Site icon Vistara News

Vistara Top 10 News: ಮಣಿಪುರ ಕೋಲಾಹಲ, ರಾಹುಲ್‌ ಫ್ಲೈಯಿಂಗ್‌ ಕಿಸ್‌, ಸ್ಪಂದನಾಗೆ ಭಾವುಕ ವಿದಾಯ.. ಹೀಗೆ ಪ್ರಮುಖ ಸುದ್ದಿ

Vistara top 10 news Aug 9

1.ಸಂಸತ್‌‌ನಲ್ಲಿ ಮಣಿಪುರ ಗದ್ದಲ, ಕೋಲಾಹಲ-ಬಿಜೆಪಿಯಿಂದ ಭಾರತ ಮಾತೆಯ ಹತ್ಯೆ ಎಂದ ರಾಹುಲ್‌ ಗಾಂಧಿ
ಅನರ್ಹತೆ ರದ್ದಾದ ಬಳಿಕ ಬುಧವಾರ ಮೊದಲ ಬಾರಿಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಸಂಸತ್‌ನಲ್ಲಿ ಭಾಷಣ ಮಾಡಿದ್ದು, ಮಣಿಪುರ ವಿಚಾರಕ್ಕೆ ಸಂಬಂಧಿಸಿದಂತೆ ಅವರು ನೀಡಿದ ಹೇಳಿಕೆಯು ಕೋಲಾಹಲ ಸೃಷ್ಟಿಸಿತು. “ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆಯಾಗಿದೆ. ಮಣಿಪುರದಲ್ಲಿ ಭಾರತವನ್ನೇ ಹತ್ಯೆಗೈಯಲಾಗಿದೆ” ಎಂದು ರಾಹುಲ್‌ ಗಾಂಧಿ ಹೇಳಿದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದಾಗಿ ಸಂಸತ್ತಿನಲ್ಲಿ ಗಲಾಟೆ ನಡೆಯಿತು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ಸುದ್ದಿ: ಮಣಿಪುರದಲ್ಲಿ ವಿಷಯದಲ್ಲಿ ರಾಹುಲ್ ಗಾಂಧಿ ಡ್ರಾಮಾ! ಸಚಿವ ಅಮಿತ್ ಶಾ ಕಿಡಿ

2. ಲೋಕಸಭೆಯಲ್ಲಿ ಫ್ಲೈಯಿಂಗ್ ಕಿಸ್‌ ಕೊಟ್ಟು ರಾಹುಲ್‌ ಎಡವಟ್ಟು: ಮಹಿಳಾ ಸಂಸದರಿಂದ ಸ್ಪೀಕರ್‌ಗೆ ದೂರು
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಅನರ್ಹತೆ ರದ್ದಾದ ಬಳಿಕ ಸಂಸತ್‌ನಲ್ಲಿ ಮೊದಲ ಬಾರಿಗೆ ಭಾಷಣ ಮಾಡಿದ್ದು, ಇದೇ ವೇಳೆ ಅವರು ಸ್ಮೃತಿ ಇರಾನಿ (Smriti Irani) ಅವರಿಗೆ ಫ್ಲೈಯಿಂಗ್‌ ಕಿಸ್‌ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಾಗಾಗಿ, ಸಂಸತ್‌ನಲ್ಲಿ ಅನುಚಿತ ವರ್ತನೆ ತೋರಿದ ರಾಹುಲ್‌ ಗಾಂಧಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಶೋಭಾ ಕಂರದ್ಲಾಜೆ ಸೇರಿ 21 ಸಂಸದೆಯರು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ದೂರು ನೀಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

3. ಚಿನ್ನಾರಿ ಮುತ್ತನ ಅರ್ಧಾಂಗಿ ಸ್ಪಂದನಾಗೆ ಭಾವುಕ ವಿದಾಯ: ಬಿಕ್ಕಿ ಬಿಕ್ಕಿ ಬಿಕ್ಕಿ ಅತ್ತ ವಿಜಯ ರಾಘವೇಂದ್ರ
ಹೃದಯಾಘಾತದಿಂದ ಅಕಾಲಿಕವಾಗಿ ದೇವರ ಪಾದ ಸೇರಿದ ಸ್ಪಂದನಾ ವಿಜಯ್‌ ರಾಘವೇಂದ್ರ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಶ್ರೀರಾಂಪುರದ ಹರಿಶ್ಚಂದ್ರ ಘಾಟ್‌ನಲ್ಲಿ ಬುಧವಾರ ಮಧ್ಯಾಹ್ನ ನೆರವೇರಿತು. ನಟ ವಿಜಯ ರಾಘವೇಂದ್ರ ಅವರ ಬದುಕಿನ ಸ್ಫೂರ್ತಿಯಾಗಿ, ಸಿನಿಮಾ ರಂಗದ ಎಲ್ಲರ ಪ್ರೀತಿಯ ಅಕ್ಕ/ತಂಗಿಯಂತೆ ಬಾಳಿ ಬದುಕಿದ ಸ್ಪಂದನಾ ಅವರು ಸೇರಿದವರ ಕಂಬನಿ, ನಿಟ್ಟುಸಿರು ಮತ್ತು ಗಾಢ ಮೌನದ ನಡುವಿನ ನಿಡುಸುಯ್ಯುವಿಕೆಯ ನಡುವೆ ಪಂಚಭೂತಗಳಲ್ಲಿ ಲೀನರಾದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

4. Namma Clinic : ನಮ್ಮ ಕ್ಲಿನಿಕ್ ಇನ್ಮುಂದೆ ನಂ. 1 ಕ್ಲಿನಿಕ್; ಸಿಗಲಿದೆ ʼಆರೋಗ್ಯ ಸಂಜೆʼ!

5. ಕೇರಳ ರಾಜ್ಯ ಮರು ನಾಮಕರಣಕ್ಕೆ ನಿರ್ಣಯ; ಹೊಸ ಹೆಸರೇನು?

6. ವಿಶ್ವಕಪ್ ಪರಿಷ್ಕೃತ ವೇಳಾಪಟ್ಟಿ; ಟೀಮ್ ಇಂಡಿಯಾದ ಬೆಂಗಳೂರಿನ ಪಂದ್ಯವೂ ಅದಲು ಬದಲು

7. ಚಂದಿರನಿಗೆ ಮತ್ತಷ್ಟು ಹತ್ತಿರ ಚಂದ್ರಯಾನ 3 ನೌಕೆ! ಕಕ್ಷೆಗೆ ಇಳಿಸುವ ಪ್ರಕ್ರಿಯೆ ಸಕ್ಸೆಸ್

8. Ration Card Apply : ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸೋಕೆ ಕಡ್ಡಾಯವಾಗಿ ಇರಬೇಕು ಈ ದಾಖಲೆಗಳು!

9. Elephant Census: ಆನೆ ಗಣತಿ ವರದಿ ಬಿಡುಗಡೆ; ರಾಜ್ಯದಲ್ಲಿ 2017ರ ಸಮೀಕ್ಷೆಗಿಂತ 350 ಆನೆ ಹೆಚ್ಚಳ

10. ಕರ್ನಾಟಕದಲ್ಲೂ ಹಬ್ಬಿದೆ ಸೂಪರ್‌ ಸ್ಟಾರ್‌ ರಜನೀಕಾಂತ್‌ ಜೈಲರ್‌ ಫಿವರ್‌

Exit mobile version