Vistara Top 10 News: ಮೋದಿ ವಿರುದ್ಧ INDIA ಎಂದ ಕಾಂಗ್ರೆಸ್‌ನಿಂದ, ಗೃಹಲಕ್ಷ್ಮಿಗೆ ಕೌಂಟ್‌ಡೌನ್‌ವರೆಗಿನ ಪ್ರಮುಖ ಸುದ್ದಿಗಳಿವು - Vistara News

ಕರ್ನಾಟಕ

Vistara Top 10 News: ಮೋದಿ ವಿರುದ್ಧ INDIA ಎಂದ ಕಾಂಗ್ರೆಸ್‌ನಿಂದ, ಗೃಹಲಕ್ಷ್ಮಿಗೆ ಕೌಂಟ್‌ಡೌನ್‌ವರೆಗಿನ ಪ್ರಮುಖ ಸುದ್ದಿಗಳಿವು

ದೇಶ, ವಿದೇಶ, ರಾಜ್ಯದಲ್ಲಿ ದಿನಪೂರ್ತಿ ನಡೆದ ಘಟನಾವಳಿಗಳಲ್ಲಿ ಆಯ್ದ ಪ್ರಮುಖ ಸುದ್ದಿಗಳು ವಿಸ್ತಾರ TOP 10 NEWS ನಲ್ಲಿ.

VISTARANEWS.COM


on

vistara top 10 news
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

TOP 10. MS Dhoni: ಧೋನಿ ಮನೆಯಲ್ಲಿರುವ ಗ್ಯಾರೇಜ್‌​ ಕಂಡು ಬೆರಗಾದ ವೆಂಕಟೇಶ್​ ಪ್ರಸಾದ್‌
ಟೀಮ್​ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರಿಗೆ ಬೈಕ್​ ಮತ್ತು ಕಾರುಗಳೆಂದರೆ ಅಚ್ಚುಮೆಚ್ಚು ಅದರಲ್ಲೂ ಬೈಕ್​ ಮೇಲೆ ಹೆಚ್ಚಿನ ಮೋಹ, ರಾಂಚಿಯ ಗ್ಯಾರೇಜ್‌ನಲ್ಲಿ(ms dhoni garage) ಅನೇಕ ವಿಂಟೇಜ್ ಮತ್ತು ಐಷಾರಾಮಿ ಕಾರುಗಳು ಮತ್ತು ಬೈಕ್‌ಗಳನ್ನು ಅವರು ಸಂಗ್ರಹಿಸಿದ್ದಾರೆ. ಬೈಕ್ ಮತ್ತು ಕಾರುಗಳ ವಿಡಿಯೊವನ್ನು ಮಾಜಿ ಆಟಗಾರ ವೆಂಕಟೇಶ್​ ಪ್ರಸಾದ್​(Venkatesh Prasad) ಹಂಚಿಕೊಂಡಿದ್ದಾರೆ. ಜತೆಗೆ ಈ ಗ್ಯಾರೇಜ್‌ ಕಂಡು ಬೆರಗಾದೆ ಎಂದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

TOP 9. Terrorists Killed: ಭದ್ರತಾ ಪಡೆಗಳ ಭರ್ಜರಿ ಬೇಟೆ; 4 ಭಯೋತ್ಪಾದಕರ ಹತ್ಯೆ
ಪೂಂಚ್​​ನಲ್ಲಿ ಇಂದು ನಾಲ್ವರು ಭಯೋತ್ಪಾದಕರನ್ನು ಭದ್ರತಾ ಸಿಬ್ಬಂದಿ ಹೊಡೆದುರುಳಿಸಿದ್ದಾರೆ (Terrorists Killed). ಸೋಮವಾರ ಮಧ್ಯರಾತ್ರಿಯಿಂದಲೂ ಪೂಂಚ್​ನ ಸುರಾ್​ಕೋಟೆ ಬೆಲ್ಟ್​​ನಲ್ಲಿರುವ ಸಿಂಧಾರಾ ಗುಡ್ಡ ಪ್ರದೇಶದಲ್ಲಿ ಭಯೋತ್ಪಾದಕರ ವಿರುದ್ಧ ಭದ್ರತಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದರು (Terrorists Killed In Poonch). ಮಂಗಳವಾರ ಮುಂಜಾನೆ 5ಗಂಟೆ ಹೊತ್ತಿಗೆ ನಾಲ್ವರು ಉಗ್ರರ ಹತ್ಯೆಯಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

TOP 8. Kichcha Sudeep : ಕೇಳಿದ ತಕ್ಷಣ ಹಣ ಕೋಡೋಕೆ ಸುದೀಪ್‌ ಚಿಕ್ಕ ಹುಡುಗ ಅಲ್ಲ!
ಸ್ಯಾಂಡಲ್‌ವುಡ್‌ ಬಾದ್‌ ಶಾ, ಕಿಚ್ಚ ಸುದೀಪ್‌ (Kichcha Sudeep) ಹಾಗೂ ನಿರ್ಮಾಪಕ ಎಂ.ಎನ್.‌ ಕುಮಾರ್‌‌ (Film Producer MN Kumar) ನಡುವಿನ ಜಟಾಪಟಿ ಮುಂದುವರಿದಿದ್ದು, ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಅಲ್ಲದೆ, ಈ ನಡುವೆ ಧರಣಿಗೆ ಕುಳಿತಿರುವ ಕುಮಾರ್‌ ಬೆನ್ನಿಗೆ ಹಲವು ನಿರ್ಮಾಪಕರು ಕುಳಿತಿದ್ದಾರೆ. ಇವರಿಗೆ ಸಾರಾ ಗೋವಿಂದ್ (Sara Govind) ಸೇರಿದಂತೆ 20 ನಿರ್ಮಾಪಕರು ಬೆಂಬಲ ಸೂಚಿಸಿದ್ದಾರೆ. ಈ ನಡುವೆ ಸಾರಾ ಗೋವಿಂದ್‌ ಮಾತನಾಡಿ, ಕೇಳಿದ ತಕ್ಷಣ ಹಣ ಕೋಡೋಕೆ ಸುದೀಪ್‌ ಏನು ಚಿಕ್ಕ ಹುಡುಗ ಅಲ್ಲ ಎಂದು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

TOP 7. Viral Video: ಮಗನ ಸ್ಕೂಲ್​ ಫೀಸ್​ಗೆ ಹಣ ಹೊಂದಿಸುವ ಸಲುವಾಗಿ ಬಸ್​​ಗೆ ಡಿಕ್ಕಿ ಹೊಡೆದ ಮಹಿಳೆ!
ಈ ಮಹಿಳೆಯದ್ದು ಮುಗ್ಧತನೋ, ಮೂರ್ಖತನವೋ ಗೊತ್ತಿಲ್ಲ. ಅಥವಾ ಕಷ್ಟಗಳಿಂದ ಕಂಗೆಟ್ಟು ಮೂಡಿದ ಹತಾಶೆಯೋ..ನಮಗರ್ಥ ಆಗುವುದಿಲ್ಲ. ಆದರೆ ಯಾರೋ ಹೇಳಿದ ಮಾತನ್ನು ನಂಬಿ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಮಗನ ಭವಿಷ್ಯ ಭದ್ರ ಮಾಡಲು ಹೋಗಿ ಅನ್ಯಾಯವಾಗಿ ಜೀವ ಬಿಟ್ಟಿದ್ದಾಳೆ (Woman Died). ಆ್ಯಕ್ಸಿಡೆಂಟ್​ ಆದರೆ ಸರ್ಕಾರದಿಂದ ಪರಿಹಾರದ ರೂಪದಲ್ಲಿ ಹಣ ಬರುತ್ತದೆ. ಅದರಲ್ಲಿ ಮಗನ ಶಾಲೆ ಫೀಸ್​ ಕಟ್ಟಬಹುದು ಎಂದು ಭಾವಿಸಿ, ವೇಗವಾಗಿ ಬರುತ್ತಿದ್ದ ಬಸ್​​ಗೆ ತಾನೇ ಹೋಗಿ ಡಿಕ್ಕಿ ಹೊಡೆದು (Woman Hits To Bus) ಮೃತಪಟ್ಟಿದ್ದಾಳೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

TOP 6. Gruhalakshmi Scheme : ನಾಳೆಯಿಂದ ಗೃಹಲಕ್ಷ್ಮಿ ನೋಂದಣಿ ; ಅರ್ಜಿ ಹಾಕುವ ಮುನ್ನ ನೀವು ಈ ಕೆಲಸ ಮಾಡಬೇಕು
ರಾಜ್ಯದ ಕಾಂಗ್ರೆಸ್‌ ಸರ್ಕಾರದ (Congress Government) ಮಹತ್ವಾಕಾಂಕ್ಷಿ ಗೃಹ ಲಕ್ಷ್ಮಿ ಯೋಜನೆಯ (Gruhalakshmi scheme) ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜುಲೈ 19ರಂದು ಮಧ್ಯಾಹ್ನ ಆರಂಭವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ವಿಧಾನಸೌಧ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಯೋಜನೆ ಉದ್ಘಾಟನೆಗೊಳ್ಳಲಿದೆ. ಈ ಯೋಜನೆಗೆ ನೀಡಲಾಗಿರುವ ಎರಡು ಸಹಾಯವಾಣಿ ನಂಬರ್‌ಗಳು ಚಾಲನೆ ಪಡೆಯಲಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

TOP 5. Opposition Meet : ಘಟಬಂಧನ್‌ ಅಲ್ಲ ಘಟಶ್ರಾದ್ಧ; ರಾಜಕಾರಣಿಗಳ ಸೇವೆಗೆ IAS ಬಳಕೆಗೆ HDK ಕೆಂಡ
ರಾಜಧಾನಿಯಲ್ಲಿ ನಡೆಯುತ್ತಿರುವ ಯುಪಿಎ ಮಿತ್ರಕೂಟದ ಪಕ್ಷಗಳ ನಾಯಕರ ಸಭೆಗೆ (Opposition Meet) ಬರುವ ನಾಯಕರ ಸ್ವಾಗತ ಮತ್ತು ಆತಿಥ್ಯಕ್ಕೆ ಐಎಎಸ್‌ ಅಧಿಕಾರಿಗಳನ್ನು (IAS officers) ಬಳಸಿಕೊಂಡಿರುವುದನ್ನು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಖಂಡಿಸಿದ್ದಾರೆ. ರಾಜ್ಯದ ಕಾಂಗ್ರೆಸ್‌ ಸರ್ಕಾರ ಪ್ರತಿಪಕ್ಷಗಳ ನಾಯಕರ ಸಭೆಯನ್ನು ಸರ್ಕಾರಿ ಕಾರ್ಯಕ್ರಮದಂತೆ ನಡೆಸುತ್ತಿದ್ದು, ಐಎಎಸ್‌ ಅಧಿಕಾರಿಗಳನ್ನು ಜೀತದಾಳುಗಳಂತೆ ನಡೆಸಿಕೊಳ್ಳುತ್ತಿದೆ ಎಂದು ಆಪಾದಿಸಿದ್ದಾರೆ. ಇದು ಘಟಬಂಧನ್‌ ಅಲ್ಲ, ನಮ್ಮ ಹೆಮ್ಮೆ, ಪರಂಪರೆ ಮತ್ತು ಸ್ವಾಭಿಮಾನಿಗಳ ಘಟಶ್ರಾದ್ಧ ಎಂದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

TOP 4. Opposition Meet: ಸಿದ್ಧಾಂತಗಳ ಬಗ್ಗೆ ಮಾತಾಡಿದರೆ ಸರಿಯಿರೋಲ್ಲ: ಬೂಟಾಟಿಕೆ ಬಿಡಿ ಎಂದ ಎಚ್‌.ಡಿ. ಕುಮಾರಸ್ವಾಮಿ
ಜೆಡಿಎಸ್‌ ಪಕ್ಷಕ್ಕೆ ಯಾವುದೇ ಸಿದ್ಧಾಂತವಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಮಾತಿಗೆ ಕೆಂಡಾಮಂಡಲವಾಗಿರುವ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಈಗ ಮಹಾಘಟಬಂಧನದಲ್ಲಿ ಸೇರುತ್ತಿರುವವರಿಗೆ (Opposition Meet) ಯಾವ ಸಿದ್ಧಾಂತವಿದೆ ಎಂದು ಪ್ರಶ್ನಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

TOP 3. PM Modi: ಭ್ರಷ್ಟರೆಲ್ಲ ಬೆಂಗಳೂರಲ್ಲಿ ಸೇರಿದ್ದಾರೆ; ಪ್ರತಿಪಕ್ಷಗಳ ಸಭೆಗೆ ಪ್ರಧಾನಿ ಮೋದಿ ವ್ಯಂಗ್ಯ
2024ರ ಲೋಕಸಭೆ ಚುನಾವಣೆ ಸಲುವಾಗಿ ಒಗ್ಗಟ್ಟಾಗಿರುವ 24 ಪ್ರತಿಪಕ್ಷಗಳ ಒಕ್ಕೂಟದ ಎರಡನೇ ಸಭೆ (Opposition Meet) ಬೆಂಗಳೂರಿನಲ್ಲಿ ನಡೆಯುತ್ತಿದೆ. ಜು.17ರಂದು ಔಪಚಾರಿಕ ಚರ್ಚೆ ನಡೆಸಿದ್ದ ಪ್ರತಿಪಕ್ಷಗಳ ನಾಯಕರು, ಇಂದು ಪ್ರಮುಖ ವಿಚಾರಗಳ ಬಗ್ಗೆ ಗಂಭೀರ ಚರ್ಚೆಯಲ್ಲಿ ತೊಡಗಿದ್ದಾರೆ. ಅತ್ತ ಪ್ರಧಾನಿ ನರೇಂದ್ರ ಮೋದಿ (PM Modi)ಯವರು ಈ ಸಭೆ ಬಗ್ಗೆ ಕಟುವಾಗಿ ಟೀಕೆ ಮಾಡಿದ್ದಾರೆ. ಇಂದು ಅಂಡಮಾನ್​ ಮತ್ತು ನಿಕೋಬಾರ್​ ದ್ವೀಪದಲ್ಲಿ ಪೋರ್ಟ್​ ಬ್ಲೇರ್​ನಲ್ಲಿ ಹೊಸ ಏರ್​ಪೋರ್ಟ್ ಉದ್ಘಾಟನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ‘ಬೆಂಗಳೂರಿನಲ್ಲಿ ಸಭೆಗಾಗಿ ಸೇರಿರುರುವವರು ಭ್ರಷ್ಟರು’ ಎಂದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

TOP 2. Parliament Election 2024 : ಲೋಕಸಮರ ಗೆಲ್ಲಲು ರಣತಂತ್ರ; ಬೆಂಗಳೂರಲ್ಲಿ UPA, ದಿಲ್ಲಿಯಲ್ಲಿ NDA!
2024ರ ಲೋಕಸಭಾ ಚುನಾವಣೆಯ (Parliament Election 2024) ಮೈತ್ರಿ ಮತ್ತಿತರ ರಣತಂತ್ರಗಳ ಬಗ್ಗೆ ಚರ್ಚೆ ನಡೆಸಲು ಮಂಗಳವಾರ ಎರಡೂ ಕೂಟಗಳ (political parties meet) ಅತ್ಯಂತ ಮಹತ್ವದ ಸಭೆ ನಡೆಯಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

TOP 1. NDA vs INDIA: ಲೋಕಸಭೆ ಫೈನಲ್‌ಗೆ ಬೆಂಗಳೂರಲ್ಲಿ ರಣಘೋಷ: ಟೀಂ INDIA ನಡೆಸಲಿದ್ದಾರೆ 11 ಆಟಗಾರರು!
ಲೋಕಸಭೆ ಚುನಾವಣೆಗೆ ಕೇಂದ್ರ ಸರ್ಕಾರದ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸಲು ಬೆಂಗಳೂರಿನ ಪ್ರತಿಪಕ್ಷದ ಸಭೆಯಲ್ಲಿ, ಮೈತ್ರಿಕೂಟಕ್ಕೆ Indian Nationation Develpemental Inclusive Alliance (INDIA) ಎಂದು ನಾಮಕರಣ ಮಾಡಲಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧಿಕೃತವಾಗಿ (NDA vs INDIA) ಘೋಷಣೆ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: NDA vs INDIA : ಮಿತ್ರ ಕೂಟಕ್ಕೆ INDIA ಹೆಸರಿಟ್ಟಿದ್ದು ಯಾರು? ಚುನಾವಣಾ ಚಾಣಕ್ಯರಲ್ಲ, ಒಬ್ಬ ಮಹಿಳಾ ಲೀಡರ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Murder Case: ಪಾರ್ಟಿ ಮಾಡಿ ಮಲಗಿದ ಯುವಕನ ಕೊಲೆ, ಜೊತೆಗಿದ್ದ ಸ್ನೇಹಿತರಿಗೆ ಗೊತ್ತೇ ಆಗಲಿಲ್ಲ!

Murder Case: ಹೈದರ್ ನಗರ ತಾಂಡಾದ ಮೂವರು ಗೆಳೆಯರು ಊರಿನ ಹೊರವಲಯದಲ್ಲಿ ರಾತ್ರಿ ಪಾರ್ಟಿ ಮಾಡಿ ಮಲಗಿದ್ದಾರೆ. ನಡುರಾತ್ರಿ ಎದ್ದು ನೋಡಿದಾಗ ಸುಭಾಷ್ ಕೊಲೆಯಾಗಿದ್ದಾನೆ. ಗಾಬರಿಗೊಂಡ ಯುವಕರು ತಾಂಡಾಕ್ಕೆ ಹೋಗಿ ವಿಷಯ ತಿಳಿಸಿದ್ದಾರೆ.

VISTARANEWS.COM


on

gadag crime murder case
Koo

ಗದಗ: ಮುಂಡರಗಿ ಪಟ್ಟಣದಲ್ಲಿ ಯುವಕನೊಬ್ಬನ ಭೀಕರ ಹತ್ಯೆ (Murder Case) ಆಗಿದೆ. ರಾತ್ರಿ ಮೂವರು ಗೆಳೆಯರು ಭರ್ಜರಿ ಎಣ್ಣೆ ಪಾರ್ಟಿ ಮಾಡಿ ನಿದ್ರೆ ಹೋಗಿದ್ದು, ನಡು ರಾತ್ರಿಯಲ್ಲಿ ಓರ್ವನ ಹತ್ಯೆಯಾಗಿದೆ. ಪಾರ್ಟಿ ಮಾಡಿದ ಗೆಳೆಯರು ಕಂಗಾಲಾಗಿ ಊರಿಗೆ ಬಂದು ವಿಷಯ ತಿಳಿಸಿದ್ದಾರೆ.

ಸುಭಾಷ್ ನಾಯಕ್ (23) ಕೊಲೆಯಾದ ಯುವಕ. ಗದಗ (Gadag news) ಜಿಲ್ಲೆಯ ಮುಂಡರಗಿ ಪಟ್ಟಣದ ಹೊಸ ಹುಡ್ಕೋ ಕಾಲೋನಿಯಲ್ಲಿ ಘಟನೆ ನಡೆದಿದೆ. ಕೊಲೆಯಾದ ಯುವಕ ಹೈದರ್ ನಗರ ತಾಂಡಾದ ನಿವಾಸಿ. ಹೈದರ್ ನಗರ ತಾಂಡಾದ ಮೂವರು ಗೆಳೆಯರು ಊರಿನ ಹೊರವಲಯದಲ್ಲಿ ರಾತ್ರಿ ಪಾರ್ಟಿ ಮಾಡಿ ಮಲಗಿದ್ದಾರೆ. ನಡುರಾತ್ರಿ ಎದ್ದು ನೋಡಿದಾಗ ಸುಭಾಷ್ ಕೊಲೆಯಾಗಿದ್ದಾನೆ. ಗಾಬರಿಗೊಂಡ ಯುವಕರು ತಾಂಡಾಕ್ಕೆ ಹೋಗಿ ವಿಷಯ ತಿಳಿಸಿದ್ದಾರೆ.

ಬಿಯರ್ ಬಾಟಲಿಯಿಂದ ತಲೆಗೆ ಹೊಡೆದು ಹತ್ಯೆ ಮಾಡಿರುವ ಶಂಕೆ ಮೂಡಿದೆ. ಜೊತೆಗಿದ್ದ ಗೆಳೆಯರು ನೀಡುತ್ತಿರುವ ಮಾಹಿತಿ ಗೊಂದಲಕಾರಿಯಾಗಿದ್ದು, ಅನುಮಾನ ಮೂಡಿದೆ. ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಫಾರೆನ್ಸಕ್‌ ತಂಡದಿಂದ ಪರಿಶೀಲನೆ ನಡೆದಿದೆ.

ಹಿಂದು ಬಾಲಕಿಯ ಅತ್ಯಾಚಾರಗೈದು, ಇಸ್ಲಾಂ ಪಾಲಿಸುವಂತೆ ಒತ್ತಾಯ; ಕೇಸ್

ಮುಂಬೈ: ಮಹಾರಾಷ್ಟ್ರದಲ್ಲಿ (Maharashtra) ಮುಸ್ಲಿಂ ವ್ಯಕ್ತಿಯೊಬ್ಬ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಆಕೆಯು ಇಸ್ಲಾಂಅನ್ನು ಅನುಸರಿಸಬೇಕು ಎಂದು ಒತ್ತಾಯಿಸುವ ಮೂಲಕ ಹೀನ ಕೃತ್ಯ ಎಸಗಿದ್ದಾನೆ. ಮುಂಬೈನ ಕಾಶಿಗಾಂವ್‌ ಪ್ರದೇಶದಲ್ಲಿ ಹೀನ ಕೃತ್ಯ ನಡೆದಿದೆ. ಇಬ್ರಾಹಿಂ ಖಾನ್‌ ಎಂಬಾತನೇ ಹೀನ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಇಬ್ರಾಹಿಂ ಖಾನ್‌ ವಿರುದ್ಧ ಐಪಿಸಿ ಹಾಗೂ ಪೋಕ್ಸೊ ಕಾಯ್ದೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಇನ್ನು, ಕೃತ್ಯ ಬಯಲಾಗುತ್ತಲೇ ಇಬ್ರಾಹಿಂ ಖಾನ್‌ ಪರಾರಿಯಾಗಿದ್ದು, ಈತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

6 ತಿಂಗಳಿಂದ ನಿರಂತರ ಕಿರುಕುಳ

14 ವರ್ಷದ ಬಾಲಕಿ ಹಾಗೂ ಆಕೆಯ ಸಹೋದರಿಯ ತಂದೆ-ತಾಯಿ ತೀರಿಕೊಂಡ ಕಾರಣ 2023ರ ಕಾಶಿಗಾಂವ್‌ಗೆ ಇಬ್ಬರೂ ಸ್ಥಳಾಂತರಗೊಂಡಿದ್ದಾರೆ. ಸಂಬಂಧಿಕರ ಮನೆಯಲ್ಲಿ ಇಬ್ಬರೂ ಆಶ್ರಯ ಪಡೆದಿದ್ದಾರೆ. ಇದೇ ಕಾಶಿಗಾಂವ್‌ ನಿವಾಸಿಯಾದ ಇಬ್ರಾಹಿಂ ಖಾನ್‌, ಬಾಲಕಿಯನ್ನು ಗಮನಿಸಿದ್ದಾನೆ. ಪದೇಪದೆ ಬಾಲಕಿಯನ್ನು ಮಾತನಾಡಿಸುವುದು, ನಗುವುದು, ನೀನೇ ನನ್ನ ಜೀವನ ಎಂದು ಕಿಚಾಯಿಸುವುದು ಸೇರಿ ಹಲವು ರೀತಿಯಲ್ಲಿ ಆಕೆಯ ಮನವೊಲಿಸಲು ಯತ್ನಿಸಿದ್ದಾನೆ.

ಕೆಲ ತಿಂಗಳ ಹಿಂದೆ, ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಇಬ್ರಾಹಿಂ ಖಾನ್‌ ಬಾಲಕಿಯ ಮನೆಗೆ ನುಗ್ಗಿದ್ದಾನೆ. ಆಗ ಬಾಲಕಿಯ ಎದುರು ಪ್ರೇಮ ನಿವೇದನೆ ಮಾಡಿದ ಆತ, ಬಲವಂತವಾಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಆಕೆಯ ಮನೆಗೆ ಹೋಗುವುದು, ಲೈಂಗಿಕ ದೌರ್ಜನ್ಯ ಎಸಗುವುದು ಹಾಗೂ ಇಸ್ಲಾಂ ರೀತಿ-ರಿವಾಜುಗಳನ್ನು ಅನುಸರಿಸಬೇಕು ಎಂಬುದಾಗಿ ಒತ್ತಾಯಿಸಿದ್ದಾನೆ. ಇಬ್ರಾಹಿಂ ಖಾನ್‌ನಿಂದ ನಿರಂತರವಾಗಿ ಕಿರುಕುಳಕ್ಕೊಳಗಾದ ಬಾಲಕಿಯು ಮೇ 3ರಂದು ಹಿರಿಯರೊಂದಿಗೆ ತೆರಳಿ ದೂರು ದಾಖಲಿಸಿದ್ದಾಳೆ. ಇದಾದ ಬಳಿಕ ಪೊಲೀಸರು ಕೇಸ್‌ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

“ಮನೆಯಲ್ಲಿ ಯಾರೂ ಇಲ್ಲದಿದ್ದಾಗ ನುಗ್ಗುತ್ತಿದ್ದ ಆತ, ನನ್ನನ್ನು ಮದುವೆಯಾಗುತ್ತೇನೆ ಎಂಬುದಾಗಿ ಹೇಳು ಎಂದು ಒತ್ತಾಯಿಸುತ್ತಿದ್ದ. ನನಗೆ ನನ್ನ ತಂದೆ-ತಾಯಿ ಜತೆ ಇರಲು ಇಷ್ಟವಿಲ್ಲ. ನಿನ್ನೊಂದಿಗೆ ನಾನು ಬದುಕಲು ಇಷ್ಟ. ಇಬ್ಬರೂ ಬೇರೆ ಕಡೆ ಬಾಡಿಗೆ ಮನೆ ಮಾಡೋಣ. ಅಲ್ಲಿ ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ಇಬ್ಬರೂ ಜತೆಯಾಗಿರೋಣ ಎಂದು ಹೇಳಿದ. ಇದಕ್ಕೆ ನಾನು ಒಪ್ಪದಿದ್ದಾಗ ದೌರ್ಜನ್ಯ ಎಸಗಿದ” ಎಂಬುದಾಗಿ ಎಫ್‌ಐಆರ್‌ನಲ್ಲಿ ಬಾಲಕಿಯ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Murder Case: ಶಿವಮೊಗ್ಗದಲ್ಲಿ ಗ್ಯಾಂಗ್ ವಾರ್; ಹಾಡಹಗಲೇ ಇಬ್ಬರು ರೌಡಿಶೀಟರ್‌ಗಳ ಭೀಕರ ಹತ್ಯೆ

Continue Reading

ಕ್ರೈಂ

HD Revanna Jailed: ಇಂದು ಜನಪ್ರತಿನಿಧಿ ನ್ಯಾಯಾಲಯದಲ್ಲಿ ಹೆಚ್.ಡಿ ರೇವಣ್ಣ ಭವಿಷ್ಯ ನಿರ್ಧಾರ

HD Revanna Jailed: ಬೆಳಗ್ಗೆ ಹನ್ನೊಂದು ಗಂಟೆ ನಂತರ ಜನಪ್ರತಿನಿಧಿ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಹೆಚ್.ಡಿ ರೇವಣ್ಣ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ವಾದ ಮಂಡಿಸಲಿದ್ದಾರೆ. 65 ವರ್ಷದವರಾಗಿರುವ ಹೆಚ್.ಡಿ ರೇವಣ್ಣ ಈಗಾಗಲೇ ಪ್ರಕರಣ, ಮಗನ ಮೇಲಿನ ಆರೋಪದಿಂದ ಮಾನಸಿಕವಾಗಿ ನೊಂದಿದ್ದಾರೆ.

VISTARANEWS.COM


on

hd revanna jailed 2
Koo

ಬೆಂಗಳೂರು: ಮಹಿಳೆ ಅಪಹರಣ (kidnap) ಕೇಸ್‌ನಲ್ಲಿ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ (HD Revanna Jailed) ಮಾಜಿ ಸಚಿವ ಹೆಚ್. ಡಿ ರೇವಣ್ಣ ಅವರ ಇನ್ನೊಂದು ಜಾಮೀನು ಅರ್ಜಿ (Bail plea) ಇಂದು ಜನಪ್ರತಿನಿಧಿ ವಿಶೇಷ ನ್ಯಾಯಾಲಯದಲ್ಲಿ (peoples representative court) ವಿಚಾರಣೆಗೆ ಒಳಗಾಗಲಿದೆ. ಮಗ, ಹಾಸನ ಸಂಸದ (Hassan MP) ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ (Prajwal Revanna Case) ಪ್ರಕರಣದಲ್ಲಿಯೂ ಆರೋಪಿಯಾಗಿರುವ ರೇವಣ್ಣ ಅವರಿಗೆ ನಿನ್ನೆಯ ವಿಚಾರಣೆಯಲ್ಲಿ ಬೇಲ್‌ ಸಿಕ್ಕಿಲ್ಲ.

ಬೆಳಗ್ಗೆ ಹನ್ನೊಂದು ಗಂಟೆ ನಂತರ ಜನಪ್ರತಿನಿಧಿ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಹೆಚ್.ಡಿ ರೇವಣ್ಣ ಪರ ಹಿರಿಯ ವಕೀಲ ಸಿ.ವಿ ನಾಗೇಶ್ ವಾದ ಮಂಡಿಸಲಿದ್ದಾರೆ. 65 ವರ್ಷದವರಾಗಿರುವ ಹೆಚ್.ಡಿ ರೇವಣ್ಣ ಈಗಾಗಲೇ ಪ್ರಕರಣ, ಮಗನ ಮೇಲಿನ ಆರೋಪದಿಂದ ಮಾನಸಿಕವಾಗಿ ನೊಂದಿದ್ದಾರೆ. ನಾಲ್ಕು ದಿನಗಳ ಕಾಲ ಕಸ್ಟಡಿಯಲ್ಲಿದ್ದು ವಿಚಾರಣೆ ಎದುರಿಸಿದ್ದಾರೆ. ಕಸ್ಟಡಿ ವೇಳೆ ಅನಾರೋಗ್ಯದ ಸಮಸ್ಯೆ ಎದುರಿಸಿದ್ದಾರೆ ಎಂಬ ಮಾಹಿತಿಯಿದೆ. ಹೊಟ್ಟೆ ಉರಿ ಸಮಸ್ಯೆ ಎಂದು ನ್ಯಾಯಾಧೀಶರ ಮುಂದೆ ಅಳಲು ತೋಡಿಕೊಂಡಿದ್ದರು. ಇಂದು ಇದೇ ವಿಚಾರವನ್ನು ಮತ್ತೆ ಜನಪ್ರತಿನಿಧಿ ನ್ಯಾಯಾಲಯದಲ್ಲಿ ವಕೀಲರು ಉಲ್ಲೇಖ ಮಾಡಲಿದ್ದಾರೆ. ಹಲವಾರು ವರ್ಷ ರಾಜ್ಯ ಸಚಿವರಾಗಿದ್ದು ಸೇವೆ ಸಲ್ಲಿಸಿರುವ ರೇವಣ್ಣ, ಪ್ರಕರಣದ ಗುರುತ್ವ ಅರಿತು ತನಿಕೆಗೆ ಸಹಕಾರ ಒದಗಿಸುತ್ತಿದ್ದಾರೆ. ಈ ಎಲ್ಲ ವಿಚಾರಗಳಿಂದ ಹೆಚ್.ಡಿ ರೇವಣ್ಣಗೆ ಬೇಲ್ ಸಿಗಬೇಕು ಎಂದು ವಾದಿಸುವ ಸಾಧ್ಯತೆ ಇದೆ.

ಎಸ್ಐಟಿ ಮತ್ತೆ ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲಿದೆ. ಈಗಾಗಲೇ ರೇವಣ್ಣ ತನಿಖೆ ಸರಿಯಾಗಿ ಸಹಕರಿಸಿಲ್ಲ ಎಂದು ಎಸ್‌ಐಟಿ ಹೇಳಿದೆ. ಸಮರ್ಪಕವಾಗಿ ವಿಚಾರಣೆ ಆಗಿಲ್ಲ. ಮತ್ತೊಂದು ಕಡೆ ಹೆಚ್. ಡಿ ರೇವಣ್ಣ ಮಾಜಿ ಸಚಿವ, ಶಾಸಕ ಹಾಗೂ ಪ್ರಭಾವ ಉಳ್ಳ ವ್ಯಕ್ತಿಯಾಗಿದ್ದಾರೆ. ಹೊರ ಬಂದ ಮೇಲೆ ತಮ್ಮ ಪ್ರಭಾವ ಬಳಸಿ ಸಾಕ್ಷ್ಯ ನಾಶ ಮಾಡುವ, ಸಂತ್ರಸ್ತೆಯರನ್ನು ಕಾಂಟ್ಯಾಕ್ಟ್ ಮಾಡುವ ಸಾಧ್ಯತೆ ಇದೆ. ಈ ಅಂಶಗಳ ಹಿನ್ನೆಲೆಯಲ್ಲಿ ಜಾಮೀನು ನೀಡಬಾರದು ಎಂದು ಸರ್ಕಾರದ ಪರ ವಕೀಲರು ಆಕ್ಷೇಪಣೆ ಸಲ್ಲಿಸಲಿದ್ದಾರೆ.

ಎಚ್‌ಡಿ ರೇವಣ್ಣ ಈಗ ಕೈದಿ ನಂಬರ್‌ 4567

ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಚಿವ ಎಚ್‌.ಡಿ ರೇವಣ್ಣ (HD Revanna Jailed) ಅವರಿಗೆ ವಿಚಾರಣಾಧೀನ ಕೈದಿ ನಂಬರ್ ಅನ್ನು ಜೈಲಾಧಿಕಾರಿಗಳು ನೀಡಿದ್ದು, ಅವರ ನಂಬರ್‌ 4567 ಆಗಿದೆ. ನಿನ್ನೆ ರಾತ್ರಿ ಎಲ್ಲ ಕೈದಿಗಳಂತೆ ಜೈಲಿನ ಊಟ ಸೇವಿಸಿದ್ದ ರೇವಣ್ಣ ನಿದ್ರಿಸದೆ ಮೌನಿಯಾಗಿ ಯೋಚಿಸುತ್ತಾ ಕುಳಿತಿದ್ದರು ಎಂದು ತಿಳಿದುಬಂದಿದೆ. ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣದಲ್ಲಿ (Hassan Pen Drive) ಹಾಗೂ ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪ ಹೊತ್ತಿರುವ ರೇವಣ್ಣ ಅವರ ಜಾಮೀನು ಅರ್ಜಿ (bail plea) ವಿಚಾರಣೆ ಬುಧವಾರ (ಮೇ 8) ನಡೆದಿದ್ದು, ಏಳು ದಿನ ಅಂದರೆ ಮೇ 14ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಲಾಗಿದೆ.

ಜೈಲಿಗೆ ಬರುವ ಎಲ್ಲಾ ಆರೋಪಿಗಳಿಗೆ ಎಂಟ್ರಿ ನಂಬರ್ ನೀಡಲಾಗುತ್ತದೆ. ಅದರಂತೆಯೇ ರೇವಣ್ಣಗೆ ವಿಚಾರಣಾಧೀನ ಬಂಧಿ 4567 ನಂಬರ್ ನೀಡಲಾಗಿದೆ. ಜೈಲಿನಲ್ಲಿ ಎಲ್ಲ ಕೈದಿಗಳಿಗೆ ನೀಡುವ ಊಟ ಸವಿಯಬೇಕಾದ ಪರಿಸ್ಥಿತಿ ಅವರದ್ದಾಗಿದೆ. ಜೈಲಿನ ಮೆನುವಿನಂತೆಯೇ ಅಧಿಕಾರಿಗಳು ಚಪಾತಿ, ಪಲ್ಯ, ಮುದ್ದೆ, ಅನ್ನ, ಸಾಂಬಾರ್ ಊಟ ನೀಡಿದ್ದಾರೆ. ಕೋರ್ಟ್ ಅನುಮತಿ ಇದ್ದರೆ ಮಾತ್ರ ಹೊರಗಿನ ಊಟ ತರಿಸಲು ಅವಕಾಶವಿದೆ. ಆದರೆ ರೇವಣ್ಣಗೆ ಹೊರಗಿನ ಊಟಕ್ಕೆ ಯಾವುದೇ ಅನುಮತಿ ಇಲ್ಲ. ಆದರೆ ರಾತ್ರಿ ಊಟ ನೀಡಿ ಒಂದು ಗಂಟೆ ಕಳೆದರೂ ಊಟ ಮಾಡದೆ ರೇವಣ್ಣ ಮೌನಕ್ಕೆ ಜಾರಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯ ಸಚಿವರಾಗಿ ಐಷಾರಾಮಿ ಜೀವನ ನಡೆಸಿದ್ದ ರೇವಣ್ಣ ಒಂದು ರಾತ್ರಿಯನ್ನು ಸಾಮಾನ್ಯ ಕೈದಿಗಳಂತೆ ಜೈಲಿನಲ್ಲಿ ಕಳೆದಿದ್ದು, ರಾತ್ರಿ ನೀಡಿದ್ದ ಮುದ್ದೆ, ಚಪಾತಿ, ರೈಸ್ ಸಾಂಬಾರ್ ತಡವಾಗಿ ತಿಂದಿದ್ದಾರೆ. ಮನೆಯವರು ತಂದು ಕೊಟ್ಟಿರುವ ಬಟ್ಟೆ ಪಡೆದಿದ್ದಾರೆ. ರಾತ್ರಿ ಒಂದು ಗಂಟೆಯವರೆಗೂ ನಿದ್ರೆ ಮಾಡದೆ ಯೋಚಿಸುತ್ತಿದ್ದರು ಎನ್ನಲಾಗಿದೆ. ರೇವಣ್ಣ ಆರೋಗ್ಯ ಸರಿ‌ ಇಲ್ಲದ ಕಾರಣ ಜೈಲಾಧಿಕಾರಿಗಳು ಹೆಚ್ಚು ನಿಗಾ ಇಟ್ಟಿದ್ದಾರೆ. ರೇವಣ್ಣ ಇರುವ ಕೊಠಡಿ ಬಳಿ ಒಬ್ಬ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಇಂದು ಬೆಳಿಗ್ಗೆ 5.30ಕ್ಕೆ ನಿದ್ರೆಯಿಂದ ಎದ್ದ ರೇವಣ್ಣ ಅವರಿಗೆ ಕಾಫಿ-ಟೀ ನೀಡಲಾಗಿದೆ. ಕೈದಿಗಳಿಗೆ ಟಿವಿ ವ್ಯವಸ್ಥೆ ಇಲ್ಲ. ಹೊರಗಿನ ಸುದ್ದಿ ತಿಳಿಯಲು ನ್ಯೂಸ್ ಪೇಪರ್ ವ್ಯವಸ್ಥೆ ಮಾಡಲಾಗಿದೆ. ರೇವಣ್ಣಗೆ ಓದಲು ಕನ್ನಡ-ಇಂಗ್ಲೀಷ್ ಪೇಪರ್ ನೀಡಲಾಗಿದೆ. ಪೇಪರ್ ಕಡೆ ಕಣ್ಣಾಡಿಸಿ ನಿನ್ನೆಯ ವಿದ್ಯಮಾನಗಳನ್ನು ರೇವಣ್ಣ ಓದಿದ್ದಾರೆ. ಜೈಲಿನ ಮೆನುವಿನಂತೆ ರೇವಣ್ಣಗೆ ಇಂದು ಬೆಳಗ್ಗಿನ ತಿಂಡಿಗೆ ಪುಳಿಯೋಗರೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Prajwal Revanna Case: ಎಚ್‌.ಡಿ ರೇವಣ್ಣ ಈಗ ಕೈದಿ ನಂಬರ್‌ 4567, ನಿದ್ದೆ ಮಾಡದೆ ಮೌನಿಯಾಗಿ ಕುಳಿತ ಮಾಜಿ ಸಚಿವ

Continue Reading

ಕ್ರೈಂ

Bagalakote Unrest: ಹಿಂದೂ ಯುವಕ- ಮುಸ್ಲಿಂ ಯುವತಿ ನವದಂಪತಿ ರಕ್ಷಣೆಗೆ ನಿಂತ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸ್‌ ಲಾಠಿಚಾರ್ಜ್‌

Bagalakote Unrest: ಬಾದಾಮಿ ಮೂಲದ ರುಬಿನಾ ಹಾಗೂ ಮಹಾಂತೇಶ್ ಎಂಬಿಬ್ಬರು ಪ್ರೀತಿಸಿ ದೇವಸ್ಥಾನದಲ್ಲಿ‌ ಮದುವೆಯಾಗಿದ್ದು, ರಕ್ಷಣೆ ಕೋರಿ ನವದಂಪತಿ ಬಾಗಲಕೋಟೆ ಎಸ್​ಪಿ ಕಚೇರಿಗೆ ಬಂದಿದ್ದರು. ಈ ವೇಳೆ ಹಿಂದೂ ಕಾರ್ಯಕರ್ತರು, ಯುವತಿ ಕುಟುಂಬಸ್ಥರು ಆಗಮಿಸಿದ್ದರು. ಈ ವೇಳೆ ಈ ಘಟನೆ ನಡೆದಿದೆ.

VISTARANEWS.COM


on

bagalakote unrest
Koo

ಬಾಗಲಕೋಟೆ: ಬಾಗಲಕೋಟೆ (Bagalakote news) ನಗರದಲ್ಲಿ ಹಿಂದೂ ಯುವಕ- ಮುಸ್ಲಿಂ ಯುವತಿ ಮದುವೆಯಾದ ಪ್ರಕರಣದಲ್ಲಿ ಪೊಲೀಸರ ರಕ್ಷಣೆ ಬಯಸಿ ಠಾಣೆಗೆ ಬಂದವರ ಮೇಲೆ ಅವಾಚ್ಯ ಪದ ಬಳಸಿದ ಸಿಪಿಐ ನಡತೆಯಿಂದ ಆಕ್ರೋಶಗೊಂಡ ಹಿಂದೂ ಕಾರ್ಯಕರ್ತರು (hindu activists) ಪ್ರತಿಭಟನೆ (Bagalakote Unrest) ನಡೆಸಿದ್ದಾರೆ. ಈ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿಚಾರ್ಜ್‌ (Lathi charge) ಮಾಡಿದ್ದು, ಕಿಡಿಗೇಡಿಗಳು ಕಲ್ಲು ತೂರಾಟ (Stone pelting) ನಡೆಸಿದ್ದಾರೆ.

ಬಾದಾಮಿ ಮೂಲದ ರುಬಿನಾ ಹಾಗೂ ಮಹಾಂತೇಶ್ ಎಂಬಿಬ್ಬರು ಪ್ರೀತಿಸಿ ದೇವಸ್ಥಾನದಲ್ಲಿ‌ ಮದುವೆಯಾಗಿದ್ದು, ರಕ್ಷಣೆ ಕೋರಿ ನವದಂಪತಿ ಬಾಗಲಕೋಟೆ ಎಸ್​ಪಿ ಕಚೇರಿಗೆ ಬಂದಿದ್ದರು. ಈ ವೇಳೆ ಹಿಂದೂ ಕಾರ್ಯಕರ್ತರು, ಯುವತಿ ಕುಟುಂಬಸ್ಥರು ಆಗಮಿಸಿದ್ದರು. ಈ ವೇಳೆ ಈ ಘಟನೆ ನಡೆದಿದೆ. ಎಸ್‌ಪಿ ಕಚೇರಿಗೆ ಬಂದಾಗ ಪೊಲೀಸರಿಗೆ ರಕ್ಷಣೆಗೆ ಸ್ಪಂದನ ಸಿಕ್ಕಿರಲಿಲ್ಲ. ಇದೇ ವೇಳೆ ಸಿಪಿಐ ಆರ್.ಎಸ್.ಬಿರಾದಾರ ಎಂಬವರು ಅವಾಚ್ಯ ಪದ ಬಳಸಿ ಹಿಂದೂ ಕಾರ್ಯಕರ್ತರಿಗೆ ಬೈದಿದ್ದರು ಎಂದು ಆರೋಪಿಸಲಾಗಿದೆ.

ಆ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಹಿಂಜಾವೇ ಮುಖಂಡರು ಹಾಗೂ ಕಾರ್ಯಕರ್ತರು ಸಿಪಿಐ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿ, ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನಡೆಯುವಾಗ ಪೊಲೀಸರ ಜೊತೆ ವಾಗ್ವಾದ ನಡೆಯಿತು. ಇದೇ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ ಎನ್ನಲಾಗಿದೆ. ಕಲ್ಲು ತೂರುತ್ತಿದ್ದಂತೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಪೊಲೀಸರು ಹಿಂದು ಜಾಗರಣ ವೇದಿಕೆ ಮುಖಂಡರ ಮೇಲೆ ಲಾಠಿಚಾರ್ಜ್ ಮಾಡಿದ್ದಾರೆ.

ಈ ಹಿನ್ನೆಲೆ ಹಿಂದೂ ಸಂಘಟನೆಗಳ ಮನೋಜ್, ಕುಮಾರಸ್ವಾಮಿ ಮತ್ತು ವಿಕ್ರಮ್ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ಬೆನ್ನಲ್ಲೇ ಸ್ಥಳಕ್ಕೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಹಾಗೂ ಪೊಲೀಸ್​​ ವರಿಷ್ಠಾಧಿಕಾರಿ ಅಮರನಾಥ್​ ರೆಡ್ಡಿ ಭೇಟಿ ನೀಡಿದ್ದಾರೆ. ಎಸ್​ಪಿ ಜೊತೆ ಚರಂತಿಮಠ ಮಾತುಕತೆ ನಡೆಸಿದ್ದು, ಸಿಪಿಐ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ. ಅದಕ್ಕೆ ಎಸ್​​ಪಿ ಅಮರನಾಥ್ ರೆಡ್ಡಿ ಒಪ್ಪಿದ್ದಾರೆ. ಈ ಕುರಿತು ವೀರಣ್ಣ ಚರಂತಿಮಠ ಇಂದು ಹಿಂದೂ ಪರ ಸಂಘಟನೆಗಳ ಸಭೆ ಕರೆದಿದ್ದಾರೆ. ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನವಾದ ಹಿನ್ನಲೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ: Prajwal Revanna Case: ಎಚ್‌.ಡಿ ರೇವಣ್ಣ ಈಗ ಕೈದಿ ನಂಬರ್‌ 4567, ನಿದ್ದೆ ಮಾಡದೆ ಮೌನಿಯಾಗಿ ಕುಳಿತ ಮಾಜಿ ಸಚಿವ

Continue Reading

ಕ್ರೈಂ

Prajwal Revanna Case: ಎಚ್‌.ಡಿ ರೇವಣ್ಣ ಈಗ ಕೈದಿ ನಂಬರ್‌ 4567, ನಿದ್ದೆ ಮಾಡದೆ ಮೌನಿಯಾಗಿ ಕುಳಿತ ಮಾಜಿ ಸಚಿವ

ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣದಲ್ಲಿ (Hassan Pen Drive) ಹಾಗೂ ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪ ಹೊತ್ತಿರುವ ರೇವಣ್ಣ ಅವರ ಜಾಮೀನು ಅರ್ಜಿ (bail plea) ವಿಚಾರಣೆ ಬುಧವಾರ (ಮೇ 8) ನಡೆದಿದ್ದು, ಏಳು ದಿನ ಅಂದರೆ ಮೇ 14ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಲಾಗಿದೆ.

VISTARANEWS.COM


on

hd revanna jailed prajwal revanna case
Koo

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಚಿವ ಎಚ್‌.ಡಿ ರೇವಣ್ಣ (HD Revanna Jailed) ಅವರಿಗೆ ವಿಚಾರಣಾಧೀನ ಕೈದಿ ನಂಬರ್ ಅನ್ನು ಜೈಲಾಧಿಕಾರಿಗಳು ನೀಡಿದ್ದು, ಅವರ ನಂಬರ್‌ 4567 ಆಗಿದೆ. ನಿನ್ನೆ ರಾತ್ರಿ ಎಲ್ಲ ಕೈದಿಗಳಂತೆ ಜೈಲಿನ ಊಟ ಸೇವಿಸಿದ್ದ ರೇವಣ್ಣ ನಿದ್ರಿಸದೆ ಮೌನಿಯಾಗಿ ಯೋಚಿಸುತ್ತಾ ಕುಳಿತಿದ್ದರು ಎಂದು ತಿಳಿದುಬಂದಿದೆ. ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರ ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಪ್ರಕರಣದಲ್ಲಿ (Hassan Pen Drive) ಹಾಗೂ ಸಂತ್ರಸ್ತೆಯನ್ನು ಅಪಹರಣ ಮಾಡಿದ ಆರೋಪ ಹೊತ್ತಿರುವ ರೇವಣ್ಣ ಅವರ ಜಾಮೀನು ಅರ್ಜಿ (bail plea) ವಿಚಾರಣೆ ಬುಧವಾರ (ಮೇ 8) ನಡೆದಿದ್ದು, ಏಳು ದಿನ ಅಂದರೆ ಮೇ 14ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಲಾಗಿದೆ.

ಜೈಲಿಗೆ ಬರುವ ಎಲ್ಲಾ ಆರೋಪಿಗಳಿಗೆ ಎಂಟ್ರಿ ನಂಬರ್ ನೀಡಲಾಗುತ್ತದೆ. ಅದರಂತೆಯೇ ರೇವಣ್ಣಗೆ ವಿಚಾರಣಾಧೀನ ಬಂಧಿ 4567 ನಂಬರ್ ನೀಡಲಾಗಿದೆ. ಜೈಲಿನಲ್ಲಿ ಎಲ್ಲ ಕೈದಿಗಳಿಗೆ ನೀಡುವ ಊಟ ಸವಿಯಬೇಕಾದ ಪರಿಸ್ಥಿತಿ ಅವರದ್ದಾಗಿದೆ. ಜೈಲಿನ ಮೆನುವಿನಂತೆಯೇ ಅಧಿಕಾರಿಗಳು ಚಪಾತಿ, ಪಲ್ಯ, ಮುದ್ದೆ, ಅನ್ನ, ಸಾಂಬಾರ್ ಊಟ ನೀಡಿದ್ದಾರೆ. ಕೋರ್ಟ್ ಅನುಮತಿ ಇದ್ದರೆ ಮಾತ್ರ ಹೊರಗಿನ ಊಟ ತರಿಸಲು ಅವಕಾಶವಿದೆ. ಆದರೆ ರೇವಣ್ಣಗೆ ಹೊರಗಿನ ಊಟಕ್ಕೆ ಯಾವುದೇ ಅನುಮತಿ ಇಲ್ಲ. ಆದರೆ ರಾತ್ರಿ ಊಟ ನೀಡಿ ಒಂದು ಗಂಟೆ ಕಳೆದರೂ ಊಟ ಮಾಡದೆ ರೇವಣ್ಣ ಮೌನಕ್ಕೆ ಜಾರಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯ ಸಚಿವರಾಗಿ ಐಷಾರಾಮಿ ಜೀವನ ನಡೆಸಿದ್ದ ರೇವಣ್ಣ ಒಂದು ರಾತ್ರಿಯನ್ನು ಸಾಮಾನ್ಯ ಕೈದಿಗಳಂತೆ ಜೈಲಿನಲ್ಲಿ ಕಳೆದಿದ್ದು, ರಾತ್ರಿ ನೀಡಿದ್ದ ಮುದ್ದೆ, ಚಪಾತಿ, ರೈಸ್ ಸಾಂಬಾರ್ ತಡವಾಗಿ ತಿಂದಿದ್ದಾರೆ. ಮನೆಯವರು ತಂದು ಕೊಟ್ಟಿರುವ ಬಟ್ಟೆ ಪಡೆದಿದ್ದಾರೆ. ರಾತ್ರಿ ಒಂದು ಗಂಟೆಯವರೆಗೂ ನಿದ್ರೆ ಮಾಡದೆ ಯೋಚಿಸುತ್ತಿದ್ದರು ಎನ್ನಲಾಗಿದೆ. ರೇವಣ್ಣ ಆರೋಗ್ಯ ಸರಿ‌ ಇಲ್ಲದ ಕಾರಣ ಜೈಲಾಧಿಕಾರಿಗಳು ಹೆಚ್ಚು ನಿಗಾ ಇಟ್ಟಿದ್ದಾರೆ. ರೇವಣ್ಣ ಇರುವ ಕೊಠಡಿ ಬಳಿ ಒಬ್ಬ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಇಂದು ಬೆಳಿಗ್ಗೆ 5.30ಕ್ಕೆ ನಿದ್ರೆಯಿಂದ ಎದ್ದ ರೇವಣ್ಣ ಅವರಿಗೆ ಕಾಫಿ-ಟೀ ನೀಡಲಾಗಿದೆ. ಕೈದಿಗಳಿಗೆ ಟಿವಿ ವ್ಯವಸ್ಥೆ ಇಲ್ಲ. ಹೊರಗಿನ ಸುದ್ದಿ ತಿಳಿಯಲು ನ್ಯೂಸ್ ಪೇಪರ್ ವ್ಯವಸ್ಥೆ ಮಾಡಲಾಗಿದೆ. ರೇವಣ್ಣಗೆ ಓದಲು ಕನ್ನಡ-ಇಂಗ್ಲೀಷ್ ಪೇಪರ್ ನೀಡಲಾಗಿದೆ. ಪೇಪರ್ ಕಡೆ ಕಣ್ಣಾಡಿಸಿ ನಿನ್ನೆಯ ವಿದ್ಯಮಾನಗಳನ್ನು ರೇವಣ್ಣ ಓದಿದ್ದಾರೆ. ಜೈಲಿನ ಮೆನುವಿನಂತೆ ರೇವಣ್ಣಗೆ ಇಂದು ಬೆಳಗ್ಗಿನ ತಿಂಡಿಗೆ ಪುಳಿಯೋಗರೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ನಾನೇನೂ ಮಾಡಿಲ್ಲ: ರೇವಣ್ಣ

ವಾದ – ಪ್ರತಿವಾದ ಆಲಿಸಿದ 17ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರು, ರೇವಣ್ಣ ಅವರನ್ನುದ್ದೇಶಿಸಿ ನಿಮಗೆ ಪೊಲೀಸರಿಂದ ತೊಂದರೆ ಆಗಿದೆಯಾ? ಎಂದು ಪ್ರಶ್ನೆ ಮಾಡಿದರು. ಅದಕ್ಕೆ ರೇವಣ್ಣ, ಕಸ್ಟಡಿಗೆ ಬಂದು 3 ದಿನ ಆಗಿದೆ. ಮಾತ್ರೆ ತೆಗೆದುಕೊಳ್ಳಲು ತಡ ಆಗುತ್ತಿದೆ. ನನ್ನನ್ನು ಸುಮ್ಮನೆ ಸತಾಯಿಸುತ್ತಿದ್ದಾರೆ. ಪ್ರಕರಣ ದಾಖಲಾಗಿದ್ದು ನನಗೆ ಗೊತ್ತಿಲ್ಲ. ನನಗೆ ಕೇಳಿದ್ದನ್ನು ಹೇಳಿದ್ದೇನೆ. ಎಲ್ಲವೂ ದಾಖಲಿಸಿಕೊಂಡಿದ್ದಾರೆ. ಮೂರು ದಿನದಿಂದ ಹೊಟ್ಟೆ ನೋವು ಇದೆ. ಮಲಗಲು ಕೂಡ ಆಗಿಲ್ಲ. ಎಲ್ಲ ವಿಚಾರಣೆಯೂ ಮುಗಿದಿದೆ ಎಂದು ತನಿಖಾಧಿಕಾರಿ ನಿನ್ನೆಯೇ ಹೇಳಿದ್ದರು. ಆದರೆ, ಇಂದು ಮತ್ತೆ ವಿಚಾರಣೆ ಮಾಡಬೇಕಿದೆ ಎಂದು ಹೇಳುತ್ತಿದ್ದಾರೆ. ನನಗೆ ಹೊಟ್ಟೆ ನೋವಿದೆ. ಮೂರು ದಿನಗಳಿಂದ ಸತತವಾಗಿ ನಿದ್ದೆ ಮಾಡಿಲ್ಲ ಸರ್. ನಾನು ತಪ್ಪೇ ಮಾಡಿಲ್ಲ ಅಂದಾಗ ಯಾಕೆ ಒಪ್ಪಿಕೊಳ್ಳಬೇಕು? ದುರುದ್ದೇಶದಿಂದ ಎಲ್ಲವನ್ನೂ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮಾತು ಮುಂದುವರಿಸಿದ ಎಚ್.ಡಿ. ರೇವಣ್ಣ, ಪ್ರಜ್ವಲ್ ತಪ್ಪು ಮಾಡಿರಬಹುದು. ಅದರ ಬಗ್ಗೆ ನನಗೇನು ಗೊತ್ತಿಲ್ಲ. ಬೇಕು ಎಂದೇ ನನ್ನ ಮೇಲೆ ಈ ರೀತಿ ಮಾಡುತ್ತಿದ್ದಾರೆ. ನನಗೆ ಹುಷಾರಿಲ್ಲ, ಬೆಳಗ್ಗೆ ಡ್ರಿಪ್ಸ್ ಹಾಕಿದ್ದಾರೆ. ಹುಷಾರಿಲ್ಲ ಹೊಟ್ಟೆ ಉರಿ ಬಂದಿದೆ. ಗ್ಲುಕೋಸ್ ಹಾಕಿದ್ದಾರೆ. ನಾನು ಶಾಸಕನಾಗಿ 25 ವರ್ಷ ಕಳೆದಿದೆ. ಬೇಕಂತಲೇ ಈ ರೀತಿ ಮಾಡಲಾಗಿದೆ. ವಾರಂಟ್ ಇಲ್ಲದೆಯೆ ಮನೆಗೆ ಬಂದು ಅರೆಸ್ಟ್ ಮಾಡಿದರು ಎಂದೆಲ್ಲ ಮಾಹಿತಿ ನೀಡಿದರು. ವಾದ – ಪ್ರತಿವಾದ ಆಲಿಸಿದ ನ್ಯಾಯಾದೀಶರು, ಮೇ 14ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದರು.

ಇದನ್ನೂ ಓದಿ: Prajwal Revanna Case: ಎಚ್‌.ಡಿ. ರೇವಣ್ಣಗೆ 7 ದಿನ ನ್ಯಾಯಾಂಗ ಬಂಧನ; ಅಮಾವಾಸ್ಯೆ ದಿನವೇ ಜೈಲಿಗೆ ಶಿಫ್ಟ್‌!

Continue Reading
Advertisement
Crime News
ಕ್ರೈಂ15 mins ago

Crime News: ಮಕ್ಕಳನ್ನು ಕೊಂದ ಬಳಿಕ ಕಟ್ಟಡದಿಂದ ಜಿಗಿದು ಮಹಿಳೆ ಆತ್ಮಹತ್ಯೆ; ಡೆತ್‌ನೋಟ್‌ನಲ್ಲಿ ಏನಿದೆ?

gadag crime murder case
ಕ್ರೈಂ26 mins ago

Murder Case: ಪಾರ್ಟಿ ಮಾಡಿ ಮಲಗಿದ ಯುವಕನ ಕೊಲೆ, ಜೊತೆಗಿದ್ದ ಸ್ನೇಹಿತರಿಗೆ ಗೊತ್ತೇ ಆಗಲಿಲ್ಲ!

PBKS vs RCB
ಕ್ರೀಡೆ32 mins ago

PBKS vs RCB: ಮಳೆಯ ಕೈಯಲ್ಲಿದೆ ಆರ್​ಸಿಬಿ-ಪಂಜಾಬ್​ ಪ್ಲೇ ಆಫ್​ ಭವಿಷ್ಯ

Viral News
ವೈರಲ್ ನ್ಯೂಸ್56 mins ago

Viral News: ಬ್ರೇಕ್‌ ಬದಲು ಎಕ್ಸಿಲೇಟರ್‌ ತುಳಿದ: ಹೊಸ ಕಾರಿನ ಪೂಜೆ ವೇಳೆ ನಡೆಯಿತು ಅವಘಡ; ಇಲ್ಲಿದೆ ವಿಡಿಯೊ

viral video
ಕ್ರಿಕೆಟ್1 hour ago

Viral Video: ಪಂದ್ಯ ಸೋತ ಸಿಟ್ಟಿನಲ್ಲಿ ರಾಹುಲ್​ಗೆ ಮೈದಾನದಲ್ಲೇ ಬೈದ ಲಕ್ನೋ ತಂಡದ ಮಾಲಿಕ

Cancer Causing Chemicals
ವಿದೇಶ1 hour ago

Cancer-Causing Chemicals: ಕಾರು ಪ್ರಿಯರೇ ಎಚ್ಚರ …ಎಚ್ಚರ..‌ ಕಾರಿನಲ್ಲಿ ಉತ್ಪತ್ತಿ ಆಗ್ತಿದೆ ಕ್ಯಾನ್ಸರ್‌ ಕಾರಕ ಕೆಮಿಕಲ್

hd revanna jailed 2
ಕ್ರೈಂ2 hours ago

HD Revanna Jailed: ಇಂದು ಜನಪ್ರತಿನಿಧಿ ನ್ಯಾಯಾಲಯದಲ್ಲಿ ಹೆಚ್.ಡಿ ರೇವಣ್ಣ ಭವಿಷ್ಯ ನಿರ್ಧಾರ

Jyothi Rai clarity For torturing on indecent videos
ಕಿರುತೆರೆ2 hours ago

Jyothi Rai: ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ವೈರಲ್‌: ನಟಿಯ ಸ್ಪಷ್ಟನೆ ಹೀಗಿದೆ!

IPL 2024 - Points Table
ಕ್ರೀಡೆ2 hours ago

IPL 2024 Points Table: ಸನ್​ರೈಸರ್ಸ್​ಗೆ 10 ವಿಕೆಟ್​ ಗೆಲುವು; ಅಂಕಪಟ್ಟಿಯಲ್ಲಿ ಕುಸಿದ ಚೆನ್ನೈ

Reservation Row
Lok Sabha Election 20242 hours ago

Reservation Row: ಎಸ್‌ಸಿ / ಎಸ್‌ಟಿ ಮೀಸಲಾತಿಗೆ ನೆಹರೂ ವಿರೋಧ ವ್ಯಕ್ತಪಡಿಸಿದ್ದರು: ಸಾಕ್ಷಿ ಸಮೇತ ಬಹಿರಂಗಪಡಿಸಿದ ಬಿಜೆಪಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಅಮಾವಾಸ್ಯೆ ದಿನ ಈ ರಾಶಿಯವರಿಗೆ ಅದೃಷ್ಟ; ಹಣ ಗಳಿಕೆಗೆ ಪುಷ್ಟಿ

Prajwal Revanna Case HD Revanna has severe chest pain Admission in Victoria
ರಾಜಕೀಯ2 days ago

Prajwal Revanna Case: ಎಚ್.ಡಿ. ರೇವಣ್ಣಗೆ ಹೆಚ್ಚಾದ ಎದೆ ನೋವು; ಸಲೈನ್‌ ಹಾಕಿ ಕಳಿಸಿದ ವೈದ್ಯರು

Karnataka Weather Forecast
ಮಳೆ2 days ago

Karnataka Weather : ಹಾಸನ, ಚಿಕ್ಕಮಗಳೂರಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆ; ನಾಳೆ ಬಿರುಗಾಳಿ ಎಚ್ಚರಿಕೆ

Prajwal Revanna Case Government work against Revanna HD Kumaraswamy gives details of the case
ರಾಜಕೀಯ2 days ago

Prajwal Revanna Case: ರೇವಣ್ಣರಿಗೆ ಖೆಡ್ಡಾ ತೋಡಿದ್ದು ಸರ್ಕಾರ; ಎಲ್ಲೆಲ್ಲಿ ಏನೇನು ಮಾಡಲಾಯಿತೆಂಬ ಇಂಚಿಂಚು ಡಿಟೇಲ್ಸ್‌ ಕೊಟ್ಟ ಎಚ್‌ಡಿಕೆ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ3 days ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ3 days ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ3 days ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ4 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ4 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

ಟ್ರೆಂಡಿಂಗ್‌