ಬೆಂಗಳೂರು: ದೇಶಾದ್ಯಂತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಕ್ಕೆ ಎನ್‌ಐಎ ಶಾಕ್ ನೀಡಿದ್ದರೆ ಇತ್ತ ಕರ್ನಾಟಕದಲ್ಲೂ ಸಿಸಿಬಿ ದಾಳಿ ನಡೆಸಿರುವುದು ಸಂಘಟನೆಯ ನಿಷೇಧದ ಮೊದಲ ಹೆಜ್ಜೆಯೇ ಎಂಬ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಶಿಕ್ಷಕರ ವರ್ಗಾವಣೆ ಮಸೂದೆ ಹಾಗೂ ಹಾಗೂ ಅನೇಕ ಸಮಯದಿಂದ ನನೆಗುದಿಗೆ ಬಿದ್ದಿದ್ದ ಕನ್ನಡ ಸಮಗ್ರ ಭಾಷಾ ಅಭಿವೃದ್ಧಿ ವಿಧೇಯಕಕ್ಕೆ ವಿಧಾಸಭೆಯಲ್ಲಿ ಅನುಮೋದನೆ ದೊರಕಿದೆ, ಪಂಚಮಸಾಲಿ ಮೀಸಲಾತಿ ಕುರಿತು ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. NIA Raid | ಮುಂಜಾನೆ ದಾಳಿಗೆ ಬೆಚ್ಚಿಬಿದ್ದ ಪಿಎಫ್‌ಐ, ರಾಜ್ಯದ ಏಳು ಮಂದಿ ಎನ್‌ಐಎ ವಶದಲ್ಲಿ, ಮುಂದೇನು?
ದೇಶಾದ್ಯಂತ ಗುರುವಾರ ಮುಂಜಾನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಎಸ್‌ಡಿಪಿಐ ನಾಯಕರಿಗೆ ಶಾಕ್ ಕಾದಿತ್ತು. ಸುಮಾರು ೧೩ ರಾಜ್ಯಗಳಲ್ಲಿ ಪಿಎಫ್‌ಐ ಕಚೇರಿ ಮತ್ತು ಮನೆಗಳಿಗೆ ದಾಳಿ ಮಾಡಿದ ಎನ್‌ಐಎ ಒಟ್ಟು ೪೫ ಮಂದಿಯನ್ನು ವಶಕ್ಕೆ ಪಡೆದಿದೆ. ರಾಜ್ಯದಲ್ಲಿ ಬೆಂಗಳೂರು ಮತ್ತು ಮಂಗಳೂರಿನಲ್ಲಿ ದಾಳಿ ನಡೆಸಿದ್ದು ಒಟ್ಟು ೭ ಮಂದಿಯನ್ನು ವಶಕ್ಕೆ ಪಡೆದಿದೆ.
ಬೆಂಗಳೂರಿನ ಪುಲಿಕೇಶಿ ನಗರದಲ್ಲಿರುವ ರಾಜ್ಯದ ಪಿಎಫ್‌ಐ ಪ್ರಧಾನ ಕಚೇರಿ ಹಾಗೂ ಮಂಗಳೂರಿನ ನೆಲ್ಲಿಕಾಯಿ ಮಠ ರಸ್ತೆಯಲ್ಲಿರುವ ಕಚೇರಿಗೆ ಬೆಳಗ್ಗೆಯೇ ರೇಡ್ ಆಗಿತ್ತು. ಎರಡೂ ಕಚೇರಿಗಳನ್ನು ಎನ್‌ಐಎ ಅಧಿಕಾರಿಗಳು ಸಂಪೂರ್ಣವಾಗಿ ಜಾಲಾಡಿದ್ದರು. ಇದರ ಜತೆಗೆ ರಾಜ್ಯದಲ್ಲಿ ಏಳು ಮಂದಿ ಪಿಎಫ್‌ಐ ನಾಯಕರ ನಿವಾಸಕ್ಕೆ ಎನ್‌ಐಎ ದಾಳಿ ಮಾಡಿದ್ದು, ಅವರನ್ನು ವಶಕ್ಕೆ ಪಡೆದಿದೆ. ಅವರಲ್ಲಿ ಒಬ್ಬನನ್ನು ಬಂಧಿಸಿ ದಿಲ್ಲಿಗೆ ಕರೆದೊಯ್ಯಲಾಗಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
PFI ಮೇಲಿನ ದಾಳಿ ಕುರಿತ ಸಮಗ್ರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ.
2. NIA Raid | 15 ರಾಜ್ಯ, 93 ಸ್ಥಳ, ಪಿಎಫ್‌ಐನ 45 ಮುಖಂಡರ ಬಂಧನ, ಇದು ಎನ್‌ಐಎ ದಾಳಿಯ ಇಡೀ ದಿನದ ಚಿತ್ರಣ
ಉಗ್ರರಿಗೆ ಹಣಕಾಸು ನೆರವು, ಉಗ್ರ ಚಟುವಟಿಕೆಗೆ ಪ್ರೋತ್ಸಾಹ ಹಾಗೂ ಉಗ್ರರಿಗೆ ತರಬೇತಿ ನೀಡಿದ ಕುರಿತು ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್ಐಎ, ಇ.ಡಿ ಹಾಗೂ ಆಯಾ ರಾಜ್ಯಗಳ ಪೊಲೀಸರು ಜಂಟಿಯಾಗಿ ಇಡೀ ದಿನ ದೇಶದ ೧೫ ರಾಜ್ಯಗಳಲ್ಲಿ ದಾಳಿ (NIA Raid) ನಡೆಸಿದ್ದಾರೆ.
“ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ದ ನಾಯಕರು ಹಾಗೂ ಸದಸ್ಯರ ನಿವಾಸ, ಕಚೇರಿಗಳ ಮೇಲೆ ೧೫ ರಾಜ್ಯಗಳ ೯೩ ಕಡೆ ಜಂಟಿ ದಾಳಿ ನಡೆಸಲಾಗಿದೆ. ಇಡೀ ದಿನ ನಡೆದ ದಾಳಿಯಲ್ಲಿ ಪಿಎಫ್‌ಐನ ೪೫ ಮುಖಂಡರು ಹಾಗೂ ಸದಸ್ಯರನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಎನ್‌ಐಎ ತಿಳಿಸಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
PFI ಮೇಲಿನ ದಾಳಿ ಕುರಿತ ಸಮಗ್ರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ.
3. PFIಗೆ ಸಿಸಿಬಿ ಶಾಕ್ | ದುಷ್ಕೃತ್ಯಕ್ಕೆ ಸಂಚು ಹೂಡಿದ್ದ 14 ಪಿಎಫ್‌ಐ ನಾಯಕರು ವಶಕ್ಕೆ, 7 ಜಿಲ್ಲೆಗಳಲ್ಲಿ ಆಪರೇಷನ್
ದೇಶಾದ್ಯಂತ ಪಿಎಫ್‌ಐ ಕಚೇರಿಗಳು ಹಾಗೂ ಮುಖಂಡರ ನಿವಾಸಗಳ ಮೇಲೆ ಗುರುವಾರ ಮುಂಜಾನೆ ಎನ್‌ಐಎ ದಾಳಿ ರಾಜ್ಯದಲ್ಲೂ ಕಾರ್ಯಗತವಾಗಿತ್ತು. ಬೆಂಗಳೂರು ಮತ್ತು ಮಂಗಳೂರಿನಲ್ಲಿ ಈ ದಾಳಿ ನಡೆದಿದೆ. ಆದರೆ, ಇದರ ನಡುವೆಯೇ ಬೆಂಗಳೂರು ಸೇರಿದಂತೆ ಏಳು ಜಿಲ್ಲೆಗಳಲ್ಲಿ ರಾಜ್ಯ ಪೊಲೀಸರು ಕೂಡಾ ದಾಳಿ ನಡೆಸಿದ್ದಾರೆ. ಇದು ಉಗ್ರ ಚಟುವಟಿಕೆಯನ್ನು ಬೆಂಬಲಿಸುತ್ತಿರುವ ಆರೋಪ ಎದುರಿಸುತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಕ್ಕೆ ಇದು ದೊಡ್ಡ ಆಘಾತವಾಗಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
PFI ಮೇಲಿನ ದಾಳಿ ಕುರಿತ ಸಮಗ್ರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ.
4. NIA Raid | ನಾವ್ಯಾರಿಗೂ ಹೆದರೋಲ್ಲ, ಶರಣಾಗೋದೂ ಇಲ್ಲ; ಎನ್ಐಎ ದಾಳಿ ಬೆನ್ನಲ್ಲೇ ಪಿಎಫ್‌ಐ ಹೇಳಿಕೆ ಬಿಡುಗಡೆ
ರಾಷ್ಟ್ರವ್ಯಾಪಿ ಎನ್ಐಎ ದಾಳಿ ನಡೆದ ಬೆನ್ನಲ್ಲೇ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಹೇಳಿಕೆ ಬಿಡುಗಡೆ ಮಾಡಿದೆ ಮತ್ತು ಈ ರೇಡ್ನ್ನು ಖಂಡಿಸಿದೆ. ಪತ್ರಿಕಾ ಪ್ರಕಟಣೆ ಹೊರಡಿಸಿರುವ ಪಿಎಫ್‌ಐನ ರಾಷ್ಟ್ರೀಯ ಕಾರ್ಯಕಾರಿ ಮಂಡಳಿ (ಎನ್ಇಸಿ), ‘ಎನ್ಐಎ, ಇಡಿ ತನಿಖಾ ದಳಗಳು ತಮ್ಮ ರಾಷ್ಟ್ರೀಯ, ರಾಜ್ಯಗಳ ನಾಯಕರಿಗೆ ಸೇರಿದ ಸ್ಥಳಗಳ ಮೇಲೆ ರೇಡ್ ಮಾಡಿದ್ದು ಅನ್ಯಾಯ. ಅವರನ್ನು ಬಂಧಿಸಿದ್ದೂ ತಪ್ಪು. ನಮ್ಮ ಸಂಘಟನೆಯ ಬೆಂಬಲಿಗರು, ಕಾರ್ಯಕರ್ತರ ಮೇಲೆ ಕೂಡ ತನಿಖಾ ದಳಗಳು ದೌರ್ಜನ್ಯ ಎಸಗುತ್ತಿವೆ’ ಎಂದು ಹೇಳಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
PFI ಮೇಲಿನ ದಾಳಿ ಕುರಿತ ಸಮಗ್ರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ.
5. ಶಿಕ್ಷಕರ ವರ್ಗಾವಣೆ ಮಸೂದೆಗೆ ವಿಧಾನಸಭೆ ಅಸ್ತು; ದಂಪತಿ ವರ್ಗಾವಣೆ ಜಿಲ್ಲೆಗೆ ವಿಸ್ತರಣೆ
ಶಿಕ್ಷಣ ಇಲಾಖೆಯ ಶಿಕ್ಷಕರ ವರ್ಗಾವಣೆ ಕುರಿತಂತೆ ʼಶಿಕ್ಷಕರ ವರ್ಗಾವಣೆ ನಿಯಂತ್ರಣ ಮಸೂದೆʼಗೆ ವಿಧಾನಸಭೆಯಲ್ಲಿ ಒಪ್ಪಿಗೆ ದೊರೆತಿದ್ದು, ದಂಪತಿ ವರ್ಗಾವಣೆ ಸೇರಿ ಅನೇಕ ವಿಚಾರಗಳಲ್ಲಿ ಶಿಕ್ಷಕರಿಗೆ ಅನುಕೂಲವಾಗುವ ಸಾಧ್ಯತೆಯಿದೆ.
ವಿಧಾನಸಭೆಯಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಸೂದೆಯನ್ನು ಮಂಡಿಸಿದರು. ಇದಕ್ಕೆ ಧ್ವನಿಮತದ ಮೂಲಕ ಒಪ್ಪಿಗೆ ನೀಡಲಾಯಿತು. ಒಂದೇ ವಿಷಯದ ಶಿಕ್ಷಕರು ಪರಸ್ಪರ ವರ್ಗಾವಣೆಗೆ ಈ ವಿಧೇಯಕದ ಮೂಲಕ ಅವಕಾಶ ಮಾಡಿಕೊಡಲಾಗಿದೆ. ಹುದ್ದೆಗಳ ಪರೀಕ್ಷೆಯಲ್ಲಿ ಪಡೆದ ಅಂಕಗಳ ಅನುಸಾರವಾಗಿ ಸಿದ್ಧಪಡಿಸಿದ ಮೆರಿಟ್ ಪಟ್ಟಿ ಮೂಲಕವೂ ಆಯ್ಕೆ ಮಾಡಲಾಗುವುದು ಎನ್ನುವುದೂ ಸೇರಿ ಅನೇಕ ಮಹತ್ವದ ಅಂಶಗಳು ಮಸೂದೆಯಲ್ಲಿವೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: ಶಿಕ್ಷಕರ ವರ್ಗಾವಣೆ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಒಪ್ಪಿಗೆ; ಶಿಕ್ಷಕರ ಸಂಘ ಹರ್ಷ
6. ಕನ್ನಡಕ್ಕಾಗಿ ʼಕೈʼ ಎತ್ತಲು ಈಗ ಕಾನೂನು ಬಲ: ಸಮಗ್ರ ಭಾಷಾ ವಿಧೇಯಕಕ್ಕೆ ವಿಧಾನಸಭೆ ಒಪ್ಪಿಗೆ
ಕನ್ನಡವನ್ನು ಆಡಳಿತದಲ್ಲಿ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಏಕೀಕೃತ ಕಾಯ್ದೆ ಇರಬೇಕು ಎಂಬ ಸುಮಾರು ವರ್ಷಗಳ ಬೇಡಿಕೆ ಕೊನೆಗೂ ಈಡೇರಿದೆ. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-2022ಕ್ಕೆ ವಿಧಾನಸಭೆಯಲ್ಲಿ ಒಪ್ಪಿಗೆ ದೊರಕಿದೆ. ಉನ್ನತ, ತಾಂತ್ರಿಕ ಹಾಗೂ ವೃತ್ತಿ ಶಿಕ್ಷಣದಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಪರಿಚಯಿಸಿ ಕನ್ನಡ ಕಲಿಕೆಗೆ ಪ್ರೋತ್ಸಾಹಿಸುವುದು, ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಉನ್ನತ , ತಾಂತ್ರಿಕ ಹಾಗೂ ವೃತ್ತಿ ಶಿಕ್ಷಣದಲ್ಲಿ ಮೀಸಲು ಸೌಲಭ್ಯ ಸೇರಿ ಅನೇಕ ಮಹತ್ವದ ಅಂಶಗಳು ಮಸೂದೆಯಲ್ಲಿವೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
7. ಸದನದಲ್ಲಿ Pay CM ಜಟಾಪಟಿ | ಸಾರ್ವಜನಿಕ ಕ್ಷೇತ್ರದಲ್ಲಿರೋರು ʼಸೀಜರನ ಹೆಂಡತಿʼ ಇದ್ದ ಹಾಗೆ ಎಂದ ಮಾಧುಸ್ವಾಮಿ
ಸಿಎಂ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಪೇ ಸಿಎಂ ಅಭಿಯಾನದ ಕುರಿತು ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಗದ್ದಲಕ್ಕೆ ಕಾರಣವಾಯಿತು. ಕುಡಚಿ ಶಾಸಕ ಪಿ. ರಾಜೀವ್ ಈ ವಿಚಾರವನ್ನು ಪ್ರಸ್ತಾಪಿಸಿದರು. ಇತ್ತೀಚೆಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಕೆಲ ರಾಜಕೀಯ ಘಟನೆಗಳು, ಕರ್ನಾಟಕ ಅಧಃಪತನಕ್ಕೆ ಹೋಗುತ್ತಿದೆಯೇ ಎನ್ನುವ ಭಾವನೆ ಮೂಡಿಸುತ್ತಿವೆ ಎಂದರು. ಅನೇಕ ಹೊತ್ತು ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಶಾಸಕರ ನಡುವೆ ವಾಗ್ವಾದಕ್ಕೆ ಕಾರಣವಾಗಿ, ಕೊನೆಗೆ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಸ್ಪಷ್ಟನೆಯೊಂದಿಗೆ ಸಮಾಪ್ತಿಯಾಯಿತು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Poster Politics | PAYCM ಪೋಸ್ಟರ್‌ಗೆ ಕೇಸ್ ಜಡಿದಿದ್ದ ಬಿಜೆಪಿಯಿಂದ ಈಗ ಸ್ಕ್ಯಾಮ್ ರಾಮಯ್ಯ ಪುಸ್ತಕ ಬಿಡುಗಡೆ
8. ಪಂಚಮಸಾಲಿ ಮೀಸಲಾತಿಗೆ ಬದ್ಧನಾಗಿದ್ದೇನೆ ಎಂದ BSY: ವಿವಾದಕ್ಕೆ ವಿಧಾನಸಭೆಯಲ್ಲಿ ಸ್ಪಷ್ಟನೆ
ವಿಧಾನಸಭೆ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಪುತ್ರ ಬಿ. ವೈ. ವಿಜಯೇಂದ್ರ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಯಡಿಯೂರಪ್ಪ ಸ್ಪಷ್ಟನೆ ನೀಡಿದರು. ಪಂಚಮಸಾಲಿ ಸಮುದಾಯವನ್ನು 3ಬಿಗೆ ಸೇರಿಸುವಲ್ಲಿ ಸಾಕಷ್ಟು ಕೆಲಸ ಮಾಡಿದ್ದೆವು. ಅದೇ ರೀತಿ 2ಎಗೆ ಸೇರಿಸಬೇಕು ಎಂಬುದರ ಕುರಿತು ಕ್ರಮ ವಹಿಸಲಾಗಿತ್ತು. ತಾಂತ್ರಿಕ ಸಮಸ್ಯೆಯ ಕಾರಣದಿಂದಾಗಿ ಪ್ರಯತ್ನಕ್ಕೆ ಹಿನ್ನಡೆ ಆಗಬಾರದು ಎಂಬ ಕಾರಣಕ್ಕೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ವಹಿಸಲಾಗಿತ್ತು ಎಂದರು. ಇದಕ್ಕೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯಿಸಿದರು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
9. ವಿಸ್ತಾರ Money Guide | ಲಾಭದಾಯಕ ಟಾಪ್- 5 ಲಾರ್ಜ್ ಕ್ಯಾಪ್ ಈಕ್ವಿಟಿ ಮ್ಯೂಚುಯಲ್ ಫಂಡ್‌ಗಳಿವು!
ಮ್ಯೂಚುಯಲ್ ಫಂಡ್‌ಗಳಲ್ಲಿ ಹೆಚ್ಚು ಲಾಭ ತಂದುಕೊಡುವ ಲಾರ್ಜ್ ಕ್ಯಾಪ್ ಈಕ್ವಿಟಿ ಮ್ಯೂಚುಯಲ್ ಫಂಡ್‌ಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಉಪಯುಕ್ತ ಒಳನೋಟ (ವಿಸ್ತಾರ Money Guide) ಮತ್ತು ವಿವರಗಳು ಇಲ್ಲಿವೆ. ಅತ್ಯಂತ ಸರಳ ಶೈಲಿಯಲ್ಲಿ ವಿಸ್ತಾರ ನ್ಯೂಸ್ ಎಕ್ಸಿಕ್ಯುಟಿವ್ ಎಡಿಟರ್ ಶರತ್ ಎಂ.ಎಸ್. ವಿವರಿಸಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
10. RSS Chief Bhagwat | ಮೋಹನ್ ಭಾಗವತ್‌ರನ್ನು ರಾಷ್ಟ್ರಪಿತ ಎಂದ ಮೌಲ್ವಿ, ಡಿಎನ್‌ಎ ಒಂದೇ ಎಂದೂ ಹೇಳಿಕೆ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ (RSS Chief Bhagwat) ಅವರನ್ನು ಮುಸ್ಲಿಂ ಮೌಲ್ವಿಯೊಬ್ಬರು “ರಾಷ್ಟ್ರಪಿತ” (Rashtra Pita) ಎಂದು ಕರೆದಿದ್ದಾರೆ. ದೆಹಲಿಯಲ್ಲಿರುವ ಮಸೀದಿಗೆ ಭೇಟಿ ನೀಡಿದ ಬಳಿಕ ಆಲ್ ಇಂಡಿಯಾ ಇಮಾಮ್ ಆರ್ಗನೈಸೇಷನ್‌ನ ಮುಖ್ಯ ಮೌಲ್ವಿ ಉಮರ್ ಅಹ್ಮದ್ ಇಲ್ಯಾಸಿ (Umer Ahmed Ilyasi) ಅವರೊಂದಿಗೆ ಸಭೆ ನಡೆಸಿದರು. ಇದಾದ ಬಳಿಕ ಉಮರ್ ಅಹ್ಮದ್ ಅವರು ಭಾಗವತ್ ಅವರನ್ನು ರಾಷ್ಟ್ರಪಿತ ಎಂದಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.