ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ; ಬಸ್​​ಗೆ ಬೆಂಕಿ ಹೊತ್ತಿ ಉರಿದು, 20 ಹಜ್ ಯಾತ್ರಿಕರ ದುರ್ಮರಣ - Vistara News

ವಿದೇಶ

ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ; ಬಸ್​​ಗೆ ಬೆಂಕಿ ಹೊತ್ತಿ ಉರಿದು, 20 ಹಜ್ ಯಾತ್ರಿಕರ ದುರ್ಮರಣ

ಮುಸ್ಲಿಂ ಜನಾಂಗದವರಿಗೆ ಈಗ ಪವಿತ್ರ ರಂಝಾನ್​ ತಿಂಗಳಾಗಿದ್ದು, ವಿವಿಧ ದೇಶಗಳಿಂದ ಮೆಕ್ಕಾ-ಮದೀನಾ ಯಾತ್ರೆಗಾಗಿ ಸೌದಿ ಅರೇಬಿಯಾಕ್ಕೆ ತೆರಳಿದವರು ಇದ್ದರು. ಇದೀಗ ಮೃತಪಟ್ಟವರಲ್ಲಿ ವಿದೇಶಿ ಯಾತ್ರಿಕರೂ ಇದ್ದಾರೆ ಎಂದು ವರದಿಯಾಗಿದೆ.

VISTARANEWS.COM


on

29 Hajj pilgrims killed in Saudi Arabia
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಸೌದಿ ಅರೇಬಿಯಾದ ನೈಋತ್ಯ ಭಾಗದಲ್ಲಿ ಇಂದು ಬೆಳಗ್ಗೆ ಭಯಂಕರ ಅಪಘಾತವಾಗಿದೆ. ಹಜ್​ ಯಾತ್ರಿಕರನ್ನು ಒಳಗೊಂಡಿದ್ದ ಬಸ್​ ಸೇತುವೆಯೊಂದಕ್ಕೆ ಡಿಕ್ಕಿ ಹೊಡೆದು, ಪಲ್ಟಿಯಾದ ಬಳಿಕ ಬೆಂಕಿ ಹೊತ್ತಿ ಉರಿದಿದೆ. ಅದರ ಪರಿಣಾಮ 20 ಮಂದಿ ಮೃತಪಟ್ಟಿದ್ದು, 29 ಯಾತ್ರಿಕರು ಗಾಯಗೊಂಡಿದ್ದಾರೆ. ಯೆಮೆನ್​ ದೇಶದ ಗಡಿಗೆ ಹೊಂದಿಕೊಂಡಿರುವ ಸೌಧಿ ಅರೇಬಿಯಾದ ಆಸಿರ್ ಪ್ರಾಂತ್ಯದ ಬಳಿ ಬಸ್​ ಹೋಗುತ್ತಿತ್ತು. ಈ ಬಸ್​​ ತುಂಬ ಪ್ರಯಾಣಿಕರು ಇದ್ದರು. ಮಾರ್ಗಮಧ್ಯೆ ಸೇತುವೆಯೊಂದರ ಬಳಿ ಬಸ್​ ಬ್ರೇಕ್​ ಫೇಲ್​ ಆಗಿ ಅಪಘಾತವಾಗಿದೆ. ಬಸ್​ ಸುಟ್ಟು ಬೂದಿಯಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ: Youth drowned: ಕಲಬುರಗಿಗೆ ಪ್ರವಾಸಕ್ಕೆ ಬಂದಿದ್ದ ಬೀದರ್‌ ಯುವಕ ನೀರುಪಾಲು; ಕೊಪ್ಪಳದಲ್ಲಿ ಬಸ್‌ ಅಪಘಾತಕ್ಕೆ ವ್ಯಕ್ತಿ ಬಲಿ

ಮುಸ್ಲಿಂ ಜನಾಂಗದವರಿಗೆ ಈಗ ಪವಿತ್ರ ರಂಝಾನ್​ ತಿಂಗಳಾಗಿದ್ದು, ವಿವಿಧ ದೇಶಗಳಿಂದ ಮೆಕ್ಕಾ-ಮದೀನಾ ಯಾತ್ರೆಗಾಗಿ ಸೌದಿ ಅರೇಬಿಯಾಕ್ಕೆ ತೆರಳಿದವರು ಇದ್ದರು. ಇದೀಗ ಮೃತಪಟ್ಟವರಲ್ಲಿ ವಿದೇಶಿ ಯಾತ್ರಿಕರೂ ಇದ್ದಾರೆ. ಆದರೆ ಇನ್ನೂ ಎಲ್ಲರ ಗುರುತೂ ಪತ್ತೆಯಾಗಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಪ್ರತಿವರ್ಷವೂ ಈ ಸಮಯದಲ್ಲಿ ಮೆಕ್ಕಾ-ಮದೀನಾಕ್ಕೆ ಭೇಟಿ ಕೊಡುವವರ ಸಂಖ್ಯೆ ಹೆಚ್ಚಿರುತ್ತದೆ. ವಾಹನ ಸಂಚಾರವೂ ಅಧಿಕವಾಗಿದ್ದು ವಿಪರೀತ ಟ್ರಾಫಿಕ್ ಜಾಮ್ ಕೂಡ ಆಗುತ್ತದೆ. ಅದರಲ್ಲೂ ಇತ್ತೀಚೆಗಿನ ವರ್ಷಗಳಲ್ಲಿ ಹಜ್​ ಯಾತ್ರಿಕರ ಸಂಖ್ಯೆಯಲ್ಲೂ ಏರಿಕೆಯಾಗಿದೆ.

ಈ ಹಿಂದೆ 2019ರ ಅಕ್ಟೋಬರ್​ ತಿಂಗಳಲ್ಲಿ ಕೂಡ ಇಂಥದ್ದೇ ಒಂದು ಭಯಾನಕ ಅಪಘಾತವಾಗಿತ್ತು. ಮದೀನಾದ ಬಳಿಯೇ ಬಸ್​​ವೊಂದು ಮತ್ತೊಂದು ಭಾರಿ ವಾಹನಕ್ಕೆ ಡಿಕ್ಕಿಯಾಗಿ 35 ಮಂದಿ ಮೃತಪಟ್ಟಿದ್ದರು. ನಾಲ್ಕು ಮಂದಿ ಗಾಯಗೊಂಡಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

Arvind Kejriwal: ಕೇಜ್ರಿವಾಲ್‌ ಬಂಧನ: ಮತ್ತೆ ಅಮೆರಿಕ ಕ್ಯಾತೆ; ಕಾಂಗ್ರೆಸ್‌ ಬ್ಯಾಂಕ್‌ ಅಕೌಂಟ್‌ ನಿರ್ಬಂಧ ಕುರಿತೂ ಕಿರಿಕ್

Arvind Kejriwal: ಅರವಿಂದ ಕೇಜ್ರಿವಾಲ್‌ ಬಂಧನದ ಜೊತೆಗೆ, ಕಾಂಗ್ರೆಸ್‌ ಪಕ್ಷದ ಬ್ಯಾಂಕ್‌ ಅಕೌಂಟ್‌ ನಿರ್ಬಂಧದ ಬಗ್ಗೆಯೂ ಅಮೆರಿಕ ಅಡ್ಡಮಾತು ಆಡಿದೆ.

VISTARANEWS.COM


on

arvind kejriwal & Matthew Miller
Koo

ನ್ಯೂಯಾರ್ಕ್‌: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ (Arvind Kejriwal) ಅವರ ಬಂಧನ ಕುರಿತ ಮಾಡಿದ ಟೀಕೆಗಾಗಿ ಭಾರತವು (MEA) ನಿನ್ನೆ ಅಮೆರಿಕದ ಹಿರಿಯ ರಾಜತಾಂತ್ರಿಕರನ್ನು (US Diplomat) ಕರೆಸಿ ಪ್ರತಿಭಟಿಸಿದ್ದು, ಇಂದು ಮತ್ತೆ ಅಮೆರಿಕ ಈ ಬಗ್ಗೆ ಪ್ರತಿಹೇಳಿಕೆ ನೀಡಿದೆ. ಈ ಬಾರಿ ಕೇಜ್ರಿವಾಲ್‌ ಬಂಧನದ ಜೊತೆಗೆ, ಕಾಂಗ್ರೆಸ್‌ ಪಕ್ಷದ ಬ್ಯಾಂಕ್‌ ಅಕೌಂಟ್‌ ನಿರ್ಬಂಧದ (Congress bank account seizure) ಬಗ್ಗೆಯೂ ಅಡ್ಡಮಾತು ಆಡಿದೆ.

“ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಬಂಧನ ಸೇರಿದಂತೆ ನಡೆದಿರುವ ಕ್ರಮಗಳನ್ನು ನಾವು ನಿಕಟವಾಗಿ ಅನುಸರಿಸುತ್ತಿದ್ದೇವೆ” ಎಂದು ಯುಎಸ್ ವಿದೇಶಾಂಗ ಇಲಾಖೆ ವಕ್ತಾರ ಮ್ಯಾಥ್ಯೂ ಮಿಲ್ಲರ್ ಹೇಳಿದ್ದಾರೆ. “ಅಮೆರಿಕ ನ್ಯಾಯಯುತ, ಪಾರದರ್ಶಕ, ಸಮಯೋಚಿತ ಕಾನೂನು ಪ್ರಕ್ರಿಯೆಗಳನ್ನು ಉತ್ತೇಜಿಸುತ್ತದೆ. ಮತ್ತು ಯಾರೂ ಈ ಕ್ರಮಗಳನ್ನು ಆಕ್ಷೇಪಿಸಬಾರದು ಎಂದು ನಾವು ಭಾವಿಸುವುದಿಲ್ಲ” ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿರುವ ಬಗ್ಗೆ ಮತ್ತು ದೆಹಲಿಯಲ್ಲಿ ಅಮೆರಿಕದ ಹಂಗಾಮಿ ಡೆಪ್ಯುಟಿ ಚೀಫ್ ಆಫ್ ಮಿಷನ್ ಗ್ಲೋರಿಯಾ ಬರ್ಬೆನಾ ಅವರನ್ನು ಕರೆಸಿ ವಿದೇಶಾಂಗ ಇಲಾಖೆ ಮಾತನಾಡಿರುವ ಬಗ್ಗೆ ಪ್ರಶ್ನೆಯೊಂದಕ್ಕೆ ಮಿಲ್ಲರ್ ಅವರು ಪ್ರತಿಕ್ರಿಯಿಸಿದರು.

“ಮುಂಬರುವ ಚುನಾವಣೆಯಲ್ಲಿ ಪರಿಣಾಮಕಾರಿಯಾಗಿ ಪ್ರಚಾರ ಮಾಡಲು ಸವಾಲಾಗುವ ರೀತಿಯಲ್ಲಿ ತೆರಿಗೆ ಅಧಿಕಾರಿಗಳು ಅವರ ಕೆಲವು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ ಎಂಬ ಕಾಂಗ್ರೆಸ್ ಪಕ್ಷದ ಆರೋಪಗಳ ಬಗ್ಗೆ ನಮಗೆ ಮಾಹಿತಿ ಇದೆ. ಇವುಗಳಲ್ಲಿ ಪ್ರತಿಯೊಂದಕ್ಕೂ ನಾವು ನ್ಯಾಯಯುತ, ಪಾರದರ್ಶಕ ಮತ್ತು ಸಮಯೋಚಿತ ಕಾನೂನು ಪ್ರಕ್ರಿಯೆಗಳನ್ನು ಪ್ರೋತ್ಸಾಹಿಸುತ್ತೇವೆ” ಎಂದಿದ್ದಾರೆ.

“ರಾಯಭಾರಿಯನ್ನು ಕರೆಸಿರುವ ಬಗ್ಗೆ, ನಾನು ಯಾವುದೇ ಖಾಸಗಿ ರಾಜತಾಂತ್ರಿಕ ಸಂಭಾಷಣೆಗಳ ಬಗ್ಗೆ ಮಾತನಾಡಲು ಹೋಗುವುದಿಲ್ಲ. ಆದರೆ ನಾವು ಸಾರ್ವಜನಿಕವಾಗಿ ಹೇಳಬಹುದಾದದ್ದು ನಾನು ಇಲ್ಲಿಂದ ಹೇಳಿದ್ದೇನೆ. ನಾವು ನ್ಯಾಯಯುತ, ಪಾರದರ್ಶಕ, ಸಮಯೋಚಿತ ಕಾನೂನು ಪ್ರಕ್ರಿಯೆಗಳನ್ನು ಪ್ರೋತ್ಸಾಹಿಸುತ್ತೇವೆ. ಯಾರೂ ಅದನ್ನು ಆಕ್ಷೇಪಿಸಬಾರದು ಎಂದು ಭಾವಿಸಬೇಡಿ. ನಾವು ಅದೇ ವಿಷಯವನ್ನು ಖಾಸಗಿಯಾಗಿಯೂ ಸ್ಪಷ್ಟಪಡಿಸುತ್ತೇವೆ,” ಎಂದು ಮಿಲ್ಲರ್ ಹೇಳಿದರು.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಅಮೆರಿಕದ ಹಂಗಾಮಿ ಡೆಪ್ಯುಟಿ ಚೀಫ್ ಆಫ್ ಮಿಷನ್ ಗ್ಲೋರಿಯಾ ಬರ್ಬೆನಾ ಅವರನ್ನು ದೆಹಲಿಯ ಸೌತ್ ಬ್ಲಾಕ್‌ನಲ್ಲಿರುವ ಕಚೇರಿಗೆ ನಿನ್ನೆ ಕರೆಸಿದ್ದರು. ಕೇಜ್ರಿವಾಲ್ ಅವರ ಬಂಧನದ ಕುರಿತು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಅಧಿಕಾರಿಯ ಹೇಳಿಕೆಗಳ ವಿರುದ್ಧ ತೀವ್ರ ಪ್ರತಿಭಟನೆಯನ್ನು ಸಲ್ಲಿಸಿದ್ದರು. ಸುಮಾರು 30 ನಿಮಿಷಕ್ಕೂ ಹೆಚ್ಚು ಕಾಲ ಸಭೆ ನಡೆದಿತ್ತು.

ದಿಲ್ಲಿಯ ಅಬಕಾರಿ ನೀತಿ ಜಾರಿ ಸಂದರ್ಭದಲ್ಲಿ ನಡೆದಿರುವ ಭ್ರಷ್ಟಾಚಾರ, ಅಕ್ರಮ ಹಣ ವರ್ಗಾವಣೆಗೆ ಇತ್ಯಾದಿಗಳಿಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು ಕೇಜ್ರಿವಾಲ್ ಅವರನ್ನು ಬಂಧಿಸಿದೆ. ಕೇಜ್ರಿವಾಲ್‌ ಒಂಬತ್ತು ಬಾರಿ ಇಡಿ ಸಮನ್ಸ್‌ಗಳನ್ನು ತಿರಸ್ಕರಿಸಿದ್ದರು. ಆದ್ದರಿಂದ, ಕೇಜ್ರಿವಾಲ್‌ ಅವರಿಗೆ ಯಾವುದೇ ಜಾಮೀನು ರಕ್ಷಣೆ ನೀಡಲು ದಿಲ್ಲಿ ಹೈಕೋರ್ಟ್‌ ನಿರಾಕರಿಸಿತ್ತು.

ಈ ಪ್ರಕರಣವು 2021-22ರ ದೆಹಲಿ ಸರ್ಕಾರದ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದೆ. ನೀತಿಯನ್ನು ನಂತರ ರದ್ದುಗೊಳಿಸಲಾಯಿತು.

ನಿನ್ನೆ ಅಮೆರಿಕದ ಟೀಕೆಗೆ ಉತ್ತರಿಸಿದ್ದ ಭಾರತ ವಿದೇಶಾಂಗ ಇಲಾಖೆ, “ನಮ್ಮಲ್ಲಿನ ಕೆಲವು ಕಾನೂನು ಪ್ರಕ್ರಿಯೆಗಳ ಕುರಿತು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್‌ನ ವಕ್ತಾರರ ಹೇಳಿಕೆಗಳಿಗೆ ದೆಹಲಿ ತೀವ್ರ ಆಕ್ಷೇಪಣೆಯನ್ನು ಹೊಂದಿದೆ” ಎಂದು ಹೇಳಿದೆ.

“ರಾಜತಾಂತ್ರಿಕತೆಯಲ್ಲಿ, ರಾಜ್ಯಗಳು ಇತರರ ಸಾರ್ವಭೌಮತ್ವ ಮತ್ತು ಆಂತರಿಕ ವ್ಯವಹಾರಗಳನ್ನು ಗೌರವಿಸಬೇಕು ಎಂದು ನಿರೀಕ್ಷಿಸಲಾಗಿದೆ. ಈ ಜವಾಬ್ದಾರಿಯು ಪ್ರಜಾಪ್ರಭುತ್ವಗಳ ವಿಷಯದಲ್ಲಿ ಇನ್ನೂ ಹೆಚ್ಚಾಗಿರುತ್ತದೆ. ಇಲ್ಲದಿದ್ದರೆ ಅನಾರೋಗ್ಯಕರ ಪೂರ್ವನಿದರ್ಶನಗಳು ಸೃಷ್ಟಿಯಾಗಬಹುದು” ಎಂದು ಸಚಿವಾಲಯ ಹೇಳಿದೆ.

“ಭಾರತದ ಕಾನೂನು ಪ್ರಕ್ರಿಯೆಗಳು ಸ್ವತಂತ್ರ ನ್ಯಾಯಾಂಗವನ್ನು ಆಧರಿಸಿವೆ. ವಸ್ತುನಿಷ್ಠ ಮತ್ತು ಸಮಯೋಚಿತ ಫಲಿತಾಂಶಗಳಿಗೆ ಬದ್ಧವಾಗಿದೆ. ಅದರ ಮೇಲೆ ನಮ್ಮ ನಿರೀಕ್ಷೆಗಳನ್ನು ಹೇರುವುದು ಅನಗತ್ಯ” ಎಂದು MEA ಹೇಳಿದೆ.

ಇದನ್ನೂ ಓದಿ: Arvind Kejriwal: ಕೇಜ್ರಿವಾಲ್‌ಗಿಲ್ಲ ಮಧ್ಯಂತರ ರಿಲೀಫ್‌; ಇನ್ನೂ 7 ದಿನ ಜೈಲೇ ಗತಿ

Continue Reading

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ಭಾರತದ ನ್ಯಾಯಪ್ರಕ್ರಿಯೆಯಲ್ಲಿ ಅಮೆರಿಕದ ಹಸ್ತಕ್ಷೇಪ ಅಧಿಕ ಪ್ರಸಂಗತನ

ಅಮೆರಿಕದ ಈ ನಡೆ ಆ ದೇಶದ ತಿಕ್ಕಲುತನವನ್ನು ತೋರಿಸುತ್ತದಲ್ಲದೇ ಇನ್ನೇನೂ ಅಲ್ಲ. ಭಾರತವು ಕಾನೂನಿನ ಆಳ್ವಿಕೆಯನ್ನು ಹೊಂದಿರುವ ದೃಢವಾದ ಪ್ರಜಾಪ್ರಭುತ್ವ ಎಂಬುದರಲ್ಲಿ ಸಂಶಯವಿಲ್ಲ. ಭಾರತದ ನ್ಯಾಯಾಂಗ ಬೇರೆ ದೇಶಗಳಿಗಿಂತ ಎಷ್ಟೋ ಪಕ್ವವಾಗಿದೆ; ಪಾರದರ್ಶಕವಾಗಿದೆ.

VISTARANEWS.COM


on

Joe Biden And Arvind Kejriwal
Koo

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಅವರನ್ನು ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಸಂಬಂಧಿಸಿರುವ ಕುರಿತು ಅಮೆರಿಕದ ವಿದೇಶಾಂಗ ಇಲಾಖೆ ನೀಡಿರುವ ಅನಗತ್ಯ ಪ್ರತಿಕ್ರಿಯೆಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತೀವ್ರ ಆಕ್ಷೇಪಣೆ, ಕಳವಳ ವ್ಯಕ್ತಪಡಿಸಿದೆ. ಇದನ್ನು ತಿಳಿಸಲು ಅಮೆರಿಕದ ಹಂಗಾಮಿ ಉಪ ರಾಯಭಾರಿ ಗ್ಲೋರಿಯಾ ಬರ್ಬೆನಾ ಅವರನ್ನು ಬುಧವಾರ ಕರೆಸಿ, ಭಾರತದ ನಿಲುವನ್ನು ಅವರಿಗೆ ವಿವರಿಸಲಾಗಿದೆ. “ರಾಜತಾಂತ್ರಿಕತೆಯಲ್ಲಿ, ದೇಶಗಳು ಇತರರ ಸಾರ್ವಭೌಮತ್ವ ಮತ್ತು ಆಂತರಿಕ ವ್ಯವಹಾರಗಳನ್ನು ಗೌರವಿಸುತ್ತವೆ ಎಂದು ನಿರೀಕ್ಷಿಸಲಾಗಿದೆ. ಸಹವರ್ತಿ ಪ್ರಜಾಪ್ರಭುತ್ವಗಳಲ್ಲಿ ಈ ಜವಾಬ್ದಾರಿ ಇನ್ನೂ ಹೆಚ್ಚು. ಇದು ಇಲ್ಲದಿದ್ದರೆ ಅನಾರೋಗ್ಯಕರ ಪೂರ್ವನಿದರ್ಶನಗಳು ಸೃಷ್ಟಿಯಾಗಬಹುದು. ಭಾರತದ ಕಾನೂನು ಪ್ರಕ್ರಿಯೆಗಳು ವಸ್ತುನಿಷ್ಠವಾದ ಮತ್ತು ಸಮಯೋಚಿತ ಫಲಿತಾಂಶಗಳಿಗೆ ಬದ್ಧವಾಗಿರುವ ಸ್ವತಂತ್ರ ನ್ಯಾಯಾಂಗವನ್ನು ಆಧರಿಸಿವೆ. ಅದರ ಮೇಲೆ ನಮ್ಮ ಹೇರಿಕೆ ಅನಗತ್ಯ” ಎಂದು ಎಂಇಎ ಅಮೆರಿಕಕ್ಕೆ ತಿಳಿಸಿದೆ.

ಅರವಿಂದ್ ಕೇಜ್ರಿವಾಲ್ ಬಂಧನ ಕುರಿತಾದ ವರದಿಗಳನ್ನು ತಾನು ಪರಿಶೀಲಿಸುತ್ತಿರುವುದಾಗಿ ಮಂಗಳವಾರ ಅಮೆರಿಕ ವಿದೇಶಾಂಗ ಇಲಾಖೆ ಹೇಳಿದ್ದು, ನ್ಯಾಯಸಮ್ಮತ ಹಾಗೂ ಸಕಾಲಿಕ ಕಾನೂನು ಪ್ರಕ್ರಿಯೆಯನ್ನು ಖಾತರಿಪಡಿಸುವಂತೆ ಭಾರತಕ್ಕೆ ಸಲಹೆ ನೀಡಿತ್ತು. ಆರೋಪ ಎದುರಿಸುವ ಭಾರತದ ಇತರೆ ಯಾವುದೇ ಪ್ರಜೆಯಂತೆ ಅರವಿಂದ್ ಕೇಜ್ರಿವಾಲ್ ಅವರು ನ್ಯಾಯಸಮ್ಮತ ಹಾಗೂ ನಿಷ್ಪಕ್ಷಪಾತಿ ವಿಚಾರಣೆಗೆ ಅರ್ಹರಾಗಿದ್ದಾರೆ ಎಂದು ಜರ್ಮನಿಯ ವಿದೇಶಾಂಗ ಕಚೇರಿ ಕೂಡ ಕೆಲವು ದಿನಗಳ ಹಿಂದೆ ಹೇಳಿತ್ತು. ಜರ್ಮನಿಯ ರಾಯಭಾರಿಗೂ ಸಮನ್ಸ್ ನೀಡಿ ಭಾರತ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸಿತ್ತು.

ಅಮೆರಿಕದ ಈ ನಡೆ ಆ ದೇಶದ ತಿಕ್ಕಲುತನವನ್ನು ತೋರಿಸುತ್ತದಲ್ಲದೇ ಇನ್ನೇನೂ ಅಲ್ಲ. ಭಾರತವು ಕಾನೂನಿನ ಆಳ್ವಿಕೆಯನ್ನು ಹೊಂದಿರುವ ದೃಢವಾದ ಪ್ರಜಾಪ್ರಭುತ್ವ ಎಂಬುದರಲ್ಲಿ ಸಂಶಯವಿಲ್ಲ. ಭಾರತದ ನ್ಯಾಯಾಂಗ ಬೇರೆ ದೇಶಗಳಿಗಿಂತ ಎಷ್ಟೋ ಪಕ್ವವಾಗಿದೆ; ಪಾರದರ್ಶಕವಾಗಿದೆ. ಇಲ್ಲಿನ ನ್ಯಾಯಾಧೀಶರು ಆಳುವವರ ಕೈಗೊಂಬೆಗಳಲ್ಲ. ಪ್ರಕರಣ ಸತ್ಯಾಸತ್ಯತೆಗಳನ್ನು ಪರಿಗಣಿಸಿ ನ್ಯಾಯ ನೀಡಬಲ್ಲ ಸಮರ್ಥರು. ಆರೋಪಿಯು ತನ್ನ ಪರವಾಗಿ ವಾದವನ್ನು ಮಂಡಿಸಲು, ಸಾಕ್ಷಿಗಳನ್ನು ಒದಗಿಸಲು, ಕಟಕಟೆಯಿಂದ ಪಾರಾಗಲು ಇಲ್ಲಿ ಸಾಕಷ್ಟು ಕಾನೂನಾತ್ಮಕ ಅವಕಾಶಗಳಿವೆ. ಇಡಿ ವಿಚಾರಣೆಯನ್ನು ಎದುರಿಸುತ್ತಿದ್ದರು ಎಲ್ಲರೂ ಅಪರಾಧಿಗಳಾಗಿರಲಾರರು. ವಿಚಾರಣೆ ಎದುರಿಸಿ ಬಳಿದ ಖುಲಾಸೆ ಆದವರೂ ಇದ್ದಾರೆ. ಕೇಜ್ರಿವಾಲ್‌ ನಿರ್ದೋಷಿಯಾಗಿದ್ದರೆ ಅವರು ಮತ್ತು ಅವರ ಪರ ಸಹಾನುಭೂತಿ ವ್ಯಕ್ತಡಿಸುವವರು ಅಂಜುವ ಅಗತ್ಯವಿಲ್ಲ. ಎಲ್ಲಾ ಪ್ರಜಾಪ್ರಭುತ್ವಗಳಂತೆ ಭಾರತ ದೇಶದ ಎಲ್ಲಾ ಕಾನೂನು ಪ್ರಕರಣಗಳಲ್ಲಿ ತ್ವರಿತ ವಿಷಯಗಳಲ್ಲಿ ಕಾನೂನು ತನ್ನದೇ ಆದ ಕ್ರಮವನ್ನು ಕೈಗೊಳ್ಳುತ್ತದೆ. ಈ ವಿಚಾರದಲ್ಲಿ ಅಮೆರಿಕ ಮಾಡಿರುವ ಊಹೆಗಳು ಅನಗತ್ಯವಾಗಿವೆ.

ಇಷ್ಟಕ್ಕೂ ಕೇಜ್ರಿವಾಲ್‌ ಅವರ ಬಂಧನ ಆಗಿರುವುದು ಸತತ ಒಂಬತ್ತನೇ ಬಾರಿ ಅವರು ಇಡಿ ಸಮನ್ಸ್‌ ಅನ್ನು ತಿರಸ್ಕರಿಸಿದ ನಂತರ. ಸಮನ್ಸ್‌ ನಿರಾಕರಿಸಿ ಕೋರ್ಟ್‌ಗೂ ಹಾಜರಾಗದೆ ಇದ್ದ ಕೇಜ್ರಿವಾಲ್‌ ಅವರನ್ನು ಹೈಕೋರ್ಟ್ ನಿರ್ದೇಶನದಂತೆ ಜಾರಿ ನಿರ್ದೇಶನಾಲಯ ಬಂಧಿಸಿದೆ. ಈ ಪ್ರಕರಣವು 2021-22ರ ದೆಹಲಿ ಸರ್ಕಾರದ ಅಬಕಾರಿ ನೀತಿ ಜಾರಿ ಸಂದರ್ಭದ ಅಕ್ರಮ, ಭ್ರಷ್ಟಾಚಾರಕ್ಕೆ ಸಂಬಂಧಿಸಿದೆ. ಇದರಲ್ಲಿ ಕೇಜ್ರಿವಾಲ್‌ ವಿರುದ್ಧ ಬಲಿಷ್ಠವಾದ ಸಾಕ್ಷಿಗಳು, ಮಾಫಿ ಸಾಕ್ಷಿಗಳು ಕೂಡ ಇವೆ. ಕಾನೂನು ತನ್ನದೇ ಆದ ರೀತಿಯ ನಡೆಯನ್ನು ಹೊಂದಿದ್ದು, ಅದಕ್ಕೆ ತಕ್ಕಂತೆ ಕ್ರಮವನ್ನು ತೆಗೆದುಕೊಳ್ಳುತ್ತದೆ.

ಇದನ್ನೂ ಓದಿ: Arvind Kejriwal: ಕೇಜ್ರಿವಾಲ್‌ಗಿಲ್ಲ ಮಧ್ಯಂತರ ರಿಲೀಫ್‌; ಇನ್ನೂ 7 ದಿನ ಜೈಲೇ ಗತಿ

ಇನ್ನು ಪ್ರಜಾಪ್ರಭುತ್ವದ ಬಗ್ಗೆ ಪಾಠ ಹೇಳುವ ಅಮೆರಿಕ, ಜಗತ್ತಿನಾದ್ಯಂತ ಪ್ರಜಾಪ್ರಭುತ್ವವನ್ನು ಸ್ಥಾಪಿಸುವ ನೆಪದಲ್ಲಿ ಮಾಡಿರುವ ಸೇನಾ ದಾಳಿಗಳು ಕಡಿಮೆಯಲ್ಲ. ಅಫಘಾನಿಸ್ತಾನ, ವಿಯೆಟ್ನಾಂ, ಇರಾಕ್‌, ಹೀಗೆ ಎಲ್ಲಾ ಕಡೆ ಅದು ಸೈನ್ಯ ಕಳುಹಿಸಿ ಪರೋಕ್ಷವಾಗಿ ತನ್ನ ಆಡಳಿತವನ್ನು ಬಿತ್ತಿದೆ. ನ್ಯಾಟೋ ಹಾಗೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಹೆಸರಿನಲ್ಲಿ ತನ್ನದೇ ಅಜೆಂಡಾ ಜಾರಿ ಮಾಡುವುದರಲ್ಲಿ ಅದು ಸಿದ್ಧಹಸ್ತವಾಗಿದೆ. ತನ್ನ ಮೇಲೆ 9/11 ದಾಳಿ ನಡೆಸಿದ ಇಸ್ಲಾಮಿಕ್‌ ಉಗ್ರರನ್ನು ಹುಡುಕುವ ನೆವದಲ್ಲಿ ಅಮೆರಿಕ ಅಫಘಾನಿಸ್ತಾನ ಹಾಗೂ ಪಾಕಿಸ್ತಾನದಲ್ಲಿ ಎಷ್ಟು ಮಂದಿಯನ್ನು ಕೊಂದಿದೆಯೋ, ಅವರೆಲ್ಲರಿಗೂ ನಿಷ್ಪಕ್ಷಪಾತ ನ್ಯಾಯದ ಹಸ್ತವನ್ನು ಅದು ಚಾಚಿದೆಯೋ? ಅಥವಾ ತಾನು ನ್ಯಾಯ ಎಂದು ಏನನ್ನು ಭಾವಿಸಿದೆಯೋ ಅದನ್ನು ಜಾರಿ ಮಾಡಿದೆಯೋ? ಇಂಥ ದೇಶ ಭಾರತಕ್ಕೆ ಬುದ್ಧಿವಾದ ಹೇಳುವ ನೈತಿಕ ಹಕ್ಕನ್ನು ಹೊಂದಿದೆ ಎಂಬುದರಲ್ಲಿ ಅನುಮಾನವಿದೆ. ಹೀಗಾಗಿ, ಭಾರತದ ನ್ಯಾಯವ್ಯವಸ್ಥೆಯ ಬಗ್ಗೆ ನಂಬಿಕೆಯಿಟ್ಟು ಅದು ಸುಮ್ಮನಿರುವುದು ಒಳಿತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ವಿದೇಶ

ಬಾಲ್ಟಿಮೋರ್‌ ಸೇತುವೆ ಕುಸಿತ ಪ್ರಕರಣ; ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿಯ ಸಮಯಪ್ರಜ್ಞೆಗೆ ಅಮೆರಿಕ ಅಧ್ಯಕ್ಷ ಬೈಡನ್ ಮೆಚ್ಚುಗೆ

Joe Biden: ಬೃಹತ್‌ ಗಾತ್ರದ ಹಡಗು ಡಿಕ್ಕಿಯಾಗಿ ಅಮೆರಿಕದ ಬಾಲ್ಟಿಮೋರ್‌ನ ಫ್ರಾನ್ಸಿಸ್‌ ಸ್ಟಾಟ್‌ ಕೀ ಸೇತುವೆ ಕುಸಿದಿತ್ತು. ಈ ವೇಳೆ ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿ ತೋರಿದ ಸಮಯಪ್ರಜ್ಞೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮೆಚ್ಚುಗೆ ಸೂಚಿಸಿದ್ದಾರೆ.

VISTARANEWS.COM


on

Joe Biden
Koo

ವಾಷಿಂಗ್ಟನ್‌: ಬೃಹತ್‌ ಗಾತ್ರದ ಸರಕು ಹಡಗೊಂದು ಡಿಕ್ಕಿಯಾಗಿ ಮಂಗಳವಾರ (ಮಾರ್ಚ್‌ 26) ಅಮೆರಿಕದ ಬಾಲ್ಟಿಮೋರ್‌ನ ಫ್ರಾನ್ಸಿಸ್‌ ಸ್ಟಾಟ್‌ ಕೀ ಸೇತುವೆ (Francis Scott Key Bridge in Baltimore) ಕುಸಿದ ಪ್ರಕರಣದ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡನ್‌ (Joe Biden) ಮಾತನಾಡಿದ್ದಾರೆ. ಈ ವೇಳೆ ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿ ತೋರಿದ ಸಮಯ ಪ್ರಜ್ಞೆ ಮತ್ತು ಕರ್ತವ್ಯ ಪ್ರಜ್ಞೆಗೆ ಜೋ ಬೈಡನ್‌ ಮೆಚ್ಚುಗೆ ಸೂಚಿಸಿದ್ದಾರೆ. ಜತೆಗೆ ತಕ್ಷಣ ತುರ್ತು ರಕ್ಷಣಾ ಕಾರ್ಯಾಚರಣೆ ನಡೆಸಿದ ಸ್ಥಳೀಯ ಪ್ರಾಧಿಕಾರದ ಸಿಬ್ಬಂದಿಯನ್ನೂ ಶ್ಲಾಘಿಸಿದ್ದಾರೆ.

ಜೋ ಬೈಡನ್‌ ಹೇಳಿದ್ದೇನು?

ʼʼಹಡಗಿನ ಸಿಬ್ಬಂದಿ ಮೇರಿಲ್ಯಾಂಡ್‌ ಸಾರಿಗೆ ಇಲಾಖೆಗೆ ತಕ್ಷಣ ಕರೆ ಮಾಡಿ ಹಡಗಿನ ಮೇಲೆ ತಾವು ನಿಯಂತ್ರಣ ಕಳೆದುಕೊಂಡಿರುವುದಾಗಿ ತಿಳಿಸಿದ್ದರು. ಇದರಿಂದ ಸ್ಥಳೀಯ ಪ್ರಾಧಿಕಾರದ ಸಿಬ್ಬಂದಿಗೆ ತುರ್ತಾಗಿ ಕಾರ್ಯಾಚರಣೆ ನಡೆಸಲು ಸಾಧ್ಯವಾಯಿತು. ಅವರು ಸೇತುವೆಯಲ್ಲಿನ ವಾಹನ ಸಂಚಾರ ಸ್ಥಗಿತಗೊಳಿಸಿದ್ದರಿಂದ ಹೆಚ್ಚಿನ ಅಪಾಯ ಸಂಭವಿಸಲಿಲ್ಲʼʼ ಎಂದು ಬೈಡನ್‌ ವಿವರಿಸಿದ್ದಾರೆ. ವಿಶೇಷ ಎಂದರೆ ಹಡಗಿನಲ್ಲಿದ್ದ ಸಿಬ್ಬಂದಿಯೆಲ್ಲ ಭಾರತೀಯರಾಗಿದ್ದರು. ಇದೇ ವೇಳೆ ಸೇತುವೆಯನ್ನು ಪುನರ್‌ನಿರ್ಮಿಸಲು ಸರ್ಕಾರ ಬದ್ಧ ಎಂದು ಬೈಡನ್ ಘೋಷಿಸಿದ್ದಾರೆ.

ಏನಿದು ಘಟನೆ?

ಮಂಗಳವಾರ ಮುಂಜಾನೆ ಅಮೆರಿಕದ ಬಾಲ್ಟಿಮೋರ್‌ನಲ್ಲಿರುವ ಫ್ರಾನ್ಸಿಸ್ ಸ್ಕಾಟ್ ಕೀ ಉಕ್ಕಿನ ಸೇತುವೆಗೆ ಕಂಟೈನರ್‌ ನೌಕೆಯೊಂದು ಡಿಕ್ಕಿ ಹೊಡೆದ ಪರಿಣಾಮ, ಸೇತುವೆ ಸಂಪೂರ್ಣವಾಗಿ ನೀರುಗುರುಳಿತ್ತು. ನಡುರಾತ್ರಿ ಈ ಘಟನೆ ನಡೆದ ಕಾರಣ ಸೇತುವೆಯ ಮೇಲೆ ಹೆಚ್ಚಿನ ವಾಹನಗಳು ಇರಲಿಲ್ಲ. ಜನದಟ್ಟಣೆಯ ಸಮಯದಲ್ಲಿ ಈ ಘಟನೆ ಸಂಬಂಧಿಸಿದ್ದರೆ ನೂರಾರು ಜನರ ಸಾವುನೋವು ಸಂಭವಿಸುವ ಸಾಧ್ಯತೆಯಿತ್ತು.

ಬಾಲ್ಟಿಮೋರ್‌ ಮುನ್ಸಿಪಲ್ ನಗರದ ನೈಋತ್ಯಕ್ಕೆ ಇರುವ ಪಟಾಪ್ಸ್ಕೋ ನದಿಗೆ ಅಡ್ಡಲಾಗಿ ಈ ನಾಲ್ಕು-ಲೇನ್ ಸೇತುವೆಯನ್ನು ಕಟ್ಟಲಾಗಿದೆ. ಇದು 1.6 ಮೈಲಿ (2.6-ಕಿಲೋಮೀಟರ್) ಉದ್ದವಿದೆ. 1977ರಲ್ಲಿ ಕಟ್ಟಲಾಗಿದ್ದ ಇದರ ಮೇಲೆ ವರ್ಷಕ್ಕೆ 1.10 ಕೋಟಿ ವಾಹನಗಳು ಓಡಾಡುತ್ತವೆ. ಇದು ಬಾಲ್ಟಿಮೋರ್ ಸುತ್ತಮುತ್ತಲಿನ ರಸ್ತೆ ಜಾಲದ ಪ್ರಮುಖ ಭಾಗ. ಬಾಲ್ಟಿಮೋರ್‌, ರಾಜಧಾನಿ ವಾಷಿಂಗ್ಟನ್ ಡಿಸಿಯ ಪಕ್ಕದಲ್ಲಿರುವ ಅಮೆರಿಕದ ಪೂರ್ವ ಕರಾವಳಿಯ ಕೈಗಾರಿಕಾ ನಗರವಾಗಿದೆ.

ಇದನ್ನೂ ಓದಿ: Bridge Collapse: ನೌಕೆ ಡಿಕ್ಕಿಯಾಗಿ ಮಕ್ಕಳಾಟಿಕೆಯಂತೆ ಕುಸಿದ 2.5 ಕಿ.ಮೀ. ಉದ್ದದ ಸೇತುವೆ!

ಸಿಂಗಾಪುರ ಧ್ವಜ ಹೊಂದಿರುವ ಕಂಟೇನರ್ ಹಡಗು ʼಡಾಲಿʼ ಬಾಲ್ಟಿಮೋರ್​ನ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಯ ಕಂಬಗಳಲ್ಲಿ ಒಂದಕ್ಕೆ ಡಿಕ್ಕಿ ಹೊಡೆದಿತ್ತು. ಇದಾಗಿ ಕೆಲವೇ ಕ್ಷಣಗಳಲ್ಲಿ ಸೇತುವೆ ಕುಸಿದಿತ್ತು. ಈ ವೇಳೆ ಸೇತುವೆಯ ದುರಸ್ತಿ ಕಾಮಗಾರಿ ನಡೆಸುತ್ತಿದ್ದ 6 ಮಂದಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ʼಡಾಲಿʼ 10,000 ಟಿಇಯು ಸಾಮರ್ಥ್ಯ ಹೊಂದಿತ್ತು. ಗ್ರೇಸ್ ಓಷನ್ ಪ್ರೈವೇಟ್ ಲಿಮಿಟೆಡ್ ಹಡಗಿನ ಮಾಲೀಕತ್ವವನ್ನು ಹೊಂದಿದೆ. ಹಡಗು ಬಾಲ್ಟಿಮೋರ್‌ನಿಂದ ಕೊಲಂಬೊಗೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ. ಸೇತುವೆ ಕುಸಿದಿರುವುದು ಈ ಪ್ರದೇಶದ ಮೇಲೆ ತೀವ್ರ ಪರಿಣಾಮ ಬೀರುವ ನಿರೀಕ್ಷೆಯಿದೆ. ಬಾಲ್ಟಿಮೋರ್ ಸುತ್ತಮುತ್ತಲಿನ ಸಂಚಾರ ವ್ಯವಸ್ಥೆ ಹದಗೆಡುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

Arvind Kejriwal: ಕೇಜ್ರಿವಾಲ್‌ ಪ್ರಕರಣದಲ್ಲಿ ಮೂಗು ತೂರಿಸಿದ ಅಮೆರಿಕದ ರಾಯಭಾರಿಗೆ ಭಾರತ ಸಮನ್ಸ್‌

Arvind Kejriwal: ಅಮೆರಿಕದ ಹೇಳಿಕೆಯ ಬಗ್ಗೆ ತನ್ನ “ಬಲವಾದ ಅಸಮಾಧಾನ”ವನ್ನು ವ್ಯಕ್ತಪಡಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) “ಇತರ ದೇಶಗಳ ಸಾರ್ವಭೌಮತ್ವ ಮತ್ತು ಆಂತರಿಕ ವ್ಯವಹಾರಗಳನ್ನು ಅಮೆರಿಕ ಗೌರವಿಸುವ ನಿರೀಕ್ಷೆಯಿದೆ” ಎಂದು ಹೇಳಿದೆ.

VISTARANEWS.COM


on

us diplomat arvind kejriwal
Koo

ಹೊಸದಿಲ್ಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Delhi CM Arvind Kejriwal) ಅವರ ಬಂಧನದ ಕುರಿತು ಅಮೆರಿಕದ ವಿದೇಶಾಂಗ ಇಲಾಖೆ ನೀಡಿರುವ ಕಾಮೆಂಟ್‌ಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆ, ಕಳವಳ ವ್ಯಕ್ತಪಡಿಸಲು ಭಾರತವು ಅಮೆರಿಕದ ಹಂಗಾಮಿ ಉಪ ರಾಯಭಾರಿ (US Deputy Ambassador) ಗ್ಲೋರಿಯಾ ಬರ್ಬೆನಾ ಅವರನ್ನು ಬುಧವಾರ ಕರೆಸಿದೆ.

ಅಮೆರಿಕದ ಹೇಳಿಕೆಯ ಬಗ್ಗೆ ತನ್ನ “ಬಲವಾದ ಅಸಮಾಧಾನ”ವನ್ನು ವ್ಯಕ್ತಪಡಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) “ಇತರ ದೇಶಗಳ ಸಾರ್ವಭೌಮತ್ವ ಮತ್ತು ಆಂತರಿಕ ವ್ಯವಹಾರಗಳನ್ನು ಅಮೆರಿಕ ಗೌರವಿಸುವ ನಿರೀಕ್ಷೆಯಿದೆ” ಎಂದು ಹೇಳಿದೆ.

“ಭಾರತದಲ್ಲಿನ ಕೆಲವು ಕಾನೂನು ಪ್ರಕ್ರಿಯೆಗಳ ಕುರಿತು ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರರ ಹೇಳಿಕೆಗಳಿಗೆ ನಾವು ತೀವ್ರ ಆಕ್ಷೇಪಣೆಯನ್ನು ವ್ಯಕ್ತಪಡಿಸುತ್ತೇವೆ. ರಾಜತಾಂತ್ರಿಕತೆಯಲ್ಲಿ, ದೇಶಗಳು ಇತರರ ಸಾರ್ವಭೌಮತ್ವ ಮತ್ತು ಆಂತರಿಕ ವ್ಯವಹಾರಗಳನ್ನು ಗೌರವಿಸುತ್ತವೆ ಎಂದು ನಿರೀಕ್ಷಿಸಲಾಗಿದೆ. ಸಹವರ್ತಿ ಪ್ರಜಾಪ್ರಭುತ್ವಗಳಲ್ಲಿ ಈ ಜವಾಬ್ದಾರಿ ಇನ್ನೂ ಹೆಚ್ಚು. ಇದು ಇಲ್ಲದಿದ್ದರೆ ಅನಾರೋಗ್ಯಕರ ಪೂರ್ವನಿದರ್ಶನಗಳು ಸೃಷ್ಟಿಯಾಗಬಹುದು. ಭಾರತದ ಕಾನೂನು ಪ್ರಕ್ರಿಯೆಗಳು ವಸ್ತುನಿಷ್ಠವಾದ ಮತ್ತು ಸಮಯೋಚಿತ ಫಲಿತಾಂಶಗಳಿಗೆ ಬದ್ಧವಾಗಿರುವ ಸ್ವತಂತ್ರ ನ್ಯಾಯಾಂಗವನ್ನು ಆಧರಿಸಿವೆ. ಅದರ ಮೇಲೆ ನಮ್ಮ ಹೇರಿಕೆ ಅನಗತ್ಯ” ಎಂದು ಎಂಇಎ ಹೇಳಿಕೆಯಲ್ಲಿ ತಿಳಿಸಿದೆ.

ತನ್ನ ಆಂತರಿಕ ವ್ಯವಹಾರಗಳ ಕುರಿತು ತಮ್ಮ ವಿದೇಶಾಂಗ ಕಚೇರಿಯ ವಕ್ತಾರರ ಕಾಮೆಂಟ್‌ಗಳಿಗೆ ಸಂಬಂಧಿಸಿದಂತೆ ಭಾರತದ ಬಲವಾದ ಪ್ರತಿಭಟನೆಯನ್ನು ತಿಳಿಸಲು ನವದೆಹಲಿಯಲ್ಲಿನ ಜರ್ಮನ್ ಡೆಪ್ಯೂಟಿ ಚೀಫ್ ಆಫ್ ಮಿಷನ್ ಜಾರ್ಜ್ ಎಂಜ್‌ವೀಲರ್ ಅವರನ್ನು ಶನಿವಾರ ಕರೆಸಲಾಗಿತ್ತು. “ನಮ್ಮ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸುವ ಮತ್ತು ನಮ್ಮ ನ್ಯಾಯಾಂಗದ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುವಂತಹ ಹೇಳಿಕೆಗಳನ್ನು ನಾವು ಖಂಡಿಸುತ್ತೇವೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಮಾರ್ಚ್ 23ರಂದು ಹೇಳಿಕೆಯಲ್ಲಿ ತಿಳಿಸಿದೆ.

“ಭಾರತವು ಕಾನೂನಿನ ಆಳ್ವಿಕೆಯನ್ನು ಹೊಂದಿರುವ ದೃಢವಾದ ಪ್ರಜಾಪ್ರಭುತ್ವವಾಗಿದೆ. ಬೇರೆಡೆಯ ಎಲ್ಲಾ ಪ್ರಜಾಪ್ರಭುತ್ವಗಳಂತೆ ದೇಶದ ಎಲ್ಲಾ ಕಾನೂನು ಪ್ರಕರಣಗಳಲ್ಲಿ ತ್ವರಿತ ವಿಷಯಗಳಲ್ಲಿ ಕಾನೂನು ತನ್ನದೇ ಆದ ಕ್ರಮವನ್ನು ಕೈಗೊಳ್ಳುತ್ತದೆ. ಈ ವಿಚಾರದಲ್ಲಿ ಮಾಡಿರುವ ಊಹೆಗಳು ಅನಗತ್ಯವಾಗಿವೆ” ಎಂದು ಹೇಳಿಕೆ ತಿಳಿಸಿದೆ.

ಒಂಬತ್ತು ಬಾರಿ ಸಮನ್ಸ್‌ ನಿರಾಕರಿಸಿ ಕೋರ್ಟ್‌ಗೂ ಹಾಜರಾಗದೆ ಇದ್ದ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಹೈಕೋರ್ಟ್ ನಿರ್ದೇಶನದಂತೆ ಜಾರಿ ನಿರ್ದೇಶನಾಲಯ ಬಂಧಿಸಿದೆ. ಈ ಪ್ರಕರಣವು 2021-22ರ ದೆಹಲಿ ಸರ್ಕಾರದ ಅಬಕಾರಿ ನೀತಿ ಜಾರಿ ಸಂದರ್ಭದ ಅಕ್ರಮ, ಭ್ರಷ್ಟಾಚಾರಕ್ಕೆ ಸಂಬಂಧಿಸಿದೆ.

ಇದನ್ನೂ ಓದಿ: ಖಲಿಸ್ತಾನಿ ಉಗ್ರರಿಂದ ಕೇಜ್ರಿವಾಲ್‌ಗೆ 133 ಕೋಟಿ ರೂ. ಸಂದಾಯ; ಪನ್ನುನ್‌ ಸ್ಫೋಟಕ ಮಾಹಿತಿ

Continue Reading
Advertisement
viral video
ವೈರಲ್ ನ್ಯೂಸ್9 mins ago

Viral Video: ಶಾಲೆಗೆ ಕುಡಿದು ಬಂದ ಶಿಕ್ಷಕನಿಗೆ ʼಪಾಠʼ ಕಲಿಸಿದ ವಿದ್ಯಾರ್ಥಿಗಳು; ಹೇಗೆಂದು ನೀವೇ ನೋಡಿ

BJP State Vice President Malavika Avinash latest statement
ಬೆಂಗಳೂರು13 mins ago

Bengaluru News: ಭಯೋತ್ಪಾದನೆ ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ಲಕ್ಷ್ಯ: ಮಾಳವಿಕಾ ಅವಿನಾಶ್ ಟೀಕೆ

Lok Sabha Election 2024 Prajwal Revanna gets Rs 40 crore worth asset
Lok Sabha Election 202414 mins ago

Lok Sabha Election 2024: ಪ್ರಜ್ವಲ್‌ ರೇವಣ್ಣ 40 ಕೋಟಿ ರೂ. ಒಡೆಯ; ಇದೆ ಕೆಜಿಗಟ್ಟಲೆ ಚಿನ್ನ!

Uttara Kannada Lok Sabha constituency Congress candidate Dr Anjali Nimbalkar latest statement
ಉತ್ತರ ಕನ್ನಡ17 mins ago

Uttara Kannada News: ಚುನಾವಣೆಯನ್ನು ಸುಲಭವಾಗಿ ಪರಿಗಣಿಸದಿರಿ: ನಿಂಬಾಳ್ಕರ್

Rameswaram cafe bomb blast case
ಬೆಂಗಳೂರು43 mins ago

Rameswaram cafe: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್; ಮುಖ್ಯ ಸಂಚುಕೋರ NIA ಬಲೆಗೆ

Rajasthan Royals
ಪ್ರಮುಖ ಸುದ್ದಿ54 mins ago

IPL 2024 : ಬದಲಿ ಆಟಗಾರರನ್ನು ಘೋಷಿಸಿದ ರಾಜಸ್ಥಾನ್​ ರಾಯಲ್ಸ್​, ಕೆಕೆಆರ್​​

SBI Debit Cards
ವಾಣಿಜ್ಯ57 mins ago

SBI Debit Cards: ಎಸ್‌ಬಿಐ ಡೆಬಿಟ್‌ ಕಾರ್ಡ್‌ದಾರರಿಗೆ ಬ್ಯಾಡ್‌ ನ್ಯೂಸ್‌; ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!

Rishabh Pant -IPL 2024
ಕ್ರೀಡೆ1 hour ago

Rishabh Pant : ಡೆಲ್ಲಿ ಪರ 100ನೇ ಪಂದ್ಯವಾಡಿದ ರಿಷಭ್ ಪಂತ್​!

Parliament Flashback
ಕರ್ನಾಟಕ2 hours ago

Parliament Flashback: ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಗೆದ್ದು, ಬಿಜೆಪಿಯಿಂದ ಸ್ಪರ್ಧಿಸಿದಾಗ ಸೋತು ಹೋಗಿದ್ದ ಒಡೆಯರ್‌!

Lok Sabha Election 2024 HD Kumaraswamy to file nomination for Mandya Lok Sabha seat on April 4
ಕರ್ನಾಟಕ2 hours ago

Lok Sabha Election 2024: ಮಂಡ್ಯದಲ್ಲಿ ಜೆಡಿಎಸ್-ಬಿಜೆಪಿ ಮುಖಂಡರ ಸಮನ್ವಯ ಸಭೆ ಯಶಸ್ವಿ; ಏ. 4ಕ್ಕೆ ಹೆಚ್ಡಿಕೆ ನಾಮಪತ್ರ ಸಲ್ಲಿಕೆ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20248 hours ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20249 hours ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ16 hours ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20241 day ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20241 day ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20241 day ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು2 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

Lok Sabha Election 2024 Sanganna Karadi rebels quell and assure to support koppala BJP Candidate
Lok Sabha Election 20243 days ago

Lok Sabha Election 2024: ರಾಜ್ಯಸಭೆ ಇಲ್ಲವೇ ಪರಿಷತ್‌ ಸ್ಥಾನದ ಭರವಸೆ; ತಣ್ಣಗಾದ ಕರಡಿ! ಅಭ್ಯರ್ಥಿ ಪರ ಪ್ರಚಾರಕ್ಕೆ ಜೈ

ಟ್ರೆಂಡಿಂಗ್‌