Site icon Vistara News

ವಿಸ್ತಾರ TOP 10 NEWS | ಜಾರಕಿಹೊಳಿ ವಿರುದ್ಧ BJP ಅಭಿಯಾನ, ಶಿಕ್ಷಣ ಕುರಿತ ಸುಪ್ರೀಂ ವ್ಯಾಖ್ಯಾನ ಮತ್ತಿತರ ಮುಖ್ಯ ಸುದ್ದಿಗಳಿವು

TOP 10 NEWS 08112022

ಬೆಂಗಳೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಹೇಳಿಕೆ ನಂತರ ಕಾಂಗ್ರೆಸ್‌ ಪಕ್ಷ ಸಂಕಷ್ಟಕ್ಕೆ ಸಿಲುಕಿದ್ದು, ಹೇಳಿಕೆ ನೀಡಿದ ಜಾರಕಿಹೊಳಿ ಮಾತ್ರ ತಮ್ಮ ಮಾತಿಗೆ ಬದ್ಧವಾಗಿದ್ದಾರೆ. ಹೇಳಿಕೆ ವಿರುದ್ಧ ಬಿಜೆಪಿ ಅಭಿಯಾನಕ್ಕೆ ಚಾಲನೆ ನೀಡಿದೆ. ಶಿಕ್ಷಣದ ವ್ಯಾಪಾರೀಕರಣದ ಕುರಿತು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ, ಮುರುಘಾ ಶ್ರೀ ವಿರುದ್ಧದ ಪ್ರಕರಣದ ಕುರಿತು ಯಡಿಯೂರಪ್ಪ ಕಠಿಣ ಮಾತನ್ನಾಡಿದ್ದಾರೆ, ಎಲ್‌. ಕೆ. ಆಡ್ವಾಣಿ ಅವರ ಜನ್ಮದಿನಕ್ಕೆ ಪ್ರಧಾನಿ ಮೋದಿ ಖುದ್ದು ತೆರಳಿ ಶುಭಾಶಯ ಕೋರಿದ್ದಾರೆ, ನೋಟು ಅಮಾನ್ಯೀಕರಣ ಆರು ವರ್ಷ ಪೂರೈಸಿದೆ ಎನ್ನುವುದೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. Satish Jarakiholi | ಕಾಂಗ್ರೆಸ್‌ ಕ್ಷಮೆ ಕೇಳುವವರೆಗೆ ರಾಜ್ಯಾದ್ಯಂತ “ನಾನು ಸ್ವಾಭಿಮಾನಿ ಹಿಂದುʼ ಅಭಿಯಾನ ಎಂದ ಸುನಿಲ್ ಕುಮಾರ್‌, ಕ್ಷಮೆ ಕೇಳುವುದಿಲ್ಲ ಎಂದ ಜಾರಕಿಹೊಳಿ
ಹಿಂದು ಎಂಬ ಪದ ಕೀಳು ಎಂದು ವ್ಯಾಖ್ಯಾನಿಸಿರುವ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ವಿರುದ್ಧ ʻನಾನು ಸ್ವಾಭಿಮಾನಿ ಹಿಂದುʼ ಅಭಿಮಾನವನ್ನು ಮಂಗಳವಾರದಿಂದಲೇ ಆರಂಭ ಮಾಡಿದ್ದೇವೆ. ಕಾಂಗ್ರೆಸ್‌ ಬಹಿರಂಗವಾಗಿ ಕ್ಷಮೆ ಕೇಳುವವರೆಗೆ ಈ ಅಭಿಯಾನ ಮುಂದುವರಿಯಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
🔴ತಪ್ಪೆಂದು ಸಾಬೀತಾದರೆ ರಾಜೀನಾಮೆ: ಸಮರ್ಥನೆ ಮಾಡಿಕೊಂಡ ಶಾಸಕ ಜಾರಕಿಹೊಳಿ
🔵 Satish Jarakiholi | ಹಿಂದು ಪದದ ಕುರಿತು ʼಕೀಳುʼ ಮಾತಿಗೆ ಸತೀಶ್‌ ಜಾರಕಿಹೊಳಿ ಬಿಡುಗಡೆ ಮಾಡಿದ ದಾಖಲೆ ಇಲ್ಲಿದೆ
🟡 ಹಿಂದು ಅಶ್ಲೀಲ ಪದ ಹೇಳಿಕೆ; ಶುರುವಾಗಿದೆ #I stand with Satish Jarkiholi ಅಭಿಯಾನ!

2. Supreme Court | ಶಿಕ್ಷಣ ವ್ಯಾಪಾರವಲ್ಲ, ಬೋಧನಾ ಶುಲ್ಕ ಕೈಗೆಟುಕುವಂತಿರಬೇಕು: ಸುಪ್ರೀಂ ಕೋರ್ಟ್
ಶಿಕ್ಷಣವು ಲಾಭ ಗಳಿಸುವ ವ್ಯಾಪಾರವಲ್ಲ ಮತ್ತು ಬೋಧನಾ ಶುಲ್ಕವೂ ಯಾವಾಗಲೂ ಕೈಗೆಟುಕುವ ರೀತಿಯಲ್ಲಿರಬೇಕು ಎಂದು ಸುಪ್ರೀಂ ಕೋರ್ಟ್ (Supreme Court) ಸೋಮವಾರ ಹೇಳಿದೆ. ಆಂಧ್ರ ಪ್ರದೇಶ ಸರ್ಕಾರವು ವಾರ್ಷಿಕ ಬೋಧನಾ ಶುಲ್ಕವನ್ನು 24 ಲಕ್ಷ ರೂಪಾಯಿಗೇರಿಸಿದ ನಿರ್ಧಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಆಂಧ್ರಪ್ರದೇಶವು ಈ ಹಿಂದೆ ಚಾಲ್ತಿಯಲ್ಲಿದ್ದ ಮೊತ್ತಕ್ಕಿಂತ ಏಳು ಪಟ್ಟು ಹೆಚ್ಚು ಬೋಧನಾ ಶುಲ್ಕವನ್ನು ಏರಿಕೆ ಮಾಡಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Cabinet Expansion | ಗುಜರಾತ್​ ಚುನಾವಣೆ ಬಳಿಕ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಎಂದ ಸಿಎಂ ಬೊಮ್ಮಾಯಿ
ಕರ್ನಾಟಕ ವಿಧಾನಸಭೆ ಚುನಾವಣೆ ಮುಂದಿನ ವರ್ಷ (2023)ವೇ ನಡೆಯಲಿದೆ. ಈ ಮಧ್ಯೆ ಸಚಿವ ಸಂಪುಟ ವಿಸ್ತರಣೆಯ (Cabinet Expansion) ಬೇಡಿಕೆ ಬಿಜೆಪಿ ಪ್ರಮುಖರು, ಶಾಸಕರಿಂದ ಕೇಳಿಬರುತ್ತಿದೆ. ತುಂಬ ದಿನಗಳಿಂದಲೂ ರಾಜ್ಯ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಬಗ್ಗೆ ಒಂದು ಮಾಹಿತಿ ನೀಡಿದ್ದಾರೆ. ಗುಜರಾತ್​ ವಿಧಾನಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಅವರು ಹೇಳಿದ್ದಾರೆ. ಅಂದಹಾಗೇ ಗುಜರಾತ್​ ವಿಧಾನಸಭೆ ಚುನಾವಣೆ ಡಿಸೆಂಬರ್​ 1 ಮತ್ತು 5ರಂದು (ಎರಡು ಹಂತಗಳಲ್ಲಿ) ನಡೆಯಲಿದ್ದು, ಮತ ಎಣಿಕೆ ಡಿಸೆಂಬರ್​ 8ರಂದು ನಡೆಯಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

4. Murugha seer | ಮುರುಘಾಶ್ರೀಗಳ ದೌರ್ಜನ್ಯ ಅಕ್ಷಮ್ಯ, ತಕ್ಕ ಶಿಕ್ಷೆಯಾಗಲಿ: ಬಿ.ಎಸ್‌. ಯಡಿಯೂರಪ್ಪ ಆಕ್ರೋಶ
ಚಿತ್ರದುರ್ಗ ಮುರುಘಾ ಮಠದ ಮುರುಘಾ ಶರಣರಿಂದ (Murugha seer) ನಡೆದಿರುವ ಲೈಂಗಿಕ ಕಿರುಕುಳವು ಅಕ್ಷಮ್ಯ ಅಪರಾಧ. ಅವರು ಇಷ್ಟು ಕೆಳಮಟ್ಟಕ್ಕೆ ಇಳಿಯುತ್ತಾರೆಂದು ನಿರೀಕ್ಷೆ ಮಾಡಿರಲಿಲ್ಲ. ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಈಗ ಜಗತ್ತಿಗೇ ಗೊತ್ತಿರುವ ಸಂಗತಿಯಾಗಿದೆ. ಇದನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಅವರ ತಪ್ಪಿಗೆ ತಕ್ಕ ಶಿಕ್ಷೆ ಆಗಲೇಬೇಕು ಎಂದು ಬಿಎಸ್‌ವೈ ಆಗ್ರಹಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. ವಿಸ್ತಾರ Explainer | ಮೋದಿ ನೋಟು ಬ್ಯಾನ್‌ ಮಾಡಿ 6 ವರ್ಷ, ಇದು ಪಾಸಾ ಫೇಲಾ?
2016ರ ನವೆಂಬರ್‌ 8ರ ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು 500 ರೂ. ಹಾಗೂ 1000 ರೂ. ನೋಟುಗಳನ್ನು ಅಮಾನ್ಯಗೊಳಿಸುವ ಐತಿಹಾಸಿಕ ಘೋಷಣೆಯನ್ನು ಮಾಡಿದ್ದರು! ಮೊದಲು ಹೊಸ 2,000 ರೂ.ಗಳ ನೋಟನ್ನು ಬಿಡುಗಡೆಗೊಳಿಸಲಾಗಿತ್ತು. ಬಳಿಕ ಹೊಸ 500 ರೂ. ಹಾಗೂ 200 ರೂ. ಮುಖಬೆಲೆಯ ನೋಟನ್ನೂ (ವಿಸ್ತಾರ Explainer) ಪರಿಚಯಿಸಲಾಯಿತು. ಕೆಲವು ಕ್ಷಣಗಳ ಕಾಲ ಜನತೆಗೆ ಇದನ್ನು ಅರಗಿಸಿಕೊಳ್ಳಲು ಕಷ್ಟವಾಗಿತ್ತು. ಅಂದು ಮಧ್ಯ ರಾತ್ರಿಯಿಂದಲೇ ಜನ ಎಟಿಎಂ ಮುಂದೆ ಸರದಿಯಲ್ಲಿ ನಿಂತು ನಗದು ಪಡೆಯಲು ಗಂಟೆಗಟ್ಟಲೆ ಕಾದರು. ವಾರಗಟ್ಟಲೆ ಕಾಲ ಎಟಿಎಂಗಳಲ್ಲಿ ನಗದಿಗೋಸ್ಕರ ಹಾಹಾಕಾರ ಉಂಟಾಗಿತ್ತು. ಇದರ ಸಾಧಕ-ಬಾಧಕಗಳ ಸುತ್ತ ಚರ್ಚೆ ನಡೆಯುತ್ತಿದೆ. (ವಿಸ್ತಾರ Explainer) ವಿವರ ಇಲ್ಲಿದೆ.

6. Bangalore Pot hole| ಎಲ್ಲರದ್ದೂ ಒಂದೇ ಬೇಡಿಕೆ, ಮೋದಿ ಜಿ ನಮ್ಮ ಏರಿಯಾಗೆ ಒಮ್ಮೆ ಬಂದು ಹೋಗಿ ಪ್ಲೀಸ್‌!
ಉದ್ಯಾನ ನಗರಿ ಬೆಂಗಳೂರಿಗರದ್ದು ಈಗ ಒಂದೇ ಬೇಡಿಕೆ! ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಏರಿಯಾಗೆ ಒಮ್ಮೆ ಬಂದು ಹೋಗಲಿ! ವಾಹನ ಸವಾರರಂತೂ ಮೋದಿ‌‌‌ ಆಗಮನಕ್ಕೆ ದೇವರಿಗೆ ಪ್ರಾರ್ಥನೆಯನ್ನೇ ಸಲ್ಲಿಸುತ್ತಿದ್ದಾರೆ. ಅರೇ ಮೋದಿ ಮೇಲೆ ಯಾಕಿಷ್ಟು ಪ್ರೀತಿ ಬಂದಿದೆ ಎಂದು ತಲೆ ಕೆರೆದುಕೊಳ್ಳಬೇಡಿ. ಇದರಲ್ಲಿ ಪ್ರೀತಿಗಿಂತ ಸಣ್ಣ ಸ್ವಾರ್ಥವೇ ಹೆಚ್ಚಿದೆ. ಮೋದಿ ಒಮ್ಮೆ ಬಂದರೆ ವರ್ಷಗಳ ಕಾಲ ಹದಗೆಟ್ಟಿಗಿರುವ ರಸ್ತೆಗಳು (Bangalore Pot hole) ಸರಿಯಾಗುತ್ತದೆ ಎಂಬುದು ಅವರಿಗೆ ಇರುವ ಆಶಾವಾದ! ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. G20 Logo India | ನಮ್ಮ ವೈವಿಧ್ಯತೆ, ಸಾಮರ್ಥ್ಯ ಪ್ರದರ್ಶಿಸೋಣ: ಮೋದಿ, ಜಿ20 ಅಧ್ಯಕ್ಷತೆಯ ಲೋಗೋ ಅನಾವರಣ
ಏಕ ಭೂಮಿ, ಏಕ ಕುಟುಂಬ ಮತ್ತು ಏಕ ಭವಿಷ್ಯ ವಿಚಾರದೊಂದಿಗೆ ಜಿ20 ಅಧ್ಯಕ್ಷತೆಯನ್ನು ಭಾರತವು ನೇತೃತ್ವವನ್ನು ವಹಿಸಿಕೊಳ್ಳುತ್ತಿದೆ. ಭಾರತದ ಈ ವಿಚಾರಗಳು ಈ ವಿಶ್ವದ ಕಲ್ಯಾಣಕ್ಕೆ ಮಾರ್ಗವನ್ನು ರೂಪಿಸಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ಭಾರತವು ಜಿ20 ಗ್ರೂಪಿನ ಅಧ್ಯಕ್ಷತೆಯನ್ನು ವಹಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಜಿ20 ಸಮಾವೇಶದ ಲೋಗೋ, ಥೀಮ್ ಮತ್ತು ಜಾಲತಾಣಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು(G20 Logo India). ಡಿ.1ರಿಂದ ಭಾರತದಲ್ಲಿ ಜಿ20 ಶೃಂಗ ನಡೆಯಲಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. ಅಡಿಕೆ ಎಲೆ ಚುಕ್ಕಿ ರೋಗ | ಮಲೆನಾಡಿನ ರೋಗ ಪೀಡಿತ ತೋಟಗಳಿಗೆ ಭೇಟಿ ನೀಡಲಿದೆ ತಜ್ಞರ ತಂಡ
ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಕರಾವಳಿ ಜಿಲ್ಲೆಗಳಲ್ಲಿನ ಅಡಿಕೆ ತೋಟಗಳ ನಾಶಕ್ಕೆ ಕಾರಣವಾಗುತ್ತಿರುವ ಎಲೆ ಚುಕ್ಕಿ ರೋಗದ ಕುರಿತು ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ರಚಿಸಿರುವ ಏಳು ತಜ್ಞರ ಸಮಿತಿಯು ಈಗಾಗಲೇ ಒಂದು ಸಭೆ ನಡೆಸಿದ್ದು, ನವೆಂಬರ್‌ 20 ಮತ್ತು 21 ರಂದು ರೋಗ ಪೀಡಿತ ತೋಟಗಳಿಗೆ ಭೇಟಿ ನೀಡಲಿದೆ.
ಎಲೆ ಚುಕ್ಕೆ ರೋಗದಿಂದ ಅಡಕೆ ತೋಟ ನಾಶವಾಗುತ್ತಿರುವ ಕುರಿತು ಅಕ್ಟೋಬರ್‌ 19ರಂದು ಮಾಜಿ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಮತ್ತು ರಾಜ್ಯ ಅಡಿಕೆ ಕಾರ್ಯಪಡೆಯ ಅಧ್ಯಕ್ಷ ಆರಗ ಜ್ಞಾನೇಂದ್ರ ನೇತೃತ್ವದ ನಿಯೋಗವು ಕೇಂದ್ರ ಸರ್ಕಾರದ ಗಮನ ಸೆಳೆದು, ಇದಕ್ಕೆ ಔಷಧವನ್ನು ಕಂಡು ಹಿಡಿಯಲು ತಜ್ಞರ ಸಮಿತಿಯನ್ನು ರಚಿಸುವಂತೆ ಕೋರಿತ್ತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. ಕರ್ನಾಟಕಕ್ಕೆ ಆಫ್ರಿಕನ್ ಹಂದಿಜ್ವರದ ಆತಂಕ | ಲಕ್ಷಣಗಳೇನು? ಏನು ಮಾಡಬೇಕು?
ರಾಜ್ಯದ ಕೊಡಗು ಜಿಲ್ಲೆಯಲ್ಲಿ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿದ್ದು, ಆರೋಗ್ಯ ಇಲಾಖೆಗೆ ಹೊಸದೊಂದು ಟೆನ್ಷನ್ ಶುರುವಾಗಿದೆ. ಕೊಡಗು ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆ ಈ ಜ್ವರ ಕಂಡುಬಂದಿದೆ. ಇದು ಸಾಮಾನ್ಯ ಜ್ವರದಂತೆಯೇ ಇರುತ್ತದೆ. ಆದರೆ ಸಾಮಾನ್ಯ ಹಂದಿ ಜ್ವರಕ್ಕಿಂತಲೂ ಇದರ ತೀವ್ರತೆ ಹೆಚ್ಚಿರುತ್ತದೆ. ಇದು ಒಂದು ಹಂದಿಯಿಂದ ಇನ್ನೊಂದು ಹಂದಿಗೆ ತೀವ್ರಗತಿಯಲ್ಲಿ ಹರಡುವ ಗುಣ ಹೊಂದಿದ್ದು, ಜ್ವರಪೀಡಿತ ಹಂದಿಗಳನ್ನು ಐಸೋಲೇಟ್‌ ಮಾಡುವುದೇ ಇದಕ್ಕೆ ಪರಿಹಾರವಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. L K Advani Birth Day | ಆಡ್ವಾಣಿ ಮನೆಗೆ ತೆರಳಿ ಬರ್ತ್ ಡೇ ಶುಭಾಶಯ ಕೋರಿದ ಪಿಎಂ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಆಡ್ವಾಣಿ (L K Advani) ಮನೆಗೆ ಹೋಗಿ, ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ಈ ವೇಳೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಕೂಡ ಜತೆಗಿದ್ದರು. ಆಡ್ವಾಣಿ ಅವರ ಬರ್ತ್‌ಡೇಗೆ ಪ್ರತಿ ವರ್ಷವೂ ಮೋದಿ ಅವರು ಮನೆಗೇ ತೆರಳಿ ಶುಭಾಶಯ ಕೋರುತ್ತಾರೆ. 95ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ಆಡ್ವಾಣಿ ಅವರಿಗೆ ಶುಭಾಶಯಗಳು ಹರಿದು ಬರುತ್ತಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಇನ್ನಷ್ಟು ಪ್ರಮುಖ ಸುದ್ದಿಗಳು

🔴 Chandra Grahan 2022 | ದೇಗುಲಗಳಿಗೆ ಹಿಡಿದ ಚಂದ್ರ ಗ್ರಹಣ; ದೇವರಿಗೆ ದರ್ಬಾಬಂಧನ
🔴 Actor Lohitashwa | ಹಿರಿಯ ನಟ ಲೋಹಿತಾಶ್ವ ಇನ್ನಿಲ್ಲ; ಅನಾರೋಗ್ಯದಿಂದ ನಿಧನ
🔴 BJP Janasankalpa Yatre | ಸಿದ್ದು ಸರ್ಕಾರದಲ್ಲಿ ಬಾಯಿ ಮಾತಿನಲ್ಲಿ ಮಾತ್ರವೇ ಇತ್ತು ಸಾಮಾಜಿಕ ನ್ಯಾಯ: ಸಿಎಂ ಬೊಮ್ಮಾಯಿ
🔴 Himachal Pradesh Election | ಹಿಮಾಚಲ ಪ್ರದೇಶ ಚುನಾವಣೆಗೆ 4 ದಿನ ಬಾಕಿ ಇರುವಾಗ ಕಾಂಗ್ರೆಸ್​ಗೆ ಬಹುದೊಡ್ಡ ಆಘಾತ
🔴 Kempegowda statue | ಸಂಸತ್‌ ಆವರಣದಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿ: ಪ್ರಧಾನಿಗೆ ದೇವೇಗೌಡರ ಪತ್ರ
🔴 ಲೈಫ್‌ ಸರ್ಕಲ್‌ ಅಂಕಣ | ಒಳಹೊರಗಿರುವ ಎಲ್ಲರೊಂದಿಗೆ ಮಾತನಾಡುವ ಕಲೆ
🔴 ದಶಮುಖ ಅಂಕಣ | ಚಂದ್ರಲೋಕದಲ್ಲಿ ಒಂದು ಯಾನ

Exit mobile version