Site icon Vistara News

ವಿಸ್ತಾರ TOP 10 NEWS: BBMP ಸಭೆಯಲ್ಲಿ ಸುರ್ಜೆವಾಲ ಪ್ರತ್ಯಕ್ಷದಿಂದ, MRF ಷೇರು ದರ 1 ಲಕ್ಷ ರೂ.ವರೆಗಿನ ಪ್ರಮುಖ ಸುದ್ದಿಗಳಿವು

vistara top 10 news randeep singh surjewala in bbmp meeting to MRF Share price and more news

#image_title

1. BJP Karnataka: ಬಿಬಿಎಂಪಿ ಸಭೆಯಲ್ಲಿ ಸುರ್ಜೆವಾಲಗೆ ಏನು ಕೆಲಸ?: ಸಾಕ್ಷಿ ಸಮೇತ ಸರ್ಕಾರವನ್ನು ತರಾಟೆ ತೆಗೆದುಕೊಂಡ ಬಿಜೆಪಿ
ಬಿಬಿಎಂಪಿ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲ ಭಾಗವಹಿಸಿದ್ದಕ್ಕೆ ರಾಜ್ಯ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಸರ್ಕಾರದೊಂದಿಗೆ ಯಾವುದೇ ಅಧಿಕೃತ ಸಂಬಂಧ ಇರದ ಸುರ್ಜೆವಾಲ ಅವರು ಈ ಸಭೆಯಲ್ಲಿ ಹೇಗೆ ಭಾಗವಹಿಸಿದರು? ಇದು ಡೀಲ್‌ ಫಿಕ್ಸಿಂಗ್‌ ಸಭೆಯೇ ಎಂದು ಪ್ರಶನಿಸಿದೆ. ಬಿಜೆಪಿ ಹಂಚಿಕೊಂಡಿರುವ ಫೋಟೊದಲ್ಲಿ ಅಧಿಕಾರಿಗಳಾದ ರಾಕೇಶ್‌ ಸಿಂಗ್‌, ತುಷಾರ್‌ ಗಿರಿನಾಥ್‌ ಇರುವುದು ಕಾಣುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Bihar: ಬಿಹಾರ ಮಹಾಮೈತ್ರಿಯಲ್ಲಿ ಬಿರುಕು! ರಾಜೀನಾಮೆ ನೀಡಿದ ನಿತೀಶ್ ಕುಮಾರ್ ಸಂಪುಟದ ಸಚಿವ, ಬಿಜೆಪಿ ಜತೆ ದೋಸ್ತಿ?
ಪಾಟ್ನಾ, ಬಿಹಾರ: ಮುಖ್ಯಮಂತ್ರಿ ನಿತೀಶ್ ಕುಮಾರ್ (Bihar CM Nitish Kumar) ಸಚಿವ ಸಂಪುಟದ ಮತ್ತೊಂದು ವಿಕೆಟ್ ಪತನವಾಗಿದೆ. ಜಿತನ್ ರಾಮ್ ಮಾಂಜ್ಹಿ (Jitan Ram Manjhi) ಅವರ ಪುತ್ರ ಹಾಗೂ ಹಿಂದೂಸ್ತಾನಿ ಅವಾಮ್ ಮೋರ್ಚಾ (Hindustani Awam Morcha) ನಾಯಕ ಸಂತೋಷ್ ಕುಮಾರ್ ಸುಮನ್ (Santosh Kumar Suman) ಅವರು ತಮ್ಮ ಮಂತ್ರಿ ಹುದ್ದೆಗೆ ರಾಜೀನಾಮೆ (resign) ನೀಡಿದ್ದಾರೆ. ನಿತೀಶ್ ಸಂಪುಟದಲ್ಲಿ ಸಂತೋಷ್ ಕುಮಾರ್ ಸುಮನ್ ಅವರು, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Free Bus Service: 2ನೇ ದಿನಕ್ಕೆ ನಾರಿಯರ ಭರ್ಜರಿ ಬ್ಯಾಟಿಂಗ್; ಮಹಿಳಾ ಪ್ರಯಾಣಿಕರ ಸಂಖ್ಯೆ 8 ಪಟ್ಟು ಹೆಚ್ಚಳ!
ಕಾಂಗ್ರೆಸ್‌ ಸರ್ಕಾರದ 5 ಗ್ಯಾರಂಟಿಗಳ (Congress Guarantee) ಮಹತ್ವಾಕಾಂಕ್ಷೆಯ ಯೋಜನೆಯಲ್ಲೊಂದಾದ “ಶಕ್ತಿ”ಗೆ ಮಹಿಳೆಯರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಹೆಚ್ಚಿನವರು ಉಚಿತ ಪ್ರಯಾಣದ (Free Bus Service) ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಮೊದಲ ದಿನದ ಮಹಿಳಾ ಪ್ರಯಾಣಿಕರ ಸಂಖ್ಯೆಯನ್ನು ಎರಡನೇ ದಿನಕ್ಕೆ ಹೋಲಿಕೆ ಮಾಡಿದರೆ 8 ಪಟ್ಟು ಹೆಚ್ಚಳಗೊಂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. BJP Karnataka: ಪ್ರತಾಪ್‌ ಸಿಂಹ ʼತುರಿಕೆʼ ಮಾತಿನಿಂದ ಬಿಜೆಪಿಯಲ್ಲಿ ಕಸಿವಿಸಿ: ಜಾರಿಕೊಂಡ ಸಿ.ಟಿ. ರವಿ, ಪೂಜಾರಿ!
ಬಿಜೆಪಿಯ ಅತಿರಥ ಮಹಾರಥರು ಅನೇಕರು ಸಿದ್ದರಾಮಯ್ಯ ಅವರೊಂದಿಗೆ ಅಡ್ಜಸ್ಟ್‌ಮೆಂಟ್‌ ರಾಜಕಾರಣ ಮಾಡಿದ್ದಾರೆ ಎಂಬ ಕುರಿತು ಕೊಡಗು-ಮೈಸೂರು ಸಂಸದ ಪ್ರತಾಪ್‌ ಸಿಂಹ ಹೇಳಿರುವ ವಿಚಾರ ಇದೀಗ ರಾಜ್ಯ ಬಿಜೆಪಿಯಲ್ಲಿ ಗಲಿಬಿಲಿ ಸೃಷ್ಟಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಮತ್ತಷ್ಟು ಓದಿಗಾಗಿ: BJP Karnataka: 70 ಹೊಸಬರಿಗೆ ಟಿಕೆಟ್‌ ಕೊಟ್ಟಿದ್ದು ತಪ್ಪು: ಈ ಸಲಹೆ ಕೊಟ್ಟೋರ ನೇಣು ಬೇಕಾದ್ರೆ ಹಾಕಿ ಎಂದ ರಮೇಶ್‌ ಜಿಗಜಿಣಗಿ

5. Electricity Bill: ಸರ್ಕಾರಕ್ಕೆ ಕೆಟ್ಟ ಹೆಸರು ಬೇಕಾ? ಕೂಡಲೇ ವಿದ್ಯುತ್‌ ದರ ತಗ್ಗಿಸಿ; ಸಿಎಂಗೆ ತನ್ವೀರ್‌ ಸೇಠ್‌ ಪತ್ರ
ಈಗ ರಾಜ್ಯಾದ್ಯಂತ ಜನರು ವಿದ್ಯುತ್‌ ಶಾಕ್‌ಗೆ ಒಳಗಾಗಿದ್ದಾರೆ! ಅಂದರೆ ವಿದ್ಯುತ್‌ ದರ (Electricity Bill) ಹೆಚ್ಚಳದ ಆಘಾತದಲ್ಲಿದ್ದಾರೆ. ಅಲ್ಲದೆ, ಇದು ಸಾರ್ವಜನಿಕರ ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿದೆ. ಬಹುತೇಕ ಸಾರ್ವಜನಿಕರು ಜನರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಈಗ ಕಾಂಗ್ರೆಸ್‌ ಪಕ್ಷದಲ್ಲಿಯೇ ಅಸಮಾಧಾನದ ಮಾತುಗಳು ಕೇಳಿಬರುತ್ತಿವೆ. ಶಾಸಕ ತನ್ವೀರ್‌ ಸೇಠ್‌ (Tanveer Sait) ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ಪತ್ರ ಬರೆದಿದ್ದಾರೆ. ಸರ್ಕಾರಕ್ಕೆ ಕೆಟ್ಟ ಹೆಸರು ಬೇಕಾ? ಎಂದು ಪ್ರಶ್ನೆ ಮಾಡಿರುವ ಅವರು, ಕೂಡಲೇ ವಿದ್ಯುತ್‌ ದರ ಏರಿಕೆ ನಿರ್ಧಾರದ ಮರು ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Defamation case: ರಾಹುಲ್‌ ಗಾಂಧಿ, ಸಿದ್ದರಾಮಯ್ಯ, ಡಿಕೆಶಿ ಸೇರಿ 36 ಕೈ​ ನಾಯಕರಿಗೆ ಜಾಹೀರಾತು ಸಂಕಷ್ಟ!
ಈ ಬಾರಿಯ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ವಿರುದ್ಧ ಭ್ರಷ್ಟಾಚಾರ ರೇಟ್ ಕಾರ್ಡ್‌ಗೆ ಸಂಬಂಧಿಸಿದಂತೆ ಜಾಹೀರಾತು ನೀಡಿದ್ದ ಕಾಂಗ್ರೆಸ್‌ ನಾಯಕರಿಗೆ ಈಗ ಸಂಕಷ್ಟ ಎದುರಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಸೇರಿದಂತೆ ಒಟ್ಟು 36 ಕಾಂಗ್ರೆಸ್‌ ನಾಯಕರ ವಿರುದ್ಧ ಬಿಜೆಪಿ ಕೋರ್ಟ್‌ ಮೆಟ್ಟಿಲೇರಿ ಮಾನನಷ್ಟ ಮೊಕ್ಕದ್ದಮೆಯನ್ನು (Defamation case) ದಾಖಲಿಸಿತ್ತು. ಇದೀಗ ಈ ಪ್ರಕರಣವು ವಿಚಾರಣೆಗೆ ಯೋಗ್ಯ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Hydropower Project: ಚೀನಾ ಗಡಿಯಲ್ಲಿ ಭಾರೀ ವೆಚ್ಚದ ಮೆಗಾ ಹೈಡ್ರೋಪವರ್ ಪ್ರಾಜೆಕ್ಟ್! 213 ಶತಕೋಟಿ ರೂ. ವೆಚ್ಚ
ಚೀನಾ (China) ಗಡಿಯಲ್ಲಿ, ಸುಮಾರು 20 ವರ್ಷಗಳ ಹಿಂದೆ ಆರಂಭವಾಗಿದ್ದ ದೇಶದ ಬೃಹತ್ ಜಲವಿದ್ಯುತ್ ಪ್ರಾಜೆಕ್ಟ್‌ ಸನ್ನದ್ಧವಾಗಿದೆ(Mega Hydropower Project).ಈ ಹೈಡ್ರೋಪವರ್ ಪ್ರಾಜೆಕ್ಟ್ ಕಾರ್ಯಾರಂಭ ಮಾಡಿದರೆ, ದೇಶದ (India) ಇಂಧನ ಸ್ವಾಲಂಬನೆಯಲ್ಲಿ ಹೊಸ ಬದಲಾವಣೆಯಾಗಲಿದೆ. ಸಾರ್ವಜನಿಕ ವಲಯದ ಎನ್‌ಎಚ್‌ಪಿಸಿ ಮುಂದಿನ ತಿಂಗಳು ಪ್ರಾಯೋಗಿಕವಾಗಿ ಸುಭನಾಸಿರಿ ಲೋಯರ್ ಪ್ರಾಜೆಕ್ಟ್ ಆರಂಭಿಸಲಿದೆ. ಈ ಪ್ರಾಜೆಕ್ಟ್‌ಗೆ ಸುಮಾರು 213 ಶತಕೋಟಿ ರೂಪಾಯಿ (2.6 ಶತಕೋಟಿ ಡಾಲರ್) ವೆಚ್ಚ ಮಾಡಲಾಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. MRF share price : ಇತಿಹಾಸ ಸೃಷ್ಟಿಸಿದ ಎಂಆರ್‌ಎಫ್‌, 1 ಷೇರಿನ ದರ 1 ಲಕ್ಷ ರೂ.
ದೇಶದ ಷೇರು ಮಾರುಕಟ್ಟೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಟೈರ್‌ ಉತ್ಪಾದಕ ಎಂಆರ್‌ಎಫ್‌ (MRF share price) ಕಂಪನಿಯ ಷೇರು ದರ 1 ಲಕ್ಷ ರೂ.ಗೆ ಏರಿಕೆಯಾಗಿ ಇತಿಹಾಸ ನಿರ್ಮಿಸಿದೆ. ಬಿಎಸ್‌ಇನಲ್ಲಿ ಬೆಳಗ್ಗೆ ಪ್ರತಿ ಎಂಆರ್‌ಎಫ್‌ ಷೇರಿನ ದರ 100,300 ರೂ.ಗೆ ಏರಿತು. ಕಳೆದ 52 ವಾರಗಳಲ್ಲಿಯೇ ಇದು ಗರಿಷ್ಠ ಎತ್ತರವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Indian Cricket: ಭಾರತ ತಂಡದಲ್ಲಿ ಮೇಜರ್​ ಸರ್ಜರಿಗೆ ಮುಂದಾದ ಬಿಸಿಸಿಐ; ಯಾರಿಗೆಲ್ಲ ಗೇಟ್​ ಪಾಸ್​!
 ಭಾರತ ತಂಡ ಕಳೆದ 10 ವರ್ಷಗಳಿಂದ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗುತ್ತಲೇ ಬರುತ್ತಿದೆ. ಕಳೆದ ಭಾನುವಾರ ಮುಕ್ತಾಯಕಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್(wtc final 2023) ಪಂದ್ಯದಲ್ಲಿಯೂ ಭಾರತ ತಂಡ ಆಸೀಸ್​ ವಿರುದ್ಧ ಹೀನಾಯ ಸೋಲು ಕಂಡಿತ್ತು. ಈ ಮೂಲಕ ಸತತ 2ನೇ ಬಾರಿಗೆ ಫೈನಲ್‌ನಲ್ಲಿ ಸೋಲು ಕಂಡು ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಯಿತು. ಈ ಸೋಲಿನ ಬೆನ್ನಲ್ಲೇ ಭಾರತ ತಂಡದಲ್ಲಿ(Indian Cricket) ಮಹತ್ವದ ಬದಲಾವಣೆ ಅಗತ್ಯವಿದೆ ಎಂದು ಕ್ರಿಕೆಟ್‌ ತಜ್ಞರು ಒತ್ತಾಯಿಸಲು ಆರಂಭಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Viral News: ಅಜ್ಜಿ ಸತ್ತಳೆಂದು ಮಣ್ಣು ಮಾಡಲು ಹೊರಟರೆ, ಶವಪೆಟ್ಟಿಗೆಯಲ್ಲಿ ಎದ್ದು ಕುಳಿತಳು!
75 ವರ್ಷದ ಅಜ್ಜಿಯೊಬ್ಬಳು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆಂದು ಘೋಷಿಸಲಾಗಿದೆ. ಆಗ ಸಂಬಂಧಿಕರು ಆಕೆಯ ಶವಸಂಸ್ಕಾರಕ್ಕೆ ಮುಂದಾಗಿದ್ದಾರೆ. ಅಷ್ಟರಲ್ಲಿ ಪವಾಡವೊಂದು ನಡೆದಿದೆ. ಇನ್ನೇನು ಸಮಾಧಿಯೊಳಗೆ ಕಫಿನ್ ಬಾಕ್ಸ್ (Coffin Box – ಶವಪೆಟ್ಟಿಗೆ) ಇಳಿಸಬೇಕು ಎನ್ನುವಷ್ಟರಲ್ಲಿ ಶವಪೆಟ್ಟಿಗೆಯನ್ನು ಜೋರಾಗಿ ಬಡಿದಿದ್ದಾಳೆ ಮುದುಕಿ! ಆಗಲೇ ಎಲ್ಲರಿಗೂ ಗೊತ್ತಾಗಿದ್ದು, ಸತ್ತಿದ್ದಾಳೆಂದ ಭಾವಿಸಲಾಗಿದ್ದ ಅಜ್ಜಿ ಇನ್ನೂ ಬದುಕಿದ್ದಾಳೆಂದು. ಅಂದ ಹಾಗೆ ಈ ಘಟನೆ ಈಕ್ವೆಡಾರ್‌ನ (Ecuador) ಬಾಬಾಹೋಯೊ ನಗರ (City of Babahoyo). ಸತ್ತೂ ಬದುಕಿದ ಅಜ್ಜಿಯ ಹೆಸರು ಬೆಲ್ಲಾ ಮೊಂಟೊಯಾ (Bella Montoya). ಈ ಸುದ್ದಿ ವೈರಲ್ ಆಗಿದೆ(Viral News): ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

Exit mobile version