1. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಿ.ಟಿ ರವಿಗೆ ಕೊಕ್, ಬಿಜೆಪಿ ರಾಜ್ಯಾಧ್ಯಕ್ಷತೆ ಫಿಕ್ಸ್
ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಸಿ.ಟಿ. ರವಿ (CT Ravi) ಅವರನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (BJP National General secretary) ಹುದ್ದೆಯಿಂದ ಮುಕ್ತಗೊಳಿಸಲಾಗಿದೆ. ಇದರೊಂದಿಗೆ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ (BJP State President) ಹುದ್ದೆಗೆ ನೇಮಕ ಮಾಡಲಾಗುತ್ತದೆ ಎಂಬ ಸುದ್ದಿಗಳಿಗೆ ಇಂಬು ಸಿಕ್ಕಂತಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಇದನ್ನೂ ಓದಿ : BJP Office Bearers: ಬಿಜೆಪಿ ಪದಾಧಿಕಾರಿಗಳ ಪಟ್ಟಿ; ದಕ್ಷಿಣ ಭಾರತ, ಮುಸ್ಲಿಮರಿಗೆ ಆದ್ಯತೆ; ಕರ್ನಾಟಕಕ್ಕಿಲ್ಲ ಮಣೆ
2. ಟಾಯ್ಲೆಟ್ ಚಿತ್ರೀಕರಣ ಕೇಸ್ ತನಿಖಾಧಿಕಾರಿ ಬದಲು; ಕುಂದಾಪುರ DSYP ಬೆಳ್ಳಿಯಪ್ಪಗೆ ಹೊಣೆ
ಉಡುಪಿಯ ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನ (Udupi Nethrajyoti Para medical College) ವಿವಾದಿತ ವಿಡಿಯೋ ಪ್ರಕರಣಕ್ಕೆ (Udupi Toilet Case) ಸಂಬಂಧಿಸಿದ ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ತನಿಖಾಧಿಕಾರಿಯನ್ನು ಬದಲಾಯಿಸಲಾಗಿದೆ. ಹೊಸ ತನಿಖಾಧಿಕಾರಿಯಾಗಿ ಕುಂದಾಪುರ ಡಿವೈಎಸ್‌ಪಿ ಬೆಳ್ಳಿಯಪ್ಪ (Kundapura DYSP Belliyappa) ಅವರನ್ನು ನೇಮಿಸಲಾಗಿದೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
ಪೂರಕ ಸುದ್ದಿ : Udupi Toilet Case : ಖುಷ್ಬೂ ಉಡುಪಿ ಭೇಟಿಯಿಂದ ಬಿಜೆಪಿಗೆ ಇರಸುಮುರಸು; ಬೈಯೋ ಹಾಗಿಲ್ಲ, ಒಪ್ಪೋ ಹಾಗೂ ಇಲ್ಲ!
3. ಬೇಕಿದ್ರೆ ಲಕ್ಷ್ಮೀ ಹೆಬ್ಬಾಳ್ಕರನ್ನೇ ಕರೆಸು, 100 ರೂ. ಕೊಡ್ಲೇಬೇಕು; ಗ್ರಾಮ ಒನ್ ಸಿಬ್ಬಂದಿ ಧಮ್ಕಿ
ಗೃಹಲಕ್ಷ್ಮಿ ಯೋಜನೆ (Gruha Lakshmi scheme) ನೋಂದಣಿಗೆ ಹಣ ಸ್ವೀಕರಿಸಬಾರದು ಎಂಬ ಸೂಚನೆ ಮೀರಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅವರಖೋಡ ಗ್ರಾಮದ ಗ್ರಾಮ ಒನ್ ಕೇಂದ್ರದಲ್ಲಿ ಸಿಬ್ಬಂದಿಯೊಬ್ಬ ಪ್ರತಿಯೊಬ್ಬರಿಂದ 100 ರೂ. ವಸೂಲಿ ಮಾಡುತ್ತಿದ್ದುದಲ್ಲದೆ, ಪ್ರಶ್ನೆ ಮಾಡಿದವರಿಗೆ ಬೇಕಿದ್ರೆ ಲಕ್ಷ್ಮೀ ಹೆಬ್ಬಾಳ್ಕರ್‌ನ್ನೇ ಕರೆಸು ಎಂದು ಸವಾಲು ಹಾಕಿದ್ದ. ಇದೀಗ ಆತನ ಮೇಲೆ ಪೊಲೀಸ್ ಕೇಸ್ ದಾಖಲಿಸಲಾಗಿದ್ದು, ಗ್ರಾಮ ಒನ್ ಕೇಂದ್ರವನ್ನು ಸೀಲ್ ಮಾಡಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
4. ಪಾಕ್ ಯುವತಿ ಜತೆ ಬ್ರಹ್ಮೋಸ್ ಕ್ಷಿಪಣಿ ರಹಸ್ಯ ಹಂಚಿಕೊಳ್ಳಲು ಮುಂದಾಗಿದ್ದ ಡಿಆರ್‌ಡಿಒ ವಿಜ್ಞಾನಿ!
ಬೇಹುಗಾರಿಕೆ, ದೇಶದ್ರೋಹ ಆಪಾದನೆಯ ಅಡಿಯಲ್ಲಿ ಸಿಕ್ಕಿಬಿದ್ದಿರುವ ಪ್ರತಿಷ್ಠಿತ ಡಿಆರ್‌ಡಿಒ (Defence Research and Development Organisation- DRDO) ಸಂಸ್ಥೆಯ ವಿಜ್ಞಾನಿಯ (DRDO Espionage) ವಾಟ್ಸ್ಯಾಪ್ ಚಾಟ್ ದಾಖಲೆಗಳನ್ನು ತನಿಖಾ ಸಂಸ್ಥೆ ಪರಿಶೀಲಿಸಿದ್ದು, ಬ್ರಹ್ಮೋಸ್- ಅಗ್ನಿ ಮುಂತಾದ ದೇಶಿ ಕ್ಷಿಪಣಿಗಳ ವಿನ್ಯಾಸ ರಹಸ್ಯಗಳನ್ನು ಪಾಕ್ ಯುವತಿಗೆ ನೀಡಲು ಮುಂದಾಗಿದ್ದುದು ಪತ್ತೆಯಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. ವಿಸ್ತಾರ ಅಂಕಣ: ʼಬಿಟ್ಟುಕೊಡುವೆʼ ಎನ್ನುವವರು ʼನನಗೂ ಬೇಕುʼ ಎನ್ನುವಂತೆ ಮಾಡಿದ್ದು ರಾಜಕಾರಣಿಗಳು
ಒಮ್ಮೆ ಸರ್ಕಾರದ ಯೋಜನೆಯ ಲಾಭ ಪಡೆದವರು ʼಬಿಟ್ಟುಕೊಡುವʼ ಬಗ್ಗೆ ಯೋಚನೆ ಮಾಡಬೇಕಾದ ಕಾಲ ಇದು. ಇದಕ್ಕಾಗಿ ಕರ್ನಾಟಕದ ರಾಜಕಾರಣಿಗಳೂ ತಮ್ಮನ್ನು ತಾವು ಮರುವಿಮರ್ಶೆ ಮಾಡಿಕೊಳ್ಳಬೇಕು ಎನ್ನುವುದು ವಿಸ್ತಾರ ನ್ಯೂಸ್‌ನ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅವರು ವಿಸ್ತಾರ ಅಂಕಣದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯ. ಪೂರ್ಣ ಲೇಖನಕ್ಕೆ ಈ ಲಿಂಕ್ ಕ್ಲಿಕ್ ಮಾಡಿ
6. ತಿಲಕ ಇಟ್ಟುಕೊಂಡು ಶಾಲೆಗೆ ಬಂದ ಹಿಂದುಗೆ ಥಳಿಸಿದ ಮುಸ್ಲಿಂ ವಿದ್ಯಾರ್ಥಿಗಳು; ಮತಾಂತರಕ್ಕೆ ಒತ್ತಾಯ
ರಾಜಸ್ಥಾನದ ಅಲ್ವರ್ ಜಿಲ್ಲೆಯ ಸರ್ಕಾರಿ ಶಾಲೆಗೆ ತಿಲಕ (Tilak Row) ಇಟ್ಟುಕೊಂಡು ಬಂದ ಹಿಂದು ವಿದ್ಯಾರ್ಥಿ ಮೇಲೆ ಮುಸ್ಲಿಂ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ. ಹಾಗೆಯೇ, ಇಸ್ಲಾಂ ಧರ್ಮಕ್ಕೂ ಮತಾಂತರಗೊಳ್ಳಬೇಕು ಎಂಬುದಾಗಿ ಮುಸ್ಲಿಂ ವಿದ್ಯಾರ್ಥಿಗಳು ಒತ್ತಾಯಿಸಿದ್ದು, ಇದರಿಂದಾಗಿ ಶಾಲೆಯಲ್ಲಿ ಗಲಾಟೆ ಕೂಡ ನಡೆದಿದೆ ಎಂದು ತಿಳಿದುಬಂದಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ಲೋಕಸಭಾ ಚುನಾವಣೆಗೆ ರಾಜ್ಯ ಬಿಜೆಪಿ ಸಿದ್ಧತೆ; ಗೆಲ್ಲಲು 10 ಸೂತ್ರ ಪಠಿಸಿದ ಉಸ್ತುವಾರಿ ತಾವ್ಡೆ
ಮುಂದಿನ 2024ರ ಲೋಕಸಭಾ ಚುನಾವಣೆಗೆ (Parliament Election 2024) ರಾಜ್ಯದಲ್ಲಿ ಬಿಜೆಪಿಯನ್ನು ಸಜ್ಜುಗೊಳಿಸುವ ಕೆಲಸವನ್ನು ಆರಂಭಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (BJP National General Secretary) ಹಾಗೂ ರಾಜ್ಯದ ಲೋಕಸಭಾ ಚುನಾವಣೆಯ ಉಸ್ತುವಾರಿಯಾಗಿರುವ ವಿನೋದ್ ತಾವ್ಡೆ (Vinod Thawde) ಅವರು ಶನಿವಾರ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮೂರು ಲೋಕಸಭಾ ಕ್ಷೇತ್ರಗಳ ನಾಯಕರ ಜತೆಗೆ ಚುನಾವಣಾ ಸಿದ್ಧತೆಗಳ ಬಗ್ಗೆ ಚರ್ಚೆ ನಡೆಸಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. NIA ತಂಡದಿಂದ ಶಿವಮೊಗ್ಗದಲ್ಲಿ ಮಹಜರು, ಯಾಸೀನ್ ಸಂಬಂಧಿ ಮನೆಯಲ್ಲಿ ಸಿಕ್ತು ಸ್ಫೋಟಕ!
ಮಂಗಳೂರಿನಲ್ಲಿ ಕಳೆದ ವರ್ಷದ ನವೆಂಬರ್ 19ರಂದು ನಡೆದ ಕುಕ್ಕರ್ ಬಾಂಬ್ ಸ್ಫೋಟದ (Mangalore Blast) ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (National Investigation Agency- NIA) ಶಿವಮೊಗ್ಗದಲ್ಲಿ ಕೂಡಾ ತನ್ನ ಚಟುವಟಿಕೆಯನ್ನು ವಿಸ್ತರಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. ಪಟಾಕಿ ಗೋದಾಮು ಬೆಂಕಿಗಾಹುತಿ; 9 ಸಾವು, ನೂರಕ್ಕೂ ಹೆಚ್ಚು ಮಂದಿ ಗಂಭೀರ
ತಮಿಳುನಾಡಿನ ಕೃಷ್ಣಗಿರಿಯಲ್ಲಿ ಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ (Fire Accident) ಸಂಭವಿಸಿದೆ. ಪಟಾಕಿಗಳೆಲ್ಲವೂ ಸ್ಫೋಟಗೊಂಡು (Fireworks godown) 9 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ನೂರಾಕ್ಕೂ ಅಧಿಕ ಮಂದಿಗೆ ಗಂಭೀರ ಗಾಯಗೊಂಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ರಾಹುಲ್ ಗಾಂಧಿಗೆ ಮದುವೆ ಮಾಡಿ ಎಂದ ಮಹಿಳೆ ಬಳಿ ಹುಡುಗಿ ಹುಡುಕಿ ಕೊಡಿ ಪ್ಲೀಸ್ ಎಂದ ಸೋನಿಯಾ
ಭಾರತ್ ಜೋಡೋ ಯಾತ್ರೆಗೆ ಅಭೂತಪೂರ್ವ ಬೆಂಬಲ ದೊರೆತ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಜನರೊಂದಿಗೆ ಹೆಚ್ಚು ಬೆರೆಯುತ್ತಿದ್ದಾರೆ.ಹರಿಯಾಣದಲ್ಲಿ ಹಲವು ರೈತ ಮಹಿಳೆಯರು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರನ್ನು ಭೇಟಿಯಾಗಿದ್ದು, ರಾಹುಲ್ ಗಾಂಧಿ ಮದುವೆ ಕುರಿತು ಅವರು ಕೇಳಿದ ಪ್ರಶ್ನೆ ಈಗ ವೈರಲ್ ಆಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ