Site icon Vistara News

ವಿಸ್ತಾರ TOP 10 NEWS | ʼಅಪ್ಪುʼವನ್ನು ನೆನೆದ ಕರ್ನಾಟಕದಿಂದ ಸಾಹಿತ್ಯ ಸಮ್ಮೇಳನ ಲಾಂಛನವರೆಗಿನ ಪ್ರಮುಖ ಸುದ್ದಿಗಳಿವು

TOP 10 NEWS 29102022

ಬೆಂಗಳೂರು: ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಇಲ್ಲದೆ ಒಂದು ವರ್ಷವಾದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅಪ್ಪು ಹವಾ ಆವರಿಸಿಕೊಂಡಿದೆ. ಅಭಿಮಾನಿಗಳು ಪುನೀತ್‌ ಸಮಾಧಿಗೆ ಭೇಟಿ ನೀಡಿ ನಮಿಸುವ ಜತೆಗೆ ಅನೇಕ ಸೇವಾ ಕಾರ್ಯಗಳ ಮೂಲಕ ನೆಚ್ಚಿನ ನಟನನ್ನು ಸ್ಮರಿಸಿಕೊಂಡಿದ್ದಾರೆ. ಸಚಿವ ಎಂಟಿಬಿ ನಾಗರಾಜ್‌ ಹೇಳಿಕೆಯಿಂದ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ, ಗುಜರಾತ್‌ನಲ್ಲಿ ಏಕರೂಪ ನಾಗರಿಕ ಸಂಹಿತೆ, ಪಾಕಿಸ್ತಾನವನ್ನು ಬೂದು ಪಟ್ಟಿಯಿಂದ ಹೊರತೆಗೆಯಲು ಭಾರತ ವಿರೋಧ, ಮದುವೆಯಾಗದೇ ಮಕ್ಕಳನ್ನು ಹಡೆಯುವ ಕುರಿತು ಜಯಾ ಬಚ್ಚನ್‌ ಹೇಳಿಕೆ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Appu Namana | ಅಪ್ಪು ಪುಣ್ಯಸ್ಮರಣಾರ್ಥ ಅನ್ನದಾನ-ರಕ್ತದಾನ ಮಾಡಿದ ಅಭಿಮಾನಿಗಳು; ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಬರಲಿದ್ದಾರೆ ರಜನಿಕಾಂತ್‌, ಜ್ಯೂ. ಎನ್‌ಟಿಆರ್‌
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇಲ್ಲದೆ ಒಂದು ವರ್ಷ ಗತಿಸಿದೆ. ಆದರೆ, ಅವರ ಮೇಲಿನ ಪ್ರೀತಿ ಮಾತ್ರ ಜನರಲ್ಲಿ ಇನ್ನೂ ಮಾಸಿಲ್ಲ. ಅವರು ಹಾಕಿಕೊಟ್ಟ ದಾರಿಯಲ್ಲಿಯೇ ಅಭಿಮಾನಿಗಳು ಸಾಗುತ್ತಿದ್ದಾರೆ. ತಮ್ಮ ಕೈಲಾದ ಸೇವೆ ಮಾಡಲು ಮುಂದಾಗುತ್ತಿದ್ದಾರೆ. ಈಗ ಅಪ್ಪು ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ (Appu Namana) ಸಂಬಂಧ ಅಭಿಮಾನಿಗಳು ವೃದ್ಧಾಶ್ರಮ ನಿರ್ಮಾಣಕ್ಕೆ ನಿರ್ಧಾರ ಮಾಡಿದ್ದು, ಇದಕ್ಕಾಗಿ ಗುದ್ದಲಿ ಪೂಜೆಯನ್ನೂ ನೆರವೇರಿಸಿದ್ದಾರೆ. ಮಾಗಡಿ ರಸ್ತೆಯಲ್ಲಿರುವ ಪ್ರಸನ್ನ ಥಿಯೇಟರ್ ಬಳಿ ಕನ್ನಡ ಯೋಗಿ ಎಂಬ ಅಭಿಮಾನಿ ಅನ್ನದಾನ ಕಾರ್ಯಕ್ರಮ ನಡೆಸಿದ್ದಾರೆ. ಅಭಿಮಾನಿಗಳು ಹೋಳಿಗೆ, ಹಣ್ಣು, ಹೂವಿನ ಹಾರ, ಜೋಳ ರೊಟ್ಟಿ ಹೀಗೆ ನಾನಾ ವಸ್ತುಗಳನ್ನು ತಂದಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಇದನ್ನೂ ಓದಿ: Puneeth Rajkumar | ನೆನಪಿನ ಸಾಗರದಲ್ಲಿ ಅಪ್ಪು ಸದಾ ಜೀವಂತ: ಅಶ್ವಿನಿ ಪುನೀತ್‌ ರಾಜಕುಮಾರ್‌ ಭಾವುಕ ಪೋಸ್ಟ್‌!

2. ಸಚಿವರಿಂದಲೇ ಸರ್ಕಾರಕ್ಕೆ ಸಂಕಷ್ಟ: ಪೊಲೀಸ್‌ ಇಲಾಖೆ ಭ್ರಷ್ಟಾಚಾರ ವಿಷಯ ಹೈಲೈಟ್‌ ಮಾಡಿದ ಕಾಂಗ್ರೆಸ್‌
ಈಗಾಗಲೆ ಪ್ರತಿಪಕ್ಷ ಕಾಂಗ್ರೆಸ್‌ನಿಂದ 40% ಹಗರಣದ ಹಣೆಪಟ್ಟಿಯನ್ನು ಕಳಚಿಕೊಳ್ಳಲು ರಾಜ್ಯ ಸರ್ಕಾರ ಹೆಣಗಾಡುತ್ತಿರುವ ನಡುವೆಯೇ ಸಚಿವರ ಹೇಳಿಕೆಯೇ ಸಂಕಷ್ಟ ತಂದೊಡ್ಡಿದೆ. ಪೊಲೀಸ್‌ ಇಲಾಖೆಯಲ್ಲಿ ಸ್ಥಳ ನಿಯೋಜನೆಗೆ 70 ಲಕ್ಷ ರೂ. ಲಂಚ ಪಡೆಯಲಾಗುತ್ತಿದೆ ಎಂಬ ಸಚಿವ ಎಂ.ಟಿ. ಬಿ. ನಾಗರಾಜ್‌ ಅವರ ಹೇಳಿಕೆಯನ್ನೇ ಕಾಂಗ್ರೆಸ್‌ ಅಸ್ತ್ರವಾಗಿಸಿಕೊಂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಇದನ್ನೂ ಓದಿ: ನಂದೀಶ್‌ ಸಾವು| 70-80 ಲಕ್ಷ ಹೇಳಿಕೆಗೆ ಸಚಿವ ಎಂಟಿಬಿ ಮೊದಲ ಪ್ರತಿಕ್ರಿಯೆ, ಏನು ಹೇಳಿದರು?

3. Uniform Civil Code | ಗುಜರಾತ್‌ನಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಮಿತಿ!
ಗುಜರಾತ್ ಸರ್ಕಾರವು ಏಕರೂಪ ನಾಗರಿಕ ಸಂಹಿತೆ ಜಾರಿಗೆ (Uniform Civil Code) ತರಲು ಹೊರಟಿದೆ. ಇದಕ್ಕಾಗಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಸಮಿತಿಯೊಂದನ್ನು ರಚಿಸುವುದಾಗಿ ಶನಿವಾರ ಪ್ರಕಟಿಸಿದ್ದಾರೆ. ಶೀಘ್ರದಲ್ಲೇ ಗುಜರಾತ್‌ ರಾಜ್ಯವು ವಿಧಾನಸಭೆ ಚುನಾವಣೆಯನ್ನು ಎದುರಿಸಲಿದೆ. ಈ ಹಿನ್ನೆಲೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ನಿರ್ಧಾರವು ಮಹತ್ವದ ಹೆಜ್ಜೆ ಎನಿಸಿಕೊಂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. ವಿಸ್ತಾರ Explainer | ಸೋಷಿಯಲ್ ಮೀಡಿಯಾಗೆ ಮೂಗುದಾರ, ಯಾವೆಲ್ಲ ನಿಯಮ ತಿದ್ದಿದೆ ಸರ್ಕಾರ?
ಹೊಸ ಕಾಲದ ಮಾಧ್ಯಮಗಳಾದ ಸೋಷಿಯಲ್ ಮೀಡಿಯಾಗಳ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು ಮಾಹಿತಿ ತಂತ್ರಜ್ಞಾನ(Information Technology-IT) ನಿಯಮಗಳಿಗೆ ತಿದ್ದುಪಡಿ ತಂದಿದೆ. ನಿತ್ಯದ ಬದುಕಿನ ಮೇಲೆ, ಸಾರ್ವಜನಿಕ ಅಭಿಪ್ರಾಯ ಮೂಡಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುವ ಈ ವೇದಿಕೆಗಳನ್ನು ಸ್ವಚ್ಛವಾಗಿಡುವುದು ಈ ಕ್ಷಣದ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಹಲವು ತಿದ್ದುಪಡಿಗಳ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಟ್ವಿಟರ್, ಫೇಸ್‌ಬುಕ್, ಯುಟ್ಯೂಬ್, ಇನ್‌ಸ್ಟಾಗ್ರಾಮ್, ವಾಟ್ಸ್ಆ್ಯಪ್, ಯುಟ್ಯೂಬ್ ಸೇರಿದಂತೆ ಎಲ್ಲ ರೀತಿಯ ಸೋಷಿಯಲ್ ಮೀಡಿಯಾಗಳನ್ನು ಈ ನಿಯಂತ್ರಣ ವ್ಯವಸ್ಥೆಯೊಳಗೆ ತರಲಾಗುತ್ತಿದೆ. ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿರುವ ಐಟಿ ನಿಯಮಗಳ ತಿದ್ದುಪಡಿ ಕುರಿತು ವಿಸ್ತಾರ ಎಕ್ಸ್‌ಪ್ಲೇನರ್‌(ವಿಸ್ತಾರ Explainer)ನಲ್ಲಿ ಚರ್ಚಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. ಸವಿಸ್ತಾರ ಅಂಕಣ | Sorry ಎನ್ನಲು ಮನಸ್ಸಿಲ್ಲದ ಬ್ರಿಟನ್, ಭಾರತದಿಂದ ಕಲಿಯುವುದು ಸಾಕಷ್ಟಿದೆ
ಭಾರತ ಮೂಲದ ರಿಷಿ ಸುನಕ್ ಅವರು ಬ್ರಿಟನ್ ಪ್ರಧಾನಿಯಾಗಿದ್ದಾರೆ. ಅವರು ಭಾರತೀಯ ಮೂಲದವರು ಎಂದು ನಾವು ಸಂತಸಪಡುತ್ತಿದ್ದೇವೆ. ನಮ್ಮನ್ನು ಇನ್ನೂರಕ್ಕೂ ಹೆಚ್ಚು ವರ್ಷ ಆಳಿದವರು ಬ್ರಿಟಿಷರು. ನಮ್ಮ ಸಂಗೊಳ್ಳಿ ರಾಯಣ್ಣನಿಂದ ಭಗತ್ ಸಿಂಗ್, ಮಂಗಲ್ ಪಾಂಡೆವರೆಗೆ ಅನೇಕ ಸ್ವಾತಂತ್ರ್ಯವೀರರನ್ನು ನಿರ್ದಯವಾಗಿ ಗಲ್ಲಿಗೇರಿಸಿದವರು ಬ್ರಿಟಿಷರು. ಬ್ರಿಟನ್ ಇಂದು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಆದರೆ ಅದು ಅದಕ್ಕಿಂತ ದೊಡ್ಡ ದಾರಿದ್ರ್ಯವನ್ನು ಎದುರಿಸುತ್ತಿರುವುದು ಬೌದ್ಧಿಕವಾಗಿ ಮತ್ತು ಸಾಂಸ್ಕೃತಿಕವಾಗಿ. ಪೂರ್ಣ ಲೇಖನ ಓದಲು ಇಲ್ಲಿ ಕ್ಲಿಕ್‌ ಮಾಡಿ.

6. FATF Grey List | ಬೂದು ಪಟ್ಟಿಯಿಂದ ಪಾಕ್‌ ಹೊರಗೆ, ವಿಶ್ವಸಂಸ್ಥೆಯಲ್ಲಿ ಭಾರತ ಆಕ್ಷೇಪ, ಉಗ್ರ ದಾಳಿ ಸಾಧ್ಯತೆ ಎಂದು ಎಚ್ಚರಿಕೆ
ಜಾಗತಿಕ ಉಗ್ರ ಚಟುವಟಿಕೆಗಳ ಮೇಲೆ ನಿಗಾ ಇಡುವ ಹಣಕಾಸು ಕಾರ್ಯ ಪಡೆ (FATF Grey List)ಯ ಬೂದುಪಟ್ಟಿಯಿಂದ ಪಾಕಿಸ್ತಾನವನ್ನು ಮುಕ್ತಿಗೊಳಿಸಿರುವುದಕ್ಕೆ ಭಾರತ ವಿಶ್ವಸಂಸ್ಥೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದೆ. “ಪಾಕಿಸ್ತಾನವು ಬೂದು ಪಟ್ಟಿಯಲ್ಲಿ ಇದ್ದಾಗಲೇ ಭಾರತದಲ್ಲಿ ಉಗ್ರ ಚಟುವಟಿಕೆಗಳು ಕಡಿಮೆಯಾಗಿದ್ದವು. ಈಗ ಪಟ್ಟಿಯಿಂದ ಹೊರಬಂದ ಕಾರಣ ಮತ್ತೆ ಉಗ್ರ ಚಟುವಟಿಕೆ ಹೆಚ್ಚಾಗುವ ಸಾಧ್ಯತೆ ಇದೆ” ಎಂದು ಎಚ್ಚರಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Kannada Sahitya Sammelana | ಸಾಹಿತ್ಯ ಸಮ್ಮೇಳನ ಲಾಂಛನ ಬಿಡುಗಡೆ; 20 ಸಮಿತಿ ರಚನೆ
೨೦೨೩ರ ಜನವರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ (Kannada Sahitya Sammelana) ಲಾಂಛನ ಬಿಡುಗಡೆ ಮಾಡಲಾಗಿದೆ. ಅಲ್ಲದೆ, ೨೦ ಸಮಿತಿಗಳನ್ನು ರಚನೆ ಮಾಡಿದ್ದು, ಸಮ್ಮೇಳನದ ಕಾರ್ಯಚಟುವಟಿಕೆಯನ್ನು ಚುರುಕುಗೊಳಿಸಲಾಗಿದೆ. ಶನಿವಾರ (ಅ. ೨೯) ಹಾವೇರಿಯ ಜಿಲ್ಲಾಡಳಿತ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆದಿದ್ದು, ಹಲವಾರು ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಒಂದೊಂದು ಜವಾಬ್ದಾರಿಯನ್ನು ವಹಿಸಲಾಗಿದೆ. ಈ ಸಂಬಂಧ ೨೦ ಸಮಿತಿಗಳನ್ನೂ ರಚನೆ ಮಾಡಲಾಗಿದೆ. ಬಳಿಕ ಸಚಿವ ಸುನಿಲ್ ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರು ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಬಿಡುಗಡೆಗೊಳಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. ISRO | ಭಾರಿ ಗಾತ್ರದ ಎಂಜಿನ್‌ ಪರೀಕ್ಷೆ ಯಶಸ್ವಿ, ಮತ್ತೊಂದು ಉಡಾವಣೆಗೆ ಸಜ್ಜಾದ ಇಸ್ರೊ
ಇತ್ತೀಚೆಗಷ್ಟೇ ಮೊದಲ ಬಾರಿಗೆ ವಾಣಿಜ್ಯಿಕ ಉಡಾವಣೆ ಮಾಡುವ ಮೂಲಕ ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಗೆ ಪ್ರವೇಶಿಸಿರುವ ಇಸ್ರೊ (ISRO) ಈಗ ಮತ್ತೊಂದು ವಾಣಿಜ್ಯಿಕ ಉಡಾವಣೆಗೆ ಸಜ್ಜಾಗಿದೆ. ಭಾರಿ ಗಾತ್ರದ ರಾಕೆಟ್‌ನ ಸಿಇ-20 (CE-20) ಎಂಜಿನ್‌ನ ಪರೀಕ್ಷೆ ಯಶಸ್ವಿಯಾಗಿದೆ. ಇದು ಆಗಸದಲ್ಲಿ ಹೇಗೆ ಉಷ್ಣಾಂಶ ಸ್ವೀಕರಿಸುವ ಸಾಮರ್ಥ್ಯದ ಕುರಿತು (Acceptance Hot test) ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ಹೈ ಆಲ್ಟಿಟ್ಯೂಡ್‌ ಟೆಸ್ಟ್‌ ಫೆಸಿಲಿಟಿ ಆಫ್‌ ಇಸ್ರೊ ಪ್ರೊಪಲ್ಶನ್‌ ಕಾಂಪ್ಲೆಕ್ಸ್‌ನಲ್ಲಿ ಪರೀಕ್ಷೆ ನಡೆಸಿಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Jaya Bachan | ಮದ್ವೆ ಆಗದೇ ಮೊಮ್ಮಗಳು ಮಗು ಮಾಡಿಕೊಂಡ್ರೆ ತಕರಾರಿಲ್ಲ: ಜಯಾ ಬಚ್ಚನ್
ಮದುವೆಯಾಗದೇ ನನ್ನ ಮೊಮ್ಮಗಳು(ನವ್ಯಾ ನವೇಲಿ ನಂದಾ) ಮಗುವನ್ನು ಮಾಡಿಕೊಂಡರೆ ನಂದೇನೂ ತಕರಾರು ಇರುವುದಿಲ್ಲ ಎಂದು ನಟಿಯೂ ಆಗಿರುವ ಅಮಿತಾಭ್ ಬಚ್ಚನ್ ಅವರ ಪತ್ನಿ ಜಯಾ ಬಚನ್ (Jaya Bachan) ಅವರು ಹೇಳಿದ್ದಾರೆ. ಅವರು ತಮ್ಮ ಮೊಮ್ಮಗಳಾದ ನವ್ಯಾ ನವೇಲಿ ನಂದಾ ಅವರ ನಿರೂಪಿಸುವ What The Hell Navya ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಮದುವೆಯೇ ಆಗದೆ ಗರ್ಭಿಣಿಯರಾದ್ರಾ ನಿತ್ಯಾ ಮೆನನ್​, ಪಾರ್ವತಿ ಮೆನನ್​? – ಏನಿದು ನಟಿಯರ ಇನ್​ಸ್ಟಾ ಪೋಸ್ಟ್​ !

10. Auto fare | ಓಲಾ, ಉಬರ್ ಜತೆ ಸಾರಿಗೆ ಇಲಾಖೆ ಸಭೆ ಬರೀ ಕಾಟಾಚಾರ; ನಿರ್ಧಾರವಾಗದ ಆಟೋ ಕನಿಷ್ಠ ದರ
ಆಟೋಗಳಲ್ಲಿ ಬೇಕಾಬಿಟ್ಟಿ ದರ ವಸೂಲಿಗೆ(Auto fare) ಕಡಿವಾಣ ಹಾಕಲು ನಗರದ ಎಂ.ಎಸ್.ಬಿಲ್ಡಿಂಗ್‌‌ನ ಸಾರಿಗೆ ಇಲಾಖೆ ಕಚೇರಿಯಲ್ಲಿ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌.ವಿ.ಪ್ರಸಾದ್, ಆಯುಕ್ತ ಟಿ.ಎಚ್‌.ಎಂ.ಕುಮಾರ್‌ ನೇತೃತ್ವದಲ್ಲಿ ಓಲಾ, ಉಬರ್ ಹಾಗೂ ರ‍್ಯಾಪಿಡೊ ಸಂಸ್ಥೆಗಳ ಪ್ರತಿನಿಧಿಗಳ ಸಭೆ ಶನಿವಾರ ನಡೆಯಿತು. ಆದರೆ, ಸಭೆಯಲ್ಲಿ ದರ ನಿಗದಿ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. 15 ದಿನದೊಳಗೆ ಹೊಸ ದರ ನಿಗದಿ ಮಾಡುವಂತೆ ಅಗ್ರಿಗೇಟರ್ ಕಂಪನಿಗಳಿಗೆ ಸರ್ಕಾರ ನಿರ್ದೇಶನ ನೀಡಿತ್ತು. ಆದರೆ, ನ.7ರೊಳಗೆ ಸಭೆ ನಡೆಸಿ ವರದಿ ನೀಡುವಂತೆ ಸಾರಿಗೆ ಇಲಾಖೆಗೆ ಹೈಕೋರ್ಟ್‌ ಸೂಚಿಸಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ

ಮತ್ತಷ್ಟು ಪ್ರಮುಖ ಸುದ್ದಿಗಳು

🔴ವಾರದ ವ್ಯಕ್ತಿಚಿತ್ರ | ಧೈರ್ಯ, ಹುಂಬತನ, ಹುಮ್ಮಸ್ಸು, ಇದೇ ಎಲಾನ್‌ ಮಸ್ಕ್‌ ವರ್ಚಸ್ಸು
🟠Defence Ministry | ಭಾರತೀಯ ಡಿಫೆನ್ಸ್ ಮಿನಿಸ್ಟ್ರಿ ಜಗತ್ತಿನ ಅತಿದೊಡ್ಡ ಉದ್ಯೋಗದಾತ ಇಲಾಖೆ!
🔵ಮುರುಘಾಶ್ರೀ ಪ್ರಕರಣ | ಮೊದಲನೇ ಲೈಂಗಿಕ ದೌರ್ಜನ್ಯ ಕೇಸ್‌ನ ನಾಲ್ಕನೇ ಆರೋಪಿ ಅರೆಸ್ಟ್‌
🟡ಮಕ್ಕಳ ಕಥೆ | ಸಂಜೀವ ಮತ್ತು ಹಸಿದ ಭೂತ
🟢Drinik Virus | ಈ ವೈರಸ್‌ಗೆ ಬ್ಯಾಂಕ್ ಗ್ರಾಹಕರೇ ಟಾರ್ಗೆಟ್, ಹುಷಾರಾಗಿರಿ!
ಧವಳ ಧಾರಿಣಿ ಅಂಕಣ | ಮಾತೃತ್ವ ಮತ್ತು ಮಿತ್ರೆಯಾಗಿ ಸ್ಥಿತಪ್ರಜ್ಞತೆಯನ್ನು ತೋರಿದ ಮಹಾರಾಣಿ ಸುಮಿತ್ರೆ
🟣Parenting | ನಿಮ್ಮ ಮಕ್ಕಳು ಬುದ್ಧಿವಂತರಾಗಬೇಕಾದರೆ ಈ 10 ವಿಚಾರ ನೆನಪಿರಲಿ!

Exit mobile version