1. Congress Guarantee: ಅಕ್ಕಿ ಆಸೆ ಕೈಬಿಟ್ಟ ಸರ್ಕಾರ!: ಚೀಲಕ್ಕೆ 5 ಕೆ.ಜಿ. ಅಕ್ಕಿ ಬದಲಿಗೆ ಖಾತೆಗೆ 170 ರೂ. ನೀಡಲು ನಿರ್ಧಾರ
ಅನ್ನಭಾಗ್ಯ (Congress Guarantee) ಯೋಜನೆಯಲ್ಲಿ ಈಗಾಗಲೆ ನೀಡುತ್ತಿರುವ ಐದು ಕೆ.ಜಿ. ಅಕ್ಕಿಯ ಜತೆಗೆ ಮತ್ತೆ ಐದು ಕೆ.ಜಿ. ಅಕ್ಕಿಗೆ ತಲಾ 34 ರೂ.ನಂತೆ ಹಣ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಓದಿಗಾಗಿ: Congress Guarantee: ಅಕ್ಕಿ ರೇಟ್ ಜಾಸ್ತಿಯಾಗಿದೆ; ಸರ್ಕಾರ ಕೊಟ್ಟ ಹಣ ಸಾಲೋಲ್ಲ ಎಂದ ಬಿಜೆಪಿ
2. Lokayukta Raid: ರಾಜ್ಯಾದ್ಯಂತ ಅಧಿಕಾರಿಗಳಿಗೆ ಮುಂಜಾನೆ ಶಾಕ್, ಹಲವೆಡೆ ಲೋಕಾಯುಕ್ತ ದಾಳಿ
ಮುಂಜಾನೆಯೇ ರಾಜಧಾನಿ ಸೇರಿದಂತೆ ರಾಜ್ಯದ ಅನೇಕ ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಭ್ರಷ್ಟ ಅಧಿಕಾರಿಗಳಿಗೆ ಶಾಕ್ ಮುಟ್ಟಿಸಿದ್ದಾರೆ. ದೂರುಗಳು ಬಂದ ಅಧಿಕಾರಿಗಳ ಮನೆಗೆ ದಾಳಿ ನಡೆಸಿ ಪರಿಶೀಲಿಸುತ್ತಿದ್ದಾರೆ. ವಿಜಯಪುರ, ಯಾದಗಿರಿ, ಬಾಗಲಕೋಟೆ, ಚಿಕ್ಕಬಳ್ಳಾಪುರ ಮುಂತಾದೆಡೆ ದಾಳಿ ನಡೆಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. Uniform Civil Code: ಓವೈಸಿಗೆ ಕುರಾನ್ ಮುಖ್ಯ, ಸಂವಿಧಾನ ಅಲ್ಲ; ಬಿಜೆಪಿಯ ಗೌರವ್ ಭಾಟಿಯಾ ಚಾಟಿ
ಏಕರೂಪ ನಾಗರಿಕ ಸಂಹಿತೆ ಜಾರಿಯನ್ನು ವಿರೋಧಿಸಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಗೆ ಬಿಜೆಪಿ ನಾಯಕ ಗೌರವ್ ಭಾಟಿಯಾ ತಿರುಗೇಟು ನೀಡಿದ್ದಾರೆ. “ಅಸಾದುದ್ದೀನ್ ಓವೈಸಿ ಅವರು ಕುರಾನ್ ಓದುತ್ತಾರೆ. ಅವರಿಗೆ ಸಂವಿಧಾನಕ್ಕಿಂತ ಕುರಾನ್ ಮುಖ್ಯ” ಎಂದು ಟಾಂಗ್ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. Cabinet Decision : ತಮ್ಮದೇ ಮೇಲಿನ ಕೇಸ್‌ಗಳನ್ನು ಹಿಂಪಡೆಯಲು ಮುಂದಾದ ರಾಜ್ಯ ಸಂಪುಟ ಸದಸ್ಯರು?
ಕನ್ನಡಪರ ಸಂಘಟನೆಗಳು ಸೇರಿದಂತೆ ರೈತರು ಹಾಗೂ ಹೋರಾಟಗಾರರ ಮೇಲೆ ಹಾಕಿರುವ ಪ್ರಕರಣಗಳನ್ನು ಹಿಂಪಡೆಯುವ ಸಲುವಾಗಿ ಸಂಪುಟ ಉಪಸಮಿತಿ ರಚನೆಗೆ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯ ಸಂಪುಟ ಸಭೆ ತೀರ್ಮಾನ ಮಾಡಿದೆ. ಆದರೆ ವಿವಿಧ ಸಂಘಟನೆಗಳಿಗಿಂತಲೂ ಮುಖ್ಯವಾಗಿ ಕೋವಿಡ್ ಸಮಯದಲ್ಲಿ ಸ್ವತಃ ತಾವು ಕಾನೂನು ಉಲ್ಲಂಘಿಸಿ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಲು ಸಂಪುಟ ಈ ನಿರ್ಧಾರ (Cabinet Decision) ಮಾಡಿದೆ ಎನ್ನಲಾಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. NIA Raid : ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗಳಿಗೆ ಡೆಡ್‌ಲೈನ್; ಜೂನ್ 30ರೊಳಗೆ ಶರಣಾಗದಿದ್ದರೆ ಆಸ್ತಿ ಮುಟ್ಟುಗೋಲು!
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯಲ್ಲಿ ಬುಧವಾರ (ಜೂನ್ 27) ಏಕಕಾಲಕ್ಕೆ 6 ಕಡೆಗಳಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ದಾಳಿ (NIA Raid) ನಡೆಸಿದ್ದರು. ಇದೀಗ ಇದರ ಬೆನ್ನಲ್ಲೇ ಕೊಲೆ ಆರೋಪಿಗಳಿಗೆ ಡೆಡ್‌ಲೈನ್ ನೀಡಲಾಗಿದ್ದು, ಜೂನ್ 30ರೊಳಗೆ ಶರಣಾಗದಿದ್ದಲ್ಲಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. Tamil Nadu : ದೇಗುಲದಲ್ಲಿ ಪೂಜೆಗೆ ನಿರ್ಬಂಧ; ಅರ್ಚಕರ ವಿರುದ್ಧ ಕೇಸ್ ದಾಖಲಿಸಿದ ಅಧಿಕಾರಿಗಳು, ಪ್ರತಿಭಟನೆ
ದೇವಾಲಯದ (Temple) ಪವಿತ್ರ ಪೀಠದ ಬಳಿ ತೆರಳಿ ಪ್ರಾರ್ಥನೆ ಸಲ್ಲಿಸಲು ಪೊಲೀಸರು ಮತ್ತು ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ (HR&CE) ಅಧಿಕಾರಿಗಳಿಗೆ ನಿರ್ಬಂಧಿಸಿದ ಚಿದಂಬರಂ ದೇಗುಲ ಅರ್ಚಕರ ವಿರುದ್ಧ ದೂರು ದಾಖಲಾಗಿದೆ. ತಮಿಳುನಾಡಿನ ದೇಗುಲಗಳ ಆಡಳಿತವನ್ನು ಹಿಂದೂ ಧಾರ್ಮಿಕ ಮತ್ತು ದತ್ತಿ (Hindu Religious and Charitable Endowments Department) ಇಲಾಖೆಯು ನಿರ್ವಹಣೆ ಮಾಡುತ್ತದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
7. Union Cabinet: ರೈತರಿಗೆ ಮೋದಿ ಬಂಪರ್; ಕ್ವಿಂಟಾಲ್ ಕಬ್ಬಿಗೆ 315 ರೂ., ಯೂರಿಯಾಗೆ 3.68 ಲಕ್ಷ ಕೋಟಿ ರೂ. ಸಬ್ಸಿಡಿ
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರೈತರಿಗೆ ಬಂಪರ್ ಉಡುಗೊರೆ ನೀಡಿದೆ. ಅದರಲ್ಲೂ, ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನೀಡಿದೆ. 2023-24ನೇ ಸಾಲಿನಲ್ಲಿ (ಅಕ್ಟೋಬರ್-ಸೆಪ್ಟೆಂಬರ್) ಒಂದು ಕ್ವಿಂಟಾಲ್ ಕಬ್ಬಿಗೆ ಕೇಂದ್ರ ಸರ್ಕಾರವು 315 ರೂಪಾಯಿ ನ್ಯಾಯಯುತ ಹಾಗೂ ಪ್ರೋತ್ಸಾಹ ಧನ (Fair and Remunerative Price-FRP) ನೀಡುವುದಾಗಿ ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಕುರಿತು ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
8. Biological Terrorism: ಲ್ಯಾಬ್‌ನಲ್ಲಿ ಸೃಷ್ಟಿಸಿ, ಜಗತ್ತಿಗೇ ಕೊರೊನಾ ಹಬ್ಬಿಸಿದ ಚೀನಾ; ಸತ್ಯ ಒಪ್ಪಿದ ಅದೇ ರಾಷ್ಟ್ರದ ವಿಜ್ಞಾನಿ
ಜಗತ್ತಿನಾದ್ಯಂತ ಕೊರೊನಾ ಸೋಂಕಿನಿಂದ ಲಕ್ಷಾಂತರ ಜನ ಮೃತಪಟ್ಟು, ಕೋಟ್ಯಂತರ ಜನ ಸಂಕಷ್ಟ ಅನುಭವಿಸಿದ್ದಾರೆ. ಆರ್ಥಿಕ ಹೊಡೆತದಿಂದ ಹಲವು ರಾಷ್ಟ್ರಗಳು ನಲುಗಿಹೋಗಿವೆ. ಶ್ರೀಲಂಕಾದಂತಹ ರಾಷ್ಟ್ರಗಳು ದಿವಾಳಿಯಾಗಿವೆ. ಇದರ ಬೆನ್ನಲ್ಲೇ, ಕೊನೆಗೂ ಕೊರೊನಾ ಸೋಂಕಿನ ವಿಚಾರದಲ್ಲಿ ಚೀನಾದ ಕುತಂತ್ರ ಬುದ್ಧಿ ಬಯಲಾಗಿದೆ. “ಚೀನಾದ ಲ್ಯಾಬ್‌ನಲ್ಲಿಯೇ ಕೊರೊನಾ ಅಥವಾ ಕೋವಿಡ್ 19 ಸಾಂಕ್ರಾಮಿಕವನ್ನು ಅಭಿವೃದ್ಧಿಪಡಿಸಿ, ಜಗತ್ತಿನಾದ್ಯಂತ (Biological Terrorism) ಹರಡಲಾಗಿದೆ” ಎಂದು ಅದೇ ರಾಷ್ಟ್ರದ ಸಂಶೋಧಕರೊಬ್ಬರು ತಿಳಿಸಿದ್ದಾರೆ. ಇದರಿಂದಾಗಿ ಚೀನಾ ಎಂತಹ ದುರುಳ ಬುದ್ಧಿ ಹೊಂದಿದೆ ಎಂಬುದು ಬಯಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
9. Stock Market : ಮೊಟ್ಟ ಮೊದಲ ಬಾರಿಗೆ ಸೆನ್ಸೆಕ್ಸ್ 64,000, ನಿಫ್ಟಿ 19,000ಕ್ಕೆ ಜಿಗಿತ
ಮುಂಬಯಿ ಷೇರು ಮಾರುಕಟ್ಟೆ ಬಿಎಸ್‌ಇ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ ಮೊಟ್ಟ ಮೊದಲ ಬಾರಿಗೆ 64,000 ಅಂಕಗಳಿಗೆ ಜಿಗಿದಿದೆ. (stock market) ನಿಫ್ಟಿ 19,000 ಅಂಕಗಳಿಗೆ ವೃದ್ಧಿಸಿದೆ. ಅದಾನಿ ಗ್ರೂಪ್‌ನ ಕೆಲವು ಷೇರುಗಳು ಲಾಭ ಗಳಿಸಿವೆ. ನಿಫ್ಟಿ ಮತ್ತು ಸೆನ್ಸೆಕ್ಸ್ ಸಾರ್ವಕಾಲಿಕ ಎತ್ತರಕ್ಕೇರಿದೆ. ಎಲ್ಲ 13 ಇಂಡೆಕ್ಸ್ ಗಳು ಲಾಭ ಗಳಿಸಿದವು. ನಿಫ್ಟಿಯಲ್ಲಿ ಅದಾನಿ ಎಂಟರ್‌ಪ್ರೈಸಸ್ ಹೆಚ್ಚು ಸ್ಥಾನಗಳನ್ನು ಗಳಿಸಿದೆ. ಸೆನ್ಸೆಕ್ಸ್ ಕಳೆದ ವಾರವೇ ಸಾರ್ವಕಾಲಿಕ ಎತ್ತರಕ್ಕೇರಿತ್ತು. ಇದೀ ನಿಫ್ಟಿ ಕೂಡ ಹಿಂಬಾಲಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
10. ಇವರ ಒಪ್ಪಿಗೆ ಸಿಕ್ಕರೆ ಮಾತ್ರ ಭಾರತ-ಪಾಕ್ ವಿಶ್ವಕಪ್ ಪಂದ್ಯ ಸಾಧ್ಯ!
ಬಹುನಿರೀಕ್ಷಿತ ಪುರುಷರ ಏಕದಿನ ವಿಶ್ವ ಕಪ್ ಟೂರ್ನಿಯ(ICC World Cup 2023) ವೇಳಾಪಟ್ಟಿ ಪ್ರಕಟಗೊಂಡು ಒಂದು ದಿನ ಕಳೆದಿದೆ. ಕ್ರಿಕೆಟ್ ಅಭಿಮಾನಿಗಳು ಭಾರಿ ನಿರೀಕ್ಷೆಯಿಂದ ಕಾಯುತ್ತಿರುವ ಭಾರತ ಮತ್ತು ಪಾಕ್ ಪಂದ್ಯದ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಸರ್ಕಾರದ ಒಪ್ಪಿಗೆ ಸಿಕ್ಕರೆ ಮಾತ್ರ ಭಾರತದಲ್ಲಿ ನಡೆಯುವ ವಿಶ್ವ ಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯ ಎಂದು ಪಾಕ್ ಕ್ರಿಕೆಟ್ ಮಂಡಳಿ ಮತ್ತೊಮ್ಮೆ ಹೇಳಿಕೆ ನೀಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.