Site icon Vistara News

ವಿಸ್ತಾರ TOP 10 NEWS | ಹಳದಿ-ಕೆಂಪು ಕಂಪಿನ ನಡುವೆ ʼಕರ್ನಾಟಕ ರತ್ನʼವಾದ ಅಪ್ಪು ಹಾಗೂ ಇನ್ನಿತರ ಪ್ರಮುಖ ಸುದ್ದಿಗಳಿವು

TOP-10-NEWS-01112022

ಬೆಂಗಳೂರು: ಪುನೀತ್‌ ರಾಜಕುಮಾರ್‌ ಕೊನೆಯುಸಿರೆಳೆದು ವರ್ಷವಾದರೂ ಅವರ ನೆನಪು ಇನ್ನೂ ಜನಮನದಲ್ಲಿ ಹಚ್ಚಹಸಿರಾಗಿದೆ. ಕರ್ನಾಟಕ ರಾಜ್ಯೋತ್ಸವ ಸಂಭ್ರಮದ ನಡುವೆಯೇ ಪುನೀತ್‌ ರಾಜಕುಮಾರ್‌ ʼಕರ್ನಾಟಕ ರತ್ನʼ ಗೌರವಕ್ಕೆ ಪಾತ್ರವಾಗಿದ್ದಾರೆ. ಹಳದಿ-ಕೆಂಪು ಬಣ್ಣಗಳು ಇಡೀ ರಾಜ್ಯವನ್ನು ಆವರಿಸಿಕೊಂಡಿದ್ದು, ಈ ವರ್ಷ ಅಪ್ಪು ಕಾರಣಕ್ಕೆ ಸಂಭ್ರಮ ಮುಗಿಲುಮುಟ್ಟಿದೆ. ಗುಜರಾತ್‌ನಲ್ಲಿ ತೂಗು ಸೇತುವೆ ಕುಸಿದ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ, ರಾಮನಗರದಲ್ಲಿ ಮತಾಂತರ ಜಾಲ ಪತ್ತೆಯಾಗಿದೆ, ಹಾಸನದಲ್ಲಿ ಪ್ರೀತಂ V/S ಭವಾನಿ ರೇವಣ್ಣ ವಾಗ್ವಾದ ಜೋರಾಗಿದೆ, ಕಲಾವಿದ ಬಿ.ಕೆ.ಎಸ್‌. ವರ್ಮ ಅವರಿಗೆ ಕಸಾಪ ಕೊನೆಗೂ ಗೌರವ ನೀಡಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Appu Namana | ʼಕಲಿಯುಗದ ಮಾರ್ಕಂಡೇಯ, ಪ್ರಹ್ಲಾದ, ನಚಿಕೇತʼ: ಅಪ್ಪು ಕುರಿತು ರಜನಿ ಭಾವುಕ ನುಡಿ
ಒಂದೊಂದು ಯುಗದಲ್ಲಿ ಭೂಮಿಯಲ್ಲಿ ಜನಿಸಿ ನಮ್ಮೊಂದಿಗಿದ್ದು ಸಂತೋಷ ನೀಡಿ ಮತ್ತೆ ದೇವರ ಬಳಿಗೆ ಸಾಗುವ ದೇವರ ಮಗನಾಗಿ ಕಲಿಯುಗದಲ್ಲಿ ಪುನೀತ್‌ ರಾಜಕುಮಾರ್‌ ಜನಿಸಿದ್ದರು ಎಂದು ಸೂಪರ್‌ ಸ್ಟಾರ್‌ ರಜನಿಕಾಂತ್‌ ಭಾವುಕವಾಗಿ ನುಡಿದಿದ್ದಾರೆ. ವಿಧಾನಸೌಧದ ಮಹಾ ಮೆಟ್ಟಿಲುಗಳ ಮೇಲೆ ಪುನೀತ್‌ ರಾಜಕುಮಾರ್‌ ಅವರಿಗೆ ಮರಣೋತ್ತರ ʼಕರ್ನಾಟಕ ರತ್ನʼ ಪ್ರಶಸ್ತಿ ನೀಡಿದ ಸಮಾರಂಭದಲ್ಲಿ ಮಾತನಾಡಿದರು. ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಆರಂಭವಾದ ಜಿಟಿಜಿಟಿ ಮಳೆಯ ನಡುವೆಯೇ ಮಾತನಾಡಿದ ರಜನಿಕಾಂತ್‌, ಕರ್ನಾಟಕದ ಎಲ್ಲರೂ ಸಹೋದರರಾಗಿ ಇರಬೇಕೆಂದು ರಾಜರಾಜೇಶ್ವರಿ, ಅಲ್ಲಾಹ್‌, ಜೀಸಸ್‌ನಲ್ಲಿ ಕೇಳಿಕೊಳ್ಳುತ್ತೇನೆ ಎಂದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. ಕನ್ನಡ ರಾಜ್ಯೋತ್ಸವ| ಕನ್ನಡ ಭಾಷಾ ಬಳಕೆ ಕಡ್ಡಾಯಕ್ಕೆ ಡಿಸೆಂಬರ್‌ನಲ್ಲಿ ಶಾಸನ: ಮುಖ್ಯಮಂತ್ರಿ ಬೊಮ್ಮಾಯಿ
ಎಲ್ಲ ಪ್ರಾದೇಶಿಕ ಭಾಷೆಗಳೂ ರಾಷ್ಟ್ರ ಭಾಷೆಗಳೇ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಆದ್ದರಿಂದ ಕನ್ನಡ ಭಾಷೆ ಮಾತೃಭಾಷೆಯೂ ಹೌದು, ರಾಷ್ಟ್ರ ಭಾಷೆಯೂ ಹೌದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ೬೭ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸಲು ಸರಕಾರ ಬದ್ಧವಾಗಿದೆ. ಇದಕ್ಕಾಗಿ ಡಿಸೆಂಬರ್ ತಿಂಗಳಲ್ಲಿ ನಡೆಯುವ ಅಧಿವೇಶನದಲ್ಲಿ ಕನ್ನಡ ಬಳಕೆ ಕಡ್ಡಾಯ ನಿಯಮ ಜಾರಿಗೆ ತರಲಿದ್ದೇವೆ ಎಂದು ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Morbi Bridge Collapse | ಸೇತುವೆ ಕುಸಿದ ಸ್ಥಳಕ್ಕೆ ಪಿಎಂ ಮೋದಿ ಭೇಟಿ, ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಸಾಂತ್ವನ
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ, ಮೋರ್ಬಿ ಸೇತುವೆ ಕುಸಿತ ಜಾಗಕ್ಕೆ (Morbi Bridge Collapse) ಭೇಟಿ ನೀಡಿ, ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದರು. ಭಾನುವಾರ ಮೋರ್ಬಿ ಸೇತುವೆ ಕುಸಿದು, ಅಂದಾಜು 140 ಜನರು ಮೃತಪಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕೂಡ ಇದ್ದರು. ಶೋಧ ಮತ್ತು ಪರಿಹಾರ ಕಾರ್ಯಾಚರಣೆಯ ಮಾಹಿತಿಯನ್ನು ಅವರು ಪಡೆದುಕೊಂಡರು. ಇದಾದ ಬಳಿಕ ಅವರು ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ವಿಚಾರಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. ಬೊಮ್ಮಾಯಿಗೆ ಕುರುಬರ ಮೇಲೆ ಪ್ರೀತಿ ಇದ್ದರೆ ಎಸ್‌ಟಿಗೆ ಸೇರಿಸಲಿ, ಈಶ್ವರಪ್ಪರನ್ನು ಸಿಎಂ ಮಾಡಲಿ: ಸಿದ್ದು ಸವಾಲು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕುರುಬರ ಮೇಲೆ ಪ್ರೀತಿ ಇದ್ದಿದ್ದು ನಿಜವಾಗಿದ್ದರೆ ಪರಿಶಿಷ್ಟ ಪಂಗಡಕ್ಕೆ ಸೇರಿಸಲಿ. ಅಲ್ಲದೆ, ತಮ್ಮ ಮುಖ್ಯಮಂತ್ರಿ ಸ್ಥಾನವನ್ನು ಕುರುಬ ಸಮಾಜದ ಕೆ.ಎಸ್.‌ ಈಶ್ವರಪ್ಪ ಅವರಿಗೆ ಬಿಟ್ಟುಕೊಡಲಿ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು. ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಡುವೆ “ಮೀಸಲಾತಿ” ಗಲಾಟೆ ಆರಂಭವಾಗಿದೆ. ಹಿಂದುಳಿದ ಮತ್ತು ಕುರುಬ ಸಮಾಜವನ್ನು ಕಾಂಗ್ರೆಸ್‌ ಕಡೆಗಣಿಸಿದೆ ಎಂಬ ಸಿಎಂ ಹೇಳಿಕೆಗೆ ಕೆಂಡಾಮಂಡಲವಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ ಹರಿಹಾಯ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. Conversion | ರಾಮನಗರದಲ್ಲಿ ಮತಾಂತರ ಜಾಲ ಪತ್ತೆ, ಮನೆಯಲ್ಲೇ ಕಾರ್ಯಾಚರಿಸುತ್ತಿದ್ದ ಟೀಮ್‌, 15 ಜನರು ವಶಕ್ಕೆ
ಜಿಲ್ಲೆಯ ಕನಕಪುರ ಪೇಟೆಯಲ್ಲಿ ಕಾರ್ಯಾಚರಿಸುತ್ತಿದ್ದ ಮತಾಂತರ ಜಾಲವೊಂದನ್ನು ಪೊಲೀಸರು ಪತ್ತೆ ಹಚ್ಚಿದ್ದು, ಸುಮಾರು ೧೫ ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಇಲ್ಲಿನ ಮನೆಯೊಂದರಲ್ಲಿ ಈ ಕೆಲಸ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಕನಕಪುರ ಪೊಲೀಸರು ಮಂಗಳವಾರ ಬೆಳಗ್ಗೆ ದಾಳಿ ನಡೆಸಿದರು. ಬಡವರು ಮತ್ತು ಅಮಾಯಕರನ್ನು ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರ ಮಾಡುವ ಜಾಲ ಇಲ್ಲಿ ಕೆಲಸ ಮಾಡುತ್ತಿದೆ ಎಂಬ ಬಗ್ಗೆ ಪೊಲೀಸರಿಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ದೂರು ನೀಡಿದ್ದರು. ಮನೆಯಲ್ಲೇ ಇದ್ದುಕೊಂಡು ಮತಾಂತರ ನಡೆಯುತ್ತಿತ್ತು ಎನ್ನಲಾಗಿದೆ. ದಾಳಿ ಮಾಡಿದ ಪೊಲೀಸರ ಕೈಗೆ ಒಂದೇ ಕುಟುಂಬದ ಐವರು ಮತ್ತು ಇತರ ೧೨ ಮಂದಿ ಸೆರೆ ಸಿಕ್ಕಿದ್ದಾರೆ. ಇದರಲ್ಲಿ ಮತಾಂತರಕ್ಕೆ ಒಳಗಾದವರು ಕೂಡಾ ಇದ್ದರು ಎನ್ನಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Jacqueline Boyfriend | ದಿಲ್ಲಿ ಸಚಿವ ಜೈನ್‌ಗೆ ಜಾಕ್ವೆಲಿನ್ ಬಾಯ್‌ಫ್ರೆಂಡ್‌ನಿಂದ 10 ಕೋಟಿ ರೂ. ಪ್ರೊಟೆಕ್ಷನ್ ಮನಿ!
ಭ್ರಷ್ಟಾಚಾರದಲ್ಲಿ ಜೈಲು ಕಂಬಿ ಎಣಿಸುತ್ತಿರುವ ಆಪ್‌ ಸಚಿವ ಸತ್ಯೇಂದ್ರ ಜೈನ್ ಅವರಿಗೆ ‘ಪ್ರೊಟೆಕ್ಷನ್ ಮನಿ’ಯಾಗಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಬಾಯ್‌ಫ್ರೆಂಡ್ ಸುಕೇಶ್ (Jacqueline Boyfriend) 10 ಕೋಟಿ ರೂಪಾಯಿ ನೀಡಿದ್ದ ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ. ಈ ಬಗ್ಗೆ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸೆಕ್ಸೆನಾ ಅವರಿಗೆ ಪತ್ರ ಬರೆದು ಸ್ವತಃ ಸುಕೇಶ್ ಮಾಹಿತಿ ನೀಡಿದ್ದಾನೆ. ಏತನ್ಮಧ್ಯೆ, ಈ ಬಗ್ಗೆ ತಿರುಗೇಟು ನೀಡಿರುವ ದಿಲ್ಲಿ ಸಿಎಂ ಅರಿವಿಂದ್ ಕೇಜ್ರಿವಾಲ್ ಅವರು, ಬಿಜೆಪಿಯು ವಂಚಕನ ಮಾತು ನಂಬುವ ಸ್ಥಿತಿಗೆ ಬಂದು ತಲುಪಿದೆ. ಇದು ಗಮನವನ್ನು ಬೇರೇಡೆಗೆ ಸೆಳೆಯುವ ತಂತ್ರ ಎಂದು ಅವರು ಆರೋಪಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Pulwama Attack | ಪುಲ್ವಾಮಾ ದಾಳಿಯನ್ನು ಸಂಭ್ರಮಿಸಿದ್ದ ಬೆಂಗಳೂರು ಸ್ಟೂಡೆಂಟ್‌ಗೆ 5 ವರ್ಷ ಜೈಲು ಶಿಕ್ಷೆ, 25 ಸಾವಿರ ರೂ.ದಂಡ!
2019ರಲ್ಲಿ ಸಂಭವಿಸಿದ ಪುಲ್ವಾಮಾ ಆತ್ಮಹತ್ಯಾ ಬಾಂಬ್ ಸ್ಫೋಟವನ್ನು (Pulwama Attack) ಫೇಸ್‌ಬುಕ್‌ನಲ್ಲಿ ಸಂಭ್ರಮಿಸಿದ್ದ ಬೆಂಗಳೂರಿನ 23 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಎನ್ಐಎ ವಿಶೇಷ ಕೋರ್ಟ್ ದೋಷಿ ಎಂದು ಪರಿಗಣಿಸಿ, 5 ವರ್ಷ ಸಾದಾ ಶಿಕ್ಷೆ ಮತ್ತು 25,000 ರೂ. ದಂಡವನ್ನು ವಿಧಿಸಿದೆ.
ಒಂದೊಮ್ಮೆ ಈ ಶಿಕ್ಷೆಯನ್ನು ಯಾವುದೇ ರೀತಿಯಲ್ಲಾದರೂ ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ ಹೆಚ್ಚುವರಿಯಾಗಿ ಮತ್ತೆ 6 ತಿಂಗಳು ಜೈಲು ಶಿಕ್ಷೆಯನ್ನು ಅನುಭವಿಸುಬೇಕಾಗುತ್ತದೆ ಎಂದು ಎನ್ಐಎನ ವಿಶೇಷ ನ್ಯಾಯಾಲಯದ ಜಡ್ಜ್ ಸಿ ಎಂ ಗಂಗಾಧರ ಅವರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ. ಯುಎಪಿಎ ಕಾಯ್ದೆಯಡಿ ವಿದ್ಯಾರ್ಥಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಶಿಕ್ಷೆಗೆ ಗುರಿಯಾದ ವಿದ್ಯಾರ್ಥಿ ಹೆಸರು ಫಯಾಜ್ ರಶೀದ್. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Bhavani vs Preetham | ಭವಾನಿ ರೇವಣ್ಣ, ಸಂಸದ ಪ್ರಜ್ವಲ್ ಕುಡುಕರು, 2 ಬಾಟಲ್‌ ಕುಡೀತಾರೆ: ಪ್ರೀತಂ ಗೌಡ
ಜಿಲ್ಲಾ ಪಂಚಾಯಿತಿ ಸದಸ್ಯೆ ಭವಾನಿ ರೇವಣ್ಣ ಹಾಗೂ ಅವರ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ಇಬ್ಬರೂ ಕುಡುಕರು. ಅವರು ಥರ್ಟಿ, ಸಿಕ್ಸ್ಟಿ (30, 60) ಅಲ್ಲ, ಎರಡು ಬಾಟಲಿ ಕುಡೀತಾರೆ. ತಾಯಿ, ಮಗ ಇಬ್ಬರೂ ರಾತ್ರಿ ಎರಡು ಗಂಟೆಯವರೆಗೆ ನಶೆ ಏರಿಸಿಕೊಂಡೇ ಇರುತ್ತಾರೆ. ಹೀಗಾಗಿ ಬೆಳಗ್ಗೆ ಬಂದು ಏನು ಮಾತನಾಡುತ್ತೇವೆ ಎಂಬುದೇ ಅವರಿಗೆ ಗೊತ್ತಾಗುವುದಿಲ್ಲ ಎಂದು (Bhavani vs Preetham) ಶಾಸಕ ಪ್ರೀತಂ ಗೌಡ ತೀವ್ರ ವಾಗ್ದಾಳಿ ನಡೆಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಪ್ರೀತಮ್‌ನ ಅಪ್ಪ ಬಂದು ರೇವಣ್ಣ ಎದುರು ದಮ್ಮಯ್ಯ ಅಂತ ಕೈಮುಗೀತಿದ್ರು ಎಂದ ಭವಾನಿ ರೇವಣ್ಣ!

9. ವಿಸ್ತಾರ Money Guide | ರೂಪಾಯಿಯ ಡಿಜಿಟಲ್‌ ಕರೆನ್ಸಿ ಎಂದರೇನು? ಏನಿದರ ಉಪಯೋಗ?
ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಮೊಟ್ಟ ಮೊದಲ ಬಾರಿಗೆ ರೂಪಾಯಿಯ ಡಿಜಿಟಲ್‌ ಕರೆನ್ಸಿಯನ್ನು ಮಂಗಳವಾರ ಪ್ರಾಯೋಗಿಕವಾಗಿ ಬಿಡುಗಡೆಗೊಳಿಸುತ್ತಿದೆ. ಬಿಡುಗಡೆಗೆ ಪೂರ್ವಭಾವಿಯಾಗಿ ಟಿಪ್ಪಣಿಯನ್ನು ಕೂಡ ಇತ್ತೀಚೆಗೆ ಹೊರತಂದಿದೆ. ಅದರಲ್ಲಿ ಈ ಸೆಂಟ್ರಲ್‌ ಬ್ಯಾಂಕ್‌ ಡಿಜಿಟಲ್‌ ಕರೆನ್ಸಿಯ (Central Bank Digital Currency) ಉದ್ದೇಶ ಮತ್ತು ಸ್ವರೂಪವನ್ನು ವಿವರಿಸಿದೆ. ಶೀಘ್ರದಲ್ಲಿಯೇ ಇದರ ಪ್ರಾಯೋಗಿಕ ಬಿಡುಗಡೆಗೂ ಸಜ್ಜಾಗುತ್ತಿದೆ. ಹಾಗಾದರೆ ಏನಿದು ಡಿಜಿಟಲ್‌ ಕರೆನ್ಸಿ? ಇದರ ಪ್ರಯೋಜನವೇನು? ಇದು ಸುರಕ್ಷಿತವೇ? ಭಾರತೀಯರು ಇದನ್ನು ಬಳಸಲು ಸಜ್ಜಾಗಿದ್ದಾರೆಯೇ? (ವಿಸ್ತಾರ Money Guide) ಈ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ವಿವರ.

10. ವಿಸ್ತಾರ Exclusive | ಬಿ.ಕೆ. ಎಸ್‌. ವರ್ಮ ಅವರಿಗೆ ಕೊನೆಗೂ ಗೌರವ ನೀಡಿದ ಕನ್ನಡ ಸಾಹಿತ್ಯ ಪರಿಷತ್ತು
ಕಲಾವಿದರೊಬ್ಬರಿಗೆ, ತನ್ನ ಕಲೆಗೆ ಸೂಕ್ತ ಶ್ರೇಯ ಸಿಗಬೇಕು ಎಂಬ ಸಣ್ಣ ಆಸೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಕಡೆಗೂ ಈಡೇರಿಸಿದೆ. ರಾಜ್ಯದೆಲ್ಲೆಡೆ ಬಳಸುವ ಕನ್ನಡ ತಾಯಿ ಭುವನೇಶ್ವರಿಯ ಚಿತ್ರವನ್ನು ನಾಡಿನ ಪ್ರಖ್ಯಾತ ಕಲಾವಿದ ಬಿ.ಕೆ.ಎಸ್‌. ವರ್ಮಾ ಅವರು ರಚಿಸಿದ್ದು ಎಂದು ಅಧಿಕೃತವಾಗಿ ಒಪ್ಪಿಕೊಂಡಿದೆ. ಈ ಮೂಲಕ ಕಳೆದ ಅನೇಕ ವರ್ಷಗಳಿಂದ ನಡೆಯುತ್ತಿದ್ದ ಚರ್ಚೆಗೆ ಕೊನೆಗೂ ಮುಕ್ತಿ ದೊರಕಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳು

🔴 H.D. ಕುಮಾರಸ್ವಾಮಿ ಕನಸಿನ ಯೋಜನೆಗೆ ಆರಂಭದಲ್ಲೇ ಅಡ್ಡಿ: ಪಂಚರತ್ನ ರಥಯಾತ್ರೆ ಮುಂದೂಡಿಕೆ
🔴 ಕನ್ನಡ ರಾಜ್ಯೋತ್ಸವ | ಈಕೆ ಕನ್ನಡದ ʼಸ್ವರʼ ಸಾಮ್ರಾಜ್ಞಿ; 5 ವರ್ಷದ ಈ ಪೋರಿ ಹುಟ್ಟಿದ್ದೇ ನವೆಂಬರ್‌ 1ರಂದು!
🔴 BYJU’S | 2,500 ಉದ್ಯೋಗ ಕಡಿತಕ್ಕೆ ಸಿಬ್ಬಂದಿಯ ಕ್ಷಮೆ ಯಾಚಿಸಿದ ಬೈಜೂಸ್
🔴 Good News | ಪೆಟ್ರೋಲ್‌, ಡೀಸೆಲ್‌ ಬೆಲೆ ಲೀಟರ್‌ಗೆ 40 ಪೈಸೆ ಇಳಿಕೆ, ಯಾವಾಗಿನಿಂದ ಅನ್ವಯ?

Exit mobile version