Site icon Vistara News

ವಿಸ್ತಾರ TOP 10 NEWS:‌ ತಾರಕಕ್ಕೇರಿದ ಮೀಸಲಾತಿ ಆಕ್ರೋಶದಿಂದ, ಅಮೃತ್‌ಪಾಲ್‌ ಸಿಂಗ್ ಪಾಕ್‌ ನಂಟಿನವರೆಗಿನ ಪ್ರಮುಖ ಸುದ್ದಿಗಳಿವು

vistara top 10 news protests against reservation change to pak connection to amritpal and more news

#image_title

1. SC ST Reservation : ಬಾಗಲಕೋಟೆ ತಾಂಡಾಗಳಲ್ಲೂ ಆಕ್ರೋಶ; ಬಿಜೆಪಿ ಧ್ವಜ ತೆರವು, ಪ್ರವೇಶ ನಿರಾಕರಿಸಿ ಪೋಸ್ಟರ್‌
ಬಿಜೆಪಿ ಸರಕಾರವು ಪರಿಶಿಷ್ಟ ಜಾತಿ ಮೀಸಲಾತಿಯಲ್ಲಿ (SC ST Reservation) ಒಳಮೀಸಲು ನಿಗದಿಪಡಿಸಿ ಕೇಂದ್ರ ಸರ್ಕಾರಕ್ಕೆ ಮಾಡಿರುವ ಶಿಫಾರಸನ್ನು ಹಿಂದಕ್ಕೆ ಪಡೆಯಲು ಆಗ್ರಹಿಸಿ ರಾಜ್ಯಾದ್ಯಂತ ಬಂಜಾರ ಸಮುದಾಯದ ಪ್ರತಿಭಟನೆ ನಿಧಾನಕ್ಕೆ ಬೇರೆ ಬೇರೆ ಜಿಲ್ಲೆಗಳಿಗೆ ವ್ಯಾಪಿಸುತ್ತಿದೆ. ಸೋಮವಾರ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಆರಂಭಗೊಂಡ ಪ್ರತಿಭಟನೆ ಮಾಜಿ ಸಿಎಂ ಯಡಿಯೂರಪ್ಪ ಅವರ ಮನೆಗೆ ಕಲ್ಲೆಸೆಯುವ ಹಂತಕ್ಕೆ ತಲುಪಿತ್ತು. ಶಿವಮೊಗ್ಗದಲ್ಲಿ ಮಂಗಳವಾರವೂ ರಸ್ತೆ ತಡೆ, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸುವ ಘಟನೆಗಳ ಮೂಲಕ ಮುಂದುವರಿದಿದೆ. ಈ ನಡುವೆ, ಬಾಗಲಕೋಟೆ, ಬೆಳಗಾವಿ ಸೇರಿದಂತೆ ನಾನಾ ಕಡೆಗಳಲ್ಲಿ ಪ್ರತಿಭಟನೆ ಕಾವು ಜೋರಾಗಿದೆ. ಬಾಗಲಕೋಟೆಯ ಮುಚಖಂಡಿ ಬಂಜಾರಾ ತಾಂಡದಲ್ಲಿ ಹಾಕಲಾದ ಎಲ್ಲ ಬಿಜೆಪಿ ಧ್ವಜಗಳನ್ನು ಕಿತ್ತು ಹಾಕಲಾಗಿದ್ದು, ಬಿಜೆಪಿ ನಾಯಕರಿಗೆ ಪ್ರವೇಶವಿಲ್ಲ ಎಂದು ಬೋರ್ಡ್‌ ಹಾಕಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: SC ST Reservation: 2B ಪ್ರವರ್ಗ ಹಿಂತೆಗೆತಕ್ಕೆ ಸಿಡಿದ ಮುಸ್ಲಿಮರು; ರಾಜ್ಯದ ಹಲವು ಕಡೆ ಬೃಹತ್‌ ಪ್ರತಿಭಟನೆ
ಹೆಚ್ಚಿನ ಓದಿಗಾಗಿ: SC ST Reservation: ಬಿಜೆಪಿಯವರಿಂದಲೇ ಮನೆ ಮೇಲೆ ದಾಳಿ: ಬಿ.ಎಸ್‌. ಯಡಿಯೂರಪ್ಪ ಪರವಾಗಿ ಕಾಂಗ್ರೆಸ್‌ ಬ್ಯಾಟಿಂಗ್‌

2. Karnataka Election: ಈ ಬಾರಿಯೂ ಅತಂತ್ರ ವಿಧಾನಸಭೆ? ಕುಮಾರಸ್ವಾಮಿ ಜತೆ ʼಸಂಧಾನʼಕ್ಕೆ ಬಂದವರಾರು?
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂದು ಮೂರೂ ಪಕ್ಷಗಳು ಹೇಳುತ್ತಿರುವ ಬೆನ್ನಲ್ಲೇ, ರಾಷ್ಟ್ರೀಯ ಪಕ್ಷದ ವತಿಯಿಂದ ಫೀಲರ್‌ (ಸಂಧಾನಕಾರರು) ಒಬ್ಬರು ಆಗಮಿಸಿದ್ದರು ಎಂಬ ಹೊಸ ವಿಚಾರವನ್ನು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Ramagiri: 120 ಕೋಟಿ ರೂ. ವೆಚ್ಚದಲ್ಲಿ ರಾಮನಗರ ಬೆಟ್ಟ ಅಭಿವೃದ್ಧಿ: ವಾಸ್ತುಶಿಲ್ಪಿಗಳಿಂದ ಪ್ರಾತ್ಯಕ್ಷಿಕೆ
ರಾಮನಗರದ ರಾಮದೇವರ ಬೆಟ್ಟದಲ್ಲಿರುವ ರಾಮನ ದೇವಸ್ಥಾನವನ್ನು ಪರಿಸರ ಸ್ನೇಹಿಯಾಗಿ ಅಭಿವೃದ್ಧಿಪಡಿಸಲು ಸರಕಾರ ತೀರ್ಮಾನಿಸಿದ್ದು, ಮಂಗಳವಾರ ಆ ಸಂಬಂಧದ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಸಮ್ಮುಖದಲ್ಲಿ ವಿಕಾಸಸೌಧದಲ್ಲಿ ಈ ಕಾರ್ಯಕ್ರಮ ನಡೆಯಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Lokayukta Raid : ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ 5 ದಿನ ಲೋಕಾಯುಕ್ತ ಕಸ್ಟಡಿಗೆ, ಕುಟುಂಬದ ಭೇಟಿ ಬಗ್ಗೆ ನಾಳೆ ನಿರ್ಧಾರ
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಟೆಂಡರ್‌ ವಿಚಾರದಲ್ಲಿ ನಡೆದ ಲಂಚ ಹಗರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿರುವ ಚನ್ನಗಿರಿಯ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಐದು ದಿನ ಲೋಕಾಯುಕ್ತ ಪೊಲೀಸರ ಕಸ್ಟಡಿ (Lokayukta Raid) ವಿಧಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. ವಿಸ್ತಾರ Explainer: ರಾಹುಲ್‌ ಗಾಂಧಿಗೆ ಶಿಕ್ಷೆಯಾಗುವಂತೆ ಮಾಡಿದ ʼಮೋದಿʼ ಸರ್‌ನೇಮ್‌ನ ಹಿನ್ನೆಲೆ ಇದು!
ರಾಹುಲ್‌ ಗಾಂಧಿಯವರ ಸಂಸತ್‌ ಅನರ್ಹತೆಗೆ ಕಾರಣವಾಗಿರುವ ʼಮೋದಿʼ ಹೇಳಿಕೆಯಲ್ಲಿ ಉಲ್ಲೇಖವಾಗಿರುವ ʼಮೋದಿʼಗಳು ಯಾರು? ಈ ಉಪನಾಮದವರು ಯಾರ್ಯಾರು, ಎಲ್ಲಿಲ್ಲಿದ್ದಾರೆ, ಏನು ಮಾಡುತ್ತಾರೆ? ಇಲ್ಲಿದೆ ಒಂದು ವಿವರ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. EPFO: ಇಪಿಎಫ್‌ ಬಡ್ಡಿ ದರ 8.15%ಕ್ಕೆ ಏರಿಕೆ
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) 2022-23ರ ಆರ್ಥಿಕ ವರ್ಷಕ್ಕೆ ಉದ್ಯೋಗಿಗಳ ಭವಿಷ್ಯ ನಿಧಿಯ ಮೇಲೆ 8.15% ಬಡ್ಡಿ ದರವನ್ನು ನಿಗದಿಪಡಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Atiq Ahmed: ಅತೀಕ್​ ಅಹ್ಮದ್​ ಕುಟುಂಬದಲ್ಲಿ ಎಲ್ಲರೂ ಕ್ರಿಮಿನಲ್​ಗಳೇ; ಮರಣದಂಡನೆಗೆ ಉಮೇಶ್ ಪಾಲ್ ತಾಯಿಯಿಂದ ಆಗ್ರಹ
2005ರಲ್ಲಿ ಬಹುಜನ ಸಮಾಜ ಪಾರ್ಟಿಯ ಶಾಸಕ ರಾಜು ಪಾಲ್ ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್​ ಪಾಲ್​ರನ್ನು 2006ರಲ್ಲಿ ಅಪರಹಣ ಮಾಡಿದ ಆರೋಪದಡಿ ಗ್ಯಾಂಗ್​ಸ್ಟರ್​, ರಾಜಕಾರಣಿ ಅತಿಕ್​ ಅಹ್ಮದ್ (Atiq Ahmed)​​ಗೆ ಇಂದು ಪ್ರಯಾಗ್​ರಾಜ್ ಕೋರ್ಟ್​ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಅತಿಕ್​ ಅಹ್ಮದ್​ ​ ಸಮಾಜವಾದಿ ಪಕ್ಷ (ಅಖಿಲೇಶ್ ಯಾದವ್ ಪಕ್ಷ)ದ ರಾಜಕಾರಣಿಯಾಗಿದ್ದ. ಫಲ್ಪುರ ಕ್ಷೇತ್ರದ ಸಂಸದನಾಗಿದ್ದ. ರಾಜು ಪಾಲ್ ಹತ್ಯೆಯಲ್ಲಿ ಈತನ ಕೈವಾಡ ಇದೆ ಮತ್ತು ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್​ ಅಪಹರಣ ಕೇಸ್​ನಲ್ಲಿ ಕೂಡ ಭಾಗಿಯಾದ ಆರೋಪ ಹೊತ್ತ ಹಿನ್ನೆಲೆಯಲ್ಲಿ ಅವನನ್ನು 2009ರಲ್ಲಿ ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Amritpal Singh: ಅಮೃತ್​ಪಾಲ್ ಸಿಂಗ್​​ನ ಆಪ್ತನಿಗೆ, ಪಾಕಿಸ್ತಾನ ಮಾಜಿ ಸೇನಾ ಮುಖ್ಯಸ್ಥನ ಪುತ್ರನ ಜತೆ ನಂಟು!
ಪೊಲೀಸರ ಕಣ್ತಪ್ಪಿಸಿ, ನಾಪತ್ತೆಯಾಗಿರುವ ಖಲಿಸ್ತಾನಿ ನಾಯಕ ಅಮೃತ್​ಪಾಲ್ ಸಿಂಗ್ (Amritpal Singh)​ಗೆ ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್​ಐ ಜತೆ ಸಂಪರ್ಕವಿತ್ತು ಎಂಬುದನ್ನು ಈಗಾಗಲೇ ಭಾರತದ ಗುಪ್ತಚರ ದಳ ತಿಳಿಸಿದೆ. ಅದರೊಂದಿಗೆ ಈಗ ಇನ್ನೊಂದು ಮಹತ್ವದ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ. ‘ಅಮೃತ್​ಪಾಲ್​ ಸಿಂಗ್​​ನ ಸಂಘಟನೆಯಲ್ಲಿ ಹಣಕಾಸು ವಿಭಾಗ ನೋಡಿಕೊಳ್ಳುತ್ತಿದ್ದ, ಅವನ ಆಪ್ತನಲ್ಲಿ ಒಬ್ಬನಾಗಿರುವ ದಲ್ಜಿತ್​ ಖಲ್ಸಿ ಮತ್ತು ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಖಾಮರ್ ಜಾವೇದ್ ಬಜ್ವಾನ ಪುತ್ರ ಇಬ್ಬರೂ ಪರಮಾಪ್ತರು ಎಂದು ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. PAN-Aadhaar link: ಪ್ಯಾನ್-ಆಧಾರ್ ಲಿಂಕ್ ಗಡುವು ಜೂನ್ 30ರವರೆಗೆ ವಿಸ್ತರಣೆ
ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ನಿಗದಿಯಾಗಿದ್ದ ಗಡುವು ಮೂರು ತಿಂಗಳು ವಿಸ್ತರಣೆಯಾಗಿದೆ. ಈ ಮೊದಲು ಮಾರ್ಚ್ 30 ಅಂತಿಮ ದಿನವಾಗಿತ್ತು. ಈ ಗಡುವನ್ನು 2023ರ ಜೂನ್ 30ರವರೆಗೆ ವಿಸ್ತರಿಸಲಾಗಿದೆ ಎಂದು ಹಣಕಾಸು ಇಲಾಖೆ ಹೇಳಿದೆ. ಅಲ್ಲದೇ, ಒಂದೊಮ್ಮೆ ಪ್ಯಾನ್ ಮತ್ತು ಆಧಾರ್ ಲಿಂಕ್ ಆಗದೇ ಇದ್ದರೆ ಜುಲೈ 1ರಿಂದ ಲಿಂಕ್ ಆಗದ ಪ್ಯಾನ್‌ ಕಾರ್ಡ್‌ಗಳು ನಿಷ್ಕ್ರಿಯವಾಗಲಿವೆ ಎಂದು ಸಚಿವಾಲಯವು ತಿಳಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Indian Masters T10: ಭಾರತದಲ್ಲಿ ಚೊಚ್ಚಲ ಟಿ10 ಕ್ರಿಕೆಟ್ ಟೂರ್ನಿ​; ಶೀಘ್ರದಲ್ಲೇ ಆರಂಭ
ಭಾರತದಲ್ಲಿ ಈಗಾಗಲೇ ಪುರುಷರ ಮತ್ತು ಮಹಿಳೆಯರ ಟಿ20 ಕ್ರಿಕೆಟ್​ ಲೀಗ್ ಚಾಲ್ತಿಯಲ್ಲಿದೆ. ಇದೀಗ ಮತ್ತೊಂದು ಪ್ರಯೋಗ ಎಂಬಂತೆ ಚೊಚ್ಚಲ ಆವೃತ್ತಿಯ “ಟಿ10 ಇಂಡಿಯಾ ಮಾಸ್ಟ​ರ್ಸ್‌ ಕ್ರಿಕೆಟ್‌”(Indian Masters T10) ಟೂರ್ನಿ ಆರಂಭಗೊಳ್ಳಲಿದೆ. ಇದೇ ವರ್ಷ ಜೂನ್‌ನಲ್ಲಿ ಈ ಟೂರ್ನಿಗೆ ಚಾಲನೆ ಸಿಗಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. SC ST Reservation: ಬಿಎಸ್‌ವೈ ಮನೆಗೆ ಕಲ್ಲು ತೂರಿದವನ ಜತೆ ಸಿದ್ದರಾಮಯ್ಯ ಫೋಟೊ;‌ ಸಿದ್ದು ಹೇಳಿದ್ದೇನು?
  2. BJP MPs Protest: ವಿದೇಶಿ ಮಹಿಳೆಗೆ ಜನಿಸಿದ ರಾಹುಲ್ ದೇಶಭಕ್ತನಲ್ಲ; ಬಿಜೆಪಿ ವಾಗ್ದಾಳಿ, ಸಂಸದರಿಂದ ಪ್ರತಿಭಟನೆ
  3. NCERT: ಹೊಸ ಶಿಕ್ಷಣ ನೀತಿ ಅನುಸಾರ ಎನ್‌ಸಿಇಆರ್‌ಟಿ ಪಠ್ಯಪುಸ್ತಕ ಪರಿಷ್ಕರಣೆ, ಮುಂದಿನ ವರ್ಷದಿಂದಲೇ ಜಾರಿ
  4. Ram Navami 2023 : ರಾಮನವಮಿಯಂದು ಶ್ರೀರಾಮನ ಪೂಜೆ ಎಷ್ಟು ಹೊತ್ತಿಗೆ? ಆಚರಣೆ ಹೇಗೆ?
  5. ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ; ಬಸ್​​ಗೆ ಬೆಂಕಿ ಹೊತ್ತಿ ಉರಿದು, 20 ಹಜ್ ಯಾತ್ರಿಕರ ದುರ್ಮರಣ
  6. Karnataka Elections : ಬಿಜೆಪಿಯ ಮತ್ತೊಂದು ವಿಕೆಟ್‌ ಪತನ, ಕೂಡ್ಲಿಗಿ ಶಾಸಕ ಎನ್‌.ವೈ ಗೋಪಾಲಕೃಷ್ಣ ಕಾಂಗ್ರೆಸ್‌ಗೆ
  7. ರಾಜ ಮಾರ್ಗ ಅಂಕಣ : ಎಸ್ಸೆಸ್ಸೆಲ್ಸಿ ಪರೀಕ್ಷೆ ಅಂತಿಮ ತಯಾರಿ ಭಾಗ-4; ಗಣಿತದ ಕುತೂಹಲಕಾರಿ ಅಪ್ಲಿಕೇಶನ್ ಪ್ರಶ್ನೆಗಳು
  8. BJP Karnataka: ʼಅಪ್ಪನನ್ನು ಮರೆತʼ ಬಿಜೆಪಿ ವಿರುದ್ಧ ಅನಂತಕುಮಾರ್‌ ಪುತ್ರಿ ಅಸಮಾಧಾನ
Exit mobile version