Congress Guarantee: ಅಕ್ಕಿ ಆಸೆ ಕೈಬಿಟ್ಟ ಸರ್ಕಾರ!: ಚೀಲಕ್ಕೆ 5 ಕೆ.ಜಿ. ಅಕ್ಕಿ ಬದಲಿಗೆ ಖಾತೆಗೆ 170 ರೂ. ನೀಡಲು ನಿರ್ಧಾರ Vistara News
Connect with us

ಕರ್ನಾಟಕ

Congress Guarantee: ಅಕ್ಕಿ ಆಸೆ ಕೈಬಿಟ್ಟ ಸರ್ಕಾರ!: ಚೀಲಕ್ಕೆ 5 ಕೆ.ಜಿ. ಅಕ್ಕಿ ಬದಲಿಗೆ ಖಾತೆಗೆ 170 ರೂ. ನೀಡಲು ನಿರ್ಧಾರ

ಕಾಂಗ್ರೆಸ್‌ ಗ್ಯಾರಂಟಿ (Congress Guarantee) ಅನ್ನಭಾಗ್ಯ ಯೋಜನೆಯಲ್ಲಿ ಪ್ರತಿ ಕೆ.ಜಿ. ಅಕ್ಕಿಗೆ 34 ರೂ.ನಂತೆ ಮಾಸಿಕ ಅಂದಾಜು 800 ಕೋಟಿ ರೂ. ವೆಚ್ಚವಾಗುತ್ತದೆ. ಕಾರ್ಡ್‌ದಾರರ ಖಾತೆಗೆ ಈ ಹಣವನ್ನು ಹಾಕುತ್ತೇವೆ ಎಂದು ಕೆ.ಎಚ್‌. ಮುನಿಯಪ್ಪ ತಿಳಿಸಿದ್ದಾರೆ.

VISTARANEWS.COM


on

Annabhagya scheme
Koo

ಬೆಂಗಳೂರು: ಅನ್ನಭಾಗ್ಯ (Congress Guarantee) ಯೋಜನೆಯಲ್ಲಿ ಈಗಾಗಲೆ ನೀಡುತ್ತಿರುವ ಐದು ಕೆ.ಜಿ. ಅಕ್ಕಿಯ ಜತೆಗೆ ಮತ್ತೆ ಐದು ಕೆ.ಜಿ. ಅಕ್ಕಿಗೆ ತಲಾ 34 ರೂ.ನಂತೆ ಹಣ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಸಚಿವ ಎಚ್‌.ಕೆ. ಪಾಟೀಲ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಂತರ ಮಾತನಡಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌. ಮುನಿಯಪ್ಪ, ನಾವು ಅಕ್ಕಿಯನ್ನು ಕೊಡಲು ಪ್ರಯತ್ನ ಮಾಡಿದೆವು. ಕೇಂದ್ರ ಸರ್ಕಾರ ಅಕ್ಕಿ ಕೊಡುವುದಿಲ್ಲ ಎನ್ನುತ್ತಿದೆ. ಮುಕ್ತ ಮಾರುಕಟ್ಟೆಯಲ್ಲಿ 31 ರೂ. ಪ್ರತಿ ಕೆ.ಜಿ.ಗೆ ಮಾರಾಟ ಮಾಡುತ್ತಿದೆ. ಆದರೆ ನಾವು 34 ರೂ. ಕೊಡುತ್ತೇವೆ ಎಂದು ಆಗುವುದಿಲ್ಲ ಎನ್ನುತ್ತಿದ್ದಾರೆ. ಕೇಂದ್ರ ಸರ್ಕಾರ ಇದರಲ್ಲಿ ರಾಜಕೀಯ ಮಾಡುತ್ತಿದೆ.

ಪ್ರತಿ ಕೆ.ಜಿ. ಅಕ್ಕಿಗೆ 34 ರೂ.ನಂತೆ ಮಾಸಿಕ ಅಂದಾಜು 800 ಕೋಟಿ ರೂ. ವೆಚ್ಚವಾಗುತ್ತದೆ. ಕಾರ್ಡ್‌ದಾರರ ಖಾತೆಗೆ ಈ ಹಣವನ್ನು ಹಾಕುತ್ತೇವೆ. ಅಕ್ಕಿಯನ್ನು ಪಡೆಯಲು ಪ್ರಯತ್ನ ಮಾಡುತ್ತೇವೆ. ಅಕ್ಕಿ ಸಿಗುವವರೆಗೂ ಹಣ ಹಾಕುವುದನ್ನು ಮುಂದುವರಿಸುತ್ತೇವೆ ಎಂದರು.

ಇದನ್ನೂ ಓದಿ: 5 ಕೆ.ಜಿ ಅಕ್ಕಿ ಕೊಡ್ತಿರೋದು ಇವರೇ ಎಂದು ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಲಿ; ಕೈ ನಾಯಕರಿಗೆ ಮುನಿರತ್ನ ಸವಾಲ್‌

ಮೊದಲಿಗೆ ಕೇಂದ್ರ ಸರ್ಕಾರದ ವ್ಯಾಪ್ತಿಯ ಭಾರತೀಯ ಆಹಾರ ನಿಗಮದಿಂದ (ಎಫ್‌ಸಿಐ) ಅಕ್ಕಿ ಖರೀದಿಗೆ ರಾಜ್ಯ ಸರ್ಕಾರ ಮಾತುಕತೆ ನಡೆಸಿತ್ತು. ರಾಜ್ಯಕ್ಕೆ ಅವಶ್ಯಕ ಅಕ್ಕಿಯನ್ನು ನೀಡುವುದಾಗಿ ಎಫ್‌ಸಿಐ ಲಿಖಿತವಾಗಿ ಒಪ್ಪಿಕೊಂಡಿತ್ತು. ಆದರೆ ಮಾರನೆಯ ದಿನವೇ ಕೇಂದ್ರ ಸರ್ಕಾರ, ಯಾವುದೇ ರಾಜ್ಯ ಸರ್ಕಾರಕ್ಕೆ ಅಕ್ಕಿ ಕೊಡದಂತೆ ನಿರ್ಬಂಧ ವಿಧಿಸಿತ್ತು, ಹೆಚ್ಚುತ್ತಿರುವ ಅಕ್ಕಿ ದರವನ್ನು ನಿಯಂತ್ರಿಸಲು ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಮಾರಾಟ ಮಾಡುವಂತೆ ಹೇಳಿತ್ತು.

ಅಂದಿನಿಂದ ರಾಜ್ಯದಲ್ಲಿ ಅಕ್ಕಿ ಕುರಿತು ರಾಜಕೀಯ ಆರಂಭವಾಗಿದೆ. ಕೇಂದ್ರ ಆಹಾರ ಸಚಿವ ಪೀಯೂಷ್‌ ಗೋಯೆಲ್‌ ಅವರನ್ನು ಭೇಟಿ ಮಾಡಿದರೂ ಅವರು ಭರವಸೆ ನೀಡಿಲ್ಲ ಎಂದು ಮುನಿಯಪ್ಪ ಹೇಳಿದ್ದರು. ಈ ಬಗ್ಗೆ ಗೃಹ ಸಚಿವ ಅಮಿತ್‌ ಶಾ ಜತೆಗಿನ ಸಭೆಯಲ್ಲೂ ಸಿಎಂ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದರು. ರಾಜ್ಯ ಸರ್ಕಾರವು ಅಕ್ಕಿ ಕೊಡಲಾಗದೆ ನಾಟಕ ಆಡುತ್ತಿದೆ ಎಂದಿದ್ದ ರಾಜ್ಯ ಬಿಜೆಪಿ ನಾಯಕರು, ಅಕ್ಕಿ ಕೊಡಲು ಆಗದಿದ್ದರೆ ಅಷ್ಟು ಹಣವನ್ನು ಖಾತೆಗೆ ಹಾಕಿಬಿಡಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದರು. ಇದೀಗ ಸರ್ಕಾರವು, ಅಕ್ಕಿ ಸಿಗುವವರೆಗೆ ಹಣವನ್ನೇ ನೀಡಲು ನಿರ್ಧಾರ ಕೈಗೊಂಡಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Bangalore Bandh : ಬೆಂಗಳೂರು ಬಂದ್‌ ಸಕ್ಸಸ್‌; ಕಾವೇರಿ ಹೋರಾಟಕ್ಕೆ ಜನತೆ ಸ್ವಯಂಪ್ರೇರಿತ ಬೆಂಬಲ

Bangalore bandh : ಬೆಂಗಳೂರು ಬಂದ್‌ ಯಶಸ್ವಿಯಾಗಿ ಮುಕ್ತಾಯವಾಗಿದೆ. ಎಲ್ಲ ವ್ಯವಸ್ಥೆಗಳು ಇದ್ದರೂ ಜನರೇ ಸ್ವಯಂಪ್ರೇರಿತವಾಗಿ ಬಂದ್‌ಗೆ ಬೆಂಬಲ ನೀಡಿದ್ದು ಕಂಡುಬಂತು.

VISTARANEWS.COM


on

Edited by

Bangalore Bandh KG Road
ಯಾವಾಗಲೂ ಗಿಜಿಗುಡುವ ಕೆ.ಜಿ ರಸ್ತೆ ಹೇಗಿತ್ತು ನೋಡಿ
Koo

ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದರೂ ತಮಿಳುನಾಡಿಗೆ ನೀರು ಬಿಡುಗಡೆ (Cauvery Water Dispute) ಮಾಡಲೇಬೇಕು ಎಂದು ಆದೇಶ ನೀಡಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery Water Management authority) ಮತ್ತು ಅದು ಹೇಳಿದಂತೆ ನೀರು ಬಿಡುಗಡ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮಗಳನ್ನು ಖಂಡಿಸಿ ಕರ್ನಾಟಕ ಜಲ ಸಂರಕ್ಷಣಾ ಸಮಿತಿ (Karnataka Jala samrakshana samiti) ಕರೆ ನೀಡಿದ್ದ ಮಂಗಳವಾರದ (ಸೆ. 26) ಬೆಂಗಳೂರು ಬಂದ್‌ (Bangalore bandh) ಯಶಸ್ವಿಯಾಗಿದೆ. ಯಾವುದೇ ಗೊಂದಲ, ಗಲಾಟೆ, ಹಿಂಸಾತ್ಮಕ ಘಟನೆಗಳಿಲ್ಲದೆ ಅದು ಸಫಲತೆಯನ್ನು ಕಂಡಿದೆ. ಆದರೆ, ಇದು ಸರ್ಕಾರದ ನಿರ್ಧಾರಗಳ ಮೇಲೆ ಪರಿಣಾಮ ಬೀರುತ್ತದೆಯೇ ಕಾದು ನೋಡಬೇಕು.

ಈ ಬಂದ್‌ ನೂರಾರು ಸಾಮಾಜಿಕ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ವ್ಯಾಪಾರಿಗಳು, ವಾಹನ ಮಾಲೀಕರೇ ಆದರೂ ಅಂತಿಮವಾಗಿ ಇದನ್ನು ಯಶಸ್ವಿಗೊಳಿಸಿದ್ದು ಜನ ಬೆಂಬಲ. ಯಾಕೆಂದರೆ, ಸೆಪ್ಟೆಂಬರ್‌ 29ರಂದು ಕರ್ನಾಟಕ ಬಂದ್‌ ಇರುವುದರಿಂದ ಬೆಂಬಲ ನೀಡುವ ಸಂಘಟನೆಗಳಲ್ಲಿ ವಿಭಜನೆಯಾಗಿತ್ತು. ಕೆಲವರು ತಾವು ಈ ಬಂದ್‌ಗೆ ಬೆಂಬಲ ಕೊಡುವುದಿಲ್ಲ, ಸೆ. 29ರ ಬಂದ್‌ಗೆ ಬೆಂಬ ಕೊಡುವುದಾಗಿ ಪ್ರಕಟಿಸಿದ್ದರು. ಆದರೂ ಒಟ್ಟಾರೆ ಪರಿಣಾಮದಲ್ಲಿ ವ್ಯತ್ಯಾಸವಾಗಲಿಲ್ಲ. ಯಾಕೆಂದರೆ ಸಂಘಟನೆಗಳ ಹಂಗನ್ನು ಮೀರಿ ಜನರು ಈ ಬಂದ್‌ಗೆ ಮೌನ ಬೆಂಬಲವನ್ನು ಸೂಚಿಸಿದ್ದರು.

Bangalore Bandh protest
ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ

ಮುಂಜಾನೆಯಿಂದಲೇ ರಾಜಧಾನಿಯಲ್ಲಿ ಬಂದ್‌ನ ವಾತಾವರಣ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಅಲ್ಲಲ್ಲಿ ಪ್ರತಿಭಟನೆಗಳು ನಡೆದವು. ಪ್ರತಿಭಟನೆಗೆ ಕರೆ ನೀಡಿದ ಸಂಘಟನೆಯ ಮುಖ್ಯಸ್ಥರಲ್ಲಿ ಒಬ್ಬರಾದ ಕುರುಬೂರು ಶಾಂತ ಕುಮಾರ್‌ ಅವರನ್ನೂ ಪೊಲೀಸರು ವಶಕ್ಕೆ ಪಡೆದರು. ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನಾ ಸಭೆ ನಡೆಯಿತು. ಅಲ್ಲಿ ಸರ್ಕಾರದ ಮುಂದೆ ಬೇಡಿಕೆಗಳನ್ನು ಮಂಡಿಸಲಾಯಿತು. ಸರ್ಕಾರದ ಪರವಾಗಿ ಸಚಿವ ರಾಮಲಿಂಗಾ ರೆಡ್ಡಿ ಅವರು ಮನವಿ ಸ್ವೀಕರಿಸಿದರು. ಈ ಭರವಸೆಗಳ ಈಡೇರಿಕೆಗೆ ಮೂರು ದಿನಗಳ ಗಡುವನ್ನು ವಿಧಿಸಲಾಗಿದೆ.

Metro station empty
ಮೆಟ್ರೋ ರೈಲಿಗೆ ಜನರೇ ಇಲ್ಲ

ಎಲ್ಲ ವ್ಯವಸ್ಥೆಗಳಿದ್ದರೂ ಜನರೇ ರಸ್ತೆಗೆ ಬಂದಿಲ್ಲ

ನಿಜವೆಂದರೆ, ರಾಜಧಾನಿಯಲ್ಲಿ ಬಂದ್‌ ಘೋಷಣೆಯಾಗಿದ್ದರೂ ಬಸ್‌, ಮೆಟ್ರೋ ರೈಲು, ಆಟೊಗಳು, ಓಲಾ, ಊಬರ್‌ ಟ್ಯಾಕ್ಸಿಗಳು, ಹೋಟೆಲ್‌ಗಳು ತೆರೆದಿದ್ದವು. ಆದರೆ, ಅದನ್ನು ಬಳಸುವ ಜನರೇ ಇರಲಿಲ್ಲ.

ಬಿಎಂಟಿಸಿ ಬಸ್‌ಗಳು ಓಡಾಡಿದರೂ ಖಾಲಿಯಾಗಿದ್ದವು. ಮೆಟ್ರೋ ರೈಲು ಬಹುಭಾಗ ಖಾಲಿಯಾಗಿಯೇ ಓಡಾಡಿತು. ಆಟೊಗಳಲ್ಲಿ ಹೋಗುವವರು ಕಡಿಮೆ ಇದ್ದರು. ರೆಸ್ಟೋರೆಂಟ್‌ಗಳಲ್ಲಿ ಜನ ಸಂದಣಿ ಇರಲಿಲ್ಲ. ಅಂದರೆ ಇಷ್ಟೆಲ್ಲ ವ್ಯವಸ್ಥೆ ಇದ್ದರೂ ಜನರೇ ಮಂಗಳವಾರ ಕಾವೇರಿಗಾಗಿ ಒಂದು ದಿನ ಬಂದ್‌ ಎಂಬ ತೀರ್ಮಾನಕ್ಕೆ ಬಂದಿದ್ದರು. ಹೀಗಾಗಿ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಸರ್ಕಾರಿ ಕಚೇರಿಗಳಲ್ಲಿ ಜನ ಇರಲಿಲ್ಲ.

ಇದನ್ನೂ ಓದಿ: Bangalore Bandh : 13 ವಿಮಾನ ಸಂಚಾರ ಕ್ಯಾನ್ಸಲ್‌, ಮೆಟ್ರೋ ಫುಲ್‌ ಖಾಲಿ, ಬಿಎಂಟಿಸಿ ಬಸ್‌ಗಳಿವೆ, ಜನರೇ ಇಲ್ಲ

ವಿಶೇಷವೆಂದರೆ ಬೆಂಗಳೂರಿನಲ್ಲಿ ಮಂಗಳವಾರ ಬಂದ್‌ ನಡೆದೇ ನಡೆಯುತ್ತದೆ. ಅಲ್ಲಿ ಹೋಗಿ ಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ಳುವುದು ಬೇಡ ಎಂದು ವಿಮಾನ ಪ್ರಯಾಣಿಕರು ನಿರ್ಧಾರ ಮಾಡಿದ ಪರಿಣಾಮವಾಗಿ ಬೆಂಗಳೂರಿಗೆ ಮಂಗಳವಾರ ಬರಬೇಕಾಗಿದ್ದ 13 ವಿಮಾನಗಳ ಸಂಚಾರವೇ ರದ್ದಾಗಿತ್ತು.

Bangalore Bandh

ಶಾಲೆ, ಕಾಲೇಜು ಬಂದ್‌; ಮಾಲ್‌, ಥಿಯೇಟರ್‌ಗಳ ಬೆಂಬಲ

ಈ ನಡುವೆ, ಬಂದ್‌ ನಿಮಿತ್ತ ಬೆಂಗಳೂರಿನ ಎಲ್ಲ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಹೀಗಾಗಿ ಮಕ್ಕಳು ಮತ್ತು ಮನೆಯವರು ನಿರಾಳರಾಗಿದ್ದರು. ಇತ್ತ ದೊಡ್ಡ ದೊಡ್ಡ ಮಾಲ್‌ಗಳು ಬಂದ್‌ಗೆ ಬೆಂಬಲ ನೀಡಿದ್ದರು. ಚಿತ್ರೋದ್ಯಮದ ಬೆಂಬಲ ಇದ್ದಿದ್ದರಿಂದ ಸಿನಿಮಾ ಥಿಯೇಟರ್‌ಗಳು ಸಂಜೆವರೆಗೆ ಓಪನ್‌ ಆಗಲಿಲ್ಲ.

ಪೊಲೀಸ್‌ ಬಲ ಪ್ರಯೋಗದ ಆರೋಪ

ಇದರ ನಡುವೆ ಬಂದ್‌ನ್ನು ವಿಫಲಗೊಳಿಸಲು ಪೊಲೀಸ್‌ ಬಲ ಪ್ರಯೋಗ ಮಾಡಿದ ಆರೋಪ ಎದುರಾಗಿದೆ. ಬಲವಂತದ ಬಂದ್‌ಗೆ ಅವಕಾಶವಿಲ್ಲ, ಮೆರವಣಿಗೆ ನಡೆಸುವಂತಿಲ್ಲ, ಬಹಿರಂಗ ಪ್ರತಿಭಟನೆಗೆ ಅವಕಾಶವಿಲ್ಲ ಎಂಬ ನಿರ್ಬಂಧಗಳನ್ನು ಹಾಕಿದ ಪೊಲೀಸರು ಬಂದ್‌ನ ಮುನ್ನಾ ದಿನವೇ 1000ಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆದಿದ್ದರು. ಇಷ್ಟೆಲ್ಲ ಮಾಡಿದರೂ ಬಂದ್‌ ಸಫಲವಾಗಿದೆ ಎಂದು ಬಿಜೆಪಿ ಮತ್ತು ಜೆಡಿಎಸ್‌ಗಳು ಸಂಘಟನೆಗಳನ್ನು ಅಭಿನಂದಿಸಿವೆ.

Bangalore bandh protesters arrested

ಇನ್ನು ಸೆ. 29ರ ಬಂದ್‌. ಈಗ ಈ ಬಂದ್‌ ಮುಕ್ತಾಯವಾಗಿರುವಂತೆಯೇ ಸೆಪ್ಟೆಂಬರ್‌ 29ರ ಕರ್ನಾಟಕ ಬಂದ್‌ಗೆ ವೇದಿಕೆ ಸಿದ್ಧವಾಗಿದೆ. ಅಂದು ಪೂರ್ಣವಾಗಿ ಕರ್ನಾಟಕ ಬಂದ್‌ ಆಗಲಿದೆ ಎಂದಿದ್ದಾರೆ ವಾಟಾಳ್‌ ನಾಗರಾಜ್‌.

ಇದನ್ನೂ ಓದಿ: Bangalore Bandh: ಬೆಂಗಳೂರು ಬಂದ್‌ ಹತ್ತಿಕ್ಕಲು ಪೊಲೀಸ್‌ ಬಲ ಪ್ರಯೋಗ ನಡೆಯಿತೇ? ಕಮಿಷನರ್‌ ಹೇಳಿದ್ದೇನು?

Continue Reading

ಕರ್ನಾಟಕ

Belagavi News: ಹಣಕಾಸು ವಿಚಾರಕ್ಕೆ ಯೋಧನಿಂದಲೇ ಯೋಧನ ಮೇಲೆ ಗುಂಡಿನ ದಾಳಿ

Belagavi News: ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ರಾಜನಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿದೆ. ಹಣಕಾಸಿನ ವಿಚಾರಕ್ಕೆ ಗಲಾಟೆ ನಡೆದು ಯೋಧ, ಮತ್ತೊಬ್ಬ ಯೋಧನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

VISTARANEWS.COM


on

Edited by

Soldier
Koo

ಬೆಳಗಾವಿ: ಹಣಕಾಸಿನ ವಿಚಾರಕ್ಕೆ ಯೋಧನ ಮೇಲೆ ಮತ್ತೊಬ್ಬ ಯೋಧ ಗುಂಡಿನ ದಾಳಿ ನಡೆಸಿರುವ ಘಟನೆ ಜಿಲ್ಲೆಯ ಗೋಕಾಕ್ ತಾಲೂಕಿನ ರಾಜನಕಟ್ಟೆ ಗ್ರಾಮದಲ್ಲಿ ನಡೆದಿದೆ. ಗಾಯಗೊಂಡ ಯೋಧನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿ ನಂಜುಂಡಿ

ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಸುತ್ತಿರುವ ಬಸಪ್ಪ ಮೈಲಪ್ಪ ಬಂಬರಗಾ (32) ಗಾಯಾಳು ಯೋಧ. ನಂಜುಂಡಿ ಲಕ್ಷ್ಮಣ ಬೂದಿಹಾಳ (32) ಗುಂಡಿನ ದಾಳಿಗೈದ ಆರೋಪಿ. ಇಬ್ಬರೂ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಹಣಕಾಸಿನ ವಿಚಾರಕ್ಕೆ ನಡುವೆ ಗಲಾಟೆಯಾಗಿದೆ. ಈ ವೇಳೆ ಬಸಪ್ಪ ಮೈಲಪ್ಪ ಬಂಬರಗಾ ಮೇಲೆ ನಂಜುಂಡಿ ಲಕ್ಷ್ಮಣ ಬೂದಿಹಾಳ ಗುಂಡಿನ ದಾಳಿ ನಡೆಸಿದ್ದಾರೆ. ಹೀಗಾಗಿ ಗಾಯಾಳು ಯೋಧನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ | Great robbery: ಅಂಗಡಿಯ ಗೋಡೆಗೆ ರಂಧ್ರ ಕೊರೆದು 25 ಕೋಟಿ ರೂ. ಮೌಲ್ಯದ ಆಭರಣ ದೋಚಿದ ಖತರ್ನಾಕ್ ಕಳ್ಳರು!

ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ವಿದ್ಯಾರ್ಥಿಗಳ ಸಾವು

ಕಲಬುರಗಿ: ರಸ್ತೆ ಡಿವೈಡರ್‌ಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವುದು ನಗರದ ರಿಂಗ್ ರಸ್ತೆಯ ನಾಗನಹಳ್ಳಿ ಬಳಿಯ ರೈಲ್ವೆ ಬ್ರಿಡ್ಜ್ ಬಳಿ ಮಂಗಳವಾರ ನಡೆದಿದೆ. ಹುಟ್ಟುಹಬ್ಬದ ಪಾರ್ಟಿಗೆ ಹೋಗುತ್ತಿದ್ದಾಗ ಅಪಘಾತವಾಗಿದೆ (Bike Accident).

ಅಂಬಿಕಾ ನಗರದ ಅಲಿ ಅಬ್ಬಾಸ್ ಹಾಗೂ ರೆಹಮತ್ ನಗರದ ಇರ್ಫಾನ್ ಮೃತ ವಿದ್ಯಾರ್ಥಿಗಳು. ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅಬ್ಬಾಸ್ ಅಲಿ, ಸ್ನೇಹಿತ ಇರ್ಫಾನ್ ಜತೆ ಬೈಕ್‌ನಲ್ಲಿ ಪಾರ್ಟಿಗೆ ಹೊರಟಿದ್ದ. ವೇಗವಾಗಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಬೈಕ್‌ ಡಿವೈಡರ್‌ಗೆ ಡಿಕ್ಕಿಯಾಗಿದೆ. ಈ ವೇಳೆ ತಲೆಗೆ ಗಂಭೀರ ಗಾಯಗಳಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು 10ನೇ ತರಗತಿ ಓದುತ್ತಿದ್ದರು. ಸ್ಥಳಕ್ಕೆ ಸಂಚಾರ-2 ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!

ದೈಹಿಕ ಶಿಕ್ಷಕನಿಗೆ ಹಲ್ಲೆ ಮಾಡಿದ್ದ ಯುವಕನಿಗೆ ಯುವಕರಿಂದ ಥಳಿತ

Assault Case

ಯಾದಗಿರಿ: ದೈಹಿಕ ಶಿಕ್ಷಕನಿಗೆ ಹಲ್ಲೆ ಮಾಡಿದ್ದ ಯುವಕನಿಗೆ ಥಳಿಸಿರುವ ಘಟನೆ ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದೆ. ಕಬಡ್ಡಿ ಪಂದ್ಯದ ವೇಳೆ ದೈಹಿಕ ಶಿಕ್ಷಕ ಔಟ್ ಎಂದು ತೀರ್ಪು ನೀಡಿದ್ದಕ್ಕೆ ಕೋಪಗೊಂಡು ಯುವಕನೊಬ್ಬ, ದೈಹಿಕ ಶಿಕ್ಷಕನಿಗೆ ಹಲ್ಲೆ ಮಾಡಿದ್ದ. ಹೀಗಾಗಿ ಆತನ ಮೇಲೆ ಯುವಕರ ಗುಂಪು ಹಿಗ್ಗಾಮುಗ್ಗಾ ಥಳಿಸಿದೆ. ಗಲಾಟೆ ಬಿಡಿಸಲು ಅಧಿಕಾರಿಗಳು, ಸಿಬ್ಬಂದಿ ಹರಸಾಹಸಪಟ್ಟರು.

Continue Reading

ಕರ್ನಾಟಕ

Cauvery Dispute : 3000 ಕ್ಯೂಸೆಕ್‌ ನೀರು ಬಿಡುಗಡೆ ಆದೇಶವನ್ನೂ ಪಾಲಿಸುತ್ತಾ ಸರ್ಕಾರ?; ಸಿಎಂ ಹೇಳಿದ್ದೇನು?

Cauvery Dispute: 18 ದಿನಗಳ ಕಾಲ 3000 ಕ್ಯೂಸೆಕ್‌ ನೀರು ಬಿಡಬೇಕು ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶವನ್ನು ರಾಜ್ಯ ಸರ್ಕಾರ ಪ್ರಾಧಿಕಾರದಲ್ಲಿ ಪ್ರಶ್ನಿಸುವುದು ಖಚಿತವಾಗಿದೆ. ಅದರೆ, ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿ ಎಂಬ ಒತ್ತಡವಿದೆ.

VISTARANEWS.COM


on

Edited by

DK Shivakumar and CM Siddaramaiah
Koo

ಬೆಂಗಳೂರು: ಸೆ. 28ರಿಂದ ಅಕ್ಟೋಬರ್‌ 15ರವರೆಗೆ ಪ್ರತಿದಿನವೂ ತಮಿಳುನಾಡಿಗೆ 3000 ಕ್ಯೂಸೆಕ್‌ ನೀರು ಬಿಡುಗಡೆ ಮಾಡಬೇಕು (Cauvery Dispute) ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿ (Cauvery water regulation Committee) ಆದೇಶವನ್ನೂ ಈ ಹಿಂದಿನಂತೆ ರಾಜ್ಯ ಸರ್ಕಾರ (Karnataka Government) ಪಾಲನೆ ಮಾಡುತ್ತದಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಕಾವೇರಿ ನಿಗಮ ಇದನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಲ್ಲಿ (Cauvery water Management Authority) ಪ್ರಶ್ನಿಸಲಾಗುವುದು ಎಂದು ಹೇಳಿದೆ. ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಕಾನೂನಾತ್ಮಕ ವಿಚಾರಗಳನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಸಮಿತಿ ಆದೇಶವನ್ನು ಪ್ರಾಧಿಕಾರದಲ್ಲಿ ಪ್ರಶ್ನೆ: ಕಾವೇರಿ ನೀರು ನಿಗಮ

ಕರ್ನಾಟಕ ತಾನು ಎದುರಿಸುತ್ತಿರುವ ಪರಿಸ್ಥಿತಿಯನ್ನು ವಿವರಿಸಿದರೂ ಸಮಿತಿ ನೀರು ಬಿಡಲೇಬೇಕು ಎಂದು ಪಟ್ಟು ಹಿಡಿದು ಆದೇಶ ನೀಡಿರುವುದನ್ನು ಪ್ರಾಧಿಕಾರದ ಮುಂದೆ ಪ್ರಶ್ನೆ ಮಾಡಲಿದ್ದೇವೆ ಎಂದು ಕಾವೇರಿ ನೀರು ನಿಗಮದ ವ್ಯವಸ್ಥಾಪನಾ ನಿರ್ದೇಶಕ ಮಹೇಶ ಅವರು ಹೇಳಿದ್ದಾರೆ.

ನೀರು ಹರಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದೆವು. ಆದರೂ ನೀರು ಹರಿಸಲು ಸೂಚನೆ ನೀಡಿದ್ದಾರೆ. ಹೀಗಾಗಿ ನಾವು ಆದೇಶವನ್ನು ಪ್ರಶ್ನೆ ಮಾಡಲಿದ್ದೇವೆ ಎಂದು ಅವರು ತಿಳಿಸಿದರು.

ಕಾವೇರಿ ನೀರು ನಿಯಂತ್ರಣ ಮಂಡಳಿಯು ಸೆ. 13ರಂದು ಮುಂದಿನ 15 ದಿನಗಳ ಕಾಲ 5000 ಕ್ಯೂಸೆಕ್‌ ನೀರು ಬಿಡುವಂತೆ ಸೂಚಿಸಿತ್ತು. ಮುಂದಿನ ಪ್ರಾಧಿಕಾರ ಸಭೆ ಮತ್ತು ಸುಪ್ರೀಂಕೋರ್ಟ್‌ ವಿಚಾರಣೆ ಸಂದರ್ಭದಲ್ಲಿ ಇದನ್ನು ಎತ್ತಿಹಿಡಿಯಲಾಗಿತ್ತು. ಈ ಆದೇಶ ಸೆ. 28ರವರೆಗೆ ಅನ್ವಯವಾಗಿತ್ತು.

ಈ ನಡುವೆ, ರಾಜ್ಯದಿಂದ ಕಾವೇರಿ ನೀರು ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿ ಬೆಂಗಳೂರು ಬಂದ್‌ ಮತ್ತು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಅದರ ನಡುವೆಯೇ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿಯು ಮತ್ತೆ 18 ದಿನಗಳ ಕಾಲ ಪ್ರತಿ ದಿನ 3000 ಕ್ಯೂಸೆಕ್‌ ನೀರು ಬಿಡುಗಡೆಗೆ ಆದೇಶಿಸಿದೆ.

ಇದನ್ನೂ ಓದಿ: Bangalore Bandh: ಸು.ಕೋರ್ಟ್‌ ಗಮನ ಸೆಳೆಯಲು ಬೀದಿ ಹೋರಾಟವೇ ಬೇಕು; ಬಂದ್‌ ಸಮರ್ಥಿಸಿದ ಬೊಮ್ಮಾಯಿ

ಕರ್ನಾಟಕವು ರಾಜ್ಯದಲ್ಲಿ ಬರದ ಪರಿಸ್ಥಿತಿ ಇರುವುದು, 195 ಜಿಲ್ಲೆಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಕಾವೇರಿ ಕೊಳ್ಳದ ಬಹುತೇಕ ತಾಲೂಕುಗಳು ಬರ ಎದುರಿಸುತ್ತಿರುವುದು, ನೀರಿನ ಒಳಹರಿವು ಕಡಿಮೆಯಾಗುತ್ತಿರುವುದು ಮೊದಲಾದ ಎಲ್ಲ ಸಂಗತಿಗಳನ್ನು ವಿವರಿಸಿತ್ತು. ಆದರೂ ಸಮಿತಿ ನೀರು ಬಿಡುಗಡೆ ಮಾಡಲೇಬೇಕು ಎಂದು ತಿಳಿಸಿರುವುದರಿಂದ ಅದನ್ನು ಪ್ರಾಧಿಕಾರದಲ್ಲಿ ಪ್ರಶ್ನೆ ಮಾಡಲಾಗುತ್ತದೆ ಎಂದು ಮಹೇಶ್‌ ತಿಳಿಸಿದರು.

ಕಾನೂನಾತ್ಮಕ ಕ್ರಮಗಳ ಬಗ್ಗೆ ಚರ್ಚೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಈ ನಡುವೆ, ತಮಿಳುನಾಡಿಗೆ 300 ಕ್ಯೂಸೆಕ್ಸ್ ನೀರು ಹರಿಸುವ ಕುರಿತು ಸಮಿತಿ ಯ ತೀರ್ಪಿನ ಕುರಿತು ನಮ್ಮ ಕಾನೂನು ತಂಡದ ತಜ್ಞರೊಂದಿಗೆ ಕಾನೂನಾತ್ಮಕವಾಗಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಮೈಸೂರಿನಲ್ಲಿ ಈ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಕಾವೇರಿ ನೀರು ನಿಯಂತ್ರಣ ಸಮಿತಿಯು 15 ದಿನಗಳವರೆಗೆ ಪುನಃ 3000 ಕ್ಯೂಸೆಕ್ಸ್ ನೀರು ಬಿಡಬೇಕೆಂದು ಆದೇಶ ಮಾಡಿದ್ದು, ಸೆಪ್ಟೆಂಬರ್ 27 ರವರೆಗೆ ಆದೇಶ ಜಾರಿಯಲಿದೆ. ಚರ್ಚಿಸಿದ ನಂತರ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಸುಪ್ರೀಂಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಕೆಗೆ ಸಲಹೆ

ಈ ನಡುವೆ, ಬಿಜೆಪಿ ಮತ್ತು ಜಾತ್ಯತೀತ ಜನತಾದಳಗಳು ಈ ಆದೇಶವನ್ನು ಒಪ್ಪಬಾರದು, ಸಮಿತಿ ಅಸಂಬದ್ಧ ಆದೇಶಗಳ ವಿರುದ್ಧ ನಾವೇ ಮೊದಲಾಗಿ ಸುಪ್ರೀಂಕೋರ್ಟ್‌ನಲ್ಲಿ ಮಧ್ಯಂತರ ದಾವೆಯನ್ನು ಸಲ್ಲಿಸಬೇಕು. ಆಗ ನಮ್ಮ ಅಂಶಗಳನ್ನು ಸ್ಪಷ್ಟವಾಗಿ ವಾದ ಮಾಡಲು ಅವಕಾಶವಾಗುತ್ತದೆ ಎಂದು ಹೇಳಿವೆ.

Continue Reading

ಕರ್ನಾಟಕ

BJP Protest: ಕೋಲಾರ ಸಂಸದ ಮುನಿಸ್ವಾಮಿ ಜತೆ ಅನುಚಿತ ವರ್ತನೆಗೆ ಆಕ್ರೋಶ; ಶಾಸಕ, ಎಸ್‌ಪಿ ವಿರುದ್ಧ ಬಿಜೆಪಿ ಪ್ರತಿಭಟನೆ

BJP Protest: ಕೋಲಾರ ಸಂಸದ ಎಸ್‌.ಮುನಿಸ್ವಾಮಿ ಅವರ ಜತೆ ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಹಾಗೂ ಎಸ್‌ಪಿ ನಾರಾಯಣ್ ಅನುಚಿತ ವರ್ತನೆಗೆ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

VISTARANEWS.COM


on

Edited by

BJP Workers Protest
ಕೋಲಾರದಲ್ಲಿ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಹಾಗೂ ಎಸ್‌ಪಿ ನಾರಾಯಣ್‌ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Koo

ಕೋಲಾರ: ಜನತಾ ದರ್ಶನ ಸಭೆಯಲ್ಲಿ ಸಂಸದ ಎಸ್‌.ಮುನಿಸ್ವಾಮಿ ಅವರ ಜತೆ ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಹಾಗೂ ಎಸ್‌ಪಿ ನಾರಾಯಣ್ ಅನುಚಿತ ವರ್ತನೆ ಖಂಡಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್ ನೇತೃತ್ವದಲ್ಲಿ ಕಾರ್ಯಕರ್ತರು ನಗರದ ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ (BJP Protest) ನಡೆಸಿದರು.

ಶಾಸಕ ಎಸ್.ಎನ್‌.ನಾರಾಯಣಸ್ವಾಮಿ ಸಂಸದರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಅನುಚಿತವಾಗಿ ವರ್ತಿಸಿದ್ದಾರೆ. ಈ ವೇಳೆ ಸಂಸದರನ್ನು ಹಿಡಿದು ಎಳೆದಾಡಿದ ಜಿಲ್ಲಾ ಎಸ್ಪಿ ನಾರಾಯಣ್ ವರ್ತನೆ ಖಂಡನೀಯ. ಕಾಂಗ್ರೆಸ್ ಸರ್ಕಾರ ಹಾಗೂ ಜಿಲ್ಲಾ ಪೋಲಿಸ್ ಅಧಿಕಾರಿಗಳು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಕಾಯಕರ್ತರು ಆರೋಪಿಸಿದರು.

ಇದನ್ನೂ ಓದಿ | Cauvery water dispute : ತಮಿಳುನಾಡು ಬೇಡಿಕೆ ತಿರಸ್ಕಾರ‌ ಮಾಡಿದ್ದು ಸಂತಸ ತಂದಿದೆ: ಡಿ.ಕೆ. ಶಿವಕುಮಾರ್

ಚಿಂತಾಮಣಿ, ಶಿಡ್ಲಘಟ್ಟದಲ್ಲೂ ಅಕ್ರೋಶ

 BJP workers protest in Chintamani
ಚಿಂತಾಮಣಿಯಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಚಿಕ್ಕಬಳ್ಳಾಪುರ‌: ಸಂಸದ ಎಸ್. ಮುನಿಸ್ವಾಮಿ ಅವರೊಂದಿಗೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಹಾಗೂ ಕೋಲಾರ ಎಸ್‌ಪಿ ನಾರಾಯಣ್ ಅನುಚಿತ ವರ್ತನೆಗೆ ವಿರೋಧಿಸಿ ಜಿಲ್ಲೆಯ ಚಿಂತಾಮಣಿ ಹಾಗೂ ಶಿಡ್ಲಘಟ್ಟದಲ್ಲೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಚಿಂತಾಮಣಿಯಲ್ಲಿ ಬಿಜೆಪಿ ಮುಖಂಡ ಜಿ.ಎನ್.ವೇಣುಗೋಪಾಲ್ ನೇತೃತ್ವದಲ್ಲಿ ಪ್ರತಿಭಟನೆ ಕಾರ್ಯಕರ್ತರು, ಎಸ್‌ಪಿ ನಾರಾಯಣ್ ಹಾಗು ಶಾಸಕ ಎಸ್.ಎನ್. ನಾರಾಯಣಸ್ವಾಮಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

BJP Protest in Shidlaghatta
ಶಿಡ್ಲಘಟ್ಟದಲ್ಲಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ಹಾಗೆಯೇ ಶಿಡ್ಲಘಟ್ಟದಲ್ಲೂ ಬಿಜೆಪಿ ಮುಖಂಡ ರಾಮಚಂದ್ರೇಗೌಡ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಹಾಗೂ ಕೋಲಾರ ಎಸ್‌ಪಿ ನಾರಾಯಣ್ ವಿರುದ್ಧ ತಹಸೀಲ್ದಾರ್‌ ಹಾಗೂ ಪೊಲೀಸ್‌ ಠಾಣೆಗೆ ದೂರು ನೀಡಲಾಯಿತು.

ಸ್ಪೀಕರ್, ರಾಜ್ಯಪಾಲರಿಗೆ ದೂರು ನೀಡುತ್ತೇನೆ ಎಂದ ಸಂಸದ

ಕೋಲಾರ: ಅನುಚಿತ ವರ್ತನೆ ತೋರಿದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹಾಗೂ ಎಸ್‌ಪಿ ನಾರಾಯಣ್ ಅವರ ಮೇಲೆ ಸ್ಪೀಕರ್ ಹಾಗೂ ರಾಜ್ಯಪಾಲರಿಗೆ ದೂರು ನೀಡುತ್ತೇನೆ. ಎಸ್‌ಪಿ ಕಾಂಗ್ರೇಸ್ ಏಜೆಂಟರಂತೆ ವರ್ತಿಸುತ್ತಿದ್ದು, ಅವರ ವಿರುದ್ಧ ಹಕ್ಕು ಚ್ಯುತಿ ಮಂಡಿಸಲಾಗುವುದು‌ ಎಂದು ಸಂಸದ ಎಸ್‌.ಮುನಿಸ್ವಾಮಿ ಹೇಳಿದರು.

ನಗರದಲ್ಲಿ ಮಂಗಳವಾರ ಮಾತನಾಡಿದ ಅವರು, ಎಸ್.ಎನ್.ನಾರಾಯಣಸ್ವಾಮಿ ಅವರು ನನಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ, ಕೋಲಾರದಲ್ಲಿ 15 ಕೊಲೆ ನಡೆದಿದ್ದು, ವೇಶ್ಯಾವಾಟಿಕೆ, ಜೂಜು, ಬೆಟ್ಟಿಂಗ್ ದಂಧೆ ಜೋರಾಗಿದೆ. ಅವ್ಯಾಚ್ಯ ಶಬ್ದಗಳಿಂದ ಬೈದವರನ್ನು ಬಿಟ್ಟು, ಕಾಂಗ್ರೆಸ್‌ನವರಿಂದ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಳ್ಳಲು ಎಸ್‌ಪಿ ನನ್ನನ್ನು ಹೊರಗೆ ಕಳುಹಿಸಿದ್ದಾರೆ. ಕಾಂಗ್ರೆಸ್ ಏಜೆಂಟ್‌ನಂತಿರುವ ಎಸ್‌ಪಿ ನಾರಾಯಣ್ ನಮ್ಮ ಜಿಲ್ಲೆಗೆ ಬೇಕಾಗಿಲ್ಲ ಎಂದು ಕಿಡಿಕಾರಿದರು.

ಚುನಾವಣೆಗೆ ಬರಬಾರದೆಂದು ಅಂಬೇಡ್ಕರ್ ಅವರನ್ನು ಆಗ ಕಾಂಗ್ರೆಸ್‌ ಪಿತೂರಿ ಮಾಡಿ ತುಳಿಯಿತು. ಹಾಗೆಯೇ ಕೋಲಾರದಲ್ಲಿ ನನ್ನ ವಿರುದ್ಧ ಪಿತೂರಿ ಮಾಡಲು ಮುಂದಾಗಿದ್ದಾರೆ. ದಲಿತ ಸಂಸದರಾದ ನನಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ | Cauvery water dispute : ಕಾವೇರಿ ಪ್ರಾಧಿಕಾರದ ಆದೇಶ ಕರ್ನಾಟಕಕ್ಕೆ ಮರಣ ಶಾಸನವೆಂದ ಬಿಎಸ್‌ವೈ

ಏನಿದು ಘಟನೆ?

ಕೋಲಾರದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಂಸದ ಎಸ್.ಮುನಿಸ್ವಾಮಿ ಮತ್ತು ಬಂಗಾರಪೇಟೆ ಶಾಸಕ ಎಸ್.ನಾರಾಯಣಸ್ವಾಮಿ ನಡುವೆ ಜಟಾಪಟಿ ನಡೆಯಿತು. ವೇದಿಕೆ ಮೇಲೆಯೇ ಏಕವಚನದಲ್ಲಿ ಜನಪ್ರತಿನಿಧಿಗಳು ನಿಂದಿಸಿಕೊಂಡರು.

ಕೋಲಾರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಡೆದ ಜನತಾ ದರ್ಶನದಲ್ಲಿ ಮೊದಲಿಗೆ ಸಂಸದ ಎಸ್.ಮುನಿಸ್ವಾಮಿ ಅವರು ಭೂಗಳ್ಳರನ್ನು ಪಕ್ಕದಲ್ಲಿ ಇಟ್ಟುಕೊಂಡು ಕಾರ್ಯಕ್ರಮ ಮಾಡುತ್ತಿದ್ದೀರಾ ಎಂದು ಕ್ಯಾತೆ ತೆಗೆದಿದ್ದಾರೆ. ಈ ವೇಳೆ ಕೆರಳಿದ ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣ ಸ್ವಾಮಿ ಅವರು, ಯಾರು ಭೂಗಳ್ಳ, ನಿಮ್ಮಪ್ಪ ಭೂಗಳ್ಳ, ಯಾರಿಗೆ ಹೇಳ್ತಿಯಾ? ನಿಮ್ಮಪ್ಪನಿಗೆ ಹುಟ್ಟಿದ್ದರೆ ಸಾಬೀತು ಮಾಡು ಎಂದು ಸಂಸದ ಎಸ್‌. ಮುನಿಸ್ವಾಮಿ ಅವರಿಗೆ ಏಕವಚನದಲ್ಲಿಯೇ ಸವಾಲು ಹಾಕಿದರು. ಇದರಿಂದ ಸಂಸದ ಹಾಗೂ ಶಾಸಕನ ನಡುವಿನ ಗಲಾಟೆ ತಾರಕಕ್ಕೇರಿತು.

ಜಿಲ್ಲಾ‌ ಉಸ್ತುವಾರಿ ಸಚಿವ ಬೈರತಿ ಸುರೇಶ್ ಸಮ್ಮುಖದಲ್ಲಿ ಗಲಾಟೆ ಜೋರಾಗಿದ್ದರಿಂದ ಎಸ್‌ಪಿ ನಾರಾಯಣ್‌ ಅವರು ಸಂಸದ ಮುನಿಸ್ವಾಮಿ ಅವರನ್ನು ತಡೆದು ಹೊರಗೆ ಕಳುಹಿಸಿದರು. ಇಬ್ಬರು ಜನಪ್ರತಿನಿಧಿಗಳನ್ನು ಸಮಾಧಾನ ಪಡಿಸಲು ಪೊಲೀಸರು ಹರಸಾಹಸಪಟ್ಟರು.

Continue Reading
Advertisement
Bangladesh Cricket team
ಕ್ರಿಕೆಟ್24 mins ago

World Cup 2023 : ವಿಶ್ವ ಕಪ್​ಗೆ 15 ಸದಸ್ಯರ ಬಾಂಗ್ಲಾದೇಶ ತಂಡ ಪ್ರಕಟ, ಸ್ಟಾರ್ ಆಟಗಾರನೇ ಇಲ್ಲ

Bangalore Bandh KG Road
ಕರ್ನಾಟಕ28 mins ago

Bangalore Bandh : ಬೆಂಗಳೂರು ಬಂದ್‌ ಸಕ್ಸಸ್‌; ಕಾವೇರಿ ಹೋರಾಟಕ್ಕೆ ಜನತೆ ಸ್ವಯಂಪ್ರೇರಿತ ಬೆಂಬಲ

Supreme Court
ಕೋರ್ಟ್40 mins ago

Supreme Court: ಜಡ್ಜ್ ನೇಮಕಾತಿ, ಮತ್ತೆ ಕೇಂದ್ರ-ಸುಪ್ರೀಂ ಜಟಾಪಟಿ! 10 ತಿಂಗಳಾದ್ರೂ ಶಿಫಾರಸು ಕ್ಲಿಯರ್ ಮಾಡಿಲ್ಲ ಸರ್ಕಾರ

Rishabh Pant
ಕ್ರಿಕೆಟ್53 mins ago

World Cup 2023 : ಮುಂಬರುವ ವಿಶ್ವ ಕಪ್​ ಮಿಸ್ ಮಾಡಿಕೊಳ್ಳಲಿರುವ ಸ್ಟಾರ್​ ಪ್ಲೇಯರ್​ಗಳ ಲಿಸ್ಟ್​ ಇಲ್ಲಿದೆ

Soldier
ಕರ್ನಾಟಕ54 mins ago

Belagavi News: ಹಣಕಾಸು ವಿಚಾರಕ್ಕೆ ಯೋಧನಿಂದಲೇ ಯೋಧನ ಮೇಲೆ ಗುಂಡಿನ ದಾಳಿ

DK Shivakumar and CM Siddaramaiah
ಕರ್ನಾಟಕ1 hour ago

Cauvery Dispute : 3000 ಕ್ಯೂಸೆಕ್‌ ನೀರು ಬಿಡುಗಡೆ ಆದೇಶವನ್ನೂ ಪಾಲಿಸುತ್ತಾ ಸರ್ಕಾರ?; ಸಿಎಂ ಹೇಳಿದ್ದೇನು?

Fact Check, PFI Attack on Soldier is Fake Says Kerala Police
Fact Check1 hour ago

Fact Check: ಕೇರಳ ಯೋಧನ ಮೇಲೆ ಪಿಎಫ್ಐ ದಾಳಿ! ಪ್ರಸಿದ್ಧಿಗಾಗಿ ‘ಫೇಕ್’ ಅಟ್ಯಾಕ್ ಕತೆ ಕಟ್ಟಿದ್ನಾ ಸೈನಿಕ?

Ruturaj Gaikwad
ಕ್ರಿಕೆಟ್1 hour ago

Ruturaj Gaikwad : ಚೀನಾಗೆ ಹೊರಡುವ ಮೊದಲು ಪುಣೆಯ ಗಣೇಶ ಮಂದಿರಕ್ಕೆ ಭೇಟಿ ನೀಡಿದ ಋತುರಾಜ್​

BJP Workers Protest
ಕರ್ನಾಟಕ2 hours ago

BJP Protest: ಕೋಲಾರ ಸಂಸದ ಮುನಿಸ್ವಾಮಿ ಜತೆ ಅನುಚಿತ ವರ್ತನೆಗೆ ಆಕ್ರೋಶ; ಶಾಸಕ, ಎಸ್‌ಪಿ ವಿರುದ್ಧ ಬಿಜೆಪಿ ಪ್ರತಿಭಟನೆ

Cluster level Pratibha Karanji programme in Mehakar village
ಬೀದರ್‌2 hours ago

Bidar News: ಮೇಹಕರ ಗ್ರಾಮದಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ8 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ11 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Dina Bhavishya
ಪ್ರಮುಖ ಸುದ್ದಿ17 hours ago

Dina Bhavishya : ಈ ರಾಶಿಯ ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ

At the Janata Darshan event MP S Muniswamy MLA SN Narayanaswamy is fighting
ಕರ್ನಾಟಕ1 day ago

Janata Darshan : ವೇದಿಕೆಯಲ್ಲಿ ಭೂ ಗಲಾಟೆ; ಹೊಡೆದಾಟಕ್ಕೆ ಮುಂದಾದ ಶಾಸಕ-ಸಂಸದ

Davanagere bandh
ಕರ್ನಾಟಕ1 day ago

Davanagere bandh : ಭದ್ರಾ ನೀರಿಗಾಗಿ ಬೀದಿಗಿಳಿಯಲಿಲ್ಲ ಭತ್ತ ಬೆಳೆಗಾರರು!

HD Devegowda Press meet
ಕರ್ನಾಟಕ1 day ago

Cauvery water dispute : ಜಲ ಶಕ್ತಿ ಇಲಾಖೆಯಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಲಿ, ಮೋದಿ ಮಧ್ಯ ಪ್ರವೇಶಿಸಲಿ: ಎಚ್.ಡಿ. ದೇವೇಗೌಡ

Farmers protest Mundargi bandh
ಕರ್ನಾಟಕ1 day ago

Mundargi Bandh : ಬರ ಪೀಡಿತ ತಾಲೂಕು ಘೋಷಣೆಗೆ ಒತ್ತಾಯಿಸಿ ಮುಂಡರಗಿ ಬಂದ್!

Dina bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಇಂದು ಹೂಡಿಕೆ ಬೇಡ! ಕೆಲ ವಿಷಯದಲ್ಲಿ ಇರಲಿ ಗೌಪ್ಯತೆ

Actor padhmini Kirk
ಕರ್ನಾಟಕ2 days ago

Viral News : ಕಿರುತೆರೆ ನಟಿ ಕಿರಿಕ್‌; ಕೆಲಸ ಕಳೆದುಕೊಂಡ ಓಲಾ ಆಟೋ ಡ್ರೈವರ್‌!

dina bhavishya
ಪ್ರಮುಖ ಸುದ್ದಿ3 days ago

Dina Bhavishya : ಈ ರಾಶಿಯವರಿಗೆ ಕೋಪವೇ ಮುಳುವು!

Dina bhavishya
ಪ್ರಮುಖ ಸುದ್ದಿ4 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಇಂದು ಬಾಸ್‌ನಿಂದ ಕಿರಿಕ್‌!

Dina Bhavishya
ಪ್ರಮುಖ ಸುದ್ದಿ5 days ago

Dina Bhavishya : ದಿನದ ಮಟ್ಟಿಗೆ ಈ ರಾಶಿಯವರು ಹೂಡಿಕೆ ಮಾಡ್ಬೇಡಿ!

ಟ್ರೆಂಡಿಂಗ್‌