1. Modi In Karnataka: ಎಚ್‌ಎಎಲ್ ಕುರಿತು ಸುಳ್ಳು ಹೇಳಿದವರ ಬಣ್ಣ ಬಯಲಾಗಿದೆ: ಕಾಂಗ್ರೆಸ್‌ಗೆ ತಿರುಗೇಟು ನೀಡಿದ ಪ್ರಧಾನಿ ನರೇಂದ್ರ ಮೋದಿ
ದೇಶದ ಪ್ರಮುಖ ರಕ್ಷಣಾ ಉಪಕರಣ ಉತ್ಪಾದನಾ ಸಂಸ್ಥೆ ಎಚ್‌ಎಎಲ್ (Modi In Karnataka) ಅನ್ನು ಕೇಂದ್ರ ಸರ್ಕಾರವು ಮುಳುಗಿಸುತ್ತಿದೆ ಎಂದು ಈ ಹಿಂದೆ ಪ್ರತಿಭಟನೆ ನಡೆಸಿದ್ದ, ಸಂಸತ್ತಿನಲ್ಲಿ ಗದ್ದಲ ಎಬ್ಬಿಸಿದ ಕಾಂಗ್ರೆಸ್ ಹಾಗೂ ಇನ್ನಿತರ ಪ್ರತಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಲಘು ಎಚ್‌ಎಎಲ್‌ನ ಉಪಯೋಗಿ ಉಹೆಲಿಕಾಪ್ಟರ್ ಘಟಕ ಉದ್ಘಾಟನೆ, ಜಲಜೀವನ್ ಮಿಷನ್ ಯೋಜನೆಗಳ ಅಡಿಗಲ್ಲು ಹಾಗೂ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್ ಕೈಗಾರಿಕಾ ಕಾರಿಡಾರ್‌ನಲ್ಲಿ ತುಮಕೂರು ಕೈಗಾರಿಕಾ ಟೌನ್‌ಷಿಪ್ ಅಡಿಗಲ್ಲು ಕಾರ್ಯಕ್ರಮದಲ್ಲಿ ಮೋದಿ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Modi In Karnataka: ಎಚ್‌ಎಎಲ್ ಕುರಿತು ಸುಳ್ಳು ಹೇಳಿದವರ ಬಣ್ಣ ಬಯಲಾಗಿದೆ: ಕಾಂಗ್ರೆಸ್‌ಗೆ ತಿರುಗೇಟು ನೀಡಿದ ಪ್ರಧಾನಿ ನರೇಂದ್ರ ಮೋದಿ
ಹೆಚ್ಚಿನ ಓದಿಗಾಗಿ: Modi In Karnataka: ಶಿವಕುಮಾರ ಸ್ವಾಮೀಜಿಗಳ ಪರಂಪರೆಯನ್ನು ಸಿದ್ದಲಿಂಗ ಶ್ರೀ ಮುಂದುವರಿಸಿದ್ದಾರೆ: ಪ್ರಧಾನಿ ಮೋದಿ ಶ್ಲಾಘನೆ
ಕರ್ನಾಟಕಕ್ಕೆ ಮೋದಿ ಭೇಟಿಯ ಸಮಸ್ತ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
2. India Energy week 2023 : ಭವಿಷ್ಯದ ಇಂಧನ ಇ20 ಅನಾವರಣ, ಶಕ್ತಿ ಕೇಂದ್ರವಾಗಿ ಬೆಳಗಲಿದೆ ಭಾರತ
ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಭಾರತ ಇಂಧನ ಸಪ್ತಾಹ-೨೦೨೩ (India Energy week 2023) ಫೆಬ್ರವರಿ 6ರಿಂದ 8ರವರೆಗೆ ನಡೆಯಲಿದೆ. ಪ್ರಧಾನಿ…ನರೇಂದ್ರ ಮೋದಿ ಅವರು ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಸೋಮವಾರ ಬೆಳಗ್ಗೆ ೧೧.೩೦ಕ್ಕೆ ಸಪ್ತಾಹವನ್ನು ಉದ್ಘಾಟನೆ ಮಾಡಲಿದ್ದು, ಇದು ಅನೇಕ ಹೊಸತುಗಳಿಗೆ ನಾಂದಿಯಾಗಲಿದೆ. ಇದು ಶಕ್ತಿ ಪರಿವರ್ತನೆಯ ಶಕ್ತಿ ಕೇಂದ್ರವಾಗಿ ಭಾರತದ ಏರುತ್ತಿರುವ ಪರಾಕ್ರಮವನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: E20 Fuel : ಮೋದಿ ಬಿಡುಗಡೆಗೊಳಿಸಿದ E20 ಫ್ಯುಯೆಲ್, ಏನಿದು? ಯಾವೆಲ್ಲ ವಾಹನಗಳು ಬಳಸಬಹುದು?
3. Turkey Earthquake: ಟರ್ಕಿಯಲ್ಲಿ ಎರಡನೇ ಬಾರಿಗೆ ಕಂಪಿಸಿದ ಭೂಮಿ, ಮೃತರ ಸಂಖ್ಯೆ 1800ಕ್ಕೆ ಏರಿಕೆ
ಸೋಮವಾರ ಬೆಳಗಿನ ಜಾವ ಟರ್ಕಿಯಲ್ಲಿ ಸಂಭವಿಸಿದ 7.8 ತೀವ್ರತೆಯ ಭೂಕಂಪಕ್ಕೆ ಪ್ರಮುಖ ನಗರಗಳು ನೆಲಸಮವಾಗಿವೆ(Turkey Earthquake). ಹಾಗೆಯೇ ಸಂಜೆಯಲ್ಲಿ ಎರಡನೇ ಬಾರಿಗೆ 7.5 ತೀವ್ರತೆಯಷ್ಟು ಭೂಮಿ ಕಂಪಿಸಿದ್ದು, ಆಗ್ನೇಯ ಟರ್ಕಿ ಹೆಚ್ಚು ಬಾಧಿತವಾಗಿದೆ. ಒಟ್ಟಾರೆ ಈವರೆಗೆ ಮೃತಪಟ್ಟವರ ಸಂಖ್ಯೆ 1800 ದಾಟಿದೆ. ಭೂಕಂಪದ ತೀವ್ರತೆ ಸಿರಿಯಾಗೂ ತಟ್ಟಿದ್ದು, ಅಲ್ಲಿಯೂ ಸಾಕಷ್ಟು ಜನರು ಮೃತಪಟ್ಟಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. HD Kumaraswamy : ಬ್ರಾಹ್ಮಣ ಸಿಎಂಗೆ ವಿರೋಧವಿಲ್ಲ, ಪೇಶ್ವೆಗಳ ಡಿಎನ್‌ಎ ಹೊತ್ತವರು ಬೇಕಾ ಎನ್ನುವುದಷ್ಟೇ ನನ್ನ ಪ್ರಶ್ನೆ ಎಂದ ಕುಮಾರಸ್ವಾಮಿ
ಮರಾಠಿ ಪೇಶ್ವೆಗಳ ಡಿಎನ್ಎ ಇರುವ ವ್ಯಕ್ತಿಯನ್ನು ಕರ್ನಾಟಕಕ್ಕೆ ಮುಖ್ಯಮಂತ್ರಿ ಮಾಡಲು
ಬಿಜೆಪಿ ಮತ್ತು ಆರ್ ಎಸ್ ಎಸ್ ಹೊರಟಿವೆ ಎಂದು ಹೇಳಿದ್ದೇನೆಯೇ ಹೊರತು, ರಾಜ್ಯದ ಬ್ರಾಹ್ಮಣ ಸಮುದಾಯವನ್ನು ನಾನೆಲ್ಲೂ ನಿಂದಿಸಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಪುನರುಚ್ಚರಿಸಿದರು. ಯಶವಂತಪುರ ವಿಧಾನಸಭೆ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನ್ನ ಹೇಳಿಕೆಯನ್ನು ತಿರುಚುವ ಪ್ರಯತ್ನವನ್ನು ವ್ಯವಸ್ಥಿತವಾಗಿ ನಡೆಸಲಾಗುತ್ತಿದೆಯೇ ಹೊರತು ನಾನು ಎತ್ತಿದ ವಿಷಯದ ಬಗ್ಗೆ ಚರ್ಚೆ ಮಾಡುತ್ತಿಲ್ಲ ಎಂದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. BKS Varma Death News : ಖ್ಯಾತ ಕಲಾವಿದ ಬಿ.ಕೆ.ಎಸ್. ವರ್ಮಾ ನಿಧನ
ಜನಮಾನಸದಲ್ಲಿ “ಅಭಿನವ ರವಿವರ್ಮʼʼ ಎಂದೇ ಖ್ಯಾತರಾದ ಬಿ.ಕೆ.ಎಸ್. ವರ್ಮಾ (BKS Varma) ಇಂದು ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ಹೃದಯದ ಸಮಸ್ಯೆಯಿಂದಾಗಿ ಕಳೆದ ಎರಡು ದಿನಗಳಿಂದ ಹೆಬ್ಬಾಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಬೆಳಗ್ಗೆ 9.15 ರ ವೇಳೆಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: BKS Varma Death News : ದೇವರನ್ನೇ ಧರೆಗಿಳಿಸಿದ ದೈವದತ್ತ ಪ್ರತಿಭೆ ಬಿ.ಕೆ.ಎಸ್ ವರ್ಮಾ; ವರ್ಮ ಸರ್‌ನೇಮ್ ಬಂದಿದ್ದು ಹೇಗೆ?
6. Grammy Awards 2023: ಕನ್ನಡಿಗ ಸಂಗೀತ ನಿರ್ದೇಶಕ ರಿಕ್ಕಿ ಕೇಜ್‌ಗೆ 3ನೇ ಗ್ರ್ಯಾಮಿ ಪ್ರಶಸ್ತಿ
ಕನ್ನಡಿಗ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ (Ricky Kej) ಈ ವರ್ಷದ ಗ್ರ್ಯಾಮಿ ಪ್ರಶಸ್ತಿ (Grammy Awards 2023) ಗೆದ್ದುಕೊಂಡಿದ್ದಾರೆ. ಈ ಮೂಲಕ ದೇಶಕ್ಕೆ, ನಾಡಿಗೆ ಹೆಮ್ಮೆ ತಂದಿರುವ ಈ ಸಂಗೀತ ನಿರ್ದೇಶಕನ ಮೂರನೇ ಗ್ರ್ಯಾಮಿ ಅವಾರ್ಡ್ ಇದಾಗಿದೆ. ಇದರೊಂದಿಗೆ, ಮೂರು ಗ್ರ್ಯಾಮಿ ಪ್ರಶಸ್ತಿ ಗಳಿಸಿರುವ ಏಕೈಕ ಜೀವಂತ ಭಾರತೀಯ ಸಂಗೀತ ನಿರ್ದೇಶಕ ಇವರಾಗಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Grammy awards 2023: ಯಾರು ಈ ರಿಕ್ಕಿ ಕೇಜ್? ಕನ್ನಡಿಗನ ವಿವರ ಇಲ್ಲಿದೆ ನೋಡಿ, ಅವರ ಮ್ಯೂಸಿಕ್ ಇಲ್ಲಿ ಕೇಳಿ
7. Parliament Session: ಸಂಸತ್ತಿನಲ್ಲಿ ಅದಾನಿ ಗಲಾಟೆ, ಕಲಾಪ ಮುಂದೂಡಿಕೆ; ಗಾಂಧಿ ಪ್ರತಿಮೆ ಎದುರು ಪ್ರತಿಪಕ್ಷಗಳ ಪ್ರತಿಭಟನೆ
ಅದಾನಿ ಷೇರು ಅವ್ಯವಹಾರ ವಿಷಯವು ಸೋಮವಾರ ಸಂಸತ್ತಿನಲ್ಲಿ (Parliament Session) ಪ್ರತಿಧ್ವನಿಸಿತು. ಈ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಪ್ರತಿಪಕ್ಷಗಳು ಆಗ್ರಹಿಸಿದವು. ಸರ್ಕಾರ ಸೊಪ್ಪು ಹಾಕದ್ದರಿಂದ ಮತ್ತೆ ಗಲಾಟೆ ಶುರುವಾಯಿತು. ವಿಶೇಷವಾಗಿ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಅದಾನಿ ಕಂಪನಿಗಳು ಷೇರು ವ್ಯವಹಾರ ಕುರಿತು ಚರ್ಚೆಗೆ ಪಟ್ಟು ಹಿಡಿದ್ದರಿಂದ ಕಲಾಪ ನಡೆಸುವುದು ದುಸ್ತರವಾಯಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Adani Group: ಹೂಡಿಕೆದಾರರ ವಿಶ್ವಾಸ ವೃದ್ಧಿಗೆ ಅವಧಿಗೆ ಮುನ್ನ 8,900 ಕೋಟಿ ರೂ. ಸಾಲ ಮರು ಪಾವತಿಗೆ ಅದಾನಿ ಸಜ್ಜು
8. Modi in Karnataka : ಮೋದಿಗೆ ಸಿದ್ದರಾಮಯ್ಯ 21 ಪ್ರಶ್ನೆ; ಅದಾನಿ, ಎಚ್‌ಎಎಲ್, ವಿದ್ಯುತ್ ಸೇರಿ ನಾನಾ ವಿಷಯಗಳ ಮೂಲಕ ಕೆಣಕಿದ ಕೈ ನಾಯಕ
ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬಂದಾಗಲೆಲ್ಲ (Modi in Karnataka) ಹಲವು ಪ್ರಶ್ನೆಗಳ ಮೂಲಕ ಕೆಣಕುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈ ಬಾರಿಯೂ ೨೧ ಪ್ರಶ್ನೆಗಳನ್ನು ಕೇಳಿದ್ದಾರೆ. ʻʻಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರಿಗೆ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರಿಂದ 21 ಪ್ರಶ್ನೆಗಳುʼʼ ಎಂಬ ಪ್ರಶ್ನಾವಳಿಯನ್ನೇ ಅವರು ಮುಂದಿಟ್ಟಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
೯. Tejaswi surya : ರೈತರ ಸಾಲ ಮನ್ನಾ ಮಾಡುವುದರಿಂದ ದೇಶಕ್ಕೆ ನಷ್ಟ ಎಂದು ಹೇಳಿದ ಸಂಸದ ತೇಜಸ್ವಿ ಸೂರ್ಯ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ರೈತರ ಸಾಲ ಮನ್ನಾದಂಥ ದೇಶಕ್ಕೆ ನಷ್ಟ ಉಂಟು ಮಾಡುವ ಯೋಜನೆಗಳನ್ನು ಮಾಡುವುದಿಲ್ಲ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಮತ್ತು ಬಿಜೆಪಿ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ (Thjaswi surya) ಹೇಳಿದ್ದಾರೆ. ಈ ನಡುವೆ, ರೈತರ ಸಾಲ ಮನ್ನಾ ಮಾಡುವುದು ದೇಶಕ್ಕೆ ನಷ್ಟವೇ ಎನ್ನುವ ಪ್ರಶ್ನೆಯನ್ನೂ ಅವರ ಮಾತು ಹುಟ್ಟು ಹಾಕಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
೧೦. Viral News: 32 ವರ್ಷದ ಹಿಂದೆ 100 ರೂ. ಲಂಚ ಪಡೆದ 82 ವರ್ಷದ ನಿವೃತ್ತ ನೌಕರನಿಗೆ 1 ವರ್ಷ ಜೈಲು
ಭ್ರಷ್ಟಾಚಾರಕ್ಕೂ, ಭಾರತಕ್ಕೂ ಅವಿನಾಭಾವ ನಂಟಿದೆ. ಬಹುತೇಕ ಸರ್ಕಾರಿ ಕಚೇರಿಗಳಲ್ಲಿ, ಇಲಾಖೆಗಳಲ್ಲಿ ‘ಕೈ ಬಿಸಿ’ ಮಾಡದೆ ಜನರ ಕೆಲಸ ಆಗುವುದಿಲ್ಲ. ತುಂಬ ಸಂದರ್ಭದಲ್ಲಿ ಲಂಚ ತೆಗೆದುಕೊಳ್ಳುವ ಅಧಿಕಾರಿಗಳ ವಿರುದ್ಧ ದೂರು ನೀಡಿದರೂ, ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಆದರೆ, ಉತ್ತರ ಪ್ರದೇಶದಲ್ಲಿ ರೈಲ್ವೆ ಇಲಾಖೆಯ ೮೨ ವರ್ಷದ ನಿವೃತ್ತ ನೌಕರರೊಬ್ಬರು ೩೨ ವರ್ಷದ ಹಿಂದೆ ಲಂಚ ಪಡೆದಿದ್ದಕ್ಕೆ (Viral News) ಈಗ ಶಿಕ್ಷೆಯಾಗಿದೆ. ಮತ್ತಷ್ಟು ವೈರಲ್ ವಿಡಿಯೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಪ್ರಮುಖ ಸುದ್ದಿಗಳಿವು
- Vani Jayaram Death: ಆಕಸ್ಮಿಕವಾಗಿ ಬಿದ್ದು ನಿಧನರಾದರೇ ವಾಣಿ ಜಯರಾಮ್? ಪೋಸ್ಟ್ ಮಾರ್ಟಂ ವರದಿ ಹೇಳುವುದೇನು?
- Delhi Mayor Polls: ದಿಲ್ಲಿ ಮಹಾನಗರ ಪಾಲಿಕೆ ಸಭೆ ಮುಂದೂಡಿಕೆ, ಮತ್ತೆ ಆಯ್ಕೆಯಾಗಲಿಲ್ಲ ಮೇಯರ್! ಆಪ್ ಕೋರ್ಟ್ ಮೊರೆ?
- Supreme Court ನ್ಯಾಯಮೂರ್ತಿಗಳಾಗಿ ಐವರು ಜಡ್ಜ್‌ಗಳಿಂದ ಪ್ರಮಾಣ ವಚನ ಸ್ವೀಕಾರ
- ಭಾಗ್ಯದ ನಿಧಿ ತುಂಬಿ ತುಳುಕಿತಲೇ ಪರಾಕ್: ಈ ಬಾರಿಯೂ ಆಗಲಿದೆ ಉತ್ತಮ ಮಳೆ-ಬೆಳೆ ಎಂದು ನುಡಿದ ಕಾರಣಿಕ
- Gold rate : ಬಂಗಾರದ ದರದಲ್ಲಿ 3 ದಿನಗಳಲ್ಲಿ 1,300 ರೂ. ಇಳಿಕೆ! ಖರೀದಿಸುವವರು ಗಮನಿಸಿ