಿಸಿತ್ತು. ಇದರ ವಿರುದ್ಧ ರೋಹಿಣಿ ಸಿಂಧೂರಿ ಅವರು ಕೋರ್ಟ್‌ ಮೆಟ್ಟಿಲು ಹತ್ತಿದ್ದರು. ಈ ನಡುವೆ, ರಾಜ್ಯ ಸರ್ಕಾರ ಇಬ್ಬರೂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಲ್ಲದೆ, ಅವರನ್ನು ಸೇವೆಯಿಂದ ಮುಕ್ತಿಗೊಳಿಸಿ ರಜೆ ಮೇಲೆ ಕಳುಹಿಸಿತ್ತು. ಇದೀಗ ವಾದ-ವಿವಾದಗಳ ಹಂತ ಮುಗಿದು ಇನ್ನು ರೂಪಾ ಮೌದ್ಗಿಲ್‌ ವಿಚಾರಣೆ ಎದುರಿಸಬೇಕಾಗುವ ಹಂತ ಬಂದಿದೆ. ಕೆಲವು ದಿನಗಳ ಹಿಂದಷ್ಟೇ ಹೈಕೋರ್ಟ್‌ ಮಾನನಷ್ಟ ಮೊಕದ್ದಮೆ ರದ್ದು ಕೋರಿದ್ದ ರೂಪಾ ಅವರ ಮನವಿಯನ್ನು ತಿರಸ್ಕರಿಸಿತ್ತು.

Continue Reading

ದೇಶ

Human trafficking: ಕೆಲಸ ಕೊಡಿಸೋದಾಗಿ ನಂಬಿಸಿ ರಷ್ಯಾ-ಉಕ್ರೇನ್‌ ಯುದ್ಧ ಪೀಡಿತ ಪ್ರದೇಶಕ್ಕೆ ರವಾನೆ-ಇಬ್ಬರು ಅರೆಸ್ಟ್‌

Human trafficking:ಯುದ್ಧ ಪೀಡಿತ ರಷ್ಯಾ ಮತ್ತು ಉಕ್ರೇನ್‌ಗೆ ಮಾನವ ಕಳ್ಳಸಾಗಾಟ ಮಾಡುತ್ತಿದ್ದ ಕೇರಳದ ತಿರುವನಂತಪುರಂ ಮೂಲದ ಇಬ್ಬರನ್ನು ಕೇಂದ್ರೀಯ ತನಿಖಾ ಸಂಸ್ಥೆ(CBI) ಬಂಧಿಸಿದೆ. ಬಂಧಿತ ಆರೋಪಿಗಳ ಗುರುತನ್ನು ಸಿಬಿಐ ಇನ್ನೂ ಬಹಿರಂಗ ಪಡಿಸಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆರೋಪಿಗಳು ಸಿಬಿಐ ಬಲೆಗೆ ಬೀಳುವ ಸಾಧ್ಯತೆ ಇದೆ.

VISTARANEWS.COM


on

Human trafficking
Koo

ನವದೆಹಲಿ: ಇತ್ತೀಚೆಗೆ ಮಲಯಾಳಂ ಭಾಷೆಯಲ್ಲಿ ಆಡು ಜೀವಿತಂ(Goat Life) ಎಂಬ ಸಿನಿಮಾ ಬಹುದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಅದರಲ್ಲಿ ಇಬ್ಬರು ಕೇರಳ ಮೂಲದ ಯುವಕರನ್ನು ಕೆಲಸ ಕೊಡಿವುದಾಗಿ ನಂಬಿಸಿ ವಿದೇಶಕ್ಕೆ ಕರೆಸಿ ಅಲ್ಲಿ ಅವರ ಪಾಸ್‌ಪೋರ್ಟ್‌ ಕಿತ್ತುಕೊಂಡು ಮರುಭೂಮಿಯಲ್ಲಿ ಆಡು, ಒಂಟೆ ಮೇಲಿಸಲು ಕಳಿಸಲಾಗುತ್ತದೆ. ಅಲ್ಲಿ ಅವರು ಅನುಭವಿಸಿದ ನರಕಯಾತನೆ ಕುರಿತಾದ ಕಥಾಹಂದರವಿರುದ ಸಿನಿಮಾ ಅದು. ಇದೀಗ ಅಂತಹದ್ದೇ ಒಂದು ದಂಧೆ ಬೆಳಕಿಗೆ ಬಂದಿದೆ. ಯುದ್ಧ ಪೀಡಿತ ರಷ್ಯಾ ಮತ್ತು ಉಕ್ರೇನ್‌(Russia-Ukraine War)ಗೆ ಮಾನವ ಕಳ್ಳಸಾಗಾಟ(Human trafficking) ಮಾಡುತ್ತಿದ್ದ ಕೇರಳದ ತಿರುವನಂತಪುರಂ ಮೂಲದ ಇಬ್ಬರನ್ನು ಕೇಂದ್ರೀಯ ತನಿಖಾ ಸಂಸ್ಥೆ(CBI) ಬಂಧಿಸಿದೆ. ಬಂಧಿತ ಆರೋಪಿಗಳ ಗುರುತನ್ನು ಸಿಬಿಐ ಇನ್ನೂ ಬಹಿರಂಗ ಪಡಿಸಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆರೋಪಿಗಳು ಸಿಬಿಐ ಬಲೆಗೆ ಬೀಳುವ ಸಾಧ್ಯತೆ ಇದೆ.

ಸಿಬಿಐ ಕಾರ್ಯಾಚರಣೆ ಹೇಗಿತ್ತು?

ಟ್ರಾವೆಲ್‌ ಏಜೆಂಟ್‌ಗಳ ಮೋಸದಾಟಕ್ಕೆ ಬಲಿಯಾಗಿ ವಿದೇಶಕ್ಕೆ ಹೋಗಿ ಯುವಕರು ಸಂಕಷ್ಟ ಎದುರಿಸುತ್ತಿರುವ ಘಟನೆಗಳು ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಟ್ರಾವೆಲ್‌ ಏಕೆಂಟ್‌ಗಳ ಮೇಲೆ ಕಣ್ಣಿಟ್ಟ ಸಿಬಿಐಗೆ ಈ ದಂಧೆ ಬೆಳಕಿಗೆ ಬಂದಿತ್ತು. ಈ ಟ್ರಾವೆಲ್‌ ಏಜೆಂಟ್‌ಗಳು ರಷ್ಯಾದಲ್ಲಿ ಕೆಲಸ ಕೊಡಿಸುವುದಾಗ ಭಾರತೀಯ ಯುವಕರನ್ನು ನಂಬಿಸಿ, ಅಲ್ಲಿಗೆ ಕಳುಹಿಸಿ ಅವರ ಪಾಸ್‌ಪೋರ್ಟ್‌ಗಳನ್ನು ಕಿತ್ತುಕೊಂಡು ಯುದ್ಧ ಪೀಡಿತ ಪ್ರದೇಶಕ್ಕೆ ಕಳಿಸುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ 17 ವಿಸಾ ಕಂಪನಿಗಳು ಹಾಗೂ ಅದರ ಮಾಲಕರು, ಏಜೆಂಟ್‌ಗಳ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿದೆ. ಅವರ ವಿರುದ್ಧ ಸಂಚು, ವಂಚನೆ ಮತ್ತು ಮಾನವ ಕಳ್ಳಸಾಗಣೆ ಪ್ರಕರಣಗಳನ್ನು ದಾಖಲಿಸಲಾಗಿದೆ.

ಭಾರತೀಯ ಪ್ರಜೆಗಳ ಮೇಲೆ ದೌರ್ಜನ್ಯ

ಏಜೆಂಟ್‌ಗಳ ಮೂಲಕ ಭಾರತೀಯ ಯುವಕರನ್ನು ರಷ್ಯಾ ಸೇನೆ, ಭದ್ರತಾ ಸಿಬ್ಬಂದಿ ಅಥವಾ ಇತರೆ ಕ್ಷೇತ್ರಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ರಷ್ಯಾಗೆ ಕಳುಹಿಸಿಕೊಡಲಾಗುತ್ತದೆ. ಸಂತ್ರಸ್ತರಿಂದ ಇದಕ್ಕಾಗಿ ಏಜೆಂಟ್‌ಗಳು ಸ್ವಲ್ಪ ಹಣವನ್ನೂ ಪಡೆಯುತ್ತಾರೆ. ಅಲ್ಲಿ ಕಾಲಿಟ್ಟೊಡನೇ ಅವರ ಪಾಸ್‌ಪೋರ್ಟ್‌ ಕಿತ್ತುಕೊಂಡು ರಷ್ಯಾ ಸೇನೆಗೆ ಒತ್ತಾಯಪೂರ್ವಕವಾಗಿ ಸೇರಿಸಲಾಗುತ್ತದೆ. ಅಲ್ಲಿ ಅವರಿಗೆ ಯುದ್ಧ ತರಬೇತಿ ನೀಡಿ ಅಲ್ಲಿಂದ ಅವರನ್ನು ಯುದ್ಧ ಪೀಡಿತ ಪ್ರದೇಶಗಳಿಗೆ ಕಳಿಸುತ್ತಾರೆ.

ಇದನ್ನೂ ಓದಿ:Covishield Vaccine: ಕೋವಿಶೀಲ್ಡ್‌ ಲಸಿಕೆ ಹಿಂಪಡೆಯುವುದಾಗಿ ಅಸ್ಟ್ರಾಜೆನೆಕಾ ಘೋಷಣೆ

ವಿದ್ಯಾರ್ಥಿಗಳೂ ಬಲಿಪಶು

ಇನ್ನು ಈ ದಂಧೆಗೆ ಯುವಕರು ಮಾತ್ರವಲ್ಲದೇ ವಿದ್ಯಾರ್ಥಿಗಳೂ ಬಲಿಪಶುಗಳಾಗಿದ್ದಾರೆ. ರಷ್ಯಾದ ದೊಡ್ಡ ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ ದಾಖಲಾತಿ ಮಾಡಿಸಿಕೊಡುವುದಾಗಿ ನಂಬಿಸಿ ವಂಚಕರಿ ವಂಚಿಸಿದ್ದರು. ಅವರಿಂದ ಖಾಸಗಿ ಶಾಲೆಗಳ ಶುಲ್ಕದಲ್ಲಿ ರಿಯಾಯಿತಿ ಮತ್ತು ವೀಸಾ ಅವಧಿ ವಿಸ್ತರಣೆ ಮೊದಲಾದ ಭರವಸೆಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದರು ಎನ್ನಲಾಗಿದೆ. ಇನ್ನು ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡೇ ವಂಚಕರು ಜನರಿಗೆ ಬಲೆ ಬೀಸುತ್ತಿದ್ದರು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ.

Continue Reading

ದೇಶ

Covishield Vaccine: ಕೋವಿಶೀಲ್ಡ್‌ ಲಸಿಕೆ ಹಿಂಪಡೆಯುವುದಾಗಿ ಅಸ್ಟ್ರಾಜೆನೆಕಾ ಘೋಷಣೆ

Covishield Vaccine: ಅಸ್ಟ್ರಾಜೆನೆಕಾ ಕಂಪನಿ ಪ್ರಕಟಣೆ ಹೊರಡಿಸಿದ್ದು, ಇನ್ನು ಮುಂದೆ ಕೋವಿಶೀಲ್ಡ್‌ ಲಸಿಕೆ ತಯಾರಿ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತಿದೆ. ಇನ್ನು ಕೋವಿಶೀಲ್ಡ್‌ ಲಸಿಕೆಯನ್ನು ಹಿಂಪಡೆಯುವ ಉದ್ದೇಶ ಸಂಪೂರ್ಣವಾಗಿ ಗೌಪ್ಯವಾದ ವಿಚಾರ. ಅದೂ ಅಲ್ಲದೇ ಈ ಲಸಿಕೆಯಿಂದ ಅಡ್ಡಪರಿಣಾಮ ಆಗುತ್ತಿದೆ ಎಂಬುದನ್ನು ಒಪ್ಪಿಕೊಂಡಿರುವುದಕ್ಕೂ ಈ ನಿರ್ಧಾರಕ್ಕೂ ಯಾವುದೇ ಸಂಬಂಧ ಇಲ್ಲಎಂದು ಹೇಳಿದೆ

VISTARANEWS.COM


on

Covishield Vaccine
Koo

ನವದೆಹಲಿ: ಬ್ರಿಟಿಷ್ ಔಷಧೀಯ ದೈತ್ಯ ಕಂಪನಿ ಅಸ್ಟ್ರಾಜೆನೆಕಾ (AstraZeneca)ನ ತನ್ನ ಕೋವಿಡ್-19 (Covid 19) ಲಸಿಕೆ ಕೋವಿಶೀಲ್ಡ್ (Covishield Vaccine)‌ ಅನ್ನು ಜಾಗತಿಕ ಮಟ್ಟದಲ್ಲಿ ಹಿಂಪಡೆಯಲು ಮುಂದಾಗಿದೆ. ಕೋವಿಶೀಲ್ಡ್‌ ಲಸಿಕೆ ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ (Thrombosis with Thrombocytopenia Syndrome – TTS) ಎಂಬ ಅಪರೂಪದ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂಬುದನ್ನು ಈ ಹಿಂದೆ ಕೋರ್ಟ್‌ನಲ್ಲಿ ಒಪ್ಪಿಕೊಂಡಿದ್ದ ಈ ಕಂಪನಿಯೂ ಇದೀಗ ವ್ಯಾಪಾರ ಉದ್ದೇಶದಿಂದ ಎಲ್ಲಾ ಮಾರುಕಟ್ಟೆಗಳಿಂದ ತನ್ನ ಈ ಲಸಿಕೆಯನ್ನು ತೆಗೆದು ಹಾಕುವುದಾಗಿ ಘೋಷಿಸಿದೆ.

ಈ ಬಗ್ಗೆ ಸ್ವತಃ ಅಸ್ಟ್ರಾಜೆನೆಕಾ ಕಂಪನಿ ಪ್ರಕಟಣೆ ಹೊರಡಿಸಿದ್ದು, ಇನ್ನು ಮುಂದೆ ಕೋವಿಶೀಲ್ಡ್‌ ಲಸಿಕೆ ತಯಾರಿ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತಿದೆ. ಇನ್ನು ಕೋವಿಶೀಲ್ಡ್‌ ಲಸಿಕೆಯನ್ನು ಹಿಂಪಡೆಯುವ ಉದ್ದೇಶ ಸಂಪೂರ್ಣವಾಗಿ ಗೌಪ್ಯವಾದ ವಿಚಾರ. ಅದೂ ಅಲ್ಲದೇ ಈ ಲಸಿಕೆಯಿಂದ ಅಡ್ಡಪರಿಣಾಮ ಆಗುತ್ತಿದೆ ಎಂಬುದನ್ನು ಒಪ್ಪಿಕೊಂಡಿರುವುದಕ್ಕೂ ಈ ನಿರ್ಧಾರಕ್ಕೂ ಯಾವುದೇ ಸಂಬಂಧ ಇಲ್ಲ. ಇನ್ನು ಕಂಪನಿ ಸ್ವಯಂ ಪ್ರೇರಿತವಾಗಿ ತನ್ನ ಈ ಲಸಿಕೆಯನ್ನು ಮಾರುಕಟ್ಟೆಯಿಂದ ಹಿಂಪಡೆಯುತ್ತಿದೆ. ಮಾ.5ರಂದೇ ಇದಕ್ಕಾಗಿ ಯುರೋಪಿಯನ್‌ ಒಕ್ಕೂಟದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಇನ್ನು ಶೀಘ್ರದಲ್ಲೇ ಇಂಗ್ಲೆಂಡ್‌ ಮತ್ತಿ ಇತರೇ ರಾಷ್ಟ್ರಗಳಲ್ಲಿ ಲಸಿಕೆ ಹಿಂಪಡೆಯಲು ಅರ್ಜಿ ಸಲ್ಲಿಸಲಾಗುತ್ತದೆ ಎಂದು ಹೇಳಿದೆ.

ಬ್ಟಿರಿಷ್ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ (AstraZeneca) ತನ್ನ ಕೋವಿಡ್ ಲಸಿಕೆ ಕೋವಿಶೀಲ್ಡ್‌ ಅಪರೂಪವಾಗಿ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂದು ಒಪ್ಪಿಕೊಳ್ಳುವ ಮೂಲಕ ಜನರನ್ನು ಆತಂಕಕ್ಕೆ ತಳ್ಳಿತ್ತು. ಕೋವಿಶೀಲ್ಡ್ ಅಪರೂಪದ ಸಂದರ್ಭಗಳಲ್ಲಿ, ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ಪ್ಲೇಟ್‌ಲೆಟ್ ಎಣಿಕೆಗೆ ಕಾರಣವಾಗುವ ಸ್ಥಿತಿಯನ್ನು ಉಂಟುಮಾಡಬಹುದು ಎಂದು ಲಸಿಕೆ ತಯಾರಕರು ನ್ಯಾಯಾಲಯದಲ್ಲಿ ಹೇಳಿದ್ದರು.

ಸಾಂಕ್ರಾಮಿಕ ಸಮಯದಲ್ಲಿ ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಅಭಿವೃದ್ಧಿಪಡಿಸಲಾದ ಕೋವಿಶೀಲ್ಡ್ ಅನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿತು ಮತ್ತು ದೇಶದಲ್ಲಿ ವ್ಯಾಪಕವಾಗಿ ನೀಡುತ್ತಿದೆ. AstraZeneca ಯುಕೆಯಲ್ಲಿ ತನ್ನ ಲಸಿಕೆಯು ಹಲವಾರು ಪ್ರಕರಣಗಳಲ್ಲಿ ಸಾವುಗಳು ಮತ್ತು ತೀವ್ರ ಅಸ್ವಸ್ಥತೆಗೆ ಕಾರಣವಾಯಿತು ಎಂಬ ಆರೋಪದ ಮೇಲೆ ಕ್ಲಾಸ್ ಆಕ್ಷನ್ ಮೊಕದ್ದಮೆಯನ್ನು ಎದುರಿಸುತ್ತಿದೆ. ಯುಕೆ ಹೈಕೋರ್ಟ್‌ನಲ್ಲಿ 51 ಪ್ರಕರಣಗಳಲ್ಲಿ ಸಂತ್ರಸ್ತರು 100 ಮಿಲಿಯನ್ ಪೌಂಡ್‌ಗಳವರೆಗೆ ನಷ್ಟ ಪರಿಹಾರ ಬಯಸಿದ್ದಾರೆ.

ಇದನ್ನೂ ಓದಿ: EVMs Damage: ಚುನಾವಣಾ ಸಿಬ್ಬಂದಿ ಇದ್ದ ಬಸ್‌ನಲ್ಲಿ ಬೆಂಕಿ ಅವಘಡ; ಮತಯಂತ್ರಗಳು ಡ್ಯಾಮೇಜ್‌

ಇನ್ನು ಜನರನ್ನು ಆತಂಕಕ್ಕೀಡು ಮಾಡಿರುವ ಈ ವಿಚಾರದ ಬಗ್ಗೆ ಭಾರತದ ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ, ಮಾಜಿ ICMR ವಿಜ್ಞಾನಿ ಡಾ. ರಾಮನ್ ಗಂಗಾಖೇಡ್ಕರ್ ಸ್ಪಷ್ಟನೆ ನೀಡಿದ್ದು, ಭಾರತದಲ್ಲಿ ಕೊರೊನಾ ವೈರಸ್‌ಎದುರಿಸಲು ಕೋವಿಶೀಲ್ಡ್‌ ಲಸಿಕೆ ತೆಗೆದುಕೊಂಡವರಲ್ಲಿ ರಕ್ತ ಹೆಪ್ಪುಗಟ್ಟುವ ಅಡ್ಡ ಪರಿಣಾಮದ ಅಪಾಯದ ಸಾಧ್ಯತೆಗಳು ತೀರಾ ಕಡಿಮೆ ಎಂದು ಹೇಳಿದ್ದಾರೆ. ಮೊದಲ ಡೋಸ್ ಅನ್ನು ಪಡೆದಾಗ ಅಡ್ಡ ಪರಿಣಾಮದ ರಿಸ್ಕ್‌ ಅತ್ಯಧಿಕವಾಗಿರುತ್ತದೆ. ಆದರೆ ಎರಡನೇ ಡೋಸ್‌ನೊಂದಿಗೆ ಕಡಿಮೆಯಾಗುತ್ತದೆ; ಮೂರನೆಯದರೊಂದಿಗೆ ಮತ್ತೂ ಕಡಿಮೆಯಾಗುತ್ತದೆ. ಅಡ್ಡ ಪರಿಣಾಮ ಸಂಭವಿಸುವುದಾದಲ್ಲಿ, ಲಸಿಕೆ ಪಡೆದ ಎರಡು ಮೂರು ತಿಂಗಳೊಳಗೆ ಕಾಣಿಸಿಕೊಳ್ಳುತ್ತದೆ” ಎಂದು ಗಂಗಾಖೇಡ್ಕರ್ ತಿಳಿಸಿದ್ದರು.

Continue Reading

ದೇಶ

EVMs Damage: ಚುನಾವಣಾ ಸಿಬ್ಬಂದಿ ಇದ್ದ ಬಸ್‌ನಲ್ಲಿ ಬೆಂಕಿ ಅವಘಡ; ಮತಯಂತ್ರಗಳು ಡ್ಯಾಮೇಜ್‌

EVMs Damage:ಮತದಾನ ಪ್ರಕ್ರಿಯೆ ಮುಗಿದ ಬಳಿಕ ರಾತ್ರಿ 11ಗಂಟೆಗೆ ವಾಪಾಸಾಗುತ್ತಿದ್ದ ವೇಳೆ ಬಸ್ಸಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತ್ತು. ಬಸ್‌ನಲ್ಲಿ ಆರು ಜನ ಸಿಬ್ಬಂದಿ ಮತ್ತು ಆರು ಇವಿಎಂ ಯಂತ್ರಗಳು ಇದ್ದವು. ಬೂತ್‌ ನಂಬರ್‌ 275, 276, 277, 278, 279 ಮತ್ತು 280 ಸೇರಿದಂತೆ ನಾಲ್ಕು ಮತಗಟ್ಟೆಗಳ ಇವಿಎಂಗಳು ಹಾನಿಗೊಳಗಾಗಿವೆ. ನಾಲ್ಕು ಇವಿಎಂ ಯಂತ್ರಗಳು ಹಾನಿಗೊಳಗಾಗಿದ್ದು, ಎರಡು ಇವಿಎಂಗಳು ಸುರಕ್ಷಿತವಾಗಿದೆ ಎಂದು ಜಿಲ್ಲಾಧಿಕಾರಿ ಸೂರ್ಯವಂಶಿ ಹೇಳಿದ್ದಾರೆ.

VISTARANEWS.COM


on

EVMs damage
Koo

ಮಧ್ಯಪ್ರದೇಶ: ಚುನಾವಣಾ ಸಿಬ್ಬಂದಿಯನ್ನು ಹೊತ್ತು ಸಾಗುತ್ತಿದ್ದ ಬಸ್ಸಿನಲ್ಲಿ ಬೆಂಕಿ ಅವಘಡ(Fire accident) ಸಂಭವಿಸಿದ್ದು, ಅನೇಕ ವಿದ್ಯುನ್ಮಾನ ಮತಯಂತ್ರ(EVMs damage)ಗಳು ಹಾನಿಗೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇನ್ನು ಬಸ್‌ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದು, ಅದೃಷ್ಟವಶಾತ್‌ ಬಸ್‌ನಲ್ಲಿದ್ದ ಸಿಬ್ಬಂದಿ ಮತ್ತು ಚಾಲಕ ಯಾವುದೇ ಗಾಯಗಳಾಗದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆ ವಿವರ:

ಬೀತುಲ್‌ ಜಿಲ್ಲೆಯಾ ಗೋಲಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮತದಾನ ಪ್ರಕ್ರಿಯೆ ಮುಗಿದ ಬಳಿಕ ರಾತ್ರಿ 11ಗಂಟೆಗೆ ವಾಪಾಸಾಗುತ್ತಿದ್ದ ವೇಳೆ ಬಸ್ಸಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತ್ತು. ಬಸ್‌ನಲ್ಲಿ ಆರು ಜನ ಸಿಬ್ಬಂದಿ ಮತ್ತು ಆರು ಇವಿಎಂ ಯಂತ್ರಗಳು ಇದ್ದವು. ಬೂತ್‌ ನಂಬರ್‌ 275, 276, 277, 278, 279 ಮತ್ತು 280 ಸೇರಿದಂತೆ ನಾಲ್ಕು ಮತಗಟ್ಟೆಗಳ ಇವಿಎಂಗಳು ಹಾನಿಗೊಳಗಾಗಿವೆ. ನಾಲ್ಕು ಇವಿಎಂ ಯಂತ್ರಗಳು ಹಾನಿಗೊಳಗಾಗಿದ್ದು, ಎರಡು ಇವಿಎಂಗಳು ಸುರಕ್ಷಿತವಾಗಿದೆ ಎಂದು ಜಿಲ್ಲಾಧಿಕಾರಿ ಸೂರ್ಯವಂಶಿ ಹೇಳಿದ್ದಾರೆ. ಇನ್ನು ಈ ಘಟನೆಯಿಂದ ಮತ ಎಣಿಕೆ ಮೇಲೆ ಏನಾದರೂ ಪ್ರಭಾವ ಬೀರಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಘಟನೆ ಬಗ್ಗೆ ಈಗಾಗಲೇ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲಾಗಿದೆ. ಅವರು ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಒಂದು ವೇಳೆ ಮರು ಮತದಾನದ ಅವಶ್ಯಕತೆ ಇದಲ್ಲಿ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:Uttarakhand Wild fire:5 ತಿಂಗಳು.. 910 ಕಾಡ್ಗಿಚ್ಚು ಪ್ರಕರಣ;ಸುಪ್ರೀಂಕೋರ್ಟ್‌ನಲ್ಲಿ ಇಂದು ತುರ್ತು ವಿಚಾರಣೆ

ಮಧ್ಯಪ್ರದೇಶದಲ್ಲಿ ಮೂರನೇ ಹಂತದ ಮತದಾನ

ನಿನ್ನೆ ಮಧ್ಯಪ್ರದೇಶದಲ್ಲಿ ಲೋಕಸಭಾ ಚುನಾವಣೆಯ ಮೂರನೇ ಹಂತದ ಮತನಾದನ ನಡೆದಿತ್ತು. ಬೀತುಲ್‌ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ. 72.65 ರಷ್ಟು ಮತದಾನ ನಡೆದಿತ್ತು. ಒಟ್ಟಾರೆ ಮಧ್ಯಪ್ರದೇಶದಲ್ಲಿ ಒಂಬತ್ತು ಕ್ಷೇತ್ರಗಳಲ್ಲಿ ಶೇ.66.05ರಷ್ಟು ಮತದಾನ ಆಗಿತ್ತು. ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಕೇಂದ್ರ ಸಚಿವ ಜ್ಯೋತಿರಾದಿತ್ಯಾ ಸಿಂದಿಯಾ, ಮಾಜಿ ಸಿಎಂಗಳಾದ ಶಿವರಾಜ್‌ ಸಿಂಗ್‌ ಚೌಹಾಣ್‌ ಮತ್ತು ದಿಗ್ವಿಜಯ್‌ ಸಿಂಗ್‌ ಸೇರಿದಂತೆ ಒಟ್ಟು 127 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನಿನ್ನೆ ಮೊರೆನಾ, ಬಿಂದ್‌(ಎಸ್‌ಸಿ ಮೀಸಲು ಕ್ಷೇತ್ರ), ಗ್ವಾಲಿಯರ್‌, ಗುನಾ, ಸಾಗರ್‌, ವಿಧಿಶಾ, ಭೋಪಾಲ್‌, ರಾಜ್‌ಘರ್‌ ಮತ್ತು ಬೀತುಲ್‌(ಎಸ್‌ಟಿ ಮೀಸಲು ಕ್ಷೇತ್ರ)ನಲ್ಲಿ ಮತದಾನ ನಡೆದಿತ್ತು.

Continue Reading
Advertisement
prajwal revanna case puttaraj shreyas patel karthik
ಪ್ರಮುಖ ಸುದ್ದಿ8 mins ago

Prajwal Revanna Case: ವಿಡಿಯೋ ಕಿಂಗ್‌ಪಿನ್‌ ಕಾರ್ತಿಕ್‌ ಕಾಂಗ್ರೆಸ್‌ ಅಭ್ಯರ್ಥಿ ಜೊತೆ ಕ್ಲೋಸ್;‌ ʼಕೈʼವಾಡಕ್ಕೆ ಸಾಕ್ಷಿ ಫೋಟೋಗಳು ಇಲ್ಲಿವೆ!

Actor Sathyaraj throwback picture of with veteran actor
ಮಾಲಿವುಡ್16 mins ago

Actor Sathyaraj: `ಬಾಹುಬಲಿ’ ಕಟ್ಟಪ್ಪನ ತೊಡೆ ಮೇಲೆ ಕುಳಿತ ಈ ಕ್ಯೂಟ್‌ ನಟ ಯಾರು? ಹೇಳಿ ನೋಡೋಣ!

Alia Bhatt Deep Fake Wamiqa Gabbi face replaced
ಬಾಲಿವುಡ್17 mins ago

Alia Bhatt Deep Fake: ಆಲಿಯಾ ಭಟ್‌ ಡೀಪ್‌ಫೇಕ್‌ ವಿಡಿಯೊ ವೈರಲ್‌! ಅಸಲಿ ಮುಖ ಯಾರದ್ದು?

Sindhuri Vs Roopa
ಕರ್ನಾಟಕ20 mins ago

Sindhuri Vs Roopa: ಆರೋಪ-ಪ್ರತ್ಯಾರೋಪ ಬಿಟ್ಟು ಸಂಧಾನದತ್ತ ಗಮನ ಹರಿಸಿ; ರೂಪ-ರೋಹಿಣಿಗೆ ಸುಪ್ರೀಂ ಕೋರ್ಟ್‌ ಸಲಹೆ

Puttakkana Makkalu umashree acting praised
ಕಿರುತೆರೆ21 mins ago

Puttakkana Makkalu: ʻಪುಟ್ಟಕ್ಕʼನ ನಟನೆಗೆ ಕೋಟಿ ಕೋಟಿ ನಮನ ಅಂತಿದ್ದಾರೆ ಫ್ಯಾನ್ಸ್‌!

hanuman flag keragodu mandya
ಕ್ರೈಂ60 mins ago

Hanuman Flag: ಕೆರಗೋಡು ಹನುಮಧ್ವಜ ಪ್ರಕರಣದ 3 ಹೋರಾಟಗಾರರ ಮೇಲೆ ರೌಡಿಶೀಟ್

Human trafficking
ದೇಶ1 hour ago

Human trafficking: ಕೆಲಸ ಕೊಡಿಸೋದಾಗಿ ನಂಬಿಸಿ ರಷ್ಯಾ-ಉಕ್ರೇನ್‌ ಯುದ್ಧ ಪೀಡಿತ ಪ್ರದೇಶಕ್ಕೆ ರವಾನೆ-ಇಬ್ಬರು ಅರೆಸ್ಟ್‌

Kanakalatha Passes Away Film serial actor Mollywood
ಮಾಲಿವುಡ್1 hour ago

Kanakalatha Passes Away: 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ನಟಿ ಇನ್ನಿಲ್ಲ

Prajwal Revanna Case
ಕ್ರೈಂ2 hours ago

Prajwal Revanna Case: ಗಡುವು ಮುಗೀತು, ಬೆಂಗಳೂರಿಗೆ ಹೊರಟರಾ ಪ್ರಜ್ವಲ್‌ ರೇವಣ್ಣ?

Laapataa Ladies Phool At Met Gala At Photoshop
ಬಾಲಿವುಡ್2 hours ago

Laapataa Ladies: ಮೆಟ್ ಗಾಲಾ ರೆಡ್ ಕಾರ್ಪೆಟ್​ನಲ್ಲಿ ‘ಲಾಪತಾ ಲೇಡೀಸ್’ನಟಿ! ಅಸಲಿ ಸಂಗತಿ ಏನು?

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ7 hours ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ15 hours ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ18 hours ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ20 hours ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ2 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ2 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ2 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ3 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ3 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌