Site icon Vistara News

ವಿಸ್ತಾರ TOP 10 NEWS | ಭಾರತ ಮೂಲದ ಬ್ರಿಟನ್‌ ಪ್ರಧಾನಿಯಿಂದ ಕರ್ನಾಟಕ ಮೂಲದ AICC ಅಧ್ಯಕ್ಷರವರೆಗಿನ ಪ್ರಮುಖ ಸುದ್ದಿಗಳಿವು

TOP 10 NEWS 25102022

ಬೆಂಗಳೂರು: ಬ್ರಿಟನ್‌ ಪ್ರಧಾನಮಂತ್ರಿಯಾಗಿ ಭಾರತ ಮೂಲಕ ರಿಷಿ ಸುನಕ್‌ ಅಧಿಕಾರ ಸ್ವೀಕರಿಸಿದ ಐತಿಹಾಸಿಕ ಘಳಿಗೆಗೆ ವಿಶ್ವ ಸಾಕ್ಷಿಯಾಯಿತು. ಎಐಸಿಸಿ ಅಧ್ಯಕ್ಷರಾಗಿ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಅಧಿಕಾರ ಸ್ವೀಕರಿಸಲಿದ್ದಾರೆ. ಗ್ರಹಣ ಕಾಲದ ಆಚರಣೆಗಳು ದೇಶಾದ್ಯಂತ ನಡೆದಿವೆ, ಕೆಲವರು ವಿರೋಧಿಸಿ ಊಟ ಮಾಡಿದ್ದಾರೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP10 NEWS.

1. ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ರಿಷಿ ಸುನಕ್! 3ನೇ ಕಿಂಗ್ ಚಾರ್ಲ್ಸ್‌ರಿಂದ ನೇಮಕ

ಕನ್ಸರ್ವೇಟಿವ್ ಪಕ್ಷದ ನಾಯಕನಾಗಿ ಗೆದ್ದಿರುವ ಭಾರತೀಯ ಮೂಲದ ರಿಷಿ ಸುನಕ್ (Rishi Sunak) ಅವರನ್ನು ಬ್ರಿಟನ್ ಪ್ರಧಾನಿಯನ್ನಾಗಿ ಮೂರನೇ ಕಿಂಗ್ ಚಾರ್ಲ್ಸ್ ಅವರು ಮಂಗಳವಾರ ನೇಮಕ ಮಾಡಿದರು. ಈ ಪ್ರಕ್ರಿಯೆಗೂ ಮೊದಲು ಮೊದಲು ಅವರು ಕಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಆ ಬಳಿಕ ಅವರು ಅಧಿಕಾರಗ್ರಹಣ ಮಾಡಿದರು. ಇದರೊಂದಿಗೆ ಬ್ರಿಟನ್ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಶುರುವಾಗಿದೆ. 200 ವರ್ಷಗಳಲ್ಲೇ ಅತಿ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆ ರಿಷಿ ಪಾಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Rishi Sunak | ಮಾತಿನ ಮೂಲಕವಲ್ಲ, ಕೃತಿಯ ಮೂಲಕ ವಿಶ್ವಾಸ ಗಳಿಸುವೆ ಎಂದ ಬ್ರಿಟನ್ ಪಿಎಂ ಸುನಕ್

2. ಶಿವಮೊಗ್ಗ ಮತ್ತೆ ಉದ್ವಿಗ್ನ | ವ್ಯಕ್ತಿ ಮೇಲೆ ಹಲ್ಲೆ, ಆರ್‌ಎಸ್‌ಎಸ್‌ಗೆ ನಿಂದನೆ, ಸೇಡಿನ ಕೃತ್ಯ ಶಂಕೆ

ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಸೀಗೆಹಟ್ಟಿ ಬಳಿಯ ಧರ್ಮಪ್ಪ ನಗರದಲ್ಲಿ ನಡೆದಿದ್ದು, ಹಲ್ಲೆಗೊಳಗಾದ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರ ರಾತ್ರಿ 11.30ರ ಸುಮಾರಿಗೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಧರ್ಮಪ್ಪ ನಗರದ ಎರಡನೇ ಕ್ರಾಸ್ ನಿವಾಸಿ ಪ್ರಕಾಶ್ (25)ಎಂಬಾತನ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರಕಾಶ್‌ನ ತಲೆಗೆ ಗಾಯವಾಗಿದ್ದು, ಮೆಗ್ಗಾನ್ ಅಸ್ಪತ್ರೆಗೆ ದಾಖಲಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Shivamogga violence| ಎಲ್ಲಾ ಕಡೆ ಬಿಜೆಪಿಯೇ ಅಧಿಕಾರದಲ್ಲಿದೆ, ಆದರೆ, ನಮಗೆ ರಕ್ಷಣೆ ಇಲ್ಲ: ಹರ್ಷ ಸೋದರಿ ಆಕ್ರೋಶ
Shivamogga violence | ಮುಸ್ಲಿಂ ಗೂಂಡಾಗಳಿಗೆ ಪೊಲೀಸ್‌, ಸರ್ಕಾರದ ಭಯ ಇಲ್ಲ ಎಂದ ಈಶ್ವರಪ್ಪ

3. ವಾಟ್ಸ್ಆ್ಯಪ್‌ಗೆ ಹಿಡಿದಿದ್ದ ಗ್ರಹಣ ವಿಮೋಚನೆ!

ಅತಿ ಹೆಚ್ಚು ಜನರಿಂದ ಬಳಸಲ್ಪಡುವ ಇನ್‌ಸ್ಟಂಟ್ ಮೆಸೇಜ್ ಆ್ಯಪ್ ವಾಟ್ಸ್ಆ್ಯಪ್ (WhatsApp is OK) ಸರ್ವರ್ ಸಮಸ್ಯೆ ಬಗೆ ಹರಿದಿದ್ದು, ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತಿದೆ. ಮಂಗಳವಾರ ಮಧ್ಯಾಹ್ನನ ಸುಮಾರು 1 ಗಂಟೆಗಳ ಕಾಲ ವಾಟ್ಸ್ಆ್ಯಪ್ ಸರ್ವರ್ ಸಮಸ್ಯೆಯಿಂದಾಗಿ ಬಳಕೆದಾರರು ಭಾರೀ ತೊಂದರೆ ಎದುರಿಸುತ್ತಿದ್ದರು. ವಾಟ್ಸ್ಆ್ಯಪ್ ಒಡೆತನ ಹೊಂದಿರುವ ಮೆಟಾ ಕಂಪನಿಯು ಸಮಸ್ಯೆಯನ್ನು ಶೀಘ್ರವೇ ಬಗೆಹರಿಸುವುದಾಗಿ ಹೇಳಿದ್ದರು. ಅದರಂತೆ, ಮಂಗಳವಾರ 2 ಗಂಟೆಯಿಂದ ವಾಟ್ಸ್ಆ್ಯಪ್ ಮತ್ತೆ ಎಂದಿನಂತೆ ಕಾರ್ಯನಿರ್ವಹಿಸಲು ಆರಂಭಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Solar Eclipse 2022 | ಗ್ರಹಣ ವೇಳೆ ದೇಗುಲಗಳಲ್ಲಿ ನಡೆದವು ಹೋಮ-ಹವನ; ಮೋಕ್ಷ ಬಳಿಕ ನೆರವೇರಿದ ಪೂಜೆ

ಖಂಡಗ್ರಾಸ ಗ್ರಹಣದ (Solar Eclipse 2022) ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ದೇವಸ್ಥಾನಗಳಲ್ಲಿ ಗ್ರಹಣ ಕಾಲದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು, ಹೋಮ ಹವನಗಳು ನಡೆದಿವೆ. ಗ್ರಹಣ ಮೋಕ್ಷವಾಗುತ್ತಿದ್ದಂತೆ ಸ್ವಚ್ಛತಾ ಕಾರ್ಯವನ್ನು ನಡೆಸಿದ್ದು, ಬಳಿಕ ಪೂಜೆ-ಪುನಸ್ಕಾರಗಳನ್ನು ಕೈಗೊಳ್ಳಲಾಗಿದೆ. ದೀಪಾವಳಿಯ ದಿನವಾದ ಮಂಗಳವಾರ ಕೇತುಗ್ರಸ್ತ ಸೂರ್ಯಗ್ರಹಣವು (Solar Eclipse) ಆಕಾಶಕಾಯ ವೀಕ್ಷಕರನ್ನು ಚಕಿತಗೊಳಿಸಿದೆ. ಭಾರತದಲ್ಲಿ ಪೂರ್ಣ ಪ್ರಮಾಣದಲ್ಲಿ ಸೂರ್ಯಗ್ರಹಣ ಗೋಚರಿಸದಿದ್ದರೂ, ದೇಶದ ವಿವಿಧೆಡೆ ಅಲ್ಪ ಮಟ್ಟಿಗೆ ಕಂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Solar Eclipse | ದೇಶದ ನಾನಾ ಭಾಗಗಳಲ್ಲಿನ ಸೂರ್ಯಗ್ರಹಣದ ವಿಸ್ಮಯದ ಝಲಕ್‌ಗಳು! ಹೆಚ್ಚಿನ ಓದಿಗಾಗಿ: Solar Eclipse 2022 | ಗ್ರಹಣದ ಆಚರಣೆ ಮೂಢನಂಬಿಕೆ ಎಂದು ಮಾಂಸಾಹಾರ ಸೇವಿಸಿದರು!

5. ವರಾಹ ರೂಪಂ ಹಾಡು ನವರಸಂ ಹಾಡಿನ ಕಾಪಿ? ಕೆಜಿಎಫ್‌ 2 ಚಿತ್ರದ ದಾಖಲೆ ಮುರಿದ ಕಾಂತಾರ

ರಿಷಭ್‌ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ (Kantara Movie) ಯಶಸ್ಸಿನ ಉತ್ತುಂಗದಲ್ಲಿರುವ ನಡುವೆಯೇ, ಆ ಸಿನಿಮಾದ ಹಾಡುಗಳ ಬಗ್ಗೆ ಅಪಸ್ವರಗಳು ಕೇಳಿ ಬಂದಿವೆ. ಚಲನ ಚಿತ್ರದಲ್ಲಿ ಬಳಸಲಾಗಿರುವ ಹಾಡುಗಳ ಟ್ಯೂನ್‌ಗಳು ಭಾರತದ ನಾನಾ ಭಾಷೆಯ ಹಾಡುಗಳಿಂದ ನಕಲು ಮಾಡಲಾಗಿದೆ ಎಂಬ ಆರೋಪಗಳಿಗೆ ಪುಷ್ಟಿ ಸಿಕ್ಕಿದೆ. ಕೇರಳದ ಸಂಗೀತ ನಿರ್ದೇಶನ ಮಾಡಿರುವ ತಂಡವೊಂದು ಈ ಬಗ್ಗೆ ಕಾನೂನು ಸಮರದ ಎಚ್ಚರಿಕೆ ಕೊಟ್ಟು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದೆ. ಈ ನಡುವೆ ಕಾಂತಾರ ಚಿತ್ರದ ಹಣ ಗಳಿಕೆ ಕೆಜಿಎಫ್‌ 2 ದಾಖಲೆಯನ್ನೂ ಮುರಿದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Kantara Movie | ಕರ್ನಾಟಕದಲ್ಲಿ ಕಾಂತಾರದ ಹೊಸ ದಾಖಲೆ; ಕೆಜಿಎಫ್‌ ಕಲೆಕ್ಷನ್ ಹಿಂದಿಕ್ಕಿದ ರಿಷಬ್‌ ಸಿನಿಮಾ
ಹೆಚ್ಚಿನ ಓದಿಗಾಗಿ: Kantara Movie | ವರಾಹ ರೂಪಂ, ನವರಸಂ ಸೇಮ್‌ ಟು ಸೇಮ್‌, ಏನಂತಾರೆ ಅಜನೀಶ್‌?

6. Seer suicide note | ಬಂಡೆ ಮಠದ ಶ್ರೀಗಳು ಡೆತ್‌ ನೋಟ್‌ನಲ್ಲಿ ಉಲ್ಲೇಖಿಸಿರುವ ಆ ಮಹಿಳೆ ಯಾರು?

ಬಂಡೆ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಅವರು ಮಠದ ಪೂಜಾಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಸಾವಿನ ಹಿನ್ನೆಲೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸ್ವಾಮೀಜಿ ಐದು ಪುಟದ ಡೆತ್ ನೋಟ್ ಬರದಿಟ್ಟಿದ್ದು, ಅದರಲ್ಲಿ ಮೂರು ಪುಟ ಪೊಲೀಸರಿಗೆ ಸಿಕ್ಕಿದೆ ಎನ್ನಲಾಗಿದೆ. ಸ್ವಾಮೀಜಿ ಬರೆದಿರುವ ಡೆತ್ ನೋಟ್‌ನ ಮೊದಲ ಪುಟ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದ್ದು ಬಹಳಷ್ಟು ವಿಷಯಗಳ ಪ್ರಸ್ತಾಪ ಮಾಡಿದ್ದಾರೆ. ಮಹಿಳೆ ಪೋನ್ ಮಾಡುತ್ತಿದ್ದರು. ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂಬುದಾಗಿ ಉಲ್ಲೇಖವಾಗಿದೆ. ಮುಂದಿನ ಪುಟಗಳಲ್ಲಿ ಬಹಳಷ್ಟು ಸಾವಿನ ಸತ್ಯ ಗೋಚರವಾಗಲಿದೆ ಎನ್ನಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Congress President | ಕಾಂಗ್ರೆಸ್ ಅಧ್ಯಕ್ಷರಾಗಿ ನಾಳೆ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಸ್ವೀಕಾರ

ಎಐಸಿಸಿ ಅಧ್ಯಕ್ಷ (Congress President) ಸ್ಥಾನಕ್ಕೆ ಅಕ್ಟೋಬರ್ 17ರಂದು ನಡೆದಿದ್ದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಕರ್ನಾಟಕದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ನಾಳೆ ಬುಧವಾರ (ಅಕ್ಟೋಬರ್ 26) ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಇದಕ್ಕೂ ಮೊದಲು ಅವರು ರಾಜ್ಯಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಖರ್ಗೆ ಅವರು ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಕರ್ನಾಟಕದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿಸಿ ಸೇರಿದಂತೆ ಹಲವು ನಾಯಕರು ಸಾಕ್ಷಿಯಾಗಲಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. ʼBharat Jodoಗೆ ಯಾರು ಕೆಲಸ ಮಾಡಿದ್ದಾರೆ ಎಂಬ ದಾಖಲೆ ಇದೆʼ: ಸಂಚಲನ ಮೂಡಿಸಿದ ಡಿಕೆಶಿ

ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ಯಾತ್ರೆ ಕರ್ನಾಟಕದಲ್ಲಿ ಪೂರ್ಣಗೊಂಡ ನಂತರದಲ್ಲಿ ಇದೀಗ ಮತ್ತೆ ನಾಯಕತ್ವದ ಚರ್ಚೆಗಳು ಆರಂಭವಾಗಿವೆ. 21 ದಿನ ಕರ್ನಾಟಕದಲ್ಲಿ ಸಾಗಿದ ಯಾತ್ರೆಯ ಕುರಿತು ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆಡಿರುವ ಮಾತುಗಳು ಅನೇಕ ಚರ್ಚೆಗೆ ಕಾರಣವಾಗಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. SCST ಮೀಸಲಾತಿ | ಕಾಕಾ ಕಾಲೇಲ್ಕರ್‌ ಸಮಿತಿಯಿಂದ ಮಂಡಲ್‌ವರೆಗೆ BJP ವಿರುದ್ಧ ಸಿದ್ದರಾಮಯ್ಯ ಕೆಂಡಾಮಂಡಲ

ಎಸ್‌ಸಿಎಸ್‌ಟಿ ಮೀಸಲಾತಿ ಹೆಚ್ಚಳ ಮಾಡಿದ್ದರ ಸಂಪೂರ್ಣ ಶ್ರೇಯವನ್ನು ಪಡೆಯಲು ಬಿಜೆಪಿ ಎಲ್ಲ ಪ್ರಯತ್ನ ನಡೆಸುತ್ತಿರುವ ನಡುವೆಯೇ, ದಮನಿತ ವರ್ಗಗಳಿಗೆ ನ್ಯಾಯ ಒದಗಿಸಲು ಬಿಜೆಪಿಗೆ ಯಾವುದೇ ಬದ್ಧತೆ ಇಲ್ಲ ಎನ್ನುವುದನ್ನು ಸಿದ್ದರಾಮಯ್ಯ ಸುದೀರ್ಘವಾಗಿ ಆರೋಪಿಸಿದ್ದಾರೆ. ನಾಗಮೋಹನದಾಸ್‌ ಸಮಿತಿ ರಚನೆ ಆಗಿದ್ದು ಸಮ್ಮಿಶ್ರ ಸರ್ಕಾರದಲ್ಲಿ. ಆಗ ಅಶೋಕ ಇದ್ದನ? ನಮ್ಮ ಹಾಗೂ ಜೆಡಿಎಸ್‌ ನಡುವೆ ಎಣ್ಣೆ ಸೀಗೇಕಾಯಿ ಸಂಬಂಧ ಇತ್ತು ಎಂದು ಅಶೋಕ ಹೇಳಿದನ? ಎದು ಏಕವಚನದಲ್ಲೇ ಮಾತು ಮುಂದುವರಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. UAPA ಅಡಿ ಕೊಯಮತ್ತೂರು ಸ್ಫೋಟ ತನಿಖೆ, ಯಾಕೆ ಈ ನಿರ್ಧಾರ?

ಭಾನುವಾರ ಸಂಭವಿಸಿದ್ದ ಕಾರ್ ಗ್ಯಾಸ್ ಸಿಲಿಂಡರ್ ಸ್ಫೋಟ ಪ್ರಕರಣವು ಭಯೋತ್ಪಾದನಾ ಕೃತ್ಯ ಎಂಬುದು ಖಚಿತಪಟ್ಟಿದೆ. ಈಗ ಸರ್ಕಾರವು ಈ ಪ್ರಕರಣವನ್ನು ಉಗ್ರ ನಿಗ್ರಹ ಕಾಯ್ದೆ ಯುಎಪಿಎ ಅಡಿ ತನಿಖೆಗೆ ಮುಂದಾಗಿದೆ. ಈ ಗ್ಯಾಸ್ ಸಿಲಿಂಡರ್ ಸ್ಫೋಟ (Coimbatore Blast) ಪ್ರಕರಣವು ಆಕಸ್ಮಿಕ ಸ್ಫೋಟವಲ್ಲ, ಅದು ಭಯೋತ್ಪಾದನೆ ಕೃತ್ಯವಾಗಿತ್ತು ಎಂಬ ನಿರ್ಧಾರಕ್ಕೆ ಬರಲಾಗಿದೆ. ಈ ಸ್ಫೋಟದಲ್ಲಿ ಜಮೇಶಾ ಮುಬಿನ್ ಎಂಬಾತ ಮೃತಪಟ್ಟಿದ್ದ. ಅಸಲಿಗೆ ಆತನೇ ಈ ಸ್ಫೋಟದ ರೂವಾರಿ ಎಂದು ಹೇಳಲಾಗುತ್ತಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಸುದ್ದಿಗಳು

ವೈಟ್‌ಹೌಸ್‌ನಲ್ಲಿ ಅತಿ ದೊಡ್ಡ ದೀಪಾವಳಿ ಆಚರಣೆ, ಅಧ್ಯಕ್ಷ ಬೈಡೆನ್‌, ಉಪಾಧ್ಯಕ್ಷೆ ಕಮಲಾ ಭಾಗಿ
ಮುರುಘಾಶ್ರೀ ಪ್ರಕರಣ | ಚಿತ್ರದುರ್ಗದ ಸಿಡಬ್ಲ್ಯೂಸಿಯಲ್ಲಿ ಇರಲೊಪ್ಪದ ಸಂತ್ರಸ್ತ ಬಾಲಕಿಯರು
ಅಮೆರಿಕದ ವಿಸ್ಕಾನ್ಸಿನ್ ರಾಜ್ಯದಲ್ಲಿ ನ.1 ಕನ್ನಡ ಭಾಷೆ ಮತ್ತು ರಾಜ್ಯೋತ್ಸವ ದಿನ; ಅಲ್ಲಿನ ರಾಜ್ಯಪಾಲರ ಘೋಷಣೆ
NEET PG | ಗ್ರಾಮೀಣ ಸೇವೆಯಲ್ಲಿರುವ ವೈದ್ಯರ PG-NEET ಸೀಟು ಹಂಚಿಕೆ ಕಡಿತ ಆದೇಶ ರದ್ದುಗೊಳಿಸಿದ ಹೈಕೋರ್ಟ್‌

ಇಂದಿನ ಅಂಕಣಗಳು

ಲೈಫ್‌ ಸರ್ಕಲ್‌ ಅಂಕಣ | ಧ್ಯಾನದ ಮೂಲಕ ಜ್ಞಾನದ ಬೆಳಕು
ದಶಮುಖ ಅಂಕಣ | ಶಾಂತಿಯ ಸಾರುವ ಕಾಂತಿಯ ಕಿಡಿಗಳು
ರಾಜ ಮಾರ್ಗ ಅಂಕಣ | ಮೌಂಟ್‌ ಎವರೆಸ್ಟ್‌ ಹತ್ತಿ ನಿಂತ ಮಾರ್ಕ್‌ ಇಂಗ್ಲಿಸ್‌ಗೆ ಎರಡೂ ಕಾಲು ಇರಲಿಲ್ಲ! ಹೇಗೆ ಸಾಧ್ಯ ಇದು?

Exit mobile version