ಬೆಂಗಳೂರು: ಎಐಸಿಸಿ ಅಧ್ಯಕ್ಷರಾಗಿ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ವಹಿಸಿಕೊಂಡಿದ್ದು, 22 ವರ್ಷದ ನಂತರ ಗಾಂಧಿ ಕುಟುಂಬ ಅಧಿಕಾರ ಕೇಂದ್ರದಿಂದ ಪಕ್ಕಕ್ಕೆ ಸರಿದಿದೆ. ಜೆಡಿಎಸ್‌ನಿಂದ ಮುನಿಸಿಕೊಂಡು ಸಮಾಧಾನವಾಗಿದ್ದ ಜಿ.ಟಿ. ದೇವೇಗೌಡ ಮತ್ತಷ್ಟು ಹತ್ತಿರವಾಗಿದ್ದಾರೆ, ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ತಂಗಳು ಆಹಾರ ನೀಡಿದ ವಿಚಾರ ಚರ್ಚೆಯಾಗುತ್ತಿದೆ, ರಾಜ್ಯದ ವಿವಿಧೆಡೆ ಕಲುಷಿತ ನೀರಿನ ಸಮಸ್ಯೆ ಉಲ್ಬಣಿಸಿದೆ. ಉಕ್ರೇನ್ ಮೇಲೆ ಅಣ್ವಸ್ತ್ರ ಪ್ರಯೋಗ ಮಾಡದಂತೆ ಭಾರತವು ರಷ್ಯಾವನ್ನು ಆಗ್ರಹಿಸಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. ಕಾಂಗ್ರೆಸ್‌ನಲ್ಲಿ ಖರ್ಗೆ ಯುಗಾರಂಭ: ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ
ಅಖಿಲ ಭಾರತ ಕಾಂಗ್ರೆಸ್ ಕಮಿಟಿ(ಎಐಸಿಸಿ) ಅಧ್ಯಕ್ಷರಾಗಿ (Congress President) ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಬೆಳಗ್ಗೆ ಅಧಿಕಾರ ಸ್ವೀಕರಿಸಿದರು. 22 ವರ್ಷದಲ್ಲಿ ಇದೇ ಮೊದಲ ಬಾರಿ ಗಾಂಧಿ ಮನೆತನದ ಹೊರತಾದ ವ್ಯಕ್ತಿಯೊಬ್ಬರು ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಹಾಗೆಯೇ, ಕರ್ನಾಟಕದಿಂದ ಕಾಂಗ್ರೆಸ್ ಅಧ್ಯಕ್ಷರಾಗುತ್ತಿರುವ ಎರಡನೇ ವ್ಯಕ್ತಿ ಮಲ್ಲಿಕಾರ್ಜುನ ಖರ್ಗೆ ಅವರಾಗಿದ್ದಾರೆ. ಅಕ್ಟೋಬರ್ 17ರಂದು ನಡೆದ ಎಐಸಿಸಿ ಅಧ್ಯಕ್ಷ ಹುದ್ದೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು, ತಿರುವನಂತಪುರ ಕ್ಷೇತ್ರ ಸಂಸದ ಶಶಿ ತರೂರ್ ಅವರನ್ನು ಸೋಲಿಸಿದ್ದರು. ಈ ನಡುವೆ, ಖರ್ಗೆ ಅವರು ಸಂಚಾಲನಾ ಸಮಿತಿಯನ್ನು ರಚಿಸಿದ್ದಾರೆ. ಇದರಲ್ಲಿ ರಾಜ್ಯದ ಮೂವರಿದ್ದಾರೆ. I ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
2. ಮಲ್ಲಿಕಾರ್ಜುನ ಖರ್ಗೆ ನೆಲಮೂಲದ ನಾಯಕ ಎಂದು ಬಣ್ಣಿಸಿದ ಸೋನಿಯಾ ಗಾಂಧಿ
ನನಗೆ ಈಗ ತುಂಬ ಸಂತೋಷವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ನಿಮ್ಮ ವಿವೇಕದಿಂದ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದೀರಿ. ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ತಳಸ್ಪರ್ಶಿ, ನೆಲಮೂಲದ ನಾಯಕರಾಗಿದ್ದಾರೆ. ಸಾಧಾರಣ ಕಾರ್ಯಕರ್ತರಾಗಿ ಇಂದು ಈ ಮಟ್ಟಕ್ಕೆ ಬೆಳೆದಿದ್ದಾರೆ. ಅವರ ನಾಯಕತ್ವದಲ್ಲಿ ಪಕ್ಷಕ್ಕೆ ಪ್ರೇರಣೆ ಸಿಗಲಿದೆ, ಸಂದೇಶ ರವಾನೆಯಾಗಲಿದೆ ಎಂಬ ವಿಶ್ವಾಸ ನನಗೆ ಇದೆ ಎಂದು ಸೋನಿಯಾ ಗಾಂಧಿ ಅವರು ಹೇಳಿದರು. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧಿಕಾರ ಹಸ್ತಾಂತರ ಸಂದರ್ಭದಲ್ಲಿ ಮಾತನಾಡಿದ ಸೋನಿಯಾ ಗಾಂಧಿ ಅವರು, ನನಗೆ ಇಷ್ಟು ದಿನ ಪ್ರೀತಿ, ಗೌರವವಗಳನ್ನು ನೀವು ನೀಡಿದ್ದೀರಿ. ಇದು ನನಗೆ ಗೌರವದ ವಿಷಯವಾಗಿದೆ. ನನ್ನ ಕೊನೆಯ ಉಸಿರು ಇರೋವರೆಗೆ ಕಾಪಿಟ್ಟುಕೊಳ್ಳುತ್ತೇನೆ. ನನ್ನನ್ನು ನಂಬಿ ಬಹುದೊಡ್ಡ ಜವಾಬ್ದಾರಿಯನ್ನು ಈ ಹಿಂದೆ ನೀಡಿದ್ದೀರಿ. ಅದನ್ನು ನಿರ್ವಹಿಸಿದ್ದೇನೆ. ಆ ಜವಾಬ್ದಾರಿಯಿಂದ ನಾನೀಗ ಮುಕ್ತನಾಗಿದ್ದೇನೆ. ಈ ಸಂದರ್ಭವನ್ನು ಬಳಸಿಕೊಂಡು ಎಲ್ಲರಿಗೂ ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. Election 2023 | ಮೂರೂವರೆ ವರ್ಷದ ಬಳಿಕ ಜೆಡಿಎಸ್ ಕಚೇರಿಗೆ ಜಿಟಿಡಿ; ಸಿಹಿ ತಿನ್ನಿಸಿದ ಎಚ್‌ಡಿಕೆ
ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಬರೋಬ್ಬರಿ ಮೂರೂವರೆ ವರ್ಷಗಳ ಬಳಿಕ ಬೆಂಗಳೂರಿನಲ್ಲಿರುವ ಜೆಡಿಎಸ್ ಕಚೇರಿಯ ಮೆಟ್ಟಿಲು ಹತ್ತಿದ್ದಾರೆ. ಈ ಮೂಲಕ ಜೆಡಿಎಸ್ ಪರವಾಗಿ ಚುನಾವಣಾ (Election 2023) ಅಖಾಡಕ್ಕಿಳಿಯುವ ಸೂಚನೆಯನ್ನೂ ನೀಡಿದ್ದಾರೆ. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಜಿಟಿಡಿಗೆ ಸಿಹಿ ತಿನ್ನಿಸಿ ಬರಮಾಡಿಕೊಂಡಿದ್ದಾರೆ. ವೈಮನಸ್ಸಿನ ಕಾರಣ ಜಿ.ಟಿ. ದೇವೇಗೌಡ ಅವರು ಮೂರೂವರೆ ವರ್ಷದಿಂದ ಬೆಂಗಳೂರಿನ ಜೆಡಿಎಸ್ ಕಚೇರಿಯ ಜೆಪಿ ಭವನಕ್ಕೆ ಭೇಟಿ ನೀಡಿದರು. ಜತೆಗೆ ಸಿಹಿತಿಂಡಿಯ ಬಾಕ್ಸ್ ಅನ್ನೂ ಹೊತ್ತು ತಂದಿದ್ದರು. ಕಚೇರಿಗೆ ಬರುತ್ತಿದ್ದಂತೆ ಎದುರುಗೊಂಡ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸಿಹಿ ತಿನ್ನಿಸಿ ಶುಭ ಕೋರಿದರು. ಇದಕ್ಕೂ ಮೊದಲು ಜಿಟಿಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ತೆರಳಿ ಸಿಹಿ ತಿನ್ನಿಸಿ ಬಂದಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. ಅಕ್ಷತಾ ಮೂರ್ತಿ-ರಿಷಿ ಸುನಕ್ ಲವ್ ಸ್ಟೋರಿ ಶುರುವಾಗಿದ್ದು ಎಲ್ಲಿ? ಇದು ಮಿಲಿಯನ್ ಡಾಲರ್ ಪ್ರಶ್ನೆಯಲ್ಲ!
ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಅಳಿಯ ರಿಷಿ ಸುನಕ್ ( Rishi Sunak) ಬ್ರಿಟನ್‌ನ ನೂತನ ಪ್ರಧಾನಿಯಾದ ಬಳಿಕ, ಸುನಕ್ ಹಾಗೂ ಅಕ್ಷತಾ ಮೂರ್ತಿಯವರ ಲವ್ ಸ್ಟೋರಿ, ಮದುವೆ ಬಗ್ಗೆ ಕುತೂಹಲದಿಂದ ಇಂಟರ್‌ನೆಟ್‌ನಲ್ಲಿ ಜಾಲಾಡುವವರ ಸಂಖ್ಯೆ ಹೆಚ್ಚಳವಾಗಿದೆ. ಹಾಗಾದರೆ, ವಿಶ್ವದ ಗಮನ ಸೆಳೆದಿರುವ ಈ ಜೋಡಿ ಭೇಟಿಯಾಗಿದ್ದೆಲ್ಲಿ? ಪ್ರೀತಿ ಹುಟ್ಟಿದ್ದು ಎಲ್ಲಿ? ಇವರ ಮದುವೆ ನಡೆದದ್ದೆಲ್ಲಿ? ಪುರೋಹಿತರು, ಗುರು ಹಿರಿಯರು, ಬಂಧು ಬಳಗದ ಸಮ್ಮುಖದಲ್ಲಿ ಅದ್ದೂರಿಯಾಗಿ ವಿವಾಹವಾದರೇ, ಯಾರೆಲ್ಲ ಗಣ್ಯರು ಬಂದಿದ್ದರು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್! ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. ಬಂಡೆ ಮಠ ಸ್ವಾಮೀಜಿ ವಿಡಿಯೊ ವೈರಲ್, ಮೂವರು ಮಹಿಳೆಯರ ಸಹಿತ 7 ಮಂದಿ ಪೊಲೀಸ್ ಬಲೆಯಲ್ಲಿ
ಮಾಗಡಿಯ ಬಂಡೆ ಮಠದ ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ ಹೊಸ ತಿರುವುಗಳನ್ನು ಪಡೆದಿದೆ. ಒಂದು ಕಡೆ ಮಹಿಳೆಯೊಬ್ಬರ ಜೊತೆ ಸ್ವಾಮಿಜಿ ವಿಡಿಯೊ ಕಾಲ್ ಮೂಲಕ ಮಾತನಾಡುವ ವಿಡಿಯೊ ವೈರಲ್ ಆಗಿದೆ. ಇನ್ನೊಂದು ಕಡೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಮಹಿಳೆಯರು ಸೇರಿದಂತೆ ಏಳು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Contaminated water | ರಾಜ್ಯದ ವಿವಿಧೆಡೆ ಕಲುಷಿತ ನೀರು ಸಮಸ್ಯೆ: ಶಹಾಪುರದಲ್ಲಿ ಮತ್ತೊಬ್ಬರ ಸಾವು
ಶಹಾಪುರ ತಾಲೂಕಿನ ಹೋತಪೇಟ ಗ್ರಾಮದಲ್ಲಿ ಕಲುಷಿತ ನೀರು (Contaminated water) ಸೇವಿಸಿ ಇಬ್ಬರು ಮೃತಪಟ್ಟಿರುವ ಬೆನ್ನಲ್ಲೇ ಈಗ ಮತ್ತೊಬ್ಬರು ಅಸುನೀಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ೩ಕ್ಕೇರಿದಂತಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ. ರಾಯಚೂರು ನಗರ ಭಾಗದಲ್ಲಿ ಸುಮಾರು ನಾಲ್ಕು ತಿಂಗಳ ಹಿಂದೆ ಕಲುಷಿತ ನೀರು ಸೇವನೆ (Contaminated water) ಮಾಡಿದ್ದ 7 ಜನರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕೆಲ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಆದರೂ ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರಿದಿದ್ದು, ಗ್ರಾಮೀಣ ತಾಲೂಕಿನ ಬಿಚ್ಚಾಲಿ ಗ್ರಾಮದಲ್ಲಿರುವ ಬಹು ಗ್ರಾಮ ಕುಡಿಯುವ ನೀರಿನ ಘಟಕದಲ್ಲಿ ಇಲಿ ಸತ್ತು ಬಿದ್ದರೂ ಅದೇ ನೀರನ್ನೇ ಅಧಿಕಾರಿಗಳು ಸರಬರಾಜು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುದೇನೂರು ಗ್ರಾಮದಲ್ಲಿ ಕಲುಷಿತ ನೀರು (Contaminated water) ಸೇವಿಸಿ ಐವತ್ತಕ್ಕೂ ಅಧಿಕ ಗ್ರಾಮಸ್ಥರು ಅಸ್ವಸ್ಥಗೊಂಡಿದ್ದು, ಸ್ಥಳೀಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. ಕಾಂಗ್ರೆಸ್ ಪ್ರವಾಸಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್; ಸಿದ್ದರಾಮಯ್ಯ, ಡಿಕೆಶಿಗೆ ತಲಾ 14 ಲೋಕಸಭಾ ಕ್ಷೇತ್ರ ಹಂಚಿಕೆ
ಭಾರತ್ ಜೋಡೋ ಯಾತ್ರೆಯ ನಡುವೆಯೇ ರಾಜ್ಯ ಕಾಂಗ್ರೆಸ್ ನಾಯಕರ ಪ್ರತ್ಯೇಕ ಪ್ರವಾಸಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ರಾಜ್ಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪ್ರತ್ಯೇಕ ಪ್ರವಾಸಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿರಿಯ ನಾಯಕಿ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಹಮತ ಸೂಚಿಸಲಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯದ ಹಿನ್ನೆಲೆಯಲ್ಲಿ ಪ್ರತ್ಯೇಕ ಪ್ರವಾಸ ಬೇಡ ಎಂದು ಕೆಲ ಕೈ ನಾಯಕರು ಸಲಹೆ ನೀಡಿದ್ದರು. ಆದರೆ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪ್ರತ್ಯೇಕ ಪ್ರವಾಸಕ್ಕೆ ಹೈಕಮಾಂಡ್ ಅನುಮತಿ ಸಿಕ್ಕಿದ್ದು, ನವೆಂಬರ್ ತಿಂಗಳಲ್ಲಿ ಉಭಯ ನಾಯಕರು ತಲಾ 14 ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮಾಡಲು ಸೂಚನೆ ನೀಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. Head Bush Movie | ದೂರಿತ್ತ ವೀರಗಾಸೆ ಕಲಾವಿದರು, ವೀರಶೈವ ಪುರೋಹಿತರು; ಕ್ಷಮೆ ಯಾಚಿಸಿದ ಡಾಲಿ ಧನಂಜಯ
ಅಂಡರ್ವಲ್ಡ್ ಡಾನ್ ಜಯರಾಜ್ ಜೀವನ ವೃತ್ತಾಂತದ ಕಥಾ ಹಂದರ ಹೊಂದಿರುವ ಡಾಲಿ ಧನಂಜಯ್ ಅಭಿಯನಯದ ಹೆಡ್ ಬುಷ್ ಸಿನಿಮಾಕ್ಕೆ (Head Bush Movie) ಮತ್ತೊಂದು ಸಂಕಷ್ಟ ಎದುರಾಗಿದೆ. ಈ ಚಿತ್ರದಲ್ಲಿ ವೀರಗಾಸೆ ಕಲಾವಿದರಿಗೆ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಪೊಲೀಸ್ ಇಲಾಖೆಗೆ ದೂರು ನೀಡಲಾಗಿದ್ದು, ಕೂಡಲೇ ಚಲನಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Dolly Dhananjay | ಹೆಡ್ ಬುಷ್ ಸಿನಿಮಾದ ವೀರಗಾಸೆ ಕುರಿತ ವಿವಾದಕ್ಕೆ ಡಾಲಿ ಧನಂಜಯ್ ನೀಡಿದ ಸ್ಪಷ್ಟನೆ ಏನು?
9. ವಾಟ್ಸ್ಆ್ಯಪ್ ಏಕಾಏಕಿ ಸ್ಥಗಿತವಾಗಿದ್ದೇಕೆ? ವರದಿ ಕೊಡಿ ಎಂದ ಕೇಂದ್ರ ಸರ್ಕಾರ
ಮಂಗಳವಾರ ವಾಟ್ಸ್ಆ್ಯಪ್ ಬಳಕೆಯಲ್ಲಿ 2 ಗಂಟೆ ವ್ಯತ್ಯಯವಾಗಿತ್ತು. ಈ ಬಗ್ಗೆ ಸಮಗ್ರ ವರದಿಯನ್ನು ಸಲ್ಲಿಸುವಂತೆ ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್ ಸಚಿವಾಲಯವು ಕೇಳಿಕೊಂಡಿದೆ. ವಾಟ್ಸ್ಆ್ಯಪ್ (WhatsApp Outage) ಈ ಬಗ್ಗೆ ತನ್ನ ವರದಿಯನ್ನು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡಕ್ಕೆ ತನ್ನ ವರದಿಯನ್ನು ಸಲ್ಲಿಸಬೇಕಿದೆ. ಈ ಸಂಸ್ಥೆಯಲ್ಲಿ ಕೇಂದ್ರ ಮಾಹಿತಿ ತಂತ್ರಜ್ಞಾನ ಹಾಗೂ ಎಲೆಕ್ಟ್ರಾನಿಕ್ಸ್ ಸಚಿವಾಲಯದಡಿ ಕೆಲಸ ಮಾಡುತ್ತಿದೆ. ಸೇವೆಯಲ್ಲಿ ವ್ಯತ್ಯಯವಾಗುತ್ತದೆಯೋ ಆಗ ಸಚಿವಾಲಯವು ಮಧ್ಯೆ ಪ್ರವೇಶಿಸಿ ಸಂಬಂಧಿಸಿದ ಕಂಪನಿಯಂದ ಈ ಬಗ್ಗೆ ಮಾಹಿತಿ ಸಹಿತ ವರದಿಯನ್ನು ಪಡೆದುಕೊಳ್ಳುತ್ತದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. T20 World Cup | ತಂಗಳು ಆಹಾರ ತಿಂದು ಪ್ರಾಕ್ಟೀಸ್ ಮಾಡುವುದೇ ಹೇಗೆ? ಐಸಿಸಿ ಆತಿಥ್ಯಕ್ಕೆ ಸೆಹ್ವಾಗ್ ಕೆಂಡಾಮಂಡಲ
ಸಿಡ್ನಿಯಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ (T20 World Cup) ತಂಗಳು ಆಹಾರ ಕೊಟ್ಟಿರುವ ವಿಷಯ ಭಾರತ ತಂಡದ ಮಾಜಿ ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರಿಗೆ ಕೋಪ ತರಿಸಿದೆ. ಆಟಗಾರರ ಕಾಳಜಿ ನೋಡಿಕೊಳ್ಳಬೇಕಾದ ಐಸಿಸಿಯ ಕ್ರಮವನ್ನು ಅವರು ಟ್ವೀಟ್ ಮಾಡಿ ವಿರೋಧಿಸಿದ್ದಾರೆ. ವಿದೇಶದಲ್ಲಿ ಕ್ರೀಡಾಪಟುಗಳಿಗೆ ಉತ್ತಮ ಆಹಾರ ದೊರಕುತ್ತದೆ ಎಂಬದು ಭ್ರಮೆಯಾಗಿದೆ ಎಂದು ಅವರು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಸುದ್ದಿಗಳು
1️⃣Nuclear Weapons | ಯಾವುದೇ ಕಾರಣಕ್ಕೂ ಅಣ್ವಸ್ತ್ರ ಬಳಕೆ ಕೂಡದು, ರಷ್ಯಾಗೆ ರಾಜನಾಥ್ ಸಿಂಗ್ ಆಗ್ರಹ
2️⃣ Lifestyle Diseases | ಬದಲಾದ ಜೀವನ ವಿಧಾನ, 50 ಕೋಟಿ ಜನಕ್ಕೆ ರೋಗ ಬರಲಿವೆ, ಇನ್ನಾದರೂ ನಿಧಾನ
3️ Unilever | ಡವ್ ಡ್ರೈ ಶ್ಯಾಂಪೂಗಳ ಹಿಂತೆಗೆತದಿಂದ ಭಾರತಕ್ಕೆ ಪರಿಣಾಮವಿಲ್ಲ : ಎಚ್‌ಯುಎಲ್
4️⃣ರೂಪಾಯಿ ಮೌಲ್ಯ ಕುಸಿತ ತಪ್ಪಿಸಲು ನೋಟ್ ಮೇಲೆ ಗಣೇಶ, ಲಕ್ಷ್ಮೀ ಚಿತ್ರ ಮುದ್ರಿಸಿ: ಕೇಜ್ರಿವಾಲ್ ಸಲಹೆ!
5️⃣Kantara Movie | ʻಹ್ಯಾಟ್ಸ್ ಆಫ್ ರಿಷಬ್ʼಎಂದು ಕಾಂತಾರ ಸಿನಿಮಾ ಹೊಗಳಿದ ಸ್ಟಾರ್ ರಜನಿಕಾಂತ್!