Site icon Vistara News

ವಿಸ್ತಾರ TOP 10 NEWS | ನಿತೀಶ್‌ ಆವಾಜ್‌ನಿಂದ ಬೊಮ್ಮಾಯಿಗೆ BSY ಅಭಯವದರೆಗಿನ ಪ್ರಮುಖ ಸುದ್ದಿಗಳಿವು

Vistara TOP 10

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ರಣಕಹಳೆ ಎಂಬಂತೆ ಬಿಹಾರದಲ್ಲಿ ಎನ್‌ಡಿಎಯಿಂದ ಹೊರಬಂದ ನಿತೀಶ್‌ ಕುಮಾರ್‌ ಆರ್‌ಜೆಡಿ ಜತೆಗೆ ಸರ್ಕಾರ ರಚಿಸಿದ್ದಾರೆ. 2024ಕ್ಕೆ ನೋಡಿಕೊಳ್ಳುತ್ತೇವೆ ಎಂದು ನೇರವಾಗಿ ನರೇಂದ್ರ ಮೋದಿ ಅವರಿಗೆ ಸವಾಲೆಸೆದಿದ್ದಾರೆ. ಈ ನಡುವೆ, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ. ವಿಮಾನಯಾನ ಟಿಕೆಟ್‌ ದರ ಕಡಿಮೆಯಾಗುವ ಸಂಭವ, ಪ್ರತಿಪಕ್ಷ ಕಾಂಗ್ರೆಸ್‌ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ಸೇರಿದಂತೆ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. ನಾವು ಮೋದಿಯನ್ನು 2024ರ ಚುನಾವಣೆಯಲ್ಲಿ ನೋಡಿಕೊಳ್ತೇವೆ: ನಿತೀಶ್​ ಕುಮಾರ್ ಆವಾಜ್​
8ನೇ ಬಾರಿಗೆ ಮುಖ್ಯಮಂತ್ರಿಯಾಗುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಿತೀಶ್​ ಕುಮಾರ್​ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿಗೆ ನೇರವಾಗಿ ಸವಾಲು ಹಾಕಿದರು. ‘ನಾವು ನರೇಂದ್ರ ಮೋದಿಯವರನ್ನು 2024ರ ಚುನಾವಣೆಯಲ್ಲಿ ನೋಡಿಕೊಳ್ಳುತ್ತೇವೆ. ಇನ್ನೊಮ್ಮೆ ಮೋದಿ ಪ್ರಧಾನಿಯಾಗಲು ಬಿಡುವುದಿಲ್ಲ. 2024ರ ಚುನಾವಣೆ, 2014ರಂತೆ ಇರುವುದಿಲ್ಲ. ಪ್ರತಿಪಕ್ಷಗಳನ್ನೆಲ್ಲ ಒಗ್ಗೂಡಿಸುತ್ತೇನೆ. ಪ್ರತಿಪಕ್ಷ ದುರ್ಬಲ ಆಗಲು ಇನ್ನುಮುಂದೆ ಬಿಡುವುದೂ ಇಲ್ಲ. 2014ರಲ್ಲೇನೋ ನರೇಂದ್ರ ಮೋದಿ ಗೆದ್ದರು, ಹಾಗಂತ 2024ರಲ್ಲಿ ಗೆಲ್ಲುವುದು ಅಷ್ಟು ಸುಲಭವೇʼ ಎಂದು ಪ್ರಶ್ನಿಸಿದರು. ಹಾಗೆಯೇ, 2024ರ ಚುನಾವಣೆಯಲ್ಲಿ ತಾವು ಪ್ರಧಾನಿ ಅಭ್ಯರ್ಥಿ ಅಲ್ಲ ಎಂದೂ ಹೇಳಿಕೊಂಡರು. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

2. ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯ ಮುನ್ಸೂಚನೆ ನೀಡಿದ ಯಡಿಯೂರಪ್ಪ: ಸಿಎಂ ಬೊಮ್ಮಾಯಿಗೆ ಅಭಯ
ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆಗೆ ಚರ್ಚೆಗೆ ಮತ್ತೆ ಚಾಲನೆ ಸಿಕ್ಕಿದ್ದು, ಚುನಾವಣೆಗೂ ಮುನ್ನ ಬಸವರಾಜ ಬೊಮ್ಮಾಯಿ ಬದಲಾವಣೆ ಬಗ್ಗೆ ಪಕ್ಷದ ವಲಯದಲ್ಲಿ ಮಾತುಕತೆ ನಡೆಯುತ್ತಿದೆ. ಈ ನಡುವೆ ಬೆಂಗಳೂರಿನಲ್ಲಿ ಮಾತನಾಡಿರುವ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದಲಾವಣೆ ಆಗುವುದಿಲ್ಲ ಎಂದಿದ್ದಾರೆ. ಆದರೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಸ್ಥಾನ ಬದಲಾಗಬಹುದು ಎಂದಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

3. Rain News| ವರುಣನಿಗೆ ಅಲ್ಪ ವಿರಾಮ, ಭಾನುವಾರದವರೆಗೆ ಮಳೆ ಅಬ್ಬರ ಇರಲಿಕ್ಕಿಲ್ಲ. ಮಳೆಯ ನಂತರದ ವಿಕೋಪ ಮುಂದುವರಿಕೆ
ರಾಜ್ಯದಲ್ಲಿ ಬುಧವಾರ ವರುಣನ ಅಬ್ಬರ ಸ್ವಲ್ಪ ಕಡಿಮೆ ಇತ್ತು. ಆದರೆ, ಮಹಾರಾಷ್ಟ್ರದ ಮಳೆ ಪ್ರವಾಹ, ಅಲ್ಲಿಂದ ಹರಿದುಬರುತ್ತಿರುವ ಜಲರಾಶಿಯಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಜತೆಗೆ ಮಳೆಯಿಂದಾಗಿ ಜರ್ಜರಿತಗೊಂಡ ಗುಡ್ಡಗಳು, ಮನೆಗಳು ಕುಸಿಯುವ ವಿದ್ಯಮಾನಗಳು ನಡೆಯುತ್ತಲೇ ಇವೆ. ಆದರೂ ಕಳೆದ ಹಲವು ವಾರಗಳಿಂದ ಅಬ್ಬರಿಸುತ್ತಿರುವ ವರುಣನ ಪ್ರತಾಪ ಕಡಿಮೆ ಆಗಿರುವುದರಿಂದ ಸ್ವಲ್ಪ ಮಟ್ಟಿಗೆ ನಿರಾಳತೆ ಕಂಡಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.
Heavy Rain | ರಸ್ತೆ ಕಾಣದೆ ಮಗುಚಿ ಬಿದ್ದ ಆಲ್ಟೊ ಕಾರು; ಒಳಗೆ ಇದ್ದವರು ಸೇಫ್‌
Chikkamagaluru rain | ಅಡುಗೆ ಮಾಡುತ್ತಿದ್ದಾಗ ಕಳಚಿ ಬಿದ್ದ ಮನೆ ಚಾವಣಿ

Heavy Rain | ಸತತ ಮಳೆಗೆ ಸೋಮವಾರಪೇಟೆಯಲ್ಲಿ ಭೂಕುಸಿತ; ಆತಂಕದಲ್ಲಿ ಗ್ರಾಮಸ್ಥರು

4. Flight tickets| ಏರ್‌ ಟಿಕೆಟ್‌ ದರದ ಮಿತಿ ಆಗಸ್ಟ್‌ 31ರಿಂದ ರದ್ದು, ದರ ಇಳಿಕೆ ಸಂಭವ
ವಿಮಾನಗಳ ಏರ್‌ ಟಿಕೆಟ್‌ಗಳ ದರ ನಿಗದಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ಕೋವಿಡ್‌ ಬಿಕ್ಕಟ್ಟಿನ ಸಂದರ್ಭ ವಿಧಿಸಿದ್ದ ಮಿತಿ ಆಗಸ್ಟ್‌ ೩೧ರಿಂದ ರದ್ದಾಗಲಿದೆ. ನಾಗರಿಕ ವಿಮಾನಯಾನ ಸಚಿವಾಲಯ ಈ ವಿಷಯವನ್ನು ಬುಧವಾರ ಘೋಷಿಸಿದೆ. ಇದರಿಂದ ಸಂಕಷ್ಟದಲ್ಲಿರುವ ಏರ್‌ಲೈನ್‌ಗಳಿಗೆ ನಷ್ಟವನ್ನು ಕಡಿಮೆ ಮಾಡಲು ಹಾದಿ ಸುಗಮವಾಗಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

5. ಚಾಮರಾಜಪೇಟೆ ಮೈದಾನ | ಧ್ವಜಾರೋಹಣಕ್ಕೆ ಸಿದ್ಧವೆಂದ ಮುಸ್ಲಿಂ ಸಂಘಟನೆ; ಆದರೆ…
ಚಾಮರಾಜಪೇಟೆ ಮೈದಾನದಲ್ಲಿ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧವಾಗಿದ್ದೇವೆ ಎಂದು ಮುಸ್ಲಿಂ ಮುಖಂಡರು ತಿಳಿಸಿದ್ದಾರೆ. ಮೈದಾನದ ಕುರಿತು ಪೊಲೀಸರು ಆಯೋಜಿಸಿದ್ದ ಮುಸ್ಲಿಂ ಮುಖಂಡರ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಸಭೆಯ ನಂತರ ಮುಸ್ಲಿಂ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಜೈರುದ್ದೀನ್ ಮಾತನಾಡಿ, ಎಲ್ಲರೂ ಶಾಂತಿ ಕಾಪಾಡುವಂತೆ ನಾವು ಹೇಳಿದ್ದೇವೆ. ನಮ್ಮ ಕರ್ತವ್ಯವನ್ನು ನಾವು ಮಾಡುತ್ತೇವೆ. ಪೊಲೀಸರಿಗೆ ನಾವು ಸಹಕಾರ ನೀಡುತ್ತೇವೆ. ನಾವೆಲ್ಲರೂ 40 ವರ್ಷದಿಂದ ಅಣ್ಣ ತಮ್ಮಂದಿರ ಹಾಗೆ ಇದ್ದೇವೆ. ನಾವು ಯಾರಿಗೂ ತೊಂದರೆ ಕೊಟ್ಟಿಲ್ಲ. ಶಾಂತಿ ಭಂಗ ಮಾಡುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದೇವೆ. ಕಂದಾಯ ಇಲಾಖೆ ಏನು ಹೇಳುತ್ತದೆ ಎನ್ನುವುದರ ಆಧಾರದಲ್ಲಿ ಸ್ವಾತಂತ್ರೋತ್ಸವ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

6. 2G Ethanol Plant | ಬ್ಲ್ಯಾಕ್ ಮ್ಯಾಜಿಕ್​ ನಡೆಯೋದಿಲ್ಲವೆಂದು ವ್ಯಂಗ್ಯ ಮಾಡಿದ ಪ್ರಧಾನಿ ಮೋದಿ
ಹರ್ಯಾಣದಲ್ಲಿ ಹೊಸ ಜೈವಿಕ ಇಂಧನ ಪ್ಲಾಂಟ್​​ನ್ನು ನಿರ್ಮಾಣ ಮಾಡಲಾಗಿದೆ. ಆಗಸ್ಟ್ 5ರಂದು ಕಾಂಗ್ರೆಸ್​​ನವರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ಮಾಡಿದ್ದಕ್ಕೆ ಇದೇ ಹೊತ್ತಲ್ಲಿ ತಿರುಗೇಟು ನೀಡಿದ ಪ್ರಧಾನಿ ಮೋದಿ, ‘ದೇಶದಲ್ಲಿ ಕೆಲವು ಜನರು ಹತಾಶೆ ಮತ್ತು ಋಣಾತ್ಮಕತೆಯನ್ನೇ ತುಂಬಿಕೊಂಡಿದ್ದಾರೆ. ಜನರನ್ನು ನಂಬಿಸಲು ಅವರು ಆಗಸ್ಟ್​ 5ರಂದು ಏನು ಮಾಡಿದರು ಎಂದು ನಾವೆಲ್ಲ ನೋಡಿದ್ದೇವೆ. ಅಂಥ ಬ್ಲ್ಯಾಕ್​ ಮ್ಯಾಜಿಕ್​ಗಳನ್ನು ಜನರು ನಂಬುವುದನ್ನು ಬಿಟ್ಟುಬಿಟ್ಟಿದ್ದಾರೆʼ ಎಂದು ಹೇಳಿದ್ದಾರೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

7. Loan Apps | ಸಾಲದ ಆ್ಯಪ್‌ಗಳಲ್ಲಿ ವಂಚನೆ ತಡೆಯಲು ಆರ್‌ಬಿಐನಿಂದ ಹೊಸ ನಿಯಮಾವಳಿ ಬಿಡುಗಡೆ
ಸುಲಭವಾಗಿ ಹಾಗೂ ತ್ವರಿತವಾಗಿ, ಹೆಚ್ಚಿನ ದಾಖಲೆಯ ಅಗತ್ಯ ಕೂಡ ಇಲ್ಲದೆ ಸಾಲ ಕೊಡುವುದಾಗಿ ನಂಬಿಸುವ ಹಾಗೂ ಅಂತಿಮವಾಗಿ ಭಾರಿ ಬಡ್ಡಿ ದರ ವಿಧಿಸಿ ಸಾಲಗಾರರನ್ನು ವಂಚಿಸುವ ಆನ್‌ಲೈನ್‌ ಸಾಲದ ಆ್ಯಪ್‌ಗಳ (Loan Apps) ಹಾವಳಿಯನ್ನು ನಿಯಂತ್ರಿಸಲು ಇದೀಗ ಆರ್‌ಬಿಐ ಮಧ್ಯಪ್ರವೇಶಿಸಿದೆ. ಆರ್‌ಬಿಐ ಡಿಜಿಟಲ್‌ ಲೆಂಡಿಂಗ್‌ ರೆಗ್ಯುಲೇಟರಿ ಫ್ರೇಮ್‌ವರ್ಕ್‌ ಅನ್ನು ಬುಧವಾರ ಬಿಡುಗಡೆಗೊಳಿಸಿದ್ದು, ಡಿಜಿಟಲ್‌ ಸಾಲ ವಿತರಣೆಯನ್ನು ಮೂರು ವಿಭಾಗಗಳಾಗಿ ವರ್ಗೀಕರಿಸಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

8. ನಕಲಿ ಡೀಲ್‌ ರಾಜ V/S ಮಿಸ್ಟರ್‌ ಬ್ಲ್ಯಾಕ್‌ಮೇಲರ್‌: ಎಚ್‌ಡಿಕೆ, ಅಶ್ವತ್ಥನಾರಾಯಣ ಸಮರ
ಐಟಿಬಿಟಿ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಹಾಗೂ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ನಡುವಿನ ವಾಕ್ಸಮರ ಈಗ ವೈಯಕ್ತಿಕ ಹಂತಕ್ಕೆ, ಏಕವಚನಕ್ಕೆ ಇಳಿದಿದೆ. ಅಶ್ವತ್ಥನಾರಾಯಣ ಅವರನ್ನು ನಕಲಿ ಡೀಲ್‌ ರಾಜ ಎಂದು ಕುಮಾರಸ್ವಾಮಿ ತೆಗಳಿದ್ದರೆ, ಕುಮಾರಸ್ವಾಮಿ ಅವರನ್ನು ಮಿಸ್ಟರ್‌ ಬ್ಲ್ಯಾಕ್‌ಮೇಲರ್‌ ಎಂದು ಅಶ್ವತ್ಥನಾರಾಯಣ ಟೀಕಿಸಿದ್ದಾರೆ. ಇಬ್ಬರ ನಡುವೆ ಈ ಹಿಂದಿನಿಂದಲೂ ಸಂಘರ್ಷ ನಡೆಯುತ್ತಲೇ ಇದೆ. 545 ಪಿಎಸ್‌ಐ ನೇಮಕ ಹಗರಣದ ಸಂದರ್ಭದಲ್ಲಿ, ಸರ್ಟಿಫಿಕೇಟ್‌ ನಕಲು ಮಾಡಿದ್ದವರು ಎಂದು ಅಶ್ವತ್ಥನಾರಾಯಣ ವಿರುದ್ಧ ಕುಮಾರಸ್ವಾಮಿ ಆರೋಪಿಸಿದ್ದರು. ನಂತರ ಇಬ್ಬರ ನಡುವೆ ನಡೆದಿದ್ದ ವಾಕ್ಸಮರ ಈಗ ಎರಡು ದಿನದಿಂದ ಪುನಾರಂಭಗೊಂಡಿದೆ. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

9. ಕರ್ನಾಟಕ ವಿಧಾನಸಭೆ ಚುನಾವಣೆ ಕ್ಷೇತ್ರ ಸಮೀಕ್ಷೆಯಲ್ಲಿ ʻಹಾಸನ ಜಿಲ್ಲೆʼ ಆರಂಭ
2023ರ ವಿಧಾನಸಭೆ ಚುನಾವಣೆಗೂ ಮುನ್ನ ಎಲ್ಲ ವಿಧಾನಸಭಾ ಕ್ಷೇತ್ರಗಳ ಪರಿಚಯವನ್ನೂ ಒದಗಿಸುವ ಸಲುವಾಗಿ ʻವಿಸ್ತಾರ ನ್ಯೂಸ್‌ʼ ಎಲೆಕ್ಷನ್‌ ಹವಾ ಸರಣಿ ಪ್ರಕಟಿಸುತ್ತಿದೆ. ಈಗಾಗಲೆ ಮಂಡ್ಯ ಹಾಗೂ ಹುಬ್ಬಳ್ಳಿ-ಧಾರವಾಡದ ಎಲ್ಲ ವಿಧಾನಸಭೆ ಕ್ಷೇತ್ರಗಳ ಪರಿಚಯ, ಅಲ್ಲಿನ ರಾಜಕೀಯ ಪರಿಸ್ಥಿತಿಯ ವರದಿ ಪ್ರಕಟವಾಗಿದೆ. ಬುಧವಾರದಿಂದ ಹಾಸನ ಜಿಲ್ಲೆಯ ವರದಿಗಳ ಪ್ರಕಟಣೆ ಆರಂಭವಾಗಿದೆ. ಮೊದಲ ದಿನ, ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ವರದಿಯಿದೆ. ವರದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

10. ಪ್ರವೀಣ್‌ ನೆಟ್ಟಾರು ಹಂತಕರ ಸಂಪೂರ್ಣ ಜಾತಕ ಗೊತ್ತಿದೆ, ಆಸ್ತಿ ಮುಟ್ಟುಗೋಲಿಗೂ ಚಿಂತನೆ: ಎಡಿಜಿಪಿ
ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಯಾಗಿದ್ದ ಪ್ರವೀಣ್‌ ನೆಟ್ಟಾರು ಅವರನ್ನು ಕೊಲೆ ಮಾಡಿರುವ ಪ್ರಧಾನ ಹಂತಕರ ಸಂಪೂರ್ಣ ಜಾತಕ ನಮ್ಮ ಕೈಯಲ್ಲಿದೆ. ಅವರ ವಿಳಾಸ, ಮನೆ, ಹೆಂಡತಿ, ಮಕ್ಕಳ ವಿವರವೂ ಇದೆ. ಈಗ ಅತ್ತಿತ್ತ ಓಡಾಡಿಕೊಂಡು ತಪ್ಪಿಸಿಕೊಳ್ಳುತ್ತಿದ್ದಾರೆ. ತುಂಬ ದಿನ ಅಡಗಿಕೊಂಡಿರಲು ಸಾಧ್ಯವಿಲ್ಲ: ಹೀಗೆಂದು ಎಚ್ಚರಿಕೆ ಮತ್ತು ಮಾಹಿತಿಯ ಧ್ವನಿಯಲ್ಲಿ ಮಾತನಾಡಿದವರು ರಾಜ್ಯದ ಎಡಿಜಿಪಿ ಅಲೋಕ್‌ ಕುಮಾರ್‌. ಸಂಪೂರ್ಣ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

Exit mobile version