Site icon Vistara News

ವಿಸ್ತಾರ TOP 10 NEWS | ಕರ್ನಾಟಕದ ಸ್ತಬ್ಧಚಿತ್ರವಿಲ್ಲದ ಬೇಸರದಿಂದ ಮೋದಿ 360 ಡಿಗ್ರಿ ಪ್ರಯೋಗದವರೆಗೆ ಪ್ರಮುಖ ಸುದ್ದಿಗಳು

Vistara Top 10 Feature Photo

ಬೆಂಗಳೂರು: ಈ ಬಾರಿ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ತಬ್ಧಚಿತ್ರವಿರುವುದಿಲ್ಲ ಎಂಬ ಬೇಸರದ ಸುದ್ದಿ ಬಂದಿದೆ. ನರೇಂದ್ರ ಮೋದಿ ಅವರು ಅಭಿವೃದ್ಧಿಯಲ್ಲಿ ಮಾಡಿದ ೩೬೦ ಡಿಗ್ರಿ ಪ್ರಯೋಗಗಳ ಯಶಸ್ಸಿನ ಕಥೆಯೊಂದನ್ನು ಹೇಳಲಾಗಿದೆ. ರಾಜಕಾರಣಿಗಳು ತನ್ನ ಹೆಸರಿನಲ್ಲಿ ಕೆಸರೆರಚಾಟ ನಡೆಸುತ್ತಿರುವಂತೆಯೇ ಸ್ಯಾಂಟ್ರೋ ರವಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದಾನೆ, ಮತ್ತೊಂದು ಕಡೆ ಪಂಚಮಸಾಲಿ ಮೀಸಲಾತಿ ಹೆಸರಿನಲ್ಲಿ ಸಚಿವ ಮುರುಗೇಶ್‌ ನಿರಾಣಿ ಮತ್ತು ಶಾಸಕ ಯತ್ನಾಳ್‌ ತೊಡೆ ತಟ್ಟಿದ್ದಾರೆ. ಕಾಂತಾರ ಸಿನಿಮಾದಲ್ಲಿ ಕೋರ್ಟ್‌ಗೆ ಹೋದ ವ್ಯಕ್ತಿಯೊಬ್ಬರು ಸಾವನ್ನಪ್ಪುವ ಸನ್ನಿವೇಶದಂತೆಯೇ ನಿಜ ಜೀವನದಲ್ಲೂ ಘಟಿಸಿದ್ದು ಸುದ್ದಿಯಾಗಿದೆ. ಹೀಗೆ ನಾನಾ ವಲಯಗಳ ಪ್ರಮುಖ ಸುದ್ದಿಗಳ ಗುಚ್ಛವಿದು ವಿಸ್ತಾರ TOP 10 NEWS.

1. ಸಮಗ್ರ ತನಿಖೆ ಹೇಳಿಕೆ, ರಾಜಕೀಯ ವಾಕ್ಸಮರ ನಡುವೆಯೇ ನಿರೀಕ್ಷಣಾ ಜಾಮೀನಿಗೆ ಸ್ಯಾಂಟ್ರೊ ರವಿ ಅರ್ಜಿ! ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದ ವೇಶ್ಯವಾಟಿಕೆ ದಂಧೆಕೋರ ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿಯ ಬಗ್ಗೆ ಸಮಗ್ರ ತನಿಖೆ ನಡೆಯಲಿದೆ ಎಂಬ ಪೊಲೀಸರು, ರಾಜಕಾರಣಿಗಳ ಹೇಳಿಕೆಗಳ ನಡುವೆಯೇ ಆತ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ. ಎಲ್ಲ ರಾಜಕಾರಣಿಗಳು ಆತನ ಹೆಸರಿನಲ್ಲಿ ಕೆಸರು ಎರಚಿಕೊಳ್ಳುತ್ತಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಇನ್ನೊಂದು ವರದಿ | 1995ರಲ್ಲೇ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ ಅತ್ಯಾಚಾರ ಮಾಡಿದ್ದ ಸ್ಯಾಂಟ್ರೋ ರವಿ!

೨. ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ತಬ್ಧಚಿತ್ರವಿಲ್ಲ! ಕಾರಣ ಏನು?
ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ಸ್ತಬ್ಧಚಿತ್ರ ಪಾಲ್ಗೊಳ್ಳುತ್ತಿಲ್ಲ. ಈ ವಿಷಯವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಖಚಿತಪಡಿಸಿದ್ದಾರೆ. ಕರ್ನಾಟಕ ಸರ್ಕಾರವು ಈ ಬಾರಿ ಮಹಿಳಾ ಸಬಲೀಕರಣದ ಪರಿಕಲ್ಪನೆಯಡಿ ಸಾಲುಮರದ ತಿಮ್ಮಕ್ಕ ಮತ್ತು ಸೂಲಗಿತ್ತಿ ನರಸಮ್ಮ ಅವರ ಟ್ಯಾಬ್ಲೋ ಮಾದರಿಯನ್ನು ಆಯ್ಕೆ ಸಮಿತಿಗೆ ಕಳುಹಿಸಿತ್ತು. ಅವು ಆಯ್ಕೆಯಾಗಿಲ್ಲ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೩. ಅಯೋಧ್ಯೆಯ ರಾಮ ಮಂದಿರದಲ್ಲಿ 2024 ಜನವರಿ 14ರ ಮಕರ ಸಂಕ್ರಾಂತಿಗೆ ಶ್ರೀರಾಮ ವಿರಾಜಮಾನ
ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದಲ್ಲಿ 2024ರ ಜನವರಿ 14ರ ಮಕರ ಸಂಕ್ರಾಂತಿ ಯಂದು ಶ್ರೀರಾಮನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗುವುದು ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಕಾರ್ಯದರ್ಶಿ ಚಂಪತ್‌ ರಾಯ್‌ ಶುಕ್ರವಾರ ತಿಳಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

4. ನಿರಾಣಿ-ಯತ್ನಾಳ್‌ ವಾಕ್ಸಮರ: ಅಪ್ಪನಿಗೆ ಹುಟ್ಟಿದ್ರೆ ಸಿಡಿ ಬಿಡುಗಡೆ ಮಾಡ್ಲಿ ಎಂದ ಬಸನಗೌಡ ಪಾಟೀಲ್‌
ವಿಜಯಪುರ: ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ (Panchamasali Reservation) ನೀಡಬೇಕು ಎಂಬ ವಿಚಾರಕ್ಕೆ ಸಂಬಂಧಿಸಿ ಬಿಜೆಪಿಯ ಇಬ್ಬರು ನಾಯಕರಾದ ಸಚಿವ ಮುರುಗೇಶ್‌ ನಿರಾಣಿ ಮತ್ತು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ನಡುವೆ ಮಾತಿನ ಸಮರ ಹದ್ದು ಮೀರಿದೆ. ಅದರ ಜತೆಗೆ ತೊಡೆ ತಟ್ಟುವಿಕೆ, ಆಣೆ ಪ್ರಮಾಣ, ಅಪ್ಪನಿಗೆ ಹುಟ್ಟಿದ ಮಾತುಗಳೆಲ್ಲ ಸರಾಗವಾಗಿಯೇ ಹರಿದಿವೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ವಿಸ್ತಾರ ಅಂಕಣ | ಈ ಇಬ್ಬರು ಭಾರತದ ಸಾಮಾಜಿಕ ಬದುಕಿನ ರಾಯಭಾರಿಗಳು!
ಸಮಾಜದಲ್ಲಿ ಹತ್ತುಹಲವು ಕೆಡುಕುಗಳನ್ನು ನೋಡಿ ಬೇಸತ್ತ ಜನರಿಗೆ ಹೀರಾಬೆನ್ ಮೋದಿ, ಸಿದ್ದೇಶ್ವರ ಸ್ವಾಮಿಯವರಂಥವರೇ ಮರಳುಗಾಡಿನಲ್ಲಿ ಸಿಗುವ ಓಯಸಿಸ್ ಗಳು. ಆ ಎರಡು ಸಾಕ್ಷಿಪ್ರಜ್ಞೆಗಳು ನಿರ್ಗಮಿಸಿದಾಗ ಸಮಾಜ ಎದ್ದು ನಿಂತು ನಮಿಸಿತು. ಈ ಇಬ್ಬರು ಮಹಾಚೇತನಗಳನ್ನು ನೆನಪಿಸಿಕೊಂಡಿದ್ದಾರೆ ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ ಅವರು ತಮ್ಮ ವಿಸ್ತಾರ ಅಂಕಣದಲ್ಲಿ. ಪೂರ್ಣ ಲೇಖನಕ್ಕೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ಕನ್ನಡ ಸಾಹಿತ್ಯ ಸಮ್ಮೇಳನ | ಮೀಸಲಾತಿ ವರ್ಗೀಕರಣ ವರದಿ ಪುನರ್‌ಪರಿಶೀಲನೆಗೆ ಸರ್ಕಾರಕ್ಕೆ ಮನವಿ
ಹಾವೇರಿ: ವಿವಿಧ ಸಮುದಾಯಗಳಿಗೆ ಮೀಸಲಾತಿ ನಿಗದಿಪಡಿಸುವ ವರದಿಯನ್ನು ಈಗಿನ ಪರಿಸ್ಥಿತಿಗೆ ಅನುಗುಣವಾಗಿ ಪುನರ್‌ಪರಿಶೀಲನೆ ನಡೆಸಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ ಹೇಳಿದ್ದಾರೆ. 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ʼಪಾಪು-ಚಂಪಾ ವೇದಿಕೆʼಯಲ್ಲಿ ಆಯೋಜಿಸಿದ್ದ ʼಕನ್ನಡಪರ ಮತ್ತು ಪ್ರಗತಿಪರ ವರದಿಗಳ ಅನುಷ್ಠಾನʼ ಗೋಷ್ಠಿಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಇನ್ನೊಂದು ವರದಿ | ಶಿವಶರಣರು ಹೊಸ ಧರ್ಮ ಸ್ಥಾಪಿಸಿದರು ಎನ್ನುವುದು ತಲೆಬುಡವಿಲ್ಲದ ವಾದ: ಡಾ. ಸಂಗಮೇಶ ಸವದತ್ತಿಮಠ ಆಕ್ರೋಶ

೭. ವಾರದ ವ್ಯಕ್ತಿ ಚಿತ್ರ | ರಸ್ತೆ ಕ್ರಾಂತಿಯ ರೂವಾರಿ ನಿತಿನ್‌ ಗಡ್ಕರಿ, ಅವರು ನಡೆದದ್ದೇ ಹೆದ್ದಾರಿ!
ಮೋದಿ ಸರ್ಕಾರದ ಸಚಿವ ಸಂಪುಟದ ಹಿರಿಯ ಸಚಿವ ನಿತಿನ್‌ ಗಡ್ಕರಿ ಅವರ ಸಾಧನೆಗಳ ಪಟ್ಟಿಯೂ ದೊಡ್ಡದು. ದೇಶದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ರಸ್ತೆಗಳ ನಿರ್ಮಾಣದಲ್ಲಿ ಕ್ರಾಂತಿಕಾರಕ ಬೆಳವಣಿಗೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಪೂರ್ಣ ಲೇಖನಕ್ಕೆ ಈ ಲಿಂಕ್‌ ಕ್ಲಿಕ್‌ ಮಾಡಿ

8. ನಾಳೆ ಭೂಮಿಗೆ ಅಪ್ಪಳಿಸಲಿದೆ 38 ವರ್ಷಗಳ ಹಳೆಯ ಉಪಗ್ರಹ; ಮನುಷ್ಯರ ಮೇಲೆ ಬೀಳುತ್ತಾ?
ವಾಷಿಂಗ್ಟನ್‌:
ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾಗಿರುವ ನಾಸಾ 38 ವರ್ಷಗಳ ಹಿಂದೆ ಉಡಾವಣೆ ಮಾಡಿದ್ದ ಉಪಗ್ರಹ ಇದೀಗ ಭೂಮಿಗೆ ಬೀಳುವುದಕ್ಕೆ ಸಿದ್ಧವಾಗಿದೆ. ಭಾನುವಾರ ರಾತ್ರಿ ಅಥವಾ ಸೋಮವಾರ ಬೆಳಗ್ಗೆ ಉಪಗ್ರಹವು ಭೂಮಿಗೆ ಅಪ್ಪಳಿಸಲಿದೆ ಎಂದಿದ್ದಾರೆ ಸಂಶೋಧಕರು. ಭೂಮಿಗೆ ಅಪ್ಪಳಿಸಲಿರುವ ಇಆರ್‌ಬಿಎಸ್‌ (Earth Radiation Budget Satellite-ERBS) ಎಂಬ ಉಪಗ್ರಹವನ್ನು ನಾಸಾ 1984ರಲ್ಲಿ ಯಶಸ್ವಿಯಾಗಿ ಉಡಾವಣೆ ಮಾಡಿತ್ತು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. ವಿಸ್ತಾರ Explainer | ಮೋದಿ ಅವಧಿಯಲ್ಲಿ ಅಧಿಕಾರಶಾಹಿ ವ್ಯವಸ್ಥೆ ಕ್ರಾಂತಿಕಾರಕವಾಗಿ ಬದಲಾಗಿದ್ದು ಹೇಗೆ? ಏನಿದು 360 ಡಿಗ್ರಿ ಪ್ರಯೋಗ?
ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಎಂಟು ವರ್ಷದಲ್ಲಿ ಅಧಿಕಾರಶಾಹಿಗೆ ಹೊಸ ವೇಗ ನೀಡಿದ್ದಾರೆ. ಬ್ರಿಟಿಷ್‌ ಪದ್ಧತಿ ಹಾಗೂ ಮನಸ್ಥಿತಿಗೆ ಇತಿಶ್ರೀ ಹಾಡಿದ್ದಾರೆ. ಹಾಗಾದರೆ, ಅಧಿಕಾರಶಾಹಿ ಸುಧಾರಣೆಗೆ ಮೋದಿ ತೆಗೆದುಕೊಂಡ ಕ್ರಮಗಳು ಯಾವವು? ಇಲ್ಲಿದೆ ವಿಸ್ತಾರ Explainer. ಪೂರ್ಣ ಮಾಹಿತಿ ಈ ಲಿಂಕ್‌ ಕ್ಲಿಕ್‌ ಮಾಡಿ

10. Kantara movie| ದೈವಸ್ಥಾನದಲ್ಲಿ ಕಾಂತಾರ ಕಾಳಗ: ಕೋರ್ಟ್‌ಗೆ ಹೋಗಿದ್ದ ವ್ಯಕ್ತಿಯ ಸಾವಿನ ಬಳಿಕ ಆತಂಕ
ಕಾಂತಾರ ಸಿನಿಮಾಕ್ಕೆ (Kantara movie) ಹೋಲಿಕೆ ಹೊಂದಿ ಭಾರಿ ವಿವಾದಕ್ಕೆ ಕಾರಣವಾಗಿದ್ದ ಪಡುಬಿದ್ರಿಯ ಪಡುಹಿತ್ಲು ಜಾರಂದಾಯ ದೈವಸ್ಥಾನದ ವಾರ್ಷಿಕ ನೇಮೋತ್ಸವವನ್ನು ಮುಂದಕ್ಕೆ ಹಾಕಲಾಗಿದೆ. ಭಾರಿ ಅಹಿತಕರ ಬೆಳವಣಿಗೆಗಳ ಹೊರತಾಗಿಯೂ ಒಂದು ತಂಡ ಜನವರಿ ಏಳರಂದೇ (ಶನಿವಾರ) ನೇಮೋತ್ಸವ ನಡೆಸುವುದಕ್ಕೆ ಸಿದ್ಧತೆ ನಡೆಸಿತ್ತು. ಆದರೆ, ಈ ವಿಚಾರ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತಿದ್ದಂತೆಯೇ ಶನಿವಾರಕ್ಕೆ ನಿಗದಿಯಾಗಿದ್ದ ನೇಮೋತ್ಸವವನ್ನು ಮುಂದೂಡಲಾಗಿದೆ. ಈ ವಿದ್ಯಮಾನದಲ್ಲಿ ಕಾಂತಾರ ಮಾದರಿಯಲ್ಲೊಂದು ಸಾವು ಸಂಭವಿಸಿದ್ದು ಚರ್ಚೆಗೆ ಕಾರಣವಾಗಿತ್ತು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಇತರ ಪ್ರಮುಖ ಸುದ್ದಿಗಳು
೧.Karnataka Election : ಇನ್ನು ಮೂರೇ ದಿನದಲ್ಲಿ ಸಂಪುಟ ವಿಸ್ತರಣೆ?; ಸಿಎಂ, ಬಿಎಸ್‌ವೈ ಹೇಳಿದ್ದೇನು?
೨. ಏರ್‌ ಇಂಡಿಯಾ ವಿಮಾನದಲ್ಲಿ ಮೂತ್ರ ಮಾಡಿದ ಪ್ರಕರಣ: ಬೆಂಗಳೂರಿನ ಗೆಸ್ಟ್​ಹೌಸ್​​ನಲ್ಲಿ ಅಡಗಿದ್ದ ಶಂಕರ್​ ಮಿಶ್ರಾ ಅರೆಸ್ಟ್
೩. Viral Video | ಹಾಲು ಮಾರುವುದಕ್ಕೆ ದುಬಾರಿ ಹಾರ್ಲೆ ಬೈಕ್‌! ವೈರಲ್‌ ಆದ ಹಾರ್ಲೆ ಮಿಲ್ಕ್‌ಮ್ಯಾನ್‌
೪. Honeybee attack | ಸ್ಟಡ್‌ ಫಾರಂನಲ್ಲಿ ಹೆಜ್ಜೇನು ದಾಳಿ: ಎರಡು ಬೆಲೆ ಬಾಳುವ ಕುದುರೆಗಳು ಒದ್ದಾಡಿ ಒದ್ದಾಡಿ ಸಾವು

Exit mobile version