TOP 10. MS Dhoni: ಧೋನಿ ಮನೆಯಲ್ಲಿರುವ ಗ್ಯಾರೇಜ್ ಕಂಡು ಬೆರಗಾದ ವೆಂಕಟೇಶ್ ಪ್ರಸಾದ್
ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ(MS Dhoni) ಅವರಿಗೆ ಬೈಕ್ ಮತ್ತು ಕಾರುಗಳೆಂದರೆ ಅಚ್ಚುಮೆಚ್ಚು ಅದರಲ್ಲೂ ಬೈಕ್ ಮೇಲೆ ಹೆಚ್ಚಿನ ಮೋಹ, ರಾಂಚಿಯ ಗ್ಯಾರೇಜ್‌ನಲ್ಲಿ(ms dhoni garage) ಅನೇಕ ವಿಂಟೇಜ್ ಮತ್ತು ಐಷಾರಾಮಿ ಕಾರುಗಳು ಮತ್ತು ಬೈಕ್‌ಗಳನ್ನು ಅವರು ಸಂಗ್ರಹಿಸಿದ್ದಾರೆ. ಬೈಕ್ ಮತ್ತು ಕಾರುಗಳ ವಿಡಿಯೊವನ್ನು ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್(Venkatesh Prasad) ಹಂಚಿಕೊಂಡಿದ್ದಾರೆ. ಜತೆಗೆ ಈ ಗ್ಯಾರೇಜ್ ಕಂಡು ಬೆರಗಾದೆ ಎಂದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
TOP 9. Terrorists Killed: ಭದ್ರತಾ ಪಡೆಗಳ ಭರ್ಜರಿ ಬೇಟೆ; 4 ಭಯೋತ್ಪಾದಕರ ಹತ್ಯೆ
ಪೂಂಚ್ನಲ್ಲಿ ಇಂದು ನಾಲ್ವರು ಭಯೋತ್ಪಾದಕರನ್ನು ಭದ್ರತಾ ಸಿಬ್ಬಂದಿ ಹೊಡೆದುರುಳಿಸಿದ್ದಾರೆ (Terrorists Killed). ಸೋಮವಾರ ಮಧ್ಯರಾತ್ರಿಯಿಂದಲೂ ಪೂಂಚ್ನ ಸುರಾ್ಕೋಟೆ ಬೆಲ್ಟ್ನಲ್ಲಿರುವ ಸಿಂಧಾರಾ ಗುಡ್ಡ ಪ್ರದೇಶದಲ್ಲಿ ಭಯೋತ್ಪಾದಕರ ವಿರುದ್ಧ ಭದ್ರತಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು (Terrorists Killed In Poonch). ಮಂಗಳವಾರ ಮುಂಜಾನೆ 5ಗಂಟೆ ಹೊತ್ತಿಗೆ ನಾಲ್ವರು ಉಗ್ರರ ಹತ್ಯೆಯಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
TOP 8. Kichcha Sudeep : ಕೇಳಿದ ತಕ್ಷಣ ಹಣ ಕೋಡೋಕೆ ಸುದೀಪ್ ಚಿಕ್ಕ ಹುಡುಗ ಅಲ್ಲ!
ಸ್ಯಾಂಡಲ್‌ವುಡ್ ಬಾದ್ ಶಾ, ಕಿಚ್ಚ ಸುದೀಪ್ (Kichcha Sudeep) ಹಾಗೂ ನಿರ್ಮಾಪಕ ಎಂ.ಎನ್. ಕುಮಾರ್ (Film Producer MN Kumar) ನಡುವಿನ ಜಟಾಪಟಿ ಮುಂದುವರಿದಿದ್ದು, ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಅಲ್ಲದೆ, ಈ ನಡುವೆ ಧರಣಿಗೆ ಕುಳಿತಿರುವ ಕುಮಾರ್ ಬೆನ್ನಿಗೆ ಹಲವು ನಿರ್ಮಾಪಕರು ಕುಳಿತಿದ್ದಾರೆ. ಇವರಿಗೆ ಸಾರಾ ಗೋವಿಂದ್ (Sara Govind) ಸೇರಿದಂತೆ 20 ನಿರ್ಮಾಪಕರು ಬೆಂಬಲ ಸೂಚಿಸಿದ್ದಾರೆ. ಈ ನಡುವೆ ಸಾರಾ ಗೋವಿಂದ್ ಮಾತನಾಡಿ, ಕೇಳಿದ ತಕ್ಷಣ ಹಣ ಕೋಡೋಕೆ ಸುದೀಪ್ ಏನು ಚಿಕ್ಕ ಹುಡುಗ ಅಲ್ಲ ಎಂದು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
TOP 7. Viral Video: ಮಗನ ಸ್ಕೂಲ್ ಫೀಸ್ಗೆ ಹಣ ಹೊಂದಿಸುವ ಸಲುವಾಗಿ ಬಸ್ಗೆ ಡಿಕ್ಕಿ ಹೊಡೆದ ಮಹಿಳೆ!
ಈ ಮಹಿಳೆಯದ್ದು ಮುಗ್ಧತನೋ, ಮೂರ್ಖತನವೋ ಗೊತ್ತಿಲ್ಲ. ಅಥವಾ ಕಷ್ಟಗಳಿಂದ ಕಂಗೆಟ್ಟು ಮೂಡಿದ ಹತಾಶೆಯೋ..ನಮಗರ್ಥ ಆಗುವುದಿಲ್ಲ. ಆದರೆ ಯಾರೋ ಹೇಳಿದ ಮಾತನ್ನು ನಂಬಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಮಗನ ಭವಿಷ್ಯ ಭದ್ರ ಮಾಡಲು ಹೋಗಿ ಅನ್ಯಾಯವಾಗಿ ಜೀವ ಬಿಟ್ಟಿದ್ದಾಳೆ (Woman Died). ಆ್ಯಕ್ಸಿಡೆಂಟ್ ಆದರೆ ಸರ್ಕಾರದಿಂದ ಪರಿಹಾರದ ರೂಪದಲ್ಲಿ ಹಣ ಬರುತ್ತದೆ. ಅದರಲ್ಲಿ ಮಗನ ಶಾಲೆ ಫೀಸ್ ಕಟ್ಟಬಹುದು ಎಂದು ಭಾವಿಸಿ, ವೇಗವಾಗಿ ಬರುತ್ತಿದ್ದ ಬಸ್ಗೆ ತಾನೇ ಹೋಗಿ ಡಿಕ್ಕಿ ಹೊಡೆದು (Woman Hits To Bus) ಮೃತಪಟ್ಟಿದ್ದಾಳೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
TOP 6. Gruhalakshmi Scheme : ನಾಳೆಯಿಂದ ಗೃಹಲಕ್ಷ್ಮಿ ನೋಂದಣಿ ; ಅರ್ಜಿ ಹಾಕುವ ಮುನ್ನ ನೀವು ಈ ಕೆಲಸ ಮಾಡಬೇಕು
ರಾಜ್ಯದ ಕಾಂಗ್ರೆಸ್ ಸರ್ಕಾರದ (Congress Government) ಮಹತ್ವಾಕಾಂಕ್ಷಿ ಗೃಹ ಲಕ್ಷ್ಮಿ ಯೋಜನೆಯ (Gruhalakshmi scheme) ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜುಲೈ 19ರಂದು ಮಧ್ಯಾಹ್ನ ಆರಂಭವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಯೋಜನೆ ಉದ್ಘಾಟನೆಗೊಳ್ಳಲಿದೆ. ಈ ಯೋಜನೆಗೆ ನೀಡಲಾಗಿರುವ ಎರಡು ಸಹಾಯವಾಣಿ ನಂಬರ್‌ಗಳು ಚಾಲನೆ ಪಡೆಯಲಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
TOP 5. Opposition Meet : ಘಟಬಂಧನ್ ಅಲ್ಲ ಘಟಶ್ರಾದ್ಧ; ರಾಜಕಾರಣಿಗಳ ಸೇವೆಗೆ IAS ಬಳಕೆಗೆ HDK ಕೆಂಡ
ರಾಜಧಾನಿಯಲ್ಲಿ ನಡೆಯುತ್ತಿರುವ ಯುಪಿಎ ಮಿತ್ರಕೂಟದ ಪಕ್ಷಗಳ ನಾಯಕರ ಸಭೆಗೆ (Opposition Meet) ಬರುವ ನಾಯಕರ ಸ್ವಾಗತ ಮತ್ತು ಆತಿಥ್ಯಕ್ಕೆ ಐಎಎಸ್ ಅಧಿಕಾರಿಗಳನ್ನು (IAS officers) ಬಳಸಿಕೊಂಡಿರುವುದನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಖಂಡಿಸಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಪ್ರತಿಪಕ್ಷಗಳ ನಾಯಕರ ಸಭೆಯನ್ನು ಸರ್ಕಾರಿ ಕಾರ್ಯಕ್ರಮದಂತೆ ನಡೆಸುತ್ತಿದ್ದು, ಐಎಎಸ್ ಅಧಿಕಾರಿಗಳನ್ನು ಜೀತದಾಳುಗಳಂತೆ ನಡೆಸಿಕೊಳ್ಳುತ್ತಿದೆ ಎಂದು ಆಪಾದಿಸಿದ್ದಾರೆ. ಇದು ಘಟಬಂಧನ್ ಅಲ್ಲ, ನಮ್ಮ ಹೆಮ್ಮೆ, ಪರಂಪರೆ ಮತ್ತು ಸ್ವಾಭಿಮಾನಿಗಳ ಘಟಶ್ರಾದ್ಧ ಎಂದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
TOP 4. Opposition Meet: ಸಿದ್ಧಾಂತಗಳ ಬಗ್ಗೆ ಮಾತಾಡಿದರೆ ಸರಿಯಿರೋಲ್ಲ: ಬೂಟಾಟಿಕೆ ಬಿಡಿ ಎಂದ ಎಚ್.ಡಿ. ಕುಮಾರಸ್ವಾಮಿ
ಜೆಡಿಎಸ್ ಪಕ್ಷಕ್ಕೆ ಯಾವುದೇ ಸಿದ್ಧಾಂತವಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಮಾತಿಗೆ ಕೆಂಡಾಮಂಡಲವಾಗಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಈಗ ಮಹಾಘಟಬಂಧನದಲ್ಲಿ ಸೇರುತ್ತಿರುವವರಿಗೆ (Opposition Meet) ಯಾವ ಸಿದ್ಧಾಂತವಿದೆ ಎಂದು ಪ್ರಶ್ನಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
TOP 3. PM Modi: ಭ್ರಷ್ಟರೆಲ್ಲ ಬೆಂಗಳೂರಲ್ಲಿ ಸೇರಿದ್ದಾರೆ; ಪ್ರತಿಪಕ್ಷಗಳ ಸಭೆಗೆ ಪ್ರಧಾನಿ ಮೋದಿ ವ್ಯಂಗ್ಯ
2024ರ ಲೋಕಸಭೆ ಚುನಾವಣೆ ಸಲುವಾಗಿ ಒಗ್ಗಟ್ಟಾಗಿರುವ 24 ಪ್ರತಿಪಕ್ಷಗಳ ಒಕ್ಕೂಟದ ಎರಡನೇ ಸಭೆ (Opposition Meet) ಬೆಂಗಳೂರಿನಲ್ಲಿ ನಡೆಯುತ್ತಿದೆ. ಜು.17ರಂದು ಔಪಚಾರಿಕ ಚರ್ಚೆ ನಡೆಸಿದ್ದ ಪ್ರತಿಪಕ್ಷಗಳ ನಾಯಕರು, ಇಂದು ಪ್ರಮುಖ ವಿಚಾರಗಳ ಬಗ್ಗೆ ಗಂಭೀರ ಚರ್ಚೆಯಲ್ಲಿ ತೊಡಗಿದ್ದಾರೆ. ಅತ್ತ ಪ್ರಧಾನಿ ನರೇಂದ್ರ ಮೋದಿ (PM Modi)ಯವರು ಈ ಸಭೆ ಬಗ್ಗೆ ಕಟುವಾಗಿ ಟೀಕೆ ಮಾಡಿದ್ದಾರೆ. ಇಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಪೋರ್ಟ್ ಬ್ಲೇರ್ನಲ್ಲಿ ಹೊಸ ಏರ್ಪೋರ್ಟ್ ಉದ್ಘಾಟನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ‘ಬೆಂಗಳೂರಿನಲ್ಲಿ ಸಭೆಗಾಗಿ ಸೇರಿರುರುವವರು ಭ್ರಷ್ಟರು’ ಎಂದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
TOP 2. Parliament Election 2024 : ಲೋಕಸಮರ ಗೆಲ್ಲಲು ರಣತಂತ್ರ; ಬೆಂಗಳೂರಲ್ಲಿ UPA, ದಿಲ್ಲಿಯಲ್ಲಿ NDA!
2024ರ ಲೋಕಸಭಾ ಚುನಾವಣೆಯ (Parliament Election 2024) ಮೈತ್ರಿ ಮತ್ತಿತರ ರಣತಂತ್ರಗಳ ಬಗ್ಗೆ ಚರ್ಚೆ ನಡೆಸಲು ಮಂಗಳವಾರ ಎರಡೂ ಕೂಟಗಳ (political parties meet) ಅತ್ಯಂತ ಮಹತ್ವದ ಸಭೆ ನಡೆಯಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
TOP 1. NDA vs INDIA: ಲೋಕಸಭೆ ಫೈನಲ್‌ಗೆ ಬೆಂಗಳೂರಲ್ಲಿ ರಣಘೋಷ: ಟೀಂ INDIA ನಡೆಸಲಿದ್ದಾರೆ 11 ಆಟಗಾರರು!
ಲೋಕಸಭೆ ಚುನಾವಣೆಗೆ ಕೇಂದ್ರ ಸರ್ಕಾರದ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸಲು ಬೆಂಗಳೂರಿನ ಪ್ರತಿಪಕ್ಷದ ಸಭೆಯಲ್ಲಿ, ಮೈತ್ರಿಕೂಟಕ್ಕೆ Indian Nationation Develpemental Inclusive Alliance (INDIA) ಎಂದು ನಾಮಕರಣ ಮಾಡಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧಿಕೃತವಾಗಿ (NDA vs INDIA) ಘೋಷಣೆ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: NDA vs INDIA : ಮಿತ್ರ ಕೂಟಕ್ಕೆ INDIA ಹೆಸರಿಟ್ಟಿದ್ದು ಯಾರು? ಚುನಾವಣಾ ಚಾಣಕ್ಯರಲ್ಲ, ಒಬ್ಬ ಮಹಿಳಾ ಲೀಡರ್!