Site icon Vistara News

ವಿಸ್ತಾರ TOP 10 NEWS: ಬಿಎಸ್‌ವೈ ಜನ್ಮದಿನದಂದು ಮೋದಿ ಹವಾದಿಂದ, ಹೆದ್ದಾರಿ ಟೋಲ್‌ಗೆ ತಾತ್ಕಾಲಿಕ ಬ್ರೇಕ್‌ವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news-modi in karnataka to toll collection deffered and more news

#image_title

1. Shivamogga Airport: ಕರ್ನಾಟಕವು ಅಭಿವೃದ್ಧಿ ರಥದ ಮೇಲೆ; ಈ ರಥವು ಪ್ರಗತಿಯ ಪಥದ ಮೇಲೆ: ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ ಬಣ್ಣನೆ
ಡಬಲ್‌ ಇಂಜಿನ್‌ ಸರ್ಕಾರದ ಮೂಲಕ ಕರ್ನಾಟಕವು ಅಭಿವೃದ್ಧಿಯ ರಥ ಹಾಗೂ ಪಥದ ಮೇಲೆ ವೇಗವಾಗಿ ಸಾಗಿದ್ದು, ಮುಂದೆಯೂ ಎಲ್ಲರೂ ಒಟ್ಟಾಗಿ ಸಾಗಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣವಾಗಿರುವ ನೂತನ ವಿಮಾನ ನಿಲ್ದಾಣ ಉದ್ಘಾಟನೆ, ಶಿವಮೊಗ್ಗ ಸ್ಮಾರ್ಟ್‌ ಸಿಟಿ ಯೋಜನೆ, ಶಿಮೂಲ್‌ ನೂತನ ಪ್ಯಾಕಿಂಗ್‌ ಘಟಕದ ಲೋಕಾರ್ಪಣೆ, ಮಲೆನಾಡು ಅಡಕೆ ಮಾರುಕಟ್ಟೆ ಸಹಕಾರಿ ಸಂಸ್ಥೆಯ ಹೊಸ ಕೇಂದ್ರ ಲೋಕಾರ್ಪಣೆ, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲ್ವೆ ಲೇನ್‌, ರಾಷ್ಟ್ರೀಯ ಹೆದ್ದಾರಿ ಯೋಜನೆ ಹಾಗೂ ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ಉದ್ಘಾಟನೆ ನಂತರ ಮಾತನಾಡಿದರು. ಹಾಗೆಯೇ, ಕಿಸಾನ್‌ ಸಮ್ಮಾನ್‌ ಯೋಜನೆಯ ೮ ಕೋಟಿ ರೈತರಿಗೆ ತಲಾ ೨ ಸಾವಿರ ರೂ.ನಂತೆ ಒಟ್ಟು ೧೬ ಸಾವಿರ ಕೋಟಿ ರೂ. ಬಿಡುಗಡೆ ಮಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Shivamogga Airport: ಬಿ.ಎಸ್‌. ಯಡಿಯೂರಪ್ಪ ಜನ್ಮದಿನಕ್ಕೆ ಶುಭ ಕೋರಿದ ಪ್ರಧಾನಿ ಮೋದಿ: ಮೊಬೈಲ್‌ ಫ್ಲಾಷ್‌ ಲೈಟ್‌ ಮೂಲಕ ಗೌರವ

2. Modi at Belagavi: ಬಿಸಿಲಲ್ಲಿ ನಿಲ್ಲಿಸಿ ಖರ್ಗೆಗೆ ಅವಮಾನ; ಕರ್ನಾಟಕವನ್ನು ಕಾಂಗ್ರೆಸ್‌ ದ್ವೇಷಿಸುತ್ತದೆ: ʼಅವಮಾನದ ಇತಿಹಾಸʼ ಕೆದಕಿದ ಪ್ರಧಾನಿ ಮೋದಿ
ಸರ್ಕಾರಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಜತೆಜತೆಗೆ ನೇರವಾಗಿ ರಾಜಕೀಯ ಅಸ್ತ್ರ ಪ್ರಯೋಗಿಸಿರುವ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಕಾಂಗ್ರೆಸ್‌ ಅವಮಾನ ಮಾಡಿದೆ ಎಂಬ ಭಾವನಾತ್ಮಕ ಅಸ್ತ್ರ ಪ್ರಯೋಗಿಸಿದ್ದಾರೆ. ಬೆಳಗಾವಿಯಲ್ಲಿ (Modi at Belagavi) ರೈಲ್ವೆ, ಜಲಜೀವನ್‌ ಮಿಷನ್‌ ಸೇರಿ ವಿವಿಧ ಕಾಮಗಾರಿಗಳಿಗೆ ಚಾಲನೆ ಹಾಗೂ ಪಿಎಂ ಕಿಸಾನ್‌ ಯೋಜನೆಯ ಹಣ ಬಿಡುಗಡೆ ನಂತರ ನೆರೆದಿದ್ದ ಬೃಹತ್‌ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Modi at Belagavi: ಕುಂದಾನಗರಿಯಲ್ಲಿ ಮೋದಿ ಮೆಗಾ ರೋಡ್‌ ಶೋ; ಪ್ರಧಾನಿಗೆ ಹೂಮಳೆಯ ಸ್ವಾಗತ, ಮೊಳಗಿದ ಜಯಘೋಷ

3. B.S. Yediyurappa Birthday: ಬಿ.ಎಸ್‌. ಯಡಿಯೂರ್‌ʼಅಪ್ಪʼ ಕುರಿತು ಐವರು ಮಕ್ಕಳ ಭಾವನಾತ್ಮಕ ನುಡಿಗಳಿವು
ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ 80ನೇ ವರ್ಷವನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಮೊದಲುಗೊಂಡು ನಾಡಿನ ಸಾಮಾನ್ಯ ಜನರವರೆಗೆ ಎಲ್ಲರೂ ಶುಭ ಹಾರೈಸುತ್ತಿದ್ದಾರೆ. ಹೋರಾಟವನ್ನೇ ಜೀವನವಾಗಿಸಿಕೊಂಡ ಯಡಿಯೂರಪ್ಪ ಕುರಿತು ರಾಜಕೀಯ ವಿರೋಧಿಗಳೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೆಲ್ಲದರ ನಡುವೆ, ಯಡಿಯೂರಪ್ಪ ಅವರ ಕುಟುಂಬದವರು ಏನು ಹೇಳುತ್ತಾರೆ ಎನ್ನುವುದು ಮುಖ್ಯ. ಯಡಿಯೂರಪ್ಪ ಅವರ ಮೂವರು ಹೆಣ್ಣು ಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳು ತಮ್ಮ ತಂದೆಯ ಕುರಿತು ಭಾವನಾತ್ಮಕ ನುಡಿಗಳನ್ನು ಹಂಚಿಕೊಂಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: B.S. Yediyurappa Birthday: ಮತ್ತಷ್ಟು ಸಫಲ, ಅರ್ಥಪೂರ್ಣ ಜೀವನ ನಿಮ್ಮದಾಗಲಿ: ಬಿ.ಎಸ್‌. ಯಡಿಯೂರಪ್ಪಗೆ ಬಿ.ಎಲ್‌. ಸಂತೋಷ್‌ ಶುಭಾಶಯ

4. Karnataka Election 2023: ನಮಗಂತೂ ಧಮ್‌, ತಾಕತ್ತು ಇಲ್ಲ; ಬೊಮ್ಮಾಯಿಯವರೇ ನಿಮಗೆ ಧಮ್‌ ಇದೆಯಲ್ಲವೇ? ಬನ್ನಿ ಚರ್ಚೆಗೆ ಎಂದ ಸಿದ್ದರಾಮಯ್ಯ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಹಳ ಕೆಲಸ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಏನ್ ಮಾಡಿದ್ದೀಯಯ್ಯ ಬೊಮ್ಮಾಯಿ? ಬಿಜೆಪಿಯವರು ೬೦೦ ಭರವಸೆಗಳನ್ನು ಕೊಟ್ಟಿದ್ದರು. ಆದರೆ, ೪ ವರ್ಷದಲ್ಲಿ ೫೧ ಭರವಸೆಗಳನ್ನು ಮಾತ್ರ ಈಡೇರಿಸಿದ್ದಾರೆ. ಇನ್ನೂ ೫೫೦ ಭರವಸೆಗಳನ್ನು ಯಾಕೆ ಈಡೇರಿಸಲಿಲ್ಲ? ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ವಾಕ್ಸಮರಗಳೂ ತಾರಕಕ್ಕೇರುತ್ತಿವೆ. ಸವಾಲುಗಳು, ವಾಗ್ವಾದಗಳೂ ಹೆಚ್ಚುತ್ತಿವೆ. ಈಗ ಸಿಎಂಗೆ ಮಾಜಿ ಸಿಎಂ ಸವಾಲು ಹಾಕಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: BS Yediyurappa : ಯಡಿಯೂರಪ್ಪರನ್ನು ಹಸುವಿನ ಥರ ಹಾಲು ಹಿಂಡಿ ಮನೆಗೆ ಕಳುಹಿಸುತ್ತಾರೆ ಎಂದ ಬಿ.ಕೆ. ಹರಿಪ್ರಸಾದ್‌

5. Teacher Recruitment 2022: ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕ; ಹೊಸ ಆಯ್ಕೆ ಪಟ್ಟಿ ಪ್ರಕಟ; 13,351 ಅಭ್ಯರ್ಥಿಗಳು ಆಯ್ಕೆ
15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ (6 ರಿಂದ 8 ನೇ ತರಗತಿ) ನೇಮಕಕ್ಕೆ (Teacher Recruitment 2022) ಸಂಬಂಧಿಸಿದಂತೆ ಕೊನೆಗೂ ಶಿಕ್ಷಣ ಇಲಾಖೆ 1:1 ಅನುಪಾತದಲ್ಲಿ ಹೊಸದಾಗಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದೆ. ಈ ಬಾರಿ ಒಟ್ಟು 13,351 ಅಭ್ಯರ್ಥಿಗಳು ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 1,6೪೯ ಹುದ್ದೆಗಳು ನೇಮಕವಾಗದೇ ಖಾಲಿ ಉಳಿದಿವೆ. ಕಳೆದ ನವೆಂಬರ್‌ 18 ರಂದು ಶಿಕ್ಷಣ ಇಲಾಖೆಯು ಮೊದಲಿಗೆ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿತ್ತು. ಇದನ್ನು ರಾಜ್ಯ ಹೈಕೋರ್ಟ್‌ ರದ್ದು ಪಡಿಸಿದ ಹಿನ್ನೆಲೆಯಲ್ಲಿ ಹೊಸದಾಗಿ ಆಯ್ಕೆ ಪಟ್ಟಿ ಸಿದ್ಧಪಡಿಸಿ ಪ್ರಕಟಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Bangalore–Mysore Expressway: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸದ್ಯಕ್ಕೆ ಟೋಲ್‌ ಸಂಗ್ರಹ ಇಲ್ಲ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ (Bangalore-Mysore Expressway) ಕಾಮಗಾರಿ ಪೂರ್ಣವಾಗದೆ ಟೋಲ್‌ ಕೇಂದ್ರಗಳ ಆರಂಭ ಹಾಗೂ ದುಬಾರಿ ಸುಂಕ ವಸೂಲಾತಿಗೆ ಸಾರ್ವಜನಿಕ ವಲಯದಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಹೆದ್ದಾರಿಯ ಸರ್ವಿಸ್‌ ರಸ್ತೆಗಳ ಕಾಮಗಾರಿ ಪೂರ್ಣವಾಗುವವರೆಗೆ ಸುಂಕ ವಸೂಲಾತಿಯನ್ನು ಮುಂದೂಡಲು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ನಿರ್ಧರಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Manish Sisodia: ದೆಹಲಿ ಅಬಕಾರಿ ಕೇಸ್‌, ಮನೀಷ್‌ ಸಿಸೋಡಿಯಾಗೆ ಸಂಕಷ್ಟ, 5 ದಿನ ಸಿಬಿಐ ಕಸ್ಟಡಿಗೆ ವಹಿಸಿದ ಕೋರ್ಟ್
ರಾಷ್ಟ್ರ ರಾಜಧಾನಿಯಲ್ಲಿ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಸರ್ಕಾರವು ಅಬಕಾರಿ ನೀತಿ ಜಾರಿ ವೇಳೆ ಹಗರಣ ನಡೆದಿದೆ ಎನ್ನಲಾದ ಪ್ರಕರಣದಲ್ಲಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ (Manish Sisodia) ಅವರನ್ನು ದೆಹಲಿಯ ರೋಸ್‌ ಅವೆನ್ಯೂ ಕೋರ್ಟ್‌ ೫ ದಿನ ಅಂದರೆ ಮಾರ್ಚ್‌ ೪ರವರೆಗೆ ಸಿಬಿಐ ಕಸ್ಟಡಿಗೆ ವಹಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Rename of places : ಐತಿಹಾಸಿಕ ಸ್ಥಳಗಳ ಹೆಸರು ಬದಲಾವಣೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ, ಸುಪ್ರೀಂಕೋರ್ಟ್‌ ಹೇಳಿದ್ದೇನು?
ಅತಿಕ್ರಮಣಕಾರರ ಕಾಲದಲ್ಲಿ ಬದಲಿಸಿದ್ದ ಐತಿಹಾಸಿಕ ಸ್ಥಳಗಳು ಮತ್ತು ನಗರಗಳ ಹೆಸರುಗಳನ್ನು ಮರು ನಾಮಕರಣಗೊಳಿಸಬೇಕು (Rename of places) ಎಂದು ಕೋರಿ ಬಿಜೆಪಿ ನಾಯಕ ಹಾಗೂ ವಕೀಲರಾದ ಅಶ್ವಿನಿ ಕುಮಾರ್‌ ಉಪಾಧ್ಯಾಯ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿದೆ. ನ್ಯಾಯಮೂರ್ತಿ ಕೆಎಂ ಜೋಸೆಫ್‌ ಮತ್ತು ಬಿವಿ ನಾಗರತ್ನ ಅವರನ್ನು ಒಳಗೊಂಡಿದ್ದ ಪೀಠವು, ಅರ್ಜಿದಾರರ ಅರ್ಜಿ ಸಂವಿಧಾನದ ಜಾತ್ಯತೀತ ತತ್ತ್ವಕ್ಕೆ ವಿರುದ್ಧವಾಗಿದೆ ಎಂದು ಹೇಳಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Exit Polls: ತ್ರಿಪುರಾದಲ್ಲಿ ಬಿಜೆಪಿ, ಮೇಘಾಲಯದಲ್ಲಿ ಎನ್‌ಪಿಪಿ, ನಾಗಾಲ್ಯಾಂಡ್ ಎನ್‌ಡಿಪಿಗೆ ಅಧಿಕಾರ
ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮೇಘಾಲಯ ರಾಜ್ಯಗಳ ವಿಧಾನಸಭೆ ಚುನಾವಣೆ ಫೆ.27ಕ್ಕೆ ಸಂಜೆ ಮುಕ್ತಾಯಗೊಳ್ಳುತ್ತಿದ್ದಂತೆ, ಎಕ್ಸಿಟ್ ಪೋಲ್‌ಗಳು ಪ್ರಕಟವಾಗಿವೆ. ತ್ರಿಪುರಾ ರಾಜ್ಯವನ್ನು ಬಿಜೆಪಿ ಉಳಿಸಿಕೊಳ್ಳಲಿದ್ದು, ನಾಗಾಲ್ಯಾಂಡ್‌ನಲ್ಲಿ ನ್ಯಾಷನಲ್ ಡೆಮಾಕ್ರಟಿಕ್ ಪ್ರೋಗ್ರೆಸ್ಸಿವ್ ಪಾರ್ಟಿ(NDP), ಮೇಘಾಲಯದಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ(NPP) ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಎಕ್ಸಿಟ್ ಪೋಲ್‌ಗಳು ಹೇಳಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Meghalaya Nagaland Election: ಮೇಘಾಲಯದಲ್ಲಿ 74%, ನಾಗಾಲ್ಯಾಂಡ್‌ನಲ್ಲಿ 82ರಷ್ಟು ಮತದಾನ

10. ವಿಸ್ತಾರ Explainer: ಇವನು ಮತ್ತೊಬ್ಬ ಭಿಂದ್ರಾನ್‌ವಾಲೆ ಆಗ್ತಾನಾ? ಖಲಿಸ್ತಾನ್‌ ಭಯೋತ್ಪಾದನೆಗೆ ಕಿಚ್ಚು ಹಚ್ಚುತ್ತಿರುವ ಅಮೃತ್‌ಪಾಲ್‌ ಸಿಂಗ್!
ಪಂಜಾಬ್‌ನಲ್ಲಿ ಇನ್ನೊಬ್ಬ ಭಿಂದ್ರಾನ್‌ವಾಲೆಯ ಆತಂಕ ಪೊಲೀಸರಿಗೂ ಆಳುವವರಿಗೂ ಶುರುವಾಗಿದೆ. ಕಳೆದ ಗುರುವಾರ ಅಮೃತಸರದ ಬಳಿಯ ಅಜ್ನಾಲಾದಲ್ಲಿ ಪೊಲೀಸ್‌ ಠಾಣೆ ಮೇಲೆ ನಡೆದ ದಾಳಿ ಇದನ್ನು ಸಾಬೀತುಪಡಿಸುವಂತಿದೆ. ಪೊಲೀಸ್‌ ಠಾಣೆಗಳ ಮೇಲೆ ಗುಂಪು ದಾಳಿ ಭಾರತದಲ್ಲಿ ಹೊಸತಲ್ಲ. ಆದರೆ ಖಲಿಸ್ತಾನ್‌ ಪ್ರತಿಪಾದಕ ಅಮೃತ್‌ಪಾಲ್‌ ಸಿಂಗ್‌ ಎಂಭ ಯುವ ನಾಯಕನ ನೇತೃತ್ವದಲ್ಲಿ ನಡೆದ ಈ ಪುಂಡರ ಗುಂಪಿನ ದಾಳಿ ಈಗ ಹೊಸ ಆತಂಕಕ್ಕೆ ಕಾರಣವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. Murder case: ಹಣಕ್ಕಾಗಿ ತಂದೆಯನ್ನೇ ಕೊಲೆಗೈದ ಮಗ ಅಂದರ್‌
  2. KPSC Recruitment 2023 : ಅಸಿಸ್ಟೆಂಟ್‌ ಎಂಜಿನಿಯರ್‌ ನೇಮಕ; ಕೀ ಉತ್ತರ ಪ್ರಕಟಿಸಿದ ಕೆಪಿಎಸ್‌ಸಿ
  3. ದೇವೇಂದ್ರ ಫಡ್ನವಿಸ್ ಬಂಧನಕ್ಕೆ ಮುಂದಾಗಿದ್ದ ಉದ್ಧವ್ ಸರ್ಕಾರ! ಮಹಾರಾಷ್ಟ್ರ ಸಿಎಂ ಶಿಂಧೆ ಮಾಹಿತಿ
  4. IND VS AUS: ಭಾರತದ ಬೌಲಿಂಗ್​ ದಾಳಿಗೆ ಕುಸಿದ ಆಸೀಸ್​; ​263 ರನ್​ಗೆ ಆಲೌಟ್​
  5. Agnipath scheme : ಅಗ್ನಿಪಥ್‌ ಯೋಜನೆಯ ಸಿಂಧುತ್ವ ಎತ್ತಿ ಹಿಡಿದ ದಿಲ್ಲಿ ಹೈಕೋರ್ಟ್, ನ್ಯಾಯಾಲಯ ಹೇಳಿದ್ದೇನು?
Exit mobile version