Site icon Vistara News

ವಿಸ್ತಾರ TOP 10 NEWS | ಮೋದಿ ಅಮ್ಮನ ಶತಕದಿಂದ T20 ಕದನದವರೆಗೆ ದಿನದ ಪ್ರಮುಖ ಸುದ್ದಿಗಳು

vistara TOP 10 NEWS

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಅನೇಕ ಕಾರಣಗಳ ಜತೆಗೆ ತಮ್ಮ ತಾಯಿಯ ಮೇಲಿರುವ ಪ್ರೀತಿಯಿಂದಾಗಿಯೂ ಪ್ರಸಿದ್ಧರು. ಅದೇ ರೀತಿ ತಾಯಿ ಹೀರಾಬೆನ್‌ ಸಹ ಪ್ರಧಾನಿಯ ಅಮ್ಮ ಎನ್ನುವ ಹಮ್ಮಿಲ್ಲದೆ ಅತ್ಯಂತ ಸರಳ ಜೀವನ ನಡೆಸುತ್ತಿರುವವರು. ಹೀರಾಬೆನ್‌ ನೂರನೇ ಜನ್ಮದಿನ, ಕರ್ನಾಟಕದಲ್ಲಿ ದ್ವಿತೀಯ ಪಿಯು ಫಲಿತಾಂಶ, ಮೇಕೆ ದಾಟು ಯೋಜನೆಗೆ ಎಂದಿನಂತೆ ತಮಿಳುನಾಡು ಕಿತಾಪತಿ, ಮುಂದುವರಿದ ಅಗ್ನಿಪಥ ಪ್ರತಿಭಟನೆ, 21 ವರ್ಷ ನಂತರ ನೆನಪಾದ ಲಗಾನ್‌ ಚಲನಚಿತ್ರ ಸೇರಿ ದಿನದ ಪ್ರಮುಖ ಹತ್ತು ಸುದ್ದಿಗಳು ಒಂದೇ ಕಡೆ, ನಿಮಗಾಗಿ.

1. 2nd PUC Result | 61.88% ತೇರ್ಗಡೆ, ಗ್ರಾಮೀಣ ವಿದ್ಯಾರ್ಥಿಗಳ ಮೇಲುಗೈ
ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ (2nd PUC Result) ಪ್ರಕಟಗೊಂಡಿದ್ದು, ಒಟ್ಟು 61.88% ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಹೊಸದಾಗಿ ಪರೀಕ್ಷೆ ಬರೆದ 67.44% ಹಾಗೂ ಪುನರಾವರ್ತಿತ 23.29% ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಲಾ ವಿಭಾಗದಲ್ಲಿ 48.71%, ವಾಣಿಜ್ಯ ವಿಭಾಗದಲ್ಲಿ 64.97% ಹಾಗೂ ವಿಜ್ಞಾನ ವಿಭಾಗದಲ್ಲಿ 72.53% ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ನಗರ ಪ್ರದೇಶದ 61.78% ತೇರ್ಗಡೆಯಾಗಿದ್ದರೆ ಗ್ರಾಮೀಣ ವಿದ್ಯಾರ್ಥಿಗಳು 62.18% ತೇರ್ಗಡೆಯಾಗಿ ಮುನ್ನಡೆ ಸಾಧಿಸಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)
-What Next After PUC | ಪಿಯುಸಿ ನಂತರ ಮುಂದಿರುವ ಆಯ್ಕೆಗಳೇನು?; ಇಲ್ಲಿದೆ ಮಾಹಿತಿ (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೨. Agnipath | ಮೋದಿ ಮತ್ತೆ ಮಾಫಿವೀರ್‌ ಆಗಲಿ ಎಂದ ರಾಹುಲ್‌ ಗಾಂಧಿ; ಜೂ.19ಕ್ಕೆ ಕಾಂಗ್ರೆಸ್‌ ಸತ್ಯಾಗ್ರಹ
ಅಗ್ನಿಪಥ್‌ ಯೋಜನೆಯನ್ನು (Agnipath Scheme) ಕೇಂದ್ರ ಸರ್ಕಾರ ವಾಪಸ್‌ ಪಡೆಯಬೇಕು ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಆಗ್ರಹಿಸಿದ್ದಾರೆ. ಸೇನಾ ನೇಮಕಾತಿ ಯೋಜನೆ ಅಗ್ನಿಪಥ್‌ದಡಿ ಯುವಕರಿಗೆ ಉದ್ಯೋಗ ಭರವಸೆ ಇಲ್ಲ ಎಂದು ಆರೋಪಿಸಿ ಪ್ರತಿಭಟನೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ, ಈ ಹಿಂದೆ ಪ್ರಧಾನಿ ಮೋದಿ ಸರ್ಕಾರ ಕೃಷಿ ಕಾಯ್ದೆಗಳನ್ನು ರದ್ದು ಮಾಡಿದಂತೆ ಈ ಯೋಜನೆಯನ್ನೂ ಹಿಂಪಡೆಯಬೇಕು. ಈ ಮೂಲಕ ಯುವಕರ ಬೇಡಿಕೆಗೆ ಮನ್ನಣೆ ನೀಡಬೇಕು ಎಂದು ಹೇಳಿದ್ದಾರೆ.(ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)
ಅಗ್ನಿಪಥ್‌ ವಿರುದ್ಧ ಕರ್ನಾಟಕದಲ್ಲೂ ಪ್ರತಿಭಟನೆ ಜೋರು, ಬೆಳಗಾವಿ, ಧಾರವಾಡದಲ್ಲಿ ಲಾಠಿ ಚಾರ್ಜ್ (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೩. ಬೆಂಗಳೂರಲ್ಲಿ ಭಾರಿ ಮಳೆ: ರಾಜಕಾಲುವೆಯಲ್ಲಿ ಕೊಚ್ಚಿಹೋದ ಯುವಕ, ಗೋಡೆ ಕುಸಿದು ಮಹಿಳೆ ಬಲಿ
ಶುಕ್ರವಾರ ರಾತ್ರಿ ಸುರಿದ ಭಾರಿ ಮಳೆಗೆ ನಗರದಲ್ಲಿ ಸಾಲು ಸಾಲು ಅವಾಂತರ ಸೃಷ್ಟಿಯಾಗಿವೆ. ನಗರದ 8 ವಲಯಗಳಲ್ಲೂ ಅಲ್ಲಲ್ಲಿ ಮಳೆಯಿಂದ ಅನಾಹುತ ಉಂಟಾಗಿವೆ. ಕೆ. ಆರ್. ಪುರದ ಗಾಯತ್ರಿ ಬಡಾವಣೆಯಲ್ಲಿ ಯುವಕ ಮಿಥುನ್ (24) ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದರೆ, ಮಹದೇವಪುರದ ಕಾವೇರಿ ನಗರದಲ್ಲಿ ಮನೆಯ ಗೋಡೆ ಕುಸಿದು ಮಹಿಳೆ ಮುನಿಯಮ್ಮ (೫೫) ಮೃತಪಟ್ಟಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೪. ಪರಿಷ್ಕರಣೆಯಾದ ಪಠ್ಯಪುಸ್ತಕವನ್ನು ಸಮಾವೇಶದಲ್ಲಿ ಹರಿದು ಹಾಕಿದ ಡಿ.ಕೆ ಶಿವಕುಮಾರ್
ಪಠ್ಯ ಪರಿಷ್ಕರಣೆ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಬೃಹತ್ ಸಮಾವೇಶ ನಡೆಯುತ್ತಿದೆ. ಸಮಾವೇಶದಲ್ಲಿ ಭಾಗಿಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪಠ್ಯ ಪುಸ್ತಕವನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನಗೆ ಈ ಹೊಸ ಪಠ್ಯವನ್ನು ಸುಡೋದಕ್ಕೆ ಇಷ್ಟವಿಲ್ಲ. ಹೀಗಾಗಿ ಇದನ್ನು ನಿಮ್ಮೆಲ್ಲರ ಸಮ್ಮುಖದಲ್ಲೇ ಹರಿದು ಹಾಕುತ್ತಿದ್ದೇನೆ ಎಂದಿದ್ದಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೫. ನನ್ನ ಅಮ್ಮ ಎಷ್ಟು ಅಸಾಧಾರಣಳೋ, ಅಷ್ಟೇ ಸರಳ ತಾಯಿಯ ನೂರನೇ ಜನ್ಮದಿನ ನೂರೆಂಟು ನೆನಪು ಹರವಿಟ್ಟ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ವಿಶೇಷ ದಿನ. ಅವರ ತಾಯಿ ಹೀರಾಬೆನ್ ಅವರ ನೂರನೇ ಜನ್ಮದಿನದ ಅವಿಸ್ಮರಣೀಯ ದಿನ. ಹೀಗಾಗಿ ಗಾಂಧಿನಗರದಲ್ಲಿರುವ ನಿವಾಸಕ್ಕೆ ಬೆಳಗ್ಗೆಯೇ ತೆರಳಿ ಅಮ್ಮನ ಪಾದಪೂಜೆ ನೆರವೇರಿಸಿ ಕೆಲ ಹೊತ್ತು ಸ್ಮರಣೀಯ ಕ್ಷಣಗಳನ್ನು ಕಳೆದರು. ಎಂದಿನಂತೆ ಹೀರಾಬೆನ್‌ ಅವರೂ ವಾತ್ಸಲ್ಯದಿಂದ ಆಶೀರ್ವದಿಸಿದರು. ಸಿಹಿ ತಿನ್ನಿಸಿದರು. ಪ್ರಧಾನಿ ಮೋದಿ ಅವರು ಪ್ರತಿ ವರ್ಷವೂ ತಾಯಿ ಹೀರಾಬೆನ್‌ ಅವರ ಜನ್ಮ ದಿನ ಎಲ್ಲಿದ್ದರೂ ತಪ್ಪದೆ ಮನೆಗೆ ಬಂದು ಅಮ್ಮನ ಆಶೀರ್ವಾದ ಪಡೆಯುತ್ತಾರೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೬. ಮೇಕೆದಾಟು ವಿಷಯದಲ್ಲಿ ಕೋರ್ಟೇ ಸುಪ್ರೀಂ, ಪ್ರಾಧಿಕಾರದ ಮಾತು ಕೇಳಲ್ಲ ಎಂದ ಸ್ಟಾಲಿನ್‌
ಕರ್ನಾಟಕದ ಜತೆಗಿನ ಮೇಕೆದಾಟು ವಿವಾದದಲ್ಲಿ ಸುಪ್ರೀಂಕೋರ್ಟ್‌ ತೀರ್ಪೇ ಅಂತಿಮ ಅದನ್ನು ಹೊರತುಪಡಿಸಿ ಬೇರೆ ಯಾರ ಮಾತನ್ನೂ ಕೇಳುವುದಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಹೇಳಿದ್ದಾರೆ. ಮೇಕೆದಾಟು ವಿಷಯವನ್ನು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಚರ್ಚಿಸಬಹುದು ಎಂಬ ಪ್ರಾಧಿಕಾರದ ಅಧ್ಯಕ್ಷ ಎಸ್‌.ಕೆ. ಹಲ್ದಾರ್‌ ಅವರ ಹೇಳಿಕೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪ್ರಕರಣವು ಸುಪ್ರೀಂಕೋರ್ಟ್‌ನಲ್ಲಿದೆ. ಹೀಗಾಗಿ ಪ್ರಾಧಿಕಾರ ಈ ವಿಷಯದಲ್ಲಿ ಯಾವುದೇ ಚರ್ಚೆ ನಡೆಸುವ ಹಾಗಿಲ್ಲ ಎಂದಿದ್ದಾರೆ.(ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೭. Ind vs sa t20 | ಮಹತ್ವದ ಪಂದ್ಯಕ್ಕೆ ಸಜ್ಜಾಯ್ತು ಸಿಲಿಕಾನ್‌ ಸಿಟಿ, ಟ್ರಾಫಿಕ್‌ ಜಾಮ್‌ ತಪ್ಪಿಸಲು ಪ್ಲಾನ್‌ ಏನು?
ಜೂನ್‌ 19ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕ ಮತ್ತು ಭಾರತ ಕ್ರಿಕೆಟ್ ಕದನಕ್ಕೆ ಸಿಲಿಕಾನ್ ಸಿಟಿ ಸಿದ್ಧವಾಗಿದೆ. ಈಗಾಗಲೇ ಟಿಕೆಟ್‌ ಎಲ್ಲ ಸೋಲ್ಡ್‌ ಔಟ್‌ ಆಗಿದ್ದು, ಭಾರಿ ಪ್ರಮಾಣದಲ್ಲಿ ಜನ ಸೇರುವ ನಿರೀಕ್ಷೆಯಿದೆ. ಪಂದ್ಯಕ್ಕೆ ಪೊಲೀಸ್ ಇಲಾಖೆಯಿಂದ ಸೂಕ್ತ ಭದ್ರತೆಗೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ನಗರದಲ್ಲಿ ಹಲವೆಡೆ ಟ್ರಾಫೀಕ್ ಜಾಮ್ ಉಂಟಾಗುವ ಸಾಧ್ಯತೆಯಿದ್ದು ಬದಲಿ ಸಂಚಾರ ಮಾರ್ಗಗಳನ್ನು ಸೂಚಿಸಲಾಗಿದೆ.(ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೮. Yoga day | ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ರಾಜಮನೆತನಕ್ಕೂ ಆಹ್ವಾನ, ಪ್ಯಾಲೇಸ್‌ಗೆ 3 ದಿನ ನಿರ್ಬಂಧ
ಜೂನ್‌ 21ರಂದು ನಡೆಯಲಿರುವ ಯೋಗ ಕಾರ್ಯಕ್ರಮಕ್ಕೆ (Yoga day)ಅರಮನೆ ನಗರಿ ಮೈಸೂರು ಸಜ್ಜುಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ಈ ಕಾರ್ಯಕ್ರಮಕ್ಕೆ ರಾಜಮನೆತನದ ಕುಟುಂಬಕ್ಕೆ ಆಹ್ವಾನ ನೀಡಲು ನಿರ್ಧರಿಸಲಾಗಿದೆ. ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ರಾಜಮನೆತನದವರಿಗೆ ಆಹ್ವಾನ ನೀಡುವ ವಿಚಾರ ಕಳೆದ ಕೆಲವು ದಿನಗಳಿಂದ ಚರ್ಚೆಯಾಗುತ್ತಿತ್ತು. ರಾಜಮನೆತನಕ್ಕೆ ಆಹ್ವಾನ ನೀಡಬೇಕೆಂದು ಸಾಮಾಜಿಕ ಜಾಲತಾಣಗಳಲ್ಲೂ ಅಭಿಯಾನ ನಡೆಸಲಾಗಿತ್ತು. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

೯. ಭದ್ರಕೋಟೆಯೇ ಛಿದ್ರವಾಗುವ ಭೀತಿಯಲ್ಲಿ ಜೆಡಿಎಸ್‌: ಮಂಡ್ಯದಲ್ಲಿ ಬಲ ಕಳೆದುಕೊಳ್ಳುತ್ತಿರುವುದೇಕೆ?
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಾ ಏಳು ಕ್ಷೇತ್ರಗಳನ್ನು ಕ್ಲೀನ್ ಸ್ವೀಪ್ ಮಾಡಿಕೊಂಡು ಬೀಗಿದ್ದ ಜೆಡಿಎಸ್ ದಿನ ದಿನಕ್ಕೂ ತನ್ನ ಬಲ ಕಳೆದುಕೊಳ್ಳುತ್ತಿದೆ. ಜೆಡಿಎಸ್ ಭದ್ರಕೋಟೆ ಛಿದ್ರವಾಗುತ್ತಿದ್ದು, ಅದರ ಬೇರುಗಳು ಅಲುಗಾಡುತ್ತಿವೆ ಎನ್ನುವುದಕ್ಕೆ ಒಂದರ ಹಿಂದೊಂದು ಸೋಲು ಸಾಕ್ಷಿಯಾಗಿದೆ. ಇದೀಗ ತನ್ನ ತೆಕ್ಕೆಯಲ್ಲೇ ಇದ್ದ ದಕ್ಷಿಣ ಪದವೀಧರರ ಕ್ಷೇತ್ರದ ಮೇಲ್ಮನೆ ಚುನಾವಣೆಯಲ್ಲೂ ದಯನೀಯ ಸೋಲುಂಡು, ಮಕಾಡೆ ಮಲಗಿರುವುದು ದಳಪತಿಗಳಿಗೆ ಅಕ್ಷರಶಃ ದಂಗುಬಡಿಸಿದೆ. (ಸಂಪೂರ್ಣ ವಿಶ್ಲೇಷಣೆಗಾಗಿ ಇಲ್ಲಿ ಕ್ಲಿಕ್‌ ಮಾಡಿ)

10. Lagaan Movie | ಲಗಾನ್‌ಗೆ 21 ವರ್ಷ, ಮತ್ತೆ ಸೇರಿದ ಆಮೀರ್ ಟೀಮ್
ಬಾಲಿವುಡ್‌ ಸ್ಟಾರ್‌ ಆಮೀರ್‌ ಖಾನ್‌ ಅವರ ʼಲಗಾನ್‌ʼ ಸಿನಿಮಾ (Lagaan Movie) ಬಿಡುಗಡೆಯಾಗಿ 21 ವರ್ಷಗಳು ಕಳೆದಿವೆ. ಆಮೀರ್‌ ಖಾನ್‌ ವೃತ್ತಿ ಬದುಕನ್ನೇ ಬದಲಿಸಿದ ಅಪರೂಪದ ಚಿತ್ರ ಲಗಾನ್‌. 2001ರ ಜೂನ್‌ 15ರಂದು ಅಶುತೋಷ್‌ ಗೋವಾರಿಕರ್‌ ನಿರ್ದೇಶನದ ಈ ಚಿತ್ರ ತೆರೆಗೆ ಬಂದಿತ್ತು. ರಾಷ್ಟ್ರ ಮಟ್ಟದಲ್ಲಿ ಅತ್ಯಂತ ಕೀರ್ತಿಗೆ ಪಾತ್ರವಾದ ಲಗಾನ್‌ ಸಿನಿಮಾ ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿಗೂ ಶಾರ್ಟ್‌ಲಿಸ್ಟ್‌ ಮೂಲಕ ಸೆಲೆಕ್ಟ್‌ ಆಗಿತ್ತು. ಈ ಸಿನಿಮಾದಲ್ಲಿ ಆಮೀರ್‌ ಖಾನ್‌ ಜತೆ ಗ್ರೇಸಿ ಸಿಂಗ್ ಮತ್ತು ವಿದೇಶಿ ನಟಿ ರಾಚೆಲ್ ಸಹ ಅಭಿನಯಿಸಿದ್ದಾರೆ. ಲಗಾನ್‌ ಚಿತ್ರ ತಂಡ ಮತ್ತೆ ಒಂದಾಗಿ ಸೇರಿ ಚಿತ್ರೀಕರಣದ ನೆನಪುಗಳನ್ನು, ಖುಷಿಯನ್ನು ಹಂಚಿಕೊಂಡಿದೆ. (ಸಂಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ)

Exit mobile version