Site icon Vistara News

ವಿಸ್ತಾರ TOP 10 NEWS | ಅಮೆಜಾನ್‌ ʼಮತಾಂತರʼದಿಂದ ಶಾಲೆಯಲ್ಲಿ ಆಜಾನ್‌ ನೃತ್ಯ ವಿವಾದವರೆಗಿನ ಪ್ರಮುಖ ಸುದ್ದಿಗಳಿವು

vistara top 10 news rss article about amazon supporting conversion azaan controversy in karnataka and more vistara top 10 news

ಬೆಂಗಳೂರು: ಜಾಗತಿಕ ದೈತ್ಯ ಇ-ಕಾಮರ್ಸ್‌ ಸಂಸ್ಥೆ ಅಮೆಜಾನ್‌ ಪರೋಕ್ಷವಾಗಿ ಮತಾಂತರಕ್ಕೆ ಬೆಂಬಲ ನೀಡುತ್ತಿದೆಯೇ ಎಂಬ ಕುರಿತು ಆರ್‌ಎಸ್‌ಎಸ್‌ ಮುಖವಾಣಿ ಆರ್ಗನೈಸರ್‌ ಲೇಖನ ಬರೆದಿದೆ. ಕರ್ನಾಟಕದಲ್ಲಿ ಆರು ಹೊಸ ಹೈಟೆಕ್‌ ನಗರಗಳನ್ನು ನಿರ್ಮಿಸುವುದಾಗಿ ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ. ಜಿ20 ಅಧ್ಯಕ್ಷತೆ ಭಾರತಕ್ಕೆ ಲಭಿಸಿದೆ, ಕುಂದಾಪುರದ ಶಾಲೆಯಲ್ಲಿ ಆಜಾನ್‌ಗೆ ನೃತ್ಯ ಮಾಡಿಸಿರುವ ವಿಚಾರ ವಿವಾದವಾಗಿದೆ, ಭಾರತದಲ್ಲಿರುವವರೆಲ್ಲರೂ ಹಿಂದುಗಳು ಎಂದು ಮೋಹನ್‌ ಭಾಗವತ್‌ ಹೇಳಿದ್ದಾರೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Amazon Company | ಮತಾಂತರಕ್ಕೆ ಅಮೆಜಾನ್ ಕಂಪನಿ ಫಂಡಿಂಗ್! ಎನ್ಐಎ ತನಿಖೆಗೆ ಸ್ವದೇಶ್‌ ಜಾಗರಣ್‌ ಮಂಚ್‌ ಆಗ್ರಹ
ಬಲವಂತದ ಮತಾಂತರದ ವಿರುದ್ಧ ಸುಪ್ರೀಂ ಕೋರ್ಟ್​ ಸಮರ ಸಾರಿರುವಂತೆಯೇ ಅತ್ತ ಈಶಾನ್ಯ ರಾಜ್ಯಗಳಲ್ಲಿ ಇ-ಕಾಮರ್ಸ್​ ದೈತ್ಯ ಅಮೆಜಾನ್​ ಸಂಸ್ಥೆ (Amazon Company) ಮತಾಂತರಕ್ಕೆ ಫಂಡಿಂಗ್ ಮಾಡುತ್ತಿರುವ ಆತಂಕಕಾರಿ ಸಂಗತಿ ಬಯಲಾಗಿದೆ. ಆರೆಸ್ಸೆಸ್​ ಮುಖವಾಣಿ ಆರ್ಗನೈಸರ್​ನಲ್ಲಿ ( Organiser) ಈ ಕುರಿತು ಹಲವು ಮಾಹಿತಿಗಳನ್ನು ಉಲ್ಲೇಖಿಸಲಾಗಿದೆ. ಈಶಾನ್ಯ ಭಾರತದಲ್ಲಿ ಮತಾಂತರಕ್ಕೆ ಅಮೆಜಾನ್​ ಆರ್ಥಿಕ ನೆರವು ನೀಡುತ್ತಿದೆ. ಅಮೆಜಾನ್ ಈಸ್ಟ್ ಇಂಡಿಯಾ ಕಂಪನಿ 2.0 ಆಗಿ ವರ್ತಿಸುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಅಲ್ಲದೇ, ಈ ಕುರಿತು ಎನ್ಐಎ ತನಿಖೆಗೆ ಸ್ವದೇಶ್ ಜಾಗರಣ್ ಮಂಚ್ ಒತ್ತಾಯಿಸಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: ಕ್ರೈಸ್ತ ಧರ್ಮಕ್ಕೆ ಸೇರಲು ಗಂಡನಿಗೆ ಪತ್ನಿ ಒತ್ತಾಯ; ಹುಬ್ಬಳ್ಳಿಯಲ್ಲಿ ಮತಾಂತರ ಜಾಲದ ವಿರುದ್ಧ ಹಿಂದುಗಳ ಆಕ್ರೋಶ

2. BTS 2022 | ಕರ್ನಾಟಕದಲ್ಲಿ 6 ಹೊಸ ಹೈಟೆಕ್‌ ನಗರಗಳ ಸ್ಥಾಪನೆ; ಬೆಂಗಳೂರಿನ ಬಳಿಯೂ ಒಂದು: ಸಿಎಂ ಬೊಮ್ಮಾಯಿ ಘೋಷಣೆ
ಕರ್ನಾಟಕದಲ್ಲಿ ಸದ್ಯದಲ್ಲಿಯೇ ಆರು ಹೊಚ್ಚ ಹೊಸ ಹೈಟೆಕ್‌ ನಗರಗಳನ್ನು ಸೃಷ್ಟಿ ಮಾಡಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಬೆಂಗಳೂರು ಟೆಕ್‌ ಸಮ್ಮಿಟ್‌-2022 (BTS 2022) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿಎಂ, ನಾವು ಆರು ಹೊಸ ನಗರಗಳನ್ನು ಸೃಷ್ಟಿಸುತ್ತಿದ್ದೇವೆ. ಕಲಬುರ್ಗಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು, ಮಧ್ಯ ಕರ್ನಾಟಕದಲ್ಲಿ ಹಾಗೂ ಬೆಂಗಳೂರಿನ ಬಳಿ ಈ ನಗರಗಳ ಸ್ಥಾಪನೆ ಆಗಲಿದೆ. ಒಂದೊಂದು ನಗರಕ್ಕೆ ಒಂದೊಂದು ಉದ್ದೇಶ ಇರಲಿದೆ. ಬೆಂಗಳೂರಿನ ಬಳಿಯ ನಗರವು ಜ್ಞಾನ, ವಿಜ್ಞಾನ ತಂತ್ರಜ್ಞಾನ ನಗರವಾಗಲಿದೆ. ಬೆಂಗಳೂರಿನ ವಿಮಾನ ನಿಲ್ದಾಣದ ಹತ್ತಿರ ಸ್ಥಾಪನೆಯಾಗಲಿದೆ. ಇಲ್ಲಿ ಅತ್ಯುತ್ತಮ ವಿವಿಗಳು, ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳು ಇರಲಿವೆ. ಸದ್ಯದಲ್ಲೇ ಈ ನಗರಗಳನ್ನು ಘೋಷಣೆ ಮಾಡಲಿದ್ದೇವೆ ಎಂದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: BTS 2022 | ಏಷ್ಯಾದ ಅತಿ ದೊಡ್ಡ ತಂತ್ರಜ್ಞಾನ ಶೃಂಗ, ಬೆಂಗಳೂರು ಟೆಕ್‌ ಸಮ್ಮಿಟ್‌ ಆರಂಭ

3. G20 Summit | ಭಾರತಕ್ಕೆ ಜಿ20 ಅಧ್ಯಕ್ಷ ಸ್ಥಾನ ಹಸ್ತಾಂತರ
ಇಂಡೋನೇಷ್ಯಾದ ಬಾಲಿಯಲ್ಲಿ ಎರಡು ದಿನಗಳಿಂದ ನಡೆಯುತ್ತಿದ್ದ ಜಿ20 ಶೃಂಗ (G20 Summit) ಬುಧವಾರ ಮುಕ್ತಾಯಗೊಂಡಿದ್ದು, ಜಿ20 ಅಧ್ಯಕ್ಷೀಯ ಸ್ಥಾನವನ್ನು ಇಂಡೋನೇಷ್ಯಾ ಅಧ್ಯಕ್ಷ ಜೋಕೋ ವಿಡೋಡೋ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಹಸ್ತಾಂತರಿಸಿದರು. ವಿಶ್ವ ನಾಯಕರು ಈ ಎರಡು ಕಾಲ ದಿನಗಳ ಕಲೆತು, ಜಾಗತಿಕ ವಿಷಯಗಳ ಬಗ್ಗೆ ಮಂಥನ ನಡೆಸಿದರು. 2023ರ ಜಿ20 ಶೃಂಗವು ದಿಲ್ಲಿಯ ಪ್ರಗತಿ ಮೈದಾನದಲ್ಲಿ ನಡೆಯಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Visa for Indians | ಮೋದಿ-ಸುನಕ್ ಭೇಟಿ ಬೆನ್ನಲ್ಲೇ 3000 ಭಾರತೀಯ ವೃತ್ತಿಪರರಿಗೆ ಬ್ರಿಟನ್ ವೀಸಾ

4. Azaan controversy | ಶಾಲಾ ಕ್ರೀಡಾಕೂಟ ನೃತ್ಯದಲ್ಲಿ ಹಿಂದು ಮಕ್ಕಳಿಂದ ಆಜಾನ್‌; ವ್ಯಾಪಕ ಆಕ್ರೋಶ, ಪ್ರತಿಭಟನೆ
ಶಾಲಾ ಕ್ರೀಡಾಕೂಟದ ಸ್ವಾಗತ ನೃತ್ಯದಲ್ಲಿ ಹಿಂದು ಮಕ್ಕಳಿಂದ ಆಜಾನ್‌ (Azaan controversy) ಮಾಡಿಸಿದ ಪ್ರಕರಣವು ತೀವ್ರ ಕಾವು ಪಡೆದುಕೊಂಡಿದ್ದು, ಹಿಂದು ಪರ ಸಂಘಟನೆಯವರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕುಂದಾಪುರ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿತ್ತು. ಈ ಸಂಬಂಧ ಶಂಕರನಾರಾಯಣದ ಮದರ್ ಥೆರೇಸಾ ಮೆಮೋರಿಯಲ್ ಶಾಲೆಯಲ್ಲಿ ಕ್ರೀಡಾಕೂಟ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದಕ್ಕೂ ಮೊದಲು ನಡೆದಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಸ್ವಾಗತ ನೃತ್ಯವನ್ನು ಮಕ್ಕಳಿಂದ ಮಾಡಿಸಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. All are Hindu | ಭಾರತದಲ್ಲಿ ವಾಸಿಸುವ ಎಲ್ಲರೂ ಹಿಂದೂ, ಎಲ್ಲರ ಡಿಎನ್ಎ ಒಂದೇ: ಆರ್‌ಎಸ್ಎಸ್
ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯೂ ಹಿಂದೂ ಆಗಿದ್ದಾನೆ (All are Hindu) ಮತ್ತು ಎಲ್ಲರ ಡಿಎನ್ಎ ಒಂದೇ ಆಗಿದೆ. ಹಾಗಂತ, ತಾವು ಮಾಡುವ ಪೂಜಾ ವಿಧಾನಗಳನ್ನು ಬದಲಿಸಬೇಕೆಂದೇನೂ ಇಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿದ್ದಾರೆ. ವೈವಿಧ್ಯತೆಯಲ್ಲೇ ಭಾರತದ ಏಕತೆ ಇದೆ. ಇದು ಪ್ರಾಚೀನ ಕಾಲದಿಂದಲೂ ಭಾರತದ ಹೆಮ್ಮೆಯ ಮಂತ್ರವಾಗಿದೆ. ಪ್ರತಿಯೊಬ್ಬರನ್ನು ಜತೆಗೆ ಕೊಂಡೊಯ್ಯವ ನೀತಿಯನ್ನು ಹಿಂದುತ್ವ ಮಾತ್ರ ನಂಬುತ್ತದೆ ಎಂದು ಅವರು ತಿಳಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Attack on Poland | ನ್ಯಾಟೋ ರಾಷ್ಟ್ರ ಪೋಲೆಂಡ್ ಮೇಲೆ ರಷ್ಯಾ ದಾಳಿ, ಜಿ20 ಶೃಂಗದಲ್ಲಿ ವಿಶ್ವ ನಾಯಕರ ಖಂಡನೆ
ನ್ಯಾಟೋ ಸದಸ್ಯ ರಾಷ್ಟ್ರ ಪೋಲೆಂಡ್ (Attack on Poland) ಮೇಲೆ ರಷ್ಯಾ ನಡೆಸಿದ ರಾಕೆಟ್ ದಾಳಿಗೆ ಇಬ್ಬರು ಮೃತಪಟ್ಟ ಘಟನೆ ನಡೆದಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪೂರ್ವ ಪೋಲೆಂಡ್‌ನ ಉಕ್ರೇನ್ ಗಡಿಯಲ್ಲಿ ರಷ್ಯನ್ ಮೇಡ್ ರಾಕೆಟ್‌ ದಾಳಿ ನಡೆಸಲಾಗಿದೆ. ಈ ಕೃತ್ಯದಲ್ಲಿ ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ. ಆದರೆ, ರಷ್ಯಾ ಈ ದಾಳಿಯನ್ನು ನಿರಾಕರಿಸಿದೆ. ಪರಿಣಾಮ, ಪೋಲೆಂಡ್ ಸರ್ಕಾರವು ರಷ್ಯನ್ ರಾಯಭಾರಿಯನ್ನು ಕರೆಯಿಸಿಕೊಂಡು ವಿವರಣೆ ನೀಡುವಂತೆ ಕೇಳಿಕೊಂಡಿದೆ. ಮತ್ತೊಂದೆಡೆ, ಪೋಲೆಂಡ್ ಮೇಲಿನ ದಾಳಿಯನ್ನು ವಿಶ್ವದ ನಾಯಕರು ಖಂಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. ಮೈಸೂರು ಬಸ್‌ ಶೆಲ್ಟರ್‌ ಮೇಲೆ ಸುತ್ತೂರು ಶ್ರೀ, ಪ್ರಧಾನಿ ಮೋದಿ ಫೋಟೊ; ಗುಂಬಜ್‌ ಒಡೆದರೆ ಅಪಮಾನ ಮಾಡಿದಂತೆ!
ರಾತ್ರೋರಾತ್ರಿ ನಗರದಲ್ಲಿ ಗುಂಬಜ್‌ ಮಾದರಿಯ ಬಸ್‌ ತಂಗುದಾಣದ ಮೇಲೆ ಕಳಶಗಳು ಬಂದಿದ್ದವು. ಈಗ ಏಕಾಏಕಿ ಸುತ್ತೂರು ಸ್ವಾಮೀಜಿ, ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ ಅವರ ಫೋಟೊ ಅಳವಡಿಸಿರುವುದು ಕಂಡುಬಂದಿದ್ದು, ಬಸ್ ತಂಗುದಾಣ ವಿವಾದ ನಾಟಕೀಯ ತಿರುವು ಪಡೆದಿದೆ.
ತಂಗುದಾಣವೊಂದಕ್ಕೆ ಮಂಗಳವಾರ ಜೆಎಸ್‌ಎಸ್ ಕಾಲೇಜು ಬಸ್ ನಿಲ್ದಾಣ ಎಂಬ ಬೋರ್ಡ್ ಅಳವಡಿಕೆ ಮಾಡಿದ್ದು, ಪಕ್ಷ, ಜಾತಿ ಮುಂದೆ ಬಿಟ್ಟು ಪೇಚಿಗೆ ಸಿಲುಕಿಸುವ ಯತ್ನ‌ ನಡೆಸಲಾಗಿದೆ. ಸುತ್ತೂರು ಶ್ರೀ ವೀರಸಿಂಹಾಸನ ಮಠದ ಆದಿ ಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿ ಸ್ವಾಮೀಜಿ, ಲಿಂಗೈಕ್ಯ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಫೋಟೊಗಳ ಜತೆಗೆ, ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ ಫೋಟೊಗಳು ಬ್ಯಾನರ್‌ನಲ್ಲಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Sabarimala News | ತೆರೆದ ಶಬರಿಮಲೆ ದೇಗುಲದ ಬಾಗಿಲು; ಅಯ್ಯಪ್ಪ ಸ್ವಾಮಿ ಯಾತ್ರೆ ಶುರು
ಭಾರತದ ಅತ್ಯಂತ ಪ್ರಸಿದ್ಧ ಅಯ್ಯಪ್ಪ ಸ್ವಾಮಿ ದರ್ಶನ ಯಾತ್ರೆ (Sabarimala News) ಆರಂಭಗೊಂಡಿದೆ. ವಾರ್ಷಿಕ ಮಂಡಲ ಮತ್ತು ಮಕರ ಜ್ಯೋತಿ ಉತ್ಸವಕ್ಕಾಗಿ ಬುಧವಾರ ಸಂಜೆ ಶಬರಿಮಲೆ ದೇಗುಲದ ಬಾಗಿಲನ್ನು ತೆರೆಯಲಾಗಿದ್ದು, ವಿಶೇಷ ಪೂಜೆ ಪುನಸ್ಕಾರಗಳು ನಡೆದಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. ಕಬ್ಬು ಬೆಲೆ ನಿಗದಿಗೆ ಹೋರಾಟ | ಮಂಡ್ಯ, ಬಾಗಲಕೋಟೆ ಜಿಲ್ಲೆಯಲ್ಲಿ ಪ್ರತಿಭಟನೆ ತೀವ್ರ, ಸಿಎಂ ಪ್ರತಿಕೃತಿ ದಹನ
ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ (ಕಬ್ಬು ಬೆಲೆ ನಿಗದಿಗೆ ಹೋರಾಟ) ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ತೀವ್ರ ರೂಪ ಪಡೆಯುತ್ತಿದೆ. ಅದರಲ್ಲೂ ಮಂಡ್ಯ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಬುಧವಾರ ದೊಡ್ಡ ಮಟ್ಟದಲ್ಲಿ ಜನ ರಸ್ತೆಗೆ ಇಳಿದು ಹೋರಾಟ ನಡೆಸಿದರು. ಮಂಡ್ಯದಲ್ಲಿ ಮುಖ್ಯಮಂತ್ರಿಗಳ ಪ್ರತಿಕೃತಿಯನ್ನೂ ಸುಟ್ಟು ಹಾಕಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Delhi crime | ಶ್ರದ್ಧಾ ತಲೆಯನ್ನು ಫ್ರಿಜ್ಜಿನಲ್ಲಿಟ್ಟು ಪ್ರತಿದಿನ ನೋಡುತ್ತಿದ್ದ ಸೈಕೋ ಅಫ್ತಾಬ್
ಒಂದು ಕಡೆ ಬರ್ಬರವಾಗಿ ಹತ್ಯೆಯಾದ ಶ್ರದ್ಧಾಳ ತಲೆಬುರುಡೆ ಎಲ್ಲಿದೆ ಎಂದು ಪೊಲೀಸರು ಹುಡುಕಾಡುತ್ತಿದ್ದರೆ, ತಾನು ಆಕೆಯ ತಲೆಯನ್ನು ಫ್ರಿಜ್‌ನಲ್ಲಿ ಇಟ್ಟುಕೊಂಡಿದ್ದೆ, ಪ್ರತಿದಿನ ತೆಗೆದು ಅದನ್ನು ನೋಡುತ್ತಿದ್ದೆ ಎಂದು ಪಾತಕಿ ಅಫ್ತಾಬ್‌ ಪೂನಾವಾಲಾ ಪೊಲೀಸರಿಗೆ ತಿಳಿಸಿದ್ದಾನೆ. ದಿನೇ ದಿನೆ ದೆಹಲಿಯ ಶ್ರದ್ಧಾ ಹತ್ಯೆಯ ಭೀಕರ ವಿವರಗಳು ಬಿಚ್ಚಿಕೊಳ್ಳುತ್ತಿವೆ. ಶ್ರದ್ಧಾ ದೇಹವನ್ನು ಆಕೆಯ ಸೈಕೋ ಪ್ರಿಯಕರ 35 ತುಂಡುಗಳಾಗಿ ಕತ್ತರಿಸಿ ಎಸೆದಿದ್ದು, ಅದರಲ್ಲಿ ಕೆಲವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಮತ್ತೊಂದು ಪ್ರಕರಣ: Lover Murdered | ಪ್ರೇಮಿಯ ಕತ್ತು ಸೀಳಿ ಕೊಂದು, ವಿಡಿಯೋ ಮಾಡಿ ಹರಿಬಿಟ್ಟ ಕೊಲೆಪಾತಕಿ!

‌ ಮತ್ತಷ್ಟು ಪ್ರುಮುಖ ಸುದ್ದಿಗಳು

Election 2023 | ಸಿದ್ದರಾಮಯ್ಯ ಓಟಕ್ಕೆ ಬ್ರೇಕ್‌ ಹಾಕಲು ಡಿಕೆಶಿ ಸಜ್ಜು; ಒಂದೇ ಕ್ಷೇತ್ರ ನೀತಿಗೆ ಒತ್ತು
🔴 Masks Not Mandatory | ವಿಮಾನದಲ್ಲಿ ಈಗ ಮಾಸ್ಕ್‌ ಧರಿಸುವುದು ಕಡ್ಡಾಯವಲ್ಲ, ಆದರೆ ಕೆಲ ನಿಯಮ ಅನ್ವಯ
🔴 Direct attack | ಕೂಡಲ ಸಂಗಮ ಸ್ವಾಮೀಜಿ ಬಿಟ್ಟರೆ ಉಳಿದವರೆಲ್ಲ ಬುಕ್ಕಿಂಗ್ ಸ್ವಾಮಿಗಳು ಎಂದ ಯತ್ನಾಳ್‌
🔴 Gym death | ಜಿಮ್‌ ಮಾಡುವಾಗ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವುದು ಏಕೆ?
🔴 Bescom | 3 ತಿಂಗಳು ವಿದ್ಯುತ್‌ ಬಿಲ್‌ ಕಟ್ಟದಿದ್ದರೆ ಪರ್ಮನೆಂಟ್‌ ಪವರ್ ಕಟ್‌: ಬೆಸ್ಕಾಂನಿಂದ ಹೊಸ ಅಸ್ತ್ರ, ಗ್ರಾಹಕರಿಗೆ ಶಾಕ್‌
🔴 Molestation | ಚಾಲಕನ ಲೈಂಗಿಕ ಕಿರುಕುಳಕ್ಕೆ ಹೆದರಿ ಆಟೊದಿಂದ ಜಿಗಿದ ಬಾಲಕಿ, ತಲೆಗೆ ಗಂಭೀರ ಗಾಯ
🔴 Ajay Maken Resigns | ರಾಜಸ್ಥಾನ ಉಸ್ತುವಾರಿ ಹುದ್ದೆ ತೊರೆದ ಕಾಂಗ್ರೆಸ್ ನಾಯಕ ಮಾಕೇನ್
🔴 Election 2023| ಸುರೇಶ್‌ ಗೌಡ, ಚಲುವರಾಯ ಸ್ವಾಮಿ ವಿರುದ್ಧ ಗೆಲ್ಲದಿದ್ದರೆ ಶಿರಚ್ಛೇದ ಮಾಡಿಕೊಳ್ತೇನೆ ಎಂದ ಶಿವರಾಮೇ ಗೌಡ!

Exit mobile version